Thursday, June 10, 2010

ಬಹುಶಃ ಇದೇ ನನ್ನ ಕೊನೆಯ ಪತ್ರ.......

ಎಲ್ಲರಿಗೂ ನಮಸ್ಕಾರ...!!!!

ಮನಸಿಟ್ಟು ಓದಿ, ಮನಸ್ಸಲ್ಲೇ ಅನುಭವಿಸಿ, ಮನಸಲ್ಲೇ ಆಶಿಸಿ, ಮನದಾಳದಿಂದ ಉತ್ತರಿ.........

ನನ್ನ ಹೆಸರು ಕನ್ನಡಾಂಬೆ, ನನ್ನ ಊರು ಕರ್ನಾಟಕ, ನನ್ಗೆ ಸಾವಿರಾರು ಮಕ್ಕಳು, ಹೆತ್ತ ತಾಯಿ ನಿನ್ಗೂ ಗೊತ್ತಿಲ್ವಾ ಅಂತೀರಾ..!!! ಏನು ಮಾಡೋದು ವಯ್ಯಸ್ಸಾಗಿರೋ ತರ ಮಾಡಿದ್ದಾರೆ ನನ್ನ ಮಕ್ಕಳೆಲ್ಲರು.....ಎಷ್ಟು ಮಕ್ಕಳೆಂದು ನೆನಪಿಸಿಕೊಳ್ಳೋಕೆ ಹಾಗೋಲ್ಲ.....

ಇವತ್ತು ನಾನು ನನ್ನ ಮನಸಲ್ಲಿರೋದನ್ನ ಈ ಮೃದುವಾದ ಮನಸಿನಲ್ಲಿ ಹೇಳ್ಕೊಳೋಣ ಅಂತ ಬಂದೆ ನೀವೆಲ್ಲಾ ಓದಿ ಓಡಿಹೋಗದೆ. ಸ್ವಲ್ಪ ನನಗೋಸ್ಕರ ಏನಾದರು ಮಾಡಿ ಆಯ್ತಾ..?

ನನ್ನ ಮಕ್ಕಳು ತುಂಬಾ ಒಳ್ಳೆಯವರು, ಕೆಲವರು ವಿದ್ಯಾವಂತರು, ಕೆಲವರು ದಡ್ಡರು, ಕೆಲವರು ಕೆಲಸಕ್ಕೆಂದು ದೂರ ಹೋಗಿದರೆ, ಕೆಲವರು ನನ್ನ ಭೂಮಿ ತಾಯಿನ ಪೂಜಿಸ್ತಾ ಇದಾರೆ. ಹುಟ್ಟಿದ ಮಕ್ಕಳು ಎಲ್ಲಾ ಅಪ್ಪ ಅಮ್ಮನ್ನ ಚೆನ್ನಾಗಿ ನೋಡುಕೋತಾರಾ ಹೇಳಿ, ಹಾಗೆ ನನ್ನ ಮಕ್ಕಳೂ ಕೂಡ, ಕೆಲವರು ಹಾಗೆ, ಇನ್ನು ಕೆಲವರು ಹೀಗೆ ಎಂಬಂತೆ ಇರ್ತಾರೆ....

ನನ್ನವರು ಯಾರು ನನ್ನ ನೋಡ್ಕೊತಾರೋ ಬಿಡ್ತಾರೋ ಅದು ಬೇರೆ ವಿಷಯ, ಆದರೆ ನನ್ನ ಮನಸಿಗೆ ನೋವಂತು ಮಾಡ್ತಾರೆ. ನನ್ನ ನೋಡಿಕೊಳ್ಳುವುದು ಬೇಡ, ಆದರೆ ನನ್ಗೆ ಅಮ್ಮ ಅನ್ನೋ ಗೌರವ ಕೊಟ್ಟರೆ ಸಾಕು....

ನನ್ನ ಇಷ್ಟು ಮಕ್ಕಳು ಹೇಗೆ ಬೇರೆ ಬೇರೆ ಆಗಿದಾರೆ ಗೊತ್ತೇ..? ಉತ್ತರ ಕನ್ನಡಿಗರು, ದಕ್ಷಿಣ ಕನ್ನಡಿಗರು, ಕರಾವಳಿ ಕನ್ನಡಿಗರು- ಹೀಗೆ ಏನೆಲ್ಲಾ ಆಗೋಗಿದೆ, ಊರು, ಮನೆ ಬದಲಾಗೋದು ಆಯ್ತು ಅವರ ಮಾತು ನೋಡಬೇಕು ಹೇಗೆ ಗೊತ್ತ..? ಈ ಬೆಂಗಳೂರು ಕಡೆಯವರು ಕನ್ನಡಮ್ಮನ ಜೊತೆ ತಮಿಳಮ್ಮನನ್ನು ಬೆರಿಸಿಕೊಂಡು ಮಾತಾಡ್ತಾರೆ, ಇನ್ನು ಉತ್ತರ ಕರ್ನಾಟಕಕ್ಕೆ ಹೋದರೆ ಅಲ್ಲಿ ಮರಾಠಿಯಮ್ಮ ಜೊತೆಗೆ ಹಿಂದಿಯಮ್ಮನ ಸೇರಿಸಿಕೊಂಡಿರ್ತಾರೆ, ಹಂಗೆ ಈ ಬಳ್ಳಾರಿ ಸೀಮೆಗೆ ಬಂದರೆ ಅವರೆಲ್ಲ ಮಾವಾಳ್ಳು-ಮೀವಾಳ್ಳು ಅಂತ ತೆಲುಗಮ್ಮನ್ನ ತುಂಬಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಆಯ್ತ ಇನ್ನು ಕರಾವಳಿ ಕಡೆ ಹೋದರೆ ಅದೇನೋ ತುಳು, ಮತ್ತೆ ಕೊಂಕಣಿ ಅಮ್ಮಂದಿರ ಜೊತೆ ಬೆರೆತು ಬಿಟ್ಟಿದ್ದಾರೆ, ಕೆಲವು ಮಕ್ಕಳು ಉರ್ದು, ಇಂಗ್ಲೀಷಿಯಮ್ಮ ಎಂದುಕೊಂಡು ಕನ್ನಡಮ್ಮ ನೀ ಯಾರಮ್ಮ ಅಂತಾರೆ. ನೋಡಿ ಹೀಗೆ ನನ್ನೊಟ್ಟೆನಲ್ಲಿ ಹುಟ್ಟಿದ ಮಕ್ಕಳೇ ಹೀಂಗವ್ರೆ, ನಾ ಯಾರ ಹತ್ರಾ ಅಂತ ಹೋಗಿ ನನ್ನ ಉಳಿಸಿ, ಬೆಳೆಸಿ ಇರೋವಾಗ ಚೆನ್ನಾಗಿ ನೋಡ್ಕೊಳ್ಳಿ ಅಂತ ಬೇಡೋದು. ನಮ್ಮವರೇ ಇಲ್ಲದಾಗ ಬೇರೆಯವರು ಬರ್ತಾರ ನನ್ನ ಗೋಳಿನ ಕಥೆ ಕೇಳೋಕೆ.......

ನನ್ನ ಪಕ್ಕದ ಮನೆನಲ್ಲಿ ತಮಿಳಮ್ಮ ಅಂತಾ ಇದಾರೆ ಅವರ ಮಕ್ಕಳು ನೋಡಬೇಕು ಅಬ್ಬಾ!!! ಆಶ್ಚರ್ಯ ಆಗ್ತದೆ ಅವಳ ಮಕ್ಕಳೇನಾ ಇವೆಲ್ಲ ಅಂತಾ.... ಆ ಮಕ್ಕಳು ತಮ್ಮ ತವರೂರು ಬಿಟ್ಟು ಬೇರೆ ಊರಿಗೆ ಹೋಗವ್ರೆ ಆ ಊರಿನಲ್ಲಿ ಇರೋರಿಗೆಲ್ಲ ತಮಿಳಮ್ಮನ ಪ್ರೀತಿನೂ ತುಂಬವ್ರೆ ಗೊತ್ತಾ.... ಆಮೇಲೆ ಇನ್ನೊಂದು ಈ ಇಂಗ್ಲೀಷಮ್ಮ ಇದಾಳಲ್ಲ ಆಕೆ ಏನು ನಮ್ಮ ಪಕ್ಕದ ಮನೇಯವಳಲ್ಲ ಆದ್ರೂ ಎಷ್ಟೋಂದು ದೂರ ನಮ್ಗೂ ಅವರಿಗೂ ಆದರೆ ನನ್ನ ಮಕ್ಕಳೆಲ್ಲಾ ಮಾರು ಹೋಗಿದಾರೆ. ಆಕೆಯ ಮೈಮಾಟಕ್ಕೋ, ವಯ್ಯಾರಕ್ಕೋ ಗೊತ್ತಿಲ್ಲ. ಈಗ ಹೇಗಾಗಿದೆ ಗೊತ್ತ ನಾನು ಮಲತಾಯಿ, ಅವಳೇ ಹೆತ್ತತಾಯಿ..... ನನ್ನ ಪಾಡು ಯಾರಿಗೂ ಬೇಡ ಮುಂದೊಂದು ದಿನ ಏನು ಮಾಡ್ತಾರೋ ಅನ್ನೋ ಭಯ. ನಾ ಆ ತಮಿಳಮ್ಮನ ಮಕ್ಕಳಂತೆ ನೀವೂ ಆಗ್ರೋ ಅಂತ ಕೇಳೊಲ್ಲ, ಇಂಗ್ಲೀಷಮ್ಮನ ತರ ನಿನ್ನ ತಾಯಿನ ಎಲ್ಲೆಡೆ ಹಬ್ಬಿಸಿ ಅಂತ
ಕೇಳೊಲ್ಲ..........ಏನಾದರೂ ಆಗಲಿ ನಾನು ನಾನು ಅದೇ ನಾನು........ ಹೆತ್ತಮ್ಮ ಅಲ್ಲವಾ ನನ್ನನ್ನ ನಾನಾಗಿ ಸಾಯೋಕೆ ಬಿಡಿ ನಾನಾಗಿ ಸತ್ತರೆ ನನ್ನ ನೆನಪು ನಿರಂತರಾ ಅನ್ನೋ ಹಾಗೆ ಭಾಷೆನೂ ನಿರಂತರವಾಗಿ ಇರುತ್ತೆ......... ಇನ್ನು ಸಾಯುವ ವಯಸ್ಸು ಬಂದೇ ಇಲ್ಲ ಆಗಲೇ ನನ್ನ ಉಸಿರನ್ನ ಚಿವುಟು ಹಾಕಲಿಕ್ಕೆ ನನ್ನ ಹೊಟ್ಟೆನಲ್ಲಿ ಹುಟ್ಟಿದ ಕುಡಿಗಳೇ ಕಾದಿವೆ. ನನಗೆ ಇದಕ್ಕಿಂತಾ ಬೇಸರದ್ದು, ನೋವಿನ ಜೊತೆ ಸಂಕಟ ತರೋ ವಿಷಯ ಬೇರೇನಿದೆ ಹೇಳಿ ನೀವೆ...?

ಪರ ಮಾತೆಯನ್ನು ಪ್ರೀತಿಸಿರಿ, ನನ್ನನ್ನೂ ಸಹ ಉಳಿಸಿ, ನಾ ಎಂದೂ ನನ್ನೊಬ್ಬಳ ಸಂಗಡವೇ ಇರಿ ಎಂದು ನಾನೇಳುವುದಿಲ್ಲ ಇರುವ ಮನೆಯಲ್ಲಿ
ಎಲ್ಲರನ್ನು ಆಹ್ವಾನಿಸು, ಪ್ರೀತಿಸಿ ಹಾರೈಕೆ ಸಲ್ಲಿಸು...ಆದರೆ ನನ್ನ ಇರುವಿಕೆಯಲ್ಲೇ ಎಲ್ಲವನ್ನು ಸ್ವೀಕರಿಸು.....

ನನ್ನ ಉಸಿರು ಕೊನೆವರೆಗೂ, ನಿಮ್ಮ ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರು ಇ
ಗೆ ಈ ಭೂಮಿ ಇರುವವರೆಗೂ ನಾನು ರಾರಜಿಸಬೇಕೆಂದರೆ ನನ್ನ ಉಸಿರಿಗೆ ಹರ್ಷ ಕೊಡಿ ................ ಇಲ್ಲ ನೀ ಹೆತ್ತಮ್ಮ, ನನ್ನಮ್ಮ ನಿನ್ನೊಡಲ ಧಗ ಧಗಿಸಿ ಹುರಿಯುವಂತೆ ಮಾಡೋಲ್ಲವೆಂದರೆ ನಿಮ್ಮ ಪ್ರತಿ ಹೆಜ್ಜೆಯಲ್ಲೂ ನನ್ನೆಸರ ಉಸಿರಾಡಿ.........ಈ ತಾಯ ಪ್ರೀತಿಯನ್ನ ಉಳಿಸಿಕೊಂಡರೆ ನಾ ಕೊನೆವರೆಗೂ ನಿಮ್ಮೊಟ್ಟಿಗೆ......ಇಲ್ಲವೆ ನೀವು ಮಲತಾಯಿಯೊಟ್ಟಿಗೆ ನಿರ್ಧಾರ ನಿಮ್ಮದು ಬದುಕು ನನ್ನದು............

ನಿಮ್ಮ.......
ಕನ್ನಡಾಂಬೆ

24 comments:

ಸುಮ said...

ಒಳ್ಳೆಯ ಬರಹ . ಜೈ ಕನ್ನಡಮ್ಮ .

sunaath said...

ಕನ್ನಡಾಂಬೆಯ ಮನದ ಅಳಲು ಚೆನ್ನಾಗಿ ವ್ಯಕ್ತವಾಗಿದೆ. ಬೇಂದ್ರೆಯವರ ಕವನ ನೆನಪಾಯಿತು:"ಯಾರು ಬಂದವರಲ್ಲಿ ತಾಯೆ, ಎಂದೆ!"

Unknown said...

ಹುಹ್ ಏನಿದು?? :(... ಐದು ಸಾವಿರ ಕೋಟಿ ಮಕ್ಕಳ???? ನಮ್ಮ ಭಾರತದಲ್ಲಿರೋದೆ ೧೦೫ ಕೋಟಿ ಜನ ಅಂಥದ್ರಲ್ಲಿ?? :-)

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಮಾತೃ ಭಾಷೆಯನ್ನು ಪ್ರೀತಿಸದಿದ್ದರೆ ಇದೇ ಗೋಳು.ಕನ್ನಡ ಮಾತನಾಡಿದರೆ ಯಾರೂ ಗಮನಿಸುವುದಿಲ್ಲ ಎ೦ಬ ಕೀಳರಿಮೆ ಬೆಳೆಯಗೊಟ್ಟಿದ್ದೇವಲ್ಲ..! ಕ೦ಗ್ಲಿಷ್ ಮಾತನಾಡದೆ ದಿನ ಬೆಳಗಾಗುವುದಿಲ್ಲವಲ್ಲಾ..!ಇನ್ನೇನು ಮಾಡುವುದು ಅನುಭವಿಸಬೇಕಷ್ಟೆ!!!
ಕನಿಷ್ಟ್ತ ನಾವು ಇಷ್ಟಾದರೂ ಮಾಡುತ್ತೇವಲ್ಲ ಎ೦ಬುದೇ ಸಮಾಧಾನ.

ವಿ.ರಾ.ಹೆ. said...

>>> ಇನ್ನು ಕೆಲವು ಕಡೆ ಹವ್ಯಕಾ ಅಂತೆ ಮತ್ತೆ ಕೆಲವು ಮಕ್ಕಳು ಉರ್ದು, ಇಂಗ್ಲೀಷಿಯಮ್ಮ ಎಂದುಕೊಂಡು ಕನ್ನಡಮ್ಮ ನೀ ಯಾರಮ್ಮ ಅಂತಾರೆ. >>>

ನಿಮ್ ಕನ್ನಡಮ್ಮಂಗೂ ಹವ್ಯಕಮ್ಮಂಗೂ ಏನ್ ವ್ಯತ್ಯಾಸ? ಇಲ್ಲಿ ಪತ್ರ ಬರೀತಿರೋ 'ಶುದ್ಧ' ಕನ್ನಡಮ್ಮ ಯಾರು? ಎಲ್ಲಿನವ್ಳು ? ;)

Shashi jois said...

ಕನ್ನಡಮ್ಮನಿಗೆ ನಮಸ್ಕಾರ,
ನಿನ್ನ ಅಳಲು ಅರ್ಥವಾಗುತ್ತೆ ತಾಯಿ ಏನು ಮಾಡೋದು ಎಲ್ಲರೂ ನಿನ್ನ ಅಳಲನ್ನು ಅರ್ಥಮಾಡಿ ಕೊಂಡಿದ್ದಾರೆ ನಿನಗೆ ಈ ಸ್ಥಿತಿ ಬರುತ್ತಿರಲಿಲ್ಲ ಅಲ್ವ??
ಸುಗುಣ ಚೆನ್ನಾಗಿದೆ ನಿಮ್ಮ ಬರಹ ..ವಾಸ್ತವವನ್ನು ಚೆನ್ನಾಗಿ ವಿವರಿಸಿದ್ದೀರಿ..

Subrahmanya said...

ಇದು ಮನದಾಳದ ಅಳಲು ಮತ್ತು ಸತ್ಯವಾದ ಅಳಲು ಕೂಡ. ನಿಜವಾದ ಕನ್ನಡಿಗರು ಯಾರು ಎಂದು ನಿಜಕ್ಕೂ confuse ಆಗ್ತಾ ಇದೆ , ನಿಮ್ಮ ಅಳಲನ್ನು ಓದಿದ ಮೇಲೆ. :(

ಸಂಜು . . said...

ನಿಜವಾದ ಮಾತು . . .ಮನದಲ್ಲಿನ ಸಮಾಜದ ಬಗ್ಗೆ ಇರೋ ಕಾಳಜಿ ತುಂಬಾನೆ ಎದ್ದು ತೋರುತ್ತಿದೆ . . .

ಮನದಾಳದಿಂದ............ said...

ಕನ್ನಡಮ್ಮನ ಅಳಲು ನಿಮ್ಮ ಬರಹದ ಮೂಲಕ ಓದಿ ಬಹಳ ಬೇಸರವಾಗುತ್ತಿದೆ. ಕನ್ನಡ ತಾಯಿಗೆ ನಾವು ಕನಿಷ್ಠ ಗೌರವ ಕೊಡುವುದನ್ನೇ ಮರೆತಿದ್ದೇವೆ. ನಾವೆಂತ ಮಕ್ಕಳು ಅಲ್ವಾ?

ಸಾಗರದಾಚೆಯ ಇಂಚರ said...

ಮನಸು
ನಿಮ್ಮ ಮನದಾಳ ಚೆನ್ನಾಗಿದೆ
ಭಾಷೆಯೇ ಒಂದು ಜನಾಂಗದ ಶಕ್ತಿ
ಭಾಷೆ ನಶಿಸಿದರೆ ಜನಾಂಗವು ನಶಿಸಿದಂತೆ
ಒಳ್ಳೆಯ ಬರಹ

ದಿನಕರ ಮೊಗೇರ said...

nija madam, kannada beLesodu kashtano, sulabhaano gottilla...... nashisuttaa irodantoo satya, satya......tumbaa chennaagi barediddeeraa madam....

ಜಲನಯನ said...

ಒಂದು ಬಹಳ ಗಂಭೀರ ವಿಚಾರ ಇದು...ಕನ್ನಡ ಪ್ರಾಚೀನ, ಎಳೇಳು ಪೀಠಗಳು..ಸಾವಿರಾರು ಕುರ್ಚಿಗಳು ಎನ್ನುವ ನಮ್ಮ ರಾಜ್ಯವನಾಳೋ ಅರಸರು ಎಷ್ಟು ಕಾಳಜಿವಹಿಸ್ತಾರೆ...? ಇನ್ನು ನಾವು...ಕನ್ನಡಮ್ಮನ ಮಕ್ಕಳು...ಹಳ್ಳೀಲಿ ಬೆಳೆದರೂ..ಪೇಟೆ ಗಾಳಿ ಸೋಕಿದರೆ ಸಾಕು..ಹಳ್ಳೀಗೆ ಬಂದಾಗ ಅಮ್ಮ ಮುದ್ದೆ ಸಾರು ಬಡಿಸಿದರೆ what is this MOM ? ಅಂತ ಒಂದೇ ಏಟಿಗೆ ಹೆತ್ತ ತಾಯಿಗೆ, ಕನ್ನಡ ತಾಯಿಗೆ ಮತ್ತು ಅವನನ್ನು ಆ ಸ್ಥರಕ್ಕೆ ತಂದ ಮುದ್ದೆಯೆಂಬ ಅನ್ನಪೂರ್ಣೆಯ ಕತ್ತು ಹಿಚುಕುತ್ತಾರೆ....
ಮನಸು ಮೇಡಂ ಬಹಳ ಗಂಭೀರ ವಿಚಾರದ ಪ್ರಸ್ತಾಪ ಚನ್ನಾಗಿ ಮಾಡಿದ್ದೀರಾ...ತಾಯ ಅಳಲ ರೂಪದಲ್ಲಿ...

Dr.D.T.Krishna Murthy. said...

ಕನ್ನಡಮ್ಮನ 'ಮೃದು ಮನಸಿಗೆ'ನಮನಗಳು.ಬರಹ ಸೊಗಸಾಗಿದೆ.ನನ್ನ ಬ್ಲಾಗಿಗೆ ಬನ್ನಿ.ಅದರಲ್ಲಿನ 'ಕನ್ನಡಮ್ಮನ ಅಳಲು'ಎಂಬ ಬರಹವನ್ನೂ ತಪ್ಪದೆ ಓದಿ.ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಕನ್ನಡಮ್ಮನ ಅಳಲನ್ನು ಚೆನ್ನಾಗಿ ಚಿತ್ರಿಸಿದ್ದಿರಾ.... ಕನ್ನಡವನ್ನು ಉಳಿಸಿ- ಬೆಳಸುವಲ್ಲಿ ಪ್ರಾಮಾಣಿಕ ಪಾತ್ರವಹಿಸಿ ತಾಯಿಗೆ ತಕ್ಕ ಮಕ್ಕಳು ಎನಿಸಿಕೊಳ್ಳುವಾ... ಮರಳುಗಾಡಿನಲ್ಲಿದ್ದೂ ಕನ್ನಡಮ್ಮನ ಬಗ್ಗೆ ಕಾಳಜಿ ತೋರಿಸುತ್ತಿರುವ ತಾವು ನಮಗೆ ಸ್ಫೂರ್ತಿ.

ಸುಧೇಶ್ ಶೆಟ್ಟಿ said...

hmmm....

Chennagi barediddeera pathravannu... nimma kaaLaji ishta aayithu... aadre paristhithi poorthi hadhegettilla anisuttade :)

Kirti said...

good one

prabhamani nagaraja said...

ಕನ್ನಡಮ್ಮನ ಅಳಲನ್ನು ಚೆನ್ನಾಗಿ ತೆರೆದಿಟ್ಟಿದ್ದೀರಿ. ಅರ್ಥವತ್ತಾಗಿದೆ

ಶಿವಪ್ರಕಾಶ್ said...

ಜೈ ಕನ್ನಡಮ್ಮ . :)

Snow White said...

ಜೈ ಕನ್ನಡಮ್ಮ ..

Ranjana H said...

chendada baraha, namma kannadammanannu naavu yaava reeti nadesikolluttiddeve anta omme kannu teresi torisidiri.

dhanyavaadagalu

ತೇಜಸ್ವಿನಿ ಹೆಗಡೆ said...

ಕನ್ನಡಮ್ಮನ ಅಳಲು ಎಂದೂ ಮುಗಿಯುವುದೋ....!!! :( ಅಂದ ಹಾಗೆ ಹವ್ಯಕ ಕನ್ನಡವೂ ಕನ್ನಡ ಭಾಷೆಯ ಅಂಗವೇ. ಅದು ಕನ್ನಡದಿಂದ ಭಿನ್ನವಲ್ಲ... :)

ಜಯ ಹೇ ಕರ್ನಾಟಕ ಮಾತೆ.

ಮನಸಿನ ಮಾತುಗಳು said...

ishtavaayitu lekhana.... idappa spirittu... :-)

shivu.k said...

ಮನಸು ಮೇಡಮ್,

ನನ್ನ ಕನ್ನಡಾಂಭೆಯ ಆಳಲನ್ನು ಚೆನ್ನಾಗಿ ಬರೆದಿದ್ದೀರಿ. ನೀವು ಬರೆದಿರುವುದೆಲ್ಲ್ಲಾ ಸತ್ಯವೆನಿಸುತ್ತೆ.