ಆಂಗ್ಲರ ಕಣ್ಣಿಗೆ ಗುರಿಯಾಗಿದ್ದ ಭರತ ಭೂಮಿಯಲಿ
ಸ್ವತಂತ್ರವೇ ಇಲ್ಲದೆ ಕೂಲಿಯಾಳುಗಳಾಗಿದ್ದರು
ತಮ್ಮ ತನವನ್ನೇ ಮರೆತು ಬಾಳು ಸಾಗಿಸುತ್ತಿದ್ದರು
ಅಂದು ಸ್ವತಂತ್ರ ಬರುವ ಮೊದಲು...........
ಸ್ವತಂತ್ರ ಪಡೆಯುವ ದಿಟ್ಟ ಹೆಜ್ಜೆಯಲ್ಲಿ
ಎಷ್ಟೋ ಹಳ್ಳಿಗಳು ಗುಡಿಸಿ ಗುಂಡಾಂತರ
ಜೊತೆಗೆ ಹೆಣ್ಣು ಮಕ್ಕಳಿಗೆ ಹಲವು ಅವಾಂತರ
ಗಂಡು ದಿಕ್ಕಿಲ್ಲದಂತೆ ಬರಡು ಜೀವನ ಮಾಡಿಬಿಟ್ಟಿದ್ದರಂದು.........
ಸ್ವತಂತ್ರ ಪೂರ್ವಾದಿನಗಳು ಕರಿ ನೆರಳಿನಂತೆ
ಸಾಗಿಸಿದ ಅದೆಷ್ಟೋ ಜನಸ್ಥೋಮ
ಒಲವಿನ ಹಸೆಮಣೆಯನ್ನೇ ಮರೆತು
ಸೇಡಿನ ಧಗೆಯಲಿ ಮಿಂದಿದ್ದರು ಅಂದು.....
ಹೆಣ್ಣು ಗಂಡು ಭೇದವಿಲ್ಲದಂತೆ ಹೀನಾಯ ಸ್ಥಿತಿಗೆ ತಳ್ಳಿ
ಆಂಗ್ಲ ದೊರೆಗಳು ರಾಜಠೀವಿಯಲ್ಲಿ ಮೆರೆದರು
ದುಃಖಕೆ ಸ್ಪಂದಿಸದೆ ಕಾಲ್ತುಳಿತಕೆ ಬಿದ್ದ
ಹತಾಷಾ ಜನರ ನೋವು ನರಗಟ್ಟಿದ್ದವಂದು........
ಸ್ವತಂತ್ರದ ಮುನ್ನಾದಿನಗಳ ನೋವಿನ ಕಹಳೆಗೆ
ಜಲಿಯನ್ ವಾಲಾ ಬಾಗ್ ನ ಮಾರಣಹೋಮವೇ
ಸಾಕು ನರಕಯಾತನೆ ಅನುಭವಿಸಿದ ಅಂದಿನ
ಅಮಾಯಕ ಜನರಿಗೆ ನೀಡಿದ ಆಂಗ್ಲರ ಕೊಡುಗೆ.........
ಹೋರಾಟ, ಬಡಿದಾಟ, ಕಾದಾಟ ಯಾವುದಕ್ಕೂ
ಬಗ್ಗದ ಆಂಗ್ಲರಿಗೆ ಕೊನೆಗೊಂದು ಹುಟ್ಟಿತೊಂದು ತಂತ್ರ
ಅದುವೇ ಶಾಂತಿಯುತ ಅಹಿಂಸಾ ಮಾರ್ಗದ ಮಂತ್ರ
ಮಂತ್ರ-ತಂತ್ರದಲೇಗೋ ಮೊಳಗಿತು ಸ್ವತಂತ್ರದ ಕಹಳೆ ...........
ಸ್ವತಂತ್ರ ಬಂದರೇನು ಪ್ರಜಾಪ್ರಭುತ್ವ ಇದ್ದರೇನು
ರಾಜಕೀಯದ ಹೆಸರಲಿ ಆಂಗ್ಲರಿಗಿಂತ ಕೀಳಾಗಿ
ಬಾಳುತಿಹರು ನಾವೇ ಆಯ್ಕೆ ಮಾಡಿದ
ದೇಶ, ರಾಜ್ಯ ಕಾಯುವ ಬದಲು...ನುಂಗೋ ಭಟರು........
ರಾಜಕೀಯದ ದಬ್ಬಾಳಿಕೆಯಲಿ ಬಿದ್ದೇಳುತಿರುವ
ಖಾದಿ ಬಟ್ಟೆಯ ಭ್ರಷ್ಟ ರಾಜಕಾರಣಿಗಳಿಗೆ
ಅಹಿಂಸಾ ಮಾರ್ಗ ಬಿಟ್ಟು ಬೇರಾವ ಮಾರ್ಗ
ಹುಡುಕಿ ತಳಿಸಬೇಕಿದೆಯೋ ತಿಳಿಯದು.........
ಎಂದು ಈ ಭ್ರಷ್ಟತೆ ಹೋಗಿ ನಿಷ್ಟತೆ ಬರುವುದೋ
ಮತ್ತೊಮ್ಮೆ ಗಾಂಧಿಯಂತ ಮಹಾನುಭಾವಿಗಳು
ಹುಟ್ಟಿ ಬರಬೇಕಿದೆ, ಸ್ವತಂತ್ರದ ಹೆಸರಲಿ
ಅತಂತ್ರವನ್ನು ಹೊರದೋಡಿಸ ಬೇಕಿದೆ.......
ಸ್ವತಂತ್ರವೇ ಇಲ್ಲದೆ ಕೂಲಿಯಾಳುಗಳಾಗಿದ್ದರು
ತಮ್ಮ ತನವನ್ನೇ ಮರೆತು ಬಾಳು ಸಾಗಿಸುತ್ತಿದ್ದರು
ಅಂದು ಸ್ವತಂತ್ರ ಬರುವ ಮೊದಲು...........
ಸ್ವತಂತ್ರ ಪಡೆಯುವ ದಿಟ್ಟ ಹೆಜ್ಜೆಯಲ್ಲಿ
ಎಷ್ಟೋ ಹಳ್ಳಿಗಳು ಗುಡಿಸಿ ಗುಂಡಾಂತರ
ಜೊತೆಗೆ ಹೆಣ್ಣು ಮಕ್ಕಳಿಗೆ ಹಲವು ಅವಾಂತರ
ಗಂಡು ದಿಕ್ಕಿಲ್ಲದಂತೆ ಬರಡು ಜೀವನ ಮಾಡಿಬಿಟ್ಟಿದ್ದರಂದು.........
ಸ್ವತಂತ್ರ ಪೂರ್ವಾದಿನಗಳು ಕರಿ ನೆರಳಿನಂತೆ
ಸಾಗಿಸಿದ ಅದೆಷ್ಟೋ ಜನಸ್ಥೋಮ
ಒಲವಿನ ಹಸೆಮಣೆಯನ್ನೇ ಮರೆತು
ಸೇಡಿನ ಧಗೆಯಲಿ ಮಿಂದಿದ್ದರು ಅಂದು.....
ಹೆಣ್ಣು ಗಂಡು ಭೇದವಿಲ್ಲದಂತೆ ಹೀನಾಯ ಸ್ಥಿತಿಗೆ ತಳ್ಳಿ
ಆಂಗ್ಲ ದೊರೆಗಳು ರಾಜಠೀವಿಯಲ್ಲಿ ಮೆರೆದರು
ದುಃಖಕೆ ಸ್ಪಂದಿಸದೆ ಕಾಲ್ತುಳಿತಕೆ ಬಿದ್ದ
ಹತಾಷಾ ಜನರ ನೋವು ನರಗಟ್ಟಿದ್ದವಂದು........
ಸ್ವತಂತ್ರದ ಮುನ್ನಾದಿನಗಳ ನೋವಿನ ಕಹಳೆಗೆ
ಜಲಿಯನ್ ವಾಲಾ ಬಾಗ್ ನ ಮಾರಣಹೋಮವೇ
ಸಾಕು ನರಕಯಾತನೆ ಅನುಭವಿಸಿದ ಅಂದಿನ
ಅಮಾಯಕ ಜನರಿಗೆ ನೀಡಿದ ಆಂಗ್ಲರ ಕೊಡುಗೆ.........
ಹೋರಾಟ, ಬಡಿದಾಟ, ಕಾದಾಟ ಯಾವುದಕ್ಕೂ
ಬಗ್ಗದ ಆಂಗ್ಲರಿಗೆ ಕೊನೆಗೊಂದು ಹುಟ್ಟಿತೊಂದು ತಂತ್ರ
ಅದುವೇ ಶಾಂತಿಯುತ ಅಹಿಂಸಾ ಮಾರ್ಗದ ಮಂತ್ರ
ಮಂತ್ರ-ತಂತ್ರದಲೇಗೋ ಮೊಳಗಿತು ಸ್ವತಂತ್ರದ ಕಹಳೆ ...........
ಸ್ವತಂತ್ರ ಬಂದರೇನು ಪ್ರಜಾಪ್ರಭುತ್ವ ಇದ್ದರೇನು
ರಾಜಕೀಯದ ಹೆಸರಲಿ ಆಂಗ್ಲರಿಗಿಂತ ಕೀಳಾಗಿ
ಬಾಳುತಿಹರು ನಾವೇ ಆಯ್ಕೆ ಮಾಡಿದ
ದೇಶ, ರಾಜ್ಯ ಕಾಯುವ ಬದಲು...ನುಂಗೋ ಭಟರು........
ರಾಜಕೀಯದ ದಬ್ಬಾಳಿಕೆಯಲಿ ಬಿದ್ದೇಳುತಿರುವ
ಖಾದಿ ಬಟ್ಟೆಯ ಭ್ರಷ್ಟ ರಾಜಕಾರಣಿಗಳಿಗೆ
ಅಹಿಂಸಾ ಮಾರ್ಗ ಬಿಟ್ಟು ಬೇರಾವ ಮಾರ್ಗ
ಹುಡುಕಿ ತಳಿಸಬೇಕಿದೆಯೋ ತಿಳಿಯದು.........
ಎಂದು ಈ ಭ್ರಷ್ಟತೆ ಹೋಗಿ ನಿಷ್ಟತೆ ಬರುವುದೋ
ಮತ್ತೊಮ್ಮೆ ಗಾಂಧಿಯಂತ ಮಹಾನುಭಾವಿಗಳು
ಹುಟ್ಟಿ ಬರಬೇಕಿದೆ, ಸ್ವತಂತ್ರದ ಹೆಸರಲಿ
ಅತಂತ್ರವನ್ನು ಹೊರದೋಡಿಸ ಬೇಕಿದೆ.......
ಭಾರತ ಭೂಮಿಗೆ ಬ್ರಿಟೀಷರಿಂದ ಸ್ವಾತಂತ್ರ್ಯ ದೊರಕದಿದ್ದರೆ ಚೆನ್ನಾಗಿರುತ್ತಿತ್ತು ಮತ್ತು ಬ್ರಿಟೀಷರ ಆಳ್ವಿಕೆಯಲ್ಲಿಯೇ ನಾವೆಲ್ಲರೂ ಇರಬೇಕಿತ್ತು......?
ಬ್ರಿಟೀಷರ ಆಳ್ವಿಕೆಯಲ್ಲಿದ್ದಿದ್ದರೆ ನಮಗೆ ಹೊರದೇಶದಾದ್ಯಂತ ಒಳ್ಳೆಯ ಮರ್ಯಾದೆ ಇರುತ್ತಿತ್ತು. ನಮ್ಮಗಳಿಗೆಲ್ಲಾ ಬ್ರಿಟೀಷ್ ಪಾಸ್ ಪೋರ್ಟ್ ಸಿಗುತ್ತಿತ್ತು. ಅನುಕೂಲಗಳು ಹೆಚ್ಚಿನವಾಗುತ್ತಿತ್ತು, ಈಗ ನಮ್ಮ ದೇಶದಲ್ಲಿ ಮೋಸ, ವಂಚನೆ,ಧಗ, ಕಳ್ಳತನ, ಕೊಲೆ, ಅತ್ಯಾಚಾರ ಎಲ್ಲವೂ ಮಿತಿಮೀರಿದೆ......... ರಾಜಕೀಯದವರು ಅತಿಯಾಗಿ ವರ್ತಿಸುತ್ತಾರೆ - ಎಂಬುದು ನಮ್ಮ ಸಹದ್ಯೋಗಿಯೊಬ್ಬರ ವಾದ.....
ನಮಗೆ ನಮ್ಮತನ ಎನ್ನುವುದು ಸ್ವತಂತ್ರ ಬಂದಿದ್ದರಿಂದಲೇ ಸಾಧ್ಯ.... ನಮ್ಮನ್ನು ನಾವು ಗುರುತಿಸಿಕೊಳ್ಳಲು ಸ್ವತಂತ್ರವೇ ಸರಿಯಾದ ದಾರಿ...... ಅವರ ಆಳ್ವಿಕೆಯಲಿದ್ದರೆ ನಾವುಗಳು ಕೆಲಸ ಮಾಡಿ ಬ್ರಿಟೀಷರು ಹೆಸರು ತೆಗೆದುಕೊಳ್ಳುತ್ತಲಿದ್ದರು. ಅವರ ಪಾಸ್ ಪೋರ್ಟ್ ನಿಂದ ನಮಗ್ಯಾವುದೇ ಅನುಕೂಲವಾದರೂ ನಮ್ಮ ಸ್ವಂತಿಕೆ ಇರುವುದಿಲ್ಲ. ಎಲ್ಲಾ ದೇಶದಲ್ಲಿ ಮೋಸ ವಂಚನೆ, ಕೊಲೆ ದರೋಡೆ ಇದ್ದೇ ಇರುತ್ತೆ ದೂರದಲ್ಲಿರುವವರಿಗೆ ಕಾಣುವುದಿಲ್ಲ ನಮ್ಮ ದೇಶದ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳುತ್ತೇವೆ ಆದ್ದರಿಂದ ನಮ್ಮ ದೇಶದಲ್ಲೇ ಹೆಚ್ಚು ತಪ್ಪು ನೆಡೆಯೋದು ಎಂದು ತಪ್ಪು ಭಾವಿಸುತ್ತೇವೆ - ಎಂಬುದು ನನ್ನ ವಾದ
ನೀವು ಸಹ ನಿಮ್ಮ ನಿಮ್ಮ ವಾದಗಳನ್ನು ಮಂಡಿಸಿ.... ನಿಮಗೇನನ್ನಿಸುತ್ತೋ ಅದನ್ನು ತಿಳಿಸಿ.....
22 comments:
ಮನಸು ಮೇಡಂ ನನ್ನ ಓಟು ಕೌಂಟ್ ಮಾಡ್ಕೊಳ್ಳಿ...ಅಲ್ಲ ಆಕ್ಸಿಡೆಂಟ್ ಆಗುತ್ತೆ ಅಂತ ಕಾರು, ಬೈಕು ಓಡ್ಸೋದೇ ನಿಲ್ಸೋದು ಮೂರ್ಖತನ...ಸ್ವಾತಂತ್ರ್ಯ ನಮ್ಮ ಕೈಲಿರುವ ಆಯುಧ..ಇದನ್ನು ಮನೆಕಟ್ಟೋಕೆ, ಹೊಲಬಿತ್ತೋಕೆ ಹೇಗೆ ಉಪಯೋಗಿಸ್ಬಹುದೋ ತನ್ನವರನ್ನ ಹೊಡೀಯೋಕೂ ಬಳಸ್ಬಹುದು..ಆಂದ್ರೆ ..ನಮ್ಮ ಮೌಢ್ಯತೆ ಹೋಗಲಾಡಿಸ್ಕೋಬೇಕು...ರಾಜಕಾರಣ ನಡೆಯೋದು ನಮ್ಮಿಂದಲೇ ಅನ್ನೋದು ಯಾಕೆ ಮರೀತಾರೆ,,,? ಭ್ರಷ್ಟರನ್ನ ಕಿತ್ತು ಒಗೆಯಿರಿ...ಅದು ಸಾಧ್ಯ ..ಸ್ವಾತಂತ್ರ್ಯ ಇದ್ದಾಗ..ಬೆರೆಯವರ ಹಂಗಲ್ಲಿ ರಾಜನಾಗಿರೋದಕ್ಕಿಂತ ತನ್ನ ಮನೆಲಿ ಅಂಬಲಿ ಕುಡಿದರೂ ಸುಖ,,,,
ಹಹಹ...ಅಂದ ಹಾಗೆಕವನ ಬಹಳ ರಾಷ್ಟ್ರಭಕ್ತಿಯಿಂದ ಕೂಡಿದೆ...
ಸ್ವಾತ೦ತ್ರ್ಯ ಪೂರ್ವ ಭಾರತದ ಪರಿಸ್ಥಿತಿಯನ್ನು ಹಾಗೂ ಸ್ವಾತ೦ತ್ರ್ಯಾ ನ೦ತರದ ವಾಸ್ತವದ ಘೋರತೆಯನ್ನು ಚೆನ್ನಾಗಿ ನಿಮ್ಮ ಕವನದಲ್ಲಿ ಚಿತ್ರಿಸಿದ್ದೀರಿ. ನಮ್ಮ ಭಾರತದ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳುವ ಜವಾಬ್ಧಾರಿ ನಮ್ಮೆಲ್ಲರದಾಗಿದೆ. ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಒಮ್ಮೆ ಭೇಟಿ ನೀಡಿ.
ಮನಸು ಮೇಡಂ,
ಸ್ವಾತಂತ್ರ್ಯ ಇದ್ದರೇನೆ ನಮ್ಮ ಅಭಿಪ್ರಾಯವನ್ನು ರಾಜಾರೋಷವಾಗಿ ಮಂಡಿಸಬಹುದು..... ಇಲ್ಲದಿದ್ದರೆ ಇದೆಲ್ಲಾ ಸಾದ್ಯವಿತ್ತಾ ....? ನಾವು ಮಾಡಿದ ಅಡುಗೆಗೆ ಅವರು ಹೆಸರಿಡುತ್ತಿದ್ದರು.... ದೇಶ ನಮ್ಮದಾದರು ಅವರ ಮರ್ಜಿ ನಡೆಯುತ್ತಿತ್ತು.... ಈಗ ನಮಗೆ ಬೇಡವೆನಿಸಿದರೆ ಸರಕಾರ ಬದಲಿಸಬಹುದು.... ಬ್ರಷ್ಟಾಚಾರ ಕ್ಕೂ ಕೊನೆ ಬರಬಹುದು..... ಕಾಯೋಣ..... ನೂರು ಜನ ಸಂತೋಷ್ ಹೆಗ್ಡೆ ಯವರು ಬರಲಿ ಎಂದು ಪ್ರಾರ್ತಿಸೋಣ.... ನನಗೆ ನಮ್ಮ ಸ್ವತಂತ್ರ ಭಾರತವೇ ಇಷ್ಟ.... ಹೆಮ್ಮೆ....
ನಿಮ್ಮ ಕವನ ಪೂರ ರಾಷ್ಟ್ರಭಕ್ತಿ ತುಂಬಿದೆ.... ತುಂಬಾ ಚೆನ್ನಾಗಿದೆ....
ಬ್ರಿಟಿಶರು ಭಾರತವನ್ನು ಸುಲಿದರು. ಈಗ ನಮ್ಮವರೇ ನಮ್ಮನ್ನು ಸುಲಿಯುತ್ತಿದ್ದಾರೆ. ಅದೇ ಈಗ ನಮಗಿರುವ ಸಮಾಧಾನ!
ಮನಸು...
ಬೇಸರವಾಗುತ್ತದೆ ನಿಜ...
ಹಾಗಿದ್ದರೂ..
ಈ ವ್ಯವಸ್ಥೆಯನ್ನು ನಾವೆಲ್ಲ ಒಂದು ದಿನ ಸರಿಪಡಿಸಬಹುದೆಂಬ ಭರವಸೆ ಖಂಡಿತ ಇದೆ...
ನಾವು ಇದನ್ನು ಸರಿಪಡಿಸಲೇ ಬೇಕು... ಸರಿ ಪಡಿಸೋಣ..
ಗೆಳೆಯ ಆಜಾದ್, ದಿನಕರ್, ಮಾತಿಗೆ ನನ್ನ ಬೆಂಬಲ...
ಸುನಾಥ ಸರ್ ಸರಿಯಾಗಿಯೇ ಹೇಳಿದ್ದಾರೆ...
ಭರವಸೆ.. ನಂಬಿಕೆಯನ್ನು ಯಾವಾಗಲೂ ಬಿಡಬಾರದು...
ಸ್ವಾತಂತ್ರ್ಯ ದಿದಂದು ಒಳ್ಳೆಯ ಚಿಂತನೆ ಮಾಡಿಸಿದ್ದಕ್ಕೆ ಧನ್ಯವಾದಗಳು...
ಸ್ವಾತಂತ್ರ್ಯದಿನದ ಶುಭಾಶಯಗಳು...
ವಂದೇ ... ಮಾತರಂ...!
ನನ್ನ ಸಹಮತ ಕೂಡ ಇದೆ ನಿಮ್ಮ ವಾದಕ್ಕೆ... ಕವನ ಇಷ್ಟ ಆಯಿತು :)
ಅಜಾದ್ ಸರ್,
ನೀವು ನಮಗೆ ಸಹಮತ ನೀಡಿದ್ದೀರಿ ಇಂದು ಮತ್ತೊಮ್ಮೆ ವಾದ ವಿವಾದ ನೆಡೆಯಬಹುದು ಹಹಹ ನಾನು ನನ್ನ ವಾದದಲ್ಲೇ ಇದ್ದೇನೆ. ಅವರನ್ನೇ ನಮ್ಮ ದಾರಿಗೆ ತರುವ ಪ್ರಯತ್ನದಲ್ಲಿದ್ದೇನೆ. ವಂದನೆಗಳು
ಪ್ರಭಾಮಣಿ,
ಸ್ವಾತಂತ್ರ್ಯದ ಹೆಸರಲ್ಲಿ ಏನೆಲ್ಲಾ ನೆಡೆಯುತ್ತಲಿದೆ. ನಾವುಗಳು ಏನಾದರೂ ನಮ್ಮ ಕೈಲಾದಷ್ಟು ಬದಲಾವಣೆಗಳನ್ನು ನಮ್ಮ ಸುತ್ತಮುತ್ತಲಿನ ಜನರಲ್ಲಿ ಬದಲಿಸಬೇಕು.
ವಂದನೆಗಳು
ದಿನಕರ್ ಸರ್,
ಯಾಕೆ ಜನ ನಮ್ಮರು ಹೀಗಿಲ್ಲ ಆಗಿಲ್ಲ ಎಂದು ವಾದ ಮಾಡುತ್ತಾರೆ. ಬೇರೆಯವರನ್ನ ನೋಡಿ ಒಳ್ಳೆಯದೇನಾದರು ಇದ್ದರೆ ಕಲಿಯಬೇಕು ಅದು ಬಿಟ್ಟು ನಮ್ಮ ದೇಶ ಸರಿ ಇಲ್ಲ ಅನ್ನೋದು ಸರಿ ಅಲ್ಲ ಅಲ್ಲವೇ..?
ಸುನಾಥ್ ಕಾಕ,
ಅಂದು ಆ ಜನ ಹಾಗೆ ಮಾಡಿದರು ಈಗ ನಮ್ಮ ಜನರೇ ಹೀಗಾಗಿದರೆ .... ಇದಕ್ಕೆ ಪರಿಹಾರವಿಲ್ಲವೇ...ಎಂದೆನಿಸುತ್ತೆ... ಧನ್ಯವಾದಗಳು ನನ್ನೊಟ್ಟಿಗೆ ನೀವು ಜೊತೆಗೂಡಿದ್ದಕ್ಕೆ
ಪ್ರಕಾಶಣ್ಣ,
ಏನು ಮಾಡುವುದು ನೆಡೆಯುತ್ತಲಿರುವುದನ್ನೆಲ್ಲಾ ನಾವು ನೋಡಿ ಕೂರಬೇಕಾಗಿದೆ....... ಇಂದಲ್ಲಾ ನಾಳೆ ಸರಿಹೋಗುವುದೆಲ್ಲ ಎಂಬ ನಂಬಿಕೆಯಲ್ಲಿ ನಾವು ಇರಬೇಕು.
ಧನ್ಯವಾದಗಳು
ಸುಧೇಶ್,
ಧನ್ಯವಾದಗಳು ನೀವು ಸಹ ನಮ್ಮೊಟ್ಟಿಗಿದ್ದೀರಿ ಇಂದು ನಮ್ಮ ಆಫೀಸಿನಲ್ಲಿ ಈ ಚರ್ಚೆ ಮುಂದುವರಿಯುತ್ತೆ ನಿಮ್ಮೆಲ್ಲರ ಕಾಮೆಂಟ್ ಅವರಿಗೆ ತೋರಿಸಿ ಹೇಳುತ್ತೇನೆ.
ಇದು ನಮ್ಮನ್ನಾಳುವವರು ತಂದಿಟ್ಟ ಪರಿಸ್ತಿತಿ.. ಹಿಂದೆ ಬ್ರಿಟಿಷರು ನಮ್ಮ ತಲೆಗೆ ಕಲ್ಲು ಹೊತ್ತು ಹಾಕಿದರು.. ಈಗ ನಮ್ಮವರೇ ಹಾಕುತ್ತಿದ್ದಾರೆ... ವ್ಯತ್ಯಾಸವಿಲ್ಲ.. ಇದನ್ನು ಸರಿಪಡಿಸಬಹುದು.. ಭ್ರಷ್ಟರನ್ನು ಬೀದಿಗೆಳೆದು , ಚಪ್ಪಲಿಯಿಂದ ನಾಲ್ಕು ಬಿಗಿಯುವ ಮಂದಿ ಬೇಕು ಅಷ್ಟೇ..
ಸುನಾಥರ ಮಾತೇ ನನ್ನದು ಸಹಾ!
ಇವರನ್ನು ಬಗ್ಗು ಬಡಿಯಲು ಒಂದು ಆ೦ಧೊಳನವಾಗಬೇಕಾಗಿದೆ.
ಕವನ ಚೆನ್ನಾಗಿದೆ ಜೊತೆಗೆ ತಮ್ಮ ಪ್ರಶ್ನೆಯು ಸಹಾ!
ಬ್ರಿಟಿಷರು ಒಳ್ಳೆಯ ಮನೋಭಾವದವರಾಗೇನೂ ಇರಲಿಲ್ಲ, ಆದರೆ ಇವತ್ತಿನ ನಮ್ಮ ಕಲುಷಿತ ಮತ್ತು ಲಂಚಾವತಾರದ ದಿನಗಳು ನಮಗೆ ಅವರಾದರೂ ಚೆನ್ನಾಗೇ ಇರುತ್ತಿತ್ತೆನೋ ಅಂತನ್ನಿಸುವಷ್ಟು ಬೋರು ಹೊಡೆಸಿದೆ, ಎಲ್ಲಿ ಏನಾಗಿಬಿಡುತ್ತೋ ಎಂದು ಮನಸ್ಸು ಕೆಡುಕನ್ನೇ ಸದಾ ಚಿಂತಿಸುವಷ್ಟು ಹೊಲಸಾಗಿದೆ, ಆದರೆ ಇಲ್ಲಿ ತಮ್ಮ ಅನಿಸಿಕೆ ಮತ್ತು ಕವನ ಎರಡೂ ಚೆನ್ನಾಗಿ ಬಂದಿವೆ, ತಮಗೆ ಸಲಾಮು
ಮನಸು
ಕೇವಲ ೬೩ ವರ್ಷಗಳಲ್ಲಿ ನಮ್ಮ ದೇಶ ಸಾಧಿಸಿದ ಪ್ರಗತಿ ಇನ್ಯಾವ ದೇಶವೂ ಸಾಧಿಸಿಲ್ಲ
ಬಿಲಿಯಗಟ್ಟಲೆ ಜನರನ್ನು ಹೊತ್ತುಕೊಂಡು ಬಲಿಷ್ಠ ಅರ್ಥಿಕತೆಯತ್ತ ಮುನ್ನುಗ್ಗುವುದು ಸಣ್ಣ ಕೆಲಸವೇ?
ಬಡತನ ಇದ್ದಾಗ ಕೊಲೆ ಸುಲಿಗೆ ಎಲ್ಲ ಮಾಮೂಲು
ನಮ್ಮ ದೇಶ ಹೇಗಿದ್ದರೂ ಚೆನ್ನವೇ
ತುಂಬಾ ಚನ್ನಾಗಿದೆ ನಿಮ್ಮ ಈ ಬರಹ ,ನಮ್ಮ ಭಾರತದ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳುವ ಜವಾಬ್ಧಾರಿ ನಮ್ಮೆಲ್ಲರದಾಗಿದೆ.
SATISH N GOWDA
ನನ್ನ ಸ್ನೇಹಲೋಕ (ORKUT)
satishgowdagowda@gmail.com
ನನ್ನವಳ ಪ್ರೇಮಲೋಕ ( my blog)
http://nannavalaloka.blogspot.com/
deshada aagu hogu mattu puraatan gal bagge bahal chennagi vivarisiddiri mattu kavand arth bahal chennagide kavan isgtavaayitu
eredu vaadagaligu arthavide.. :)
sunaath sir praticriyeye nanna pratikriye... :)
"ಸ್ವಾತಂತ್ರ್ಯ ಇಷ್ಟು ಬೇಗ ಸಿಗಬಾರದಿತ್ತು..
ಅದ್ಯಾರೋ ಏನೋ ಕೊಟ್ರಂತೆ ಇವರ್ಯಾರೋ ಏನೋ ಈಸ್ಕೊಂಡ್ರಂತೆ ಅವರೇನ ಕೊಟ್ರು ಇವರೆನ್ ಈಸ್ಕೊಂಡರು ಅಂತ ಯಾರ್ಗೂ ಸರ್ಯಾಗ್ ಗೊತ್ತಿಲ್ಲ.. ಯಾಕಂದ್ರೆ ಅದ್ ನಡೆದಿದ್ದು ಕತ್ತಲೇಲಿ..
ಅದಕ್ಕೆ ನಮ್ ಜನ ಅವತ್ತಿಂದ ಇವತ್ ವರೆಗೂ ಕತ್ತಲಲ್ಲೇ ಇದ್ದಾರೆ..
... ವರ್ಷಗಳ ಹಿಂದೆ ಬ್ರಿಟಿಷರ ಕೆಳಗೆ ನಾವು ಗುಲಾಮರು..
ಇಂದು ನಮ್ಮವರ ಕೆಳಗೆ ನಾವು ಗುಲಾಮರು..
ಇದಕ್ಕೆ ಹೆಸರು ಸ್ವಾತಂತ್ರ್ಯ.."
ಇದು ವೀರಪ್ಪನಾಯ್ಕ ಚಿತ್ರದ ಸಂಭಾಷಣೆ,ಇದೆ ನನ್ನ ವಾದ ಕೂಡ.
ಸ್ವಾತಂತ್ರ್ಯ ಸಿಗದಿದ್ರೇ ಚೆನ್ನಾಗಿತ್ತೂ ಇಲ್ಲಾ ಸಿಕ್ಕಿದ್ದೇ ಒಳ್ಳೇದಾಯ್ತೊ... ಎನೊ ಗೊತ್ತಿಲ್ಲ... ಸಿಕ್ಕಿದ್ದಂತೂ ಸತ್ಯ... ಇನ್ನು ಉಳಿಸಿಕೊಳ್ಳೊದೂ ಬಿಡೋದು ನಮ್ಮ ಮುಂದಿರುವ ಪ್ರಶ್ನೆ... ನಮ್ಮವರ ಬಂಧನದಲ್ಲೇ ನಾವೇ ಸಿಲುಕುತ್ತಿದ್ದೇವೇನೊ ಅನಿಸುತ್ತೆ ಕೆಲವು ಸಾರಿ... ಬಹಳ್ ಕ್ಲೀಷ್ಟ ವಿಚಾರ ಇದು...
Post a Comment