Wednesday, February 11, 2009

ಮೃದುಮನಸಿಗೆ ತೊಚಿದ್ದು... ಹಾಗೇ ಸುಮ್ಮನೆ....ಗೀಚಿದ್ದು...

ಮನವೇಕೂ ನಿನ್ನ ಬಯಸಿದೆ
ಬೇಕೆಂದೇನಲ್ಲ ....
ಮನವು ಕಾಲಿಯಿದೆ ಅದಕಾಗಿ ಇದೆಲ್ಲ..

ಕಣ್ಣಲ್ಲಿ ನಿನ್ನದೇ ಪ್ರತಿಬಿಂಬ
ನೆನಪಿಗಾಗಿ ಅಲ್ಲ....
ನೀ ಎದುರು ನಿಂತಿರುವೆಯಲ್ಲ.

ಪುಸ್ತಕ ತೆಗೆದರೆ
ನೀನದೆ ನೆನಪು ಬರುವುದಲ್ಲ...
ಓಹ್ ಹಾಗದರೆ ನಿನಗೆ ನನ್ನ ಮೇಲೆ ಪ್ರೀತಿಯಿದೆ ಎಂದೆಯಲ್ಲ..
ಅದು ಹಾಗಲ್ಲ ಆ ಪುಸ್ತಕದಲಿ ನಿನ್ನ ಬಗ್ಗೆ ಬರೆದಿರುವರೆಲ್ಲ...

ನಾ ಹೋದೆ ಎಂದು ಅಳುವೇಕೆ..
ಅದು ನೀನ್ನ ಬೈಕ್ ರಭಸಕ್ಕೆ
ನನ್ನ ಕಣ್ಣಲ್ಲಿ ಧೊಳ್ ತುಂಬಿ ಕಣ್ಣೀರು ಹರಿದ್ದದ್ದು...

ನೀ ಹಾಡಿದ ಪ್ರೀತಿಯ ಹಾಡು ಕಿವಿಗೆ ತಂಪು
ಹುಚ್ಚೆದ್ದು ಕುಣಿಯೋ ಹಾಗಿಲ್ಲ...
ಅದು ಹಾಡಿದ್ದು ಚಲನಚಿತ್ರಕ್ಕೆಂದು ನನಗಾಗಲ್ಲ...

ಅಂದು ನಾ ಕಾದು ಕಾದು ಸಾಕಾದೆ
ನಿನಗಾಗಿಯಲ್ಲ...
ನಾ ಕಾದಿದ್ದು ಅಂದು ಬಸ್ಸಿಗಾಗಿ...

ನಾನೇಕೊ ಬಿದ್ದು ಬಿಟ್ಟೆ
ನಿನ್ನ ಪ್ರೀತಿಗಾಗಿಯಲ್ಲ...
ದಾರಿಯಲಿ ಕಲ್ಲನು ನೋಡದೆ ಎಡವಿಬಿದ್ದೆನಲ್ಲ...

ನೀನಂದೆ ನನ್ನ ಪ್ರೀತಿಯಲಿ
ನೀ ನೆಂದುಬಿಟ್ಟೆಯೆಂದು....
ನೆಂದಿದ್ದು ಪ್ರೀತಿಗಲ್ಲ ತೊಯ್ ಎಂದು ಬೀಳುತ್ತಿದ್ದ ಮಳೆಗಾಗಿ..

ತಲೆಯೇಕೊ ಭಾರವಾಗಿದೆ
ನಿನ್ನ ನೆನಪಿಗಾಗೇನಲ್ಲ...
ತಲೆಗೆ ಶೀತವಾಗಿದೆಯಲ್ಲ...

ನನಗೇಕೊ ಮಾತೆ ಬಾರದಾಗಿದೆ
ಆಹಾ.. ಅಷ್ಟು ಪ್ರೀತಿಯಿದೆ ಎಂದೆಯಲ್ಲ...
ಅದು ಹಾಗಲ್ಲ ಬಾಯಲ್ಲಿ ತಿಂಡಿ ಇರುವುದಲ್ಲ...

ಮೈ ಭಾರವಾಗಿದೆ..
ನಿನ್ನ ಮೋಹಕಾಗಲ್ಲ...
ಮೈ ತೂಕ ಹೂರಲಾರದೆ..

ಕಣ್ಣು ಮಿಟಿಕಿಸದೇ ನೋಡುವೆ
ಎಂದೆನುವೆಯಲ್ಲಾ
ಅದು ಕಣ್ಣಿನ ದೋಷವಿರಬೇಕಲ್ಲ...

ನೀ ಕನಸಲ್ಲಿ ಬಂದಿದ್ದೆ
ಎಂದೆಯಲ್ಲಾ.......
ಅದು ಕನಸಲ್ಲಿ ಮಾತ್ರ ವಾಸ್ತವತೆಯಲ್ಲ...

ನೀ ಬಾರದೆ ಕುಡುಕನಾದೆ
ಎಂದೇಳಿದೆಯಲ್ಲ...
ನನಗಾಗಿ ಅಲ್ಲ ಕುಡಿತದ ಗೀಳಿಗೆ ಮರುಳಾದೆ ನೀ...

ಎಲ್ಲೆಲ್ಲು ನೀನೆ....ಕಾಣುವೆ...
ನಾ ಚುನಾವಣೆಗೆ ನಿಂತಿದ್ದೆನಲ್ಲಾ
ಅದಕಾಗೆ ಎಲ್ಲೆಲ್ಲು ನನ್ನ ಬಿತ್ತಿಪತ್ರಗಳು..

ನಿನ್ನ ನಾ ಪ್ರೀತಿಯಲೇ
ಕೊಲ್ಲುವೆಯೆಂದೆಯಲ್ಲ..
ಕೊಂದರೆ ಜೈಲೆ ಗತಿಯಲ್ಲ...

ಪ್ರೇಮಪತ್ರ ಬರೆಯಲೇ ಇಲ್ಲ..?ಎಂದೆಯಲ್ಲ..
ಬರೆಯಲು ಕೈ ಬರಲೇ ಇಲ್ಲ..

17 comments:

sujatha said...

tumba chennagide, keep going, nimma aa preeti yaaru? paapa tumba golu huykobedu nimma preetisdavarannu. nimma bhasha gnana tumba chennagide.

All the best

sugma said...

Namaskara..Valentines day hathira bartha idhe ninna kavana na premigalu nodidhre yochane madthare idhela nija na antha hehehehe

Good writing

Anonymous said...

Hey Very nice!!!

something different..

good try
keep trying new idea's haha ..

Best wishes to u!!

Premi said...

Excellent... Hudgur yaaradhru idanna odhidhrey.. hudgirna daari tappisthidarey suguna avru antha hudguru Kalll hoditharey hushaarrrrrrrrrrrrrrrrrrrr ;-)

ಸಿಮೆಂಟು ಮರಳಿನ ಮಧ್ಯೆ said...

ಮನಸು..

ನೀವು ಈ ರೀತಿ ಬರೆಯುತ್ತೀರಿ ಎಂದಾಯಿತಲ್ಲ..

ನಮಗಂತೂ ಖುಷಿಯಾಗಿದೆಯಲ್ಲ..

ಪ್ರೇಮಿಗಳ ದಿನಕ್ಕೆಂದು ವ್ಯಂಗ್ಯವಾಗಿ ಬರೆದಂತಿಯಲ್ಲ..

ನಿಜವಾ..?


ಚಂದದ ಕವಿತೆಗಾಗಿ ...

ಅಭಿನಂದನೆಗಳು...

varun said...

enu madam....enu Valentines day special ..tmba channagide adre hudugru yochane madbekada vicharane edu...

shivu said...

ಚೆನ್ನಾಗಿದೆಯಲ್ಲಾ!

ಆಶೆ ತೋರಿಸಿ ನೀರಾಸೆ ಮಾಡುವುದು ಅಂದರೆ ಹೀಗೇನಾ !

ಇದು ಖಂಡಿತ ಪ್ರೇಮಿಗಳ ದಿನದ ಕವನ ಅಲ್ಲ....ಏನಾದರಾಗಲಿ ಕವನ ಚೆನ್ನಾಗಿದೆ....

Prabhuraj Moogi said...

kavana tumba chennagide "ಅಂದು ನಾ ಕಾದು ಕಾದು ಸಾಕಾದೆ
ನಿನಗಾಗಿಯಲ್ಲ...
ನಾ ಕಾದಿದ್ದು ಅಂದು ಬಸ್ಸಿಗಾಗಿ..."
aa line bahaLa ishTa aaytu... huDugeeru kaayOde bassigaagi sumne huchchu huDugaru tamagaNta andukoLLOdu.. ha ha ha

ಮನಸು said...

ಎಲ್ಲರಿಗು ನನ್ನ ಧನ್ಯವಾದಗಳು...
@suja
ಆ ಪ್ರೀತಿ ಯಾರಿಗೂ ಅಲ್ಲ ಸುಮ್ಮನೆ ಬರೆದಿದ್ದು.. ನನ್ನ ಪ್ರೀತಿಗೆ ಹೀಗೆಲ್ಲ ಹೇಳೋಲ್ಲ..
@sugma
ಪ್ರೇಮಿಗಳು ಯೋಚಿಸಲು ಅಲ್ಲ ಹಾಗೆ ಸುಮ್ಮನೆ ಬರೆದೆ... ಕಾರಣಗಳು ಹೀಗೂ ಇರಬಹುದು ಎಂದು....
@anonymous..
yes u r right...it's a new idea that's all..
@premi..
ಹುಡುಗರು ಯಾರು ಕಲ್ಲು ಹೊಡೆಯೊಲ್ಲ ಸ್ವಲ್ಪ ಯೋಚುಸ್ತಾರೆ ಹೀಗೂ ಇರಬಹುದಲ್ವಾ ನಾವು ತಪ್ಪು ಅರ್ಥ ಮಾಡ್ಕೊತೀವೇನೋ ಅಂತ ಹ ಹ ಹ ... ಹಾಗು ಕಲ್ಲು ಒಡೆದರೆ...
ಸಿಟ್ಟು ಬಂದು ಕಲ್ಲು ಒಡೆದರೆ ..
ಅದು ಕಲ್ಲಲ್ಲ....
ಹೂ ಎಂದು ಬಿಡುವುದು ಸರಿಯಲ್ಲವೇ...

ಮನಸು said...

@ಪ್ರಕಾಶ್ ಸರ್..
ಪ್ರೇಮಿಗಳ ದಿನಕ್ಕೆ ವ್ಯಂಗ್ಯವಾಗೆನು ಬರೆಯಲಿಲ್ಲ... ಎಲ್ಲರು ಪ್ರೀತಿ ಹೀಗೆ ಹಾಗೆ ಅಂತ ಬರಿತಾರೆ ಅದಕ್ಕೆ ವಿರುದ್ದ ಯಾಕೆ ಬರೆಯಬಾರದೆಂದು ನನ್ನ ಹೊಸ ಪ್ರಯತ್ನ ಅಷ್ಟೆ..

@varun
ಯೋಚಿಸಿ ನೀವು ಚೆನ್ನಾಗಿ ಹ ಹ ...

ಶಿವು ಸರ್,
ಖಂಡಿತ ಪ್ರೇಮಿಗಳ ದಿನಕ್ಕಾಗಿ ಅಲ್ಲ.. ನನಗೆ ಆ ದಿನದ ಅರಿವೇ ಇಲ್ಲ...... ಆ ಆಚರಣೆಗಳು ಅವರವರಿಗೆ ಬಿಟ್ಟಿದ್ದು... ಇತ್ತೀಚಿಗೆ ಒಂದು ಫಾರ್ವರ್ಡ್ ಮೇಲ್ ಬಂದಿತ್ತು ಒಂದು ಹುಡುಗಿ ಹುಡುಗನಿಗೆ ಪ್ರೇಮ ಪತ್ರ ಬರೆದಿರೋದು ಅದರಲ್ಲಿದ್ದ ಪದ ಪುಂಜಗಳು ಹೇಳತೀರದು... ಅದ ನೋಡಿ ಈರೀತಿ ಅದಕ್ಕೆ ವಿರುದ್ಧವಾಗಿ ಬರೆದೆ ಹ ಹ ಹ ಅಷ್ಟೆ...

@Prabhu..
ಏನೋ ಒಂದು ಕಲ್ಪನೆಯಲ್ಲಿ ಬರೆದಿದ್ದೀನಿ ಅದನ್ನೆಲ್ಲಾ ಸ್ವೀಕರಿಸೋ ನಿಮಗೆ ಧನ್ಯವಾದಗಳು..
ನೀವು ಸಂಸಾರಿಯಲ್ಲ ಆದರು ಎಷ್ಟೆಲ್ಲ ಬರೆಯುತೀರಿ ಹಾಗೆ ನಾನು ಕೂಡ ಒಂದು ಪ್ರಯತ್ನ ಪಟ್ಟೆ...ಹ ಹ ಹಎಲ್ಲರಿಗು ನನ್ನ ಧನ್ಯವಾದಗಳು..

ತೇಜಸ್ವಿನಿ ಹೆಗಡೆ- said...

ಮನಸು,

:D ತುಂಬಾ ಇಷ್ಟವಾಯಿತು ವಿನೂತನ ಶೈಲಿ ಹಾಗೂ ಯೋಚನೆಯನ್ನೊಳಗೊಂಡ ಕವನ. ಕೆಲವೊಂದು ಸಾಲುಗಳನ್ನು ಓದಿ ನಗುವುಕ್ಕಿ ಬಂತು.:)

mahesh said...

Akashave belali mele na ninna kai bidenu, bhoomiye bai bidali ......antha hado hudugaru idhare suguna....eega haadu badalhisutharo eno ee kavana nodi......

ಮನಸು said...

ತೇಜಸ್ವಿನಿ..
ನಗು ಬರಲೆಂದೇ ಈ ಪ್ರಯತ್ನ ...... ಬಹಳ ಧನ್ಯವಾದಗಳು ನನ್ನ ಹೊಸ ಪ್ರಯತ್ನ ನಿಮಗೆ ಹಿಡಿಸಿದ್ದಕ್ಕೆ

@Mahesh..
ಆಕಾಶವೇ ಬೀಳಲಿ ಮೇಲೆ ನಾ ನಿನ್ನ ಕೈಬಿಡೆನು...........

ಅದು ಹೇಳಿದ್ದು ಸುಮ್ಮನೆ
ಆಕಾಶ ಯಾವತ್ತು ಬೀಳೋಲ್ಲ ಅಂತ ಗೊತ್ತು..

ಭೂಮಿ ಬಾಯಿ ಬಿಟ್ಟರೆ ಇಬ್ಬರು ಒಳಗೊಗುತ್ತಾರೆ... ಹ ಹ ಹ

ಅವನು ಬಿದ್ದರೆ ಇವಳು ಬದುಕಿ ಬೇರೆಯವರ ಕೈಹಿಡಿಯುವಳೆಂದು
ಕೈ ಬಿಡದೆ ಹಾಗೆ ಭೂಮಿ ಒಳಗೆ ಎಳೆದುಕೊಳ್ಳುವನು .....

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ said...

Sugunakka kavana tumba chennaagide aadaroo mahesh avaru tumbaa react madta idaarappa ee kavana da bagge yaake gottilla!!!!!!!!!!!!!!!!!!

ಶಿವಪ್ರಕಾಶ್ said...

ಚನ್ನಾಗಿದೆ ರೀ.
ಹೀಗೆ ಬರಿತಾ ಇರಿ, ನಮ್ಮನ್ನು confuse ಮಾಡ್ತಾ ಇರೀ..

Dr.Gurumurthy Hegde said...

ಆತ್ಮೀಯ ಮನಸು,
ತುಂಬ ಒಳ್ಳೆಯ ಕವನ, ಆದರೆ ಪ್ರೇಮಿಗಳ ದಿನಕ್ಕೆ ಹೀಗೆಲ್ಲ ಬರೆದರೆ ಹೇಗೆ, ಹುಡುಗಿಯರೂ ಯಾವಾಗಲೂ ಕಾಯುವುದು ಬಸ್ಸಗಾಗಿಯೇ, ಯಾಕೆಂದರೆ ಅದೇ ಬಸ್ಸನಲ್ಲಿ ತಾನೆ ಅವಳ ಅವನಿರುವುದು.
ಒಟ್ಟಿನಲ್ಲಿ ಕವನ ಶೈಲಿ ತುಂಬ ಇಷ್ಟವಾಯಿತು.
ಸದಾ ಬರೆಯುತ್ತಿರಿ.

ಮನಸು said...

ನಾಣು..
ಧನ್ಯವಾದಗಳು, ಮಹೇಶನೆ ಕೇಳ್ಬೇಕು.. ಯಾಕೆ ಅಷ್ಟು ಕಾಮೆಂಟ್ ಅಂತ

ಶಿವಪ್ರಕಾಶ್,
ನಿಮಗೆ ಸ್ವಾಗತ,confuse ಮಾಡಿದ್ರು, confuse ಆಗೋರು ಬೇಕಲ್ಲ...

ಹೀಗೆ ಭೇಟಿ ಇರಲಿ ,ಸದಾ confuse ಮಾಡೋ ಗಳಿಗೆ ನನಗೆ ಬರಲಿ
ಹ ಹ ಹ ..

ಗುರು..
ಅವಳು ಕಾದಿದ್ದ ಆ ಬಸ್ಸು ಮಹಿಳೆಯರಿಗೆ ಮೀಸಲಿರೋ ಬಸ್ಸಿಗಾಗಿ ..ಹ ಹ ಹ

ವಂದನೆಗಳು..