Thursday, March 31, 2011

ಕ್ಷಮೆಗಾಗಿ ಸಮಯವೂ ತಾಳದು..

ವಾಹ್!!! ನೀಳ ಕೇಶದ ನೀರೆ, ಸುಂದರ ಸುರದ್ರೂಪಿ ಬೆಡಗಿ ವಿಜಯನಗರ ಬಸ್ ನಿಲ್ದಾಣದಿಂದ ಕೆಂಪೇಗೌಡ ನಿಲ್ದಾಣಕ್ಕೆ ಬಸ್ ಹತ್ತಿ ಟಿಕೆಟ್ ತೆಗೆದುಕೊಂಡು ತನ್ನ ಭುಜದ ಮೇಲೆ ಪುಸ್ತಕಗಳ ಹೊರೆ ಹೊತ್ತುಕೊಂಡು ನಿಂತಿದ್ದಾಳೆ. ಸುತ್ತಮುತ್ತ ನೋಡ್ತಾಳೆ ಎಲ್ಲೂ ಸೀಟು ಖಾಲಿಯಾಗಿಲ್ಲ ಸ್ವಲ್ಪ ಸಮಯದ ನಂತರ ಬಂದ ನಿಲ್ದಾಣದಲ್ಲಿ ಯಾರೋ ಒಬ್ಬರು ಇಳಿದಿದ್ದರಿಂದ ಅವಳಿಗೆ ಕುಳಿತುಕೊಳ್ಳಲು ಸೀಟ್ ಸಿಕ್ಕಿತು........ ಅಬ್ಬಾ ಎಂದು ಧಣಿವಾರಿಸಿಕೊಳ್ಳುವಂತೆ ನೀಳ ಕೇಶದ ನೀರೆ ತನ್ನ ಕೂದಲನ್ನು ಸರಿಗೊಳಿಸಿಕೊಂಡು ಕುಳಿತುಕೊಂಡಳು.........

ಅವಳ ಹಿಂದಿನ ಸೀಟಿನಲ್ಲಿ ನಿದ್ರೆಯಲಿದ್ದವಗೆ... ಆಕೆ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಲಿದ್ದಂತೆ ಸುಮಧುರ ಸುಗಂಧ ಪರಿಮಳ ಅವನ ಮೂಗಿಗೆ ಸೆಳೆದಾಗಲೇ ಎಚ್ಚೆತ್ತಿದ್ದು....... ಇತ್ತ ತನ್ನ ಮುಂಗುರುಳ ಸರಿಪಡಿಸಿಕೊಳ್ಳುತ್ತಲೇ ಇದ್ದ ಸುಂದರಿಯ ಮುಖ ನೋಡಬೇಕೆಂದು ಎಷ್ಟು ಸಾರಿ ಆ ಕಡೆ ಈ ಕಡೆ ತಿರುಗಿದರೂ ಅವಳ ಮುಖಾರವಿಂದ ಕಾಣಲೇ ಇಲ್ಲ...... ಆ ಕ್ಷಣ ಅವನಿಗೆ ಬೇಸರ ಬಯಸದೇ ಬಂದಿತ್ತು .....


ಅವಳ ನೀಳ ಕೇಶರಾಶಿ ಎಂತವರನ್ನೂ ಮರುಳುಮಾಡುವಂತಿತ್ತು. ಜಡೆಯಾಕದೆ ಬಿಟ್ಟಿದ್ದ ಆ ಕೇಶರಾಶಿ ಆಗೊಮ್ಮೆ ಈಗೊಮ್ಮೆ ತೊಂದರೆಮಾಡುತ್ತಲಿದ್ದರಿಂದ ಆ ಕೂದಲನ್ನು ಸರಿಪಡಿಸಿಕೊಂಡು ಕುಳಿತುಕೊಂಡಳು... ಆದರೂ ಏಕೋ.. ಏನೋ ಚುಳ್ ಎಂಬಂತೆ ನೋವು ಪ್ರಾರಂಭಿಸಿತು... ಎರಡು ಮೂರು ಬಾರಿ ಸರಿಪಡಿಸಿಕೊಂಡ ಕೂದಲು ಏನು ಪ್ರಯೋಜನವಾಗದೆ ಇದ್ದ ಪೂರ್ಣ ಕೂದಲನ್ನು ಮುಂಬದಿಗೆ ತಂದಳು ಆದರೂ ತಲೆಯ ಮೇಲಿಂದ ಪುಡಿಗೂದಲೂ ಚುಳ್ಳೆಂಬಂತೆ ನೋಯಿಸಲು ಪ್ರಾರಂಭಿಸಿತು... ಅವಳ ಮನಸಲ್ಲೇ ಕೋಪ ಉದ್ವೇಗ ಒಮ್ಮೆಲೇ ಕಾಣುತ್ತಿತ್ತು ಹಿಂಬದಿ ಇರುವವನದೇ ಈ ಕೆಲಸವಿರಬೇಕು ನನ್ನ ಜುಟ್ಟು ಎಳೆಯುತ್ತಿರಬೇಕು ಎಂದು ಒಮ್ಮೆಲೆ ಕೋಪದಿ ಎದ್ದು ಹಿಂದಿರುಗಿತ್ತಿದ್ದಂತೆ ........... ಕೋಪದಲ್ಲಿದ್ದರೂ ಎಷ್ಟು ಚೆನ್ನಾಗಿದ್ದಾಳೆ, ಎಷ್ಟುಹೊತ್ತಿಂದ ಕಾಯ್ತಾ ಇದ್ದೆ ಇವಳನ್ನ ನೋಡಲು ವಾಹ್..!! ಎಂದುಕೊಳ್ಳುವಷ್ಟರಲ್ಲಿ ಕಪ್ಪಾಳ ಮೋಕ್ಷವಾಯ್ತು.... ಸುತ್ತಲಿದ್ದ ಜನರೆಲ್ಲಾ ಕಕ್ಕಾಬಿಕ್ಕಿಯಾಗಿ ಅವರಿಬ್ಬರತ್ತಿರನ್ನೇ ನೋಡಲು ಪ್ರಾರಂಭಿಸಿದರು.........


ನೀಳ ಕೇಶರಾಶಿ ನೀರೆ ಜೋರು ಧ್ವನಿಯಲ್ಲಿ ನಿನಗೆ ಅಕ್ಕ ತಂಗಿಯರು ಇಲ್ಲ್ವಾ.... ಸ್ವಲ್ಪನೂ ಮಾನಾಮರ್ಯಾದೆ ಇಲ್ಲವಾ..?? ಎಂದು ಕೇಳುತ್ತಲಿದ್ದಂತೆ ಸುತ್ತಮುತ್ತಲಿದ್ದ ಜನ ಏನಾಯತಮ್ಮ...?? ಎಂದು ಕೇಳುವುದೇ ತಡ... ನೋಡಿ ಈ ಹುಡುಗ ನನ್ನ ಕೂದಲು ಎಳಿತಾ ಇದ್ದ ನಾನು ಎಷ್ಟೊಂದು ಸರಿ ನನ್ನ ಕೂದಲನ್ನ ಮುಂಬಾಗಕ್ಕೆ ತಗೆದುಕೊಂಡರೂ ಮತ್ತೆ ಮತ್ತೆ ಎಳಿತನೇ ಇದ್ದ... ಎಂದು ಗೋಳಿಡುತ್ತಿದ್ದಂತೆ ಜನರು ಹಿಗ್ಗಾಮುಗ್ಗ ತಳಿಸಿ ಅವನಿಗೆ ಮಾತನಾಡಲೂ ಬಿಡದೆ ಕೆನ್ನೆಯನ್ನು ಊದಿಸಿ.. ತಲೆಯಲ್ಲಿ ರಕ್ತ ಹೆಪ್ಪುಗಟ್ಟುವಂತೆ ಹೊಡೆದರು.... ಇಷ್ಟೆಲ್ಲಾ ನೆಡೆಯುತ್ತಾ.... ಜೋರು ಧನಿಗಳು ಕೇಳುತ್ತಲಿದ್ದಂತೆ ಡ್ರೈವರ್ ಗಾಬರಿಯಲ್ಲಿ ಬಸ್ ನಿಲ್ಲಿಸಿ ಏನಾಗಿದೆ ಎಂದು ನೋಡಲು ಬಂದವನು ಆ ಹುಡುಗನಿಗೆ "ಯಾರು ಹೆತ್ತ ಮಗನೋ ನೀನು ಇಂತಾ ಕಚಡಾ ಕೆಲಸ ಮಾಡಿ ನಮ್ಮ ದಿನವನ್ನೂ ಹಾಳು ಮಾಡ್ತೀಯಾ ಎಂದು ಸುಪ್ರಭಾತ ಹಾಕಿದ" ಇದೆಲ್ಲ ಕೇಳಿಸಿಕೊಂಡು ಒದೆಸಿಕೊಂಡವ ಮಾತ್ರ ಹೆಚ್ಚು ಮಾತನಾಡಲಾಗದೆ ನನ್ನದೇನು ತಪ್ಪಿಲ್ಲ... ಬರಿ ಆ ಹುಡುಗಿ ಮುಖ ನೋಡಬೇಕೆಂದೆನಿಸಿದ್ದು ನಿಜ ಆದರೆ ತಪ್ಪು ಕೆಲಸ ಮಾಡುವಂತವನಲ್ಲ ಎಂದು ಮಾತ್ರ ಬಡಬಡಾಯಿಸುತ್ತಿದ್ದುದ ಕಂಡ ಯಾರೋ ಹಿರಿಯರು ಹೇ..!!! ನಡಿ... ನಡಿ... ಹಿಂದಿನ ಸೀಟಿಗೆ ಹೋಗಿ ಕೂತ್ಕೋ ಇಲ್ಲೇ ಇದ್ರೆ ಮತ್ತಿನ್ನೇನಾದರು ಮಾಡಿಬಿಟ್ಟೀಯಾ ಎಂದು ಗದರಿ ಹಿಂದೆ ಕಳಿಸಿದರು..


ಏಟು ತಿಂದ ತಪ್ಪಿಗೆ ಸದ್ದಿಲ್ಲದೆ ಹಿಂದೆ ಹೋಗಿ ದೂರದಲ್ಲೆಲ್ಲೋ ಕುಳಿತು ಬಿಟ್ಟ ಅಕ್ಕಪಕ್ಕದವರು ಅವನನ್ನೇ ನೋಡಿ ನಗುತ್ತಲಿದ್ದರು... ಇವನಿಗೆ ಮುಜುಗರದ ಮೇಲೆ ಅವಮಾನದಿ ಹನಿಗಳು ಮಾತ್ರ ಕಣ್ಣಕೊನೆಯಲಿ ನಿಂತಿತ್ತು........


ಸದ್ಯ ತೊಲಗಿದ ಎಂದು ನೀಳ ಕೇಶರಾಶಿಯವಳು ಆರಾಮಾಗಿ ಕುಳಿತುಕೊಂಡಳು... ತಪ್ಪಿತು ಕಾಟ ಎಂದುಕೊಳ್ಳುತ್ತಲಿದ್ದಂತೆ ಮತ್ತೆ ತನ್ನ ಕೂದಲು ಚುಳ್ ಏನುವಂತೆ ನೋಯಿಸಿತು.... ನನ್ನ ಭ್ರಮೆ ಎಂದು ಕೂದಲುಗಳನ್ನು ಮುಂದಕ್ಕೆ ತೆಗೆದುಕೊಂಡು ಕುಳಿತಳು. ಮತ್ತೊಮ್ಮೆ ಸುತ್ತಲೂ ಕಣ್ಣಾಡಿಸಿದಳು ಹಿಂಬದಿಯಲಿ ಯಾರೋ ವಯಸ್ಸಾದ ಮಹಿಳೆ ಕುಳಿತಿದ್ದರು... ಆ ಹುಡುಗ ಎಲ್ಲೆಂದು ನೋಡಿದರೆ ಹಿಂದೆ ಎಲ್ಲೋ ಮೂಲೆಯಲ್ಲಿ ತಲೆ ತಗ್ಗಿಸಿ ಕುಳಿತಿದ್ದ. ಸಮಾಧಾನದ ಉಸಿರು ಬಿಟ್ಟು ತಲೆಯನ್ನು ಹೊರಗಿಸಿ ಕುಳಿತವಳಿಗೆ ಪುಡಿಗೂದಲು ಮತ್ತೂ ಕಷ್ಟ ಕೊಡಲು ಶುರುವಿಟ್ಟಿತು... ಅಯ್ಯೋ ಕರ್ಮವೇ ಏನಾಗಿದೆ ಎಂದು ತಟ್ಟನೆ ತಿರುಗಿದರೆ ಸೀಟಿಗೆ ಆತುಕೊಂಡಿದ್ದ ಕಬ್ಬಿಣದ ಸಲಾಕೆ ಸ್ವಲ್ಪ ಮಟ್ಟಿ ಕತ್ತರಿಸಿತ್ತು. ಸುಂದರಿಯ "ಕೇಶರಾಶಿಯನ್ನು ಆಕರ್ಷಿಸಿ ಎಳೆದದ್ದು ಆ ಪ್ರಾಯದ ಹುಡುಗನಲ್ಲ ಈ ಬಾಯ್ಬಿಟ್ಟ ಕಬ್ಬಿಣ" ಎಂದು ಮನವರಿಕೆಯಾಗಲು ಕೆಲವೇ ಕ್ಷಣಗಳು ಬೇಕಾಯಿತು...


ಹೋ!!! ಛೇ ಎಂತಾ ಅನಾಹುತ ಮಾಡಿಬಿಟ್ಟೆ..... ಈಗ ಕ್ಷಮೆ ಕೇಳಲೂ ನಾನು ಅರ್ಹಳಲ್ಲ... ಏನಾದರಾಗಲಿ ಈಗಲೇ ಕೇಳಿಬಿಡುವ ಎಂದು ದೂರದಲ್ಲಿ ಎಲ್ಲೋ ಕುಳಿತಿದ್ದವನತ್ತ ಕಣ್ಣಾಡಿಸುತ್ತಿದ್ದವಳನ್ನು ಕಿಟಿಕಿಯಿಂದ ಯಾರೋ ಕರೆದಂತಾಯ್ತು...


ನೋಡಿ ನಾನು ಆ ತರಹ ತಪ್ಪು ಮಾಡಿಲ್ಲ....... ಕಲ್ಪನೆಯಲ್ಲಿ ಏನೆಲ್ಲಾ ಸೃಷ್ಟಿಸಿಕೊಳ್ಳಬೇಡಿ... ನಿಜವನ್ನು ತಿಳಿದು ಮಾತನಾಡಿ .... ನೀವು "ಸುಂದರವಾಗಿದ್ದೀರಿ ನೋಡಲು ಅಷ್ಟೆ... ಆದರೆ ಆಂತರಿಕ ಸೌಂದರ್ಯದಲಲ್ಲ" ಎಂದು ಹೇಳುತ್ತಿದ್ದಂತೆ ಬಸ್ ಇವಳ ಕ್ಷಮೆಗೆ ಸಮಯವನ್ನೂ ಕೊಡದೆ ಮುಂದಕ್ಕೆ ಸಾಗಿತು........

23 comments:

ಶಿವಪ್ರಕಾಶ್ said...

ಚನ್ನಾಗಿದೆ ಅಕ್ಕ...

ನಿಜ ಅಕ್ಕ... ಕೆಲೋವೊಮ್ಮೆ ಹೀಗೆ ಆತುರಾತುರವಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸಿಬಿಡುತ್ತೇವೆ.. ಆಮೇಲೆ ತಪ್ಪು ನಮ್ಮದೇ ಎಂದು ನೆನೆದು ಬೇಸರ ಪಡುತ್ತೇವೆ.
ಅದಸ್ಟು ತಾಳ್ಮೆಯಿಂದ ಯೋಚಿಸಬೇಕು...

ಗಿರೀಶ್ ಎಸ್ said...

ಚೆನ್ನಾಗಿದೆ.ಏನೇ ಕೆಲಸ ಮಾಡುವ ಮೊದಲು ಹಿಂದೆ ಮುಂದೆ ಯೋಚಿಸಬೇಕು,ನಿಜ ಏನು ಎಂಬುದನ್ನು ಅರಿತು ಮಾಡಬೇಕು ಎಂಬುದನ್ನು ತೋರಿಸುತ್ತಿದೆ ಈ ಕಥೆ

ಮನಸು said...

ಹಾ ಶಿವು...
ಆತುರತ ತೀರ್ಮಾನ ಅವಘಡಗಳಿಗೆ ಕಾರಣವೂ ಆಗಬಹುದು... ಕೆಲಸದ ಒತ್ತಡದಲ್ಲೂ ನನ್ನ ಲೇಖನ ಓದಿ ಅನಿಸಿಕೆ ತಿಳಿಸಿದ್ದೀಯ ಧನ್ಯವಾದಗಳು...

ಮನಸು said...

ಗಿರೀಶ್...
ಕೆಲವೊಮ್ಮೆ ಯೋಚಿಸೋದೇ ಇಲ್ಲ ಇಲ್ಲಸಲ್ಲದ್ದನ್ನ ಕಲ್ಪನೆ ಮಾಡಿಕೊಂಡು ಮನುಷ್ಯರಾದ ನಾವುಗಳು ತಪ್ಪುಗಳನ್ನ ಮಾಡ್ತನೇ ಇರ್ತೇವೆ... ಈ ಕಥೆಯನ್ನು ನಾ ಕಲ್ಪಿಸಿಕೊಂಡು ಸುಮ್ಮನೆ ಬರೆದೆ ಆದರೂ ನೀವು ಮೆಚ್ಚಿದ್ದಕ್ಕೆ ನನ್ನ ಧನ್ಯವಾದಗಳು........

PARAANJAPE K.N. said...

ಸಹನೆ-ಸಜ್ಜನಿಕೆ ಇದ್ದಾಗ ಮಾತ್ರ ಸೌಂದರ್ಯ ಮಿನುಗುತ್ತದೆ.

ವಾಣಿಶ್ರೀ ಭಟ್ said...

chennagide... aritu matanaadi..:)

UMESH VASHIST H K. said...

naanu swlpa chennaagidini anta andukollo ... hudugeyaru ee tappugalanna maadtaare. aadre pashataapa paduvvaru kammine ...

Pradeep Rao said...

ವಿಪರ್ಯಾಸ! ಚೆನ್ನಾಗಿದೆ.. ಹುಡುಗನ ಪಾಡು ನೋಡಿ ಅಯ್ಯೋ ಪಾಪ ಎನ್ನಿಸಿತು! ನಿಜವಾಗಿಯೂ ವಿಜಯನಗರದಲ್ಲಿ ನಡೆದ ಘಟನೆಯೇ ಇದು?

ಜಲನಯನ said...

ಹಹಹ ಬಹಳ ಸಹಜ ಮತ್ತು ಸಾಧ್ಯ ಕಲ್ಪನೆ (ಅಥವಾ ನಡೆದ ನಿಜ ಘಟನೆಯೋ??) ಚನ್ನಾಗಿ ಬಣ್ಣಿಸಿದ್ದೀರಿ...ಅಯ್ಯೋ ಹೆಬ್ಬಾಳ ಕೃ.ಷಿ. ವಿ.ವಿ.ಗೆ ಹೋಗೋ ಬಿ.ಟಿ.ಎಸ್ ನಲ್ಲಿ ನನ್ನ ಸ್ನೇಹಿತನಿಗೆ ಒಮ್ಮೆ ಹಾಗಾಗಿತ್ತು ...ಕಂಡಕ್ಟರ್ ಟಿಕೆಟ್ ಗೆ ನಿಂತಾಗ ಹಣ ತೆಗೆಯೋಗೆ ಒಂದು ಕೈಲಿ ಮೇಲಿನ ಸರಳು ಹಿಡಿದು ತುಂಬಿದ್ದ ಬಸ್ ನಲ್ಲಿ ನಿಂತುಕೊಂಡೇ ತನ್ನ ಫ್ರಂಟ್ ಪಾಕೆಟ್ ಗೆ ಕೈ ಹಾಕಿದಾಗ..ಮುಂದೆ ಇದ್ದವ ಯಾವನಲೇ ಜೇಬಿಗೆ ಕೈ ಹಾಕೋನು ಅಂತ ಅವನ ಜೇಬಲ್ಲೇ ಅವನ ಕೈಯನ್ನು ಹಿಡಿದಿದ್ದ...ಕಂಡಕ್ಟರ್ ಅಲ್ಲೇ ಇದ್ದ ಬಚಾವ್...!! ಯಾರ್ರೀ ಅದು ..ಅವ್ರ ಜೇಬಿಗೆ ಕೈ ಹಾಕೋಕೆ ಅವ್ರೇ ನಿಮ್ ಪರ್ಮಿಶನ್ ಕೇಳ್ಬೇಕಾ...ಅಂದಾಗಲೇ ಅವ ಹಿಂತುರುಗಿ ನೋಡಿ ನನ್ನ ಸ್ನೇಹಿತನ ಪಾಕೆಟಲ್ಲಿದ್ದ ಅವನ ಕೈನ ನೋಡಿ...ಸಾರಿ ಸರ್..ನನ್ನ ಪಾಕೆಟ್ ಗೆ ಯಾರೋ ಕೈ ಹಾಕಿದ ಹಾಗಾಯ್ತು ಅಂತ ಸಾರಿ ಕೇಳಿದ... ...

ಸಿಮೆಂಟು ಮರಳಿನ ಮಧ್ಯೆ said...

ಮನಸು...

"ಪ್ರಮಾಣಿಸಿ ನೋಡು" ಅಂತ ಹಿರಿಯರು ಹೇಳಿದ್ದು ನೆನಪಾಯಿತು...

ಎಷ್ಟೋ ಬಾರಿ ಹೀಗಾಗಿಬಿಡುತ್ತದೆ....

sunaath said...

ಮನಸು,
ಸ್ವಾರಸ್ಯಪೂರ್ಣ ನಿರೂಪಣೆಯಿಂದಾಗಿ ಕತೆ ರೋಚಕವಾಗಿದೆ.

ವಿಚಲಿತ... said...

Taalme,sahanena kalkobaardu..
Akasmat aa yuvakanu taalme kalkondu avanige avalu baidaagale buddhi kalsidre..

ದಿನಕರ ಮೊಗೇರ said...

aantarika soundaryavE baahya soundaryavannu hecchige maaDOdu alvaa..
tumbaa chennaagi barediddIra madam..

ಮನಸು said...

ಪರಾಂಜಪೆ ಸರ್,
ನಿಜ ಬಾಹ್ಯ ಸೌಂದರ್ಯವಿದ್ದರೆ ಸಾಲದು... ಆಂತರಿಕವಾಗಿಯೂ ಇರಬೇಕು.. ಧನ್ಯವಾದಗಳು

ಮನಸು said...

ವಾಣಿಶ್ರೀ... ಧನ್ಯವಾದಗಳು ನಿಮ್ಮ ಅನಿಸಿಕೆಗಳಿ... ನಿಜವಾಗಿಯೂ ಏನೇ ತಪ್ಪು ಮಾಡುವಮುನ್ನ ಅರಿಯಬೇಕು

ಮನಸು said...

ಉಮೇಶ್ ಸರ್,
ತಪ್ಪು ಮಾಡೋದು ಸಹಜ ಆದರೆ ಅದನ್ನ ಅರಿತು ಬಾಳೋರು ಎಷ್ಟು ಜನ ಹೇಳಿ.... ಅರಿವಿಕೆ ಮೂಡಿಸಲು ಇದೊಂದು ಪುಟ್ಟ ಲೇಖನ ಅಷ್ಟೆ..ಧನ್ಯವಾದಗಳು

ಮನಸು said...

ಪ್ರದೀಪ್,
ಖಂಡಿತಾ ಇದು ನೆಡೆದದ್ದಲ್ಲ... ನಾನು ಸುಮ್ಮನೆ ಕಲ್ಪಿಸಿಕೊಂಡು ಬರೆದದ್ದು.... ಹಹಹ ಹೌದು ಹೀಗೇನಾದರು ಆದರೆ ಆ ಹುಡುಗನ ಗತಿ ಅಷ್ಟೆ..!!!? ಧನ್ಯವಾದಗಳು

ಮನಸು said...

ಅಜಾದ್ ಸರ್,
ಇದು ಕಲ್ಪನೆಯ ಕಥೆ ಅಷ್ಟೆ... ನಿಮ್ಮ ಸ್ನೇಹಿತನ ಅವಾಂತರ ಕೇಳಿ ನಗು ಬಂತು ಹಹಹ ಚೆನ್ನಾಗಿದೆ ಆ ಪರಿಸ್ಥಿತಿ... ಧನ್ಯವಾದಗಳು

ಮನಸು said...

ಪ್ರಕಾಶಣ್ಣ,
ಪ್ರಮಾಣಿಸಿ ನೋಡುವ ವ್ಯವಧಾನ ಎಲ್ಲಿರುತ್ತೆ ಆ ಸಮಯದಲ್ಲಿ ಕೋಪಕ್ಕೆ ಕೈ ಮತ್ತು ಬಾಯಿ ಮಾತನಾಡುತ್ತೆ ಹಹ ಅಷ್ಟೆ... ಇಂತಹವು ಹಲವು ನೆಡೆದಿರುತ್ತವೆ. ಧನ್ಯವಾದಗಳು

ಮನಸು said...

ಸುನಾಥ್ ಕಾಕ,
ನಿಮ್ಮ ಮೆಚ್ಚುಗೆಯ ಅನಿಸಿಕೆಗಳಿಗೆ ಧನ್ಯವಾದಗಳು...

ಮನಸು said...

ವಿಚಲಿತ,
ತಾಳ್ಮೆ ಕಳೆದುಕೊಂಡರೆ ಇಂತಹ ಅವಘಡಗಳು ಸಂಭವಿಸುತ್ತವೆ... ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು

ಮನಸು said...

ದಿನಕರ್ ಸರ್,
ನಿಜ ನಿಮ್ಮ ಮಾತು... ಮೆಚ್ಚಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

ashokkodlady said...

Uttama kathe...kevala baahya soundarya viddare saaladu Hridaya soundayavu irbeku...Nice One...