Monday, August 18, 2014

ನೋವು

           


ಒಲವಿನ ಮನೆ-ಮನ ಹಲವು
ತಿರುಗಿ ಮಗುಚಿದರೆ ಕೆಲವು
ಹೆಸರಿಸಲಾಗದಷ್ಟು ನೋವು
ಅದಕ್ಕೆ ಒಂದಿಲ್ಲೊಂದು ಬಾವು

ಭಾವನೆಗಳು ಬಿಕರಿಯಾದರೆ 
ಪರಸ್ಪರರಲಿ ಭಿನ್ನತೆಯ ಬೇನೆ
ಮೇಲು-ಕೀಳು ಎಂದು ಮೆರೆದರೆ
ಜಗವೆಲ್ಲಾ ವ್ಯಥೆಯ ಸೋನೆ

ಸೂಜಿಯ ಮೊನಚಿನಲಿ 
ಹಿತವಲ್ಲದ ಮಾತು ಬೆರೆಸುವುದರಲಿ 
ಆಯುಧಗಳ ಬಳಕೆಯಲಿ
ಸಾವಿನ ಸುದ್ದಿಗಳಲಿ ನೋವು ಅಡಗಿದೆ

ದಣಿವು,ಧಾವಂತ  ಅತೃಪ್ತಿ,ಆಲಸ್ಯ
ನಂಜಿನ ಅಂಚು ತಲುಪಿದಾಗ
ತೃಪ್ತಿಯಲೂ ಅಜೀರ್ಣ ತಟ್ಟಿದರೆ
ಅನುಭವಿಸಲಾಗದ ರುಚಿಯೇ ನೋವು...

5 comments:

Badarinath Palavalli said...

ಮಾನವ ಮಾನವ ಸಂಬಂಧಗಳ ನಡುವೆ ಹಳಸಿದಾಗ ಭಾವಗಳು ಉಳಿಯುವುದೊಂದೇ ಕಹಿ!
ಉಳಿದ ನಾಲ್ಕೂವರೆ ದಿನಗಳನು ಕಳೆದುಬಿಡುವರು ಹಿಂಡುತ್ತಾ ಹುಳಿ!

ಜಲನಯನ said...

ನೋವಿನ ಆಯಾಮಗಳನ್ನು ಬಿಚ್ಚಿಟ್ಟ ಕವನ
ಚನ್ನಾಗಿದೆ ಸುಗುಣ

bilimugilu said...

simpleaagi jeevana nadisrappa andre, obrigobru novu kotkonde naDistheevi anthaare... en hELana Suguns...
Kavana ishtavaaythu :)

ಮೌನರಾಗ said...

ನಂಜಿನ ಅಂಚು ತಲುಪಿದಾಗ
ತೃಪ್ತಿಯಲೂ ಅಜೀರ್ಣ ತಟ್ಟಿದರೆ
ಅನುಭವಿಸಲಾಗದ ರುಚಿಯೇ ನೋವು..

-ಇಡೀ ಕವನದ ತೂಕ ಕೊನೆಯ ಸಾಲುಗಳಲ್ಲಿ ಅಡಗಿದೆ..
ಇಷ್ಟವಾಯ್ತು..

Anonymous said...

Thanks for your personal marvelous posting!
I genuinely enjoyed reading it, you happen to be a great author.I will make sure to bookmark your blog and will come back at some
point. I want to encourage yourself to continue your
great posts, have a nice evening!

Also visit my web site - cheap hosting wordpress