Tuesday, February 15, 2011

ಒಂದು ಚಿತ್ರ, ಎರಡು ಕವನ

-1-
ನಲ್ಲನ ಬರುವಿಕೆಗೆ ಕಾದು ಕುಳಿತಿಹೆ
ಘಂಟೆಗಳು ಉರುಳುತಿದೆ
ರವಿಯ ಕಿರಣ ಸರಿಯುತಿದೆ
ಬರದ ನಲ್ಲನಿಗೆ ಮನಸು ಕಾಯುತಿದೆ.....

ಸಂಜೆ ನೆರಳು ನೀರೊಳು ಬೆರೆತು
ಅಲೆಯ ಉಂಗುರಕೆ ಸೇರಿತು
ಹೊತ್ತು ಕಳೆದರು ಏಕೋ ಕಾಣಲಿಲ್ಲ
ನನ್ನಿಯನ ಹೆಜ್ಜೆ ಗುರುತು....

ಪ್ರಜ್ವಲಿಸಿ ಬಿಂಬಿಸುವ ಮುಖ ಬಾಡಿ
ಬೇಸರಿಸಿದರೂ ಕೂತ ಬಂಡೆಯಲೆ
ನಿನ್ನೆಸರ ಕೆತ್ತಿ ಚಿತ್ರಿಸಿದೆ ಈ ನನ್ನ ಬೆರಳು
ಇದ ನೋಡಲೊಮ್ಮೆ ಇತ್ತ ನೀ ಮರಳು......

ನಿನ್ನೆಸರ ಪಟಿಸುವ ನನ್ನೀ ಹೃದಯ
ಒದ್ದೆಯಾಗದಂತಿರಲು ಬಾ ನನ್ನಿಯ....
ಕಣ್ಣ ಹನಿ ನೀರ ಅಲೆಯಾಗುವ ಮುನ್ನ
ನಲ್ಲ ನೀ ಬಂದು ಸೇರಿ ಬಿಡು ನನ್ನ


-2-
ಎಳೆಬಿಸಿಲ ಸೊಬಗಲಿ
ನೀರಿನ ಅಲೆಯ ನೋಡುತ
ಕಾದಿರುವಳು ರಾಧೆ
ಕೊಳಲ ಧನಿಗೆ ........

ಕಣ್ಣ ಸುತ್ತರಿಸಿ ನೋಡಿದರೂ
ಕಾಣದ ಗೋಪಿ ಲೋಲನ
ನೆನೆಸುತ ಅಲೆಯನೇ
ನಯನದಿ ಸೆರೆ ಹಿಡಿದಿಹಳು..........

ಮೌನಭಂಗಿಯಲಿ
ಇನಿಯನ ಹೆಸರ ಜಪಿಸುತ
ಜಲ ಕನ್ಯೆಗೆ ಕಲ್ಲ ಹೊಡೆದು
ಅಲೆಯ ಉಂಗುರವ ತರಿಸಿಹಳು.......

ಕಾದು ಕುಳುತಿರುವವಳ ಸೇರಲು
ಬರುವನೋ, ಇಲ್ಲವೋ ಅವಳ ಇಂದಿರ
ಆದರೆ ಮೌನವಿಸಿರುವ ಮುಖವ ನೋಡಲು
ಬಂದೇ ಬರುವನು ರಾತ್ರಿ ಚಂದಿರ......


(ಪ್ರಕಾಶಣ್ಣ ತೆಗೆದಿರುವ ಚಿತ್ರಕ್ಕೆ ನನ್ನ ಎರಡು ಕವನಗಳು)
ಧನ್ಯವಾದಗಳು ಕವಿತೆ ಹುಟ್ಟಿಸಿದ ಈ ಚಿತ್ರಕ್ಕೆ ಮತ್ತು ಚಿತ್ರದರಸಿ ಹಾಗೂ ಚಿತ್ರ ತೆಗೆದ ಕೈಗೆ....


15 comments:

Yogee said...

Chandira hege baruvanu ! Indu Amavasye....!

Chennagive Kavanagalu

sunaath said...

ಪ್ರಕಾಶ ತೆಗೆದ ಚಿತ್ರ ಹಾಗು ನಿಮ್ಮ ಕವನಗಳು ಸೊಗಸಾಗಿವೆ.
ವಿರಹಭಾವನೆ ಕವನಗಳಲ್ಲಿ ಸುಂದರವಾಗಿ ಒಡಮೂಡಿದೆ.

Manju M Doddamani said...

ನಾನು ಕವನ ಬರ್ದು ಚಿತ್ರ ಹುಡುಕ್ತೀನಿ ನೀವು ಛಾಯ ಚಿತ್ರ ನೋಡಿ ಕವನ ಬರ್ದಿದಿರಾ ಸೂಪರ್ ರಿ
ಎರಡು ಕವನಗಳು ಚನ್ನಾಗಿ ಮೂಡಿ ಬಂದಿದೆ ಎರಡನೇ ಕವನ ಇನ್ನು ಚನ್ನಾಗಿದೆ :)


~$ಮರೀಚಿಕೆ$~

Ittigecement said...

ಮೃದು ಮನಸು...

ಸೊಗಸಾದ ಕವಿತೆಗಳು...
ಅದರ ಭಾವಗಳು..

ತೆಗೆದ ಫೋಟೊ ಸಾರ್ಥಕವೆನಿಸುವಂಥಹ ಸಾಲುಗಳು...

ಥ್ಯಾಂಕ್ಯೂ .. ಧನ್ಯವಾದಗಳು... ಜೈ ಹೋ !

Naveen ಹಳ್ಳಿ ಹುಡುಗ said...

sooooooooooooper:)

Pradeep Rao said...

ನಿನ್ನೆಸರ ಕೆತ್ತಿ ಚಿತ್ರಿಸಿದೆ ಈ ನನ್ನ ಬೆರಳು
ಇದ ನೋಡಲೊಮ್ಮೆ ಇತ್ತ ನೀ ಮರಳು......

ಚೆನ್ನಾಗಿದೆ..

ಮನದಾಳದಿಂದ............ said...

ಅಕ್ಕಯ್ಯಾ........
ಅದೇನ್ ಚಂದ ಬರ್ದೀಯವ್ವಾ.............!

ಬಾಳ ಸಂದಾಗದೆ..........

balasubramanya said...

ಒಂದು ಚಿತ್ರಕ್ಕೆ ಎರಡು ಕವಿತೆಗಳ ಕಾಣಿಕೆ ನೀಡಿದ ನಿಮಗೆ ಥ್ಯಾಂಕ್ಸ್, ಅದ್ಭುತ ಚಿತ್ರತೆಗೆದು ಪ್ರಕಟಿಸಿ ಅತ್ತಿಗೆಗೆ ಕಾಣಿಕೆ ನೀಡಿದ ಪ್ರಕಾಶ್ ಹೆಗ್ಡೆ ಗೆ ಜೈ ಹೋ. ಒಟ್ಟಿನಲ್ಲಿ ನಿಮ್ಮಿಬ್ಬರ ಜುಗಲ್ಬಂದಿಯಿಂದಾಗಿ ಒಳ್ಳೆಯ ಚಿತ್ರ ಹಾಗು ಕವಿತೆ ಸಿಕ್ಕಿದ್ದು ನಮಗೆ ಖುಷಿಯಾಗಿದೆ. ಹಾಗಾಗಿ ನಿಮ್ಮಿಬ್ಬರಿಗೂ ಜೈ ಹೋ.

--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

ಜಲನಯನ said...

ಸುಗುಣಾವ್ರೆ..ಎರಡೂ ಒಂದೊಂದು ಭಾವಕೆ ಹಿಡಿದ ಕನ್ನಡಿಯಂತಿವೆ...ಈ ಚಿತ್ರ ಎಷ್ಟೊಂದು ಭಾವನೆಗಳಿಗೆ ಸ್ಫೂರ್ತಿಯಾಗಿದೆ ಅಲ್ಲವಾ? ಚನ್ನಾಗಿವೆ ಜೋಡಿ ಕವನಗಳು.

ಸುಧೇಶ್ ಶೆಟ್ಟಿ said...

Super chitra, super kavana, super kalpane....

kaLagina saalugaLu thumba ishta aayithu...

ಕಾದು ಕುಳುತಿರುವವಳ ಸೇರಲು
ಬರುವನೋ, ಇಲ್ಲವೋ ಅವಳ ಇಂದಿರ
ಆದರೆ ಮೌನವಿಸಿರುವ ಮುಖವ ನೋಡಲು
ಬಂದೇ ಬರುವನು ರಾತ್ರಿ ಚಂದಿರ......

ಮೌನರಾಗ said...

yearduu kavanagalu sundaravagide....abhinandanegalu nimage...

ಚಂದಿನ | Chandrashekar said...

ಚಂದದ ಕವನಗಳು, ತುಂಬಾ ಇಷ್ಟವಾದವು...

ದಿನಕರ ಮೊಗೇರ said...

manasu madam,
eraDU kavana chennaagive....

ishTa aaytu....

ಮಹಾಬಲಗಿರಿ ಭಟ್ಟ said...

channagide kavanagalu

ಶಿವಪ್ರಕಾಶ್ said...

Chitra matte kavanagalu super :)