Tuesday, July 8, 2014

ಜೀವ-ಭಾವ

ಜೀವ-ಭಾವ

ನಾವೇ ಬೆಳೆಸಿದ ಬಂಧನಗಳಲಿ
ಕೂಡು ಕುಟುಂಬದ ಒಕ್ಕಲಲಿ
ಸಂಬಂಧಗಳ ಹೊನಲಿನಲಿ
ನಾವಿರುವುದು ಹರಿವ ತೊರೆಗಳಲಿ 

ಬಿರುಕು ಮನೆಗಳ ಹೊಡೆತ
ಒಂಟಿ ನೆಲೆಗಳ ಸೆಳೆತ
ಒಡಕು ಮನಗಳ ಮಿಡಿತ
ದೂರ ನೆಲೆಸುವ ತುಡಿತ 

ಸಂಸ್ಕೃತಿ-ಜನರ ನಡುವೆ
ಬದಲಾವಣೆಯ ಕೊಳವೆ
ಹಿಂದಿನದು ಇಂದಿಗೆ ದಾವೆ
ಮರುಕಳಿಸುವುದು ಅಸಾಧ್ಯವೆ

ಬಂಧುತ್ವ ಬೆಸುಗೆಗಳ ಭಾವ
ನಶ್ವರತೆಯಲಿ  ಹಾವಭಾವ
ಜನಪದದ ಹಿರಿಮೆಯ ಜೀವ
ಪ್ರಸ್ತುತ ನಲುಗುತಿದೆ ಅನುಭಾವ

ಪೂರ್ಣ ಸೊಗಡಿನ ತೆನೆಗಳು
ಅರಳದೆ ಮೊಗಚಿದೆ ದಿನಗಳು
ಸಾಂಪ್ರದಾಯದ ಚಿಲುಮೆಗಳು
ಈಗ ನೇತಾಡುವ ಬಾವುಲಿಗಳು

4 comments:

sunaath said...

ಮನಸು,
ಕಾಲ ಬದಲಾಗಿದೆ! ಒಳ್ಳೆಯ ಕವನ.

ಚಿನ್ಮಯ ಭಟ್ said...

ಹಂಗೆ-ಹಿಂಗೆ...
ಚೆನಾಗಿದೆ..ಅದ್ರಲ್ಲೂ ಬದಲಾವಣೆಯನ್ನು ಕೊಳವೆ ಅಂದಿದ್ದು ಇಷ್ಟಾ ಅಯ್ತು...
ಪ್ರಾಸಾ ??? ಅಯ್ಯಪ್ಪಾ...ಅದೇನ್ ಹಂಗೆ..ಗಾಬರಿ ನಾನು..ಚೆನಾಗಿದೆ ಅಕಾ :) ಇಷ್ಟ ಆಯ್ತು...
ಧನ್ಯವಾದಗಳು..
ನಮಸ್ತೆ :)

Badarinath Palavalli said...

ಕೂಡು ಕುಟುಂಬಗಳು ಮರೆಯಾಗುತಿವೆ.
ಕನಿಷ್ಟ ಹೆತ್ತವರನೂ ಪೊರೆಯಲಾರದ ದುಷ್ಟ ಸಂತತಿಯ ಕಾಲವಿದು.
ಸಂಬಂಧಗಳ ಗಿರಿಮೆಯನು ಎತ್ತಿ ತೋರುವ ಕವನ.

(ಈ ನಡುವೆ ಸಾಹಿತ್ಯ ದಂಪತಿಗಳ ಬ್ಲಾಗ್ ಕೃಷಿ ಬಡವಾಗುತಿದೆ. ತಾವಿಬ್ಬರು ದಯಮಾಡಿ ಬ್ಲಾಗ್ ಬರೆಯುತ್ತೀರಿ, ನಮಗಾಗಿ, ಅಭಿಮಾನಿಗಳಿಗಾಗಿ)

KalavathiMadhusudan said...

sogasaada arthapoorna kavana.dhanyavaadagalu.