Sunday, April 12, 2009

ಹೊರಾಂಗಣ ವಿಹಾರ..

ದಾಸಜಯಂತಿಯ ನಂತರ ಕನ್ನಡ ಕೂಟದ ವತಿಯಿಂದ ಶುಕ್ರವಾರ ದಿನಾಂಕ ೧೦.೪.೨೦೦೯ ಕುವೈಟ್ ಸಿಟಿಯ ಶರ್ಕ್ ಉದ್ಯಾನವನದಲ್ಲಿ (sharq garden) ವಿಹಾರವನ್ನು ಏರ್ಪಡಿಸಿದ್ದರು... ಕೂಟದ ಎಲ್ಲಾ ಕುಟುಂಬಗಳು ಒಟ್ಟಾಗಿ ಸೇರಿ ಕುಣಿದು ನಲಿದು ಆಟವಾಡಿ ತಮ್ಮ ಸಮಯ ಕಳೆಯಲೆಂಬುದೇ ಈ ವಿಹಾರದ ಉದ್ದೇಶ..ಹಾಗೆಯೆ ನಾವೆಲ್ಲ ಅಪ್ಯಾಯಮಾನವಾಗಿ ಆ ಕುಶಿಯನ್ನು ಅನುಭವಿಸಿ ಬಂದೆವು..
ಶುಭಶುಕ್ರವಾರ ಬೆಳ್ಳಗ್ಗೆ ೭.೩೦ಕ್ಕೆ ಎಲ್ಲ ಕೂಟದ ಸದಸ್ಯರಿಗೆ ನೆಡಿಗೆ ಸ್ಪರ್ಧೆ(walkathon) ಏರ್ಪಡಿಸಿದ್ದರು ಈ ಸ್ಪರ್ಧೆಗೆ ಕೊಟದ ಸದಸ್ಯರು ಅತಿ ಹೆಚ್ಚು ಅಲ್ಲದಿದ್ದರು ಸುಮಾರು ಮಂದಿ ಭಾಗವಹಿಸಿದ್ದರು.... ಈ ನೆಡಿಗೆ ಬರಿ ದೊಡ್ದವರಿಗೆ ಅಲ್ಲದೆ ಚಿಕ್ಕ ಮಕ್ಕಳಿಗು ಏರ್ಪಡಿಸಿದ್ದರು ಆ ಮಕ್ಕಳಲ್ಲಿದ್ದ ಉತ್ಸಾಹ ಹೇಳ ತೀರದು ಎಲ್ಲರು ನಾ ಮುಂದು ತಾ ಮುಂದು ಎಂದು ಅತಿ ಸಂತೋಷದಿ ಭಾಗವಹಿಸಿದರು...ಸುಮಾರು ೮.೩೦ಕ್ಕೆ ಮುಕ್ತಾಯವಾಗುವಷ್ಟರಲ್ಲಿ ಎಲ್ಲರು ನೆಡೆದು ತುಂಬಾ ಸುಸ್ತಾಗಿದ್ದರೆಂದು ಎಲ್ಲರಿಗು ಉಪಹಾರದ ಏರ್ಪಾಟು ಮಾಡಿದ್ದರು...ಎಲ್ಲರು ಉಪಹಾರದ ನಂತರ ಇನ್ನೆನು ಆಟೋಟಗಳನ್ನು ಪ್ರಾರಂಭಿಸಬೇಕಲ್ಲ ಅದಕ್ಕೆಂದೆ ನೇಮಿಸಿರುವ ತಂಡಗಳನ್ನು ಎಲ್ಲರು ಹುಡುಕುವ ಯೋಚನೆಯಲ್ಲಿದ್ದರು ನಮ್ಮಲ್ಲಿ ನೇತ್ರಾವತಿ(ಹಳದಿಬಣ್ಣ), ಕಾವೇರಿ(ನೀಲಿ), ಶರಾವತಿ(ಹಸಿರು), ಹೇಮಾವತಿ(ಕೆಂಪು) ಎಂದು ನಾಲ್ಕು ಗುಂಪುಗಳನ್ನಾಗಿ ಅದಕ್ಕೆ ತಕ್ಕಂತೆ ಬಣ್ಣಗಳನ್ನು ಮಾಡಲಾಗಿದೆ ಇಲ್ಲಿ ಎಲ್ಲ ಮಕ್ಕಳು ಹೆಂಗಸರು, ಗಂಡಸರನ್ನು ಒಂದೊಂದು ಗುಂಪಿಗು ಇಷ್ಟು ಜನರೆಂದು ವಿಂಗಡಿಸಲಾಗಿದೆ.. ಈ ಸಮಯಕ್ಕಾಗಲೇ ಉಳಿದೆಲ್ಲಾ ಕುಟುಂಬಗಳು ಒಬ್ಬೊಬ್ಬರಾಗಿ ಬರಲಾರಂಭಿಸಿದರು, ಎಲ್ಲರು ಅವರವರ ಟೀಮ್ ನಲ್ಲಿ ನಿಂತು ಆಟೋಟ ಕಾರ್ಯಕ್ರಮ ಚಾಲನೆಗೆಂದು ಕಾದು ನಿಂತಿದ್ದರು.. ಟೀಮ್ ಕ್ಯಾಪ್ಟನ್ ಎಲ್ಲರು ಪಂಜು ಹಿಡಿದು ನೆಡೆದು ನಂತರ ಕಾರ್ಯಕಾರಿ ಸಮಿತಿಯವರಿಗೆ ವರ್ಗಾಯಿಸಿದರು ಕಾರ್ಯಕಾರಿ ಸಮಿತಿಯವರು ಕುಟುಂಬ ಸಮೇತರಾಗಿ ಆ ಪಂಜನ್ನು ಹಿಡಿದು ಉದ್ಯಾನವನ್ನು ಒಂದು ಸುತ್ತುವರಿದು ಬಂದು ಜ್ಯೋತಿ ಬೆಳಗಿಸಿದರು...ನಂತರ ಬೆಲೂನ್ ಹಾಗು ಪಾರಿವಾಳಗಳನ್ನು ಆಗಸಕ್ಕೆ ತೇಲಿಬಿಟ್ಟರು.....ಇತ್ತ ಕೂಟದ ಸದಸ್ಯರು ಜೋರಾಗಿ ಚಪ್ಪಾಳೆಯೊಂದಿಗೆ ನಗುವಿನ ಹೊಳೆ ಹರಿಸುತ್ತಾ ಕಾರ್ಯಕ್ರಮಕ್ಕೆ ಜಾಲನೆ ನೀಡಿದರು........ ಇಷ್ಟೆಲ್ಲ ನೆಡೆಯುವವರೆಗು ನೇಸರ ಬಲು ಶಾಂತಿಯಿಂದ ಮೋಡದಲ್ಲಿ ಮನೆಮಾಡಿ ಕುಳಿತಿದ್ದ ನಾವೆಲ್ಲ ಕುಣಿದು ಕುಪ್ಪಳಿಸುವವರೆಗು ನೀ ಹಾಗೆ ಇದ್ದುಬಿಡು ಶಾಂತಿಯಿಂದ ಎಂದು ಹೇಳಿಬಿಟ್ಟೆ ಆದರೆ ಅವನು ಕೇಳಬೇಕಲ್ಲ ಅವನಿಗು ಅವನ ಕೆಲಸ ಮಾಡುವಾಸೆ ಬಿಸಿಲ ತಾಪ ಸ್ವಲ್ಪ ಸ್ವಲ್ಪ ಭುವಿಗೆ ಇಳಿಯಲುಬಿಡುತ್ತಿದ್ದ...ಈ ಕಾರ್ಯಕ್ರಮದ ನಂತರ ಮಕ್ಕಳಿಗೆಂದೇ ಆಟಗಳನ್ನು ಏರ್ಪಡಿಸಿದ್ದರು೧. ೫ ವರ್ಷಕ್ಕಿಂತ ಕಡಿಮೆ ಇರುವಂತ ಮಕ್ಕಳಿಗೆ ದೊಡ್ಡ ಶೊ ಧರಿಸಿ ನೆಡೆಯುವುದು.. (Big Shoe Walk), ಮತ್ತೊಂದು ವಕ್ರ ನೆಡಿಗೆ (Zigzag Walk)೨. ೫ ರಿಂದ ೮ ವರ್ಷದ ಮಕ್ಕಳಿಗೆ ಕೋಲಿ(ಕಡ್ಡಿ)ನೊಂದಿಗೆ ಉಂಗುರ (Pole with Rings) ಹಾಗು ಕುಂಟು ಓಟ (One leg Race)೩. ೮ ರಿಂದ ೧೨ ಮತ್ತು ೧೨ರಿಂದ ೧೮ ವರ್ಷದ ಮಕ್ಕಳಿಗೆ ಓಟ (Relay) ಹಾಗು ರಿಂಗ್(ಉಂಗುರ) ಓಟ (Ring Race). ಎಲ್ಲ ಆಟೋಟಗಳಲ್ಲಿ ಎಲ್ಲ ಮಕ್ಕಳು ಮನಸೋ ಇಚ್ಚೆ ಸಂತೋಷದಿಂದ ಭಾಗವಹಿಸಿ ಕೆಲವು ಮಕ್ಕಳು ಪ್ರಶಸ್ತಿಗೆ ಪಾತ್ರರಾದರು ಇನ್ನು ಕೆಲವು ಮಕ್ಕಳು ಬೇಸರಪಟ್ಟರು ಪ್ರಶಸ್ತಿ ಬರಲಿಲ್ಲವೆಂದು ಆದರು ಅವರೆಲ್ಲ ಪಾಲ್ಗೊಂಡಿದ್ದರಲ್ಲ ಅದೇ ಮುಖ್ಯ...ಈ ಎಲ್ಲ ಆಟಗಳು ಮುಗಿಯುವಷ್ಟರಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದು ಕುಟುಕುತಲಿದ್ದ....ಆದರು ನಮಗೆ ಸಮಾಧಾನವಿರಲಿಲ್ಲ ಭಾಸ್ಕರನು ದಿನವೆಲ್ಲ ಬಂದೇ ಬರುತ್ತಾನೆ ಆದರೆ ನಾವು ಈ ವಿಹಾರಕ್ಕೆ ಬಂದಿರುವುದು ಈ ದಿನ ಮಾತ್ರವಲ್ಲವೇ ದೊಡ್ಡವರು ಸ್ವಲ್ಪ ಆಟೋಟಗಳನ್ನು ಆಡಿಬಿಡೋಣವೆಂಬ ಬಯಕೆ ಇತ್ತು ಅದಕ್ಕೆಂದೆ ಕ್ರೀಡಾಸಮಿತಿ ಮಕ್ಕಳಿಗೆ ಆಟೋಟಗಳು ಇದ್ದಮೇಲೆ ದೊಡ್ಡವರು ಏನು ಮಾಡಬೇಕು ಎಂದು ನಮ್ಮೆಲ್ಲರಿಗು ಆಟಗಳನ್ನು ಏರ್ಪಡಿಸಿದ್ದರು ಖೋ-ಖೋ ಮಹಿಳೆಯರಿಗೆ (ಈ ಆಟ ನಮ್ಮ ಹಳೆಯ ಹಾಗು ರಾಜ್ಯಮಟ್ಟದ ಆಟ) ಹಾಗು ವಾಲಿಬಾಲ್ ಗಂಡಸರಿಗೆಂದು ನಿಶ್ಚಯವಾಗಿತ್ತು. ಕ್ರಿಕೆಟ್ ಎಂಬ ಆಟ ಬಂದು ಹಳೆಯ ನಮ್ಮದೇ ಆದ ಆಟಗಳು ನಶಿಸುವಂತೆ ಮಾಡಿದೆ ಕ್ರಿಕೆಟಿಗೆ ಏನು ಹೇಳುವಂತಿಲ್ಲ ಆಡುವವರು ನಾವುಗಳಲ್ಲವೇ ನಾವುಗಳು ನಮ್ಮ ಆಟಗಳನ್ನು ಮರೆತು ಬೇರೆ ಆಟೋಟಗಳನ್ನು ಪ್ರೀತಿಸಲು ಮುಂದಾಗಿ ನಮ್ಮದನ್ನು ನಶಿಸಿಸುವಂತೆ ಮಾಡಿಬಿಡುತ್ತಲಿದ್ದೇವೆ ಅಲ್ಲವೆ?... ಆದರೆ ನಮ್ಮ ಕೂಟದಲ್ಲಿ ಹಳೆಯದನ್ನು ಮೆಲುಕು ಆಕಲಿಕ್ಕೆಂದು ಈ ಎಲ್ಲಾ ಆಟೋಟಗಳನ್ನು ನೆರೆವೇರಿಸಿದರು... ಖೋ-ಖೋವೇನೋ ಎಲ್ಲಾ ಮಹಿಳೆಯರು ಅತಿ ಪ್ರೀತಿಯಿಂದ ಬಿದ್ದು ಎದ್ದು... ಮಣ್ಣಲ್ಲಿ ಮಿಂದು ಬಂದರು ಅತಿ ಆಸೆಯಿಂದ ಬಾಲ್ಯದಿನಗಳಲ್ಲಿ ಆಡುತ್ತಲಿದ್ದ ಖೋವನ್ನು ನೆನೆದು ಅನುಭವಿಸಿ ಆಡಿದರು...ಈ ಸಮಯಕ್ಕಾಗಲೇ ನಾಲ್ಕು ತಂಡಗಳಲ್ಲಿ ಕಾವೇರಿ ಹಾಗು ನೇತ್ರಾವತಿ ತಂಡಕ್ಕೆ ಹಣಹಣಿ ನೆಡೆದು ಅವರು ಅಂತಿಮ ಸುತ್ತಿಗೆ ನೇತ್ರಾವತಿ ಸಚ್ಚಾಗಿತ್ತು ಇನ್ನೋಂದು ತಂಡ ಶರಾವತಿ ಹಾಗು ಹೇಮಾವತಿ ಇವರಲ್ಲಿ ತೀವ್ರ ಪೈಪೋಟಿ ನೆಡೆದು ಹೇಮಾವತಿ ತಂಡ ಅಂತಿಮ ಸುತ್ತಿಗೆ ಬಂದಿದ್ದರು ಆಗ ತಾನೆ ಆಟವಾಡಿದ್ದ ತಂಡಗಳಿಗೆ ವಿಶ್ರಾಂತಿ ನೀಡುವ ಸಲುವಾಗಿ ಗಂಡಸರ ತಂಡಗಳತ್ತ ವಾಲುವ ಮನಸು ಮಾಡಿದರು ಕ್ರೀಡಾ ಸಮಿತಿ...ವಾಲಿಬಾಲ್ ಆಟವನ್ನು ಎಲ್ಲರು ಸಂತಸದಿ ಹಿರಿಯರು ಕಿರಿಯರು ಎನ್ನದೇ ಇಲ್ಲಿಯು ಸಹ ತಂಡಗಳು ಮನಸೋ ಇಚ್ಚೆ ಕುಣಿದು ನಲಿದರು... ಇಲ್ಲಿ ನೇತ್ರಾವತಿ ಹಾಗು ಹೇಮಾವತಿ ತಂಡಗಳ ಹಣಾಹಣಿಯಲ್ಲಿ ನೇತ್ರಾವತಿಯದೆ ಮೇಲುಗೈ ಹಾಗು ಕಾವೇರಿ ಮತ್ತು ಶರಾವತಿಯವರ ತಂಡದಿಂದ ಶರಾವತಿಯವರದೇ ಮೇಲುಗೈ. ಕೊನೆಯ ಹಾಗು ಅಂತಿಮ ಹಣಾಹಣಿಯಲ್ಲಿ ಶರಾವತಿಯವರ ಮೇಲುಗೈ ಸಾಧಿಸಿ ಮೊದಲ ಸ್ಥಾನಕ್ಕೆ ಪಾತ್ರರಾದರು...ನೇತ್ರಾವತಿ ಎರಡನೇ ಸ್ಥಾನಕ್ಕೆ ಪಾತ್ರರಾದರು..
ಇಷ್ಟೆಲ್ಲ ನೆಡೆಯುವಷ್ಟರಲ್ಲಿ ಹೊಟ್ಟೆಯು ಕರೆದಿತ್ತು ಸೂರ್ಯನು ಬಿಸಿಲ ತಾಪವನ್ನು ಚುರುಗುಟ್ಟಿಸುತ್ತಲಿದ್ದನು ಮಧ್ಯೆ ಮಜ್ಜಿಗೆಯನ್ನು ಕುಡಿದು ಮತ್ತೆ ಖೋ-ಖೋ ಅಂತಿಮ ಹಣಾಹಣಿ ನೋಡಲು ಎಲ್ಲರು ಅಲ್ಲಿ ನೆರೆದಿದ್ದರು ಹೇಮಾವತಿ ತಂಡ ಟಾಸ್ ಗೆದ್ದು ನೇತ್ರಾವತಿಯವರು ಕುಳಿತು ಆಡಲು ಬಿಟ್ಟರು ಅವರು ಮೈದಾನವನ್ನು ಆಯ್ಕೆ ಮಾಡಿದರು ಇಬ್ಬರ ಹಣಾಹಣಿ ಬಲು ಜೋರೆ ನೆಡೆದಿತ್ತು ಎಲ್ಲೋ ಒಲಂಪಿಕ್ಸ್ ಗೆ ಆಡುತ್ತಲಿದ್ದಾರೇನೋ ಎನ್ನುವ ಹಾಗೆ ಎರಡು ಟೀಮಿನ ಆಟಗಾರರು ಬಲು ಶ್ರಮದಿಂದ ಮೈದಾನಕ್ಕೆ ಮೈ ಒಡ್ಡಿ ಬಟ್ಟೆಗೆಲ್ಲ ಮಣ್ಣು ಮುಕ್ಕಿಸಿಕೊಂಡು ಆಡಿದರು ಎನೇಆಗಲಿ ಅವಿಸ್ಮರಣೀಯ ಆಟವೇ ಸರಿ.. ದೇಹ ಭಾರವಾದರು ಮೈಕೈ ನೋವಾದರು ಅದ ಲೆಕ್ಕಿಸದೇ ಎಲ್ಲರು ಆಟದಲ್ಲಿ ಮುಳುಗಿಬಿಟ್ಟಿದ್ದರು ಅಂತೆಯೇ ಪ್ರೋತ್ಸಾಹದ ಚಪ್ಪಾಳೆಗಳು ಹುರಿದುಂಬಿಸುವ ಮಾತುಗಳು ಅತ್ತಕಡೆಯಿಂದ ಕೇಳಿಬರುತ್ತಿದ್ದ ಧ್ವನಿಗಳಲ್ಲಿ ಚಿಣ್ಣರು ದೊಡ್ಡವರು ಕರುನಾಡಿಂದ ಬಂದಿದ್ದ ಅಪ್ಪ ಅಮ್ಮಂದಿರು ಎಲ್ಲರು ಸೇರಿದ್ದರು... ಕೊನೆಗೆ ಅತಿ ಹೋರಾಟದಿ ನೇತ್ರಾವತಿ ತಂಡ ಮೊದಲ ಸ್ಥಾನಕ್ಕೆ ಪಾತ್ರರಾದರು ಹಾಗು ಹೇಮಾವತಿ ತಂಡ ಎರಡನೇ ಸ್ಥಾನಕ್ಕೆಪಾತ್ರರಾದರು..
ಇದರ ನಂತರ ಎಲ್ಲರಿಂದ ಹೋಗಳಿಕೆ ನಂತರ ವನಭೋಜನಕ್ಕೆಂದು ಸಾಲು ಸಾಲಗಿ ನಿಂತೆವು ಎಲ್ಲರು ವೃಕ್ಷರಾಶಿಯಲಿ ಅಲ್ಲೊಂದು ಇಲ್ಲೊಂದು ಕಾಣುವ ಪಕ್ಷಿಗಳು,ಜೊತೆಗೆ ಹುಲ್ಲುಹಾಸಿನ ಮೇಲೆ ಕುಳಿತು ಊಟವನ್ನು ಸವಿದೆವು...ಇಷ್ಟರನಂತರ ಕೇಳಬೇಕೆ ಊಟವಾಯಿತು ನಿದ್ದೆ ಜೋಂಪೆತ್ತುವ ಸಮಯ ಆಗಲೇ ಅತ್ತಕಡೆಯಿಂದ ಬಿಂಗೋ ಆಡುವ ಬನ್ನಿ ಎಂದು ಕೋಗುವ ಕರೆಕೇಳಿ ಎಲ್ಲರು ಹುಲ್ಲಿನ ಮೇಲೆ ಆಸೀನರಾಗಿ ನಮ್ಮಲ್ಲಿದ್ದ ಬಿಂಗೋ ಚೀಟಿ ಹಿಡಿದು ಈಗ ನನ್ನ ಅಂಕಿ ಬರಬಹುದು.....ಬರಬಹುದು........ಎಂದು ಕಾಯುತ್ತ ಯಾರದೋ ಅಂಕಿಗಳಲ್ಲಿ ಮೊದಲ ಐದು ಅಂಕಿ ಆಯ್ತು(quick five), ಮೊದಲನೇ,ಎರಡನೇ,ಮೂರನೇ ಲೈನ್ ಆಯ್ತು(first,second, third line) ಎಂದು ಅವರಿಗೆ ದೊರೆಯಬೇಕಿದ್ದ ಎಲ್ಲ ಬಳುವಳಿ ಕೊಟ್ಟುಬಿಟ್ಟಿದ್ದರು ಇನ್ನೆನು ಪೂರ್ತಿ ಮನೆಯ ಅಂಕಿಗಳಲ್ಲಾದರು ನನ್ಗೆ ಸಿಗುತ್ತೆಂದು ಕಾಯುವಷ್ಟರಲ್ಲಿ ೩,೪ ಜನ ಮುಗಿಬಿದ್ದು ನನಗೆ ಬಂದಿದೆ ಪೂರ್ತಿ ಮನೆಅಂಕಿ(full house) ಹ ಹ ಹ ಹ...ಇರಲಿ ಇಷ್ಟು ಜನರಲ್ಲಿ ಯಾರು ಅದೃಷ್ಟವಂತರೋ ಅವರಿಗೆ ದೊರಕಿದೆ ಅಲ್ಲವೆ...? ಇನ್ನೇನು ಮುಗಿದುಬಿಟ್ಟಿತು ಎನ್ನುವಷ್ಟರಲ್ಲಿ ಕಾಫಿ,ಟೀ ಬಿಸ್ಕೇಟ್ ಬಂದುಬಿಟ್ಟಿತು ಎಲ್ಲರು ಸಂಜೆಸವಿಯಲ್ಲಿ ಕಾಫಿಟೀ ಸವಿಯುತ್ತಾ ಪ್ರಶಸ್ತಿ ಸಮಾರಂಭಕ್ಕೆ ಅಣಿಯಾಗಿ ಕುಳಿತೆವು ಎಲ್ಲಾ ಮಕ್ಕಳ ಪ್ರಶಸ್ತಿ ದೊಡ್ಡವರಿಗೆ ಎಲವನ್ನು ಇತ್ತು ಎಲ್ಲರ ಮನ ತಣಿಸಿಬಿಟ್ಟರು ಕಾರ್ಯಕಾರಿ ಸಮಿತಿಯವರು...ಆಟ, ಊಟ...ಮುಗಿಯಿತು ಈಗ ಮನೆಕಡೆ ಓಟ....
ಚಾಚು ತಪ್ಪದೇ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿ ಸಾಂಘವಾಗಿ ನೇರವೇರಿಸಿದ ಕ್ರೀಡಾ ಸಮಿತಿಗೆ ಹಾಗು ಅವರಿಗೆ ಕೈ ಜೋಡಿಸಿ ಆಟೋಟಾಗಳನ್ನು ನೇರೆವೇರಿಸಿಕೊಟ್ಟ ಹಲವಾರು ಮಂದಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು...
ಮತ್ತೊಂದು ಕೊನೆಯ ಮಾತು ಖೋ-ಖೋ ಆಟವಾಡಿ ಮೈ ಕೈ ತುಂಬಾ ನೋವಾಗಿತ್ತು ಆದರೊ ಮೈಕೈ ನೋವಿಗೆ ಮಾತ್ರೆ ತೆಗೆದುಕೊಂಡರೆ ೧ ಅಥವಾ ಎರಡು ದಿನದಲ್ಲಿ ಎಲ್ಲವೊ ಮಾಯವಾಗುತ್ತೆ ಆದರೆ ಬಾಲ್ಯದ ದಿನ ಮರುಕಳಿಸಿ ನಮ್ಮ ಆಟವನ್ನು ನೆನಪಿಸಿ ನಮಗೆ ಖುಷಿ ನೀಡಿದ ಆ ರಸಘಳಿಗೆ ಮಾತ್ರ ಶಾಶ್ವತವಾಗಿರುತ್ತೆಂದು ಹೇಳಬಯಸುತ್ತೇನೆ........ಎಲ್ಲಾ ಕ್ರೀಡಾ ಮನೋಲ್ಲಾಸಿಗಳಿಗೆ ಹಾಗು ಕ್ರೀಡಾ ಪ್ರಿಯರಿಗೆ ಮನತಣಿಸಿದ ಕ್ರೀಡಾಸಮಿತಿಗೆ ಮತ್ತೊಮ್ಮೆ ಮಗದೊಮ್ಮೆ ಆತ್ಮೀಯವಾಗಿ ವಂದನೆಗಳನ್ನ ಸಲ್ಲಿಸುತ್ತೇವೆ...
ವಂದನೆಗಳು..
ಶುಭದಿನ..
ವಿಹಾರದಲ್ಲಿ ತಣಿದ ಎಲ್ಲರ ಮನಸು..

20 comments:

Guruprasad said...

ತುಂಬ ಚೆನ್ನಾಗಿ ವಿವರಿಸಿದ್ದಿರ ನಿಮ್ಮ ಹೊರಾಂಗಣ ವಿಹಾರವನ್ನು,,, ಹೌದು, ಹೀಗೆ ಎಲ್ಲರೂ ಯಾವಾಗಲಾದರೂ ಒಂದು ಸಾರಿ, ಒಟ್ಟಿಗೆ ಕೂಡಿ ಆಟ ಊಟ, entertainment ನಲ್ಲಿ ಬಾಗವಹಿಸುತ್ತ ಇದ್ದಾರೆ ಎಷ್ಟು ಚೆನ್ನ ಇರುತ್ತೆ ಅಲ್ವ...
ಅಂತು ಎಲ್ಲ ಆಟವನ್ನು ಆದಿ.. ಚೆನ್ನಾಗಿ enjoye ಮಾಡಿದ್ರಿ ಅನ್ನಿ....

Anonymous said...

Hey Nice to know that all kannadiga's had a great time...nice article...keep updating. awaiting for upcoming events information.

Regards
kannadiga..

ravi said...

tumba chennagi baredhidhira,,,, naanu alli irabekithu antha anistha idhe after reading your article....Keep writing about your koota in kuwait

ಮನಸು said...

guru,
howdu olle entertainment namagella....
anonymous..
thnx ..
ravi..
dhanyavadagaLu...

ಶಿವಪ್ರಕಾಶ್ said...

ಮನಸು ಅವರೇ,
ನಿಮ್ಮ ಹೊರಾಂಗಣ ವಿಹಾರವನ್ನು ತುಂಬಾ ಚನ್ನಾಗಿ ಬಣ್ಣಿಸಿದ್ದಿರಿ.
ಈ ಥರ ಒಂದು ಕಾರ್ಯಕ್ರಮವನ್ನು ಆಯೋಜಿಸಿದವರಿಗೆ ನನ್ನ ನಮನಗಳು..

ಧನ್ಯವಾದಗಳು..

ಜಲನಯನ said...

ಮನಸು ಮೇಡಂ,
ನಾನು ಮಿಸ್ ಮಾಡಿದ್ದನ್ನು ನೀವು ಮಿಸ್ ಮಾಡದೇ ಕ್ಯಾಮರಾದಲ್ಲಿ ಸೆರೆಹಿಡಿದು post ಮಾಡಿದ್ದೀರಿ.. ಚನ್ನಾಗಿದೆ ವಿವರಣೆ..sorry...commentry...
ಫೋಟೋ ಕ್ಲಿಕ್ಕಿಸಿದ್ದು ಮಹೇಶ್ ರವರಾ?

Ittigecement said...

ಮನಸು ...

ಬಹಳ ತಡ ಮಾಡಿ ಬಂದೆ...
ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ... ಕ್ಷಮೆ ಇರಲಿ...

ನಾನು ಕತಾರನಲ್ಲಿದ್ದಾಗ ಈ ಥರಹದ ಸಂಘಟನೆಗಳು ಅಲ್ಲಿ ಇಲ್ಲವಾಗಿತ್ತು...
ಹೊರದೇಶದಲ್ಲಿದ್ದಾಗ ಇವೆಲ್ಲ ಬಹಳ ಇಷ್ಟವಾಗುತ್ತದೆ..
ಅಗತ್ಯ ಕೂಡ...

ಚಂದವಾದ ಬರಹ..

ಅಭಿನಂದನೆಗಳು...

Anonymous said...

hi...chennagide...enu ellaru BRU coffee upayogamadkondra ha ha haha
vivarane chennagide..
regards
suja

laxman said...

manasu ...
tumba chennagide nimma horangana viharada vivarane. navu kUda bagavahisidastu santosh aytu. Hige horanadina anubhavagalanna hanchikolta iri

shivu.k said...

ಮನಸು ಮೇಡಮ್,

ಆಟೋಟಗಳ ಬಗ್ಗೆ ನಿಮ್ಮದು ಅದ್ಬುತ ಕಾಮೆಂಟರಿ....ಪ್ರತಿಯೊಂದನ್ನು ಚಾಚು ತಪ್ಪದೇ ವಿವರವಾಗಿ ಅನಾವರಣಗೊಳಿಸಿದ್ದೀರಿ...ಖೊ ಖೋ..ವಾಲಿಬಾಲ್ ..ಬಿಂಗೋ ಇತ್ಯಾದಿಗಳ ವಿವರಣೆ ನಾವು ಅಲ್ಲಿದ್ದಂತೆ ಭಾಷವಾಯಿತು....

ಇದನ್ನು ವ್ಯವಸ್ಥೆಗೊಳಿಸಿದ ಸಮಿತಿಯವರಿಗೂ , ಮತ್ತು ಮಕ್ಕಳಂತೆ ಸಂತೋಷ ಪಟ್ಟ ನಿಮಗೂ ಅಭಿನಂದನೆಗಳು..

ಮನಸು said...

@ ಶಿವಪ್ರಕಾಶ್,
ಧನ್ಯವಾದಗಳು..
@ಜಲಾನಯನ ಸರ್,
ಹ ಹ ಹ ಹ ಕ್ರೀಡೆ ಅಲ್ಲವಾ ಅದಕ್ಕೆ ಕಾಮೆಂಟರಿ ಕೊಟ್ಟೆ ಹ ಹ ಹ ಹೌದು ಮಹೇಶ್ ಕ್ಲಿಕ್ಕಿಸಿದ ಫೋಟೋಗಳು..ಎಲ್ಲವನ್ನು ಮೆಚ್ಚಿದ್ದಕ್ಕೆ ವಂದನೆಗಳು..
@ಪ್ರಕಾಶ್ ಸರ್,
ತೊಂದರೆ ಇಲ್ಲ ತಡವಾದರೂ ಬರುತ್ತೀರಲ್ಲ ಅದೇ ಕುಶಿ... ನಾವು ಬರಗೆಟ್ಟು ಕೂತಿದ್ದೆವು ಯಾವಾಗಲು ಮನೆ ಆಫೀಸ್ ಎಂದು ಸಾಕಾಗಿತ್ತು ಹೊರಾಂಗಣ ವಿಹಾರ ನಮಗೆ ತುಂಬ ಇಷ್ಟವಾಯಿತು...ಎಲ್ಲರು ಕುಶಿ ಪಟ್ಟರು..

ಮನಸು said...

@ಲಕ್ಷ್ಮಣ್ ಸರ್,
ನೀವೆಲ್ಲ ನಮ್ಮ ವಿಹಾರದಲ್ಲಿ ಪಾಲ್ಗೊಂಡಿದ್ದು ನಮಗೂ ಕುಶಿಯೇ... ಖಂಡಿತ ಎಲ್ಲ ಅನುಭವಗಳನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇವೆ...ಹೀಗೆ ನಿಮ್ಮ ಅನಿಸಿಕೆ ತಿಳಿಸಲು ಬರುತ್ತಲೇ ಇರಿ..
ವಂದನೆಗಳು..
@shivu ಸರ್,
ಕಾಮೆಂಟರಿ ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್, ಖೋ-ಖೋ ತುಂಬಾ ಚೆನ್ನಾಗಿತ್ತು ಸರ್ ಎಲ್ಲರಿಗು ಕುಶಿ ನೀಡಿದ ಆಟ.. ಬಿಂಗೋ ಮಜವಾಗಿತ್ತು... ನೀವು ಇದ್ದಿದ್ದರೆ ಇನ್ನು ಕುಶಿ ಪಡುತ್ತಲಿದ್ದಿರಿ ಹಾಗೆ ನಿಮ್ಮ ಕ್ಯಾಮರ ಕಣ್ಣಿಗೂ ಕೆಲಸ ಕೊಡುತ್ತಲಿದ್ದಿರಿ..
ಹೀಗೆ ಬರುತ್ತಲಿರಿ..ವಂದನೆಗಳು

ಸಾಗರದಾಚೆಯ ಇಂಚರ said...

ಮನಸು,
ನಿಮ್ಮ ಹೊರಾಂಗಣ ವಿಹಾರ ಓದಿ ಸಂತಸವಾಯಿತು,.ನಿಮ್ಮ ಕನ್ನಡ ಕೂಟ ಬಹಳ ಆಕ್ಟಿವ್ ಆಗಿದೆ ಅನಿಸುತ್ತದೆ. ನಮ್ಮ ಅಭಿನಂದನೆಗಳು

ಮನಸು said...

@guru
dhanyavadagaLu... kkknalli thumba programs nedeyuta irutte..

ಮಲ್ಲಿಕಾರ್ಜುನ.ಡಿ.ಜಿ. said...

ನೀವು ಬರೆದಿವುದನ್ನು ಓದಿ ಹೊಟ್ಟೆಕಿಚ್ಚಾಯಿತು! ಎಷ್ಟೊಂದು enjoy ಮಾಡುತ್ತೀರಿ. ಇಲ್ಲಿದ್ದು(ಕನ್ನಡನಾಡಲ್ಲಿ) ನಾವು ಅಷ್ಟು enjoy ಮಾಡುವುದೇ ಇಲ್ಲ. ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ. ಒಂದೆರಡು ಫೋಟೋಗಳನ್ನು ಹಾಕಬೇಕಿತ್ತು. ನಿಜಕ್ಕೂ ನಿಮ್ಮಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ.

ಮನಸು said...

ಧನ್ಯವಾದಗಳು ಸರ್,
ಹೌದು ನಾವು ಕರುನಾಡ ಸಿರಿಯನ್ನು ಮರೆಯದಿರಲೆಂದು ಈ ರೀತಿಯ ಕಾರ್ಯಕ್ರಮಗಳು.. ನಮಗೂ ಇಷ್ಟವಾಗಿದೆ ಕೂಡ..

ಧರಿತ್ರಿ said...

ಮಸ್ತ್ ಅಲ್ವಾ..ಹೊರಾಂಗಣ ವಿಹಾರ! ಓದಿ..ನಾನೂ ಭಾಳ ಖುಷಿಪಟ್ಟೆ.
-ಧರಿತ್ರಿ

ಮನಸು said...

ಧರಿತ್ರಿ,
ಹೌದು ಮಸ್ತ್ ಆಗಿತ್ತು.. ನೀವು ಖುಷಿಪಟ್ಟಿದ್ದಕ್ಕೆ ನನಗು ಖುಷಿ.......

Prabhuraj Moogi said...

naavu illiddu kooDa aShTu enjoy maaDalla... alli neevu iShTellaa maaDuttiruvudu kELi khushiyaaytu... "ಮಾತ್ರೆ ತೆಗೆದುಕೊಂಡರೆ ೧ ಅಥವಾ ಎರಡು ದಿನದಲ್ಲಿ ಎಲ್ಲವೊ ಮಾಯವಾಗುತ್ತೆ ಆದರೆ ಬಾಲ್ಯದ ದಿನ ಮರುಕಳಿಸಿ" aMdiddu bahaLa chennaagittu...

ಮನಸು said...

ಪ್ರಭು ಧನ್ಯವಾದಗಳು..
ನಿಜ ನೋವು ದಿನಗಳಲ್ಲಿ ಮಾಸುತ್ತವೆ, ನೆನಪು ಮಾಸುವುದಿಲ್ಲ ಅಲ್ಲವೆ..?