ಅಪ್ಪನೆಂದರೆ
ಬದುಕು ಬವಣೆ ಎರಡು
ಕತ್ತಲೆ ಬೆಳಕಲೆರಡರಲ್ಲೂ
ಕೈ ಹಿಡಿವ ನೆರಳು
ಅಪ್ಪನೆಂದರೆ
ಸಾಗರದ ಸಾರದಲ್ಲಿ
ಅರ್ಜುನನಂತಾ ಅಮ್ಮನಿಗೆ
ಕೃಷ್ಣನಂತಾ ಸಾರಥಿ
ಅಪ್ಪನೆಂದರೆ
ತಿಳಿ ನೀರಿನ ಮೌನ
ಅರಿತಷ್ಟು ಆಳ
ಬೆರೆತಷ್ಟು ವಿಶಾಲ
ಅಪ್ಪನೆಂದರೆ
ಆಗಸದ ಚಿತ್ತಾರ
ಕಣ್ಣರಳಿಸಿದರೆ ಕಾಂತಿ
ಮನತೆರೆದರೆ ಮಿಂಚು
4 comments:
ಎತ್ತಿ ಆಡಿಸಿ ಬೆಳೆಸಿದ ಅಪ್ಪನ ಬಗೆಗೆ ಮಧುರ ಭಾವನೆಗಳ ಸುಂದರ ಕವನ.
chanda!
chanda!
manasu avare nanu kirti ... bahal dinagal nantra varushad nantra nanu nim bhaavaney taanakke bheti needide .. tumba sogasaagide kavanagalu...
Post a Comment