Sunday, September 13, 2009

ಸಮಾಗಮ

ನೀ ಬರುವುದು ಶುಕ್ರವಾರ ಸಂಜೆ ಆದರೆ ನನಗೆ ಗುರುವಾರ ರಾತ್ರಿಯೆಲ್ಲ ನಿದ್ರೆ ಬರಲೇ ಇಲ್ಲ ಬೆಳಗಾಗುವುದನ್ನೇ ಕಾಯುತ್ತಲಿದ್ದೆ... ಮಧ್ಯೆ ಊರಿಗೆ ಮೆಸೇಜ್ ಮಾಡುವುದು, ಕರೆ ಮಾಡುವುದು ಇದೆ ಕಥೆ ಸಾಗಿತ್ತು ರಾತ್ರಿಯೆಲ್ಲ, ಇನ್ನೇನು ಬೆಳಗಾಯಿತು ಇಂದು ನೀ ಬರುವೆ ಎಂದು ನಿನಗೆ ಇಷ್ಟವಾದ ಊಟ ತಯಾರು ಮಾಡುವ ತಾರತುರಿ ಜೊತೆಗೆ ಮದ್ಯೆ ಮದ್ಯೆ ದೇವರ ಕೋಣೆಗೆ ಹೋಗಿ ದೇವರೆ ನನ್ನ ಕಂದ ಈಗ ವಿಮಾನದಲ್ಲಿದ್ದಾನೆ ಅವನು ತಿನ್ನಲು ಎಲ್ಲದರ ವ್ಯವಸ್ಥೆ ಸರಿ ಆಗಲಿ, ಮತ್ತೊಮ್ಮೆ ಈಗ ದುಬೈನಲ್ಲಿ ಇದ್ದಾನೆ ಅವನು ಹೇಗಿದ್ದಾನೊ ನೀನೇ ಅವನ ಹಾರೈಕೆ ಮಾಡು ದೇವರೇ ಎಂದು ಬೇಡುತ್ತಲಿದ್ದೆ. ಸಂಜೆ ಇನ್ನು ಆಗಿರಲಿಲ್ಲ ಊರಿಂದ ಆಗಲೇ ಕರೆಗಳು ಬರುತ್ತಲಿದ್ದವು ಎಲ್ಲರಿಗು ಉತ್ತರ ಹೇಳುವುದೇ ಆಗಿತ್ತು...

ವಿಮಾನವು ೪.೪೫ ಕ್ಕಾಗಲೇ ಬಂದು ಇಳಿದಿತ್ತು ನಾವು ಪ್ರಯಾಣಿಕರು ಹೊರ ಬರುವ ಬಾಗಿಲಿನತ್ತಲೇ ಇಣುಕಿ ಇಣುಕಿ ನೋಡುತ್ತಲಿದ್ದೆವು... ನೋಡ ನೋಡುತ್ತಿದ್ದಂತೆ ೫.೨೦ ಸಮಯ ದಾಟಿತ್ತು ಜೊತೆಗೆ ನನ್ನ ಸಂಯಮವೂ ದಾಟಿತ್ತು... ಇತ್ತ ನನ್ನ ಪತಿರಾಯರು ಮದ್ಯೆ ಮದ್ಯೆ ತಮಾಷೆಯ ಚಟಾಕಿ ಹಾರಿಸುತ್ತಿದ್ದರು ನನ್ನ ಹುಸಿಕೋಪ ಅವರೆಡೆಗೆ ಹಾರಿತ್ತು... ಸದ್ಯ ಮೊದಲು ಮಗ ಬಂದರೆ ಸಾಕು ಅಂದರೆ ನಿಮಗೆ ತಮಾಷೆನ ಸುಮ್ಮನಿರೋಕೆ ಏನು ಕೊಡಬೇಕು ಎಂದು ಮೆಲ್ಲನೆ ಗದರಿ ನಾ ಮತ್ತದೆ ಬಾಗಿಲಿನೆಡೆ ಕಣ್ಣು ಹಾಯಿಸಿದೆ... ಇನ್ನು ಬರಲಿಲ್ಲವಲ್ಲ ಎಷ್ಟೊತ್ತುಬೇಕು ಹೊರಬರಲು ಬೇಗ ಬರಲಿ ಎಂದು ನೂರೆಂಟು ಸಾರಿ ಬಡಬಡಿಸಿದೆ. ಅತ್ತೊಮ್ಮೆ ಇತ್ತೊಮ್ಮೆ ತಿರುಗಾಡುತ್ತಲಿದ್ದೆ ಮನೆಯವರು ಬಂದ ಬಾ ಎಂದು ಕರೆದೊಡೆ ಅತ್ತಕಡೆ ಓಡಿದೆ...
ಆ ಪುಟ್ಟ ಕಣ್ಣುಗಳು ಅತ್ತಲಿತ್ತ ಸುತ್ತುಗಟ್ಟಿ ನೋಡುತ್ತಲಿತ್ತು ಎಲ್ಲಿರುವರು ನಮ್ಮ ಅಪ್ಪ ಅಮ್ಮ ಎಂದು ಕಣ್ಣು ಹುಡುಕುತ್ತಿತ್ತು ಮುಖದಲ್ಲಿ ಮೌನಮನೆಮಾಡಿತ್ತು... ಎರ್ ಲೈನ್ಸ್ ಕಚೇರಿಯವರು ಕರೆತರುವಾಗ ನಿಮ್ಮವರು ಬಂದಿದ್ದಾರೇ ಎಂದು ಕೇಳುವ ಹಾಗಿತ್ತು ಈ ಪುಟ್ಟ ಕಂದ ಸುತ್ತಮುತ್ತ ನೋಡಿ ಕಾಣುತ್ತಲಿಲ್ಲ ಎನ್ನುವಾಗೆ ಭಾಸವಾಯಿತು... ಒಮ್ಮೆ ನಮ್ಮಿಬ್ಬರ ಮುಖಕಂಡ ಕೂಡಲೇ ಮಂದಹಾಸ ಮೂಡಿತ್ತು.... ಮಗನನ್ನು ನಮಗೆ ಒಪ್ಪಿಸಿದರು ಹಾಗೆ ನಮ್ಮ ಸಹಿ ಕೂಡ ತೆಗೆದುಕೊಂಡರು ನಾವು ಅವರಿಗೆ ಧನ್ಯವಾದ ತಿಳಿಸಿ ಹೊರಟೆವು.....

ದಾರಿಯಲ್ಲಿ ಬರುತ್ತಿದ್ದಂತೆ ಕಂದ ನಿನಗೆ ತೊಂದರೆ ಆಯ್ತ... ಭಯ ಆಯ್ತ ಎಂದು ಕೇಳಿದರೆ ಏನು ಇಲ್ಲ ಏನು ತೊಂದರೆನೂ ಆಗಲಿಲ್ಲ, ನಾನು ...ಬೆಂಗಳೂರಿನಲ್ಲಿ ವಿಮಾನ ಹತ್ತಿದ ಕೂಡಲೇ ಗಜನಿ ಹಿಂದಿ ಚಲನಚಿತ್ರ ಬರುತ್ತಿತ್ತು ನೋಡಿ ಮುಗಿಸುವಸ್ಟರಲ್ಲಿ ದುಬೈ ಬಂತು, ಇನ್ನು ದುಬೈನಲ್ಲಿದ್ದಾಗ ವಿಡಿಯೋ ಗೇಮ್ಸ್ ಆಟವಾಡುತ್ತಲಿದ್ದೆ... ಮತ್ತೆ ದುಬೈನಲ್ಲಿ ವಿಮಾನ ಹತ್ತಿದಾಗ ಎಫ್ ಎಂ ಕೇಳುತ್ತಲಿದ್ದೇ ಬೇಗ ಕುವೈಟ್ ಬಂತು ನನಗೇನು ಬೇಜಾರಾಗಲೇ ಇಲ್ಲ.... ಕಂದ ನಾ ಬಹಳ ಭಯ ಪಟ್ಟಿದ್ದೇ ಎಂದಾಗ ನಗು ಅವನಿಗೆ ನಗುತ್ತ ಹೇಳಿದ ತಾತ ಕೂಡ ಹಾಗೆ ರಾತ್ರಿ ಎಲ್ಲ ಅಳುತ್ತ ಕೂತಿತ್ತು ಎಂದು ಜೋರು ನಗು ಪ್ರಾರಂಭಿಸಿದ ಹ ಹ ಹ ಅಹ.. ಇಷ್ಟು ಮಾತಾಡುತ್ತಲಿದ್ದ ಹಾಗೆ ಮನೆ ತಲುಪಿದೆವು..ಅಪ್ಪನಿಗೆ ಕಾಣದಂತೆ ಕಂದ ನಾನು ನಿನ್ನ ಜೊತೆ ಇರಲಿಲ್ಲವೆಂದು ಏನಾದರು ಬೇಸರ ಕೋಪ ಬಂದಿತ್ತೆ ಎಂದು ಕೇಳಿದಕ್ಕೆ ಇಲ್ಲಮ್ಮ ಎಂದಾಗ ನನ್ನ ಮನದಲ್ಲೇನೋ ಸಮಾದಾನದ ನಿಟ್ಟುಸಿರು ಬಿಟ್ಟಂತಾಯಿತು..

ಸ್ವಾಗತ ಬೋರ್ಡ್ ಕಂದಮ್ಮನಿಗೆ ..
ಮನೆಗೆ ಬರುತ್ತಲಿದ್ದಂತೆ ಊರೆಗೆ ಕರೆಮಾಡಿ ಎಲ್ಲರಿಗು ಹೇಳಿ ನಾ ಬಂದು ತಲುಪಿದೆ ಆರಾಮಾಗಿ ಏನು ತೊಂದರೆ ಇಲ್ಲವೆಂದು ಹೇಳಿ ಎಂದು ಎಲ್ಲರೊಟ್ಟಿಗೆ ಮಾತಾಡಿ ಖುಷಿ ಪಟ್ಟನು.... ನಾವು ಅವನ ಕಂಡು ಖುಷಿ ಪಟ್ಟೆವು ಜೊತೆಗೆ ಊರಿಂದ ಬಂದಿದ್ದ ಸಿಹಿಹೋಳಿಗೆ ಕಹಿ ಎಲ್ಲವನ್ನು ಮರೆಸಿತು.

ನನ್ನ ಕಂದಮ್ಮನ ಸುಖ ಪ್ರಯಾಣಕ್ಕೆ ಸಹಕರಿಸಿದ ನನ್ನ ಮನೆ ಮಂದಿ, ವಿಮಾನದಲ್ಲಿ ನನ್ನ ಕಂದ ಊಟ ಮಾಡಲು ಸಹಕರಿಸಿದ ಪಕ್ಕದಲ್ಲೇ ಕುಳಿತಿದ್ದ ಮಹಿಳೆ, ಗಗನ ಸಖಿಯರು, ವಿಮಾನ ಕಚೇರಿಯಾ ನಿರ್ವಾಹಕರು, ಕಾಣದೆ ಸಹರಿಸಿದ ಹಲವು ಕೈಗಳಿಗೂ ಹಾಗು ನಮ್ಮನ್ನು ಸಾಂತ್ವಾನಿಸಿದ ಸ್ನೇಹ ವೃಂದಕ್ಕೆ ನಮ್ಮ ನಮ್ರ ನಮನಗಳು..

ನಿಮ್ಮ,
ಮೃದು ಮನಸು
ಸವಿಗನಸು
ಇವರಿಬ್ಬರ ಜೊತೆಗೆ ನನ್ನ ಕಂದಮ್ಮ ...

11 comments:

ಸುಧೇಶ್ ಶೆಟ್ಟಿ said...

Nimma thaayihrudaya kandu mana thumbi banthu Mrudu manasu avare.... Nimma maganinge nanna haaraikegalu....

ಜಲನಯನ said...

ಮನು ಬಂದ
ವಿಮಾನದಿಂದ
ಮನಸು ಮೃದುವಾಯಿತು
ಹೇಳದೇ..ಕನಸು ನನಸಾಯಿತು........
ಅಬ್ಬಾ,,,,ರಾಮ ಬರಲಿಲ್ಲವೇ...ಬಂದ..ನಮ್ಮಪ್ಪ ರಾಮ..ಒಣಎಲೆ ಸರಿದರೆ ಹೆಜ್ಜೆ ಸಪ್ಪಳ ರಾಮನೆಂದು ಶಬರಿ ಕಾದ ...ಕಥೆ ನೆನೆಪಿಗೆ ಬಂತು ಸ್ಕೂಲಿನಲ್ಲಿ ಓದಿದ್ದು...
ಪ್ರಶ್ನೆನೂ ನೆನೆಪಿದೆ....ರಾಮನ ಬರುವಿಕೆಯಲ್ಲಿ ಪರಿತಪಿಸಿದ ಶಬರಿಯನ್ನು ಒಂದು ಪುಟಕ್ಕೆ ಮೀರದಂತೆ ಬಣ್ಣಿಸಿ..
ಹಹಹಹಹ.......ಮನುಗೆ ಶುಭಕೋರುವ ನಾವೆಲ್ಲಾ....

ಸಾಗರದಾಚೆಯ ಇಂಚರ said...

ಮನಸು,
ಕಂಡ ಬಂದ ವಿಷಯ ಸಮಾಧಾನ ನೀಡಿತು, ನಿಮ್ಮ ದುಗುಡ ಇನ್ನು ಬಿಡಿ
ಹೋಳಿಗೆ ನಮಗೂ ಕೊಡಿ

SSK said...

ಮನಸು ಅವರೇ,
ನಿಮ್ಮ ಮಗನ ಆಗಮನದ ಸುದ್ದಿ ಕೇಳಿ ಬಹಳ ಸಂತೋಷವಾಯಿತು!
ಇದೇ ಸಂತೋಷದಲ್ಲಿ, ನಿಮ್ಮ ಮಗನಿಗೆ ಮಾಡುವ ಹಬ್ಬದ ಅಡುಗೆ ಉಣಲು ನಾವೂ..... ಬರಬಹುದೇ?!

ತೇಜಸ್ವಿನಿ ಹೆಗಡೆ said...

ಮನಸು,

ನಿಮ್ಮ ಮಗ ನಿಮ್ಮಿಬ್ಬರನ್ನು ಸೇರಿರುವ ಶುಭವಾರ್ತೆ ಕೇಳಿ ತುಂಬಾ ಸಂತೋಷವಾಯಿತು. ಯಾವುದೇ ತೊಂದರೆಯಾಗದಂತೇ ಆತ ಹಾಗೂ ನಿಮ್ಮ ಸಮಾಗಮವಾಗಿರುವುದು ಬಹು ಸಮಾಧಾನ ತಂದಿತು. ಅಂದಹಾಗೆ ನಿಮ್ಮ ಕಂದನ ಸುಂದರ ಹೆಸರೇನು?

shivu.k said...

ಮನಸು ಮೇಡಮ್,
ದುಗುಡ ಕೆಳಗಿಳಿದಾಗ ಆಗುವ ಆನಂದದ ಆನುಭವವನ್ನು ವರ್ಣಿಸಲಾಗದು....ಅದನ್ನು ನೀವು ಆನುಭವಿಸಿದ್ದೀರಿ..ಕಂದ ಅಮ್ಮನ ಬಳಿ ತಲುಪಿದ್ದು...ಸಮಾಧಾನ..ಆತನ ಹೆಸರೇನು...ಹೋಳಿಗೆ ನಮಗೂ ಕಳಿಸುತ್ತೀರಲ್ಲ....

ರಾಹುದೆಸೆ !! said...

ತಾಯಿ-ಮಗನ ಬಾಂಧವ್ಯ ತುಂಬಾ ಭಾವುಕತೆಯಿಂದ ಕೂಡಿದೆ.
ತಾಯಿಮಮತೆ ಹೀಗೂ ಇರುತ್ತಾ? ಎಂಬ ಪ್ರಶ್ನೆ ನನಗೆ..?
ಎಲ್ಲರಿಗೂ ನಿಮ್ಮಂತ ತಾಯಿಮಮತೆ ಸಿಕ್ಕಿದರೆ....?!


--ಎ.ಕಾ.ಗುರುಪ್ರಸಾದಗೌಡ.. -balipashu.blogspot.com

ಶಿವಪ್ರಕಾಶ್ said...

ಮನಸು ಅವರೇ,
ನಮಗೂ ಕೂಡ ಸಿಹಿಹೋಳಿಗೆ ಊಟ ಬೇಕು...

sunaath said...

ಮನಸು,
ನಿಮ್ಮೊಡನೆ ನನ್ನ ಮನಸ್ಸೂ ನಿರಾಳವಾಯಿತು.
ನಿಮ್ಮ ಹೋಳಿಗೆಯನ್ನು ತಿಂದಷ್ಟೇ ಸಂತೋಷವಾಗಿದೆ!

ಮನಸು said...

ಸುಧೇಶ್, ಅಜಾದ್ ಸರ್,ಗುರು,ತೇಜಸ್ವಿನಿ,ಶಿವೂ ಸರ್, ಗುರುಪ್ರಸಾದ್, ಶಿವಪ್ರಕಾಶ್, ಸುನಾಥ್ ಸರ್ ಎಲ್ಲರಿಗು ನನ್ನ ಧನ್ಯವಾದಗಳು..
ನನ್ನ ಮಗನ ಹೆಸರು ಮನುವಚನ್
ಹೋಳಿಗೆ ಊಟಕ್ಕೆ ನೀವೆಲ್ಲ ನಮ್ಮ ಮನೆಗೆ ಬನ್ನಿ ಎಲ್ಲರೋ ಒಟ್ಟಿಗೆ ಸೇರಿ ಊಟ ಮಾಡೋಣ ಬರುತ್ತೀರಲ್ಲ..?
ವಂದನೆಗಳು

Prabhuraj Moogi said...

ಕೆಲಸದೊತ್ತಡದಲ್ಲಿ ಇಂದು ಓದಲಾಯಿತು, ಅಂತೂ ಸರಿಯಾಗಿ ಬಂದು ತಲುಪಿದನಲ್ಲ, ಇನ್ನು ನೆಮ್ಮದಿಯಿಂದಿರಿ...
ನಿಮ್ಮ ತೊಳಲಾಟ ಓದುತ್ತಿದ್ದರೆ, ನಾ ಮೊಟ್ಟ ಮೊದಲಿಗೆ ಊರು ಬಿಟ್ಟು ಪರವೂರಿಗೆ ಹೊರಟಾಗ ಕಣ್ಣಂಚು ತೇವಗೊಂಡಿದ್ದ ನಮ್ಮಮ್ಮನ ನೆನಪಾಯಿತು... ಮೊದಮೊದಲು ಕೆಲವೊಮ್ಮೆ ಬೆಂಗಳೂರಿಗೆ ಬರುವಾಗಲೂ ಅವರಿಗೆ ಆತಂಕ ಇರುತ್ತಿತ್ತು, ಈಗ ಕಮ್ಮಿಯಾಗಿದೆ... ಇನ್ನು ವಿಮಾನದಲ್ಲಿ ಒಬ್ಬನೇ ಪ್ರಯಾಣಿಸಲಿರುವ ನಿಮ್ಮ ಮಗನ ಬಗೆಗಿನ ಆತಂಕ ಸಹಜವೇ.. ಈ ಜಗತ್ತಿನ ಎಲ್ಲ ಅಮ್ಮಂದಿರು ಹೀಗೆ ಅನಿಸುತ್ತೆ.