ಏನು ಇದು ಮರಳ ಮಲ್ಲಿಗೆಗೆ ನೀರೆರೆಯಬೇಕಾ, ನಮ್ಮೂರಿಂದ ಅವರಿಗೆ ನೀರು ಹೇಗಪ್ಪಾ ಕಳಿಸೋದು. ಅದು ಅಲ್ಲದೆ ಆ ಮರುಭೂಮಿಗೆ ನಾವು ಎಷ್ಟು ನೀರು ಕಳಿಸಿದ್ರು ಸಾಲೋದಿಲ್ಲ, ಜೊತೆಗೆ ನಾವೇ ಇಲ್ಲಿ ನೀರಿಲ್ಲ ಅಂತ ಕಷ್ಟಪಡ್ತಾ ಇದ್ದೀವಿ, ಇವ್ರಿಗೆ ಬೇರೆ ಕಳಿಸ್ಬೇಕಾ...!!!? ಅಂತ ತಿಳ್ಕೊಂಡಿರಾ ಖಂಡಿತಾ ಇಲ್ಲ. ಮುಂದೆ ಹೇಳ್ತೀನಿ ನೋಡಿ ಯಾವ ನೀರು ಕಳಿಸಬೇಕು ಮರುಭೂಮಿಗೆ ಅಂತ.
ಈಗ ವಿಷಯಕ್ಕೆ ಬರೋಣವೇ...... ನಮ್ಮ ಕನ್ನಡ ಕೂಟದಲ್ಲಿ ಮರಳ ಮಲ್ಲಿಗೆ ಎಂಬ ಪತ್ರಿಕೆ ಇರುವುದು (ಈ ವಿಷಯ ಕೆಲವರಿಗಾಗಲೇ ತಿಳಿದಿದೆ) ವರ್ಷಕ್ಕೆ ೫ ಅಥವಾ ೬ ಪತ್ರಿಕೆಗಳನ್ನು ಮುದ್ರಿಸುತ್ತಲಿದ್ದೆವು. ಈ ಬಾರಿ ಮಾಸ ಪತ್ರಿಕೆಯಾಗಿ ಪ್ರತಿ ತಿಂಗಳು ಹೊರ ತರುತ್ತಲಿದ್ದೇವೆ. ಇಲ್ಲಿಯವರೆಗು ೫ ಸಂಚಿಕೆಗಳಾಗಿ ಹೊರಹೊಮ್ಮಿವೆ. ಮುಂಬರುವ ಸಂಚಿಕೆಗಳಲ್ಲಿ ಒಂದು ಅಥವಾ ಎರಡು ಸಂಚಿಕೆಗಳಲ್ಲಿ ಹೊರನಾಡು, ಕರುನಾಡ ಕನ್ನಡಿಗರ ಲೇಖನಕ್ಕೆ ಮೀಸಲಿಟ್ಟು ಸಂಚಿಕೆಯನ್ನು ಹೊರತರುವ ಆಶಯದಲ್ಲಿದ್ದೇವೆ.
ನಮ್ಮ ಕನ್ನಡ ಕೂಟದ ಮಲ್ಲಿಗೆ ಮರಳಿನಲ್ಲಿ ಹಬ್ಬಿ ರಾರಾಜಿಸುತ್ತಲಿದೆ ಕೂಡ, ನಿಮ್ಮ ಲೇಖನಗಳನ್ನು ಮತ್ತಷ್ಟು ನಮಗೆ ಕಳಿಸಿ. ನಮ್ಮ ಕನ್ನಡದ ಅರಿವು, ಕನ್ನಡ ಭಾಷಾ ಸಾಮರ್ಥ್ಯ, ಕರುನಾಡಿನ ಬಾಂಧವ್ಯ ಎಲ್ಲವನ್ನು ಹೆಚ್ಚಿಸಬೇಕೆಂದು ಕೋರುತ್ತೇವೆ..... ಮರಳ ಮಲ್ಲಿಗೆಗೆ ನಿಮ್ಮ ಲೇಖನಗಳು, ನಗೆಹನಿಗಳು, ಆರೋಗ್ಯ ಬಗೆಗಿನ ಲೇಖನ, ಕಾರ್ಟೂನ್, ಚುಟುಕುಗಳು, ಕವನಗಳು, ಹಾಸ್ಯ, ವಿಶೇಷ ವ್ಯಕ್ತಿಯ ಪರಿಚಯ, ವಿಶೇಷ ಸ್ಥಳದ ಪರಿಚಯ, ಸೌಂದರ್ಯ ಸಲಹೆ, ಅಡುಗೆ ವಿಶೇಷ ತಿನಿಸುಗಳ ಬಗ್ಗೆ, ಅತ್ಯುತ್ತಮ ಫೋಟೋಗಳು, ಸಣ್ಣ ಕಥೆ, ವಿಜ್ಞಾನ ಹಾಗೂ ತಾಂತ್ರಿಕ ಜಗತ್ತಿನ ಬಗೆಗಿನ ಲೇಖನ, ಇಷ್ಟೆಲ್ಲದರಲ್ಲಿ ನಿಮಗಾವುದು ಸರಿಹೊಂದುವುದೋ ಆ ಬರಹಗಳನ್ನು ನಮಗೆ ಕಳಿಸಿಕೊಡಿ. ನಮ್ಮ-ನಿಮ್ಮ ಹಾಗೂ ಹೊರನಾಡು-ಕರುನಾಡ ಭಾಷಾ ಬಾಂಧವ್ಯವನ್ನು ಬೆಳೆಸುವಲ್ಲಿ ನಿಮ್ಮ ಸಹಕಾರ ಅಗತ್ಯವಿದೆ.
ವಿಶೇಷ ಸೂಚನೆ :
ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಲೇಖನ ಅಥವಾ ಬರಹಗಳೊಂದಿಗೆ ನಮ್ಮ ಜೊತೆ ಕೈಜೋಡಿಸಿ, ಮರುಭೂಮಿಯ ಕನ್ನಡ ನುಡಿಗೆ ನೀರೆರೆದು ಸಹಕರಿಸುವಿರೆಂದು ನಾವು ಭಾವಿಸುತ್ತೇವೆ.

೧. ಲೇಖನಗಳು ಒಂದು ಅಥವಾ ಎರಡು ಪುಟ ಮೀರದಂತಿರಲಿ.
೨. ಯೂನಿಕೋಡ್ ಬಳಸದೆ ಬರಹ ಫಾಂಟ್ ಹಾಗೂ ೧೨ ನಲ್ಲಿರಲಿ.
೩. ಜೂನ್ ೧೦ರೊಳಗೆ ನಮ್ಮ ಈ-ಮೈಲ್ ವಿಳಾಸಕ್ಕೆ ಕಳಿಸಿಕೊಡಿ. maralamallige@kuwaitkannadakoota.org
೪. ನಮ್ಮ ಕೆಲವು ಸಂಚಿಕೆಗಳನ್ನು ವೀಕ್ಷಿಸಲು ಈ ಲಿಂಕ್ ಗೆ ಭೇಟಿ ನೀಡಿ :
http://www.kuwaitkannadakoota.org/marala_mallige.html೨. ಯೂನಿಕೋಡ್ ಬಳಸದೆ ಬರಹ ಫಾಂಟ್ ಹಾಗೂ ೧೨ ನಲ್ಲಿರಲಿ.
೩. ಜೂನ್ ೧೦ರೊಳಗೆ ನಮ್ಮ ಈ-ಮೈಲ್ ವಿಳಾಸಕ್ಕೆ ಕಳಿಸಿಕೊಡಿ. maralamallige@kuwaitkannadakoota.org
೪. ನಮ್ಮ ಕೆಲವು ಸಂಚಿಕೆಗಳನ್ನು ವೀಕ್ಷಿಸಲು ಈ ಲಿಂಕ್ ಗೆ ಭೇಟಿ ನೀಡಿ :
ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಲೇಖನ ಅಥವಾ ಬರಹಗಳೊಂದಿಗೆ ನಮ್ಮ ಜೊತೆ ಕೈಜೋಡಿಸಿ, ಮರುಭೂಮಿಯ ಕನ್ನಡ ನುಡಿಗೆ ನೀರೆರೆದು ಸಹಕರಿಸುವಿರೆಂದು ನಾವು ಭಾವಿಸುತ್ತೇವೆ.
ಧನ್ಯವಾದಗಳು
ಮನಸು
http://www.kuwaitkannadakoota.org/
14 comments:
ಹೌದ್ರೀ ಯಪ್ಪಾ...ನಿಮ್ ನಿಮ ಶಕ್ತ್ಯಾನುಸಾರ ಲೇಖನ ಕಳಿಸ್ರೀ...ಎಲ್ಲ ಕ್ಷೇತ್ರಗಳ ಮಾಹಿತಿ ಹಾಕ್ಬೇಕಂತ ಇದ್ದೀವ್ರಿ...
ಅಂದಹಾಗೆ...ಮನಸು ಮೇಡಂ ನಮ್ಮ ಹೊರ ನಾಡ ಕನ್ನಡಿಗರು ಭಾಳ ಶಾಣ್ಯಾರಿದ್ದಾರ...ಲೇಖನಗಳು ಸಿಕ್ಕಾಪಟ್ಟೆ ಬರ್ಲಿಕ್ಕುಂಟು...ಅದನ್ನ ತಿಳ್ಸಿ ಬಿಡ್ರಿ ಮತ್ತ...ಪ್ರಕಟಿಸಲಾಗದವ್ನ ಬ್ಲಾಗ್ನಾಗ್ ಖಂಡಿತಾ ಹಾಕ್ರೀ ಅಂತ...
nice. keep it up
ಎಲ್ಲಾ ಒಳ್ಳೆಯದಾಗಲಿ. ನನ್ನಿಂದಾಗೋದನ್ನು ಖಂಡಿತ ಮಾಡ್ತೀನಿ. ಮರಳಮಲ್ಲಿಗೆಯ ಕಂಪು ಎಲ್ಲೆಡೆಗೂ ಹರಡಲಿ.
ಮನಸು ಮೇಡಮ್,
ಮರಳ ಮಲ್ಲಿಗೆಗೆ ನನ್ನ ಪ್ರೋತ್ಸಾಹ ಮತ್ತು ಸಹಕಾರವಂತೂ ಇದ್ದೇ ಇದೆ. ನಿಮಗೆ ಬೇಕಾದ ಫೋಟೊ ಮತ್ತು ಲೇಖನಗಳನ್ನು ಪ್ರತಿತಿಂಗಳು ಕಳಿಸುತ್ತೇನೆ. ಮತ್ತೆ ಬ್ಲಾಗಿಗೆ ಹಾಕುವುದಕ್ಕೆ ಮೊದಲೇ ನಿಮ್ಮಲ್ಲಿಗೆ ಲೇಖನ ಮತ್ತು ಫೋಟೊಗಳನ್ನು ಮರಳ ಮಲ್ಲಿಗೆ ಕಳಿಸುತ್ತೇನೆ. ಇದು ನನ್ನ ಭರವಸೆ.
ಜಲನಯನ ಸರ್,
ಎಲ್ಲರು ಲೇಖನಗಳನ್ನ ಕಳಿಸಲಿ ಆದಷ್ಟು ಬೇಗ, ಅಂತ ನಮ್ಮ ಮರಳ ಮಲ್ಲಿಗೆ ಪರವಾಗಿ ಕೇಳಿಕೊಂಡಿದ್ದಕ್ಕೆ ಧನ್ಯವಾದಗಳು ಹಹ.......
ಸೀತಾರಾಮ್ ಸರ್,
ನೀವು ಲೇಖನ ಕಳಿಸಿದರೆ ಚೆನ್ನಾಗಿರುತ್ತೆ.... ಏನಾದರು ಬರೆದು ಕಳಿಸಿ.
ಸುಬ್ರಹ್ಮಣ್ಯ ನಿಮಗೆ ನಮ್ಮ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಸದಾ ನಮ್ಮೊಂದಿಗಿದೆ ಹಾಗೆ ಈ ಹೊಸ ಪ್ರಯತ್ನಕ್ಕೂ ಸಹ ಜೊತೆಯಾಗಲೆಂಬುದು ನಮ್ಮ ಆಶಯ ಧನ್ಯವಾದಗಳು ಆದಷ್ಟು ಬೇಗ ನಿಮ್ಮ ಲೇಖನ ಬರೆದು ಕಳಿಸಿ.
ಶಿವು ಸರ್
ನಿಮ್ಮ ಪ್ರೋತ್ಸಾಹ ನಿಜ ಅಂದಿನಿಂದಲೂ ಇದೆ ಹಾಗೆ ನಿಮ್ಮ ಭರವಸೆ ನಮಗೆ ಸಂತಸ ತಂದಿದೆ ನಿಮಗೆ ತಿಳಿದವರಿಗೂ ತಿಳಿಸಿ ಮತ್ತಷ್ಟು ಪ್ರೋತ್ಸಾಹದಾಯಕ ಲೇಖನಗಳು ನಮ್ಮತ್ತ ಬರುವಂತಾಗುವಂತೆ ಮಾಡಿ ಧನ್ಯವಾದಗಳು
Manasu avare...
pathrikegaLige lEKhanagaLannu kaLisuvudhu yendhare nanage bhaya.. aadare maraLa malligege kanditha kalisuttEne :)
ಮೃದು ಮನಸು,
internetನಲ್ಲಿ ಕಳಿಸಬೇಕಾದರೆ, ಯುನಿಕೋಡ್ ಅಗತ್ಯವಲ್ಲವೆ? ಕನ್ನಡ ಬರಹದಲ್ಲಿ ಕಳಿಸಲು ಸಾಧ್ಯವಾಗುವದೆ?
ಧನ್ಯವಾದಗಳು ಸುಧೇಶ್ ಕಳಿಸಿಕೊಡಿ ಕಾಯುತ್ತಲಿರುವೆ.
ಸುನಾಥ್ ಸರ್ ಬರಹನಲ್ಲಿ ಟೈಪ್ ಮಾಡಿ ಮೈಲ್ ನಲ್ಲಿ ಲಗತ್ತಿಸಿ ಕಳಿಸಿಕೊಡಿ ಹಾಗೂ ಸಾಧ್ಯವಾಗದಿದ್ದರೆ ಯುನಿಕೋಡ್ನಲ್ಲೇ ಕಳಿಸಿ.ದಯವಿಟ್ಟು ನೀವಂತ್ತೂ ಬರಯಲೇಬೇಕು.
ಮನಸು ಮೇಡಂ ,
ನಿಮ್ಮ ಕನ್ನಡ ಕೂಟದ ಮರಳ ಮಲ್ಲಿಗೆಯ ಪರಿಮಳ ಎಲ್ಲೆಡೆ ಹಬ್ಬಿ ಪಸರಿಸಲಿ ಅಂತ ನನ್ನ ಶುಭ ಹಾರೈಕೆ..ಮರಳ ಮಲ್ಲಿಗೆ ಪತ್ರಿಕೆ ಚೆನ್ನಾಗಿ ಮೂಡಿ ಬರುತ್ತಿದೆ..ನಿಮ್ಮಲ್ಲೆರ ಕನ್ನಡಾಭಿಮಾನವನ್ನು ನೋಡಿ ತುಂಬಾ ಖುಷಿ ಆಗುತ್ತೆ..
ಒಳ್ಳೆಯ ಪ್ರಯತ್ನ..ಮಲ್ಲಿಗೆ ಪರಿಮಳ ಅರಳೋಕ್ಕೆ ನೆರಳಾದರೇನು..ಮರಳಾದರೇನು...
ನಿಮ್ಮವ,
ರಾಘು.
ಶಶಿ ಅಕ್ಕ ಧನ್ಯವಾದಗಳು, ನಿಮ್ಮ ಲೇಖನಗಳನ್ನು ಕಳಿಸಿಕೊಡಿ.
ರಾಘು ನಿಜ ನಿಮ್ಮ ಮಾತು, ಧನ್ಯವಾದಗಳು ರಾಘು ನಿಮ್ಮ ಲೇಖನಗಳು ನಮಗೆ ಆದಷ್ಟು ಬೇಗ ತಲುಪುವಂತಾಗಲಿ.
ಮನಸು
ಖಂಡಿತ ಲೇಖನ ಕಳಿಸುತ್ತೇವೆ
ನಮ್ಮ ಸಹಕಾರ ಸದಾ ಇರುತ್ತದೆ
ಮನಸುರವರೆ,
ನನ್ನ ಬ್ಲಾಗ್ ನ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಓದಿ ಸ೦ತಸವಾಯಿತು. 'ಮರಳ ಮಲ್ಲಿಗೆ'ಗೆ ನನ್ನ ಒಂದು ಲಲಿತ ಪ್ರಬಂಧವನ್ನು ಕಳುಹಿಸಿದ್ದೇನೆ. ಅವಕಾಶಕ್ಕಾಗಿ ಧನ್ಯವಾದಗಳು.
ನಿಮಗೆ ಇಮೇಲ್ ಮಾಡಲು ನಿಮ್ಮ ಇಮೇಲ್ ಐಡಿ ಯನ್ನು ದಯವಿಟ್ಟು ಇಲ್ಲಿಗೆ ಮೇಲ್ ಮಾಡಿ. prabhamaninagraj@gmail.com
Post a Comment