Saturday, February 14, 2009

ಇಂದಿನ ವಿಶೇಷ ದಿನ ನಮಗೆ ವಿಶೇಷ...

ಅಂದು ಗುರುವಾರ ಮಗನ ಶಾಲೆಯಲ್ಲಿ ಗಿಫ್ಟ್ ಪ್ಯಾಕಿಂಗ್ ಸ್ಪರ್ಧೆ ಇದ್ದ ಕಾರಣ ಎಲ್ಲದರ ತಯಾರಿ ಹಾಗು ಹೇಗೆ ಪ್ಯಾಕ್ ಮಾಡುವುದೆಲ್ಲವನ್ನು ಕಲಿಸಿದ್ದೆ.. ಮಗನಿಗೆ ಬಲು ಕುಶಿ ಅಮ್ಮ ಎನೇನೋ ಆಕೃತಿ ಎಲ್ಲ ಮಾಡಿಕೊಟ್ಟಿದ್ದಾಳೇ ಚೆನ್ನಾಗಿ ಮಾಡಬೇಕೆಂಬ ಆಸೆಯಿಂದ ಇದ್ದ, ಅವ್ನು ಹೊರಡೊ ಮುಂಚೆ ಅದಕ್ಕೆ ಬೇಕಾದ ಸಾಮಗ್ರಿಗಳನ್ನೇಲ್ಲಾ ಒಂದು ಬ್ಯಾಗ್ನಲ್ಲಿಟ್ಟು ಬರುವಾಗ ಎಲ್ಲವನ್ನು ಮನೆಗೆ ತರಬೇಕೆಂದು ಹೇಳಿದ್ದೆ ಅವನು ಆಗಲೆಂದು ಒಪ್ಪಿ ಕುಶಿಯಿಂದ ತೆರಳಿದ್ದ.......

ಶಾಲೆಂದ ಬಂದವನು ಅಮ್ಮ ನನ್ನನು ಇವತ್ತು ನಿಜ ಬಯ್ಯುತ್ತೇ, today bad news for you.. ಎಂದು ಅಪ್ಪನೊಂದಿಗೆ ಮಾತನಾಡುತ್ತಲೇ ಒಳಗೆ ಬಂದವನು ಅಮ್ಮ sorry.. ನೀ ಕಳಿಸಿದ್ದಲ್ಲಾ ಅವೆಲ್ಲ ಮರೆತು ಬಂದೆ....ಹೊಗಲಿ ಬಿಡು ಕಂದ ಚೆನ್ನಾಗಿ ಮಾಡಿದ ಹೇಗಿತ್ತು, ಎಲ್ಲ ಸ್ನೇಹಿತರು ಸ್ಪರ್ಧೆಗೆ ಬಂದಿದ್ದರಾ ಎಂದೆ.... ಹೌದು ನನ್ನ gift pack...ನ ಪೋಟೊ ತಗೊಂಡ್ಡರು ಗೊತ್ತ ಎನು ಕುಶಿಯಲಿ ಹೇಳಿದ...ನನಗೂ ಕೂಡ ಕುಶಿ ಇತ್ತು ... ನಂತರ ಕೇಳಿದೆ ಎಷ್ಟು ಮಕ್ಕಳ ಪೋಟೊ ತಗೊಂಡರು ಎಂದು ಕೇಳಿ ಹಿಂದೆಲೇ ಇಬ್ಬರೇ ಎಂದು ಜಾಮೂಲ್ ಜಾಹಿರಾತಿನಲ್ಲಿ ಹೇಳಿದ ಹಾಗೆ ಹೇಳಬೇಡ ಎಂದು ನಕ್ಕೆನು.......ಹುಸಿ ಮುನಿಸಿನಲಿ .... ಇಲ್ಲ ೩೦ರಲ್ಲಿ ಕೇವಲ ೧೧ ಪೋಟೊ ತೆಗೆದರು ಅದರಲ್ಲಿ ನಾನು ಒಬ್ಬ ಎಂದ....ಅದರೆ ಏಕೋ ಅಂದು ಅಷ್ಟು ಸಮಾಧಾನವಾಗಿರಲಿಲ್ಲ... ಆದರು ಅದನ್ನ ಅಲ್ಲೇ ಬಿಟ್ಟು ನಾವು ಸುಮ್ಮನಾದೆವು..

ಇನ್ನು ಶುಕ್ರವಾರ ನಮ್ಮಗಳಿಗಿಲ್ಲಿ ರಜೆ ದಿನ... ಬೆಳ್ಳಿಗೆ ನಿದ್ರೆಯಿಂದ ಎದ್ದವನು ಅಳುತ್ತಲೇ ಬಂದನು.....ಏಕೆ ... ಏನಾಯಿತು ಎಂದು ಕೇಳಿದರೆ......ನೆನ್ನೆ ನಾನು ಗಿಫ್ಟ್ ಪ್ಯಾಕಿಂಗ್ ಮಾಡಿದ್ದೆನಲ್ಲ ಅದನ್ನ ಮನೆಗೆ ತೆಗೆದುಕೂಂಡು ಹೋಗಲು ಹೇಳಿದ್ದರು ನಾನು ಮರೆತುಬಂದೆ ಎಂದ ಹೋಗಲಿ ಬಿಡು ಭಾನುವಾರ ಶಾಲೆಗೆ ಹೋಗುತ್ತೀಯಲ್ಲಾ ತರುವಂತೆ ಎಂದೆವು... ಇಲ್ಲ ನೆನ್ನೆನೆ ತರಬೇಕಿತ್ತು ಎಂದು ಒಂದೇ ಸಮನೇ ಅಳು... ದುಃಖ ಹೇಳತೀರದು.... ಇಲ್ಲ ನಾನು ಶನಿವಾರವೇ ಕೊಡಬೇಕು ಅದನ್ನ... ನಿಮ್ಗೆ, ನಿಮ್ಮಿಬ್ಬರಿಗಾಗಿ ಏನೋ ಮಾಡಿದ್ದೆ ಎಂದೆಲ್ಲ ಪರಿತಪಿಸುತ್ತಿತ್ತು........ನಾನು ಹೋಗಲಿ ಬಿಡು ಏನು ಆಗೋಲ್ಲ....ಭಾನುವಾರ ತಂದು ತೋರಿಸು ಎಂದೇಳಿದೆ.. ಇಲ್ಲ ನನಗೆ ತುಂಬಾ ಬೇಜಾರಗುತಿದೆ ... ಶನಿವಾರ ನಿಮ್ಗೆ ಕೊಡಲೇಬೇಕು ಎಂಬ ಹಟ...ಎನು ಮಾಡಲಿ ನಾನು ಹೇಳು... ಈಗಲೇ ಶಾಲೆಗೆ ಹೋಗಿ ತಗೂಂಡು ಬರೋಣ ಬಾ ಎಂದೆ.. ಆಗ ಇಲ್ಲ ಬೇಡ ಬಿಡು ಶಾಲೆ ರಜೆ ಅಲ್ಲವಾ ಎಂದು ಸುಮ್ಮನಾದ(ಶುಕ್ರವಾರ, ಶನಿವಾರ ರಜೆ ಇಲ್ಲಿನ ಶಾಲೆಗಳಿಗೆ).......ಇದಿಷ್ಟು ನೆಡೆದು ಕೊನೆಯಲ್ಲಿ ಎಲ್ಲವನ್ನು ಮರೆತನೆಂದು ನಾವು ಸುಮ್ಮನಾದೆವು...

ರಾತ್ರಿ ಮಲಗುವಾಗ... ನಾಳೆ ನೀವು ನಾಳೆ ಶುಭಾಶಯ ಹೇಳಬೇಡಿ, ಹೇಳೊದು ಬೇಡ ಎಂದಾ...... ನಾವು ಏಕೆ... ಏನು ವಿಶೇಷ ನಾಳೆ ಎಂದು ಕೇಳಿದೆ...ನಾಳೆ valentines day!!! ಎಂದಾ, ನಾನು ಯಾರಪ್ಪ ನಿನಗೆ ಹೇಳಿದ್ದು ಇದೆಲ್ಲಾ ಅಂದೆ ನಮ್ಮ ಸ್ಕೂಲ್ನಲ್ಲಿ ಆ ಸ್ಪರ್ಧೆ(Gift packing) ಮಾಡಿಸಿದ್ದರಲ್ಲ ಅದನ್ನ ಮನೆಗೆ ತೆಗೆದುಕೂಂಡು ಅಪ್ಪ ಅಮ್ಮನಿಗೆ ಶುಭಾಶಯ ತಿಳಿಸಿ ಕೊಡಲಿಕ್ಕೆ ಹೇಳಿದ್ದರು... ಛೇ.. ನಾನು ಮಿಸ್ ಮಾಡಿ ಬಂದೆ ಎಂದು ಗೊಣಗಿದ.....ಅಪ್ಪ ಯಾವಾಗಲು ಆ ಹಬ್ಬ ಈ ಹಬ್ಬ.. mother's day, children day ಅಂತಾ ಎಲ್ಲ wish ಮಾಡುತ್ತೆ ನಾನು ನಾಳೆ wish ಮಾಡೊಣ ಅಂತಾನೇ ಇದ್ದೆ ಆದರೆ ಹೀಗೆ ಆಗೊಯ್ತು ಎಂದ.. ನಮಗೆ ಎನಪ್ಪ ಇದು ಇನ್ನು ೨ನೆ ತರಗತಿಯಲ್ಲಿ ಓದುವ ಹುಡುಗನಿಗೇ ಏನೇನು ಹೇಳುತ್ತಾರೋ ಇವರಿಗಳಿಗೇನು ಮಾಡಲು ಕೆಲಸವಿಲ್ಲವೇ ಎಂದು ಕೊಂಡೆ... ಸ್ವಲ್ಪ ಸಮಯ ಯೋಚಿಸಿ ಹೇಳಿದೆ ಆ ಆಚರಣೆ ಎಲ್ಲ ಏನು ನಮ್ಮದಲ್ಲ ಕಂದ ನಮಗೆ wish ಮಾಡದಿದ್ದರು ನೆಡೆಯುತ್ತೆ... ಎಂದೆ ನೀನು ದೂಡ್ಡವನು ಆದಮೇಲೆ ನಿನಗೆ ಗೊತ್ತಾಗುತ್ತೆ ಎಂದು ಸುಮ್ಮನಾದೆ..

ಇಂದು ಬೆಳ್ಳಿಗ್ಗೆ ನನ್ನ ಪತಿ ನನಗೆ ಶುಭಾಶಯ ತಿಳಿಸೋ ಗೊಜಿಗೆ ಹೋಗಲೇ ಇಲ್ಲ ಯಾವಾಗಲು ನನ್ನವರು.... ನನ್ನ ನೋಡಿದ್ದ ದಿನದ್ದು,ಮಾತಾಡಿದ್ದ ದಿನ, ಮದುವೆ ದಿನ, ನಿಮ್ಮ ಮನೆಯವರು ಒಪ್ಪಿದ ದಿನ,ಹಬ್ಬ ಅರಿದಿನ. ಅಮ್ಮನ ದಿನ, ಮಹಿಳೆ ದಿನ, ಕುವೈಟ್ ಆಚರಣೆ, ಭಾರತದಲ್ಲಿ ಆ ದಿನ ಈ ದಿನ ಎಂದು ಪರಿಪರಿಯ ದಿನವನ್ನೆಲ್ಲಾ ಶುಭಾಶಯ ತಿಳಿಸೊರು ಹಾಗು ಏನು ವಿಶೇಷವಿಲ್ಲದಿದ್ದರೂ ಸಹ ಸುಮ್ಮ ಸುಮ್ಮನೆ ಶುಭಾಶಯ ಮಾಡೋರು ನಾನು ಏಕೆಂದರೆ ಯಾರಿಗಾದರು ಮದುವೆ ಆಗಿರುತ್ತೆ, ಯಾರಿಗಾದರು ಮಕ್ಕಳಾಗಿರುತ್ತೆ, ಕುವೈಟಿನಲ್ಲಿ ಧೊಳ್.... ಇವತ್ತು ರಜೆ ಅದಕ್ಕೆ ಹೀಗೆಲ್ಲ ತಮಾಷೆಗೆ ಶುಭಾಶಯ ತಿಳಿಸೋರು.. ಇವತ್ತು ಬೆಳ್ಳಿಗ್ಗೆ ಎಂತದು ಇಲ್ಲ... ನನಗು ಪ್ರೇಮಿಗಳ ದಿನದ ಅರಿವೇ ಇರಲ್ಲಿಲ... ಹ ಹ.... ಅದು ಅಲ್ಲದೆ ನೆನ್ನೆ ಮಗರಾಯನ ಆದೇಶವಿತ್ತಲ್ಲ ಆದ್ದರಿಂದ ಶುಭಾಶಯ ವಿನಿಮಯ ಆಗಲೇ ಇಲ್ಲ.... ನಾವು ಕಚೇರಿಗೆ ಹೋರಡೊ ಸಮಯ ಮಗ ಎದ್ದಿದ್ದ ಮಾತಿಲ್ಲ ಕತೆಯಿಲ್ಲ ಹಾಗೆ ಅವನ ತಿಂಡಿ ಊಟದ ವ್ಯವಸ್ಥೆ ಎಲ್ಲ ಮಾಡಿ ಹೊರಟೆವು... ಹೊರಡುವಾಗ ಮಗನಿಗೆ ಬಾಯ್ ಹೇಳಿ ಬೀಗ ಜಡಿದು ಬಂದೆನು.....ಮನೆ ಬಿಟ್ಟು ಕಾರಿನಲ್ಲಿ ಸ್ವಲ್ಪ ದೂರ ಬಂದಮೇಲೆ ನನ್ನ ಪತಿರಾಯರು ನನಗೆ ಈ ವಿಶೇಷ ದಿನದ ಶುಭಾಶಯ ತಿಳಿಸಿ ಮಗ ಇದ್ದ ಎಂದು ಹೇಳಲಿಲ್ಲ ಅವನು ರಾತ್ರಿ ಬೇರೆ ಶುಭಾಶಯ ಹೇಳಕೂಡದು ಎಂದೇಳಿದ್ದನಲ್ಲ ಎಂದು ನಕ್ಕುಬಿಟ್ಟರು..ಹ ಹ ಹಾ..

ಇನ್ನು ಸ್ವಲ್ಪ ದೂರ ಹೋಗಿದ್ದೇವೆ ಫೋನ್ ರಿಂಗ್ ಆಯ್ತು ... ಮನೆ ಎಂದು ತೋರಿಸುತ್ತಿತ್ತು ಓಹ್ ಏನೋ ಮಗರಾಯ ಮಾಡಿದ್ದಾನೆ ನೋಡು ಎಂದು ಹೇಳಿ ಮೊಬೈಲ್ ಕೊಟ್ಟರು ನನ್ನ ಪತಿ.......ನಾನು ಹಲೋ ಎಂದ ಕೂಡಲೇ ಮಗ ಅಮ್ಮ "Happy valentines day!!!" ಎಂದು ಸುಮಧುರ ಧನಿಯಲ್ಲಿ ಬಲು ಪ್ರೀತಿಯಿಂದ ಹೇಳಿದ ನನಗೆ ಗಂಡ ಹೇಳಿದ್ದಕ್ಕಿಂತ ಮಗನ ಶುಭಾಶಯ ಬಹಳ ಕುಶಿ ಕೊಟ್ಟಿತು... ಧನ್ಯವಾದ ಹೇಳಿ... ನಿನಗೂ ಕೂಡ ಕಂದ ಎಂದು ಹೇಳಿದೆ ಅಷ್ಟು ಪ್ರೀತಿಯಿಂದ ಹೇಳಿದ ಮಗನಿಗೆ ನಿರಾಸೆ ಮಾಡಬಾರದಲ್ಲ... ಎಂದು... ಅಪ್ಪನಿಗೂ ಕೂಡು ಎಂದೇಳಿ ಅವರಿಗು ಶುಭಾಶಯ ತಿಳಿಸಿದ... ಆಹಾ...ಹ ಹಹ ... ಇಲ್ಲಿ ನನ್ನ ಮಗನ ಮುಗ್ಧತೆ ಎದ್ದು ಕಾಣುತಿತ್ತು.. ಅವನ ಹೆಸರು ಮೃದುವಚನ್ ...ಹೆಸರಿಗೆ ತಕ್ಕನಾಗಿ ಮೃದುವಾಗಿ ಮುದ ನೀಡಿತು..

ಮಗನಿಗೆ ಈ ದಿನ ಏಕೆ ಆಚರಿಸುತ್ತಾರೆ ಏನು ವಿಶೇಷ ನಾವೆಲ್ಲ ಆಚರಿಸಬೇಕಾ ಏನು ಗೊತ್ತಿಲ್ಲ... ಎಲ್ಲಾ ಟಿವಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ಹೆಚ್ಚು ಬಿತ್ತರವಾಗುದನ್ನೆಲ್ಲಾ ನೋಡೊ ಮಕ್ಕಳು ಎಲ್ಲವನ್ನು ತಿಳಿದುಕೊಳ್ಳುತ್ತಾ ಬಂದಿದ್ದಾರೆ ಎಂದು ನನ್ನವರಿಗೆ ಹೇಳಿದಾಗ....ಏನಾದರಾಗಲಿ ಬಿಡು ನಿನ್ನ ಮಗ ಅವರ ಅಪ್ಪ ಅಮ್ಮ ಇನ್ನು ಪ್ರೇಮಿಗಳ ಹಾಗೆ ಇರಲೆಂದು ಆಶಿಸಿದ್ದಾನೆ ಕುಶಿಯಾಗಿರು ಅಂದರು....

8 comments:

shivu.k said...

ಮನಸು,

ಎಂಥ ಅದೃಷ್ಟವಂತರೂ ರೀ...ನೀವು....ಮಗನಿಂದ ವ್ಯಾಲೆಂಟೈನ್ಸ್ ಡೇ ಹೇಳಿಸಿಕೊಳ್ಳುವ ಅವಕಾಶ !!

Ittigecement said...

ನಿಮ್ಮವರು ಹೇಳಿದ ಹಾಗೆ..
"ಅಪ್ಪ, ಅಮ್ಮ" ಯಾವಾಗಲೂ
ಪ್ರೇಮಿಗಳಾಗಿಯೇ ಇರಿ..

ಇದು ನಮ್ಮ
ಶುಭ ಹಾರಿಕೆ...

ಮಗನ ಮುಗ್ಧತೆ
ಚಂದವಾಗಿ
ಬಿಂಬಿತವಾಗಿದೆ

ಅಭಿನಂದನೆಗಳು..

ಸಾಗರದಾಚೆಯ ಇಂಚರ said...

ತುಂಬಾ ಸುಂದರವಾಗಿ ನಿಮಗೆ ನಿಮ್ಮ ಮಗ ಅಭಿನಂದಿಸಿದ್ದಾನೆ, ಯಾವಾಗಲು ಹೀಗೆಯೇ ಅಭಿನಂದನೆ ಇರಲಿ, ನಮ್ಮ ಅಭಿನಂದನೆಯು ಜೊತೆಗೆ ಇರಲಿ

Anonymous said...

Hey!! BhahaLa chennagide, nimma magana preeti padeda neeve dhanyaru!!!

Prabhuraj Moogi said...

ಇತ್ತೀಚೆಗೆ ಮಕ್ಕಳು ಟೇವೀ ಸಿನೆಮಾ ಅಂತ ನೋಡಿ ಏನೇನೊ ಕಲಿಯುತ್ತಿದ್ದಾರೆ, ನಿಮ್ಮ ಮಗ ಒಳ್ಳೇದನ್ನು ತಿಳಿದುಕೊಂಡಿದ್ದು ಹಾಗೆ ಇರಲಿ, ಜಾಮೂನು ಜಾಹೀರಾತಿನ ಬಗ್ಗೆ ಬರೆದದ್ದು ಸನ್ನಿವೇಶಕ್ಕೆ ತಕ್ಕಂತಿತ್ತು..

ಮನಸು said...

ಶಿವೂ ಸರ್,
ನಿಜವಾಗಿಯು ನಾವು ಅದೃಷ್ಟವಂತರು..

ಪ್ರಕಾಶ್ ಸರ್,
ನೀವು ಹೇಳಿದಹಾಗೆ ನಾವು ಇದ್ದೇವೆ.. ನನ್ನ ಮಗನ ಮುಗ್ಧತೆ ನನಗೆ ಕುಶಿ ತಂದಿದೆ..

ಧನ್ಯವಾದಗಳು...

ಮನಸು said...

ಗುರು...
ಧನ್ಯವಾದಗಳು... ಅವನ ಸುಂದರ ಮಾತು ನಡೆ ನುಡಿ ಎಲ್ಲವು ಕುಶಿ ತರುವುದೆನಗೆ

Anonymous...
ಹೌದು ನಾವೇ ಧನ್ಯರು..

ಧನ್ಯವಾದಗಳು...

ಮನಸು said...

ಪ್ರಭು,

ಹ ಹ ಜಾಮೂನು ಜಾಹೀರಾತು ಸನ್ನಿವೇಶಕ್ಕೆ ನೆನಪಾಗಿತು ಕೂಡ,ಮಾಧ್ಯಮಗಳಿಂದ ಬಹಳ ಬದಲಾವಣೆಗಳನ್ನು ಕಾಣುತ್ತಲಿದ್ದೇವೆ
ಧನ್ಯವಾದಗಳು...