Thursday, April 21, 2011

-ಒಲವ ಸಿರಿ-

ನಲ್ಲ, ಸುಂದರ ಸಂಜೆಯಲಿ
ಪ್ರೇಮದ ಜಗುಲಿಯಲಿ
ಸಂಜೆ ಹಸಿರ ಉಸಿರೊಡನೆ
ನಿನ್ನುಸಿರು ಎನ್ನೆದೆಯ ತಾಗಿ
ಮೌನದೊಡವೆಯ ಬಿಚ್ಚಿಡಬೇಕೆನಿಸಿತು.......

ನಲ್ಲ, ಎಷ್ಟೋ ದಿನಗಳ ಹರಕೆ
ಪೂರೈಸಿದ ನನ್ನೆಲ್ಲ ಬಯಕೆ
ಏಕಾಂತದ ಜೊತೆಯಲಿ
ಬೆಟ್ಟದಡವಿಯ ನೋಡುತ
ರೆಕ್ಕೆಪುಕ್ಕಗಳ ಬಿಚ್ಚಿಡಬೇಕೆನಿಸಿದೆ.....

ವಾಹನಗಳ ಗದ್ದಲದಲಿ
ಏಕಾಂತದ ಕೊರೆತೆಯಲಿ
ತಂಗಾಳಿಯ ಹಿತವಿಲ್ಲದೆ
ಪ್ರೇಮದ ಹನಿಗೂ ಮಂಕು ಕವಿದಿತ್ತು
ಇಂದು ಪ್ರಕೃತಿಯ ಎದುರು ಬಿಚ್ಚಿಡಬೇಕೆನಿಸಿದೆ......

ನಿಶಬ್ಧದ ಬರಧಿ
ಮಾತಿನ ಶರಧಿ....
ಪ್ರೇಮದಬ್ಬರದಿ
ನನ್ನೆದೆಗೆ ಅಪ್ಪಳಿಸಿ ಬರುತಿದೆ...
ನಲ್ಲ,ನನ್ನೊಲವ ಸ್ವೀಕರಿಸಿ
ಮೆಲ್ಲುಸಿರ ಧನಿಯವಳ ಆಲಿಂಗಿಸು........


"ದಿಗ್ವಾಸ್ ಅವರು ಕೊಟ್ಟ ಚಿತ್ರಕ್ಕೆ ನನ್ನ ಕಿರು ಸಾಲುಗಳು..."

15 comments:

Rakesh S Joshi said...

ಚೆನ್ನಾಗಿದೆ.. ಇದೆ ಚಿತ್ರಕ್ಕೆ http://goo.gl/fkfs3 ಇಲ್ಲಿ ಇನ್ನೊಂದಿಷ್ಟು ಸಾಲುಗಳಿವೆ..:)

Anonymous said...

Sugu, Nice one!! keep writing

Kavya

ಶಿವಪ್ರಕಾಶ್ said...

channagide akkayya :)

sunaath said...

ಮೃದುಮನಸು,
ಒಲವಿನ ಜೀವಿಗಳಿಗೆ ಆಪ್ಯಾಯಮಾನವಾದ ಕವನ.

ಮನಸು said...

ರಾಜೇಶ್
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ... ಸ್ವಾಗತ ನನ್ನ ಬ್ಲಾಗಿಗೆ

ಕಾವ್ಯ
ಥ್ಯಾಂಕ್ಸ್ ... ಬರಿತಾ ಇರ್ತೀನಿ...

ಮನಸು said...

ಶಿವು
ಧನ್ಯವಾದಗಳು... ತಮ್ಮಯ್ಯ

ಸುನಾಥ್ ಕಾಕ,
ಒಲವೇ ಜೀವನ ಅಲ್ಲವೇ..ಕಾಕ ಥ್ಯಾಂಕ್ಯೂ ನಿಮ್ಮ ಮೆಚ್ಚುಗೆಗೆ

ಮನಸು said...

thank you sir...

Pradeep Rao said...

ಸಂಜು ಮತ್ತು ಗೀತಾ
ನೋಡುತ್ತಾ ಕುಳಿತಿಹರು ದಿಗಂತ
ಹಿಂದೆ ಏನಾಗುತ್ತಿದೆಯೆಂಬುದರ ಅರಿವಿಲ್ಲ
ಮುಂದಿರುವ ಪಾತಾಳದ ಆಳಕೆ ಇಳಿಯುತಿರಲು
ಜೀವನದ ದಾರಿ, ಅಕ್ಕಪಕ್ಕ ಯಾವುದೇ ತಿರುವಿಲ್ಲ
ದಿಕ್ಕೆಟ್ಟು ಕುಳಿತಿರಲು ಇಬ್ಬರೂ ಯೋಚನೆಯಲಿ..
ಕರಾಳ ಕತ್ತಲೆಯು ಮುಚ್ಚುತಿದೆ ಇವರ ಬಾಳನೆಲ್ಲಾ!

ದಿಗ್ವಾಸ್ ಸರ್.. ಈ ಜೋಡಿ ಹಕ್ಕಿಗಳನ್ನೂ ನಿಮ್ಮ ಕ್ಯಾಮೆರಾ ಸೆರೆ ಹಿಡಿಯದೇ ಬಿಡಲಿಲ್ಲವಲ್ಲಾ!! nice one!! :)

Ashwini Dasare said...

just awesome!!!

Chetana said...

tumba sundara saalugalu suguna..:)

ಮನಸಿನಮನೆಯವನು said...

Nimma saalugalalli siriye tumbide..

ಸುಧೇಶ್ ಶೆಟ್ಟಿ said...

chennagidhe manasu avare...

Vidya said...

tumba chennagide......modalane stanza tumba ishtavaayitu....:)

ಮನಸು said...

thank you

Kirti said...

ಚೆನ್ನಾಗಿದೆ... superb lines