ಭುವಿಗಿಳಿದು ಬಾ ಎಂದು ಕರೆಯಲು
ಜನ್ಸ್ತೋಮ ಸಲ್ಲಿಸಿದವಂದು ಹೋಮ ಹವನಗಳು
ಒಂದಷ್ಟು ದಿನ ಕೆಂಡಾಮಂಡಲವಾದ ಭುವಿಗೆ
ಎಲ್ಲೆಲ್ಲೊ ಕಾಡಿತ್ತು ಹಸಿರ ಸಿರಿಗೆ ಬಂಜರು ನೆರಿಗೆ
ಮೋಹಕೋ ಮುನಿಸಿಗೋ ಮಳೆರಾಯ
ಇಳೆಯಿಂದ ಧರೆಗಿಳಿದು ಸುರಿಸಿದ್ದಾನೆ ಮಳೆಯ
ಭೀಕರ ಮಳೆಯಲಿ ಕಳೆದುಕೊಂಡಿವೆ ಜೀವರಾಶಿ ತಮ್ಮ ನೆಲೆಯ!!!!
ಭುಗಿಲೆದ್ದ ಆಹಾಕಾರಕೆ ನೀನೆ ಹೊಣೆ
ಮುಗ್ಧ ಜನತೆಗೇಕೆ ಹಿಂಸಿಸುವೆ ನಾ ಕಾಣೆ
ದಯೆನೀಡಿ ನಿನ್ನ ಪ್ರಲಾಪದಲಿರಲಿ ಕರುಣೆ!!!
ಆಗಸದೆಡೆ ಕುಳಿತು ನೋಡುತಿರುವೆಯಲ್ಲ
ಬಲಿಯಾದ ಹಸುಗೂಸುಗಳು ಕಾಣುತಿವೆಯಲ್ಲ
ಒಮ್ಮೆಲೆ ಧಗಧಗಿಸುವ ಆಕ್ರಂದವನು ಒತ್ತಿಸಿಬಿಟ್ಟೆಯಲ್ಲ
ವರುಣನ ಆರ್ಭಟಕೆ ನಲುಗುತಿಹುದು ಬಡಪಾಯಿ ಜೀವ
ಇತ್ತ ಸಮಯ ಸಾಧಿಸೋ ರಾಜಕೀಯರ ಮನೋಭಾವ
ಇದೆಲ್ಲದರಲಿ ಬಡಜೀವಿಯ ದಿನದ ಕೂಳಿಗೂ ಬಂದೊದಗಿದೆ ಅಭಾವ ...!!!
ಕಾಣದ ದೈವವೆ ಭುವಿಗಿಳಿದು ಬಾ ಒಮ್ಮೆ
ನಲುಗುತಿರುವವರ ಕೈಹಿಡಿದು ದಾರಿ ತೋರೊಮ್ಮೆ.....ಓ ದೈವವೆ ದಾರಿ ನೀಡೋಮ್ಮೆ!!!
19 comments:
ಕವನ ಸಮಯಕ್ಕೆ ಸರಿಯಾಗಿ ಬರದಿದ್ದಿರಿ.
ನಿಮ್ಮ ಕವನದಲ್ಲಿದ್ದಂತೆ ಪರಿಸ್ಥಿತಿ ಇದೆ.
"ಕಾಣದ ದೈವವೆ ಭುವಿಗಿಳಿದು ಬಾ ಒಮ್ಮೆ
ನಲುಗುತಿರುವವರ ಕೈಹಿಡಿದು ದಾರಿ ತೋರೊಮ್ಮೆ" ಸಾಲು ಹಿಡಿಸಿತು. ದೈವ ಇದೆಯೋ ಇಲ್ಲವೋ ಗೊತ್ತಿಲ್ಲಾ ಆದರೆ ಇದ್ದರೆ ಕಷ್ಟದಲ್ಲಿರುವವರನ್ನು ರಕ್ಷಿಸು..
Very Nice poem
ಮನಸು ಅವ್ರೆ..
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನೀವು ಪದಗಳನ್ನು ಅನಾವರಣ ಮಾಡಿರೋ ರೀತಿ ಇಷ್ಟವಾಗಿದೆ,ಹೊಸಹೊಸ ಪದಗಳ ಬಳಕೆ ತುಂಬಾ ಚೆನ್ನಾಗಿ ಆಗಿದೆ.
ಇವ್ರೇ,...
ನಿಮಗೆ ಇನ್ನೊದು ವಿಷಯನ ಹೇಳಬೇಕು ಅಂದುಕೊಂಡಿದ್ದೇನೆ,ನಾನು ನಿಮ್ಮ ಬ್ಲಾಗಿನಲ್ಲಿ ಕೆಲವು ಕನ್ನಡ ಪದಗಳು ತಪ್ಪುತಪ್ಪಾಗಿ ಮೂಡಿ ಬರುತ್ತಲೇ ಇರುವುದನ್ನು ಗಮನಿಸುತ್ತಿದ್ದೇನೆ.. ದಯವಿಟ್ಟು ಮುಂದಿನ ಬರಹದಲ್ಲಿ ತಪ್ಪಾಗದಂತೆ ಎಚ್ಚರವಹಿಸಿ.
---ಎ.ಕಾ.ಗುರುಪ್ರಸಾದಗೌಡ - www.balipashu.blogspot.com.; hanebaraha@gmail.com.
ನಿಮ್ಮ ಬೆಳ್ಲಂ ಬೆಳಗಿನ ಕನಸಿಗೆ ಮತ್ತು ಮಳೆರಾಯನಿಗೆ...ನನ್ನ ಅಭಿನಂದನೆಗಳು..
ಹೌದು ಬೆಳಿಗ್ಗೆಯ ಕನಸು ಕೊಡುವ ಮುದವೇ ಬೇರೆ..ನನ್ಗೆ ಬೆಬೆ ಕನಸುಗಳು..ನಿಜಾ ಆಗ್ತಾವೆ ಅಂತ ಕೇಳಿದ್ದು ನೆನಪು..ಮತ್ತೆ ನಿಮ್ಮ ಮನಸಿನ ಕನಸನ್ನು ಸವಿಗನಸು ಆವರಿಸಲಿ ಎಂದೇ ಹಾರೈಸಬಹುದು...
ಮಳೆರಾಯ ಬಂದರೆ ಬರಿಗೈಲಿ ಹೋಗಲಿಲ್ಲ ಒಳ್ಳೋಳ್ಳೆ ಮರನಾ ಕಡಿ ಬಂದ....ಕೆಲವೇ ತಿಂಗಳ ಹಿಂದೆ ಉತ್ತರ ಕರ್ನಾಟದ ಜನ ಮಳೆಗಾಗಿ ಜಪ-ತಪ ಈ ಗ ಬರುತ್ತಿರುವ ಮಳೆ ನಿಲ್ಲಲಿ ಎಂದು ..ಹೋಮ-ಹವನ...???ಚನ್ನಾಗಿದೆ..ಕವನ
ಮನಸು,
ಉತ್ತರ ಕರ್ನಾಟಕ ಮಳೆಯಿಂದ ತತ್ತರಿಸುತ್ತಿದೆ, ಸಮಯೋಚಿತ ಲೇಖನ,
ನೀವು ದೊಡ್ಡ ಕವಯತ್ರಿ ಆಗುತ್ತಿದ್ದಿರಿ , ಮುಂದುವರೆಯಲಿ ಕವನ
ಲಕ್ಷ್ಮಣ್ ಸರ್,
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು, ಏನು ಮಾಡೋದು ಹೇಳಿ ಕಾಣದೈವಕ್ಕೆ ಮೂರೆಹೋಗಬೇಕಿದೆ ಅಲ್ಲವೆ..?
ನಲುಗಿದ ಮನಕೆ, ದೇಹಕೆ ನಮ್ಮಲಾಗೋ ಸಹಾಯ ಮಾಡಬೇಕು ಹೊರನಾಡಲ್ಲಿ ನೆಲೆಸಿರೋ ಜನ ಸ್ವಲ್ಪವಾದರು ಸಹಾಯಮಾಡಿದರೆ ಒಳ್ಳೆಯದೆನಿಸುತ್ತೆ.
ವಂದನೆಗಳು
ಮಲ್ಲಿಕಾರ್ಜುನ್ ನಿಮಗೆ ಸ್ವಾಗತ ನನ್ನ ಬ್ಲಾಗ್ಗೆ
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಬರುತ್ತಲೇ ಇರಿ
ರಾಹುದೆಸೆ!!!
ನಿಮಗೂ ನಮ್ಮ ಧನ್ಯವಾದಗಳು, ನನಗೊ ತಿಳಿದಿಲ್ಲ ಫಾಂಟ್ ಏನಾದರು ತೊಂದರೆ ಇರಬೇಕೆನಿಸುತ್ತೆ ಮತ್ತೊಮ್ಮೆ ಪರಿಶೀಲಿಸುವೆ
ಜಲನಯನ ಸರ್,
ಧನ್ಯವಾದಗಳು ಹೊಸ ಹಾಗು ಹಳೆಯ ಕವನ ಓದಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ....
ಪ್ರಪಂಚದಲ್ಲಿ ಯಾವುದು ಏನೇ ಆಗಲಿ ಹೆಚ್ಚಾದರೂ ಕಷ್ಟ ಕಡಿಮೆಯಾದರೂ ಕಷ್ಟ ಅಲ್ಲವೆ..?
ಗುರು,
ಧನ್ಯವಾದಗಳು, ದೊಡ್ಡ ಕವಿಯತ್ರಿ ಹಹಹ ನಿಮ್ಮ ಆಶಯದಂತೆ ಆಗಲಿ... ಸದಾ ನಿಮ್ಮ ಹಾರೈಕೆ ಇರಲಿ.. ಉತ್ತರ ಕರ್ನಾಟಕ ಇಂದು ಜಲಪ್ರಳಯವಾಗಿ ನಿಂತಿದೆ ನಿಜಕ್ಕೂ ಅಲ್ಲಿನ ಜನರ ನೆನೆದರೆ ಸಂಕಟವೆನಿಸುತ್ತೆ....
ವಂದನೆಗಳು
ನಿಮ್ಮ ಕವನ ನಿಜಕ್ಕೂ ಮನಮೋಹಕವಾಗಿದೆ.... ಆ ಜನರ ನೋವು, ನಿಮ್ಮ ನರಳಿಕೆ, ಇದರಲ್ಲಿ ಕಾಣಿಸುತ್ತಿದೆ.... ಒಮ್ಮೊಮ್ಮೆ ಅನಿಸುತ್ತದೆ, ಇದೆಲ್ಲಾ ನಿಸರ್ಗದ ಕೋಪಕ್ಕೆ, ನಾವೇ ಕಾರಣ ಅಂತ.... ಮರವನ್ನು ಕಡಿಯುವುದು, ವಿಪರೀತ ಯಾತ್ರಿಕತೆಯ ಉಪಯೋಗ ಇದಕ್ಕೆಲ್ಲ ಕಾರಣ ಎನಿಸುತ್ತಿದೆ.....
ಮನಸು ಅವರೇ,
ಕವನ ಮನಸಿಗೆ ತಟ್ಟುವಂತಿದೆ...
ಈ ಸಾರಿಯ ಮಳೆಯಿಂದಾಗಿ ಜನ ಸಾವು, ನೋವು, ಸಂಕಸ್ಟಗಳನ್ನು ಅನುಭವಿಸುತ್ತಿದ್ದಾರೆ.
ಉದಾಹರಣೆಗೆ ನನಗೆ ಪರಿಚಯವಿದ್ದ ಒಬ್ಬ ವ್ಯಕ್ತಿ.. ಹೊಲದಲ್ಲಿ ತೊಗರಿ ಬೆಳೆ ಬೆಳದಿದ್ದ. ತೊಗರಿ ಉತ್ತಮವಾಗಿ ಬೆಳದಿತ್ತು. ಸ್ವಲ್ಪ ಸಾಲ ಮಾಡಿದ್ದ ಆ ವ್ಯಕ್ತಿ. ಈ ಸರಿ ತೊಗರಿ ಉತ್ತಮವಾಗಿ ಬೆಳದಿದ್ದರಿಂದ, ಸಾಲವನ್ನೆಲ್ಲ ತಿರಿಸಿಬಿಡಬಹುದು ಎಂದು ಕನಸುಕಂಡಿದ್ದ. ಆದರೆ ಮಳೆರಾಯನ ರುದ್ರನರ್ಥನದಿಂತ ಬೆಳೆಯಲ್ಲ ಹಾಳಾಗಿ ಹೋಯ್ತು.. ಕೇಳಿ ಪಾಪ ಅನ್ನಿಸ್ತು...
ಇದು ಒಬ್ಬ ವ್ಯಕ್ತಿಯ ವಿಷಯ....
ಮನಸು ಅವರೇ....
ಹ್ಮ್... ಜಯ೦ತ್ ಕಾಯ್ಕಿಣಿಯವರ ಮಳೆ ಕವನ ಓದಿಕೊ೦ಡು ಮಳೆ ಎ೦ದರೆ ಎಷ್ಟು ಸು೦ದರ ಎ೦ದು ಕನಸು ಕಾಣುತ್ತಿದ್ದ ನನಗೆ ಮಳೆಯ ಭೀಕರ ರೂಪದ ಅರಿವಾಗಿದೆ ಈಗ.... ನಿಮ್ಮ ಕವನ ಇಷ್ಟವಾಯಿತು ಮತ್ತು ಅದು ತು೦ಬಾ ಪ್ರಸ್ತುತವಾಗಿದೆ....ಕವನದ ಆಶಯ ನಮ್ಮ ಆಶಯ ಕೂಡ...
ದಿನಕರ್ ಸರ್,
ಪ್ರಕೃತಿ ವಿಕೋಪಕ್ಕೆ ನಾವುಗಳೇ ಕಾರಣ ಇಲ್ಲವಾದರೆ ಇಷ್ಟು ಅನುಭವಿಸಲು ಸಾಧ್ಯವಿಲ್ಲ.... ಬಡ ರೈತರ ಗತಿ ನೆನೆದರೆ ಭಯವಾಗುತ್ತೆ .. ಯಾವ ನೆಲೆಯೂ ಇಲ್ಲದೆ ಹೇಗಿರುತ್ತಾರೋ ತಿಳಿಯದು..
ಶಿವಪ್ರಕಾಶ್,
ನಿಮ್ಗೆ ಗೊತ್ತಿರೋ ಹಾಗೆ ಹೀಗೆ ಇನ್ನು ನಮಗೆಲ್ಲ ತಿಳಿಯದೆ ಇನ್ನೆಷ್ಟು ಇದವೋ ಅಲ್ಲವೆ..? ನಿಮ್ಮ ಊರು ಬಳ್ಳಾರಿ ಕಡೆ ಅಲ್ಲಿ ತುಂಬಾ ಸಾವು ನೋವು ನಷ್ಟಗಳಾಗಿರಬೇಕಲ್ಲವೇ..?
ಸುಧೇಶ್,
ಮಳೆ ಮಳೆ ಖುಷಿ ನೆನೆದೆ ಜೋರಾಗಿಬಿಟ್ಟಿದ್ದೆ ಮಳೆ... ಮಾನವನಿಂದ ತಡೆಯಲಾಗದಂತ ಅನಾಹುತಗಳು ನೆಡೆಯುತ್ತಲಿವೆ.. ಇದಕ್ಕೆಲ್ಲಾ ನಾವುಗಳು ಕೈಜೋಡಿಸಿ ಬಡವರಿಗೆ ನೊಂದವರಿಗೆ ಸಹಕರಿಸಬೇಕಷ್ಟೆ..
ಮನಸು ಮೇಡಮ್
ಕವನ ಪದಗಳ ಸರಿಯಾದ ಜೋಡಣೆಯಿಂದ ಸೊಗಸಾಗಿದೆ
ಕವನದ ಭಾವ ಸಮಯೋಚಿತವಾಗಿದೆ.
ಮನಸು ಮೇಡಮ್,
ಕೆಲಸದ ಒತ್ತಡದಿಂದ ತಡವಾಗಿ ಬರುತ್ತಿದ್ದೇನೆ. ಮಳೆರಾಯನ ಬಗ್ಗೆ ಬರೆದ ಕವನ ಪ್ರಸ್ತುತಕ್ಕೆ ಚೆನ್ನಾಗಿ ಸೂಕ್ತವಾಗುತ್ತದೆ...ಮತ್ತು ಸಮಯೋಜಿತವಾಗಿದೆ..
ರೂಪ, ಶಿವು ಸರ್.
ಧನ್ಯವಾದಗಳು
sundaravda kavana..maleya vipareethagallanu sariyaagi bannisiddiri..nimma baravanige isthavahitu
ಮನಸು....
ಬಹಳ ಸೊಗಾಸದ ಕವಿತೆ...
ನಿಮಗೆ ಕಡಿಮೆ ಶಬ್ಧಗಳಲ್ಲಿ ಭಾವಗಳನ್ನು ಹಿಡಿದಿಡುವ ಕಲೆ
ಒಲಿದಿದೆ...
ಅಭಿನಂದನೆಗಳು...
your verse has rightly depicted the devastation caused by heavy rain. i was in Dharwad to assist in relief activities.
ಪದ್ಯದ ಜತೆಗಿನ ಚಿತ್ರ ತುಂಬ ಅಂದವಾಗಿದೆ
ಹೀಗೆ ಬರೆಯುತ್ತ ಇರಿ.
:-)
ಮಾಲತಿ ಎಸ್.
ಸ್ನೋ ವೈಟ್...
ನಿಮ್ಮ ಅಭಿಪ್ರಾಯಕ್ಕೆ ಹಾಗು ನಮ್ಮ ನನ್ನ ಭಾವನೆಗೆ ಸ್ಪಂದಿಸಿದ ನಿಮಗೆ ಧನ್ಯವಾದಗಳು.
ಪ್ರಕಾಶಣ್ಣ,
ಮನುಷ್ಯನ ಭಾವನೆಗಳಿಗೆ ಮೀರಿದ ಆಘಾತವನ್ನು ಮಳೆರಾಯ ತಂದೊಡ್ಡಿದ್ದಾನೆ ಅಲ್ಲವೆ..
ಧನ್ಯವಾದಗಳು.
ಮಾಲತಿ,
ನೀವು ದಾರವಾಡಕ್ಕೆ ಹೋಗಿ ಅಲ್ಲಿನವರಿಗೆ ಸಂತೈಸಿದ್ದು ಸೇವೆ ಸಲ್ಲಿಸಿದ್ದು ಬಹಳ ಖುಷಿ ಹಾಗು ಸಂತಸದ ವಿಷಯ,ನಿಮ್ಮ ಸಹಾಯ ಹಲವರಿಗೆ ಒಳ್ಳೆಯದನ್ನು ಮಾಡಿರುತ್ತೆ.
ಧನ್ಯವಾದಗಳು
ಮರಳುಗಾಡಿನಿಂದ ಮಳೆಯ ಬಗ್ಗೆ ಬರೆದಿದ್ದೀರಿ... ಇಲ್ಲೊ ಹುಚ್ಚೆದ್ದು ಸುರಿದ ಮಳೆ, ಹಾಳು ಮಾಡಿ ಹೋಗಿದ್ದಂತೂ ನಿಜ...
ಮೋಹಕೋ ಮುನಿಸಿಗೋ ಮಳೆರಾಯ
ಇಳೆಯಿಂದ ಧರೆಗಿಳಿದು ಸುರಿಸಿದ್ದಾನೆ
ಅನ್ನೊ ಸಾಲು ನಿಜವೇನೊ, ಯಾಕೆ ಒಮ್ಮೆಲೆ ಬರಗಾಲ ವಿದ್ದದು, ನೀರ ನಡುಗಡ್ಡೆ ಆಯಿತೋ ಗೊತ್ತಿಲ್ಲ...
ಬಹಳ ಸುಂದರ ಕವನ, ಹೀಗೆ ಬರುತ್ತಿರಲಿ ಕವನಗಳು, ಹಾಗೆ ದೀಪಾವಳಿಯ ಶುಭಾಶಯಗಳು.
ಪ್ರಸಕ್ತ ಸನ್ನಿವೇಶಕ್ಕೆ ಕನ್ನಡಿ ಹಿಡಿದಿದೆ...
Post a Comment