Thursday, September 23, 2010

ಮನಸು ಮರಳಿ ಬ್ಲಾಗಿಸಿದೆ.....

ನಮಸ್ಕಾರ ಇಷ್ಟು ಕಾಲ ಒಟ್ಟಿಗಿದ್ದು ಬ್ಲಾಗಿನ ಮನಸನ್ನೇ ಅರಿಯಲಿಲ್ಲ ನೋಡಿ ನನ್ನ ಮನಸು...... ಬಣಗುಡುತ್ತಿರುವ ಈ ನನ್ನ ಮನಸಿಗೆ ಸಾಂತ್ವಾನಿಸಲು ಇಲ್ಲ, ಏನು ಇಲ್ಲ, ಅನಾಥಳಾಗಿ ಬಿಟ್ಟು ಊರು ಸುತ್ತಲು ಹೊರಟುಹೋಗಿದ್ದೆ...... ಈಗಲಾದರು ಈ ಮೃದುಮನಸಿಗೆ ನನ್ನ ಕಥೆ ಹೇಳಿಕೊಳ್ಳೋಣವೆಂದು ಬಂದಿರುವೆ ನೀವು ಸಹ ಓದಿ.

ತವರೂರು ನೋಡುವ ಖುಷಿಯಲ್ಲಿ ಹೋಗಿದ್ದೆ ಕೇವಲ ೨೫ ದಿನಗಳ ರಜೆಗಾಗಿ. ಅಂದು ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನ ವಿಮಾನ ಇಳಿದಾಗ ಅಯ್ಯೋ..!!! ಹಸಿರ ಸಿರಿಯೊಂದಿಗೆ (ಮರುಭೂಮಿಗೆ ಹೋಲಿಸಿದರೆ ನಮ್ಮೂರು ಹಸಿರೇ) ಕಾಂಕ್ರಿಟ್ ಮನೆಗಳ ಸಾಲು ಎದ್ದು ಕಾಣುತ್ತಿತ್ತು. ನನ್ನ ತವರೂರ ಮಣ್ಣಿನ ವಾಸನೆಯೇ ನನಗೆ ಬಹಳಷ್ಟು ಮುದನೀಡಿತ್ತು..... ತವರ ಭೂಮಿಗೆ ನಮಿಸುತ್ತ ಮನೆಯ ದಾರಿಯಿಡಿದು ಹೊರಟರೆ ಮತ್ತದೆ ರಸ್ತೆ ಜೊತೆಗಷ್ಟು ಹೊಸ ಹೊಸ ರಸ್ತೆಗಳ ಕಾಮಗಾರಿ, ಮೆಟ್ರೋ ಸಿರಿ, ಅದೇ ಆಟೋರಿಕ್ಷಾ, ಬಸ್ಸು ಕಾರುಗಳದೇ ಕಾರುಬಾರು..... ಎತ್ತ ನೋಡು ಸುತ್ತ ಮುತ್ತ ನನ್ನವರೇ ಇದ್ದಾರೆ ಎಂಬ ಭಾವನೆ ........ ಆದರೆ ಮರುಭೂಮಿಯಲ್ಲಿ ಎಲ್ಲಿ ನೋಡಿದರು ಇವರಾರು ನಮ್ಮವರಲ್ಲ ಇದು ನನ್ನೂರಲ್ಲ, ನನ್ನದೇನು ಇಲ್ಲ ಎಂಬ ಭಾವನೆ ........ ಒಮ್ಮೆಲೇ ನನ್ನೂರು ತಲುಪಿದ ಕೂಡಲೆ ಎಲ್ಲವೂ ನನ್ನದೇ ಎಂಬ ಪುಳಕಭಾವ.

ಮನೆಗೆ ಹತ್ತಿರವಾಗುತ್ತಿದ್ದ ಹಾಗೆ ರಸ್ತೆಯ ಇಕ್ಕೆಡಗಳಲ್ಲಿ ಹಬ್ಬದ ಕಳೆ ಎದ್ದು ಕಾಣುತ್ತಿತ್ತು..... ನನಗೂ ಒಂದು ವರ್ಷದ ಹಿಂದೆ ಎಲ್ಲರೂ ಕೂಡಿ ಹಬ್ಬ ಮಾಡಿದ್ದೆವು. ಈಗ ಮತ್ತೆ ಎಲ್ಲರೂ ಸೇರಿ ಹಬ್ಬ ಮಾಡುತ್ತಲಿದ್ದೇವೆ ಎಂಬ ಖುಷಿ ಜೊತೆಗೆ ಅದೇ ಸಂಜೆ ನಮ್ಮ ಬಳಗ ಅಂದರೆ ಬ್ಲಾಗ್ ಬಳಗದಲ್ಲಿ ಶಿವು.ಕೆ, ಪ್ರವೀಣ್, ಅನಿಲ್ ಬೆಡಗಿ, ನಾಗರಾಜ್, ಶಿಪ್ರ, ಶಶಿ ಅಕ್ಕ ಎಲ್ಲರೂ ಬರುವುದು ಮೊದಲೇ ತಿಳಿದಿತ್ತು. ಮೊದಲಿದ್ದ ಖುಷಿಯ ಜೊತೆ ಇವರೆಲ್ಲರ ಭೇಟಿ ಮತ್ತಷ್ಟು ಹೊಸ ಉತ್ಸಾಹವನ್ನೇ ತಂದಿತ್ತು. ಪ್ರಯಾಣದ ಆಯಾಸ ಯಾವೂದು ಇರದೆ ಕಾತುರವಾಗಿರುವಷ್ಟೇ ಮೊದಲ ಭೇಟಿ ಎಂದೆನಿಸಲಿಲ್ಲ. ಎಲ್ಲರೂ ಬಹಳ ದಿನಗಳ ಪರಸ್ಪರ ಭೇಟಿ ಮಾಡಿದ್ದೆವೆಂದೆನಿಸಿತು.
----
ನಂತರದ್ದೇ ಪುಸ್ತಕ ಬಿಡುಗಡೆ ಸಮಾರಂಭ ಈಗಾಗಲೇ ಎಲ್ಲರ ಬ್ಲಾಗಿನಲ್ಲಿ ಫೋಟೋಗಳು, ವಿಡಿಯೋಗಳು, ಕವನ, ಲೇಖನಗಳ ಮುಖೇನ ಎಲ್ಲರ ಮನಗಳಿಗೆ ತಲುಪಿವೆ ಆದರೂ ನನ್ನದೊಂದು ಪುಟ್ಟ ನುಡಿಗಳನ್ನು ನಿಮ್ಮೊಂದಿಗೆ ನನ್ನ ಮೃದುಮನಸಿನೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಅಂದಿನ ಸಮಾರಂಭ ನಮ್ಮ ಮನೆಯಲ್ಲೇ ನೆಡೆಯುವ ಸಮಾರಂಭದ ರೀತಿ ನೆಡೆದಿತ್ತು. ಆ ಸಮಾರಂಭಕ್ಕೆ ಎಲ್ಲರೂ ಏನು ಕೆಲಸ ಮಾಡಲು ಸಾಧ್ಯ ನನ್ನಿಂದೇನಾದರೂ ಆಗುವುದೇ, ಮಾಡಬಹುದೇ ಎಂಬ ಉತ್ಸಾಹದಲ್ಲೇ ಇದ್ದರು, ಎಲ್ಲರೂ ಹಾಗೇ ಕೆಲಸ ನಿರ್ವಹಿಸಿದರು. ಸಮಾರಂಭದಲ್ಲಿ ನಾನು ಮತ್ತು ನನ್ನವರಿಗೂ ಒಂದು ಸ್ಥಾನ ನೀಡಿದ ಶಿವು ಹಾಗೂ ಅಜಾದ್ ಅವರಿಗೆ ನಾವು ಸದಾ ಆಭಾರಿಗಳು.... ನಮ್ಮ ಸವಿ ಆಶಯ ಸದಾ ಅವರೊಂದಿಗೆ ಇದ್ದೇ ಇರುತ್ತದೆ. ನಮ್ಮ ಪುಟ್ಟ ಕೆಲಸದಲ್ಲಿ ಅಲ್ಪ ಸಲ್ಪವಾದರು ತಪ್ಪುಗಳೇನಾದರೂ ಆಗಿದ್ದರೆ ಕ್ಷಮೆ ಕೋರುತ್ತೇವೆ........ ನಾವು ದೂರದ ಊರಿನಲ್ಲಿದ್ದರೂ ಕನ್ನಡ ಭಾಷೆ, ಸಂಸ್ಕೃತಿ, ನಮ್ಮ ಆಚಾರ ವಿಚಾರ ಯಾವುದನ್ನೂ ಮರೆತಿಲ್ಲ ಎಲ್ಲರಿಗಿಂತ ಹೆಚ್ಚಿನದಾಗಲ್ಲದಿದ್ದರೂ ನಮ್ಮ ಮಟ್ಟಿಗೆ ಆಚರಿಸುತ್ತಲಿದ್ದೇವೆ ಅಂತೆಯೇ ನಮ್ಮ ಕನ್ನಡಿಗರ ಬ್ಲಾಗ್ ಬಂಧುಗಳೆಲ್ಲರಿಂದಲೂ ಹಲವು ವಿಚಾರಗಳನ್ನು ತಿಳಿದು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಲಿದ್ದೇವೆ. ಹಾಗೆ ಎಲ್ಲಾ ಬ್ಲಾಗ್ ಬರಹಗಾರರಿಗೂ ನಮ್ಮ ಧನ್ಯವಾದಗಳು...... ಅಂದಿನ ಸಮಾರಂಭಕ್ಕೆ ಕಳೆಕಟ್ಟಿದ ಡುಂಡಿರಾಜ್ ರವರು, ಶೇಷಾಶಾಸ್ತ್ರಿಗಳು, ಸುಧೀಂದ್ರರವರೆಂಬ ಮಹಾನ್ ವ್ಯಕ್ತಿಗಳ ಭೇಟಿಯಂತೂ ಮತ್ತಷ್ಟು ಖುಷಿ ನೀಡಿದೆ. ಬ್ಲಾಗ್ ಭಾಂದವ್ಯ ಸದಾ ಹಸಿರಾಗಿರಲಿ..... ಏನೇ ಬಂದರೂ ಬ್ಲಾಗಿಗರಲ್ಲಿ ಬಲವಿರಲಿ...... ಸಹಮತ ಜೊತೆಗೆ ಬ್ಲಾಗ್ ಬರಹಗಳ ಮೂಲಕ ಸಮಾಜಕ್ಕೆ ಒಳಿತನ್ನು ನೀಡಲೆಂದು ಆಶಿಸುತ್ತೇನೆ..... ಅಂದಿನ ಸಮಾರಂಭದ ರುವಾರಿಗಳು, ಆಗಮಿಸಿದ್ದ ಎಲ್ಲಾ ಬ್ಲಾಗಿಗರು, ಮಿತ್ರರು, ಆತ್ಮೀಯರು ಎಲ್ಲರ ಭೇಟಿ ಇದೆಯಲ್ಲಾ ಅದು ನೆನಪಿನ ಪುಟಗಳಲ್ಲಿ ಮೊದಲನೇ ಪುಟದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಯಾವುದೇ ಸುನಾಮಿ ಅಲೆಗಳು ಬಂದರೂ ಅಳಿಸಲಾಗದಂತ ಭಾಂದವ್ಯ ಬೆಳೆದು ನಿಂತಿದೆ. ಇದೇ ರೀತಿ ಮುಂದೆಯೂ ಉಳಿಯಲೆಂಬುದೆ ನನ್ನ ಆಸೆ.

ಇಷ್ಟೆಲ್ಲಾ ಸವಿ ನೆನಪಿನೊಂದಿಗೆ ನನ್ನ ಕುಟುಂಬದವರೊಂದಿಗೆ ಕಾಲ ಕಳೆದು ಮತ್ತದೆ ಉಸುಕಿನ ಜೀವನಕ್ಕೆ ಮರಳಿದಾಗ ಏನೋ ಬೇಸರ, ದುಗುಡ, ಕೆಲಸದಲ್ಲಿ ಆಸಕ್ತಿಯೇ ಇಲ್ಲವಾಗಿತ್ತು ಬಂದ ದಿನವೇ ಕಛೇರಿಗೆ ಹೋಗಿದ್ದೆ ........ ಬರುವುದೇನೋ ಬಂದಿದ್ದೆ ಮರುಭೂಮಿಗೆ ಇರೋಬರುವ ಕೆಲಸವೆಲ್ಲ ನನಗೇ ಬೀಳಬೇಕಾ.... ಹೊಸ ಪ್ರಾಜೆಕ್ಟ್ ಎಂದು ಎಲ್ಲವನ್ನು ತುಂಬಿದರು, ಈಗ ಬ್ಲಾಗ್ ಬರೆಯುವುದಿರಲಿ......... ಓದಲೂ ಪುರುಸೊತ್ತಿಲ್ಲದಾಗಿ ಬಿಟ್ಟಿದೆ. ನನ್ನವರೇನೋ ಎರಡು ಸಾಲಿಗೆ ಒಂದು ಪೋಸ್ಟ್ ಮಾಡಿಬಿಡುತ್ತಾರೆ, ಆದರೆ ನಾನೇನು ಮಾಡಲಿ ಹೇಳಿ..... ಇಷ್ಟು ದಿನ ಬಿಡುವಿದ್ದ ಈ ಮೃದುಮನಸಿಗೆ ಸಮಯಕೊಟ್ಟು ಇಂದು ರಾತ್ರಿ ಪುಟ್ಟ ಲೇಖನ ಬರೆದಿದ್ದೇನೆ....

ಸಮಯ ಸಿಕ್ಕಾಗ ನಿಮ್ಮೆಲ್ಲರ ಬ್ಲಾಗ್ ಲೇಖನಗಳನ್ನು ಓದುವೆ.....ಆದರೂ ಆಗೊಮ್ಮೆ ಈಗೊಮ್ಮೆ ಓದುತ್ತಲಿರುವೆ ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು.....

ಸದಾ ಮೃದುಮನಸಿನೊಂದಿಗಿರಿ......

27 comments:

ಸಿಮೆಂಟು ಮರಳಿನ ಮಧ್ಯೆ said...

ಮೃದು ಮನಸು...

ತವರ ನೆನಪುಗಳೇ.. ಹೀಗೆ..
ನಮ್ಮಾಸೆ...
ಕನಸುಗಳ ಜಾಗ ಅಲ್ಲೇ ಇದ್ದರೂ...
ಉದರ ನಿಮಿತ್ತಮ್ ಇಲ್ಲಿ ಕೆಲಸದ ಅನಿವಾರ್ಯ...

ಒತ್ತಡವಿದ್ದರೂ ಬರುತ್ತಿರಲಿ ಬ್ಲಾಗಿನಲ್ಲಿ ಲೇಖನಗಳು..
ಯಾಕೆಂದರೆ...

"ಕೆಲಸದ ಬದಲಾವಣೆಯೆ.. ವಿಶ್ರಾಂತಿ"

ಬರೆಯುವದರಲ್ಲಿ ಸಂತಸ ಹುಡುಕಿಕೊಂಡವರು ನಾವು..
ಈ ಬ್ಲಾಗಿನ ಮುಖಾಂತರ..

ಕಷ್ಟವಾದರೂ ಬರೆಯಿರಿ..

ಜೈ ಹೋ....

Dr.D.T.krishna Murthy. said...

ಮೃದು ಮನಸು ಮೇಡಂ;ನಿಮ್ಮ ಲೇಖನ ಓದಿ,ಬಹಳ ಹಿಂದೆ ಬರೆದ ನನ್ನ ಕವಿತೆಯೊಂದರ ಮೊದಲ ಸಾಲುಗಳು ನೆನಪಾದವು;'ಏನೋ ಅನಾಥ ಪ್ರಜ್ಞೆ ಕಾಡುತ್ತದೆ
ಈಕಾಂಕ್ರೀಟ್ ಕಾಡಿನಲ್ಲಿ'.ಜೀವನಎಂದರೆ ಹೀಗೆಯೇ !ನೆನಪುಗಳನ್ನು ಹೊತ್ತು ಮುಂದೆ ಸಾಗುತ್ತಿರಬೇಕು.ಪುಸ್ತಕ ಬಿಡುಗಡೆ ಸಮಾರಂಭವನ್ನು ಸೊಗಸಾಗಿ ನಡೆಸಿಕೊಟ್ಟ ನಿಮ್ಮಿಬ್ಬರಿಗೂಅಭಿನಂದನೆಗಳುಮೇಡಂ.ನಮಸ್ಕಾರ.

shivu.k said...

ಸುಗುಣಕ್ಕ,
ನಿಮ್ಮ ಬೇಟಿಯಂತೂ ಮರೆಯಲಾಗದ್ದು. ಹೊರನಾಡಿನ ಕನ್ನಡಿಗರನೇಕರನ್ನು ನಾನು ಬೇಟಿ ಮಾಡಿದ್ದೇನೆ. ನಾವು ಮುಂದುವರಿದ ದೇಶದಲ್ಲಿದ್ದು ನಿಮಗಿಂತ ಮುಂದಿದ್ದೇವೆ ಎನ್ನುವ ಗತ್ತು ಸಹಜವಾಗಿ ಇರುತ್ತದೆ. ಆದ್ರೆ ನಿಮ್ಮನ್ನು ಬೇಟಿ ಮಾಡಿದಾಗ ನನಗೆ ಅಂತವೂ ಏನು ಕಾಣಲಿಲ್ಲ. ನನ್ನಕ್ಕನನ್ನು ಬೇಟಿಮಾಡಿದಷ್ಟೇ ಅನಿಸಿತ್ತು.[ನಮ್ಮ ಹೊರನಾಡಿನ ಬ್ಲಾಗ್ ಗೆಳೆಯರಾದ ಅಜಾದ್, ಗುರುಮೂರ್ತಿ ಹೆಗಡೆ, ಮೂರ್ತಿ, ಚೇತನ ಮತ್ತು ನಂಜುಂಡ ಇನ್ನೂ ಅನೇಕರನ್ನು...ಎಲ್ಲರನ್ನೂ ಬೇಟಿಮಾಡಿದ್ದೇನೆ. ಇವರೆಲ್ಲರೂ ಕೂಡ ನಮ್ಮ ಪಕ್ಕದ ಮನೆಯವರೆಂತೆ ಸಹಜವಾಗಿ ಇದ್ದರು] ನನ್ನಕ್ಕನ ಬಗ್ಗೆ ನನಗಿರುವ ಸಲುಗೆಯನ್ನು ನಿಮ್ಮ ಬಗ್ಗೆಯೂ ಹೊಂದಿದ್ದೇನೆ ಅಂದುಕೊಳ್ಳುತ್ತೇನೆ. ನಿಮ್ಮ ಮನೆಯಲ್ಲಿನ ಊಟ ಸೊಗಸಾಗಿತ್ತು[ಮೊದಲ ಬಾರಿ ಬ್ಲಾಗ್ ಗೆಳೆಯರು, ಎರಡನೇ ಬಾರಿ ಹೇಮಾಶ್ರಿಯೊಂದಿಗೆ]ಕಾರ್ಯಕ್ರಮದ ನಿರೂಪಣೆಯನ್ನು ನಿಮಗೆ ಮತ್ತು ತಮ್ಮನಂತ ಪ್ರವೀಣ್‍ಗೆ ವಹಿಸಿಬಿಟ್ಟಮೇಲೆ ನಾನಂತೂ ಸಂಪೂರ್ಣ ಆ ವಿಚಾರದಲ್ಲಿ ನಿರಾಳವಾಗಿಬಿಟ್ಟಿದ್ದೆ. ನಾನು ಈಗಲೂ ನಿಮ್ಮ ಕುಟುಂಬ ಮತ್ತು ಅಜಾದ್‍ರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನಿಸುತ್ತಿದೆ. ವ್ಯಕ್ತಪಡಿಸಲಾಗದ ಭಾಂಧ್ಯವ್ಯವೆಂದರೆ ಇದೇ ಅಲ್ಲವೇ...

PARAANJAPE K.N. said...

ನೆನಪುಗಳ ಮಾತು ಮಧುರ ....... ನಿಮ್ಮನ್ನೆಲ್ಲ ಭೇಟಿ ಆದ ಮೃದು ಮಧುರ ಕ್ಷಣಗಳ ನೆನಪು ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ. ಆಪ್ತವಾಗಿದೆ ನಿಮ್ಮ ಬರಹ.

"ನಾಗರಾಜ್ .ಕೆ" (NRK) said...

akka, nimmanna bheti maadiddu namagu santosha. biduvaadagalella baritaayiri ....

- ಕತ್ತಲೆ ಮನೆ... said...

ತುಂಬಾ ಸಂತೋಷ..

Ramesha said...

ನಿಮ್ಮ ಅನಿಸಿಕೆಗಳು ಬಹಳ ಚೆನ್ನಾಗಿ ವ್ಯಕ್ತವಾಗಿವೆ. ನನಗೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರಲಾಗದ ಕಾರಣ ನಿಮ್ಮಲ್ಲಿ ಯಾರನ್ನೂ ಭೇಟಿ ಮಾಡಲಾಗಲಿಲ್ಲ.ಅದಕ್ಕಾಗಿ ಬೇಸರವಂತೂ ಇದ್ದೇ ಇದೆ.

ನನ್ನ ಕವನ ಹಾಗೊ ದೇವಾಲಯದ ಪರಿಚಯವನ್ನು ಕುರಿತು ಬರೆದ ಲೇಖನಗಳನ್ನು ನಿಮ್ಮ ಮರಳ ಮಲ್ಲಿಗೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬ್ಲೊಗ್ ಲೇಖನಗಳು ಹೀಗೆ ಬರುತ್ತಿರಲಿ.

ಮನದಾಳದಿಂದ............ said...

ಅಕ್ಕಾ,
ಹಬ್ಬದ ದಿನ ನೀವು ಪ್ರಯಾಣದ ಆಯಾಸದಲ್ಲಿದ್ದರೂ ನಮ್ಮನ್ನೆಲ್ಲ ಬಹಳ ಪ್ರೀತಿಯಿಂದ ಉಪಚರಿಸಿ, ನಮ್ಮೊಂದಿಗೆ ಬೆರೆತಿದ್ದೀರಾ, ನಿಮ್ಮಿಬ್ಬರಿಗೂ ನಾನು ಚಿರಋಣಿ,
ಕೆಲಸದ ಒತ್ತಡದ ಮಧ್ಯೆಯೂ ಆಗಾಗ ಬ್ಲೊಗಿಗೆ ಬರುತ್ತಿದ್ದೀರಾ,

ನಿಮ್ಮ ಪ್ರೀತಿ ಹೀಗೆ ಸದಾ ಇರಲಿ.....
ಜೈ ಬ್ಲಾಗರ್ಸ್..........!

sunaath said...

ಮೃದು ಮನಸು,
ತವರಿನ ಸೆಳೆತ ಅಂದರೆ ಹೀಗೆಯೇ ಅಲ್ಲವೆ! ಎಲ್ಲಿಯೇ ಇರಿ, ಬ್ಲಾಗಿನ ಮೂಲಕ ಹತ್ತಿರವಾಗಿರಿ.

Subrahmanya said...

ನಿಮ್ಮ ಸಂತೋಷದ ಕ್ಷಣಗಳನ್ನು ಆಗಾಗ್ಗೆ ಚಿತ್ರಗಳಲ್ಲಿ ನೋಡಿ ಆನಂದಿಸಿದೆ. ಬ್ಲಾಗಿನ ಮೂಲಕ ಇಂತಹ ಸ್ನೇಹ ಸಂಬಂಧಗಳು ಇನ್ನಷ್ಟು ವೃಧ್ಹಿಸಲಿ.

ಶರಶ್ಚಂದ್ರ ಕಲ್ಮನೆ said...

ಊರಿನ ಸೆಳೆತ ಅಂದರೆ ಹಾಗೆ... ಎರಡು ತಿಂಗಳು ದೆಹಲಿಯಲ್ಲಿ ಇದ್ದು ಅನುಭವಿಸಿ ಮರಳಿದ್ದೇನೆ ಊರಿಗೆ.. ನಿಮ್ಮ ಬ್ಲಾಗು ಹೀಗೆ ಬೆಳಗುತ್ತಿರಲಿ :)

ಸುಧೇಶ್ ಶೆಟ್ಟಿ said...

Mrudhu Manasu avarE...

E sarthi nimmannu bhEti maadalu aagalilla... mundhe yaavaagaLaadharoo bheTiyaadhenu emba aashavaadhavidhe.... Bengaloorinalli full nimmadhe galaaTe anthe ;)

bareetha iri kashtavaadharoo :) yeradu saalugaLaadharoo paravaagilla ;)

ಮಲ್ಲಿಕಾರ್ಜುನ.ಡಿ.ಜಿ. said...

ನಮಸ್ತೆ,
ಬ್ಲಾಗ್ ಮೂಲಕ ಸಿಗುವ ಸಂತಸಗಳು ನೂರಾರು. ಕೆಲಸದ ಒತ್ತಡದಲ್ಲಿ ಆಗಾಗ ಒಬ್ಬೊಬ್ಬರ ಬ್ಲಾಗ್‌ ಇಣುಕಿ ಖುಷಿ ಪಡುತ್ತಿರುತ್ತೇನೆ. ನಿಮ್ಮನ್ನೆಲ್ಲಾ ನೋಡಿ ನಿಮ್ಮ ನಿರೂಪಣೆ ಕೇಳಿ ಸಂತಸವಾಯಿತು.

ಪ್ರಗತಿ ಹೆಗಡೆ said...

ಜೈ ಹೋ ಸುಗುಣಕ್ಕ...

Laxman (ಲಕ್ಷ್ಮಣ ಬಿರಾದಾರ) said...

Mansu avare

Ni elle iru hege iru
blog barita iru

Nimmannu mattu mahesh avarannu Bheti yagiddu tumba khushiyatu

ಮನಸು said...

ellarigu danyavadagaLu

Kirti said...

tavaru maneya savi savidu
neevu nakku nalidiri
maleya kaanad maralu naadinalli
tavaru nenapige nondadiri
manasin maatu keluvaraaru
kelida maatu heluvaraaru
maralinalli karunadin kaleyide
nimm manadalli bharatad bhaavavide
elleyiri hegeyiri kanadaragiri mattu khushiyaagiri..
matte ee tavarige bhetti yaavag endu yochisade melind mele bheti aaguttiri..nimma geletanakke nann salaam...

ವನಿತಾ / Vanitha said...

Happy for you all..:)ನಾನು ಕೂಡ ಮನೆ function ತರ ಫೋಟೋ, ಎಲ್ಲರ ಬ್ಲಾಗ್ಗಳಲ್ಲಿ ಓದಿ ಸಂತೋಷ ಪಟ್ಟಿದ್ದೆ.ಹಾಗೆ ನಂಗು ಕುಶಿಯಾಗ್ತಾ ಇದೆ..3ವರ್ಷದ ನಂತರ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗ್ತಾ ಇದ್ದೇನೆ.

SATISH N GOWDA said...

nice

ashokkodlady said...

Suguna avre,

tumbaa aapta baraha, savi nenapugalu beku saviyalu baduku... chennagide..

ದಿನಕರ ಮೊಗೇರ.. said...

ಮನಸು ಮೇಡಮ್,
ನಿಮ್ಮನ್ನೆಲ್ಲಾ ಭೇಟಿ ಆದದ್ದು ಖುಶಿ ಕೊಟ್ಟಿತ್ತು.... ನೀವು ಬೆಂಗಳೂರಿಗೆ ಬಂದಿಳಿದಾಗ ನಾನು ಫೋನ್ ಮಾಡಿ ಮಾತಾಡಿದ್ದೆ... ನಿಮ್ಮನ್ನೆಲ್ಲಾ ಮುಖತಃ ಭೇಟಿ ಆಗಿದ್ದು, ಕೊಂಚವೂ ಅಹಂ ಇಲ್ಲದೇ ಎಲ್ಲರ ಜೊತೆ ಬೆರೆತಿದ್ದು..... ಮಹೇಶ್ ಸರ್ ರ ಭೇಟಿ ನನ್ನಲ್ಲಿ ಹೊಸ ಪ್ರೋರ್ತಿ ತುಂಬಿತ್ತು.... ಅವರ ಸರಳತೆ ನನ್ನನ್ನು ಇಂಪ್ರೆಸ್ ಮಾಡಿತ್ತು..... ಬರೆಯುತ್ತಾ ಇರಿ ಮೇಡಮ್,..... ಕೆಲಸದ ನಡುವೆ ಬಿಡುವು ಸಿಕ್ಕರೆ..... ಮಾಡಿಕೊಂಡು......

ಸಾಗರದಾಚೆಯ ಇಂಚರ said...

Welcome Back :)

ಜಲನಯನ said...

ಹಹಹ...ಡಾ.ಗುರು ನಿಮ್ಮಂತೆ ನಾನೂ ಹೇಳೋದು...ವೆಲ್ ಕಂ ಬ್ಯಾಕ್...ಎಲ್ಲಿಗೆ...ನಾನು ಊರಲ್ಲಿದ್ದರೆ ಬೆಂಗಳೂರಿಗೆ..ಇಲ್ಲಿದ್ದರೆ ಕುವೈತಿಗೆ...ಮತ್ತೆ ನಿಮ್ಮ ಪುಸ್ತಕ ಬಿಡುಗಡೆ ಸಮಯ ನಿರೂಪಣೆಗೆ ಚಿಂತಿಸುವಂತಿಲ್ಲ..ಸುಗುಣ, ಪ್ರವೀಣ್ ಇದ್ದೇ ಇರ್ತಾರೆ...ನಾನೂ ಮತ್ತೆ ಶಿವು ಸುಗುಣ ಮತ್ತೆ ಮಹೇಶ್ ಗೆ ಆಭಾರಿ...ಧನ್ಯವಾದ ಸುಗುಣ

ವಿ.ಆರ್.ಭಟ್ said...

I am almost offline at present.nimmannellaa bheti agiddu, aa nepau shaashvata, thanks a lot

ಶಿವಪ್ರಕಾಶ್ said...

Welcome back to blogging akkayya :)

Prabhuraj Moogi said...

ಹ್ಮ್ ಒಟ್ಟಿನಲ್ಲಿ ತವರೂರು ಪ್ರವಾಸ ಚೆನ್ನಾಗಿ ಆಯ್ತು ಅನ್ನಿ... ಬ್ಲಾಗ್ ಬಳಗ ಬೇಳೀತಾ ಇರ್ಲಿ...

ಸೀತಾರಾಮ. ಕೆ. / SITARAM.K said...

ತುಂಬಾ ಆಪ್ತವಾಗಿ ಹಚ್ಹ್ಚಿಕೊಂಡಿದ್ದಿರಾ ದೇಶ-ನಾಡು ಬ್ಲಾಗ್ ಊರು ಜನ ಹೀಗೆ.
ಕಾರ್ಯಕ್ರಮ ಚೆನ್ನಾಗಿ ನಡೆಸಿ ಅದರ ಸವಿನೆನಪ ಮೆಲುಕು ಹಾಕಿದ್ದೀರಿ. ಅದರಲ್ಲಿ ನಾವೆಲ್ಲಾ ಸೇರಿದ್ದು ನಮಗೂ ಸವಿನೆನಪೆ!.
ಕೆಲಸಡ ಒತ್ತದಗಳನ್ನು ಯಶಸ್ವೀಯಾಗಿ ಪೂರೈಸಿ ಬ್ಲಾಗ್ ಗೆ ಮರಳಿ.