ಕೆಂಪು ಲಂಗತೊಟ್ಟು ಮಹಡಿಯ ಮೇಲೇರಿ
ಕೈಗೆ ಸಿಗುವ ಬೇವು-ಮಾವುಗಳ ಕಿತ್ತು ಅಣಿಗೊಳಿಸುತಿದ್ದೆ
ಅಯ್ಯೋ ಎಲ್ಲಿದ್ದೀಯಾ, ಈಗಿಲ್ಲಿ ಮರವಿಲ್ಲ
ಕಡಿದು ಯಾವ ಕಾಲವಾಯ್ತು
ಭ್ರಮೆಯಲ್ಲಿ ಬದುಕದಿರು ಕಣ್ಬಿಡು ಎಂದರು...
ಮನೆ ಮುಂದಿನ ಹಸಿರೆಲ್ಲ ಉಸಿರು ಕಳೆದುಕೊಂಡಿತ್ತು
ಅಲ್ಲಾ, ಉಸಿರನ್ನು ನಾವೇ ಚಿವುಟಿದ್ದೆವು...
ಹಸಿರನ್ನು ಹುಡುಕುತ್ತ ಮಾರುಕಟ್ಟೆಗೆ ಹೋದೆ
ಹಸಿರಿನ ಹೆಸರಲ್ಲಿ ನಿತ್ರಾಣದ ಮಾವು-ಬೇವು
ಹೇಳುತಿತ್ತು... ಇನ್ನ್ಮುಂದೆ ನಾವೂ ಸಿಗಲಾರೆವು
ಎಚ್ಚರ...!! ಉಸಿರು ಕೊಳ್ಳಲಾಗದು ಹಸಿರನ್ನು ಬೆಳಸದ ಹೊರತು...
ಯಾಕೋ ಉಸಿರುಗಟ್ಟಿತ್ತು ಕಣ್ಬಿಟ್ಟೆ ಬೆಳಗಿನ ಜಾವ ಐದಾಗಿತ್ತು...
ಹುಫ್... ಸದ್ಯ ಇನ್ನು ಉಸಿರಿದೆ ಎಂದುಕೊಂಡೆ...!!!
1 comment:
ಮೃದು ಮನಸು,
ಯುಗಾದಿಯ ಶುಭಾಶಯಗಳು. ನಿಮ್ಮ ಕನಸೆಲ್ಲ ನನಸಾಗಲಿ ಎಂದು ಬೇಡಿಕೊಳ್ಳುವೆ, except ಇದೀಗ ನೀವು ಕಂಡ ದುಃಸ್ವಪ್ನ! ಹಸಿರು ಉಸಿರು ಚಿರಾಯುವಾಗಲಿ!
Post a Comment