ಆರ್ಟ್ ಆಫ್ ಲೀವಿಂಗ್ ಕ್ಲಾಸ್ ಮೂಲಕ ನಾವೆಲ್ಲ ಸುಮಾರು ೬೦ಜನ ಕನಕಪುರ ಆಶ್ರಮಕ್ಕೆ ಹೋಗಿದ್ದೆವು,ನನ್ನ ಜೊತೆ ನನ್ನ ಅಪ್ಪ ಅಮ್ಮ ಕೂಡ ಆಶ್ರಮ ವೀಕ್ಷಣೆಗೆಂದು ಬಂದಿದ್ದರು.
ಎಲ್ಲರು ನಮ್ಮ ಸ್ನೇಹಿತರು ಹಾಗು ಗುರುಗಳೊಂದಿಗೆ ಆಶ್ರಮವೆಲ್ಲ ಸುತ್ತಾಡಿ ಬರುವಷ್ಟರಲ್ಲಿ ಊಟದ ಸಮಯವಾಗಿತ್ತು ಗುರುಗಳು ಒಮ್ಮೆ ಊಟ ಮುಗಿಸಿ ಬೇರೆಡೆ ಸುತ್ತಾಡಿಬರುವುದೆಂದು ತೀರ್ಮಾನಿಸಿ ಎಲ್ಲರೂ ಊಟಕ್ಕೆ ತೆರಳಿದೆವು.
ಚಪ್ಪಲಿಗೂಡಿನಲ್ಲಿ ಚಪ್ಪಲಿ ಬಿಡುವಾಗ ಸುತ್ತಮುತ್ತ ನೋಡಿದೆ ಅಲ್ಲೇ ನನಗೇನೋ ಅನುಮಾನ ಇಷ್ಟು ಚೆನ್ನಾಗಿದೆ ನನ್ನ ಚೆಪ್ಪಲಿ ಏನಾದ್ರು ಆದರೆ ಎಂಬ ಅನುಮಾನದಲ್ಲೇ ಊಟಕ್ಕೆ ಒಳ ನಡೆದೆ ಅಲ್ಲಿನ ಭರ್ಜರಿ ಊಟ ನನ್ನ ಚಪ್ಪಲಿ ಮೇಲಿದ್ದ ಕಾಳಜಿಯನ್ನೆಲ್ಲ ಮರೆಸಿತ್ತು... ಊಟ ಮುಗಿಸಿ ಬಂದೊಡೆ ನಾ ಬಿಟ್ಟಿದ್ದ ಚಪ್ಪಲಿ ಅಲ್ಲಿ ಕಾಣುತ್ತಿಲ್ಲ, ಆಗ ನಾ ತಿಂದ ಊಟವೆಲ್ಲ ಕರಗಿದಹಾಗಾಯಿತು... ಸುತ್ತಮುತ್ತ ಸುಮಾರು ೧೦ ಭಾರಿ ಸುತ್ತಾಡಿದೆ ಸುಸ್ತಾದೆ ಎಲ್ಲೂ ಕಾಣಲಿಲ್ಲ ನನ್ನ ಜೊತೆ ಇದ್ದ ಗುರುಗಳು, ಸ್ನೇಹಿತರು ಎಲ್ಲರೂ ಒಂದೆ ಮಾತು ಒಳ್ಳೆಯದು ಅದು ಆಶ್ರಮದಲ್ಲಿ ಚಪ್ಪಲಿ ಕಳೆದರೆ ಎಂದು ಇನ್ನು ಕೆಲವರು ನಿನ್ನ ಕರ್ಮವೆಲ್ಲ ಕಳೆಯಿತು ಬಿಡು ಎಂದರು, ಇನ್ನು ಕೆಲವರು ಇಲ್ಲೇ ಯಾರೋ ತೆಗೆದುಕೊಂಡಿರುತ್ತಾರೆ ಈ ಮಕ್ಕಳು ಇದ್ದಾರೆ ನೋಡಿ ಯಾರೋ ತೆಗೆದುಕೊಂಡಿರಬೇಕು ಎಂದೆಲ್ಲ ಮಾತಾಡುತ್ತಲಿದ್ದರು ನನ್ನ ಮನಸಿನಲ್ಲೇ ಅಯ್ಯೋ ಹೋಗಿದ್ದು ಹೋಯ್ತು ಮತ್ತೆ ಬರೋಲ್ಲ ಎಂದು ಸುಮ್ಮನಾದೆ.
ಆಶ್ರಮ್ಮದಲ್ಲೇ ಇದ್ದ ಶಾಪಿಂಗ್ ಮಾಲ್ನಲ್ಲಿ ಒಂದುಜೊತೆ ಚಪ್ಪಲಿ ತೆಗೆದುಕೊಂಡು ಪ್ರಾರ್ಥನಾ ಮಂದಿರಕ್ಕೆ ತೆರಳುವ ಮುನ್ನ ಚಪ್ಪಲಿ ಬಿಡುವಾಗ ಎಲ್ಲರು ಹೇಳಿದರು ಒಂದು ಚಪ್ಪಲಿ ಇಲ್ಲಿರಲಿ ಇನ್ನೊಂದು ಬೇರೆಡೆ ಇಡು ಎಂದು ಸರಿ ಎಂದೆನಿಸಿ ನಾನು ಹಾಗೆ ಇಟ್ಟು ಪ್ರಾರ್ಥನೆಗೆ ತೆರಳಿದೆ ಮತ್ತೆ ತಿರುಗಿ ಬರುವಾಗ ಮತ್ತದೇ ಕಥೆ ಕಾದಿತ್ತು ಯಾರೋ ಆ ಹೊಸ ಚಪ್ಪಲಿಯನ್ನು ತೊಟ್ಟು ಹೋಗಿದ್ದರು... ಇದು ಎಂಥಹ ಕರ್ಮವಪ್ಪ ಎಂದೆನಿಸಿತು ಆದರು ನಗುನಗುತ್ತಲೇ ಸ್ವೀಕರಿಸಿದೆ. ಸರಿ ಮತ್ತೊಮ್ಮೆ ಎಲ್ಲರಿಂದ ಗುಣಗಾನ ನಡೆಯಿತು ನಾನೇ ಹೇಳಿಬಿಟ್ಟೆ ಕೊನೆಗೆ ನೀವೆಲ್ಲ ನನ್ನ ಮರಿಬಾರದು ನೆನಪಿನಲ್ಲಿಟ್ಟು ಕೊಳ್ಳಲೆಂದು ನನ್ನ ಚಪ್ಪಲಿ ಕಳುವಾಗಿದೆ ನೀವಾರು ಮರೆಯದಿರಿ ಎಂದೇಳಿದ ಕೂಡಲೇ ಒಮ್ಮೆಲೇ ಎಲ್ಲರು ನಕ್ಕುಬಿಟ್ಟರು.
ಇಷ್ಟೆಲ್ಲಾ ಮುಗಿದನಂತರ ಮನೆಗೆ ಬರಿಗಾಲಲ್ಲೇ ಹೊರಟೆ ಎಲ್ಲರು ಬಸ್ ನಲ್ಲಿ ವಿಜಯನಗರದವರೆಗೂ ಬಂದೆವು ಅಲ್ಲಿ ಎಲ್ಲರು ಇಳಿಯುತ್ತಲೇ ಗುರುಗಳು ನನ್ನ ಕರೆದು ಚಿಂತಿಸಬೇಡ ನೀನು ಸಿಂಡ್ರೆಲ ತರ ನಿನಗಾಗಿ ಯಾರೋ ಗಾಜಿನ ಚಪ್ಪಲಿ ಹೊತ್ತು ತಂದಂತೆ ನಿನಗೊ ತರುತ್ತಾರೆ ಎಂದರು ಜೊತೆಗೆ ಎಲ್ಲಾ ಒಳ್ಳೆಯದಾಗುತ್ತೆ ಎಂದು ಆಶಿರ್ವಾದವಿಟ್ಟರು ಮತ್ತೊಮ್ಮೆ ತಿರುಗಿ ಹೇಳಿದರು ನಾ ನಿನ್ನ ಮರೆಯುವುದಿಲ್ಲ ಎಂದರು...
ಬರಿಗಾಲಲ್ಲೇ ಸ್ವಲ್ಪ ದೂರ ನೆಡೆದು ಆಟೋ ಹಿಡಿದು ಮನೆಗೆ ಹತ್ತಿರ ಇಳಿದೆವು, ಅಲ್ಲೇ ಇದ್ದ ಬಾಟ ಅಂಗಡಿಗೆ ನನ್ನ ಅಪ್ಪಾಜಿ ಕರೆದುಕೊಂಡು ಹೋಗಿ ಚಪ್ಪಲಿ ಕೊಡಿಸಿದರು ಇಸ್ಟೆಲ್ಲಾ ಆಗಿದ್ದು ಒಳ್ಳೆಯದೇ ಸರಿ ಎನಿಸಿತು ಏಕೆ ಗೊತ್ತೆ ಮೊದಲ ಭಾರಿ ನನ್ನ ಅಪ್ಪ ನನಗೆ ಚಪ್ಪಲಿ ಕೊಡಿಸಲು ಅತಿ ಕಾಳಜಿವಹಿಸಿ ನೀನು ಇದೆ ತರಹದ ಚಪ್ಪಲಿತೆಗೆದುಕೋ ಎಂದು ಅವರೇ ಹಾಯ್ಕೆ ಮಾಡಿ ಚಪ್ಪಲಿ ಕೊಡಿಸಿದರು... ನನಗೇ ಆದ ಆನಂದ ಹೇಳತೀರದು ಎರಡು ಜೊತೆ ಚಪ್ಪಲಿ ಕಳೆದುಕೊಂಡೆಡೆಗೆ ಗಮನ ಇರಲೇ ಇಲ್ಲ. ಇನ್ನು ಮನೆಗೆ ತೆರೆಳಿದರೆ ನೆಡೆದ ಕಥೆ ಹೇಳುತ್ತಲಿದ್ದಂತೆ ನನ್ನ ಅಣ್ಣ ಅಕ್ಕ ಎಲ್ಲರೂ ನೀನು ಅದೃಷ್ಟವಂತೆ ಬಿಡು, ಅದು ಅಪ್ಪ ಬಂದು ನಿನಗೆ ಚಪ್ಪಲಿ ಕೊಡಿಸಿದ್ದಾರೆ ಎಂದು....!!! ನಿಜ ನಾನು ಅದೃಷ್ಟವಂತೆಯೇ ಸರಿ... ಅಪ್ಪ ಎಂದೂ ಅವರಾಗಿ ಬಂದು ಈ ರೀತಿ ಕೊಡಿಸಿರಲಿಲ್ಲ ನನ್ನ ಜೀವನದಲ್ಲೇ ಮೂದಲಬಾರಿ .... ಇದು ನನಗೆ ಸಂತಸದ ಕ್ಷಣ....
ಆಗುವುದೆಲ್ಲ ಒಳ್ಳೆಯದಕ್ಕೆ, ಅಗ್ಗಿದ್ದು,ಆಗುತ್ತಲಿರುವುದು ಎಲ್ಲವೂ ಒಳ್ಳೆಯದಕ್ಕೆ ಎಂದು ನನ್ನ ಮನಸಿಗೆ ಅರಿವಾಯಿತು...ನೀವೆಲ್ಲ ಏನೇಳುತ್ತೀರಿ ಆಗಿದ್ದೇಲ್ಲ ಒಳ್ಳೆಯದಕ್ಕ.....?
ವಂದನೆಗಳು
25 comments:
ಮನಸು ಮೇಡಮ್,
ನಿಮ್ಮ ಚಪ್ಪಲಿ ಕಳುವಿನ ಕತೆ ಓದಿದ ಮೇಲೆ ನನ್ನ ಕತೆ ಹೇಳಬೇಕೆನಿಸಿತು.
ಆರ್ಟ್ ಆಪ್ ಲಿವಿಂಗ್ ತರಹವೇ ಸಿದ್ಧ ಸಮಾದಿ ಯೋಗದ ಕಾರ್ಯಕ್ರಮದಲ್ಲಿ ನಾನು ಮತ್ತು ಹೇಮಾಶ್ರಿ ಏಳು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆವು. ಆ ಸಂಜೆ ನನ್ನ ಚೆನ್ನಾದ ಹೊಸ ಚಪ್ಪಲಿಯನ್ನು ಕಳೆದುಕೊಂಡೆ. ತಕ್ಷಣ ಅಲ್ಲಿದ್ದ ಗೆಳೆಯರು ಹೋದರೇ ಹೋಗಲಿ ನಿಮಗೆ ಮತ್ತೇನೋ ದೊಡ್ಡದು ಸಿಗುತ್ತದೆ ಅಂದರು. ಲಂಡನ್ನಿನ ರಾಯಲ್ ಫೋಟೊಗ್ರಫಿಯ ARPS ಡಿಸ್ಟಿಂಕ್ಷನ್ಗಾಗಿ ಅರ್ಜಿ ಹಾಕಿ ಪಲಿತಾಂಶಕ್ಕಾಗಿ ಕಾಯುತ್ತಿದ್ದ ನನಗೆ ಆ ಕ್ಷಣದಲ್ಲಿ ಚಪ್ಪಲಿ ಹೋಗಿದ್ದಕ್ಕೆ ARPS ಸಿಕ್ಕಿಂತೆ ಕಲ್ಪಿಸಿಕೊಂಡೆ. ಆದಾದ ಎರಡು ದಿನಕ್ಕೆ ನನಗೆ ಲಂಡನ್ನಿನಿಂದ ARPS ಗಳಿಸಿದ್ದೀರಿ ಅಭಿನಂದನೆಗಳು ಅಂತ ಮೇಲ್ ಬಂತು
ಅದಕ್ಕೆ ಈಗಲೂ ನಾನು ಚಪ್ಪಲಿ ಕಳೆದುಕೊಂಡಾಗ ದೊಡ್ಡದೇನೋ ಸಿಗುತ್ತದೆ ಅಂತ ಕಲ್ಪಿಸಿಕೊಳ್ಳುತ್ತೇನೆ...
ನಿಮಗೂ ಹಾಗೆ ಆಗಬಹುದು ಅನ್ನುವುದು ನನ್ನ ಹಾರೈಕೆ.
ಧನ್ಯವಾದಗಳು.
Oh! chappali kaledu ishtella aaytha.... chennagide mrudumanasu avare nimma anubhava.... naanu innu munde nanna chappli kaledukondare chinthe maduvudilla :)
ಚಪ್ಪಲಿ ಕಳೆದುಕೊಂಡಾಗ ಬೇಜಾರಾಗುವದು ಸಹಜ. ನಮ್ಮ ಸಮಾಧಾನಕ್ಕಾಗಿ ದೊಡ್ಡದು ಮತ್ತೊಂದು ಸಿಗುತ್ತದೆ ಎಂದು ಅಂದುಕೊಳ್ಳುತ್ತೀವಿ. ಅದು ನಿಮ್ಮ ವಿಷಯದಲ್ಲಿ ನಿಜವಾಗಿದೆ.
ಮನಸು ಅವರೇ,
ಹಿಂದಿನ (ಸಮಾಗಮ) ಲೇಖನದ ಪ್ರತಿಕ್ರಿಯೆಯಲ್ಲಿನ ಉತ್ತರದಲ್ಲಿ, ನನ್ನ ಮಾತ್ರಾ ಬಿಟ್ಟು ಬೇರೆ ಎಲ್ಲರನ್ನೂ ನಿಮ್ಮ ಮನೆಗೆ ಊಟಕ್ಕೆ ಕರೆದಿದ್ದೀರಲ್ಲ, ಅದೂ ಕೂಡ ಒಳ್ಳೆಯದಕ್ಕೆನಾ......?!?! :)
ನಿಮ್ಮ ಲೇಖನ ಓದುತ್ತಾ ತುಂಬಾ ನಗು ಬಂತು, ಕೊನೆಗೆ ನಿಮಗೆ ಸಿಕ್ಕ ಬಹುಮಾನ ಓದಿ ಭಾವುಕನಾದೆ.... ನನ್ನ ಹೆಂಡತಿಯದು ಇದೆ ಸಮಸ್ಯೆ...... ಎಲ್ಲೇ ಹೋದರು ಇವಳ ಚಪ್ಪಲಿಯನ್ನು ಯಾರಾದರೂ ತೆಗೆದುಕೊಂಡು ಹೋಗಿರುತ್ತಾರೆ.... ಇವಳ ಮುಖ ಆವಾಗ ನೋಡಲು ಚೆನ್ನಾಗಿರತ್ತೆ.... ಬೇಜಾರಂದ್ರೆ ಚಪ್ಪಲಿ ಕಳೆದುಕೊಂಡ ನಂತರ ಅವಳಿಗೆ ಹೊಸ ಎರಡು ಜೊತೆ ಚಪ್ಪಲಿ ತೆಗೆಸಿಕೊಡೋದು...... ತೆಗೆಸಿಕೊಡೋದು ಕಷ್ಟ ಅಲ್ಲ ಆದ್ರೆ ಅವಳ ಸೈಜ್ ನ ಚಪ್ಪಲಿ ಸಿಗೋದೆ ಕಷ್ಟ...... ........ ನಾವಿಬ್ಬರೂ ಆಶ್ರಮಕ್ಕೆ ಹೋಗಿ ಬಂದ ಘಟನೆ ನೆನಪಿಗೆ ಬಂತು.... ಆದ್ರೆ ಅವಳ ಚಪ್ಪಲಿ ಅಲ್ಲಿ ಯಾರೂ ತೆಗೆದುಕೊಂಡು ಹೋಗಿರಲಿಲ್ಲ.... ಯಾಕೆಂದ್ರೆ.........ಅವಳ ಸೈಜ್ ಮಕ್ಕಳಿಗೆ ಮಾತ್ರ ಆಗತ್ತೆ..........
ಮನಸು ಅವರೇ,
ನಿಜ ರೀ... ಆದದ್ದೆಲ್ಲ ಒಳ್ಳೇದಕ್ಕೆ ಅನ್ಕೊಬೇಕು :)
ಶಿವು ಸರ್
ಚಪ್ಪಲಿ ಏನೋ ಕಳೆದೊಯ್ತು ಹ ಹ ಹ ಅದಕ್ಕೆ ನನ್ನ ಅಪ್ಪ ಹೊಸ ಚಪ್ಪಲಿ ಕೊಡುಸಿದರು ಅದೇ ನನಗೆ ಬಾಗ್ಯ... ಬೇರೆಲ್ಲದಕ್ಕಿಂತ ಇದೆ ದೊಡ್ಡದೆನಿಸಿದೆ..
ನಿಮಗು ನನ್ನಂತೆ ಅನುಭವ ಆಗಿದೆ ಹ ಹ ಹ
ಸುಧೇಶ್,
ಏನು ಮಾಡೋದು ಹೇಳಿ ಚಪ್ಪಲಿ ಏನೋ ಕಳೆದೋಯ್ತು ಹಾಗಂತ ನಾನು ತಲೆಕೆಡೆಸಿಕೊಂಡು ಕೂತ್ರೆ ನನ್ನ ತಲೆಗೆ ಬೇಜಾರಗಿ ತಲೆ ನೋವು ಬರಿಸಿಬಿಡುತ್ತೆ ಅಲ್ಲದೆ ಹೋದದ್ದು ಹೋಯ್ತು ಮತ್ತೆ ಬರುತ್ತಾ... ಹ ಹಾಹ..
ವಂದನೆಗಳು ನೀವು ಕಳೆದುಕೊಳ್ಳೊಕ್ಕೆ ಹೋಗಬೇಡಿ ಹಹಹ
ಸುನಾಥ್ ಸರ್,
ಏನೋ ದೊಡ್ಡೊರು ಹೇಳುತ್ತಾರೆ ಒಳ್ಳೆಯದೊಂದು ಸಿಗುತ್ತೆ ಅಂತ ನನಗೂ ಹಾಗೆ ಅನಿಸಿದೆ... ನನ್ನ ಅಪ್ಪ ಎಂದು ಯಾವತ್ತು ಅವರಾಗಿ ಬಟ್ಟೆ ಒಡವೆ, ಬೇರೇನೆ ವಸ್ತುವಾಗಲಿ ತರಲು ಬಂದವರೇ ಅಲ್ಲ ಆ ಕೆಲಸ ಏನಿದ್ದರು ಅಮ್ಮನಿಗೆ ಬಿಟ್ಟಿದ್ದು.... ಇದೆ ಮೂದಲಬಾರಿ ಅವರಾಗಿ ಬಂದು ಅದು ಬಲವಂತಮಾಡಿ ಕೊಡಿಸಿದ್ದು..
SSK ಅವರೆ,
ಹಿಂದಿನ ಸಂಚಿಕೆಯಲ್ಲಿ ನಿಮ್ಮನ್ನು ಮರೆತಿಲ್ಲ ಬ್ಲಾಗ್ ಸ್ನೇಹಿತರಾರನ್ನು ಮರತೆ ಇಲ್ಲ ಹ ಹ ಹ... ಹಾಗೂ ಕರೆದಿಲ್ಲ ಎಂದು ನಿಮಗನಿಸಿದರೆ ಇದು ಕಳೆದು ಕೊಂಡಿದ್ದಲ್ಲ ಎಲ್ಲೂ ಮರೆತಿರಬೇಕು.
ಮತ್ತೆ ಕಳೆದುಕೊಂಡರೇ ನನಗೆ ಕಷ್ಟ ಒಳ್ಳೇ ಸ್ನೇಹಿತರನ್ನ ನಾ ಎಂದು ಬಿಟ್ಟುಕೊಡೋಲ್ಲ... ನೀವು ನಮ್ಮ ಸ್ನೇಹಿತರು ಸದಾ ನಮ್ಮೊಂದಿಗಿರಿ
ವಂದನೆಗಳು
ದಿನಕರ್ ಸರ್,
ನಿಮಗೆ ಸ್ವಾಗತ ನನ್ನ ಬ್ಲಾಗ್ ಗೆ,ತುಂಬಾ ಚೆನ್ನಾಗಿದೆ ನಿಮ್ಮ ಮನೆಯವರ ಕಥೆ ಕೇಳಿ ನನಗೂ ನಗು ಬಂತು, ನನ್ನದು ನೋಡಿ ನಾ ಎಂದು ಕಳೆದುಕೊಂಡವಳಲ್ಲ ಈ ಬಾರಿ ಹಾಗೆ ಆಗಿಹೋಯ್ತು, ಅದು ಒಂದು ಜೊತೆ ಅಲ್ಲ ಎರಡು ಜೊತೆ ಒಂದೇ ದಿನ ಹ ಹ ಹ ಹ ಇದು ಮಾತ್ರ ನನಗೆ ಆಶ್ಚರ್ಯದ ಸಂಗತಿ ಮೊದಲ ಬಾರಿ ಹೋದಾಗ ಏನೋ ಕರ್ಮ ಕಳಿತು ಎಂದಾಗ ಇರಬಹುದು ಎಂದು ಸುಮ್ಮನಾದೆ ಎರಡನೇ ಬಾರಿ ಹೋದಾಗ ಎಲ್ಲೋ ಕರ್ಮ ಜಾಸ್ತಿ ಆಗಿ ಎಲ್ಲೇಮೀರಿತ್ತೇನೋ ಎಂದು ಸುಮ್ಮನಾಗುವಂತೆ ಮಾಡಿತು ನನ್ನ ಮನಸು ಹ ಹ ಹಾ ಹ ಹ ಹಹ .... ಹೀಗೆ ಬರುತ್ತಲಿರಿ
ಶಿವು,
ನೀವು ಒಪ್ಪುತ್ತೀರಾ ಆಗೋದೆಲ್ಲ ಒಳ್ಳೆಯದಕ್ಕೆಂದು ಹ ಹ ಹ ಹ ಹ...
ಚಪ್ಪಲಿ ಕಳ್ಳರಲ್ಲಿ ನಾಯಿಗಳೂ ಇಲ್ಲದಿಲ್ಲ..ಅಂದಹಾಗೆ ನೀವು ಹೋದ ಜಾಗದಲ್ಲಿ ನಾಯಿಗಳು ಈ ಕೆಲಸ ಮಾಡಿಲ್ಲ ಆಂತ ಖಾತ್ರಿ ಮಡ್ಕ್ಂಡ್ರ ಮನಸು ಮೇಡಮ್...ಮನಸಿಲ್ಲದ ಮನಸಿಂದ ಬೇರೆ ನೀವು ಚಪ್ಪಲಿ ಬಿಟ್ರಿ..ಎನಿವೇ..ಅಪ್ಪನ ಮೊದಲಸಲದ ಖರೀದಿಮಾಡಿದ ಚಪ್ಪಲಿಗಳ ಒಡತಿಯಾದಿರಿ ..ಅದೇ ಬೋನಸ್ ಅಂದುಕೊಳ್ಳಿ...
ಮನಸು...
ಇಂಥಹ ಸ್ಥಳಗಳಿಗೆ ಹಳೆ ಚಪ್ಪಲಿ ಹಾಕ್ಕೊಂಡು ಹೋಗಿ..
ಚಿಂತೆ ಇರುವದಿಲ್ಲ..
ನಿಮ್ಮ ಅನುಭವವನ್ನು ಸೊಗಸಾಗಿ ಉಣ ಬಡಿಸಿದ್ದೀರಿ..
ಚಂದದ ಬರಹಕ್ಕೆ ಅಭಿನಂದನೆಗಳು..
ಮನಸು,
ಇತ್ತೀಚಿಗೆ ದೇವಸ್ಥಾನಕ್ಕೆ ಹೋದ್ರೆ ಚಪ್ಪಲಿದೆ ಚಿಂತೆ, ದೇವರ ಗಿಂತ,
ಬರಹ ಚೆನ್ನಾಗಿದೆ
ಮನಸು ಅವರೇ..,
ನೀವು ಹೇಳಿದ ಹಾಗೆ ಆಗಿದ್ದೆಲ್ಲ ಒಳ್ಳೆಯದೇ ಎನ್ನಿರಿ..,
ಚಪ್ಪಲಿ ಕಳೆದರೆ ನಮ್ಮ ಪಾಪಗಳು ಕದ್ದವರಿಗೆ ಸೇರುತ್ತವೆಂದು ಕೇಳಿದ್ದೇನೆ....
ನಿಮ್ಮ ಚಪ್ಪಲಿ ಕದ್ದವರು ಆ 'ಬದುಕುವ ಕಲೆ' ಯನ್ನು ಅಲ್ಲಿನ "ಆರ್ಟ್ ಆಫ್ ಲಿವಿಂಗ್" ನಲ್ಲೆ ಕಲಿತರ?
-ಎ.ಕಾ.ಗುರುಪ್ರಸಾದಗೌಡ. --balipashu.blogspot.com..;hanebaraha@gmail.com
ಮನಸು ಅವರೇ...,
ನಿಮ್ಮಲ್ಲೊಂದು ಕೋರಿಕೆ.. ನನ್ನ ಬ್ಲಾಗ್ ವಿಳಾಸವನ್ನು ನಿಮ್ಮ ಬ್ಲಾಗ್ ನಲ್ಲಿ ಹಾಕಿಕೊಳ್ಳುವಿರ?
-ಎ.ಕಾ.ಗುರುಪ್ರಸಾದಗೌಡ. --balipashu.blogspot.com..;hanebaraha@gmail.com
ಜಲನಯನ ಸರ್,
ಅಲ್ಲಿ ನಾಯಿಗಳ ಕಾಟವಿರಲಿಲ್ಲ, ಜನಗಳ ಕಾಟವೇ ಜಾಸ್ತಿ ಇತ್ತು ಹ ಹ ಹ... ಹೌದು ಹೋದದ್ದು ಹೋಯ್ತು ಏನುಮಾಡುಕ್ಕೊ ಆಗೋದಿಲ್ಲ ಅಲ್ಲವಾ,
ಪ್ರಕಾಶಣ್ಣ
ನನಗೆ ಅಷ್ಟು ಗೊತ್ತಿರಲಿಲ್ಲ ಆಶ್ರಮದ ಬಗ್ಗೆ ನಾನು ಊರಿಗೆ ಹೋಗಿದ್ದೆನಲ್ಲ ಆಗ ನನ್ನ ಹತ್ತಿರ ಬೇರೆ ಹಳೆ ಚಪ್ಪಲಿ ಇರಲಿಲ್ಲ ಹಹಹಹ
ಗುರು,
ಹೌದು ದೇವರ ಪೂಜೆಕಡೆ ಗಮನವಿರದೆ ಚಪ್ಪಲಿಕಡೆ ಗಮನವಿರುತ್ತೆ ಅಲ್ಲವೇ..?\
ಗುರುಪ್ರಸಾದ್,
ಆಗೋದೆಲ್ಲ ಒಳ್ಳೆಯದಕ್ಕೆಂದು ಭಾವಿಸುವುದು ಒಳಿತು ಅಲ್ಲವೆ..? ಖಂಡಿತ ನಿಮ್ಮ ಬ್ಲಾಗ್ನಗೆ ಹಾಕಿಕೊಳ್ಳುವೆ..
ಎಲ್ಲರಿಗು ಧನ್ಯವಾದಗಳು
ಕಳೆದುದರ ಬಗ್ಗೆ ಚಿಂತಿಸಿದೆ, ಅದರಿಂದ ಪಡೆದುದರ ಬಗ್ಗೆ ಸಂತೋಷಪಡುವ ಗುಣ ಮನುಷ್ಯನಿಗಿದ್ದರೆ.. ಆಗುವುದೆಲ್ಲಾ ಒಳ್ಳೆಯದೆನಿಸಿಕೊಳ್ಳುತ್ತದೆ. ನಿಜಕ್ಕೂ ನಿಮ್ಮೊಂದಿಗೆ ಹಾಗೆ ಆದದ್ದು ಒಳ್ಳೆಯದೆನಿಸಿತು. ನಿಮ್ಮ ತಂದೆಯ ಕಾಳಜಿ, ಪ್ರೀತಿಯ ಅರಿವು ನಿಮಗಾಗಿ ಉಂಟಾದ ಸಂತಸದ ಮುಂದೆ ಆ ಎರಡು ಚಪ್ಪಲಿಗಳೇನು ಮಹಾ!!! ಅಲ್ಲವೇ?
ತೇಜಸ್ವಿನಿಯವರೆ,
ನಿಮ್ಮ ಅಭಿಪ್ರಾಯವು ನನ್ನ ಹಾಗೆ ಅಲ್ಲವೇ..? ನಿಜ ಅಪ್ಪ ಎಂದೂ ಬಾರದವರು ಅಂದು ಬಂದು ನನಗೆ ಚಪ್ಪಲಿಕೊಡಿಸಿದ್ದೆ ನನಗೆ ದೊಡ್ಡದು ಎರಡು ಜೊತೆ ಹೋದರೇನು ಎಂದೆನಿಸುತ್ತೆ..
ಧನ್ಯವಾದಗಳು
ಆಗೋದೆಲ್ಲಾ ಒಳ್ಳೇದಕ್ಕೆ!
ಈ ನಂಬಿಕೆಯಿಂದಲೇ, ಭರವಸೆಯಿಂದಲೇ ಬದುಕು ಅರಳುತ್ತದೆಯಲ್ಲವೇ.
ಭಗವದ್ಗೀತೆಯಲ್ಲೇ ಉಸುರಿದ್ದನ್ನು, ಈಗಿನ ಇಂಗ್ಲೀಶ್ ಪರ್ಸನಾಲಿಟಿ ಡೆವಲಪ್ ಮೆಂಟ್ ಎಂಬುದು ಪಾಸಿಟಿವ್ ಥಿಂಕಿಂಗ್ ಅಂತ ಹೇಳ್ಕೊಳ್ಳುತ್ತೆ.
ಆಗಿದ್ದೆಲ್ಲ ಒಳ್ಳೇದಕ್ಕೆ ಅನ್ಕೊಬಹುದು, ಹೇಗೂ ಅಪ್ಪ ಅವರ ಕೈಲಿ ಒಳ್ಳೇ ಗಿಫ್ಟ ಕೊಡಿಸಿಕೊಂಡ ಹಾಗೆ ಆಯ್ತಲ್ಲ, ಒಳ್ಳೇದಾಯ್ತು ಬಿಡಿ...
ಹ್ಮ್ ಇನ್ನೊಮ್ಮೆ ಆರ್ಟ್ ಆಫ್ ಲಿವಿಂಗ್ ಸೆಂಟರಗೆ ಹೋಗೊದಾದ್ರೆ ಹೇಳಿ, ನೀವಿಷ್ಟು ಖುಷಿ ಖುಷಿಯಾಗಿ ಕಳೆದುಕೊಳ್ತೀರಾ ಅಂದ್ರೆ ನಾನೇ ಎತ್ಕೊಂಡು ಹೋಗ್ತೀನಿ! ನನ್ನಾkಗೆ ಕೊಡೋಕೆ ಅಗತ್ತೆ :)
ಚಕೋರ ರವರೆ
ನಿಜ ನಂಬಿಕೆ ಬಾಳಿನ ಭದ್ರ ಬುನಾದಿ...ಧನ್ಯವಾದಗಳು ನಿಮ್ಮ ಅನಿಸಿಕೆಗೆ ಸದಾ ಬರುತ್ತಲಿರಿ...
ಪ್ರಭು,
ಹಹಹ ಹಾಗೆ ಮಾಡಿ ಕಳೆಯುವ ಮುನ್ನ ನಿಮಗೆ ಆಮಂತ್ರ ಕೊಡುವೆ ನಿಮ್ಮಾಕೆಗೆ ಕೊಡುವಿರಂತೆ..ಹಹ
ಎರಡೆರಡ್ಸಲಿ ಚಪ್ಲಿ ಕಳ್ಕೊಂಡಿದ್ರ ಬಗ್ಗೆ ನೋ ಕಮೆಂಟ್ಸ್ :D ಆದ್ರೂ, ಆಗೋದೆಲ್ಲಾ ಒಳ್ಳೇದಕ್ಕೆ ಅನ್ನೋವ್ರಲ್ಲಿ ನಾನೂ ಒಬ್ಳು, ಹಾಗಾಗೇ ನಿಮ್ಮ ಈ ಲೇಖನದ ಶೀರ್ಷಿಕೆ ಗಮನ ಸೆಳೀತು :)
ನಾನು ಅದೇ ಅಶ್ರಮದವನಾದ್ದರಿಂದ ಬಹಳ ಖುಷಿಯಾತು
ಅಜ್ಜಿ ಹೇಳೋಳು..ಚಪ್ಪಲಿ ಕಳೆದರೆ ಕರ್ಮ ಕಳೆದಹಾಗೆ ಅಂತ...
ನಾವು ಆಶ್ರಮದಲ್ಲಿ ಹವಾಯಿ ಚಪ್ಪಲಿ ಹಾಕಿಕೊಂಡು ತಿರುಗುತ್ತೇವೆ ..ಅದನ್ನು ಮುಟ್ಟುವ ಧೈರ್ಯ ಯಾರೂ ಮಾಡುವುದಿಲ್ಲ...ಅಕಸ್ಮಾತ್ ಮಾಡಿದರೆ ಅಲ್ಲಿ ಅನಾಥವಾಗಿ ಬಿದ್ದ ಬೇರೆ ಚಪ್ಪಲಿ ಹಾಕಿಕೊಂಡು ತೆಪ್ಪಗೆ ಮನೆಗೆ ಬರುತ್ತೇವೆ...ಮರುದಿನ ಅಲ್ಲೇ ವಾಪಸ್ ಬಿಟ್ಟಾಗ...ಆ ಚಪ್ಪಲಿಯ ಒಡೆಯ ಹೊತ್ತುಕೊಂಡು ಹೋಗುತ್ತಾನೆ...ಮತ್ತೆ ನಾನು...ಇನ್ನೊಬ್ಬರ ಚಪ್ಪಲಿ ಹಾಕಿಕೊಂಡು ಬರುವೆ....
mostly ನಿಮ್ಮ ಚಪ್ಪಲಿ ನನ್ನಂತವರೆ ಉಡೈಸಿರಬೇಕು...ಹ್ಹ ಹ್ಹ್ ಹಹ್ಹ
ನಾನು ಅದೇ ಅಶ್ರಮದವನಾದ್ದರಿಂದ ಬಹಳ ಖುಷಿಯಾತು
ಅಜ್ಜಿ ಹೇಳೋಳು..ಚಪ್ಪಲಿ ಕಳೆದರೆ ಕರ್ಮ ಕಳೆದಹಾಗೆ ಅಂತ...
ನಾವು ಆಶ್ರಮದಲ್ಲಿ ಹವಾಯಿ ಚಪ್ಪಲಿ ಹಾಕಿಕೊಂಡು ತಿರುಗುತ್ತೇವೆ ..ಅದನ್ನು ಮುಟ್ಟುವ ಧೈರ್ಯ ಯಾರೂ ಮಾಡುವುದಿಲ್ಲ...ಅಕಸ್ಮಾತ್ ಮಾಡಿದರೆ ಅಲ್ಲಿ ಅನಾಥವಾಗಿ ಬಿದ್ದ ಬೇರೆ ಚಪ್ಪಲಿ ಹಾಕಿಕೊಂಡು ತೆಪ್ಪಗೆ ಮನೆಗೆ ಬರುತ್ತೇವೆ...ಮರುದಿನ ಅಲ್ಲೇ ವಾಪಸ್ ಬಿಟ್ಟಾಗ...ಆ ಚಪ್ಪಲಿಯ ಒಡೆಯ ಹೊತ್ತುಕೊಂಡು ಹೋಗುತ್ತಾನೆ...ಮತ್ತೆ ನಾನು...ಇನ್ನೊಬ್ಬರ ಚಪ್ಪಲಿ ಹಾಕಿಕೊಂಡು ಬರುವೆ....
mostly ನಿಮ್ಮ ಚಪ್ಪಲಿ ನನ್ನಂತವರೆ ಉಡೈಸಿರಬೇಕು...ಹ್ಹ ಹ್ಹ್ ಹಹ್ಹ
Post a Comment