Tuesday, December 8, 2009

ಅಮ್ಮನಾದಾಗ ತಬ್ಬಿಬ್ಬಾದೆ!!!!

ರಜೆಯಲ್ಲಿ ಊರಿನಲ್ಲಿದ್ದಾಗ ಎಲ್ಲೋ ಹೋಗಬೇಕಿತ್ತು...ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಅಲ್ಲೇ ನನ್ನ ಪಕ್ಕ ಒಬ್ಬ ಹೆಂಗಸು ಕೈನಲ್ಲೊಂದು ಬ್ಯಾಗ್, ಕಂಕುಳಲ್ಲೊಂದು ಸುಮಾರು ೬ ತಿಂಗಳ ಹಸುಗೂಸು, ಮತ್ತೊಂದು ಅಮ್ಮನನ್ನೇ ತಬ್ಬಿ ನಿಂತ ಸುಮಾರು ೨ ವರ್ಷದ ಕಂದಮ್ಮ ನಾನು ನೋಡಿದೆ ಮನವೇಕೋ ಕರಗಿತು ಎಷ್ಟು ಕಷ್ಟ ನೋಡು ಪಾಪ ಎರಡು ಮಕ್ಕಳು ಜೊತೆಗೆ ಬ್ಯಾಗ್ ಬೇರೆ ಆಟೋದಲ್ಲಾದರೂ ಹೋಗಬಾರದೆ ಎನಿಸಿತು, ಆದರೆ ಆಕೆಯ ಮುಖ ನೋಡಿದರೆ ಅಷ್ಟು ಸ್ಥಿತಿವಂತರೆನಿಸಲಿಲ್ಲ...ಪಾಪ ಅವರವರ ಕಷ್ಟ ಅವರವರಿಗಿರುತ್ತೆ ನಾವು ಎಲ್ಲರನ್ನು ತಾಳೆ ಹಾಕಬಾರದೆನಿಸಿತು...

ಸ್ವಲ್ಪ ಸಮಯದ ನಂತರ ಬಸ್ ಬಂತು ನಾನು ಅಮ್ಮನನ್ನು ತಬ್ಬಿ ನಿಂತ ಕಂದಮ್ಮನನ್ನು ಕರೆದುಕೊಂಡೆ, ಆಕೆ ಇನ್ನೊಂದು ಮಗುವಿನೊಂದಿಗೆ ಬಸ್ ಹತ್ತಿದಳು, ಒಳ ಹೋಗುತ್ತಿದ್ದಂತೆ ಆಕೆ ಕುಳಿತುಕೊಂಡಳು ನಾನು ಆ ಮಗುವನ್ನು ಹೊತ್ತುಕೊಂಡೇ ಸ್ವಲ್ಪ ಸಮಯ ನಿಂತಿದ್ದೆ...ತಕ್ಷಣವೇ ಆಕೆ ಇಲ್ಲಿ ಕೊಡಿ ಎಂದು ಹೇಳಿದಳು ನಾ ಕೊಟ್ಟೆ... ಅಷ್ಟು ಹೊತ್ತು ಸುಮ್ಮನಿದ್ದ ಮಗು ಅಮ್ಮನ ಹತ್ತಿರವೇಕೋ ಅಳಲು ಪ್ರಾರಂಭಿಸಿತು.... ನನಗೆ ಹಿಂದಿನ ಸೀಟು ಸಿಕ್ಕಿತು ನಾನು ಕುಳಿತುಬಿಟ್ಟೆ...ಆದರೆ ಆ ಮಗು ಅಳು ನಿಲ್ಲಿಸಲೇ ಇಲ್ಲ, ತದನಂತರ ಮಗುವಿನ ತಾಯಿ ಪಕ್ಕ ಒಬ್ಬರು ವಯಸ್ಸಾದಾಕೆ ಕುಳಿತಿದ್ದರು ಅವರು ಹಿಂದೆ ತಿರುಗಿ ನಿನಗೆ ಸ್ವಲ್ಪನೂ ಅರ್ಥವಾಗೋಲ್ಲವೇ ನೀನು ಕುಳಿತಿದ್ದೀಯಲ್ಲಮ್ಮಾ, ನಿನ್ನ ಮಗೂನ ಕರೆದುಕೊಳ್ಳೋಕೇನು ಆ ಯಮ್ಮ ಬೇರೆ ಮಗು ಇರೋಳು ನಿನ್ನ್ಗೆ ಅರ್ಥ ಆಗೋಲ್ವೇನಮ್ಮ ಅಂದರು...ನಾನು ತಕ್ಷಣ ತಬ್ಬಿಬ್ಬಾದೆ!!.....ಹಹಹಹ........ಮಕ್ಕಳು ಅಮ್ಮನತ್ತಿರ ಇದ್ದರೆ ಸರಿ ನೀನು ಕೂತಿದ್ದೀಯ ಕರ್ರ್ಕೋ ಎಂದರು, ನಂತರ ಆ ಮಗುವಿನ ತಾಯಿ ಈ ಮಗು ಅವರದಲ್ಲ ನನ್ನದೇ ಎಂದಳು, ಮಗುವಿನ ತಾಯಿ... ಬಸ್ ನಲ್ಲಿದ್ದವರೆಲ್ಲ ಒಮ್ಮೆಲೇ ಚಾಲಕನೂ ಸೇರಿ ನಕ್ಕುಬಿಟ್ಟರು ಈ ನಗು ಕಂಡು ಅಳುತ್ತಿದ್ದ ಕಂದ ನಗಲು ಪ್ರಾರಂಭಿಸಿತು ಅದಕ್ಕೇನು ಅರ್ಥವಾಯಿತೋ ಕಾಣೆ ಒಟ್ಟಲ್ಲಿ ನಗು ಬಂತು ಹಹಹಹ....

ಕೆಲವೂಮ್ಮೆ ನಾವು ತಬ್ಬಿಬ್ಬಾಗುವ ಸಂದರ್ಭಗಳು ಬಂದು ಬಿಡುತ್ತವೇ ಅಲ್ಲವೇ..?

ವಂದನೆಗಳು
ಶುಭದಿನ

44 comments:

ಚುಕ್ಕಿಚಿತ್ತಾರ said...

ಕೆಲವೊಮ್ಮೆ ಈ ತರಾ ಆಗಿ ಬಿಡುತ್ತೆ.. ಬಸ್ಸಲ್ಲಿ ಯಾರೊ ಪಕ್ಕದಲ್ಲಿ ನಿ೦ತವರನ್ನು ನಿಮ್ ಯಜಮಾನ್ರೇನ್ರೀ.... ಅ೦ದರೆ ತಲೆಬಿಸಿ ಆಗುತ್ತೆ.... ಚೆನ್ನಾಗಿದೆ ಬರಹ.

ಜಲನಯನ said...

ಮನಸು ಮೇಡಂ...ಬಣ್ಣ-ಬಣ್ಣದ ಸೀರೆಯಲ್ಲಿ ಮುದ್ದು ಮುದ್ದಾಗಿ ಅವಳನ್ನ/ಅವನನ್ನ ಎತ್ಕೊಂಡಿದ್ದರಲ್ಲಾ...ಬಣ್ಣ ಮಾಸಿದ ಸೀರೆಯ ಅಮ್ಮ ...ಇದ್ದೇ ಇರ್ತಾಳೆ..ಬಸ್ ಪ್ರಯಾಣದ ಮಟ್ಟಿಗಾದರೂ ನಿಮ್ಮ ಹತ್ತ್ರ ಇರಬೇಕು ಅಂತ ಅತ್ತಿರಬೇಕು ಮಗು.....ಹಹಹ...ನಿಜ...ಕೆಲವರಿಗೆ ಮಕ್ಕಳನ್ನು ಆಕರ್ಷಿಸೋ ಸ್ವಾಭಾವಿಕ ಗುಣ ಇರುತ್ತಂತೆ..ನಮ್ಮಮ್ಮ ಹೇಳೋಳು...ನನ್ನ ಮೂರನೇ ತಮ್ಮನ ಬಳಿ ನನ್ನ ಚಿಕ್ಕ ತಂಗಿ ಹೋಗ್ತಾನೇ ಇರ್ಲಿಲ್ಲ ಎತ್ತಿಕೊಂಡ್ರೆ ಅವನು ಒಂದೇ ಸಮ ಅಳೋಳು....ಹಹಹಹ....ಈಗ ಅವನಿಗೆ ಮೂವರು ಮಕ್ಕಳು ನಮ್ಮ ಅಣ್ನ ತಮ್ಮಂದಿರಲ್ಲಿ ಮ್ಯಾಕ್ಸಿಮಮ್...ಹಹಹ

ಸಾಗರದಾಚೆಯ ಇಂಚರ said...

ಕೆಲವೊಮ್ಮೆ ಇಂಥಹ ಎಷ್ಟೋ ಘಟನೆಗಳು ನಡೆಯುತ್ತವೆ ಅಲ್ಲವೇ
ಆದರೆ ಅವು ನೆನಪಿನಾಳದಲ್ಲಿ ಉಳಿದು ಮುಂದೆಂದೋ ನೆನಪಿಸಿಕೊಂಡಾಗ ನಗು ತರುತ್ತವೆ
ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

ಶಿವಪ್ರಕಾಶ್ said...

ಅಂತು ಆ ಮಗು ನಕ್ಕಿತಲ್ಲ... ಹ್ಹಾ ಹ್ಹಾ ಹ್ಹಾ... :)
ಚುಕ್ಕಿಚಿತ್ತರ ಅವರ ಕಾಮೆಂಟ್ ಕೇಳಿ ನಗು ಬಂತು... :P
ಕೆಲವು ಸಾರಿ ಹೀಗೆ ಆಗುತ್ತೆ..
ಒಂದ್ಸಾರಿ ಹೋಟೆಲ್ನಲ್ಲಿ ನಿಂತಿದ್ದಾಗ ಯಾರೋ ವ್ಯಕ್ತಿ ಬಂದು... 'ಬಿಸಿ ಬಿಸಿ ಏನಿದೆ ...?' ಅಂತ ನನ್ನ ಕೇಳಿದ. ಹ್ಹಾ ಹ್ಹಾ ಹ್ಹಾ....

ಮನಸು said...

ಜಲನಯನ ಸರ್,
ಅದೇನು ನಿಮ್ಮ ತಂಗಿಗೆ ಅಣ್ಣನ್ನ ಕಂಡರೆ ಅಷ್ಟು ಭಯವೇ? ಹಹಹಹ.. ಬಣ್ಣ ಬಣ್ಣ ಸೀರೆನಲ್ಲಿ ಇರಲಿಲ್ಲ ಸರ್, ಅವತ್ತು ನನ್ನ ಅಕ್ಕ ಮತ್ತೆ ಅಣ್ಣನ ಮಗಳು ಸ್ಕೂಲ್ ಬಸ್ ತಪ್ಪಿಸಿಕೊಂಡುಬಿಟ್ಟಿದ್ದರು ಆತುರದಲ್ಲಿ ಒಳ್ಳೆ ಹುಚ್ಚಿಂತೆ ಓಡಿದ್ದೆ ಅವರನ್ನು ಬೇರೆ ಸರ್ಕಾರಿ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಬಿಟ್ಟು ವಾಪಸ್ ಬರುವಾಗ ನಡೆದ ಘಟನೆ...ಹಹಹ ಅದೇನೋ ಇಂದು ಇದ್ದಕ್ಕಿದ್ದ ಹಾಗೆ ನೆನಪಾಯಿತು ನಿಮ್ಮೆಲ್ಲರೊಂದಿಗೆ ಹಂಚಿಕೊಂಡೆ.

ಮನಸು said...

ಸಾಗರದಾಚೆ ಇಂಚರ,
ಹೌದು ಕೆಲವು ಘಟನೆಗಳು ನೆನಪಿನಲ್ಲಿ ಉಳಿಯುವಂತೆ ಮಾಡಿಬಿಡುತ್ತೆ. ಇಂದು ಈ ಘಟನೆಯನ್ನು ನೆನಪಿಸಿಕೊಂಡು ನಗುತ್ತಲಿದ್ದೆ.. ಇದ್ದಕ್ಕಿದ್ದಂತೆ ಎಚ್ಚೆತ್ತು ಸುತ್ತ ನೋಡಿದೆ ಸದ್ಯ ಯಾರು ಇರಲಿಲ್ಲ ಹಹಹಹ

ಮನಸು said...

ಶಿವಪ್ರಕಾಶ್,
ಹಾ ಮಗು ನಕ್ಕುಬಿಟ್ಟಿತು.... ಚುಕ್ಕಿಚಿತ್ತಾರ ಹೇಳಿದ ಹಾಗೆ ಎಷ್ಟೋ ನಡೆಯುತ್ತೆ ನನಗೂ ಅನುಭವವಾಗಿದೆ ಹಹಹ... ಬಿಸಿಬಿಸಿ ಏನಿದೆ ಅಂದಾಗ ಏನು ಹೇಳಿದಿರಿ ಹಹ

ಮನಸು said...

ಚುಕ್ಕಿ ಚಿತ್ತಾರ ಅವರೆ,
ಹಹಹ ಚೆನ್ನಾಗಿದೆ ಆ ತರಹದ ಅನುಭವ ನನಗೂ ಆಗಿದೆ ಹಹಹಹ ಅದಕ್ಕೆ ಉತ್ತರ ಕೊಡೋಕೆ ಗರಬಡಿದಂತೆ ಆಗುತ್ತದೆ.. ಹಹ

shivu said...

ಮನಸು ಮೇಡಮ್,

ಅದು ಈಗಿನ ಕಾಲದ ಮಗು ಇರಬೇಕು. ಆದ್ರೂ ಎಲ್ಲಾ ಮಡಿಲುಗಳು ಒಂದೇ ಅಲ್ಲವೇ. ಮಗುವಿಗೂ ಒಂಥರ ಸದ್ಯದ ಮಟ್ಟಿಗೆ ಹೊಸ ಮಡಿಲು ಬೇಕಿರಬೇಕು...ಅದಕ್ಕೆ ಹೀಗೆ ಆಗಿದೆ..ಅಲ್ವಾ....ಒಟ್ಟಾರೆ ಕೆಲವು ಪ್ರಸಂಗಗಳು ನಮ್ಮ ನಿರೀಕ್ಷೆ ಮೀರಿ ಹೀಗೆ ನಡೆದುಬಿಡುತ್ತವೆ ಹೀಗೆ ಅಲ್ವಾ....

ಆನಂದ said...

ಛೇ, ಒಂದ್ಸಲಾನೂ ಇವರು ನಿಮ್ಮ ಹೆಂಡತಿಯೇನ್ರೀ? ಅಂತ ಪಕ್ಕದೋರನ್ನ ತೋರಿಸಿ ಯಾರೂ ನನ್ನ ಕೇಳಿಲ್ವೇ.... :(
(ಹುಡುಗುಬುದ್ಧಿ ಎಲ್ಲಿಗೆ ಹೋದ್ರೂ ನೆಟ್ಟಗಾಗಲ್ಲ... ನಾನ್ಹೀಗೆ ಹೇಳಿದ್ದು ಗೊತ್ತಾದ್ರೆ ನಮ್ಮನೇಲಿ ನಾಳೆನೇ ನನ್ನ ಮದುವೆ ಮಾಡಿಸ್ತಾರೆ :) )

ಚೆನ್ನಾಗಿದೆ ನಿಮ್ಮ ಅನುಭವ.. :D

ದಿನಕರ ಮೊಗೇರ.. said...

ಮನಸು ಮೇಡಂ,
ಹಾ ಹಾ ಹಾ.... ಚೆನ್ನಾಗಿದೆ ನಿಮ್ಮ ಅನುಭವ....
ನಾನೂ ಸಹ ನನ್ನ ಅಣ್ಣನ ಥರಾನೇ ಕಾಣ್ತೀನಿ.. ನನ್ನ ಅತ್ತಿಗೆಯವರ ಜೊತೆ walk ಹೋದರೆ , ನೋಡಿದ ಜನ ತಪ್ಪು ತಿಳಿದು.. '' ಏನು ಜೋಡಿ ಜೊತೆ ಎಲ್ಲಿಗೆ ಹೋಗ್ತಾ ಇದೀರಾ'' ಎನ್ನುತ್ತಿದ್ದರು..... ಮುಜುಗರವಾಗುತ್ತಿತ್ತು.....
ನಿಮ್ಮ ಅನುಭವ ಸಕತ್ ನಗು ತಂತು....

ಮನಸು said...

ಶಿವು ಸರ್,
ಹಹಹ ಈಗಿನ ಕಾಲದ್ದ ಮಗುನೇ ಅದು ಹಹಹ... ನೀವು ಹೇಳಿದ್ದು ಸರಿ ಮೊದಲೇ ಆ ಅಮ್ಮನ ಮಡಿಲನ್ನು ಇನ್ನೊಂದು ಮಗು ಸೇರಿತ್ತು ಇದ್ದಕ್ಕೆ ಆ ಮಡಿಲಲ್ಲಿ ಜಾಗವಿರಲಿಲ್ಲ ಅದಕ್ಕೆ ಆಸೆಯಾಯಿತೇನೋ ಹಹಹ.. ಕೆಲವೂಮ್ಮೆ ತಬ್ಬಿಬ್ಬಾಗೋದು ಖಂಡಿತ ಎಂದು ಒಪ್ಪುತ್ತೀರಲ್ಲವೇ

ಮನಸು said...

ಆನಂದ್,
ನಿಮಗೆ ಸ್ವಾಗತ, ಓಹ್!!! ನೀವು ಈ ತರ ಎಲ್ಲಾ ತಿಳಿತೀರಿ ಅಂತಾನೇ ಯಾರು ಹೇಳೋಲ್ಲ ಹಹಹ.. ಆಮೇಲೆ ಇನ್ನೂಂದು ಚೆನ್ನಾಗಿರು ಹುಡುಗಿ ತೋರಿಸಿ ಇವರು ನಿಮ್ಮ ಮನೆಯವರಾ ಎಂದರೆ ಪರವಾಗಿಲ್ಲ ನೀವು ಸ್ವಲ್ಪ ಖುಷಿಯಿಂದ ಬೀಗುತ್ತೀರಿ ಆದರೆ ನಿಮಗೆ ಇಷ್ಟವಾಗದವರೋ ಅಥವ ಚೆಂದವಿಲ್ಲದ ಹೆಣ್ಣು ತೋರಿಸಿ ಕೇಳಿದರೆ ನೀವು ಕಸಿವಿಸಿ ಪಡಬೇಕಾಗುತ್ತೆ ಹಾಗೆಲ್ಲ ಇಲ್ಲದ್ದನ್ನ ಬಯಸಬೇಡಿ ಹಹಹ...
ನಿಮ್ಮ ಅಪ್ಪ ಅಮ್ಮನ ಫೋನ್ ನಂಬರ್ ಕೊಡಿ ನಾನೇ ತಿಳಿಸ್ತೀನಿ ಯಾಕೋ ನಿಮ್ಮ ಹುಡುಗ ಕನಸು ಕಾಣ್ತಾರೆ ಎಂದು ಹೇಳುತ್ತೇನೆ ಹಹಾಹ್ಹ.
ವಂದನೆಗಳು ಸದಾ ಬರುತ್ತಲಿರಿ.

ಮನಸು said...

ದಿನಕರ್ ಸರ್,
ಎಂತ!!! ಪೇಚಾಟಕ್ಕೆ ತರುತ್ತೆ ಅಲ್ಲವೆ.. ಹೋಲಿಕೆ ಇದ್ದರೇ ಹೀಗೆ ಇನ್ನು ಅವಳಿಜವಳಿ ಅವರ ಕಥೆ ಏನು ಹೇಳಿ...ಹಾಗೆ ಕೇಳುವ ಜನರ ತಪ್ಪು ಸಹ ಇಲ್ಲ ಆದರೆ ಏನು ಮಾಡೋದು ಅನುಭವಿಸಬೇಕು ಅಷ್ಟೆ... ನಿಮ್ಮ ಅತ್ತಿಗೆಗೆ ಇನ್ನು ತಬ್ಬಿಬ್ಬಾಗಿರುತ್ತಾರೆ ಪಾಪ ಹಹಹ

ರವಿಕಾಂತ ಗೋರೆ said...

:-) ಚೆನ್ನಾಗಿದೆ ನಿಮ್ಮ ಅನುಭವ...

Anonymous said...

hahaha nice one. yes funny incidents like this do happen
:-)
malathi s

i have read most of ur post and am proud of you spreading Kannada love abroad.
comment section was not working. probably server trouble on my side
best wishes
:-)
malathi S

sunaath said...

ಮನಸು,
ಅನಾಯಾಸವಾಗಿ ಅಮ್ಮನಾಗಿ ಬಿಟ್ರಲ್ಲ! ಇದೂ ಒಂದು ಅದಷ್ಟ!

Raghu said...

ಮನಸು ಅವರೇ,
ಸನ್ನಿವೇಶ ತುಂಬಾ ಚೆನ್ನಾಗಿದೆ...ಫುಲ್ ನಗು ಬರ್ತಾ ಇದೆ... ಹಹಹಹ...
ನಿಮ್ಮವ,
ರಾಘು.

ಮನಸು said...

ರವಿ,
ಧನ್ಯವಾದಗಳು, ಅನುಭವ ಚೆನ್ನಾಗಿದೆಯ ನಗುವಿನ ಸನ್ನಿವೇಶ, ಅಂದು ಆ ಬಸ್ಸಿನಲ್ಲಿದ್ದವರೆಲ್ಲ ನಕ್ಕು ಬಿಟ್ಟರು ಹಹಹ

ಮನಸು said...

ಮಾಲತಿ,
ಧನ್ಯವಾದಗಳು, ತೊಂದರೆ ಇಲ್ಲ ತಡವಾಗಿಯಾದರು ನನ್ನ ಹಳೆಯ ಬರಹಗಳನ್ನು ಓದಿದಿರಲ್ಲಾ ಸಂತೋಷ, ಇದು ಒಂದು ನಗೆಯ ಸಂದರ್ಭವಾಗಿಬಿಟ್ಟಿತು.

ಮನಸು said...

ಸುನಾಥ್ ಸರ್,
ಧನ್ಯವಾದಗಳು, ಹೌದು ಸರ್, ತಕ್ಷಣದಲ್ಲೇ ಅಮ್ಮನಾಗಿಬಿಟ್ಟೆ, ಒಂದುತರ ಅದೃಷ್ಟವೇ ಸರಿ.

ಮನಸು said...

ರಘು,
ಒಳ್ಳೆ ಸನ್ನಿವೇಶ ಅಲ್ಲವೇ? ಹಹಹ ನಾನು ಅಂದು ಮನೆಗೆ ವಾಪಸ್ ಬಂದು ಎಲ್ಲರಿಗೂ ಹೇಳಿ ನಕ್ಕಿದ್ದೇ ನಕ್ಕಿದ್ದು. ಧನ್ಯವಾದಗಳು

SSK said...

ವಾವ್! ಮನಸು ಅವರೇ, ನಿಮ್ಮ ಈ ವಿಚಿತ್ರ ಅನುಭವದ ಕಥೆ ಓದಿ ಒಂದು ರೀತಿಯ ರೋಮಾಂಚನ ಉಂಟಾಯಿತು.
ಧನ್ಯವಾದಗಳು.

ಸೀತಾರಾಮ. ಕೆ. said...

tumbaa chennagide tamma anubhava.
nanna hattira intaha halavaaru anubhavagalive.
tamma lekhanadinda nanage bareyalu sphoorthi bartha ide

Creativity!! said...

ಬಹಳ ಅತ್ಹ್ಯುಥಮವಗಿದೆ :) :)

ಸಿಮೆಂಟು ಮರಳಿನ ಮಧ್ಯೆ said...

ಮನಸು...

ಹೊಟ್ಟೆತುಂಬಾ ನಗಿಸಿದ್ದಕ್ಕೆ
ಅಭಿನಂದನೆಗಳು...

Snow White said...

ಚೆನ್ನಾಗಿದೆ ಮೇಡಂ ನಿಮ್ಮ ಕಥೆ .. :) ಹ್ಹ ಹ್ಹ ಹ್ಹ :)

Prabhuraj Moogi said...

ಹ ಹ ಹ.. ಒಳ್ಳೇ ಮುಜುಗರಕ್ಕೆ ಸಿಕ್ಕಿಕೊಂಡಿದ್ದೀರಿ... :)
ಇನ್ನೊಂದು ಹೇಳ್ತೀನಿ ಕೇಳಿ... ಹೀಗೆ ನನಗೂ ಆಗ್ತಿತ್ತು...
ನನ್ನ ಅಪ್ಪ ನನಗೆ ವಯಸ್ಸಿನ ವ್ಯತ್ಯಾಸ ಕಡಿಮೆ, ಅವರ್ ಮದುವೆ ಬೇಗ ಆಗಿತ್ತು, ಅಪ್ಪ ಇನ್ನೂ ಯಂಗ್ ಆಗಿ ಕಾಣ್ತಾ ಇದ್ರು ಹೈಸ್ಕೂಲಲ್ಲಿ ಇರೋವಾಗ ಅಪ್ಪ ಅಲ್ಲಿ ಬಂದ್ರೆ ನಿಮ್ಮ ಬ್ರದರ್ ಬಂದೀದಾರೆ ನೋಡು ಅಂತಾನೆ ಎಲ್ರೂ ಹೇಳ್ತಾ ಇದ್ದಿದ್ದು :) ಅವರಿಗೆ ತಿಳಿಸಿ ಹೇಳೊದ್ರಲ್ಲಿ ಸಾಕಗ್ತಿತ್ತು :)

manamukta said...

ಮನಸು ಅವರೆ,
ನನ್ನನ್ನು ಹಾಗೂ ನನ್ನ ತ೦ಗಿಯನ್ನು ನೋಡಿ ಅನೇಕರು ತಾವೂ ತಬ್ಬಿಬ್ಬಾಗಿ ನಮ್ಮನ್ನೂ ತಬ್ಬಿಬ್ಬು ಮಾಡಿದ್ದಾರೆ . ನನ್ನ ಮದುವೆಯಲ್ಲಿ, ಬಿತ್ತಕ್ಕಿ ಹಿಡಿದು ಎದುರುಗೊಳ್ಳಲು ಹೋದ ನನ್ನ ತ೦ಗಿಯನ್ನು ನೋಡಿ ನನ್ನವರ ಕಡೆಯವರು ಅರೆ! ಇದೇನಿದು? ಇವರ ಕಡೆ ಮದುವೆ ಹುಡುಗಿಯೇ ಬಿತ್ತಕ್ಕಿ ಹಿಡಿಯುತ್ತಾಳೋ !!!...... ಎ೦ದು ತಬ್ಬಿಬ್ಬಾದರ೦ತೆ. ನಿಮ್ಮ ಬರಹ ನನ್ನ ಮತ್ತು ನನ್ನ ತ೦ಗಿಯ ಅನೇಕ ತಬ್ಬಿಬ್ಬಿನ ಪ್ರಸ೦ಗಗಳನ್ನು ನೆನಪಿಸಿತು.
ಧನ್ಯವಾದಗಳು.

ಮನಸು said...

ಎಸ್.ಎಸ್.ಕೆ
ಇದೇ ತರಹ ನಿಮಗೂ ಬೇರೆ ತರ ಅನುಭವವಾಗಿರಬೇಕಲ್ಲವೇ.. ಇಂತ ಸಂದರ್ಭದಲ್ಲಿ ತಬ್ಬಿಬ್ಬಾಗದು ಸಾಮಾನ್ಯ ಅಲ್ಲವೆ.

ಮನಸು said...

ಸೀತಾರಮ್ ಸರ್,
ನಿಮ್ಮಅನುಭವಗಳನ್ನು ಬಿತ್ತರಿಸಿ ನಮಗೂ ನಗಲು ಆಸ್ಪದ ಮಾಡಿಕೊಡಿ...

ಮನಸು said...

Creativity!!
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ

ಮನಸು said...

ಪ್ರಕಾಶಣ್ಣ,
ನಗುನ, ನಗುತ್ತಲೇ ಇರಿ ಆರೋಗ್ಯಕ್ಕೆ ಒಳ್ಳೆಯದು, ಎಲ್ಲಿ ಹೋಗಿದ್ದೀರಿ ಇಷ್ಟುದಿನ ಏನು ಕೆಲಸದ ಒತ್ತಡ ಹೆಚ್ಚಾಗಿದೆಯೇ?

ಮನಸು said...

ಸ್ನೋ....
ನಗು ತರಿಸಿತೆ ನಿಮ್ಗೆ, ಒಳ್ಳೆಯದಾಯಿತು, ನಗುತ್ತಲೇ ಇರಿ....

ಮನಸು said...

ಪ್ರಭು,
ನಿಮ್ಮ ಕಥೆನೂ ಚೆನ್ನಾಗಿದೆ ನಗು ಬಂತು ನಿಮಗೆ ಬಹಳ ಮುಜುಗರವಾಗಿರುತ್ತದೆ... ಹಹಹಾಹ

ಮನಸು said...

ಮನಮುಕ್ತಾ
ಚೆನ್ನಾಗಿದೆ ನಿಮ್ಮ ಕಥೆ....ಹಹಹಹ.. ನೀವು ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ತಂಗಿ ಬೇಜಾನ್ ತಬ್ಬಿಬ್ಬಾಗಿರುತ್ತಾರೆ ಹಹ ಅಲ್ಲವೇ?

ಸುಧೇಶ್ ಶೆಟ್ಟಿ said...

ಹ ಹ ಹ....

ಚೆನ್ನಾಗಿದೆ ಈ ತಬ್ಬಿಬ್ಬು ಗೊಳಿಸಿದ ಅನುಭವ :)

ಚಂದಿನ | Chandina said...

ನೀವು ತಬ್ಬಿಬ್ಬಾದ...ಬರಹ ಬಹಳ ಖುಷಿಕೊಟ್ಟಿತು.

ಮನಸು said...

ಸುಧೇಶ್,
ನಗುವಿರಾ ನನ್ನ ಪರಿಸ್ಥಿತಿಗೆ ಹಹಹ...

ಮನಸು said...

ಚಂದಿನ ಸರ್,
ನನಗೂ ಖುಷಿಕೊಟ್ಟಿತು ಸರ್, ಕೆಲವೊಮ್ಮೆ ನಮಗೆ ತಿಳಿಯದೆಯೇ ಏನೇನೋ ನೆಡೆದುಬಿಡುತ್ತೆ ಅಲ್ಲವೆ.

ಗೌತಮ್ ಹೆಗಡೆ said...

:):)olle majavaagide..

Nisha said...

manasu,

tumba chennagide. nanu nanna magala jothe horage hodare, ninna tangina antha kelthare

ಮನಸು said...

ಗೌತಮ್,
ಮಜವೆನಿಸಿತೆ, ನನಗೂ ಅಷ್ಟೆ ಆ ಸಮಯದಲ್ಲಿ ಮಜವೆನಿಸಿತು ಆನಂತರ ರಸ್ತೆಯಲ್ಲಿ ಹೋಗುವಾಗ ನೆನಪುಮಾಡಿಕೊಂಡು ಒಬ್ಬಳೇ ನಗುತ್ತಲಿದ್ದೆ. ಹಹಹ
ಧನ್ಯವಾದಗಳು

ಮನಸು said...

ನಿಶಾ,
ತುಂಬಾ ಚೆನ್ನಾಗಿದೆ ನಿಮ್ಮ ಕತೆ, ನಿಮಗೇನೋ ಖುಷಿ ಬಿಡಿ ಓಹೋ ನಾನು ಅಷ್ಟು ಚಿಕ್ಕವಳಾಗಿ ಕಾಣುತ್ತೇನೆ ಎನ್ನಿಸಿರಬೇಕು ಹಹಹ ಪಾಪ ನಿಮ್ಮ ಮಗಳ ಕತೆ ಹೇಳಿ ಹಹಹ..
ಹೀಗೆ ಬರುತ್ತಲಿರಿ.