Tuesday, April 28, 2009

ಬಸವಜಯಂತಿ ಆಚರಣೆ ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ..

ದಟ್ಸ್ ಕನ್ನಡ ಹಾಗು ಕೆಂಡ ಸಂಪಿಗೆಯವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು .
http://thatskannada.oneindia.in/nri/article/2009/0429-kuwait-kannadigas-celebrate-basava-jayanti.ಹ್ತ್ಮ್ಲ್
http://www.kendasampige.com/article.php?id=1774
ಕಾಯಕದಲ್ಲೇ ಕೈಲಾಸಕಾಣಬೇಕೆಂದು ಕೊಂಡೆವು, ಆದರೆ ದಿನವೆಲ್ಲಾ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ ಇಂದಾದರು ಕೈಲಾಸದಲ್ಲಿರುವವರನೊಮ್ಮೆ ನೆನೆದು ಅವರ ನುಡಿಮುತ್ತುಗಳನ್ನ ಅವರು ತಿಳಿಸಿದ ಹಾದಿಯನ್ನೊಮ್ಮೆ ನಾವು ಅರಿತು ಪೂಜಿಸೋಣವೆಂದು ಕೆಲವೇ ಕೆಲವು ಕುಟುಂಬಗಳು ಸೇರಿ ಬಸವಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆವು.ದೇವರು ಇದ್ದಾನೋ ಇಲ್ಲವೋ ತಿಳಿಯದು ದೇವರಂತಹ ಮಾನವರು ಇದ್ದೇ ಇದ್ದಾರೆ ಅಂತಹವರನ್ನು ಪೂಜಿಸುವುದರಲ್ಲಿ ಯಾವುದೇ ಕಟ್ಟುಪಾಡುಗಳು ಬೇಕಿಲ್ಲ... ಅಂತೆಯೇ ನೆನ್ನೆ ಬಸವಜಯಂತಿ ಆದ್ದರಿಂದ ನಾವೆಲ್ಲ ಸೇರಿ ಪುಟ್ಟದಾಗಿ ಮನೆಯಲ್ಲೆ ಈ ಕಾರ್ಯಕ್ರಮವನ್ನು ಆಚರಿಸಿದೆವು. ಸಂಜೆ ಸುಮಾರು ೭ ಗಂಟೆಗೆ ಪ್ರಾರಂಭವಾಗಿತ್ತು ಗಂಡಸರು ಹಾಗು ಹೆಂಗಸರಿಂದ ಸುಮಾರು ೨೦ ವಚನ ಗಾಯನ ನೆರೆವೇರಿತು..
ವಚನ ಗಾಯನಕ್ಕೆ ತಕ್ಕಂತೆ ತಾಳ ಮೇಳಗಳು ಸಹ ಸಜ್ಜಾಗಿ ನಿಂತಿದ್ದವು..ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ಗಾಯನಕ್ಕೆ ತಕ್ಕಂತೆ ಸಂಗೀತದ ಹೊಳೆ ಹರಿಸಿದರು...ಬಸವ ಜಯಂತಿ ವಚನ ಸಂಜೆಯಾಗಿ ಮೂಡಿತ್ತು..

ಹಾಗೆ ವಚನ ಗಾಯನ, ಪೂಜೆ ಒಂದೇ ಆದರೆ ಹೇಗೆ ವಚನ ಕಾರರನ್ನು ಮನನ ಮಾಡಲೇಬೇಕಲ್ಲವೇ.. ೧೨ನೇ ಶತಮಾನದ ವಚನಕಾರರು ಹಾಗು ಬಸವಣ್ಣನವರ ಹುಟ್ಟೂರು, ಐಕ್ಯಸ್ಥಳ ಎಲ್ಲದರ ವಿವರಣೆಯನ್ನು ಬಿಂಬಿಸುತ್ತಿವೆ ಈ ಚಿತ್ರ ಲೋಕಗಳು..


ಕೆಲವು ಆಯ್ದ ವಚನಗಳ ಸಾಲುಗಳುಎಲ್ಲರು ವಚನದಲ್ಲಿ ಮಗ್ನರಾಗಿಬಿಟ್ಟಿದ್ದರು ಎಲ್ಲರೂ ವಚನದಲ್ಲಿನ ಅರ್ಥಗಳನ್ನು ಮನದಲ್ಲೇ ಅರ್ಥೈಸಿಕೊಳ್ಳುತ್ತಲಿದ್ದರು...ಅಂತಿಮ ಪೂಜೆ ಶ್ರಿ ಬಸವೇಶ್ವರನಿಗೆ ಸಲ್ಲಿಸುತ್ತಲಿರುವುದು...

ಮಂಗಳಾರತಿ ಸಾಂಘವಾಗಿ ನೆರೆವೇರಿಸಲು ಒಟ್ಟಾಗಿ ನಿಂತ ನಮ್ಮೆಲ್ಲಾ ಸ್ನೇಹಿತರು
ಪೂಜಾವಿಧಿ ವಿಧಾನಗಳು ಸಾಂಘವಾಗಿ ನೆರೆವೇರಿದ ನಂತರ ಪ್ರಸಾದ ಸೇವನೇ ಆಗಲೇಬೇಕಲ್ಲವೆ... ಈ ಪ್ರಸಾದದಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ (ಬಕರಿ) ಅದಕ್ಕೆ ಬೇಕಾದ ಎಣ್ಣಿಗಾಯಿ ಪಲ್ಯ, ಕಾರ ಚಟ್ನಿ ಅದಕ್ಕೆ ಸೆಬ್ಬೆಯಂತೆ ತುಪ್ಪ, ಶೇಂಗಾ ಚಟ್ನಿ ಅದಕ್ಕೆ ಮೊಸರು, ಕಾಳಿನ ಪಲ್ಯ, ಹೋಳಿಗೆ(ಒಬ್ಬಟ್ಟು) ಹೋಳಿಗೆ ಸಾರು ಅನ್ನ, ಮೊಸರನ್ನ ಇನ್ನು ಹಲವು ಬಗೆ ಬಗೆಯ ಪದಾರ್ಥಗಳಿದ್ದವು...ಅವೆಲ್ಲವನ್ನು ಸವಿದು ಮನೆ ತಲುಪಲು ಅತುರಾತುರದ ತಯಾರಿಯಲ್ಲಿದ್ದರು ನಮ್ಮ ಸ್ನೇಹಿತರು ಏಕೆಂದರೆ ಬೆಳ್ಳಂಬೆಳ್ಳಿಗೆ ಎದ್ದು ೭ಗಂಟೆಗೆಲ್ಲ ಕಚೇರಿಗೆ ತಲುಪಬೇಕಲ್ಲ...ಮತ್ತದೆ ಕಾಯಕದಲ್ಲಿ ಕೈಲಾಸ ಕಾಣಬೇಕಲ್ಲ ಹಾಗೆ ಎಲ್ಲರು ಸಂತೋಷದಿ ತೆರಳಿದರು...



ಊರಿಂದ ಬಂದ ಅಪ್ಪ ಅಮ್ಮಂದಿರೆಲ್ಲ ನಮ್ಮ ಆಚರಣೆ ಕಂಡು ಬಹಳ ಖುಷಿಯೊಂದಿಗೆ ನಮ್ಮೆಲ್ಲರಿಗೆ ಆಶೀರ್ವದಿಸಿದರು.
ಈ ಸಮಾರಂಭದ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಈ ಸುಂದರ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟು ಸುಸಂಪನವಾಗಿಸಿದ ಎಲ್ಲರಿಗು ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸುತ್ತಾ... ಅಣ್ಣನವರ ವಚನದೊಂದಿಗೆ ಕೊನೆಕೊಳ್ಳಿಸುತಲಿದ್ದೇನೆ. ಹಾಗು ಶರಣರ ಬರವೆಮಗೆ ಜೀವಾಳವಯ್ಯ!! ಎಂಬಂತೆ ಈ ಪುಟ್ಟ ಮನೆಗೆ ಬಂದು ಹೋಗುತ್ತಿರುವ ಬ್ಲಾಗ್ ಶರಣ ಶರಣೆಯರೆಲ್ಲರಿಗು ನನ್ನ ಧನ್ಯವಾದಗಳು ಹೀಗೆ ಬರುತ್ತಲಿರಿ.. ಹರಸುತ್ತಲಿರಿ...ತಪ್ಪು ಒಪ್ಪುಗಳನ್ನು ತಿದ್ದುತ್ತಲಿರಿ...
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹದಾನಿ ಕೂಡಲಸಂಗಮ ದೇವನ ಪೊಜಿಸಿ ಬದುಕುವೋ
ಕಾಯವ ನಿಶ್ಚಯಿಸುವೆ!
ಎಲ್ಲರಿಗು ಶುಭವಾಗಲಿ...ಶುಭದಿನ...
ಮನಸು

16 comments:

Dr.Gurumurthy Hegde said...

ಮನಸು,
ಬಸವ ಜಯಂತಿಯ ಆಚರಣೆ ಕೇಳಿ ಸಂತಸವಾಯಿತು. ದೇಶ ಬಿಟ್ಟರೂ ಆಚರಣೆ ಬಿಡದ ನಿಮ್ಮ ಮನಸ್ಸನ್ನು ಶ್ಲಾಘಿಸಲೇಬೇಕು, ಅದನ್ನು ನಮ್ಮೊಂದಿಗೆ ಹಂಚಿಕೊಂಡು ನಮ್ಮನ್ನು ಕ್ರತ್ಹಾರ್ಥರನ್ನಾಗಿಸಿದ್ದಿರಿ.
ಇಂಥಹ ಆಚರಣೆಗಳಿಂದ ನಮ್ಮಲ್ಲಿನ ಸಂಭಂದಗಳು ಭದ್ರಗೊಳ್ಳುತ್ತವೆ. ನಮಗೆ ಅಭಿನಂದನೆಗಳು. ಒಳ್ಳೆಯ ನಿರೂಪಣೆ ಕೂಡಾ.

Prabhuraj Moogi said...

"ಉತ್ತರ ಕರ್ನಾಟಕದ ಜೋಳದ ರೊಟ್ಟಿ (ಬಕರಿ) ಅದಕ್ಕೆ ಬೇಕಾದ ಎಣ್ಣಿಗಾಯಿ ಪಲ್ಯ, ಕಾರ ಚಟ್ನಿ ಅದಕ್ಕೆ ಸೆಬ್ಬೆಯಂತೆ ತುಪ್ಪ, ಶೇಂಗಾ ಚಟ್ನಿ ಅದಕ್ಕೆ ಮೊಸರು, ಕಾಳಿನ ಪಲ್ಯ, ಹೋಳಿಗೆ(ಒಬ್ಬಟ್ಟು) ಹೋಳಿಗೆ ಸಾರು ಅನ್ನ, ಮೊಸರನ್ನ" abbaa ee linu Odi baayalli neerooruttide... roTTi taTTUvavaru alli nimage elli sikkaru... tamagoo basava jayaMtiya shubhaashaygaLu...

ಶಿವಪ್ರಕಾಶ್ said...

ಮನಸು ಅವರೇ,
ಬಸವ ಜಯಂತಿಯ ಶುಭಾಶಯಗಳು...

ನಮ್ಮ ಮನೆಯಲ್ಲಿ ದೇವರ ಫೋಟೋಗಳ ಸಂಖೆ ಹೆಚ್ಚು,
ಅದರಲ್ಲಿ ಬಸವಣ್ಣನವರ ಫೋಟೋ ಕೂಡ ಒಂದು.
ದಿನಾಲೂ ನನ್ನ ಅಮ್ಮನ ಜೊತೆ ಕಚ್ಚಾಡುತ್ತಿರುತ್ತೇನೆ.
ಯಾಕಂದ್ರೆ, ನಾನು ಮನೇಲಿ ಇದ್ರೆ, ಪೂಜೆ ನನ್ನದೇ.
ತುಂಬಾ ಸಮಯ ಹಿಡಿಯುತ್ತೆ ಎಲ್ಲ ಫೋಟೋಗಳಿಗೆ ಪೂಜೆ ಮಾಡೋಕೆ... :(

ನಮಗೆ ಬಸವ ಜಯಂತಿಯ ದಿನ ತುಂಬಾ ವಿಶೇಷವಾದದ್ದು.
ಈಗಲೂ ಬಸವಣ್ಣನವರು ನಮ್ಮ ಮನದ ಹಾಗು ಮನೆಯ ದೇಗುಲದಲ್ಲಿದೆ.

ಬಸವಣ್ಣನವರ ವಚನಗಳು ನನಗೆ ತುಂಬಾ ಇಷ್ಟ ಅದರಲ್ಲೂ ಕೆಳಗಿನ ವಚನಗಳು ಇನ್ನು ಇಷ್ಟ....
"ಉಳ್ಳವರು ಶಿವಾಲಯ ಮಾಡುವರಯ್ಯ, ನಾನೇನ ಮಾಡಲಿ ಬಡವನಯ್ಯ",
"ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ",
"ಲೋಕದ ಡೊಂಕ ನೀವೇಕೆ ತಿದ್ದುವಿರಿ?",
"ಕಲ್ಲನಾಗರ ಕಂಡರೆ ಹಾಲನೆರೆ ಎಂಬರು; ದಿಟನಾಗರ ಕಂಡರೆ ಕೊಲ್ಲು ಕೊಲ್ಲು ಎಂಬರಯ್ಯ!"

Guruprasad said...

ಮನಸು,,
ಬೇರೆ ಕಡೆ ಇದ್ದರು ಇಷ್ಟು ಚೆನ್ನಾಗಿ ಎಲ್ಲ ಕೂಡಿ ಆಚರಣೆ ಮಾಡುತ್ತಿರಲ್ಲ,, ನಿಜವಾಗಲು ಅಭಿನಂದಿಸಬೇಕು ... ಇಲ್ಲಿ ಇದ್ಗೊಂಡೆ ನಾವು ಕೂಡ ಇಷ್ಟು ಚೆನ್ನಾಗಿ ಆಚರಣೆ ಮಾಡೋಲ್ವಲ್ರಿ....... ಕಾಯಕವೇ ಕೈಲಾಸ ಅಂತ ಹೇಳಿದವರಿಗೆ ,,, ನಮ್ಮ ಕಾಯಕ ಬಿಟ್ಟು ನೆನಪಿಸಿಕೊಳ್ಳಕ್ಕು ಕಷ್ಟ.....
ತುಂಬ ಖುಷಿ ಹಾಗು ಸಂತೋಷ ಆಯಿತು,, ನಿಮ್ಮ ಬಸವ ಜಯಂತಿಯ ವಚನ ಪುರಾಣ... ಪಠಣ ಓದಿ, ನೋಡಿ......ಹಾಗೆ ಉತ್ತರ ಕರ್ನಾಟಕದ ತಿನಿಸುಗಳ ಬಗ್ಗೆನು....ಕೇಳಿ
ಹೀಗೆ ನಮ್ಮ ಪ್ರತಿ ಹಬ್ಬ ದಲ್ಲೂ ದೂರದಲ್ಲಿ ಇರುವ ನೀವೆಲ್ಲರೂ ಒಂದು ಗೂಡಿ, ಸಂತೋಷದಿಂದ ಆಚರಿಸುವ ಅವಕಾಶ ಸದಾ ಸಿಗಲಿ........
ಗುರು

ಜಲನಯನ said...

ಬಸವಣ್ಣನವರ ತತ್ವ ಸಿದ್ಧಾಂತಗಳು ಮತಾಂಧ, ಕರ್ಮಹೀನ ಮತ್ತು ಸಂಕುಚಿತ ಮನೋಭಾವಗಳಿಗೆ
ಬಹು ಸೂಕ್ತ ಸಕಾಲಿಕ ಮದ್ದು...
ಪಾಲಿಸಿದರೆ
ಇತರ ಧರ್ಮಿಗಳೊಂದಿಗೆ ಸಹಬಾಳ್ವೆ ಮತ್ತು ಸಹ್ಯಾಗುಣ ಬೆಳೆಯುತ್ತೆ
ಆಲಿಸಿದರೆ
ಇದ್ದಲ್ಲೇ ಕೊಚ್ಚೆಹುಳುವಿನಂತೆ ಅರ್ಥಹೀನ ಬದುಕ ಹೇಗೋ ಕಳೆಯುತ್ತೇವೆ
ಕೇಳಿಯೂ ತಿಳಿದೂ ಗಾಳಿಗೆ ತೂರಿದರೆ

ಮನಸುರವರೇ, ನನಗೆ ತಿಳಿದಿರಲಿಲ್ಲ ಹೀಗೂ ನೀವು ಆಚರಿಸುತ್ತೀರೆಂದು
ಎಲ್ಲ ಸೇರಿ, ವಾಚಿಸಿ, ಹಾಡಿ.....ಪರಾಕ್..ಬಹು ಪರಾಕ್

ಮನಸು said...

ಗುರುಮೂರ್ತಿ
ನಿಮ್ಮಗೆ ನಮ್ಮ ಧನ್ಯವಾದಗಳು..ಎಲ್ಲಿದ್ದರೇನು ನಾವು ನಮ್ಮದನ್ನು ಬಿಡಲಾಗುತ್ತೆ ಹೇಳಿ.. ನೀವು ಹೇಳಿದ್ದು ನಿಜ ಆಚರಣೆಗಳಿಂದ ಸಂಬಂಧಗಳು ಭದ್ರವಾಗುತ್ತವೆ..ಹೀಗೆ ಬರುತ್ತಲಿರಿ.

ಪ್ರಭು
ನಮಸ್ಕಾರ, ಬಾಯಲ್ಲಿ ನೀರು ಬಂತೆ ಹ ಹ ಹ ... ಇಲ್ಲಿ ಬಕರಿ ಮಾಡೋರು ಬಾಳ ಮಂದಿ ಅದಾರಿ.. ಛಲೋ ಮಾಡತಾರಿ... ಆದರೆ ಈ ಸಮಾರಂಭಕ್ಕೆ ನಾವುಗಳಾರು ಬಕರಿ ತಯಾರಿಸಿಲ್ಲ ಊರಿನಿಂದ ಮೊನ್ನೆಯಷ್ಟೆ ಬರುವರರಿದ್ದ ಸ್ನೇಹಿತರಿಗೆ ವಹಿಸಿದ್ದರು ಅವರು ಬಹಳ ರೊಟ್ಟಿಗಳನ್ನು ತಂದಿದ್ದರು..ಹಾಗೆ ಬಹಳಷ್ಟು ಜನ ಸವಿದರು ಹ ಹ ಹ...
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..

ಮನಸು said...

ಶಿವಪ್ರಕಾಶ್,
ನೀವು ಹೇಳಿದ್ದು ಕೇಳಿ ಬಹಳ ಖುಷಿ ಆಯ್ತು, ಪೂಜೆಗೆಂದು ಕುಳಿತರೆ ಬಹಳ ಸಮಯ ತೆಗೆದುಕೊಳ್ಳುತ್ತದೆ.... ನಿಮಗೆ ಹೇಗೆ ವಿಶೇಷವೊ ನಮಗೂ ಕೂಡ ಹಾಗೆ ವಿಶೇಷ ಬಸವಜಯಂತಿ.. ಬಸವಣ್ಣನವರ ಒಂದೊಂದು ನುಡಿಯು ಎಲ್ಲರ ಮನ ಹಾಗು ಮನೆ ಮನೆಯಲ್ಲಿ ತುಂಬಿದ್ದರೆ ದೇಶ ಸುಭೀಕ್ಷವಾಗಿರುತ್ತದೆ....ಬೆಂಗಳೂರಿನಲ್ಲಿ ನನ್ನ ಅಣ್ಣ ಒಬ್ಬರು ವಚನ ಸಂಜೆ ಎಂದು ಏರ್ಪಡಿಸುತ್ತಾರೆ ತಿಂಗಳಿಗೊಬ್ಬರ ಮನೆಯಲ್ಲಿ ಎಲ್ಲರೊ ಕೂಡಿ ವಚನಗಾಯನ ನೆಡೆಸುತ್ತಾರೆ ತುಂಬಾ ಚೆನ್ನಾಗಿರುತ್ತೆ ಕೂಡ.
ನಿಮ್ಮ ಇಷ್ಟದ ವಚನ ನನ್ನಗೂ ಕೂಡ ಅತಿ ಇಷ್ಟವಾದದ್ದು ನೆನ್ನೆ ನಮ್ಮ ವಚನಗಳಲ್ಲಿ ಇದೂ ಕೂಡ ಸೇರಿತ್ತು..
ನಿಮಗೆ ನನ್ನ ಧನ್ಯವಾದಗಳು ನಿಮ್ಮ ಅನಿಸಿಕೆ ನಿಮ್ಮ ಅನುಭವ ಎಲ್ಲವನ್ನು ಹಂಚಿಕೊಂಡಿರಲ್ಲ ಬಹಳ ಖುಷಿಯಾಯಿತು.

ಶಿವಪ್ರಕಾಶ್ said...

your article published in kendasampige.

here is the link...

http://www.kendasampige.com/article.php?id=1774

congratulations...

ಮನಸು said...

ಗುರು,
ಎಲ್ಲೆ ಇದ್ದರೇನು ನಾವು ನಮ್ಮ ಆಚರಣೆ ಬದಲಾಗುತ್ತ... ನಮ್ಮ ಸಂಸ್ಕೃತಿ ನಾವು ಉಳಿಸಲಿಲ್ಲವೆಂದರೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವುದೆಂತು.. ನಿಮ್ಮ ಹೊಗಳಿಕೆಯ ಮಾತು ಮುಂದಿನ ಹೆಚ್ಚು ಹಲವು ಕಾರ್ಯಕ್ರಮಗಳ ಆಚರಣೆಗೆ ಸ್ಪೂರ್ತಿ ನೀಡುತ್ತದೆಂದು ಭಾವಿಸುತ್ತೇನೆ. ಧನ್ಯವಾದಗಳು.
ಜಲನಯನ..
ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಎಲ್ಲವನ್ನು ಪ್ರೀತಿಸಬೇಕು ಎಲ್ಲವನ್ನು ಪಾಲಿಸುವತ್ತ ವಾಲಬೇಕು... ಆಗಲೇ ಜೀವನ ಸುಸಂಪನವಾಗುತ್ತದೆ. ನಿಮ್ಮ ಶುಭನುಡಿಗೆ ತುಂಬು ಹೃದಯದ ಧನ್ಯವಾದಗಳು.

sunaath said...

ಮನಸು,
ನಿಮ್ಮದು ಪುಟ್ಟಮನೆ ಎಂದು ಬರೆದಿದ್ದೀರಲ್ಲ?
ಯಾವ ಮನೆಯಲ್ಲಿ ಶರಣದಾಸೋಹವಾಗುವದೊ ಅದು ‘ಮಹಾಮನೆ’!

sharana said...

manasu,

bahala chennagi aacharane mathu vivarane maadidhira....kaayakave kailasa

ಮನಸು said...

ಶಿವಪ್ರಕಾಶ್,
ಧನ್ಯವಾದಗಳು
ಸುನಾಥ್ ಸರ್,
ನೀವು ಹೇಳಿದ್ದು ನಿಜ, ಮಹಾಮನೆಯೇಸರಿ... ಧನ್ಯವಾದಗಳು
ಶರಣ
ಧನ್ಯವಾದಗಳು ನಿಮ್ಮ ಅನಿಸಿಕೆಗೆ..ಹೀಗೆ ಬರುತ್ತಲಿರಿ

ಧರಿತ್ರಿ said...

ಮನಸ್ಸು ...
ತಡವಾಗಿ ಬಸವಜಯಂತಿಯ ಶುಬಾಶಯಗಳನ್ನು ಹೇಳ್ತಾ ಇದ್ದೀನಿ. ಬಸವ ಜಯಂತಿಯ ಸಂಭ್ರಮವನ್ನು ನೀವು ಹಂಚಿಕೊಂಡಿರೋದನ್ನು ಓದುತ್ತಾ ಹೋದಂತೆ ನಮ್ಮನ್ನು ಯಾಕೆ ಕರೆದಿಲ್ಲ?! ಅಂತ ಸ್ವಲ್ಪ ಸಿಟ್ ಬಂತು ನಂಗೆ.
-ಧರಿತ್ರಿ

shivu.k said...

ಮನಸು ಮೇಡಮ್,

ಬಸವ ಜಯಂತಿ ಆಚರಣೆ ವಿಚಾರ ತಿಳಿದು ಖುಷಿಯಾಯಿತು..ಅಲ್ಲಿ ನಿಮ್ಮ ಕನ್ನಡ ಪ್ರೇಮ ಮತ್ತು ಇತರೆಡೆಗಿನ ಆಸಕ್ತಿ ಕಂಡು ನನಗೆ ಖುಷಿಯಾಯಿತು.... ಪೋಟೋಗಳಲ್ಲಿ ಮತ್ತೆ ನನಗೆ ಕೆಲವೊಂದು ಭೂಪಟಗಳು ಕಾಣಿಸ್ತಿವೆಯಲ್ಲಾ...!

ಮನಸು said...

ಧರಿತ್ರಿ,
ಕ್ಷಮೆ ಇರಲಿ ನಾನು ಕೂಡ ತಡವಾಗಿ ನಿಮಗೆ ಉತ್ತರಿಸುತ್ತಲಿದ್ದೇನೆ.... ನಿಮಗೆ ಆಹ್ವಾನವಿತ್ತೆ ಸ್ವಾಗತಿಸಬೇಕೆ ನಿಮ್ಮ ಮನೆ ನಿಮ್ಗೆ ಎಂದೆಂದೊ ಸ್ವಾಗತ....ಬನ್ನಿ ಕುವೈತ್ ಗೆ ಒಮ್ಮೆ ನಿಮಗೂ ತಿಳಿಯುತ್ತೆ ಇಲ್ಲಿನ ವಿಚಾರಗಳೆಲ್ಲವೊ... ಹೀಗೆ ತಡವಾಗಿ ಬರದಿರಿ ಬೇಗ ಬಂದು ನಮ್ಮೊಂದಿಗೆ ಅನಿಸಿಕೆ ಹಂಚಿಕೊಳ್ಳಿ... ಧನ್ಯವಾದಗಳು
ಶಿವು ಸರ್,
ನಮ್ಮೊರ ನೆನೆಯಲು ಹಾಗು ನಮ್ಮವರನ್ನೇಲ್ಲ ಒಟ್ಟುಗೂಡಿಸಲು, ನಮ್ಮಕ್ಕಳಿಗೆ ನಮ್ಮ ಸಂಸ್ಕೃತಿ ತಿಳಿಹೇಳಲು ಇದು ಒಂದೇ ನಮಗಿರೊ ದಾರಿ...ಅದನ್ನು ನಾವು ಮಾಡುತ್ತಲಿದ್ದೇವೆ ಅಷ್ಟೆ... ನಿಮ್ಗೆ ಭೊಪಟ ಖಂಡಿತ ಕಾಣುತ್ತೆ ಬೇಜಾನ್ ಸಿಗುತ್ತೆ ಯಾಕೆ ಗೊತ್ತ ಇಲ್ಲಿಗೆ ಬಂದವರಿಗೆಲ್ಲಾ ಭೂಪಟವಾಗುತ್ತೆ ಇಲ್ಲವೆಂದರೆ ಬಿಳಿಕೂದಲು ಬರುತ್ತೆ...ಹ ಹ ಹ ಹ ನಿಮ್ಮ ಕ್ಯಾಮಾರಾಗೆ ಒಳ್ಳೊಳ್ಳೆ ಭೂಪಟ ಸಿಗುತ್ತೆ ನೀವು ಒಮ್ಮೆ ಬನ್ನಿ... ಹ ಹ ಹ
ಧನ್ಯವಾದಗಳು ನಿಮ್ಮ ಕೆಲಸದ ಒತ್ತಡದಲ್ಲೊ ನಮ್ಮೊಂದೆ ನಿಮ್ಮ ಅನಿಸಿಕೆ ಹಂಚಿಕೊಡಿರಲ್ಲ ನನಗೆ ಬಹಳ ಖುಷಿ...
ವಂದನೆಗಳು

VSNA Blog said...

Suguna Avare,
Sharanu.

It is a great find on the blogs about your contributions to Veerashaivism / subtle vibes of your inner selves. You are a true asset for so many watching from across the world.

The punch line from "ThatsKannada.com"....."Nammoora Nenapalli Dinagalevaa chinte".....it is so touching. You touched so many NRIs true 'na ghar ka, na ghaat ka' situation in a very subtle way. Kudos to you.

Nimmava,
Nagesh Tavaragerimath
Cerritos, CA, US