ನೇಸರ ತನ್ನ ದಿಕ್ಕು ಬದಲಿಸಲು
ಜಗಕೆ ಹೊಸಚೈತನ್ಯದಾಯಕ...
ಮಾಗಿಯ ಚುಮುಚುಮು ಚಳಿಗೆ ವಿದಾಯ
ಭೂಮಿತಾಯಿ ಮಗನ ಹೊಸ ಬೆಳೆಗೆ ಆದಾಯ
ಭಾನಂಗಳದಿ ಪತಂಗಗಳ ಸಂಚಾರ
ಭುವಿಯಂಗಳದಿ ರಂಗೋಲಿಯ ಚಿತ್ತಾರ
ಹೊಸ ಬೆಳೆ ಹೊಸ ದಿಕ್ಕು
ಜಗದಿ ಹೊಸ ಕ್ರಾಂತಿ ಹರಡಲು...
ಬಂದಿದೆ ಸಂಕ್ರಮಣ...
ಈ ಮಕರ ಸಂಕ್ರಮಣ
ಗೆಣಸು,ಕಬ್ಬಿನೊಂದಿಗೆ ಕಿಚಡಿಯ ದಿಬ್ಬಣ
ಎಳ್ಳು ಬೆಲ್ಲದೊಂದಿಗೆ
ಒಳ್ಳೊಳ್ಳೆ ಮಾತು....
ಎಂಬ ನಾನ್ನುಡಿ ಎಲ್ಲರು ಪಾಲಿಸೋಣ.....
7 comments:
ಸುಗುಣಕ್ಕ, ತುಂಬ ಸುಂದರವಾಗಿ ಸಂಕ್ರಮಣವನ್ನ ವಿವರಿಸಿದ್ದೀರಿ.
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಕ್ರಮಣ ದ ಶುಭಾಷಯಗಳು.
ಧನ್ಯವಾದಗಳು ...
ಮನಸು...
ಸರಳ ಶಬ್ಧಗಳಲ್ಲಿ..
ಬಹಳ ಸುಂದರವಾಗಿ ಸಂಕ್ರಾಂತಿಯ ಭಾವಾರ್ಥ ಸೆರೆ ಹಿಡಿದಿದ್ದೀರಿ...
ಹಳ್ಳಿಗರ ಮುಗ್ಧ ಮನಸ್ಸಿನ ಹಾಗೆ..
ತಮಗೂ.., ತಮ್ಮ ಮನೆಯವರೆಲ್ಲರಿಗೂ..
ಸಂಕ್ರಾಂತಿ ಹಬ್ಬದ ಶುಭಾಶಯಗಳು...
ಧನ್ಯಾವದಗಳು.. ಸರ್
ಸುಗುಣ ಮೇಡಮ್,
ತುಂಬಾ ಸುಂದರವಾಗಿ ಸರಳವಾಗಿ ಸಂಕ್ರಾತಿಯ ಅರ್ಥ ವಿವರಿಸಿದ್ದೀರಿ.....
ನಿಮಗೂ ನಿಮ್ಮ ಮನೆಯವರೆಲ್ಲರಿಗೂ
ಸಂಕ್ರಾಂತಿ ಹಬ್ಬದ ಶುಭಾಶಯಗಳು...
ಮತ್ತೆ ನನ್ನ ಬ್ಲಾಗಿಗೊಮ್ಮೆ ಬನ್ನಿ.....ಇವತ್ತು ನನ್ನ ಬರವಣಿಗೆಯಲ್ಲೇ ಅತ್ಯಂತ ಭಾವಪೂರ್ಣವೆನಿಸುವ ಲೇಖನವನ್ನು ಬರೆದಿದ್ದೇನೆ.....ಬಿಡುವು ಮಾಡಿಕೊಂಡು ಬನ್ನಿ......
http://chaayakannadi.blogspot.com/
ಧನ್ಯವಾದಗಳು ಸರ್..
ಖಂಡಿತಾ ಬೇಟಿ ಕೊಡುತ್ತೇನೆ.
ಸಮಸ್ತ ಹಿ೦ದು ಸ್ನೇಹಿತರಿಗೆ,
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
Post a Comment