ಚೈತ್ರ ಕಾಲದ ಹಸಿರು ಚಿಗುರಿ
ಸುಗಂಧ ಹೂಗಳು ಸುವಾಸನೆ ಪಸರಿಸಿ
ಝೇಂಕಾರದಲಿ ದುಂಬಿಗಳು ನಲಿದಾಡಿ
ಹಕ್ಕಿ-ಪಿಕ್ಕಿಗಳು ಚಿಲಿಪಿಲಿಯ ನಾದದಲಿವೆ
ಇದ ಕಂಡು ಮನುಜ ಮನಸು ಅಹ್ಲಾದಿಸಿ
ಹೊಸ ವರುಷವ ಹರುಷದಿ ಆಹ್ವಾನಿಸೋಣ...
ಭೂರಮಿಯು ರಂಗು ರಂಗಿನ ಹೊಸತನದಿ
ಹಸಿರ ಚೈತ್ರ ಶುದ್ಧ ಪಾಡ್ಯಮದಿ
ವಿಕೃತಿ ಸಂವತ್ಸರ ಯುಗವ ದಾಟಿಸಿ
ಖರ ಸಂವತ್ಸರದಿ ನವ ಯುಗವ ಸೃಷ್ಟಿಸಿಹನು
ಬನ್ನಿ ಸ್ವೀಕರಿಸುವ ಹೊಸತನದ ಹರುಷವನು....
ಪ್ರತಿಪದೆ ಎಂದೇ ಹೆಸರಿಸುವ ನವ ಯುಗಕೆ
ಅಭ್ಯಂಜನ ಸ್ನಾನದಿ ಹೊಸ ಉಡುಗೆ ತೊಟ್ಟು
ಸೂರ್ಯದೇವಗೆ ನಮಿಸಿ ಕಷ್ಟ-ಸುಖಗಳ ಸಮಾನತೆಗೆ
ಬೇವು ಬೆಲ್ಲವ ಎಲ್ಲರಿಗೂ ಹಂಚಿ ಯುಗಾದಿಯ ಸ್ವಾಗತಿಸಿ
ಸಿಹಿ ಅಡುಗೆಯಲಿ ಮನೆಮಂದಿಯೆಲ್ಲ ನಲಿಯುವ ಬನ್ನಿ......
ಭೂರಮಿಯು ರಂಗು ರಂಗಿನ ಹೊಸತನದಿ
---------
ಬೇವಿನ ಕಹಿ ಬೆಲ್ಲದ ಸಿಹಿ
ಎರಡೂ ಜೀವನದ ಜೋಡಿ
ಕೈ ಹಿಡಿದು ನೆಡೆದರೆ
ಎಲ್ಲ ವಿಸ್ಮಯಗಳ ಮೋಡಿ.........
ಸಿಹಿ-ಕಹಿ ಮಿಶ್ರಣದ ಜೀವನ
ಕಂಡವನೇ ಧನ್ಯ
ಯಾವುದು ಒಂದೇ ಒಂದಿದ್ದರೂ
ಜೀವನದ ಅರಿವಾಗದು ತಕ್ಷಣ....
ಬೆಲ್ಲಕೆ ಕಬ್ಬು ಬೇವಿನೆಲೆಗೆ ವೃಕ್ಷ
ಕಷ್ಟಕೆ ನಷ್ಟ ಸುಖಕೆ ಆದಾಯ
ಎಲ್ಲದಕು ಕಾರಣವಾದ ಮೂಲ
ಹುಡುಕಿದರೂ ಸಿಗದು ಅದರ ಜಾಲ
ಬದುಕ ಬವಣೆ ಸುಖದ ಸ್ವಪ್ನ
ಎರಡು ಜೋಡಿ ಹೆತ್ತಿನ ಪಯಣ
ಇರುವುದನೇ ತಿಳಿಸಿ ಹೇಳುವುದು
ಈ ಯುಗಾದಿ ಹಬ್ಬದ ವಿಶೇಷ ದಿನ
ವಿಕೃತದ ಮನೆ ಮನಸು ದೂರವಿಸಿ
ಸಮಶೃತಿಯ ನೈವೇದ್ಯ ಭರಿಸಿ
ಎಲ್ಲ ಕಷ್ಟ-ಸುಖಗಳ ಸಮಧೂಗಿಸಿ
ಸ್ವೀಕರಿಸುವ ಬನ್ನಿ ಖರ ಸಂವತ್ಸರವ...
ಯುಗಾದಿ ಹಬ್ಬದ ಶುಭಾಶಯಗಳು
18 comments:
ನಿಮಗೂ ಮತ್ತು ನಿಮ್ಮಮನೆಯವರಿಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.ನವ ವರುಷ ನಿಮಗೆ ತರಲಿ ನೂರು ನೂರು ಹರುಷ.ವರುಷವೆಲ್ಲ ಹರಿಯಲಿ ಹೊಳೆಯಂತೆ ಹರುಷ.
ಉಗಾದಿಯ (ಯುಗಾದಿಯ) ಹಾರ್ದಿಕ ಶುಭಾಶಯಗಳು...
ಬೇವು-ಬೆಲ್ಲ ಸವಿಯಬೇಕು ವರುಷವೆಲ್ಲ......ಚನ್ನಾಗಿವೆ ಎರಡೂ ಕವನಗಳು...
ಯುಗಾದಿ ಹಬ್ಬದ ಶುಭಾಶಯಗಳು:)
ಹೊಸ ಸ೦ವತ್ಸರಕ್ಕೆ ಎರಡು ಸು೦ದರ ಕವನಗಳು. ನಿಮಗೂ ಯುಗಾದಿಯ ಶುಭಾಶಯಗಳು.
ಅನ೦ತ್
ಮೃದುಮನಸು,
ಯುಗಾದಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಕವನಗಳು ಬೆಲ್ಲದಷ್ಟೇ ಮಧುರವಾಗಿವೆ.
ನಿಮಗೂ ಯುಗಾದಿಯ ಶುಭಾಶಯಗಳು
ಧನ್ಯವಾದಗಳು ಸರ್, ನಿಮ್ಮ ಹಾರೈಕೆಯಂತೆಯೇ ಆಗಲಿ
ಅಜಾದ್ ಸರ್,
ಹಬ್ಬಕ್ಕೆ ಬನ್ನಿ... ಹೋಳಿಗೆ ಊಟಕ್ಕೆ ಧನ್ಯವಾದಗಳು ನಮ್ಮೊಟ್ಟಿಗೆ ನಿಮಗೂ ಶುಭವನ್ನರಸುತ್ತೇವೆ..
ಮಹಾಬಲಗಿರಿ...
ಧನ್ಯವಾದಗಳು ನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು
ಅನಂತರಾಜ್ ಸರ್,
ಧನ್ಯವಾದಗಳು ನಿಮಗೆ ನಮ್ಮ ಶುಭಾಶಯಗಳು...
ಸುನಾಥ್ ಕಾಕ,
ಬೇವು-ಬೆಲ್ಲದ ಸವಿಯೊಂದಿಗೆ ನಿಮಗೆ ಶುಭಾಶಯಗಳು
ಸುಗುಣಕ್ಕ,
ಹಬ್ಬಕ್ಕಾಗಿ ಒಂದು ಸೊಗಸಾದ ಕವನ ಬರೆದಿದ್ದೀರಿ..ಥ್ಯಾಂಕ್ಸ್.
ನಿಮಗೂ, ಮಹೇಶ್ ಸರ್ ಮತ್ತು ಮನುವಚನ್ ಎಲ್ಲರಿಗೂ ಯುಗಾದಿಯ ಶುಭಾಶಯಗಳು.
ಸುಗುಣಕ್ಕ,
ಹಬ್ಬಕ್ಕಾಗಿ ಒಂದು ಸೊಗಸಾದ ಕವನ ಬರೆದಿದ್ದೀರಿ..ಥ್ಯಾಂಕ್ಸ್.
ನಿಮಗೂ, ಮಹೇಶ್ ಸರ್ ಮತ್ತು ಮನುವಚನ್ ಎಲ್ಲರಿಗೂ ಯುಗಾದಿಯ ಶುಭಾಶಯಗಳು.
Suguna Madam,
Kavanagalu tumba sundarvagive...
Nimagoo Yugaadi habbada Subhashaygalu...
Happy Ugadi to all of you.
happy Ugadi Suguna!!
:-)
malathi S
"ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.
ಸುಂದರ ಕವನ..
ನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು!
ugaadigaagi bareda kavana tumbaa chennaagide...
nimagU habbada subhaashaya..
ಯುಗಾದಿಯ ಶುಭಾಶಯಗಳು.. ಅಲ್ಲಿ ಹೇಗಿತ್ತು ಸೆಲೆಬ್ರೇಷನ್ :)
Post a Comment