Tuesday, December 22, 2009

ಅವಳದೇ ನೆನಪು..!!! ನೈಜ ಕತೆ!!!

ಅವಳ ನೆನಪು ಕಾಡುತಿತ್ತು... ನನಗಲ್ಲ!!?.. ಮತ್ತ್ಯಾರಿಗೆ...? ಎಂದು ಪ್ರಶ್ನಿಸುತ್ತೀರಾ ಈ ಲೇಖನವನ್ನು ಓದಿ ನೀವೇ ಉತ್ತರಿಸಿ ಯಾರಿಗೆ ನೆನಪಿನ ಪುಟ ತೆರೆದಿದ್ದು ಎಂದು.


ಚಂದ್ರು ಮತ್ತು ಚಂದನ ಲಿಂಗನೂರಿ (ಹೆಸರು ಬದಲಿಸಲಾಗಿದೆ) ೧ ರಿಂದ ೭ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದುತ್ತಲಿರುತ್ತಾರೆ ಇಬ್ಬರು ಬಹಳ ಒಳ್ಳೆ ಸ್ನೇಹಿತರು ಇವರಿಬ್ಬರ ಸ್ನೇಹದಿಂದ ಇವರುಗಳ ತಾಯಂದಿರೂ ಸಹ ಒಳ್ಳೆ ಸ್ನೇಹಿತರಾಗುತ್ತಾರೆ. ೮ನೇ ತರಗತಿಗೆ ಇಬ್ಬರು ಬೇರೆ ಶಾಲೆಗೆ ಸೇರಿಕೊಳ್ಳುತ್ತಾರೆ, ಶಾಲಾ ಬದಲಾವಣೆಯಿಂದ ಇಬ್ಬರ ಭೇಟಿ ಕಡಿಮೆ ಆದರೂ ಶಾಲೆಗೆ ಹೋಗುವಾಗ ಬರುವಾಗ ಸಿಗುತ್ತಿದ್ದರು ಇಬ್ಬರು ಪರಸ್ಪರ ಮಾತನಾಡುತ್ತಲಿದ್ದರು, ಸ್ನೇಹಿತರ ಭೇಟಿಗೇನು ಕೊರತೆಯಾಗಲಿಲ್ಲ.

ಹೀಗಿದ್ದ ಸ್ನೇಹ ಇದ್ದಕ್ಕಿದ್ದ ಹಾಗೆ ಚಂದ್ರುಗೆ ಚಂದನಳ ಭೇಟಿ ಕಡಿಮೆಯಾಗುತ್ತ ಬರುತ್ತಲಿತ್ತು, ಹೀಗೆ ದಿನ ಕಳೆದಂತೆ ದೂರವಾದರು, ಚಂದ್ರುವು ತನ್ನ ವಿದ್ಯೆಯೆಡೆ ಗಮನ ಕೊಟ್ಟು ಎಸ್.ಎಸ್.ಎಲ್.ಸಿ ಮುಗಿಸಿ ಕಾಲೇಜಿಗೆ ಸೇರಿದ ನಂತರ ಅಲ್ಲಿ ೧ರಿಂದ ೭ರವರೆಗೆ ಓದುತ್ತಲಿದ್ದ ಮತ್ತೊಬ್ಬ ಸ್ನೇಹಿತ ರಾಜೇಶ್ ಎಂಬವ ಸಿಕ್ಕಿದ್ದೆ ಇವನಿಗೆ ಎಲ್ಲಿಲ್ಲದ ಖುಷಿ ಅವರಿಬ್ಬರೂ ಸಹ ಒಳ್ಳೆ ಸ್ನೇಹಿತರಾಗಿದ್ದರು. ಹೀಗೆ ಕೆಲವುದಿನಗಳು ಕಳೆದ ನಂತರ ಆ ಚಂದನ ಇರುತ್ತಿದ್ದ ಮನೆಯತ್ತಿರ ಹೋಗಿ ಅದೇ ರಸ್ತೆಯಲ್ಲಿ ೩,೪ ಬಾರಿ ಸುತ್ತಾಡಿ ಬರುತ್ತಾನೆ, ಆದರೆ ಆ ಮನೆಯ ಹತ್ತಿರ ಯಾರು ಕಾಣಲಿಲ್ಲ , ಇತ್ತ ಆ ಸ್ನೇಹಿತೆ ಚಂದನಳ ಬಗ್ಗೆ ರಾಜೇಶ್ ಹತ್ತಿರ ವಿಚಾರಿಸಿದ ಆದರೆ ರಾಜೇಶ್ಗ್ ಅವಳ ಬಗ್ಗೆ ಗೊತ್ತಿರಲಿಲ್ಲ ಅವರ ಮನೆ ಹತ್ತಿರ ಹೋಗಿ ಕೇಳಿದರೆ ಗೊತ್ತಾಗುತ್ತದೆ ಎಂದ, ಸರಿ ಎಂದು ಚಂದ್ರು ಮತ್ತೆರಡುದಿನ ಬಿಟ್ಟು ಅವಳ ಮನೆ ಹತ್ತಿರ ಹೋಗಿ ಅದೇ ಆ ಚಂದನಳಿದ್ದ ಮನೆಯ ಬಾಗಿಲನ್ನು ತಟ್ಟಿದ ಬಹಳ ಖುಷಿಯಿಂದ ಅಂದು ನಾನೇನೋ ರಸ್ತೆಯಲ್ಲಿ ನೋಡುತ್ತ ಹೋದೆ ಇಂದು ಇವರ ಮನೆಗೆ ಬಂದಿರುವೆ ಅವರ ಅಮ್ಮ ಅಥವಾ ಚಂದನ ಬರಬಹುದು ಎಂದು ಸಂತಸದಿಂದಿರುವಾಗ ಯಾವುದೋ ಒಂದು ವಯಸ್ಸಾದ ಅಜ್ಜಿ ಬಾಗಿಲು ತೆರೆದಾಗ ಬಹಳ ಬೇಸರವಾಯಿತು ಚಂದ್ರುವಿಗೆ, ನಂತರ ಆ ಸ್ನೇಹಿತೆಯ ಮನೆಯವರ ಬಗ್ಗೆ ವಿಚಾರಿಸಿದಾಗ ಅವರು ಇಲ್ಲಿಲ್ಲ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಿದ ಕೂಡಲೇ ಈ ಚಂದ್ರುವಿಗೆ ಎಲ್ಲಿಲ್ಲದ ನೋವು ಹೃದಯಭಾರವಾದಂತೆ ಮನೆಯತ್ತ ಮುಖಮಾಡಿದ.

ನೆನಪುಗಳ ಮಾತು ಮಧುರಾ ಎಂಬಂತೆ....ಅವಳ ನೆನಪಲ್ಲೇ ತನ್ನ ಕಾಲೇಜ್ ಮುಗಿಸಿ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಂಡ ಆಗೊಮ್ಮೆ ಈಗೊಮ್ಮೆ ಚಂದನಳ ನೆನಪು ಮಾಡಿಕೊಳ್ಳುತ್ತಾ ತನ್ನ ವಿದ್ಯಾಭ್ಯಾಸ ಮುಗಿಸಿದ.

ವಿದ್ಯಾಭ್ಯಾಸ ಮುಗಿಸಿ ಕೆಲಸ ಎಲ್ಲವೂ ಸಿಕ್ಕಿತು, ತನ್ನ ಜೀವನ ಸಂಗಾತಿ ಹಾರಿಸಿಕೊಳ್ಳುವ ವೇಳೆ ಮನೆಮಂದಿಯೆಲ್ಲ ಒಪ್ಪಿ ಒಂದು ಮದುವೆ ಮಾಡಿಯೇಬಿಟ್ಟರು, ಮದುವೆಯಾದ ೫ವರ್ಷಗಳ ನಂತರ ವಿದೇಶಕ್ಕೆ ಪ್ರಯಾಣ ಬೆಳೆಸಿದ ಇಷ್ಟೆಲ್ಲಾ ತನ್ನ ಜೀವನದಲ್ಲಿ ನೆಡೆದರೂ ತನ್ನ ಸ್ನೇಹಿತೆಯನ್ನು ಮರೆಯಲಿಲ್ಲ. ಇಷ್ಟು ಜೀವನ ಸಾಗಿಸುವಷ್ಟರಲ್ಲಿ ಆರ್ಕೊಟ್ ಎಂಬ ಸ್ನೇಹ ಜಾಲ ಸಂಪರ್ಕದ ಮಹಾ ಮಾಯೆ ಬಂದುಬಿಟ್ಟಿತ್ತು ಇದೇ ಸಮಯದಲ್ಲಿ ಚಂದ್ರು ಆರ್ಕೂಟ್ ಮಾಯೆಗೆ ಹೆಜ್ಜೆ ಇಟ್ಟಿದ್ದ ಇದೇ ಜಾಲದಿಂದ ತನ್ನ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಸೇರಿದನು, ಅಲ್ಲಿ ತನ್ನ ಸ್ನೇಹಿತೆಯ ಹೆಸರಿರಬಹುದೆಂದು ಹುಡುಕಿದ ಹುಡುಕಿದ ಆಗ ದಪ್ಪಗೆ ಒಳ್ಳೆ ಟಮೆಟೋ ಹಣ್ಣಿನಂತಿದ್ದಳು ಈಗ ಹೇಗಿರಬಹುದು ಹಾ!!! ಅವಳ ಅಣೆಯ ಮೇಲೊಂದು ಬಿದ್ದು ಗಾಯಮಾಡಿಕೊಂಡಿದ್ದ ಗುರುತಿತ್ತು ಎಂದು ಆ ಹಳೆ ವಿದ್ಯಾರ್ಥಿಗಳ ಕೂಟದಲ್ಲಿದ್ದ ಹೆಂಗಳೆಯರ ಫೋಟೋ ತಿರುಗಿಸಿ ಮರುಗಿಸಿ ನೋಡಿದ್ದೇ ನೋಡಿದ್ದು ಸಿಗಲೇ ಇಲ್ಲ..... ಆನಂತರ ಆರ್ಕೊಟಿನಲ್ಲಿನ ಹುಡುಕುವ ಪ್ರಪಂಚಕ್ಕೆ ಹೋಗಿ ಅಲ್ಲಿ ಆಕೆಯ ಹೆಸರು ಕೊಟ್ಟು ಹುಡುಕಿದನು ನಂತರ ಕುಟುಂಬದ ಹೆಸರಾದ ಲಿಂಗನೂರಿ ಎಂಬ ಹೆಸರನ್ನು ಕೊಟ್ಟು ಹುಡುಕಿ ಹುಡುಕಿ ಸುಸ್ತಾದನು.... ಇಷ್ಟೆಲ್ಲಾ ನೆಡೆಯಿತು ಪಾಪ ಫಲಕಾರಿಯಾಗಲಿಲ್ಲ....

ಇಷ್ಟುದಿನ ಸುಮ್ಮನಿದ್ದ ಈ ಚಂದ್ರು ನಂತರ ಬ್ಲಾಗ್ ಪ್ರಪಂಚಕ್ಕೆ ಹೆಜ್ಜೆಯಿಟ್ಟಾಗ ಆ ಪ್ರಪಂಚದಲ್ಲಿ ಹತ್ತು ಹಲವು ಜನರು ತಮ್ಮ ಜೀವನದ ಹೊಸ ಹಳೆ ಕಥೆಗಳನ್ನು ಬಿತ್ತರಿಸುವುದ ಕಂಡು, ಈತನಿಗೂ ಪ್ರೇರಣೆಯಾಯಿತೇನೋ ಮೊದಲು ಹೆಂಡತಿಯತ್ತಿರ ಬಂದು ಇಷ್ಟು ದಿನದ ಗುಟ್ಟನ್ನು ರಟ್ಟು ಮಾಡಿಬಿಟ್ಟ. ಇದು ಏಕೆ ರಟ್ಟು ಮಾಡಿದನೆಂದರೆ ಬ್ಲಾಗಿಗೆ ಹಾಕುವ ಮುನ್ನ ಹೆಂಡತಿಗೆ ಗೊತ್ತಿದ್ದರೆ ಚೆನ್ನ ಇಲ್ಲವಾದರೆ ಪ್ರಪಂಚಕ್ಕೆ ಗೊತ್ತಾದಮೇಲೆ ನನಗೇನು ನೀವು ಹೇಳುವುದು ಬೇಡವೆಂದು ಬಿಡುವಳೆಂದೋ ಏನೋ ಮೊದಲೇ ಹೇಳಿ ಸಂಕಷ್ಟದಿಂದ ಪಾರಾದನು ಹಹಹಹ.ಶುಭದಿನ

36 comments:

ಆನಂದ said...

ಮನಸು ಮೇಡಂ, ಮಹೇಶ್ ಸರ್ ಏನಾದ್ರೂ ಹಳೇ ಕಥೆ ಹೇಳಿದ್ರಾ..... ಚೆನ್ನಾಗಿದೆ.
ನೋಡೋಣ, ಬ್ಲಾಗಿಗೆ ಹಾಕ್ತಾರಲ್ವಾ?

Snow White said...

ಕಥೆ ತುಂಬಾ ಚೆನ್ನಾಗಿದೆ ಮೇಡಂ...ಅವರ ಚಿಕ್ಕಂದಿನ ಗೆಳತಿ ಅವರಿಗೆ ಬೇಗ ಸಿಗಲಿ ಅಂದು ಬಯಸುವೆ :)

ನನ್ನ ಬ್ಲಾಗ್ ನಲ್ಲಿ ಏನು ತೊಂದರೆ ಎಂದು ನನಗೆ ಗೊತ್ತಾಗುತ್ತಿಲ್ಲ ಮೇಡಂ...ಇಂಗ್ಲಿಷ್ ನಲ್ಲಿ ಕಾಮೆಂಟ್ ಮಾಡಲಾಗುತಿದ್ದರೆ ಹಾಗೆ ಮಾಡಿ

sunaath said...

ಮನಸು,
ಕತೆ ಮುಂದುವರಿದು ಶುಭಾಂತ್ಯವಾಗಲಿ ಎಂದು ಹಾರೈಸುತ್ತೇನೆ.

ದಿನಕರ ಮೊಗೇರ.. said...

ಮನಸು ಮೇಡಂ,
ಹ ಹಾ ಹಾ.... ಚೆನ್ನಾಗಿದೆ..... ಇ ಕಥೆ ಮಹೇಶ್ ಸರ್ ಬಗ್ಗೆ ಅಂತ ಯಾಕೋ ಅನಿಸಲಿಕ್ಕೆ ಶುರು ಆಗಿತ್ತು ...... ಅವರ ಕಥೆಗೆ ಸುಖ ಅಂತ್ಯವಾಗಲಿ..... ಸ್ನೇಹ ಗೆಲ್ಲಲಿ....

ಶಿವಪ್ರಕಾಶ್ said...

ಹ್ಹ ಹ್ಹ ಹ್ಹ...
ಅವರಿಗೆ ಆರ್ಕುಟ್ನಲ್ಲಿ ಕೂಡ ಬಾಲ್ಯದ ಗೆಳತಿ ಸಿಗಲೇ ಇಲ್ಲ..
ಆದದ್ದೆಲ್ಲ ಒಳ್ಳೇದಕ್ಕೆ ಬಿಡಿ..
ಅಂತು ಬಾಲ್ಯಗೆಳತಿಯ ಬಗ್ಗೆ ಹೆಂಡತಿಗೆ ಹೇಳಿದರಲ್ಲ. ಹೇಳದೆ ಹಾಕಿದ್ದಾರೆ ಮೂರನೇ ಮಹಾಯುದ್ದ ಆಗುತ್ತಿತ್ತೇನೋ... :D

jithendra hindumane said...

ಮನಸು ಮೇಡಂ, ತುಂಬಾ ಚೆನ್ನಾಗಿದೆ ಮುಂದುವರಿಯತ್ತೆ ತಾನೇ? ಫೋಟೋ ಸಕತ್ತಾಗಿದೆ....!

manamukta said...
This comment has been removed by the author.
manamukta said...

ಏನೊ ಹೆಣೆದಿದ್ದಾರೆ ಸೇರಿ ಮನಸು (ಸವಿ)ಕನಸು...
ಮನಸು ಕನಸುತ್ತಿದೆ ನಮ್ಮೆಲ್ಲರ ಬೇಸ್ತುಗೊಳಿಸುವ ನನಸು...
ಬರೆದರೇನಾದರೂ commentsu...
ಹಹಹ ಎನ್ನುವರು ಬೇಸ್ತುಗೊಳಿಸಿ ಮನಸು..ಸವಿಗನಸು...

ಮು೦ದಿನ ಸ೦ಚಿಕೆ ಬೇಗ ಬರಲಿ..

ಗೌತಮ್ ಹೆಗಡೆ said...

munda? bega barli:)

ಚುಕ್ಕಿಚಿತ್ತಾರ said...

ಅರ್ಥ ಆದ೦ತೆ ಅನಿಸುತ್ತೆ.ಆದ್ರೂ ನೀವೇ ಹೇಳ್ಬಿಡಿ...

ಮನಸು said...

ಆನಂದ್,
ಹಳೇ ಕಥೆ ಏನು ಇದು ಹೊಸ ಕಥೆ ಹಹಹಹ..... ಅವರು ಬ್ಲಾಗಿಗೆ ಆಕೋಲ್ಲ ಅಂತಾನೇ ನಾನು ಹಾಕಿದ್ದು... ಇಂತಹ ಕಥೆಗಳು ಎಷ್ಟೋ ಜನರಲ್ಲಿ ಹುದುಗಿಹೋಗಿರುತ್ತೆ ಅಲ್ಲವೆ...?
ವಂದನೆಗಳು

ಮನಸು said...

ಸ್ನೋ ವೈಟ್,
ಧನ್ಯವಾದಗಳು, ಇದು ಕಥೆಯಲ್ಲ ಜೀವನ ಹಹಹಹ ... ನಾನು ಸಹ ಆ ಗೆಳತಿ ಸಿಗಲೆಂದು ಆಶಿಸುತ್ತೇನೆ. ನನ್ನವರು ಏನನ್ನು ಅಷ್ಟು ಇಷ್ಟವಾಗಲಿ ಆಸೆಯಾಗಲಿ ಯಾವುದನ್ನು ಬಯಸೋಲ್ಲ ಇಂತಹ ಒಳ್ಳೆ ಸ್ನೇಹಿತೆಯ ಬಯಸಿದರೆ ನನಗೂ ಖುಷಿ...

ಮನಸು said...

ಸುನಾಥ್ ಸರ್,
ಹೇಗೆ ಮುಂದುವರಿಸಲಿ ಕಥೆಯನ್ನ..... ಆರಂಭನೇ ಆಗಿಲ್ಲ ಹಹಹಹಹ... ಆ ಸ್ನೇಹಿತೆ ಸಿಕ್ಕರೆ ತಾನೇ ಸುಗುತ್ತಿಲ್ಲ ನಿಮ್ಮಗೇನಾದರು ಸಿಕ್ಕರೆ ತಿಳಿಸಿಬಿಡಿ ಹಹಹ.

ಮನಸು said...

ದಿನಕರ್ ಸರ್,
ಹೌದು ಈ ಕಥೆ ಮಹೇಶ್ ಅವರದೆ ಆದರೆ ಇದು ನಾನು ಬರೆದ ಅವರ ಕಥೆ ಹಹಹ..... ಸ್ನೇಹ ಗೆಲ್ಲಲಿ ಎಂದು ಬಯಸುತ್ತೇನೆ ಆ ಸ್ನೇಹಿತೆ ಸಿಕ್ಕರೆ ನನಗೂ ಸಂತಸ ನನ್ನವರಿಗೂ ಅತಿಯಾದ ಸಂತಸ.
ವಂದನೆಗಳು

ಮನಸು said...

ಶಿವು,
ಏನು ಮಾಡೋದು ಮಾಮಯ್ಯನಿಗೆ ಸ್ವಲ್ಪ ಸಹಾಯ ಮಾಡಪ್ಪ.....ಹಹಹ... ನೀ ಹೇಳಿದೆ ಅಂತಾ ನಾನು ತಿಳಿದುಕೋತೀನಿ ಆಗೋದೆಲ್ಲ ಒಳ್ಳೇಯದಕ್ಕೆಂದು...ಹಹಹ ನಿಜವೆಂದರೆ ನನ್ನವರು ನನ್ನಲ್ಲಿ ಯಾವುದೇ ರಹಸ್ಯ ಅಥವಾ ಗುಟ್ಟನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ.
ಮೂರನೇ ಮಹಾಯುದ್ಧನಾ ಇಲ್ಲ ಅಂತಹದೇನು ನೆಡೆಯೋಲ್ಲ... ಆ ಮಹಾಯುದ್ಧಕ್ಕೆ ಯಾರು ಕತ್ತಿ ಗುರಾಣಿ, ಬಂದೂಕು ಎಲ್ಲ ತಂದುಕೊಡೋರು ಹಹಹ... ಬರಿ ಸೌಟು, ಹಿಟ್ಟಿನ ಕೋಲು, ಇಂತಹವಷ್ಟೆ ಇರೋದು ಹಹಹ..........ನಮ್ಮ ಮನೆಯಲ್ಲಿ....

ಮನಸು said...

ಜಿತೇಂದ್ರ ಅವರೆ,
ಧನ್ಯವಾದಗಳು ಕಥೆಯನ್ನ ಮೆಚ್ಚಿದ್ದಕ್ಕೆ ಹಹಹ.... ಏನು ಮುಂದುವರಿಸಲಿ ಹೇಳಿ... ಆರಂಭವಾಗಲೇ ಇಲ್ಲ ಮುಂದುವರಿಸಲು ಈಗ ಸದ್ಯಕ್ಕೆ ಕೈಬಿಟ್ಟಿದ್ದಾರೆ ಹುಡುಕುವ ಕೆಲಸವನ್ನು... ಮತ್ತೆಂದು ಪ್ರಾರಂಭಿಸುತ್ತಾರೋ ನೋಡೋಣ.

ಮನಸು said...

ಸವಿಕನಸಿನ ಹುಡುಕುವಿಕೆಯ ಕನಸನ್ನ ಕಥೆಯಾಗಿಸಿರುವೆ.... ಯಾವ ಹೊಸಜೋಡಣೆಯ ಸರಮಾಲೆ ಇಲ್ಲ ಹಾಹಹ....
ಮುಂದಿನ ಸಂಚಿಕೆಗೆ ನಾನೇ ಏನಾದರು ಸೃಷ್ಟಿಸಿ ಬರೆದರೆ ಮುಂದುವರಿವುದು ಹಹಹ

ಮನಸು said...

ಗೌತಮ್,
ಬೇಗ ಬರಲಿ ಅಂತೀರಾ... ಆಕೆ ಇವರಿಗೆ ಸಿಕ್ಕರೆ ಖಂಡಿತ ಮುಂದುವರಿಸುವೆ ಈ ಕಥೆಯನ್ನು ಹಹಹ...

ಮನಸು said...

ಚುಕ್ಕಿಚಿತ್ತಾರ,
ಅರ್ಥ ಆಯ್ತೆ, ಹಹಹ ಹಾಗಿದ್ದರೆ ನಾ ಏನು ಹೇಳಲಿ ಹೇಳಿ... ಇನ್ನು ಯಾವುದಾದರು ಹೊಸದಾಗಿ ಮನೆಯಲ್ಲೇ ಇರುತ್ತಾರಲ್ಲ ಯಾವ ಅಂತರ್ಜಾಲದ ಗಂಧವಿರದೆ ಅಂತವರ ಹೆಸರನ್ನು ಗುರುತಿಸಿ ಕಂಡು ಹಿಡಿಯುವ ಸಾಧನ ಬರಬೇಕು ಆಗ ಆ ಸ್ನೇಹಿತೆ ಸಿಗಬಹುದೇನೋ... ಏನು ಹೇಳುತ್ತೀರಿ.ಹಹಹ

ಸೀತಾರಾಮ. ಕೆ. said...
This comment has been removed by the author.
ಸೀತಾರಾಮ. ಕೆ. said...

ಕತೆ ಮುಂದುವರಿದು ಶುಭಾಂತ್ಯವಾಗಲಿ

shivu said...

ಮನಸು ಮೇಡಮ್,

ಇದು ಕತೆಯೋ ಅಥವ ನಿಜವಾಗಿ ನಡೆದಿದ್ದೋ...

ಒಟ್ಟಾರೆ ತುಂಬಾ ಕುತೂಹಲವಾಗಿ ಚೆನ್ನಾಗಿದೆ. ಮುಂದೇನಾಯ್ತು ಅನ್ನುವ ಕುತೂಹಲವಿದೆ...ಬೇಗ ಹಾಕಿ,...

ಮನಸು said...

ಸೀತಾರಾಮ್ ಸರ್,
ಸ್ನೇಹಿತೆ ಸಿಕ್ಕರೆ ಖಂಡಿತಾ ಮುಂದುವರಿಸುವೆ ಹಹಹ.

ಶಿವು ಸರ್,
ನಿಜ ಕಥೆ ಇದು ಹಹಹ ಮುಂದೆನಾಯ್ತು ಎಂದು ಏನು ಹೇಳಲಿ ಆ ಪ್ರೀತಿಯ ಸ್ನೇಹಿ ಸಿಗಲೇ ಇಲ್ಲ ಇನ್ನು ಹುಡುಕಾಟದಲ್ಲಿದ್ದಾರೆ ಸಿಕ್ಕ ಕೂಡಲೇ ತಿಳಿಸುವೆ.
ವಂದನೆಗಳು.

ತೇಜಸ್ವಿನಿ ಹೆಗಡೆ- said...

ಕಥೆಯ ಸುಂಖಾತ್ಯಕ್ಕಾಗಿ ಹಾರೈಸುವೆ. ಕಾಯುತ್ತಿರುವೆ ಕೂಡ :)

Creativity!! said...

ಆ ಗೆಳತಿ ಮತ್ತೆ ಸಿಗಲಿ ಎಂದು ಆಶಿಸುತ್ಹೇನೆ. ಬಹಳ ಸುಂದರವಾಗಿ ವರ್ಣ್ನಿಸಿಧೀರ :) :)

Divya Hegde said...

ಹಾಯ್ ಮನಸು ಅವರೇ,
ಮಹೇಶ್ ಸರ್ ಒಳ್ಳೇದು ಮಾಡಿದ್ರು ನಿಮಗೆ ಹೇಳಿ..
ಅವರ ಗೆಳತಿ ಸಿಗಲಿ ಅಂತ ಹಾರೈಸುತ್ತೇನೆ....(ಮತ್ತೊಮ್ಮೆ ಬೇಡ ಎಂದೂ ಏಕೆಂದರೆ ನಿಮ್ಮ ಮೇಲೆ interest ಕಡಿಮೆ ಆದೀತೆಂದು ....)ಹ ಹ ಹ...ಸುಮ್ಮನೆ ಹೇಳಿದೆ...
ಚೆಂದದ ಬರಹ...:):)

Laxman (ಲಕ್ಷ್ಮಣ ಬಿರಾದಾರ) said...

ಮನಸುರವರೆ,
ಬರಹ ಚೆನ್ನಾಗಿದೆ, ಸ್ನೇಹ ಚಿರಾಯು,
ಹುದುಕುತ್ತಿರುವ ಪ್ರೀತಿಯ ಸ್ನೇಹಿ ಸಿಗಲಿ.
ಸಿಕ್ಕರೆ ಚೆನ್ನ, ಸಿಗಲಿಲ್ಲಾ ಅಂದರೆ ಅವಳ ನೆನಪು ಇನ್ನೂ ಚೆನ್ನ
ಲ್

ಸುಧೇಶ್ ಶೆಟ್ಟಿ said...

ಇದಾ ಕಥೆ :) ಸವಿ ಸವಿ ನೆನಪು ಸಾವಿರ ನೆನಪ್ ಸವಿಗನಸು ಅವರಿಗೆ....

ಅವರ ಪ್ರಯತ್ನ ಯಶ ನೀಡಲಿ.. :)

ಸಾಗರದಾಚೆಯ ಇಂಚರ said...

ಮನಸು,
ಕಥೆ ಚೆನ್ನಾಗಿದೆ,
ಮಹೇಶ ಅವರನ್ನು ಸಂಪರ್ಕಿಸಬೇಕು ಸದ್ಯದಲ್ಲೇ :)

ಮನಸು said...

ತೇಜಸ್ವಿನಿಯವರೆ,
ಕಾಯಬೇಡಿ ಹಹಹ.. ಕಥೆ ಮುಂದುವರಿವ ಹಾಗೆ ಕಾಣಿಸುತ್ತಿಲ್ಲ ಹಹಹ್.
ವಂದನೆಗಳು

ಮನಸು said...

Creativity!!
ಆ ಗೆಳತಿ ಸಿಕ್ಕರೆ ಒಳ್ಳೆಯದು...ವರ್ಣಿಸಲೇ ಬೇಕಲ್ಲವೆ ಆ ಕಥೆಹೇಳಿದವರು ಹಾಗೆ ಹೇಳಿದ್ದರು ಹಹಹ

ಮನಸು said...

ಹಾಯ್ ದಿವ್ಯ,
ಹಹಹ ಒಳ್ಳೆದು ಮಾಡಿದ್ರು ಅಂತೀರಾ? ಹಹ... ನನ್ನ ಮೇಲೆ ಗಮನ ಕಮ್ಮಿ ಆಗುತ್ತೆ ಅಂತ್ತೀರಾ? ಒಮ್ಮೆ ಅವರನ್ನೇ ಕೇಳಿ ಹಹಹ.
ವಂದನೆಗಳು

ಮನಸು said...

ಲಕ್ಷ್ಮಣ್ ಸರ್,
ಬಹಳ ದಿನ ನಂತರ ಬಂದಿರಿ, ಸ್ನೇಹ ಚಿರಾಯು ನಿಮ್ಮ ಮಾತು ಸರಿ, ಸಿಕ್ಕರೆ ಚೆನ್ನ ಆ ಸ್ನೇಹ... ನೆನಪಿನ ಸವಿ ಇನ್ನು ಚೆನ್ನ.
ವಂದನೆಗಳು

ಮನಸು said...

ಸುಧೇಶ್,
ಪ್ರಯತ್ನ ನಮ್ಮದು ಫಲಾನುಫಲ ದೇವರಿಗೆ ಬಿಟ್ಟಿದ್ದು ಅಲ್ಲವೆ ಹಹ... ಇದು ಕಥೆ ಅಲ್ಲಾ ಅಂತೀರ ಹಹಹ

ಮನಸು said...

ಗುರು,
ಕಥೆ ಇಷ್ಟವಾಯಿತೆ ನನಗೆ ಅಷ್ಟು ಚೆನ್ನಾಗಿ ವಿವರಿಸಲು ಬರೋಲ್ಲ ಆದರೂ ವಿವರಿಸಿದ್ದೀನಿ. ಆದಷ್ಟು ಬೇಗ ಮಹೇಶ್ ಜೊತೆ ಮಾತಾಡಿ ಹಹಹ

ರವಿಕಾಂತ ಗೋರೆ said...

:-)... Shubhavaagali..

"Ye dosti, hum nahi chodenge................