Wednesday, August 12, 2009

ನೆನಪಿದೆಯಾ

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ
ಅಥವಾ ಮರೆತೇಬಿಟ್ಟೆಯಾ ..?

ನೇಸರ ಉದಯವಾಗೋ ವೇಳೆ
ಪ್ರೀತಿ ಸಂದೇಶ ನಿನ್ನೆಡೆ ಒಯ್ದ
ನಿನ್ನ ಮೊಗದಿ ನಸುನಗೆ ಮೂಡಿಸಿದ
ಆ ಸ್ನೇಹಸಿರಿಯ ಮರೆತೇಬಿಟ್ಟೆಯಾ..?

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ...

ಸೂರ್ಯ ಹುಟ್ಟಿ ಚಂದಿರನಿರುವವರೆಗೆ
ನಿನ್ನ ಮೌನದಿ ಮಾತಿನ ಸಿರಿ ಬೆರೆಸಿ
ಕಾಡಿ-ಬೇಡುತ್ತಲಿದ್ದಳು ದಿನವೆಲ್ಲಾ
ಆ ಮುದ್ದುಮೊಗವ ಮರೆತೇಬಿಟ್ಟೆಯಾ..?

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ...

ಮರುಭೂಮಿಯಾದ ಜೀವಕೆ
ಪ್ರೀತಿಹರಸಿ ನಗೆಯ ಚಲ್ಲಿ
ಬೆಳ್ಳಿಬೆಳಕು ಮೂಡಿಸಿದಾಕೆ
ಆ ಪ್ರೀತಿ ಹೃದಯ ಮರೆತೇಬಿಟ್ಟೆಯಾ..?

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ...

ಭಾವುಕ ಜೀವನದ ಹಾದಿಯಡಿ
ಭಾವನೆಗೆ ಮಿಡಿದು ಸ್ಪಂದಿಸುವ
ಎಲ್ಲರ ತನ್ನತ್ತ ಸೆಳೆವ ಹೆಣ್ಣು
ಆ ಹೆಣ್ಣ ಕಣ್ಣು ಮರೆತೇಬಿಟ್ಟೆಯಾ..?

ನೆನಪಿದೆಯೆ ಗೆಳಯ... ನನ್ನ ನೆನಪಿದೆಯಾ...?

10 comments:

ಸುಧೇಶ್ ಶೆಟ್ಟಿ said...

chennagide kavana manasu avre...

jeevanadalli betiyaaguva eshto janaralli kelavaru maathra namma manasinaaladalli ulidu biduththaare... kelavaru ondashtu samaya jothegiddu nanthara sulive illadanthe namma jeevanadinda eddu hogibiduththaare... avarigella nimma kavanadalli iruvanthe "nenapideye..." endu kelabeku ....

Guruprasad said...

ನಿಜವಾಗಲು ನೆನಪಿದೆ .? ನನ್ನ ಗೆಳತಿಯ ಕಣ್ಣು ನೆನಪಿದೆ.......ಆದರೆ .....ಬಿಡಿ ಅದು ನನ್ನ ಕತೆ...
ವಾಹ್,,, ಎಷ್ಟು ಚೆನ್ನಾಗಿ ಇದೆ ಮನಸು....ಒಳ್ಳೆ ಭಾವನೆಗಳ ಕವನ...

Rajesh Manjunath - ರಾಜೇಶ್ ಮಂಜುನಾಥ್ said...

ಮನಸು ಮೇಡಂ,

ಮರೆತಂತೆ ಕುಳಿತವರನ್ನು ಮೆಲ್ಲನೆ ತಟ್ಟಿ ಎಚ್ಚರಿಸುವಂತಿದೆ ಕವನ. ಒಳ್ಳೆಯ ಕವನ, ಮತ್ತು ಮಧುರವಾಗಿದೆ ಭಾವಾಭಿವ್ಯಕ್ತಿ.

ಮನಸು said...

ಧನ್ಯವಾದಗಳು ಸುಧೇಶ್,
ನಿಮ್ಮ ಮಾತು ನಿಜ, ಆದರೆ ಒಳ್ಳೆ ಸ್ನೇಹಿತರನ್ನು ಎಂದು ಮರೆಯಬಾರದು...
ಸದಾ ಬರುತ್ತಿರಿ...
ವಂದನೆಗಳು

ಮನಸು said...

ಧನ್ಯವಾದಗಳು ಗುರು,
ನಿಮ್ಮ ಆ ಹುಡುಗಿಯ ಕಣ್ಣು ಮರೆಯಬೇಡಿ ಹ ಹ ಹ ... ಒಳ್ಳೆ ಸ್ನೇಹಿ ಎಂದೆನಿಸಿದರೆ ಬಿಡಬೇಡಿ.. ಸದಾ ಸ್ನೇಹಕೆ ಸ್ಪಂದಿಸಿ...
ಸದಾ ಬರುತ್ತಿರಿ...
ವಂದನೆಗಳು

ಮನಸು said...

ಧನ್ಯವಾದಗಳು ರಾಜೇಶ್,
ಮರೆತವರನ್ನು ಎಚ್ಚರಿಸಬೇಕಲ್ಲವೇ.. ಇಲ್ಲವಾದರೆ ಮರತೇಬಿಡುತ್ತಾರೆ ಹ ಹ ಹ
ನಿಮ್ಮ ಅನಿಸಿಕೆಗಳು ಸದಾ ನಮ್ಮೊಂದಿಗಿರಲಿ...
ವಂದನೆಗಳು

ಸಾಗರದಾಚೆಯ ಇಂಚರ said...

ಮನಸು,

ತುಂಬಾ ಒಳ್ಳೆಯ ಕವನ, ನಿಮ್ಮ ಗೆಳೆಯ ನಿಮ್ಮನ್ನು ಮರೆತಿಲ್ಲ ಚಿಂತಿಸಬೇಡಿ, ಶಬ್ದ ಜೋಡಣೆ ತುಂಬಾ ಚೆನ್ನಾಗಿದೆ, ನಿಮ್ಮ ಪರೀಕ್ಷೆ ಹೇಗಾಯಿತು

Prabhuraj Moogi said...

ಬ್ಲಾಗ ಮರೆತೇಬಿಟ್ಟಿರೇನೋ ಅನ್ನೊವಷ್ಟರಲ್ಲಿ ಮತ್ತೆ ಬರೆದಿದ್ದೀರಿ, ಗೆಳತಿಯ ಕಣ್ಣು ಯಾವುದೂ ನೆನಪಿಲ್ಲವಾದರೂ, ಬಸ್ಸಿನಲ್ಲಿ ಒಮ್ಮೆ ನನ್ನ ಕಣ್ಣಿಗೆ ಕಂಡ ಆ ಕಾಡಿಗೆಯಿಲ್ಲದೆಯೂ ಕಂಗೊಳಿಸುತ್ತಿದ್ದ ಕಣ್ಣು ಇನ್ನೂ ಕಾಡುತ್ತಿರುತ್ತದೆ!
ಕವನ ಚೆನ್ನಾಗಿದೆ, ನಿಮ್ಮ ಬೆಳ್ಳಿ ಬಟ್ಟಲು, ರೆಕ್ಕೆ ಕಣ್ಣಿನ ವರ್ಣನೆ(ಹಿಂದೊಮ್ಮೆ ಕವನದಲ್ಲಿತ್ತು) ಮತ್ತೆ ನೆನಪಾಯಿತು...

ಮನಸು said...

ಗುರು,
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ಮರೆಯೋದು ಬೇಡವೆಂದೆ ಈ ಕವನ ಹ ಹ ಹ ... ಪರೀಕ್ಷೆ ಎಲ್ಲವು ಚೆನ್ನಾಗಿ ಆಗಿದೆ.
ವಂದನೆಗಳು
ಪ್ರಭು,
ಹೇಗೆ ಮರೆಯೋದು ಬ್ಲಾಗ್ ನನ್ನ ಬಿಡುವುದಿಲ್ಲ ಹ ಹ ಹ ಅದು ಅಗಾಗ ಕೇಳುತ್ತೆ ನೆನಪಿದೆಯೆ...ನನ್ನ ನೆನಪಿದೆಯೆ ಅಂತ ಹ ಹ ...ಎಂದೋ ನೋಡಿದ ಆ ಕಣ್ಣ ಮರೆತಿಲ್ಲವಲ್ಲ ಹ ಹ ಹ ಒಳ್ಳೆಯದು ಆ ನೆನಪಿನಲ್ಲೇ ಇರಿ ...
ಧನ್ಯವಾದಗಳು ನಿಮ್ಮ ಅನಿಸಿಕೆಗೆ ಹೀಗೆ ಬರುತ್ತಲಿರಿ... ನನ್ನ ಬ್ಲಾಗ್ನ ಮರೆಯದಿರಿ ....
ವಂದನೆಗಳು

Veena DhanuGowda said...

Hello manasu,

kavithe chennagide :)