ಮನೆಯಲ್ಲಿ ನೆನ್ನೆಯಷ್ಟೇ ತಂದಿದ್ದ ಎರಡು ಮುಖಕ್ಕೆ ಬಳಸೋ ಕ್ರೀಮ್ ಗಳು ಅಲ್ಲೆ ಕನ್ನಡಿಯ ಮುಂದಿತ್ತು, ಅದನ್ನು ತೆಗೆದು ಮಗ ಎಲ್ಲ ಮಾಹಿತಿಯನ್ನು ನೋಡುತ್ತಲಿದ್ದ... ನಾನು ಅವನ ಹೆಚ್ಚು ಗಮನಿಸದೆ ಫೈರ್ ಅಂಡ್ ಲವ್ ಲಿ ಕ್ರೀಮ್ ತೆಗೆದು ಅವನ ಮುಖಕ್ಕೆ ಸಿಂಗರಿಸಲು ಹೋದಾಗ ತಟ್ ಎಂದು ಹಿಂದೆ ಸರಿದಾ, ಏಕೆ...? ಎನಾಯಿತು ಬೇಗ ಬಾ ಶಾಲಾ ವಾಹನ ೬.೨೦ ಕ್ಕೆ ಬಂದು ಬಿಡುತ್ತಾನೆಂದೆ, ಅವನು ಅಮ್ಮ ಇರು ಸ್ವಲ್ಪ ಇನ್ನೊಂದು ಇದೆಯಲ್ಲ ಹಿಮಾಲಯ ಕ್ರೀಮ್ ಅದು ಕೊಡು ನನಗೆ ಅದೆ ಅಚ್ಚುಕೊತೀನಿ ಎಂದಾ ನಾನು ಇದು ಅಚ್ಚಿದರೆ ಏನಾಗುತ್ತೆ ತಗೊ ಬಾ .......ಸಮಯ ಇಲ್ಲ ನಿನ್ನ ಹತ್ತಿರ ಆಡೋಕೆ ಅಲ್ಲದೆ ಕೈನಲ್ಲಿ ಕ್ರೀಮ್ ತಗೋಂಡು ಬಿಟ್ಟಿದ್ದೀನಿ ಎಂದೆ......... ಇಲ್ಲ ನನ್ನ್ಗೆ ಅದೆ ಕೋಡು ಎಂದು ಹಠ ಮಾಡುತ್ತಲಿದ್ದ, ಅವನ ಹಠ ನೋಡಿ ಒಮ್ಮೆಲೆ ಸರಿ ಕಂದ ಎಂದು............ನಾನು ಹಿಮಾಲಯವನ್ನೆ ಕ್ರೀಮ್ ಬಳಸಿ ಸಿಂಗರಿಸಿದೆ....... ಸ್ವಲ್ಪ ಸಮಯದ ನಂತರ ಕೇಳಿದೆ ಏಕೆ ..? ನಿನಗೆ ಇಷ್ಟ ಇಲ್ಲವಾ ಆ ಕ್ರೀಮ್ ಎಂದೂ ಆ ರೀತಿ ಎದುರು ಮಾತನಾಡದವ ಹೀಗೆ ಹೇಳಿದನಲ್ಲ ಎಂಬ ಉತ್ಸುಕದೊಂದಿಗೆ ಕೇಳಿದೆ.........
ಅಮ್ಮ ನಿನಗೆ ಗೊತ್ತಿಲ್ಲವ ಹಿಮಾಲಯ ನಮ್ಮ ಬೆಂಗಳೂರಿನದು (Manufactured in Bangalore) ಎಂದು ಇತ್ತು ಅದಕ್ಕೆ ನಮ್ಮೊರಿನದನ್ನ ಬಳಸೋಣ ಅಂತ ಹೇಳಿದೆ ಅವತ್ತು ಒಂದು ದಿನ ನೀನೆ ಹೇಳ್ತಾ ಇದ್ದೆ ನಮ್ಮ ಇಂಡಿಯಾದಲ್ಲಿ ಮ್ಯಾನುಫ್ಯಾಕ್ಚರ್ ಮಾಡಿರೊ ವಸ್ತುನ ಬಳಸಬೇಕೆಂದು ಅದಕ್ಕೆ ನಾನು ಹಾಗೆ ಹೇಳಿದೆ ಎಂದ......(ಇತ್ತಿಚೆಗೆ ಒಂದು ಈ-ಮೈಲ್ ನಲ್ಲಿ ಭಾರತದ ವಸ್ತುಗಳನ್ನೇ ಕೊಳ್ಳಿ ಎಂದು ಬಂದಿತ್ತು ಅದನ್ನು ನಾನು ಮತ್ತು ನಮ್ಮ ಮನೆಯವರು ಆ ವಿಷಯವಾಗಿ ಚರ್ಚಿಸಿದ್ದೆವು).
ನನಗೆ ಹಿಂದೆಯೇ ಅವನ ಮಾತು ನಿಜ ಅಲ್ಲವೇ ಓಹ್ ನಾವು ಬರಿ ಮಾತಲ್ಲಿ ಹೇಳುತ್ತೇವೆ..... ಅವನು ಅದರ ಕಾರ್ಯಗತಗೊಳಿಸಿದ್ದಾನೆ......
ಇದಿಷ್ಟು ಬೆಳ್ಳಿಗ್ಗೆ ನೆಡೆದಿದ್ದರೆ ಸಂಜೆ ತ್ಯಾಗರಾಜರ ಆರಾದನ ಕಾರ್ಯಕ್ರಮಕ್ಕೆಂದು ನನ್ನ ಸ್ನೇಹಿತೆ ಆಹ್ವಾನದ ಮೆರೆಗೆ ತೆರೆಳಿದ್ದೆ ... ಅಲ್ಲಿಯೊ ಇದೆ ಅನುಭವ ಸ್ನೇಹಿತೆಯ ಮಗನನ್ನು ನನ್ನೊಂದಿಗೆ ಬಿಟ್ಟು ಆಕೆ ಕಾರ್ಯಕ್ರಮದ ಮೇಲ್ವಿಚಾರಣೆಗೆಂದು ತೆರಳಿದ್ದಳು... ಸ್ನೇಹಿತೆಯ ಮಗ ತಿಂಡಿ ಬೇಕೆಂದ ಕಾರಣ ನನ್ನ ಬ್ಯಾಗನಲ್ಲಿದ್ದ ಕಿಟ್-ಕ್ಯಾಟ್ ಕೊಡಲು ಹೊಗಿದ್ದಕ್ಕೆ ತಕ್ಷಣವೇ ಬೇಡ ನನಗೆ ಅಮೇರಿಕ ಮಾಡಿರೊ ತಿಂಡಿ ಇಷ್ಟ ಇಲ್ಲ ನಾನು ತಿನ್ನೊಲ್ಲವೆಂದ ಏಕೆ ಇನ್ನು ಯಾವುದು ತಿನ್ನುತ್ತೀಯಾ ಅಂದರೆ ಇಂಡಿಯಾದ್ದು (india made) ಮಾತ್ರ ತಿನ್ನುತೇನೆಂದ.... ನನಗೆ ಒಂದು ಕಡೆ ನಗು ಒಂದು ಕಡೆ ಆಶ್ಚರ್ಯ ಏನು ನಿಜವಾಗಿಯು ಮಕ್ಕಳು ಭಾರತ ಮೇಲೆ ಅಷ್ಟು ಪ್ರೀತಿಯೇ ಅಥವ ಆ ತಿಂಡಿ ತಿನ್ನುವ ಮನಸಿಲ್ಲದೆ ಹಾಗಂದನೇ......ಎಂದು.... ಇನ್ನು ಆ ಪ್ರಶ್ನೇಗೆ ಉತ್ತರ ಹುಡುಕುತ್ತಲೇ ಇರುವೆ........
ಒಟ್ಟಲ್ಲಿ ಬೇರೆನೆ ಅರ್ಥವಿದ್ದರು... ನಾವುಗಳು ಕಲಿಯುವುದು ಬಹಳ ಇದೆ.... ಇದೊಂದು ಮಾತ್ರ ಹೇಳಬಲ್ಲೆ.... ದೇಶಪ್ರೇಮ... ರಕ್ತಗತವಾಗಿ ಬಂದಿರುತ್ತದೆ.. ಅದು ಹುಡುಗಾಟಿಕೆಯೊ ಅಥವ ನಿಜವೋ ತಿಳಿಯದು ಆದರು ಎಲ್ಲೊ ಒಂದು ಕಡೆ ನಮ್ಮ ನೆಲ,ಜಲ, ಭಾಷೆ ಎಲ್ಲವನ್ನು ದೇವರು ಹುಟ್ಟುವಾಗಲೇ ಬಿತ್ತಿರುತ್ತಾನೆ....
12 comments:
Hey thumba chenagide!! ha ha ha makkalu ondondu sari hage adthare ha ha ha
ಕೆಲಯೊಮ್ಮೆ ನಾವು ಬಾಯಲ್ಲಿ ಹೇಳಿದ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಉಳಿದಿರುತ್ತವೆ ಮತ್ತು ಇಂತಹ ವಿಷಯ ಗಳನ್ನು ಅವರು ಕಾರ್ಯರೂಪಕ್ಕೆ ತರುತ್ತಾರೆ ಎನ್ನುವುದನ್ನ ಚಂದವಾಗಿ ವಿವರಿಸಿದ್ದೀರಿ.
ದೊಡ್ಡೊರದೆಲ್ಲ ಬರೀ ಮಾತೇ ಬಿಡಿ, ನವಪೀಳಿಗೆನಾದ್ರೂ ಕಾರ್ಯಪ್ರವೃತ್ತವಾಗಿದೆ.
ಸಾಕ್ಷಿ........
ಧನ್ಯವಾದಗಳು... ಮಕ್ಕಳು ಕೆಲವು ಸರಿ ನಮಗಿಂತ ಜಾಸ್ತಿನೆ ತಿಳ್ಕೊಂಡವರ ಹಾಗೆ ಮಾತಾಡ್ತಾರೆ ಅಲ್ಲವೇ?
ಧನ್ಯವಾದಗಳು...ಮೊರ್ತಿ
ಹೇಗೋ ಮಕ್ಕಳಲ್ಲಿ ನಮ್ಮೋರು ನನ್ನವರು ಅನ್ನುವ ಭಾವನೆ ಇದ್ದರೆ ಸಾಕು... ಕೆಲವು ಮಕ್ಕಳು ಇಂಡಿಯಾನ ನನ್ನಗೆ ಇಷ್ಟ ಇಲ್ಲ ರಜೆಗೆ ಹೋಗೋಲ್ಲ ಅನ್ನೋ ಮಕ್ಕಳು ಕೂಡ ಇದ್ದಾರೆ....
ಧನ್ಯವಾದಗಳು... ಪ್ರಭು
ನಾವು ಎಲ್ಲೋ ಒಂದು ಕಡೆ ಎಡವುದನ್ನು ತಡೆಯಲು ,ನವಪೀಳಿಗೆ ಎಚ್ಚೆತ್ತುಕೊಳ್ಳಲೇ ಬೇಕು.
makkala desha prema mechalebeku....good writing
ಬಹಳ ಚೆನ್ನಾಗಿದೆ...
ಮಕ್ಕಳಲ್ಲಿ ದೇಶ ಪ್ರೇಮ ಕಂಡು ಖುಷಿಯಾಯಿತು...
ಚಂದವಾದ ಬರಹ...
ಅಭಿನಂದನೆಗಳು...
ಅನಾಮಧೇಯರಿಗೆ..
ಧನ್ಯವಾದಗಳು ನಿಮ್ಮ ಹೆಸರಿನೊಂದಿಗೆ ತಿಳಿಸಿದ್ದರೆ ಚೆನ್ನಾಗಿ ಇರೋದು...
ಪ್ರಕಾಶ್ ಸರ್...
ಧನ್ಯವಾದಗಳು... ದೇಶ ಪ್ರೇಮ ಹೀಗೆ ಇದ್ದರೆ ಒಳ್ಳೆಯದು... ಅಲ್ಲವೇ?
ಮುಗ್ಧಮನಸೊಳಗೆ ಏನನ್ನು ಬಿತ್ತುತ್ತೇವೋ ಅವು ಅದನ್ನೇ ಸತ್ಯವೆಂದು ನಂಬುತ್ತವೆ. ನಾವು ಉತ್ತಮ ವಿಷಯಗಳನ್ನೇ ಹೇಳುತ್ತಿದ್ದರೆ ಅವರೂ ಅದನ್ನೇ ಪಾಲಿಸುತ್ತಾರೆ. ಹೆಚ್ಚು ಯೋಚಿಸುತ್ತಾರೆ ಅಲ್ಲವೇ? ತುಂಬಾ ಸಂತೋಷವಾಯಿತು ಮಕ್ಕಳ ದೇಶಪ್ರೇಮವನ್ನು ನೋಡಿ. ಇದೇ ರೀತಿಯ ಮನೋಭಾವ ನಾಳೆಯೂ ಅವರಲ್ಲಿರಲಿ.. ಅವರಲ್ಲಿ ಮಾತ್ರ ಅಲ್ಲ.. ಎಲ್ಲಾ ಪ್ರಜೆಗಳಲ್ಲೂ ಇದ್ದರೆ ಭಯೋತ್ಪಾದನೆಯೇ ಇಲ್ಲದಂತಾಗುವುದು!
ಧನ್ಯವಾದಗಳು... ತೇಜಸ್ವಿನಿಯವರೇ
ನಿಮ್ಮ ಮಾತು ನಿಜ ನಾವು ಹೇಗೆ, ಏನು ಹೇಳುತ್ತೇವೋ ಹಾಗೆ ಮಕ್ಕಳು ರೂಡಿಗತ ಮಾಡುತ್ತಾರೆ, ದೇಶಪ್ರೇಮ ಭಯೋತ್ಪಾದನೆ ನಿಲ್ಲಿಸುವ ಮದ್ದು ಎಂದೆಳಿದರೆ ತಪ್ಪಾಗಲಾರದು ಅಲ್ಲವೇ?
ಹೀಗೆ ಬೇಟಿ ಕೊಡುತ್ತಿರಿ......
ವಂದನೆಗಳು......
ಮೇಡಮ್,
ಮಕ್ಕಳ ದೇಶ ಪ್ರೇಮ ಕಂಡು ನನಗೆ ತುಂಬಾ ಸಂತೋಷವಾಯಿತು.....ಈಗಿನ ಮಕ್ಕಳಿಂದ ನಾವು ಕಲಿಯುವುದು ತುಂಬಾ ಇದೆ.....ನಮ್ಮ ಮನೆಯಲ್ಲಿ ಸುಮಾರು ವಸ್ತುಗಳು ನಮ್ಮ ದೇಶದವೇ ಆಗಿವೆ....ಅವುಗಳ ಬೆಲೆ ಒಂದೆರಡು ರೂಪಾಯಿ ಹೆಚ್ಚಾದರೂ ಕೂಡ....[ನೀಮ್, ಮೈಸೂರ್ ಸ್ಯಾಂಡಲ್...ಆಯುರ್ವೇದಿಕ್ ಐಟಮ್ ಗಳು....ಇತ್ಯಾದಿ....ನಾವು ಇದನ್ನು ಸಾಧ್ಯವಾದಷ್ಟು ಆಚರಣೆಗೆ ತರಲು ಪ್ರಯತ್ನಿಸುತ್ತಿದ್ದೇವೆ....ಥ್ಯಾಂಕ್ಸ್....
ಧನ್ಯವಾದಗಳು..
ನಾವು ಕೂಡ ಹಾಗೆ ಸ್ವಲ್ಪ ಬೆಲೆ ಹೆಚ್ಚಾದರು ಆದಷ್ಟು ನಮ್ಮೂರ ವಸ್ತುಗಳನ್ನೇ ಬಳಸುತ್ತಿದ್ದೇವೆ......
ನಿಮ್ಮ ಪ್ರತಿಕ್ರಿಯೆ ಎಂದೆಂದು ಹೀಗೆ ಬರುತ್ತಲಿರಲೆಂದು ಬಯಸುತ್ತಾ....
ವಂದನೆಗಳು...
Post a Comment