Tuesday, August 17, 2010

ಮೀನಿನ ಮೇಸ್ಟ್ರು ಮತ್ತು ಕಣ್ಣಿನ ಡಾಕ್ಟರ್


ನಮಗೆ ತೀರಾ ಆತ್ಮೀಯರೆನಿಸಿಕೊಂಡಂತಹ ಇಬ್ಬರೂ ಬಹಳ ವಿಶೇಷ ವ್ಯಕ್ತಿಗಳು, ತಮ್ಮ ವೃತ್ತಿಯಲ್ಲಿ ಅತಿ ಪ್ರಬುದ್ಧತೆಯನ್ನು ಸಾಧಿಸಿರುವಂತಹವರು.

ಮೊದಲು ಅವರೂರಿನಲ್ಲೇ ಇರುವ ಕೆರೆ, ಕುಂಟೆಗಳಲ್ಲಿ ಬೆಸ್ತರಂತೆ ಮೀನನ್ನು ಹಿಡಿದು ಅದರ ಬಗ್ಗೆ ಹೆಚ್ಚು ಹಳ್ಳಿ ಜನರಿಗೆ ತಿಳಿಸುತ್ತಿದ್ದರೇನೋ.... ನಂತರ ಹಳ್ಳಿಯಿಂದ ಪೇಟೆಗೆ ಬಂದು ಮೀನಿನ ಮಾರ್ಕೆಟ್ ಗೆ ಬಂದಂತಹ ಮೀನುಗಳ ಬಗ್ಗೆ ಬಾರಿ ಅಭ್ಯಾಸ ಮಾಡಿ ಮಾಡಿ..... ನಂತರ ಕಡಲ ತೀರಕ್ಕೆ ಹೋಗಿ ಅಲ್ಲೂ ಕಡಲ ದಡದಲ್ಲಿ ಕೂತು ಮೀನಿಗಾಗಿ ಗಾಳ ಹಾಕಿ ಅಲ್ಲೂ ಯಶಸ್ವಿಯಾಗಿ ಎಲ್ಲರಿಗೂ ಪಾಠ ಪ್ರವಚನ ಮಾಡಿರಬೇಕು....... ಆನಂತರ ಊರು, ಕೇರಿ ಬಿಟ್ಟು ದೂರದಲ್ಲಿರೋ ಕಡಲ ಅಲೆಗಳು ರಾತ್ರೋರಾತ್ರಿ ನಿಶಬ್ಧ ನಿದ್ರೆಯಲ್ಲೂ ಕೇಳುವಂತಿರಬೇಕೆಂದು ಅರಬೀ ಸಮುದ್ರದ ದಡದಲ್ಲೇ ಇರೋ ಮೀನಿನ ಸಂಸಾರಕ್ಕೆ ಸೇರಿ ಬಿಟ್ಟಿರುವ ಮೀನಿನ ಮೇಸ್ಟ್ರು..... ಮೊದ ಮೊದಲು ಕೊಡದಲ್ಲಿದ್ದ ಮೀನಿನಂತೆ ಸಾಹಿತ್ಯ ಕೃಷಿಯನ್ನು ಅಕ್ಕಪಕ್ಕ ಇದ್ದ ಮೀನುಗಳಿಗೆ ನೀಡುತ್ತಲಿದ್ದರು ಈಗ ನೋಡಿ ಕಡಲ ಅಬ್ಬರಕ್ಕೆ ಜಿಗಿದಿದ್ದಾರೆ. ಯಾವ ಅಲೆಗಳ ಅಡೆತಡೆಯೂ ಇಲ್ಲದೆ ಸಾಹಿತ್ಯದ ಹೊನಲನ್ನು ನಮ್ಮಂತಹ ಸಹಸ್ರಾರು ಜನರಿಗೆ ನೀಡಲು ಸಜ್ಜಾಗಿರುವ..... ಮಾತಿನ ಜಾದು........ ಮೀನಿನ ಮೇಸ್ಟ್ರು, ನೀರು ವಿಜ್ಞಾನಿಗಳಾದಂತ ಇವರು ಡಾ. ಅಜಾದ್, ಅವರಿಗೆ ನಮ್ಮ ಅಭಿನಂದನೆಗಳು.......

ಅಂತೆಯೇ ನಮ್ಮ ಕಣ್ಣಿನ ಡಾಕ್ಟರ್ ....... ಡಾಕ್ಟರ್ ಎಂದರೆ ಯಾರು ಎಂದುಕೊಂಡಿರಿ ಸ್ಟೆತಸ್ಕೋಪ್ ಹಿಡಿದರೆನೇ ಡಾಕ್ಟರಾ...? ಇಲ್ಲ ಇವರೂ ಒಂತರ ಡಾಕ್ಟರೇ ಸರಿ ಒಂದೇ ಕಣ್ಣಿನಲ್ಲಿ ಮತ್ತೊಂದು ಕಣ್ಣಿಟ್ಟು ಸೃಷ್ಟಿಯ ಸೌಂದರ್ಯವನ್ನು ನಮಗೆಲ್ಲರಿಗೂ ವಿಧವಿಧವಾಗಿ ಬಣ್ಣ ಬಣ್ಣದ ಚಿತ್ರಗಳ ಮೂಲಕ ನೀಡುತ್ತ ನಮ್ಮನೆಲ್ಲಾ ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತಿರುವ.... ಹಾಗೂ ದಿನಬೆಳಗಾದರೆ ಬೆಂಗಳೂರಿಗರಿಗೆ ದೇಶ ವಿದೇಶದ ಸುದ್ದಿ ಸಾರಾಂಶವನ್ನು ನೀಡುತ್ತಲಿರುವ..... ವೆಂಡರ್ ಕಣ್ಣಿನ ಶ್ರೀ ಶಿವು ಅವರಿಗೂ ನಮ್ಮ ಅಭಿನಂದನೆಗಳು.

ಎಲ್ಲಾ ಬ್ಲಾಗಿಗರ ಪರವಾಗಿ ...... ತಮ್ಮ ಸಾಹಿತ್ಯದ ಕೂಸುಗಳನ್ನು ಹೊರ ಜಗತ್ತಿಗೆ ನೀಡುತ್ತಲಿರುವ ಮೀನಿನ ಮೇಸ್ಟ್ರಿಗೆ ಹಾಗೂ ಕಣ್ಣಿನ ಡಾಕ್ಟರ್ ಗೆ ಹೃದಯಪೂರ್ವಕ ಅಭಿನಂದನೆಗಳು.

ಯಾರು ಯಾರು ಬರುವವರು:?
೧. ಬಾಲ್ಕನಿ ಸೀಟ್ ಬೇಕಿದ್ದವರು ಪಕ್ಕು ಮಾಮ, ದಾದ, ಬ್ಯಾಚುಲರ್ಸ್ ಗೆ ಹೆಣ್ಣು ಹುಡುಕುವ ಹಿರಿಯಣ್ಣ, ಮರಳು ಮತ್ತು ಸಿಮೆಂಟ್ ಮಧ್ಯದಲ್ಲೇ ಸೆಂಟಿಮೆಂಟ್ ತೋರಿಸುವ ಶ್ರೀ ಪ್ರಕಾಶ್ ಹೆಗಡೆಯವರಿಗೆ ಹೇಳಿ ಟವಲ್ ಹಾಕಿಸಬಹುದು....
೨. ಇನ್ನು ಗಾಂಧಿ ಕ್ಲಾಸ್ ನಲ್ಲಿ ಕೂರಲು ಬಯಸುವವರು ನನ್ನ ಪ್ರೀತಿಯ ತಮ್ಮ, ಅಮಾಯಕ, ಶಿಪ್ರ, ಮದುಮಗ ಶಿವಪ್ರಕಾಶ್ ಗೆ ಹೇಳಿ ಟವಲ್ ಹಾಕಿಸಬಹುದು......

ಸೂಚನೆ: ಒಬ್ಬೊಬ್ಬರಿಗೂ ಒಂದೊಂದು ಬಣ್ಣದ ಟವೆಲ್ ಇರುತ್ತೆ ...... ಯಾರು ಹೆದರಬೇಕಿಲ್ಲ ಮೊದಲೇ ನಿಮ್ಮ ಬಣ್ಣದ ಟವೆಲ್ ಹೇಳಿರುತ್ತಾರೆ.....

ಸ್ಥಳ : ಕನ್ನಡ ಭವನ
ದಿನಾಂಕ: ೨೨ ಆಗಸ್ಟ್ ೨೦೧೦
ಪ್ರಾರಂಭ: ಬೆಳ್ಳಿಗ್ಗೆ ೧೦ಕ್ಕೆ
ಮುಕ್ತಾಯ: ಮುಗಿಯುವುದು ನಮ್ಗೆ ಗೊತ್ತಿಲ್ಲ......
ಪುಸ್ತಕಗಳ ಹೆಸರು : ಜಲನಯನ ಮತ್ತು ಗುಬ್ಬಿ ಎಂಜಲು


27 comments:

ಜಲನಯನ said...

ಮೃದುಮನಸು ಎಂಥ ಮೃಡು.. ಎಂದರೆ ಹೀಗೆ ...ಮನಸ್ಸು ತುಂಬಿ ಬರುತ್ತೆ ..ಇಂಥ ಆತ್ಮಿಯತೆಗೆ ಧನ್ಯವಾದ ..ಸಾಂದರ್ಭಿಕ.. ಗಾಂಭೀರ್ಯ ಕಾಪಾಡಿಕೊಳ್ಳಬೇಕಾಗಿದೆ,,,ಇಲ್ಲ ಅಂತಿದ್ರೆ..ಪ್ರಕಾಶನ ಜೊತೆ ಕಿತ್ತಾಡ್ತಿದ್ದೆ..ಎರಡು ಮೂರು ಟವಲ್ ಹಾಕಿ....ಹಹಹಹ

sunaath said...

ತುಂಬ ಆತ್ಮೀಯತೆಯಿಂದ, ಮೀನು ಮೇಷ್ಟ್ರು ಹಾಗು ಕಣ್ಣಿನ ಡಾಕ್ಟರ ಬಗೆಗೆ ಬರೆದಿದ್ದೀರಿ. ಮನಸ್ಸು ತುಂಬಿ ಬರುತ್ತದೆ.

shivu.k said...

ಮನಸು ಮೇಡಮ್,

ನಿಮ್ಮ ಕಾರ್ಯಕ್ರಮದಲ್ಲಿ ನಾನು ಎಲ್ಲಿ ಟವಲ್ ಹಾಕುವುದು ಎಂದು ನಾಗೇಶ್ ಹೆಗಡೆ ಕೇಳಿದ್ದಾರೆ. ಅವರಿಗೆ ನಮ್ಮ ಮೊದಲ [ವೆಂಡರ್ ಕಣ್ಣು, ಹೆಸರೇಬೇಡ, ಸಂತೆ ಮತ್ತು ಉದ್ಧಾರ ಪುಸ್ತಕಗಳ ಬಿಡುಗಡೆ] ಕಾರ್ಯಕ್ರಮದಲ್ಲಿ ಐನೂರಕ್ಕೂ ಹೆಚ್ಚು ಓದುಗರನ್ನು ಕಂಡಿದ್ದರಿಂದ ಈ ಕಾರ್ಯಕ್ರಮದಲ್ಲಿ ಬಾಗಿಲ ಬಳಿ ನಿಲ್ಲಲು ಸ್ಥಳ ಸಿಗುವುದೇ ಅಂತ ನನ್ನನ್ನು ಪ್ರಶ್ನಿಸಿದ್ದಾರೆ. ನಿಮ್ಮದೆ ಕಾರ್ಯಕ್ರಮವೆನ್ನುವಂತೆ ಅಭಿಮಾನದಿಂದ ಎಲ್ಲರಿಗೂ ಆತ್ಮೀಯ ಅಹ್ವಾನ ನೀಡುತ್ತಿರುವ ನಿಮಗೆ ಅನಂತ ಧನ್ಯವಾದಗಳು.

ವಿ.ಆರ್.ಭಟ್ said...
This comment has been removed by the author.
ವಿ.ಆರ್.ಭಟ್ said...

ಚೆನ್ನ್ನಾಗ್ ಹೇಳ್ದ್ರಿ , ನಂಗೆ ನಿಮ್ಮ ಕ್ಲಾಸು ಗೀಸು ಇವೆಲ್ಲಾ ಅರ್ಥಾಯಾಕಿಲ್ಲ ನಂಗೆ ಟವ್ಲು ಐತೋ ಇಲ್ವೋ ಹೇಳ್ಬುಡಿ, ನಾನೇ ಚಾಪೆ ತಂದ್ಕತೀನಿ ಅಲ್ಲೇ ಸಲ್ಪ ಹಂಗೇ ಕುಕ್ಕರ್ಸದು, ಆಮೇಲೆ ಪ್ರಕಾಸಣ್ಣ, ಮೀನ್ ಮೇಸ್ಟ್ರು , ಕಣ್ಣಣ್ಣ ಎಲ್ಲಾ ಏನಂತಾರೆ ಕೇಲ್ಕ್ಯಂದು ಹೊಂಡವ ! ದುಂಡೀರಾಜು ಬತ್ತರಂತೆ ಅದ್ಯಾರು ಹಂಗಂದ್ರೆ ?

Subrahmanya said...

ಸಹಬ್ಲಾಗಿಗರ ಬಗೆಗೆ, ಅದರಲ್ಲೂ ಸ್ನೇಹಿತರ ಬಗೆಗೆ ಬರೆಯುವಾಗ ಆತ್ಮೀಯತೆ ಹೊಮ್ಮಿ ಬರುತ್ತದೆ. ಅಂತಹ ಭಾವ ನಿಮ್ಮ ಬರಹದಲ್ಲಿದೆ. ತುಂಬ ಸಂತೋಷವಾಯ್ತು.

ದಿನಕರ ಮೊಗೇರ.. said...

manasu madam,
eshtu khushiyaagtide alvaa nammade snehitara bagge bareyalu....

ee kaaryakrama nammade.. haagaagi idannu naave yashashvi maaDabeku.....
Meenu meshtu, kaNNIna meshtrige subhaashaya......

andahaage nanna blog nallina kathe odilla neevu.....yaavaaga barodu...

odadiddare print haakiskonDu bandu august 22 ke sigteerallaa , avaagle comment baresikonDu baruttene....

Snow White said...

manasu madam,nimma aaptabhava tumba ista aitu,nimmelaranta snehitaru sikkidu nijakku nanna punya,vandanegalu madam :)

meenu mestru mattu kannina doctorge nanna kadeyindalu shubhashayagalu :)

shravana said...

:) ತುಂಬಾ ಆಪ್ತವಾಗಿದೆ ಬರಹ.. ಮೀನಿನ ಮೇಸ್ಟ್ರಿಗೆ ಹಾಗು ಕಣ್ಣಿನ ಡಾಕ್ರಿಗೆ ನನ್ನ ಅಭಿನಂದನೆಗಳು

ಸಾಗರದಾಚೆಯ ಇಂಚರ said...

ತುಂಬಾ ಆತ್ಮೀಯ ಬರಹ
ಅವರಿಗೆ ಅಭಿನಂದನೆಗಳು

ಮನಮುಕ್ತಾ said...

ಆತ್ಮೀಯ ಭಾವದ ಸು೦ದರ ಬರಹ...ಓದಿ ಸ೦ತೊಷವಾಯ್ತು..ಅಜಾದ ಭಾಯಿ ಹಾಗು ಶಿವು ಅವರಿಗೆ ಅಭಿನ೦ದನೆಗಳು.

ಸವಿಗನಸು said...

ಮನಸು,
ಮೀನಿನ ಮೇಷ್ಟ್ರು ಹಾಗೂ ಕಣ್ಣಿನ ಡಾಕ್ಟರ್ ಗೆ ನನ್ನ ಶುಭಾಶಯಗಳು.....
ನಾನು ಟವೆಲ್ ತಂದರೂ ಜಾಗ ಸಿಗುತ್ತೊ ಇಲ್ವೊ .......ನನಗೆ ಜಾಗ ಸಿಗಲಿಲ್ಲ ಅಂದ್ರೆ ವಿ.ಆರ್. ಭಟ್ಟರಿಗೆ ಮಸ್ಕಾ ಮಾಡಿ ಅವರ ಚಾಪೆ ಮೇಲೆ ಜಾಗ ಮಾಡ್ಕೊತೀನಿ....

SATISH N GOWDA said...

ತುಂಬಾ ಚನ್ನಾಗಿದೆ ನಿಮ್ಮ ಈ ಬರಹ ,ಮೀನಿನ ಮೇಸ್ಟ್ರಿಗೆ ಹಾಗು ಕಣ್ಣಿನ ಡಾಕ್ರಿಗೆ ನನ್ನ ಅಭಿನಂದನೆಗಳು
SATISH N GOWDA
ನನ್ನ ಸ್ನೇಹಲೋಕ (ORKUT)
satishgowdagowda@gmail.com
ನನ್ನವಳ ಪ್ರೇಮಲೋಕ ( my blog)
http://nannavalaloka.blogspot.com/

ರವಿಕಾಂತ ಗೋರೆ said...

Nice!! I will try to come... (99.99%)

Kirti said...

nice to meet u as a friend in this life really u have such a very soft sweet heart so u think always good about others i like u .... friend

ಸಿಮೆಂಟು ಮರಳಿನ ಮಧ್ಯೆ said...

ಮನಸು...

ನಿಮ್ಮ ಮೃದು ಮನಸ್ಸಿಗೆ ನನ್ನದೊಂದು ಸಲಾಮ್..

ಒಂದು ಲೋಡ್ ಇಟ್ಟಿಗೆ ಲಾರಿ ತರಿಸುತ್ತೇನೆ..
ನಾಲ್ಕು ಇಟ್ಟಿಗೆ ಹಾಕಿ ಕುಳಿತುಕೊಳ್ಳ ಬಹುದಲ್ಲ??

ಜಾಗ ಹಿಡಿದಿಡಲು ನಾನು ಸಿದ್ದ..
ಜಾಗ ಬೇಕಾದವರು ಮೊದಲೇ ತಮ್ಮ ತಮ್ಮ ಟವೆಲ್ಲುಗಳನ್ನು ನನಗೆ ತಲುಪಿಸ ಬೇಕಾಗಿ ವಿನಂತಿ...

ಗೆಳೆಯರೆ...
ಎಲ್ಲರೂ ಬನ್ನಿ..
ಒಂದು ಸಂಭ್ರಮಕ್ಕಾಗಿ..
ಸಂತೋಷಕ್ಕಾಗಿ..
ಬದಿಕಿನಲ್ಲಿ ಯಾವಾಗಲೂ ಮೆಲುಕು ಹಾಕ ಬಹುದಾದ ಕ್ಷಣಗಳಿಗಾಗಿ...

ಪ್ರೀತಿಯಿಂದ
ಪ್ರಕಾಶಣ್ಣ..

ವನಿತಾ / Vanitha said...

Wow:))

ಸುಮ said...

ಮೀನಿನ ಮೇಷ್ಟ್ರು ಹಾಗೂ ಕಣ್ಣಿನ ಡಾಕ್ಟ್ರು !! ಹ.ಹ..ಅಹ ತುಂಬ ಚೆನ್ನಾಗಿವೆ ಹೆಸರು .. ಇನ್ನು ಅಜ಼ಾದ್ ಸರ್ ಮತ್ತು ಶಿವು ಸರ್ ಅವರನ್ನು ಹಾಗೇ ಕರೆಯೋಣ.

Raghu said...

ಟಾವೆಲ್, ಬೆಡ್ ಶೀಟ್..ಎಲ್ಲಾ ತಕೊಂಡು ಬಟ್ಟೆ. ಮತ್ತೆ ಸೀಟ್ ಸಿಗಲಿಲ್ಲ ಅಂದ್ರೆ ಮುಂದೆ ನೆಲ..ಬೆಡ್ ಶೀಟ್..ಹ್ಹೆ ಹ್ಹೆ...
ಮೇಡಂ ನೀವು ಹೆಲ್ಪ್ ಮಾಡಿ..ಮುಂದೆ ಸ್ವಲ್ಪ ಜಾಗ ಬಿಡಿ.
ಶಿವೂ ಮತ್ತು ಆಜಾದ್ ಸರ್ ಗೆ ಜೈ..!!
ನಿಮ್ಮವ,
ರಾಘು.

ಸೀತಾರಾಮ. ಕೆ. / SITARAM.K said...

ಮನಸ್ಸು, ಕನಸು, ಮೀನಿನ ಮೇಸ್ಟ್ರು, ಕಣ್ಣಿನ ಡಾಕ್ಟರು..... ಎಲ್ಲಾ ಒಳ್ಳೆ ನಿಕ್ ನೇಮ್ ಗಳೇ. ಚೆನ್ನಾಗಿದೆ.
ಅಂದ ಹಾಗೇ ವಿಆರ್ ಬಿಯವರ ತವೆಳನಲ್ಲಿ ನಗು ಸ್ವಲ್ಪ ಜಾಗ ಸಿಗುತ್ತೆ ಅನ್ಕೊಂಡಿದ್ದೇನೆ.

ಶಿವಪ್ರಕಾಶ್ said...

ha ha ha... :)
Nanage seat sigodu doubt... seat sigade idre stage mele hogi kootukondu bidteeni :)

ಸುಧೇಶ್ ಶೆಟ್ಟಿ said...

ಶೀರ್ಷಿಕೆ ಪ೦ಚಿ೦ಗ್ ಆಗಿದೆ... ಮೀನಿನ ಮೇಷ್ಟರಿಗೂ ಕಣ್ಣಿನ ಡಾಕ್ಟರಿಗೂ ಅಭಿನ೦ದನೆಗಳು :)

- ಕತ್ತಲೆ ಮನೆ... said...

ಬಣ್ಣ ಬಣ್ಣದ ಟೋಪಿ ಸಿಗಲ್ವೆ..?

ashokkodlady said...

Suguna avre,

Kaaryakrama tumbaa chennagittu...nimmannella bheti maadi tumbaa kusi aitu....

free aagiruvaaga illomme bheti kodi....

http://ashokkodlady.blogspot.com/

ವಸಂತ್ said...

ಅರ್ಥಪೂರ್ಣ ಮಾಹಿತಿಗೆ ಧನ್ಯವಾದಗಳು ಸರ್.

ವಸಂತ್

prabhamani nagaraja said...

ಕೆಲಸದ ಒತ್ತಡದಲ್ಲಿ ನಿಮ್ಮ ಬ್ಲಾಗ್ ಗೆ ಸಕಾಲದಲ್ಲಿ ಭೇಟಿ ನೀಡಲಾಗಲಿಲ್ಲ. ನೀವು ಕ್ಷಮಿಸುತ್ತೀರಾಗಿ ನ೦ಬಿದ್ದೇನೆ ಸುಗುಣ ರವರೆ, ಸಹ ಬ್ಲಾಗಿಗರ ಬಗ್ಗೆ ನಿಮಗಿರುವ ಅಭಿಮಾನ, ಆದರದ ಬಗ್ಗೆ ಬಹಳ ಸ೦ತಸವಾಯ್ತು. ಕಾರ್ಯಕ್ರಮ ಎಷ್ಟೊ೦ದು ಹೃದಯ ಸ್ಪರ್ಶಿಯಾಗಿತ್ತು ಎನ್ನುವುದನ್ನು ಓದಿ ತಿಳಿದುಕೊ೦ಡೆ. ನನ್ನ ಬ್ಲಾಗ್ ಗೆ ಬ೦ದಿದ್ದಕ್ಕಾಗಿ ಧನ್ಯವಾದಗಳು.

Kirti said...

hegiddeera madam?