Monday, March 21, 2011

ದೂರದ ಬೆಟ್ಟ-೨


ಇಷ್ಟು ದಿನ ನಾನು ಮರುಭೂಮಿಗೆ ಬಂದು ಒಬ್ಬನೇ ಜೀವನ ನೆಡೆಸ್ತಾ ಇದ್ದರೂ ನನ್ನ್ಗೆ ಯಾವತ್ತೂ, ನನ್ನ ಜೀವನಕ್ಕೆ ನನ್ನ ಅರ್ಥ ಮಾಡಿಕೊಳ್ಳೋ ಜೀವ ಬೇಕು, ನಾನೇ ಆರಿಸಿಕೊಳ್ಳಬೇಕು, ಅದು ಒಂದು ಹೆಣ್ಣು ನನ್ನ ಜೀವನದಲ್ಲಿ ಬರಬೇಕು ಎಂದು ಹೆಚ್ಚು ಯೋಚಿಸಿರಲಿಲ್ಲ......... ನನ್ನವರೇ ನನ್ನಿಂದ ದೂರಾದ ಮೇಲಂತು ಯಾಕೋ ನನಗಾಗಿ ಕಾಯುವ, ನನಗಾಗಿ ಹಂಬಲಿಸುವ ಜೀವವೊಂದು ಬೇಕು ಎಂದು ಅನ್ನಿಸ್ತಾ ಇತ್ತು...........ಇರುವುದೆಲ್ಲವ ಬಿಟ್ಟು ಬಂದದ್ದು ಆಯ್ತು....ಬಂದಮೇಲೆ ನಮ್ಮವರೂ ನನ್ನನ್ನೂ ಮರೆತದ್ದು ಆಯ್ತು. ಇನ್ನು ಏನಿದ್ದರೂ ನಾನು ಬುದ್ಧಿವಂತನಾಗಬೇಕು ಜೀವನದಲ್ಲಿ ಇರುವಷ್ಟು ದಿನ ಸಂತಸ ಕಾಣಬೇಕು.........

ನನ್ನ ಅಮ್ಮ, ಅಪ್ಪ, ತಮ್ಮ, ತಂಗಿಯರು ಎಲ್ಲಾ ಇದ್ದಾರೆ. ಅವರೇ ಒಂದು ಹೆಣ್ಣು ನೋಡಿದ್ದರೆ, ಎಲ್ಲರೂ ಸಂತೋಷದಿಂದ ಮನೆ ತುಂಬಿಸಿಕೊಂಡಿದ್ದರೆ...!!!! ಎಲ್ಲಾ ಅಂತೆ ಕಂತೆಗಳು.. ಎಷ್ಟೊಂದು ಚೆಂದ ನಮ್ಮದೇ ಪಂಗಡ ನಮ್ಮ ಊರಿನ ಹುಡುಗಿ ಅಂತೇನಾದರೂ ಇದ್ದಿದ್ದರೆ ಬಹಳ ಖುಷಿಯಾಗುತ್ತಿತ್ತು.............ಆದರೇನು ಮಾಡಲಿ ನನಗೆ ಬೇರೆ ದಾರಿ ಹುಡುಕಬೇಕಿದೆ.....

ಸಂಜೆ ಹೊತ್ತಿಗೆ ಬಿಡುವಿನ ಸಮಯದಲ್ಲಿ ಪಾರ್ಟ್ ಟೈಮ್ ಕೆಲ್ಸ ಮಾಡ್ತಾ ಇದ್ದೆ.....ನನಗೆ ಬೇಸರವಾದಗಲೆಲ್ಲಾ ಪಿಲಿಫಿನೋ ದೇಶದ ಒಬ್ಬಳು, ಪ್ಯಾಮ್ ಅವಳ ಹೆಸರು, ಆ ಸ್ನೇಹಿತೆಯತ್ತಿರ ನನ್ನ ವಿಷಯ ಎಲ್ಲಾ ಹೇಳಿ ಮನಸ್ಸು ಹಗುರ ಮಾಡ್ಕೋತಾ ಇದ್ದೆ. ಬೇಸರದ ಬಿಸಿ ಹಾರಿಸಲು ಯಾವುದಾದರೊಂದು ದಾರಿ ಬೇಕಿತ್ತು. ಅದೇ ಸಮಯಕ್ಕೆ ಪ್ಯಾಮ್ ಸಹ ಸಿಕ್ಕಿದ್ದಳು, ಬಹಳ ಒಳ್ಳೆಯ ಹುಡುಗಿ, ಮನೆ, ಸಂಸಾರ ಎಲ್ಲರ ಕಷ್ಟ ಸುಖ ಬಲ್ಲವಳು, ನಾನು ನನ್ನ ದುಃಖ, ಬೇಸರ ಎಲ್ಲವನ್ನೂ ಅವಳಲ್ಲಿ ಆಗಾಗ ಹೇಳಿಕೊಳ್ಳುತ್ತಿದ್ದೆ. ಅವಳೂ ಸಹ ನನ್ನ ಬೇಸರಕ್ಕೆ ಮದ್ದಾಗಿ ಹಿತವಚನ, ತಾಳ್ಮೆಯ ಸಹಾನುಭೂತಿ ನೀಡ್ತಾ ಇದ್ದಳು. ಅವಳ ಸಲಹುವ ಮಾತೇ ನನ್ನ ನೋವನ್ನ ಮರೆಸ್ತಾ ಇತ್ತು.

ಅವತ್ತೊಂದು ದಿನ ಅವಳು ಮೊದಲಿನ ಸ್ನೇಹಿತೆ ತರಹ ಕಾಣಲೇ ಇಲ್ಲ.....ಮಾತು ಸಹ ಬದಲಾಗಿತ್ತು....... ನಾನಿರುವ ಜಾಗಕ್ಕೆ ಬಂದು ನಿನ್ನತ್ತಿರ ಒಂದು ಮಾತನಾಡಬೇಕೆಂದಾಗ ಇದೇನು ಮಾತನಾಡಲು ಅನುಮತಿಯೇ..!!! ಎಂದು ಕೀಟಲೆ ಮಾಡಿದ್ದೆ........ ಮಾತು ತೊದಲುತ್ತಲೇ ಪ್ರಾರಂಭಿಸಿದವಳು ನಾನು ಒಂದು ವಿಷಯ ಹೇಳ್ತೀನಿ. ನೀನು ಸರಿಯಾಗಿ ಯೋಚಿಸಿ ನಿರ್ಧಾರಕ್ಕೆ ಬಾ.......... ನಿನ್ನ ಮನಸಿಗೆ, ನಿನ್ನ ಜೀವನಕ್ಕೆ ನಾನು ಸೋತಿದ್ದೀನಿ ನೀನು ಒಪ್ಪುವುದಾದರೆ ನಿನ್ನ ಮದುವೆಯಾಗಿ ನಿನ್ನೊಟ್ಟಿ ಇರುವ ಆಸೆ ಇದೆ...........ಯೋಚಿಸು ಎಂದಾಗ ನಾನು ಶಾಕ್ ಆದೆ...... ಅರೆ ಇವಳಿಗೇನು ಹುಚ್ಚು ಹಿಡಿದಿದೆಯಾ....... ನಾನು ಯಾವುದೋ ಊರಿಂದ ಬಂದು ಹೊಟ್ಟೆ ಪಾಡಿಗೆ ಜೀವನ ಮಾಡ್ತಾ ಇದ್ದೀನಿ......... ಇವಳಿಗೂ ಅದೇ ರೀತಿ ಅವರ ಊರು ಅವಳ ಕಡೆಯವರೂ ಯಾರು ಇಲ್ಲವಾ.......ನನ್ನಿಂದೆ ಬಿದ್ದಿದ್ದಾಳಲ್ಲ, ಅಲ್ಲದೆ ನಾನು ನನ್ನ ಬೇಸರ ಎಲ್ಲಾ ಅವಳ ಹತ್ತಿರ ಹೇಳಿದ್ದೇ ತಪ್ಪಾಯ್ತಾ.......... ನನ್ನ ನೋವು, ನನಗಾರಿಲ್ಲ ಅನ್ನೋವುದಕ್ಕೋ, ಅಥವಾ ಅಯ್ಯೋ ಪಾಪ ಎಂದು ನನ್ನ ಇಷ್ಟ ಪಡ್ತಾ ಇದಾಳ....? ನನಗೆ ಮನಸಲ್ಲೇ ದ್ವಂದ್ವ ಕಾಡ್ತಾ ಇತ್ತು.......... ಎರಡು ದಿನದ ಕಾಲವಕಾಶ ತೆಗೆದುಕೊಂಡು, ನಾನು ಒಬ್ಬನೇ ರೊಮ್ ನಲ್ಲಿ ಕೂತು ಯೋಚಿಸೋಕ್ಕೆ ಪ್ರಾರಂಭಿಸಿದೆ.........

ನನ್ನೆದುರು ಇದ್ದು ಪ್ರೀತಿಸೋರನ್ನ ಸ್ವೀಕರಿಸಲಾ.........ನನ್ನಿಂದ ಸಹಕಾರ ಬಯಸಿ ನನ್ನ ದುಡುಮೆಯ ದುಡ್ಡಿಗೆ ಕಾಯುವ ನನ್ನವರ ಪ್ರೀತಿಸಿ ಅವರಿಗಾಗಿ ದುಡಿಯಲಾ......... ನಾನು ಬರುವ ಇನ್ನೆರಡು ತಿಂಗಳಿದ್ದರೂ ತಮ್ಮನ ಮದುವೆಯನ್ನು ಅಣ್ಣ ಬರುವವರೆಗೂ ಕಾಯುವ ವ್ಯವಧಾನವಿಲ್ಲದಂತ ತಮ್ಮಂದಿರಿಗೆ ಅವರ ಸಂಸಾರಕ್ಕೆ ದುಡಿಯಲಾ....!!!!!! ನನಗೂ ಒಂದು ಜೀವವಿದೆ, ನನ್ನದು ಒಂದು ಹೃದಯ ಪ್ರೀತಿ, ಮೋಹ, ಕಾಮ ಎಲ್ಲವನ್ನೂ ಬಯಸುತ್ತೆ ಎಂದು ಯಾಕೆ ನನ್ನವರಿಗೆ ಅರ್ಥವಾಗಲಿಲ್ಲ ನನ್ಗೆ ಗೊತ್ತಿಲ್ಲ.................

ಅಂದು ಹೀಗೆ ಯೋಚುಸ್ತಾ ಇದ್ದೆ.........ಮನಸಲ್ಲಿ ಪ್ರಶ್ನೆ ಉತ್ತರಗಳ ಸಮೀಕ್ಷೆ ನೆಡಿತನೇ ಇತ್ತು....... ಅವಳಾವುದೋ ದೇಶದವಳು, ನನ್ನ ಜೊತೆ ರಕ್ತ ಹಂಚಿಕೊಂಡು ಬೆಳೆದ ಅಣ್ಣ ತಮ್ಮಂದಿರೇ ನನಗಿಲ್ಲ.......ಇನ್ನು ಯಾವದೋ ದೇಶದ ವಾತಾವರಣದಲ್ಲಿ ಬೆಳೆದು ಬಂದು ಕೇವಲ ೪,೫ ವರ್ಷ ಪರಿಚಯದಲ್ಲಿ ಇವಳನ್ನ ಪ್ರೀತಿಸಲಾ....ಮೊದಲೆ ಊರು ಬಿಟ್ಟು ಬಂದವಳು ಅವಳಿಗ್ಯಾರು ಇಲ್ಲವಾ...... ಮುಂದಿನ ಜೀವನ ಹೇಗೆ ಇರುವಷ್ಟು ದಿನ ಮರುಭೂಮಿಯಲ್ಲಿ ಹೇಗಿರಲಿ. ನನ್ನದೆಂಬುದು ಏನಿಲ್ಲ......... ಹಲವು ಚಿತ್ರಗಳು ಕಣ್ಣ ಮುಂದೆ ಬಂದೋದವು.........

ಮರುದಿನ ಕೆಲಸಕ್ಕೇನೋ ಹೋದೆ......ಊರಿಂದ ಕರೆ ಬಂದಿತ್ತು ನನ್ನೂರ ಕೋಡ್ ನಂಬರ್ ಕಂಡು ನನಗೆ ಖುಷಿ .......... ಅಷ್ಟೆಲ್ಲಾ ಆದರು ನನ್ನವರತ್ತ ಸೆಳೆಯುತ್ತಲೇ ಇದೆ. ಹಲೋ ಎಂದಕೂಡಲೇ ಹಲೋ...!!!! ನಾನು ನಿಮ್ಮಪ್ಪ.......... ನಿಮ್ಮಮ್ಮನಿಗೆ ಆರೋಗ್ಯ ಸರಿ ಇಲ್ಲ........ನಿನ್ನ ನೋಡುವ ಹಂಬಲದಿಂದಿದ್ದಾಳೆ ಆದಷ್ಟು ಬೇಗ ಬಂದು ಬಿಡು........ ಈ ಮಾತು ಕೇಳುತಿದ್ದಂತೆ ನಾನೀಗಲೇ ಊರಿಗೆ ಹೋಗಿಬಿಡಲೇ.......ಅಮ್ಮ!!! ಏನೇ ಹಾಗಲಿ ಅಮ್ಮನಲ್ಲವೇ..... ಅವಳ ಧ್ವನಿಯೂ ಕೇಳಲಿಲ್ಲ..... ಆ ಕರೆ ಬರುತ್ತಿದ್ದಂತೆ ಊರಿಗೆ ಹಾರುವ ಮನಸು ಮಾಡಿದೆ. ಇದ್ದ ವಿಷಯವನ್ನು ಸ್ನೇಹಿತೆ ಪ್ಯಾಮ್ ಹತ್ತಿರ ಹೇಳಿ, ನೀನು ಹೇಳಿದ್ದ ವಿಚಾರವನ್ನು ಊರಿಂದ ಬಂದ ಕೂಡಲೇ ತಿಳುಸ್ತೀನಿ ಎಂದಷ್ಟೇ ಹೇಳಿ ಹೊರಟೆ.........

ನಾ ಬರುವ ದಾರಿಯನ್ನೇ ಕಾದಿದ್ದ ಅಮ್ಮ........ನನ್ನ ನೋಡಿ ಖುಷಿ ಪಟ್ಟಳು ಸಂತೋಷದ ದಿನಗಳಂತು ನನ್ನೊಟ್ಟಿಗೆ ಹಂಚಿಕೊಳ್ಳಲಿಲ್ಲ...... ಈಗ ತನ್ನ ನೋವಿನ ಸಮಯಕ್ಕಾದರೂ ನನ್ನ ಕರೆದರಲ್ಲಾ.....!! ಎಂಬ ಖುಷಿಯಂತೂ ಇದೆ...... ಅಮ್ಮ ನನ್ನ ಕೈ ಹಿಡಿದು ಮಗನೇ, ನಿನ್ನ ಜೀವನವೆಲ್ಲಾ ನಮ್ಮೆಲ್ಲರಿಗಾಗಿ ಕಳೆದಿದ್ದೀಯಾ......... ನಿನ್ನ ನೋಡುವಾಸೆ ಮಾತ್ರ ನನ್ನಲ್ಲಿತ್ತು ಮಗನೇ........... ಎಂದು ಖುಷಿ ಪಟ್ಟಳು.........ಅಮ್ಮನ ಪ್ರೀತಿಗೆ ನಾನು ಮಾರುಹೋದೆ, ಮರುಭೂಮಿಯಲ್ಲಿದ್ದ ಪ್ರೀತಿಯೇ ಬೇಡವೆನಿಸುವಷ್ಟು ಅಮ್ಮ ನನ್ನ ಪ್ರೀತಿಯಲ್ಲೇ ಹಾರೈಕೆಯ ಮಾತಾಡಿದಳು......

ಆಸ್ಪತ್ರೆಯಲ್ಲಿದ್ದ ಅಮ್ಮನ ಆರೋಗ್ಯ ವಿಚಾರಿಸಲು ಡಾಕ್ಟರ್ ಹತ್ತಿರ ತೆರೆಳಿದಾಗ ತಿಳಿದ್ದಿದ್ದು, ಅಮ್ಮನಿಗೆ ಕ್ಯಾನ್ಸರ್ ಇದೆ ಅವಳ ಉಳಿಸಲು ಸುಮಾರು ಲಕ್ಷಗಳು ಬೇಕೆಂದು...... ಅದನ್ನ ಕೇಳಿ ಹೊರ ಬರುತ್ತಿದ್ದಂತೆ ತಮ್ಮಂದಿರಿಬ್ಬರು ಗುಸುಗುಸು ಎನ್ನುತ್ತಿದ್ದರು.........ಅವನೇ ಬಂದಿದ್ದಾನಲ್ಲ ಎಲ್ಲವನ್ನು ನೋಡಿಕೊಳ್ಳುತ್ತಾನೆ ಮತ್ತ್ಯಾವ ಹೊಣೆಗಾರಿಕೆ ನಮಗೆ ಬೇಡ ಅವನ ಕೈನಿಂದ ಜಾರುವುದು ವಾಸೆ ..... ಆಮೇಲೆ ಏನಾದರೂ ನಮ್ಮಗಳ ಮೇಲೆ ಹೊರೆ ಹೊರಿಸಿಬಿಟ್ಟಾನು, ಅಮ್ಮನ್ನ ನೋಡಿಕೊಳ್ಳೂಕೆ ಚೆನ್ನಗಿರೋ ಮನೆಬೇಕು ನಿಮ್ಮಗಳ ಮನೆಗೆ ಕರೆದುಕೊಂಡು ಇರಿಸಿಕೊಳ್ಳಿ, ಹಾರೈಕೆ ಮಾಡಿ ಎಂದುಬಿಟ್ಟರೆ. ಬೇಗ ನಡಿ ಕೆಲಸ ಇದೆ ಎಂದು ಹೊರಡೋಣ ಎಂದು ನನ್ನ ತಮ್ಮಂದಿರು ಮಾತ್ನಾಡೋದು ಕೇಳಿ ನನಗೆ ಎಲ್ಲಿಲ್ಲದ ಕೋಪ.......ಮನಸಲ್ಲಿದ್ದ ದುಗುಡ ಎಲ್ಲವೂ ಕೆರೆಯ ನೀರು ಹರಿದಂತೆ ಹರಿದು ಹೋಯ್ತು.......ಅವರ ಮಾತುಗಳು ನನ್ನ ಕೆರಳುವಂತೆಯೂ ಮಾಡಿತ್ತು. ನನ್ನ ಭಾವನೆಯನ್ನು ನುಂಗಿ ನೀರು ಕುಡಿಯುವ ಮನಸ್ಸಾದರೂ ನಿಮಗೆ ಹೇಗೆ ಬಂತು.........ನನ್ನದೂ ಒಂದು ಜೀವ, ನಾನು ನಿಮ್ಮಂತೆ ಇರಬೇಕು ಎಂದು ಬಯಸುವುದು ಬೇಡ. ನನ್ನ ಪಾಡಿಗೆ ನಾ ಇರಲೂ ಬಿಡುವುದೂ ಇಲ್ಲ, ಎಂದು ರಪ್ಪನೆ ತಮ್ಮಂದಿರ ಕಪ್ಪಾಳಕ್ಕೆ ಎರಡು ಬಿಗಿದೆ. ನನಗೂ ತಾಳ್ಮೆಯ ಕಟ್ಟೆ ಹೊಡೆದಿತ್ತು. ನಾನು ದುಡಿಯುವುದೇ ತಪ್ಪಾ....!! ದುಡ್ಡು ಇದೆ ಎಂದ ಮಾತ್ರಕ್ಕೆ, ಪ್ರೀತಿ, ವಿಶ್ವಾಸ, ಕಾಳಜಿ ಯಾವುದೂ ಒಬ್ಬರಿಗೊಬ್ಬರು ವಿನಿಯೋಗಿಸಿಕೊಳ್ಳಬಾರದ. ಅಮ್ಮನಿಗೆ ಎಷ್ಟು ಖರ್ಚಾಗುತ್ತೋ ಅದನ್ನೆಲ್ಲ ನಾನು ಭರಿಸ್ತೀನಿ ಆದರೆ ನಿಮಗಿರೋ ಈ ರೀತಿ ನೀಚಬುದ್ದಿ ನನಗೆ ನನ್ನ ಮನಸಿಗೆ ಆಘಾತ ಮಾಡಿದೆ.... ಇಂದು ಕೆನ್ನೆಗೆ ಎರಡು ಕೊಟ್ಟ ಏಟು, ಅಂದು ಮನೆ ಮತ್ತು ಮನೆಯವರನ್ನು ಮರೆತು ಪ್ರೀತಿಸಿ ಮದುವೆಯಾಗಲು ಹೊರಟಿದ್ದಲ್ಲ ಅಂದೇ ಈ ಕೆಲಸ ಮಾಡಿದ್ದರೆ ನಾನು ಕಾಲ ಕಸವಾಗುತ್ತಿರಲಿಲ್ಲ............ ನಾ ದುಡಿವ ದುಡ್ಡು ಬೇಕು, ನಾನು ಬೇಡವೇ ಬೇಡ........ ನನ್ನ ಮನಸ್ಥಿತಿಗೂ ಒಂದು ಇತಿಮಿತಿ ಇದೆ ಅದನ್ನ ಮೀರಿ ನಾನು ಮುಂದೆ ಹೋಗೋಲ್ಲ.......ಇಂದೇ ಕೊನೆ ನಿಮ್ಮ ಒಡನಾಟ ನನಗೆ ಬೇಡವೇ ಬೇಡ.......ಕೋಪದಿ ನೇರವಾಗಿ ಡಾಕ್ಟರ್ ಹತ್ತಿರ ಹೋಗಿ ಖರ್ಚುವೆಚ್ಚ ಎಷ್ಟಾಗುತ್ತೋ ನೀಡಿ ಅಮ್ಮನ ಆರೋಗ್ಯ ಸರಿಯಾಗುವವರೆಗೂ ಇದ್ದು.......ಅಮ್ಮನ್ನನ್ನು ಹಾರೈಕೆ ಮಾಡಲು ಒಬ್ಬ ಕೆಲಸದಾಕೆಯನ್ನಿಟ್ಟು ಅಮ್ಮ ನೀನು ಬದುಕಿರುವವರೆಗೂ ನಿನ್ನ ಅಪ್ಪನ್ನ ನೋಡಿಕೊಳ್ಳಲು ಈ ಹುಡುಗಿ ನಿಮ್ಮ ಜೊತೆ ಇರ್ತಾಳೆ. ನನ್ನಿಂದ ಸಹಾಯ ಬೇಕಾದಾಗ ಕರೆಮಾಡು, ಸಾಧ್ಯವಾದಷ್ಟು ನಿಮ್ಮನ್ನು ತೃಪ್ತಿ ಪಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿ, ಮರಗಟ್ಟಿದ ಮನಸಿನೊಂದಿಗೆ ಮರುಭೂಮಿಗೆ ಮರಳಿ ಬಂದು ಸೇರಿದೆ............

ಇತ್ತ ನನಗಾಗಿ ಕಾದಿದ್ದ ಪ್ರೀತಿ....ನನಗಾಗೇ ಕಾಯುತ್ತಿತ್ತು.......ಬಂದೊಡನೆ ನನ್ನ ಕಷ್ಟವೆಲ್ಲ ವಿಚಾರಿಸಿ ಸವಿಸವಿಯಾಗಿ ಮಾತನಾಡಿ ಮುದುಡಿದ ಹೃದಯವನ್ನು ಅರಳಿಸಿದಳು........ ಆ ಮುದ್ದು ಮುಖಕ್ಕೆ ಮನಸ್ಸು ಮರುಳಾಗದೆ ಇರುವವ ಯಾರೂ ಇಲ್ಲ. ನನಗೂ ಯಾಕೋ ನನ್ನವರ ಮೇಲಿನ ಕೋಪಕೋ ಏನೋ ನಾ ಸೋತು ಯಾವ ದೇಶದವಳಾದರೇನು ಪ್ರೀತಿ ಎಂಬುದಕೆ ದೇಶ, ಭಾಷೆ, ಆಚಾರ ವಿಚಾರ ಎನ್ನುವುದಿಲ್ಲ...........ನನಗಾಗಿ ನೀಡೋ ಪ್ರೀತಿಗೆ ನಾ ಸೋತು ಶರಣಾದೆ.....

ಅರಬೀ ಕಡಲಲಿ ಅಲೆ ಅಲೆಯಾಗಿ ತೇಲಿ ಬಂದ ಪ್ರೀತಿ ತಂಗಾಳಿ ನೀಡಿ ತಂಪಲ್ಲೇ ಮೀಯುವೆನೆಂಬ ಆತ್ಮವಿಶ್ವಾಸದಿ ಹೊಸ ಜೀವನ ಪ್ರಾರಂಭಿಸುವೆ.

28 comments:

Anonymous said...

kathe chennagide... gulfnalli heege life irutte anta keLidvi... tumba chennagi barediddeeri

-
chandu

Anonymous said...

ಬಹಳ ಸೊಗಸಾಗಿ ಬರೆದಿದ್ದೀರಿ...

Subrahmanya said...

ನಿಮ್ಮ ಬರಹಗಳಲ್ಲೇ ವಿಭಿನ್ನವಾದುದೆಂದು ಹೇಳುತ್ತೇನೆ. ಅನುಭವದಿಂದ ಬರುವ ಕೃತಿಯು ಮನಮುಟ್ಟುತ್ತದೆ.

ಮನಸು said...

ಚಂದು,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ... ನಿಜ ಎಷ್ಟೋ ಜನರ ಬದುಕು ಇದೇ ತರಹ ಇದೆ ಇಲ್ಲಿ.

ಮನಸು said...

Anonymous
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ

ಮನಸು said...

ಸುಬ್ರಮಣ್ಯ,
ಕಣ್ಣೆದುರು ಇಂತಹ ಜೀವನ ಕಂಡಾಗ ಮನಸು ಬೇಸರಿಸುತ್ತೆ... ನಮ್ಮಿಂದ ಪರಿಹಾರವಂತೂ ನೀಡಲಾಗದು ಅವರ ನೋವಿಗೆ ಈ ಕಥೆ ಒಂದು ಸಾಂತ್ವಾನ ಅಷ್ಟೆ.... ಧನ್ಯವಾದಗಳು

sunaath said...

ನೀವು ಬರೆದ ಕತೆ ವಾಸ್ತವ ಜೀವನಕ್ಕೆ ತುಂಬ ಹತ್ತಿರವಾಗಿದೆ.
ನಾಯಕನ ಮನೋಸ್ಥಿತಿಯ ಬದಲಾವಣೆಗಳನ್ನು ಸೊಗಸಾಗಿ ಚಿತ್ರಿಸಿದ್ದೀರಿ. ವ್ಯಕ್ತಿ ಯಾವ ದೇಶದ್ದಾದರೇನು, ಪ್ರೀತಿಸುವ ಹೃದಯ ಮುಖ್ಯ ಎನ್ನುವ ಅರಿವು ಕತೆಯ ಕೊನೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ.

ತೇಜಸ್ ಜೈನ್ Tejas jain said...

ನೀವು ಜೀವ ತುಂಬಿರುವ ಪಾತ್ರಗಳೇ ನನ್ನೆದುರಲ್ಲಿ ಕುಳಿತು ನೋವ ಹಂಚಿಕೊಂಡ ಅನುಭವವಾಯಿತು. ಕಥೆಯು ನೈಜವಾಗಿ ಮೂಡಿ ಬಂದಿದೆ...

ashokkodlady said...

kathyeya sukhantya ishta aitu..Nice one...

ಮನಸು said...

ಸುನಾಥ್ ಕಾಕ,
ವಾಸ್ತವ ಜೀವನಕ್ಕೆ ಇದು ಹತ್ತಿರ ನಿಜ ಇಲ್ಲಿ ಎಷ್ಟೋ ಜನರ ಬದುಕು ಹೀಗೇ ಇದೇ.... ಕುಟುಂಬ ಸಲಹುವ ನೆಪದಲ್ಲಿ ತಮ್ಮ ಜೀವನದ ಹಾದಿಯೇ ಬದಲಾಗಿದೆ. ಯಾವ ಊರು,ದೇಶಗಳಿದ್ದರೇನು ಪ್ರೀತಿ ಇರಲೇ ಬೇಕು ಅಲ್ಲವೆ. ಹಣ ಆಸ್ತಿ ಇದ್ದರೂ ಪ್ರೀತಿ ಸಿಗದಿದ್ದರೆ ಅವನ ಮನಸ್ಥಿತಿ ಬಹಳಷ್ಟು ಹದಗೆಡುತ್ತದೆ. ಧನ್ಯವಾದಗಳು

ಮನಸು said...

ತೇಜಸ್,
ನಿಮಗೆ ಸ್ವಾಗತ. ಕಥೆಯೊಳಗಿನ ಭಾವನೆಯನ್ನು ಅನುಭವಿಸಿ ಓದಿದ್ದಕ್ಕೆ ಧನ್ಯವಾದಗಳು... ಸದಾ ಬರುತ್ತಲಿರಿ

ಅಶೋಕ್,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ

ಜಲನಯನ said...

ಸುಗುಣಾವ್ರೆ...ಕಥೆ ಬಗ್ಗೆ ಎರಡು ಮಾತಿಲ್ಲ..ಯಾಕಂದ್ರೆ ಇದು ಕಥೆಯಲ್ಲ ವಾಸ್ತವ ಅಂದಿದ್ದೀರಿ... ಗಲ್ಪ್ ಸಂಬಳ ಅದು ಇದು ಅಂತ ಆಮಿಶ ತೋರ್ಸೋರಿಗೆ ಇದು ಒಂದು ಪಾಠ... ದೂರದ ಬೆಟ್ಟ ದೂರಕ್ಕೇ ಚಂದ ಹತ್ತಿರದಲ್ಲಿರೋರಿಗೆ ಕೇಳಿ ಅದರ ಸಾಮೀಪ್ಯದಾನಂದ...ಅಲ್ವಾ...??
ಒಳ್ಳೆಯ ಕಥೆ ಮತ್ತು ಪ್ರಸ್ತುತಿ

ತೇಜಸ್ವಿನಿ ಹೆಗಡೆ said...

ಚೆನ್ನಾಗಿದೆ ಬಂದಿದೆ... ಅಂತ್ಯವೂ ಚೆನ್ನಾಗಿದೆ.

ಮನಸು said...

ಅಜಾದ್ ಸರ್,
ನಿಮಗೂ ಇಂತಹ ಅನುಭವಾಗಿರಬೇಕು ಎಷ್ಟೋ ಜನ ನಿಮ್ಮೆದು ಕಷ್ಟ ಅನುಭವಿಸಿದ್ದು ಕಂಡಿದ್ದೀರಿ ಅಲ್ಲವೇ..? ದೂರದ ಬೆಟ್ಟ ದೂರದಿಂದ ಚೆನ್ನ...
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

ಮನಸು said...

ತೇಜು,
ಧನ್ಯವಾದಗಳು ನಿಮ್ಮ ಅನಿಸಿಕೆಗೆ, ಅಂತ್ಯ ಸ್ವಲ್ಪವಾದರೂ ಪ್ರೀತಿ ಸಿಗಲೆಂದು ಭಾವಿಸಿ ಈ ಅಂತ್ಯ. ವಂದನೆಗಳು

PARAANJAPE K.N. said...

ವಾಸ್ತವದ ಲೇಪವಿದ್ದಾಗ ಮಾತ್ರ ಕಥೆ ಕಳೆಗಟ್ಟುತ್ತದೆ ಎ೦ಬುದು ನಿಜವಾಗಿದೆ. ನಾನು ಓದಿದ ನಿಮ್ಮ ಬರಹಗಳಲ್ಲಿ ಇದು ವಿಭಿನ್ನವೆನಿಸಿತು.

shivu.k said...

ಸುಗುಣಕ್ಕ,

ಕತೆಯೂ ಮೊದಲಿಗೆ ಮರಳುಗಾಡಿನ ಚಿತ್ರವನ್ನು ತೋರಿಸುತ್ತಾ ಅಲ್ಲಿ ಬದುಕನ್ನು ಅರಸುವವರ ವಾಸ್ತವ ಚಿತ್ರಣ ಕತೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಬದುಕಿನ ಪ್ರೀತಿ ಬೇಕು ಅದು ಯಾವ ಭಾಷೆ, ದೇಶ, ವ್ಯಕ್ತಿಯಿಂದ ಬಂದರೇನು. ಅದನ್ನು ಸ್ವೀಕರಿಸುವ ವ್ಯಕ್ತಿಯ ಮನಸ್ಸಿನ ತಲ್ಲಣಗಳು ಕತೆಯಲ್ಲಿ ಚೆನ್ನಾಗಿ ಮೂಡಿಬಂದಿವೆ..

ಮನಸು said...

ಪರಂಜಪೆ ಸರ್,
ತುಂಬಾ ಧನ್ಯವಾದಗಳು... ವಾಸ್ತವದ ಬದುಕು ಎಲ್ಲವನ್ನು ಕಲಿಸುತ್ತಂತೆ ಹಾಗೇ ಈ ಕಥೆ ಬರೆಯುವುದನ್ನೂ ಕಲಿಸಿತು.

ಮನಸು said...

ಶಿವು,
ನಿಜ ಮರುಭೂಮಿಗೆ ಮರುಳಾಗಿ ಬಂದವರ ಕಥೆ ಇದು. ಎಲ್ಲಿದ್ದರೂ ಪ್ರೀತಿ ಬೇಕೆ ಬೇಕು... ಪ್ರೀತಿನ ಹಂಚಿ ಬಾಳಿದರೇ ಚೆನ್ನ ಜೀವನ. ಧನ್ಯವಾದಗಳು

ಗಿರೀಶ್ ಎಸ್ said...

kathe thumba chenaagide...vaasthavathe eddu kanuttade...
ee thara tammavarannu kaledu kondavaru thumba jana iddare..
annananne dura maadida tammandiru,thangiyaru...ide tahra tamma samsaarakke dudiya eshto mandi iddare anisuttade...

ಮನಸು said...

ಗಿರೀಶ್ ಧನ್ಯವಾದಗಳು ಹೀಗೆ ಬರುತ್ತಲಿರಿ.

ಜೀವನ ಒಂದು ಪಯಣ... said...

really good one...:)

ದಿನಕರ ಮೊಗೇರ said...

ಮನಸು ಮೇಡಮ್,
ಮರುಭೂಮಿಯಲ್ಲಿ ಕೆಲಸ ಮಾಡುವವರನ್ನು ಎಲ್ಲರೂ ಹಣಕ್ಕಾಗೆ ನೋಡುತ್ತಾರೆ..... ಅವರ ಮನಸ್ಸು, ವೇದನೆ ಕಾಣಿಸೋದೇ ಇಲ್ಲ.... ಇದು ನಿಜ ಕಥೆ ಎನಿಸತ್ತೆ.... ತುಂಬಾ ಇಶ್ಟ ಆಯ್ತು...

ಸುಧೇಶ್ ಶೆಟ್ಟಿ said...

ಅ೦ತ್ಯ ಇಷ್ಟ ಅಯಿತು... ಚ೦ದದ ಕತೆ ಮನಸು ಅವರೇ....

ಮನಸು said...

ಜೀವನ ಒಂದು ಪಯಣ..
ನಿಮ್ಮಗೆ ಸ್ವಾಗತ....ಕಥೆ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.... ಹೀಗೆ ಬರುತ್ತಲಿರಿ

ಮನಸು said...

ದಿನಕರ್ ಸರ್,
ನಿಜವಾಗಿಯೂ ಇದಕ್ಕಿಂತ ತುಂಬಾ ಕಷ್ಟದಲ್ಲಿ ಇರೋರು ಇದ್ದಾರೆ... ಹಣ ಜೀವನವನ್ನ ಸೃಷ್ಟಿಸುತ್ತೆ ಎಂದು ನಂಬಿ ಬಂದವರಿಗೆ ಸಂಬಂಧಗಳಿಗೆ ಕಡಿವಾಣವಾಕುತ್ತೆ... ಧನ್ಯವಾದಗಳು

ಸುಧೇಶ್
ಧನ್ಯವಾದಗಳು ಸುಧೇಶ್... ಎಲ್ಲೂ ಪ್ರೀತಿ ಸಿಕ್ಕದಾಗ ಸಿಗೋ ಪ್ರೀತಿನಾ ಬಿಡೋದಿಲ್ಲ ಅಲ್ಲವೇ

Suresh said...

ನಿಜಸ್ಥಿತಿಯ ನೈಜ ಚಿತ್ರಣ... ಗಲ್ಫ್... ದೂರದ ಬೆಟ್ಟ ನುಣ್ಣಗೆ... ಬಳಿ ಸಾರಿದರಾಯ್ತು... ಬಿಟ್ಟು ಹೋಗದಿರಲು ಹಲವಾರು ಕಾರಣಗಳು... ಯಾರ ಕೇಳಿದರೂ ಇನ್ನು ಒಂದೆರಡು ವರ್ಷ... ನಂತರ ಮರಳಿ ನಮ್ಮೂರ ಮಣ್ಣಿಗೆ ಎನ್ನುತ್ತಾರೆ/ಎನ್ನುತ್ತೇವೆ... ಹೀಗೆ ಹೇಳಿ ಕೊಂಡೇ ಎಷ್ಟೋ ವರ್ಷಗಳ ನಂತರ ಬೇಕಾದಷ್ಟು ಜನ ಗಲ್ಫ್ ನಲ್ಲೇ ಮಣ್ಣಾಗಿದ್ದಾರೆ!

Suresh said...

ನಿಜಸ್ಥಿತಿಯ ನೈಜ ಚಿತ್ರಣ... ಗಲ್ಫ್... ದೂರದ ಬೆಟ್ಟ ನುಣ್ಣಗೆ... ಬಳಿ ಸಾರಿದರಾಯ್ತು... ಬಿಟ್ಟು ಹೋಗದಿರಲು ಹಲವಾರು ಕಾರಣಗಳು... ಯಾರ ಕೇಳಿದರೂ ಇನ್ನು ಒಂದೆರಡು ವರ್ಷ... ನಂತರ ಮರಳಿ ನಮ್ಮೂರ ಮಣ್ಣಿಗೆ ಎನ್ನುತ್ತಾರೆ/ಎನ್ನುತ್ತೇವೆ... ಹೀಗೆ ಹೇಳಿ ಕೊಂಡೇ ಎಷ್ಟೋ ವರ್ಷಗಳ ನಂತರ ಬೇಕಾದಷ್ಟು ಜನ ಗಲ್ಫ್ ನಲ್ಲೇ ಮಣ್ಣಾಗಿದ್ದಾರೆ!