Monday, August 31, 2009

ಮುನಿಸು ತರವೇ

ಮುನಿಸು ತರವೇ ಗೆಳತಿ ನಿನಗೆ
ನನ್ನ ಮೇಲೆ ಮುನಿಸು ತರವೇ..?

ಮುಗಿಲ ಮಳೆಯ ಭುವಿಗೆ ನೀಡಿ
ಹಚ್ಚ ಹಸಿರು ಜೊತೆಜೊತೆ ಗೂಡಿ
ಜೀವಿಗೆ ಹುಸಿರ ನೀಡೋ ಜೀವನಾಡಿ
ಅದುವೇ ನಮ್ಮ ನಿಸರ್ಗ...!!!!
ಗೆಳತಿ ನೀ ನನ್ನ ನಿಸರ್ಗ ಅಲ್ಲವೇ ..?

ನಿಸರ್ಗದಂತೆ ನಿನ್ನ ಸ್ನೇಹದ ಕುಡಿ
ಬೆಳಸಿದೆ ಅಂದು ಇಂದು ನನ್ನೊಡಗೂಡಿ
ನಿನ್ನ ಸ್ನೇಹಕೆ ಪ್ರೇಮವೇ ಕನ್ನಡಿ
ಪ್ರೇಮಸುಧೆ ನನ್ನಡೆಗೆ ನೀಡಿ
ಹೊರಟಿರುವೆಯಲ್ಲೇ ..?

ನಿನ್ನ ಸ್ನೇಹದಿ ಯಾವ ಪರಿಧಿ ಇಲ್ಲ
ನಿನ್ನ ತೊರೆಯುವ ಮನಸು ನನಗಿಲ್ಲ
ಏಕೆ ನಿನಗೆ ತೊರೆವ ಮನಸು ಬಂದಿದೆಯಲ್ಲ
ಮೌನ ಮುಸುಕಿ ಮುನಿಸು ಮೂಡಿದೆಯಲ್ಲ
ಇದು ನಿನಗೆ ತರವೇ..?

ಮುನಿವ ಮನಕೆ ನನ್ನದೊಂದು ಬೇಡಿಕೆ
ನನ್ನದೇನೆ ತಪ್ಪಿದ್ದರೂ ಕ್ಷಮಿಸೆಂಬ ಕೋರಿಕೆ
ನಿನ್ನೊಟ್ಟಿಗೆ ನೆಡೆದ ಮಾತಲ್ಲೇ ಹಿತವಿದೆ
ಅದು ಕೊನೆವರೆಗೂ ಇರಲೆಂಬ ಮನಸಿದೆ
ನಿನ್ನ ಬಿಡೋ ಮನಸಿಲ್ಲವೇ..?

ಸ್ನೇಹಿ ನಿಸರ್ಗ!! ನೀ ನೀಡು ಸ್ನೇಹ ಸ್ವರ್ಗ
ನಿನ್ನ ಸ್ನೇಹದಿ ನಾ ಅರಿವೇ ಪ್ರೇಮಮಾರ್ಗ
ಸ್ನೇಹಸುಧೆ ಮುನಿವ ಮನಸು ದೂಡಿ
ನೀ ಬಂದು ಮೀಟು ಸ್ನೇಹ ನಾಡಿ
ನೀ ಸ್ನೇಹಧಾರೆಯಲ್ಲವೇ..?

ಮುನಿಸು ತರವೇ ಗೆಳತಿ ನಿನಗೆ
ನನ್ನ ಮೇಲೆ ಮುನಿಸು ತರವೇ..?

23 comments:

ಸಿಮೆಂಟು ಮರಳಿನ ಮಧ್ಯೆ said...

ಮನಸು...

ಕೋಪ ಬಂದಿದ್ದರೂ..
ನಿಮ್ಮ ಸುಂದರ ಕವಿತೆ ಓದಿ ಕೋಪ ಶಮನ ಆಗಿರುತ್ತದೆ ಬಿಡಿ...

ಸುಂದರ ಕವಿತೆಗಾಗಿ ಅಭಿನಂದನೆಗಳು....

sunaath said...

ಸರಳ,ಸರಾಗ, ಸುಂದರ, ಭಾವಪೂರ್ಣ ಕವನ. ಮುನಿಸೆಲ್ಲ ಓಡಿ ಹೋಗಬೇಕಿರಬೇಕು ನೋಡಿ!

shivu said...

ಮನಸು ಮೇಡಮ್,

ನಿಮ್ಮ ಕವಿತೆ ಸೊಗಸಾಗಿ ಸರಳವಾಗಿದೆ. ಮುನಿಸನ್ನು ಹೋಗಲಾಡಿಸಲು ಇಷ್ಟು ಚೆನ್ನಾದ ಕವಿತೇ ಬೇಕೆ ಬೇಕು.

ಮನಸು said...

ಪ್ರಕಾಶಣ್ಣ
ನನ್ನ ನಂಬಿಕೆಯೂ ಅದೇ ಈ ಕವನದ ಸಾಲುಗಳು ಕೋಪವನ್ನು ಶಮನಮಾಡಿರಬೇಕೆಂದು. ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು

ಮನಸು said...

ಸುನಾಥ್ ಸರ್,
ಖಂಡಿತ ನೋಡುತ್ತೇನೆ ಕೋಪ ಮಾಯವಾಗಿದೆಯೇ ಎಂದು. ನಿಮ್ಮ ಮೆಚ್ಚುಗೆಯ ಅನಿಸಿಕೆಗೆ ನನ್ನ ಧನ್ಯವಾದಗಳು

ಮನಸು said...

ಶಿವೂ ಸರ್
ನಿಜಾನ ಸರ್ ಇಂತಹ ಕವನ ಕೋಪ ಓಡಿಸುತ್ತದೆಯೇ ಹಹಹ ... ನಿಮ್ಮ ಮೆಚ್ಚುಗೆಯ ಅನಿಸಿಕೆಗೆ ನನ್ನ ಧನ್ಯವಾದಗಳು

ನೇರ-ನುಡಿಯವನು ! said...

ಮನಸು ಅವರೇ ...

ನಿಮ್ಮ ಬರಹ ಚೆನ್ನಾಗಿದೆ....
ಆದರೆ,
ಸ್ನೇಹದೀ ಪ್ರೇಮಮಾರ್ಗ ಅರಿಯುವ ರೀತಿ!? ತಿಳಿಯಲಿಲ್ಲ .

-ಗುರುಪ್ರಸಾದಗೌಡ.ಎ.ಕಾ. :- balipashu.blogspot.com

ನೇರ-ನುಡಿಯವನು ! said...

ಮನಸು ಅವರೇ ...

ನಿಮ್ಮ ಇತ್ತೀಚಿನ ಕವನಗಳಿಗೆ ಬಹಳ ಸಲ ಕಾಮೆಂಟ್ ಮಾಡಲು ಪ್ರಯತ್ನಿಸಿ ವಿಫಲನಾದೆ.. ಕಾರಣ ತಿಳಿದುಬಂದಿಲ್ಲ ..

-ಗುರುಪ್ರಸಾದಗೌಡ.ಎ.ಕಾ. :- balipashu.blogspot.com

Guru's world said...

ತುಂಬ ಚೆನ್ನಾಗಿ ಇದೆ ಕವನ ಮನಸು.....ವೆರಿ ನೈಸ್.......

ಗುರುಪ್ರಸಾದಗೌಡ.ಎ.ಕಾ ರವರೆ....ಇಷ್ಟು ದಿನ ಮನಸು ಅವರ ಕಾಮೆಂಟ್ ವಿಂಡೋ ಸೈಜ್ ಅನ್ನು ಚಿಕ್ಕದಾಗಿ ಸೆಟ್ ಮಾಡಿದ್ದರು ಅಂತ ಕಾಣುತ್ತೆ ಅದಕ್ಕೆ ಕಾಮೆಂಟ್ post ಮಾಡುವುದಕ್ಕೆ ಕಷ್ಟ ಆಗ್ತಾ ಇತ್ತು.....

ಜಲನಯನ said...

ಕೋಪವೇಕೆ? ಎಂದಿರಾ...?? ಇಲ್ದೇ ಏನ್ರಿ?? ಮನಸು ಮೇಡಂ
ಎಷ್ಟು ಸಲ ಕಾಮೆಂಟ್ ಹಾಕೋಕೆ ಟ್ರೈ ಮಾಡಿದ್ರೂ ಜಪ್ಪಯ್ಯ ಅನ್ನಲಿಲ್ಲ ನಿಮ್ಮ ಬ್ಲಾಗ್ ಕಾಮೆಂಟಿನ ಗವಾಕ್ಷಿ....
ಈಗ..ಕೋಪ ಹೋಯ್ತು..ನಿಮ್ಮ ಕವನ ನೋಡಿ..ನನ್ನ ಕಾಮೆಂಟ್ ಪೋಸ್ಟ್ ಆಗದಿದ್ರೆ...ಫೋನ್ ಮಾಡಿ ಹೇಳೇಬಿಡ್ತೀನಿ....ಆಯ್ತಾ...?

ಮನಸು said...

ಗುರುಪ್ರಸಾದಗೌಡ,
ನಿಮ್ಮ ಅನಿಸಿಕೆಗೆ ಧನ್ಯವಾದಗಳು ಪ್ರೇಮ ಅನ್ನೋದು ಎಲ್ಲಿಲ್ಲ ಹೇಳಿ ಎಲ್ಲದರಲ್ಲೂ ಒಂದೊಂದು ರೀತಿ ಪ್ರೇಮ ಕಾಣಬಹುದಲ್ಲವೇ ಇಲ್ಲೂ ಹಾಗೆ ಸ್ನೇಹದ ಪ್ರೇಮ ಅಸ್ಟೆ.

ಗುರು,
ಧನ್ಯವಾದಗಳು ನಿಮ್ಮ ಅನಿಸಿಕೆಗೆ,ನೀವೇ ಗುರುಪ್ರಸಾದಗೌಡ ಹಾಗು ಕಾಮೆಂಟ್ ಹಾಕಲು ಪ್ರಯತ್ನಿಸಿ ವಿಫಲವಾದವರಿಗೆಲ್ಲ ಉತ್ತರಿಸಿದ್ದೀರಿ ಧನ್ಯವಾದಗಳು .

ಮನಸು said...

ಅಜಾದ್ ಸರ್,
ಕರೆ ಮಾಡಿ ಈಗಲಾದರೂ ಕರೆಮಾಡಬೇಕೆನಿಸಿದೆಯಲ್ಲ ಹ ಹ ಹ ಧನ್ಯವಾದಗಳು ಈಗ ನಿಮ್ಮ ಕಾಮೆಂಟ್ ಪೋಸ್ಟ್ ಆಗ್ತಾ ಇದೆ ತೊಂದರೆ ಇಲ್ಲ.

Anonymous said...

at last problem solved w.r.t commenting
:-)
nice poem da. munisuvudu, kshamisuvudu chanda alwaa??

:-)
ms

ರವಿಕಾಂತ ಗೋರೆ said...

Very Nice...

ಏಕಾಂತ said...

ಹಾಯ್ ಮನಸು..
ನಿಮ್ಮ ಮನಸಿನಾಗಿನ ಮಾತು ಓದಿದಾಗ ನಮ್ಮೆಲ್ಲಾ ಮುನಿಸು ಮನ್ನಾ ಮಾಡುವಂತಿದೆ. ಕವನ ಓದಿದ ಗೆಳತಿ ಮತ್ತೆಂದೂ ಮುನಿಸಳಾರಳು. ಚೆಂದ ಕವನ. ಮತ್ತೆ ಮರೆಯಿರಿ...

Prabhuraj Moogi said...

ಮುನಿಸಿದ ಗೆಳತಿ ಮರಳಿ ಬರುವಂತಿದೆ... ಇಲ್ಲಿ ಮುನಿಸಿರುವ ಗೆಳತಿ ನಿಸರ್ಗವೇ?... ಮುನಿಸು ತರವಲ್ಲ ಆದರೂ ಚಿಕ್ಕ ಚಿಕ್ಕ ಮುನಿಸುಗಳು ಮುದ ಕೊಡುತ್ತವೆ ಕೂಡ ಅಲ್ಲವೇ... ಕಂಮೆಂಟ್ ಪ್ರಾಬ್ಲಂ ಈಗ ಸರಿಯಾಗಿದೆ.

ಮನಸು said...

ಎಂ ಎಸ್ ರವರಿಗೆ,
ನಿಮ್ಮ ಅನಿಸಿಕೆ ಧನ್ಯವಾದಗಳು ನಿಜ ಹುಸಿಮುನಿಸು ಚೆನ್ನ, ಹೀಗೆ ಬರುತ್ತಲಿರಿ ನಿಮ್ಮ ಅಭಿಪ್ರಾಯ ತಿಳಿಸುತ್ತಲಿರಿ..
ವಂದನೆಗಳು
ರವಿಕಾಂತ್,
ಧನ್ಯವಾದಗಳು
ಏಕಾಂತ್,
ಹೌದು ಮುನಿಸಿನ ಗೆಳತಿ ಖಂಡಿತ ಮುನಿಸು ಮರೆತಿದ್ದಾಳೆ ಮತ್ತೆಂದು ಮುನಿಸಿಕೊಳ್ಳುವುದಿಲ್ಲವೆಂದು ನಂಬಿದ್ದೇನೆ. ನಿಮ್ಮ ಅಭಿಪ್ರಾಯ ಖುಷಿ ಕೊಟ್ಟಿದೆ.
ವಂದನೆಗಳು

ಪ್ರಭು,
ನನ್ನ ಗೆಳತಿ ನಿಸರ್ಗ, ಸಣ್ಣ ಪುಟ್ಟ ಮುನಿಸು ಬೇಗ ಮರೆಯಾಗುತ್ತೆ ಅಲ್ಲವೇ..? ಈ ನನ್ನ ಬ್ಲಾಗಿಗೂ ಏನೋ ಮುನಿಸಿತ್ತೇನೋ ಗೊತ್ತಿಲ್ಲ ಅದಕ್ಕೆ ಇಷ್ಟು ದಿನ ಕೋಪದಲ್ಲಿತ್ತು ಈ ಕವನದ ಮೂಲಕ ಅದು ಸರಿಹೋಗಿದೆ ಹ ಹ ಹ
ಧನ್ಯವಾದಗಳು...

ಶಿವಪ್ರಕಾಶ್ said...

ಮನಸು ಅವರೇ,
ನಿಸರ್ಗ ಮುನಿಸಿಕೊಂಡರೆ ನಾವೆಲ್ಲಾ ಬದುಕಲಾದೀತೆ ?
ನಿಸರ್ಗದ ಜೊತೆಗಿನ ನಿನ್ನ ಸ್ನೇಹದ ಸಾಲುಗಳು ತುಂಬಾ ಚನ್ನಾಗಿವೆ..

ಮನಸು said...

dhanyavadagaLu shivu... heege baruttaliri.

ಧರಿತ್ರಿ said...

ನಂಗಂತೂ ತುಂಬಾನೇ ಕೋಪ ಇದೆ...ಟೂ ಟೂ..ನಾ ಮುನಿಸು....

ಚೆನ್ನಾಗೈತೆ ಕವನ ಅಕ್ಕ...

-ತಂಗಿ
ಧರಿತ್ರಿ

ಚಂದಿನ | Chandina said...

ಸುಂದರ ಕವನ...ಇಷ್ಟವಾಯಿತು

ಎಚ್.ಎನ್. ಈಶಕುಮಾರ್ said...

ಮನಸು ನಿಮ್ಮ ಕವನ ಮನದ ಪಟಲದಲಿ ಹಾಗೆ ಉಳಿವಂತ್ತದ್ದು.

ಗೌತಮ್ ಹೆಗಡೆ said...

:)