Sunday, October 9, 2011

-ಶೂನ್ಯ- (೦)

ಮದುವೆಯಾಗಿ ಇಲ್ಲಿಗೆ ಆಗಲೇ ೨೦ ವರ್ಷಗಳು ತುಂಬಿದೆ, ತವರನ್ನು ಮುಕ್ಕಾಲು ಮರೆತಾಯ್ತು, ಗಂಡನ ಮನೆಯೇ ಎಲ್ಲಾ. ಬೇಕು ಬೇಡಗಳ ತೀರಿಸುವುದೆಲ್ಲವೂ ಇಲ್ಲಿಯೇ, ನಾನು ಪೂರ್ಣ ಗಂಡ ಮತ್ತು ಈ ಮನೆಯವಳಾಗಿ ಬಿಟ್ಟಿದ್ದೇನೆ. ಅಂದು ಬಂದಾಗ ಎಲ್ಲವೂ ಹೊಸದಾಗಿತ್ತು, ತವರಿನ ಸಿರಿಯೇ ಕಣ್ಣ ಮುಂದಿತ್ತು... ಆದರೆ ಈಗ ಈ ಮನೆಯ ಸಿರಿಯ ಮುಂದೆ ತವರಿನ ಸಿರಿ ಮಾಸಿಹೋಗಿದೆ......

ಎಲ್ಲವೂ ಚೆನ್ನಾಗಿತ್ತು ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ನನ್ನದೆಂಬ ಆಸ್ತಿ ಸಂಪಾದಿಸಲೇ ಇಲ್ಲ, ಗಂಡನ ಜೊತೆಗೆ ಅತ್ತೆ ಮಾವ ಮೈದುನಂದಿರು, ನಾದಿನಿಯರು, ತಂಗಿಯರು ಎಲ್ಲರ ಪ್ರೀತಿ ಸಂಪಾದಿಸಿದೆ, ಆದರೆ ಇಲ್ಲಿ ನನ್ನದೇ ಇದು ಎಂದು ಹಕ್ಕು ಚಲಾಯಿಸುವುದಾಗಲಿ, ಪ್ರೀತಿಯಿಂದ ಜೋರುಮಾಡುವುದಕ್ಕಾಗಲಿ ಆಗುತ್ತಿಲ್ಲವಲ್ಲ.... ಅದೇನು ಕೊರತೆಯೋ ಏನೋ ನಾನು ನನ್ನ ಕರುಳ ಕುಡಿ ಕೊಟ್ಟು ಕತ್ತರಿಸಿಕೊಳ್ಳುವಂತಹ ಯಾವುದೇ ಸಂದರ್ಭ ಬರಲೇ ಇಲ್ಲ....

ನಾನು ಸುಮಾರು ೨೦ ವರ್ಷಗಳೇ ಕಾದು ಬಿಟ್ಟೆ... ಅನಾಥ ಮಗುವಿಗಾದರೂ ಆಸರೆ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೋ ಏನೋ ಅದು ಸಹ ನಾನು ಮಾಡಲೇ ಇಲ್ಲ......... ಈಗ ಯಾಕೋ ಎಲ್ಲವೂ ನನ್ನನ್ನು ತುಂಬಾ ಕಾಡುತ್ತಲಿದೆ ಕಾರಣ ನನ್ನವನ ಇಲ್ಲದಿರುವಿಕೆ..!!!

ಪ್ರತಿ ಮನುಷ್ಯನಿಗೂ ಹೃದಯ ಇರಲೇಬೇಕು... ಪ್ರೀತಿಸೋಕೆ, ಮೆಚ್ಚಿ ಮಾತನಾಡೋಕೆ, ಉಸಿರು ಗಟ್ಟಿಯಾಗಿ ನಿಲ್ಲೋಕೆ, ರಕ್ತ ಹರಿದಾಡೋಕೆ ಎಲ್ಲಕ್ಕೂ ಬೇಕಾದದ್ದು ಹೃದಯ.. ಹಾ!! ಹೃದಯ ಇದೆ ನನ್ನಲ್ಲೂ, ಆದರೆ ಅದು ನಿಶಬ್ಧವಾಗಿದೆ ಏಕೋ ಏನೋ ಕೆಲಸನೇ ಮಾಡ್ತಾ ಇಲ್ಲ ಅನ್ನಿಸ್ತಾ ಇದೆ ಯಾಕೆ ಗೊತ್ತ... ಇತ್ತೀಚೆಗಷ್ಟೆ ನನ್ನವನೇ ಎಂದುಕೊಂಡಿದ್ದ ನನ್ನ ಹೃದಯ ಕಾಣದ ಊರಿಗೆ ತೆರಳಿಬಿಟ್ಟಿದೆ... ಹೃದಯ ಇಷ್ಟೆಲ್ಲಾ ಕಷ್ಟ ಕೊಡುತ್ತೆ ಅಂತ ಗೊತ್ತೇ ಇರಲಿಲ್ಲ... ನನಗೆ ನನ್ನವರು ಎಂಬುವರೇ ಇಲ್ಲದಾಗಿದೆ.

ಇನ್ನು ಪ್ರೀತ್ಸೋ ಗಂಡ ಇರುವಾಗ ಮಕ್ಕಳ ಹಂಗೇಕೆ ಎಂದು ೨೦ ವರ್ಷ ಕಾಲ ಹಾಕಿದೆ ಆದ್ರೆ ಇವತ್ತು ಏಕೋ ಅನಾಥ ಪ್ರಜ್ಞೆ ಕಾಡ್ತಾ ಇದೆ. ಪ್ರೀತ್ಸೋ ಗಂಡ ಇದ್ದಿದ್ದ್ರೆ ಈ ಯೋಚನೆ ಖಂಡಿತಾ ಬರ್ತಾ ಇರಲಿಲ್ಲ... ಆ ಹೃದಯ ಅವರಿಗೆ ಕೈಕೊಡ್ತು ಈಗ ನನ್ನ ಅನಾಥಳನ್ನಾಗಿ ಮಾಡ್ತು...

ತವರು ಮನೆಗೆ ವಾಪಸ್ಸ್ ಹೋಗೋಣ ಎಂದರೆ ಅಲ್ಲಿ ನಾನ್ನಿದ್ದಾಗ ಇದ್ದಂತ ಮನೆಯಂತಿಲ್ಲ ಎಲ್ಲವೂ ಬದಲಾಗಿದೆ. ಅಮ್ಮ ಅಪ್ಪ ತಮ್ಮ ಸ್ವಂತಿಕೆನ ಕಳೆದುಕೊಂಡಿದ್ದಾರೆ. ಅವರೇ ಸಂಪಾದಿಸಿದ ಕೋಟಿಗಟ್ಟಲೆ ಆಸ್ತಿಯಲ್ಲಿ ಮಜ ಮಾಡುವುದಕ್ಕೂ ಹಿಂದೂಮುಂದು ನೋಡ್ತಾ ಇದ್ದಾರೆ, ಕಾರಣ ಅಣ್ಣಂದಿರ ದರ್ಬಾರು ಅತ್ತಿಗೆಯರ ವ್ಯವಹಾರ, ನಮ್ಮವರೇ ಅಪರಿಚತರಂತೆ ಕಾಣ್ತಾ ಇದಾರೆ. ನಾನು ಇನ್ನು ಹೋಗಿ ಆ ಮನೆಯಲ್ಲಿ ಹೇಗೆ ಜೀವಿಸೋಕೆ ಆಗುತ್ತೆ.... ಇನ್ನು ೨೦ ವರ್ಷ ದೂಡಿದ ಗಂಡನ ಮನೆಯಲ್ಲಿ ಇರಬೇಕು. ಇವರೆಲ್ಲ ನನ್ನವರೇ ಆದರೆ ನನ್ನವನು ಇಲ್ಲದ ಮೇಲೆ ನನ್ನವರೆಲ್ಲ ಪರಕೀಯರೆಂಬ ಭಾವನೆ ಮೂಡ್ತಾ ಇದೆ. ಅತ್ತೆ ಮಾವನಿಗೆ ಕೊನೆಗಾಲದಲ್ಲಿ ಆಸರೆಯಾಗುವ ಆಸೆ ಇದೆ, ಆದರೆ ನನ್ನ ಮುಖ ನೋಡಿ ಅವರ ಮಗ ಇಲ್ಲವೇ ಎಂಬ ಕೊರಗು ದಿನವೂ ಅವರಿಗೆಲ್ಲ ಕಾಡದೆ ಇರುತ್ತಾ....

"ಗಂಡನನ್ನು ಕಳೆದುಕೊಂಡ ನಾನು ಅತ್ತೆಮಾವರಿಗೆ ಇತ್ತ ಮಗಳೂ ಆಗಲಾರೆ ಸೊಸೆಯೂ ಆಗಲಾರೇನೋ... ಎಂದೆನಿಸಿದೆ..."

ಮನೆಯಲ್ಲಿ ಮನೆಯೊಡಯನು ಇರಬೇಕು... ಕುಂಟನೋ ಕುರುಡನೋ ಏನಾಗಿದ್ದರೂ ಪರವಾಗಿ ಮನೆಯ ಮೂಲೆಯಲ್ಲಿ ಕುಳಿತಿದ್ದರೆ ಸಾಕಿತ್ತು.... ನನಗೂ ಧೈರ್ಯವಿತ್ತು, ೪೦ ದಾಟಿದ ವಯಸ್ಸು, ಆಸರೆಯೇ ಇಲ್ಲದ ಮನಸ್ಸು , ಸ್ವಂತಂತ್ರ ನಿರ್ಧಾರಗಳು ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟ, ಗಂಡನಿದ್ದರೆ ನನಗೆ ಅವನು ಅವನಿಗೆ ನಾನು ಎಂದು ಇದ್ದುಬಿಡುತ್ತಿದ್ದೆವು.... ಇನ್ನೂ ನಾನು ಸುಮಾರು ೨೦ ವರ್ಷಗಳಷ್ಟೇನಾದರೂ ಬದುಕಿದ್ದರೆ ಅಥವಾ ನನ್ನ ಕೈಕಾಲಾಡದಂತ ಕಾಲದಲ್ಲಿ ಯಾರ ಆಸರೆ ಬಯಸಲಿ, ಅಮ್ಮ ಅನ್ನೋ ಸ್ವರವಿಲ್ಲ, ಪ್ರೀತಿಯಿಂದ ಅಮ್ಮಿ ಎಂದು ಕರೆಯೋ ಗಂಡನಿಲ್ಲ....... "ಬದುಕೇ ಶೂನ್ಯ"ವಾಗಿದೆ ಮುಂದೇನು ಗತಿ...ಎಂಬ ಭಯ ಕಾಡ್ತಾ ಇದೆ...????
ಮಗನೋ, ಮಗಳೊ ಇದ್ದಿದ್ದರೆ ಸ್ವಲ್ಪವಾದರೂ ಮರೆಯುತ್ತಲಿದ್ದೆನೋ ಏನೋ.... ಮುಂದಿನ ಜೀವನದ ಭಯವನ್ನಾದರೂ ಆ ಕೂಸು ಮರೆಮಾಚಿಸುತ್ತಿತ್ತೇನೋ ಗೊತ್ತಿಲ್ಲ... ಎಲ್ಲರೂ ಹೇಳಿದಂತೆ ಮಕ್ಕಳು ಬೆಳದ ಮೇಲೆ ಕೈಗೆ ಸಿಗುವುದಿಲ್ಲ ಅಂತಾರೆ... ಆದರೆ ಕೈಗೆ ಸಿಗದಿದ್ದರೂ ಎಲ್ಲೋ ನನ್ನವರು ಅನ್ನೋರು ಇದ್ದಾರೆ ಸತ್ತಾಗ ಮಣ್ಣಾಕುವ ಜೀವವೊಂದಿದೆ ಎಂದೆನಿಸುತ್ತೆ..!!! ಆದರೆ ಈಗ ಇದಾವುದೂ ನನಗಿಲ್ಲ.. ಯಾವ ಭಾಗ್ಯವೂ ನನಗಿಲ್ಲವೇ ಹೇ!! ದೇವರೆ... ಮುಂದಿನ ಶೂನ್ಯ ಬದುಕು ದೂಡುವುದು ಹೇಗೆ...???????? ಎಲ್ಲವೂ ಪ್ರಶ್ನಾರ್ಥಕ..??? ಕಂಬನಿಯೇ ನನ್ನ ಸಮಾದಾನಕ್ಕೆ ನಿಂತಿದೆ ಬೇರಾವ ಸಾಂತ್ವಾನ ನನ್ನೊಳಗಿಲ್ಲದಾಗಿದೆ..

ನನ್ನವನ ಜೊತೆ ನಾನು ಹೋಗುವ ಹಾಗೆ ಆ ದೇವರು ಕರುಣಿಸಿದ್ದರೆ ಎಲ್ಲವೂ ಚೆನ್ನಾಗಿತ್ತು...ಈಗ ನನ್ನಲ್ಲಿ "ಸಾಯುವ ಧೈರ್ಯ" ಕೂಡಾ ಇಲ್ಲ...

ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆಯ
ಶೂನ್ಯ ಸಿಂಹಾಸನದ
ನನ್ನ ಬದುಕು ಜೋತಾಡುತಿದೆ.....
-----
ಚಿತ್ರಗಳು: ಅಂತರ್ಜಾಲ

25 comments:

ಜಲನಯನ said...

ನನಗೂ ಬಹಳ ಬೇಸರ ಆಗ್ತಿದೆ...ಕಥೆ ಓದಿ...ಶೂನ್ಯ ಸಿಂಹಾಸನದ ಮೇಲೆ ಕೂರೋದು ಅಸಾಧ್ಯ...ಬೀಳೋ ಸಾಧ್ಯತೆಗಳು ಹೆಚ್ಚು... ಚನ್ನಾಗಿದೆ ಕಥೆಯ ದಿಕ್ಕು ಮತ್ತು ಹಲವರಿಗೆ ಕಾಡುವ ವಾಸ್ತವತೆಯ ಮುಳ್ಳುಗಳ ಜೀವನ ಹಾಸು...

Pradeep Rao said...

saalugalu tumba bhavanatmakavaagive.. chennaagide

sunaath said...

ವಾಸ್ತವ ಬದುಕನ್ನು ಆಧರಿಸಿದ ಕಥೆಯನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ.

Badarinath Palavalli said...

ಮಕ್ಕಳೇ ಬೇಡ, ಅವರು ಎದೆ ಎತ್ತರ ಬೆಳೆದ ಮೇಲೆ ನಮ್ಮ ಎದೆ ಹಿಂಡೋದು ಬೇಡ. ಹೀಗೆ ನಿರ್ಧರಿಸಿ ನಾನೂ ನನ್ನ ಹೆಂಡ್ತಿ 14 ವರ್ಷಗಳೇ ಕಳೆದು ಬಿಟ್ವೀ! ಆದರೆ, ನಿಮ್ಮ ಈ ಮನ ಮುಟ್ಟೋ ಕಥಾನಕ ಓದಿದ ಮೇಲೆ. ನಮ್ಮ ಕರಾಳ ಭವಿಷ್ಯದ ಭಯ ಕಾಡುತ್ತಿದೆ.

ಉಪ ಸಂಹಾರದ ಪುಟ್ಟ ಕವನ ಇನ್ನಷ್ಟು ಕಾಡಿ ಹಾಕಿತು!

ಸಾಧ್ಯವಾದರೇ ನನ್ನ ಬ್ಲಾಗಿನ 'ಸಂಧ್ಯಾರಾಗ' ಮತ್ತು 'ಅವರಿಬ್ಬರೇ' ಕವನಗಳು ಓದಿ, ಕಮೆಂಟಿಸಿ:
www.badari-poems.blogspot.com

Badarinath Palavalli said...

ಮಕ್ಕಳೇ ಬೇಡ, ಅವರು ಎದೆ ಎತ್ತರ ಬೆಳೆದ ಮೇಲೆ ನಮ್ಮ ಎದೆ ಹಿಂಡೋದು ಬೇಡ. ಹೀಗೆ ನಿರ್ಧರಿಸಿ ನಾನೂ ನನ್ನ ಹೆಂಡ್ತಿ 14 ವರ್ಷಗಳೇ ಕಳೆದು ಬಿಟ್ವೀ! ಆದರೆ, ನಿಮ್ಮ ಈ ಮನ ಮುಟ್ಟೋ ಕಥಾನಕ ಓದಿದ ಮೇಲೆ. ನಮ್ಮ ಕರಾಳ ಭವಿಷ್ಯದ ಭಯ ಕಾಡುತ್ತಿದೆ.

ಉಪ ಸಂಹಾರದ ಪುಟ್ಟ ಕವನ ಇನ್ನಷ್ಟು ಕಾಡಿ ಹಾಕಿತು!

ಸಾಧ್ಯವಾದರೇ ನನ್ನ ಬ್ಲಾಗಿನ 'ಸಂಧ್ಯಾರಾಗ' ಮತ್ತು 'ಅವರಿಬ್ಬರೇ' ಕವನಗಳು ಓದಿ, ಕಮೆಂಟಿಸಿ:
www.badari-poems.blogspot.com

Badarinath Palavalli said...

ಮಕ್ಕಳೇ ಬೇಡ, ಅವರು ಎದೆ ಎತ್ತರ ಬೆಳೆದ ಮೇಲೆ ನಮ್ಮ ಎದೆ ಹಿಂಡೋದು ಬೇಡ. ಹೀಗೆ ನಿರ್ಧರಿಸಿ ನಾನೂ ನನ್ನ ಹೆಂಡ್ತಿ 14 ವರ್ಷಗಳೇ ಕಳೆದು ಬಿಟ್ವೀ! ಆದರೆ, ನಿಮ್ಮ ಈ ಮನ ಮುಟ್ಟೋ ಕಥಾನಕ ಓದಿದ ಮೇಲೆ. ನಮ್ಮ ಕರಾಳ ಭವಿಷ್ಯದ ಭಯ ಕಾಡುತ್ತಿದೆ.

ಉಪ ಸಂಹಾರದ ಪುಟ್ಟ ಕವನ ಇನ್ನಷ್ಟು ಕಾಡಿ ಹಾಕಿತು!

ಸಾಧ್ಯವಾದರೇ ನನ್ನ ಬ್ಲಾಗಿನ 'ಸಂಧ್ಯಾರಾಗ' ಮತ್ತು 'ಅವರಿಬ್ಬರೇ' ಕವನಗಳು ಓದಿ, ಕಮೆಂಟಿಸಿ:
www.badari-poems.blogspot.com

ಸೀತಾರಾಮ. ಕೆ. / SITARAM.K said...

ನಿಜಕ್ಕೂ ಸಂದಿಗ್ದದ ಕ್ಷಣಗಳಲ್ಲಿ ವಾಸ್ತವದ ಕಲ್ಪನೆ ಮಾಡಿಸಿದ್ದಿರಾ... ಚೆಂದದ ಕಥೆ ...
ಅನಾಥ ಮಕ್ಕಳನ್ನು ಸಾಕಬಹುದಿತ್ತು ಎಂಬ ಕಥಾನಾಯಕಿಯ ಕೊರಗು.... ಆದರೆ ಅದನ್ನು ಬಿಟ್ಟು ಇನ್ನು ಹತ್ತು ಹಲವು ಮಾರ್ಗೋಪಾಯಗಳು ಇವೆ... ಸಹೃದಯ ಬ್ಲಾಗಿಗರ ಲೇಖನದಲ್ಲಿ ಇದಕ್ಕೆ ಪೂರಕವಾಗಿ ಇನ್ನಷ್ಟು ಕಥೆ ಬರಲಿ.

ಮನಸು said...

ಅಜಾದ್ ಸರ್,
ಹೆಣ್ಣಿಗೆ ಗಂಡ ಇಲ್ಲದಿದ್ದರೆ ಎಷ್ಟೋ ತೊಂದರೆಗಳು ಬರುತ್ತವೆ... ಆದರೆ ಹೇಳಿಕೊಳ್ಳಲು ಆಗೋದಿಲ್ಲ... ಕಷ್ಟನೋ ಸುಖನೋ ಗಂಡ ಎಂಬುವವನೂಬ್ಬನಿದ್ದರೆ ಚೆನ್ನ... ಈ ರೀತಿಯ ಬದುಕು ಬಹಳಷ್ಟು ಜನ ಅನುಭವಿಸ್ತಾ ಇದ್ದಾರೆ.

ಮನಸು said...

ಅಜಾದ್ ಸರ್,
ಹೆಣ್ಣಿಗೆ ಗಂಡ ಇಲ್ಲದಿದ್ದರೆ ಎಷ್ಟೋ ತೊಂದರೆಗಳು ಬರುತ್ತವೆ... ಆದರೆ ಹೇಳಿಕೊಳ್ಳಲು ಆಗೋದಿಲ್ಲ... ಕಷ್ಟನೋ ಸುಖನೋ ಗಂಡ ಎಂಬುವವನೂಬ್ಬನಿದ್ದರೆ ಚೆನ್ನ... ಈ ರೀತಿಯ ಬದುಕು ಬಹಳಷ್ಟು ಜನ ಅನುಭವಿಸ್ತಾ ಇದ್ದಾರೆ.

ಮನಸು said...

ಅಜಾದ್ ಸರ್,
ಹೆಣ್ಣಿಗೆ ಗಂಡ ಇಲ್ಲದಿದ್ದರೆ ಎಷ್ಟೋ ತೊಂದರೆಗಳು ಬರುತ್ತವೆ... ಆದರೆ ಹೇಳಿಕೊಳ್ಳಲು ಆಗೋದಿಲ್ಲ... ಕಷ್ಟನೋ ಸುಖನೋ ಗಂಡ ಎಂಬುವವನೂಬ್ಬನಿದ್ದರೆ ಚೆನ್ನ... ಈ ರೀತಿಯ ಬದುಕು ಬಹಳಷ್ಟು ಜನ ಅನುಭವಿಸ್ತಾ ಇದ್ದಾರೆ.

ಮನಸು said...

ಪ್ರದೀಪ್ ಧನ್ಯವಾದಗಳು ಈ ಕಥೆ ನಮ್ಮ ನಿಮ್ಮೆಲ್ಲರ ಮುಂದೆಯೇ ನೆಡೆಯುತ್ತಿರುವ ಕಥೆ

ಸುನಾಥ್ ಕಾಕ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ... ಬದುಕು ಬರೆದಿಟ್ಟ ಕಥೆ ಅಲ್ಲವೇ ಕಾಕ..

ಮನಸು said...

ಬದರಿ ಸರ್,
ಎಲ್ಲರಿಗೂ ಇದೇ ರೀತಿಯ ಭಯ ಕಾಡುತ್ತೆ ಎಂದು ಹೇಳೋಕ್ಕೆ ಆಗೋಲ್ಲ... ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಅಭಿಪ್ರಾಯಗಳಿರುತ್ತವೆ ಅಲ್ಲವೇ... ಕ್ಷಮೆ ಇರಲಿ ನಿಮ್ಮ ಭಾವನೆಗಳಲ್ಲಿ ಭಯ ಮೂಡಿಸಿದ್ದಕ್ಕೆ....

ಮನಸು said...

ಸೀತಾರಾಮ್ ಸರ್,
ಧನ್ಯವಾದಗಳು ನೀವು ಮೆಚ್ಚಿದ್ದೀರಿ ನನ್ನ ಕಥಾ ಶೈಲಿ ಎಂದರೆ ನಾನು ಪಾಸಾದಂತೆಯೇ... ಏನೂ ಇಲ್ಲದಾಗ ಹುಲ್ಲು ಕಡ್ಡಿಯಾದರೂ ಆಸರೆಯಾಗುತ್ತೇನೋ ಎಂಬ ಭಾವನೆ ಎಲ್ಲರಲ್ಲೂ ಮೂಡೋದು ಸಹಜ ಅಲ್ಲವೇ ಸರ್...
ಖಂಡಿತಾ ಮಾರ್ಗಗಳು ಹಲವಾರು ಇವೆ ಅದು ಮನೆ ವಾತಾವರಣ, ಸಂದರ್ಭಗಳು ಎಲ್ಲದಕ್ಕೂ ಎಡೆಮಾಡಿ ಕೊಟ್ಟರೆ ಇಂತಹ ಹೆಣ್ಣಿನ ಜೀವನ ಸರಿಯೋಗ ಬಹುದು ಇಲ್ಲವಾದರೆ ಕೊನೆವರೆಗು ನೆನಪಿನ ಅಂಗಳದಲ್ಲಿ ಕಣ್ಣೀರ ತೊಟ್ಟಿ ತುಂಬಿ ತುಳುಕುತ್ತಲೇ ಇರುತ್ತೆ... ನೀವೇ ಪ್ರಯತ್ನಿಸಿ ಸರ್ ಕಥೆ ಬರೆಯೋಕ್ಕೆ

ಮನಸಿನಮನೆಯವನು said...

Seetaramaru helidante anaatha maguvannaadaru saakabahudittu..
Jigupse moodi 'kanasugala jote baduko badalu nenapugala jote saayode melu' enisuttade.

_Nan bloggu bannI.

ಮೌನರಾಗ said...

ಮನಸು...ಅದೆಷ್ಟು ಚಂದವಾಗಿ ನಿರೂಪಿಸಿದ್ದಿರಿ...ನಿಮ್ಮ ಕತೆಯು ಮನ ತಟ್ಟುತ್ತದೆ..
"ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆಯ
ಶೂನ್ಯ ಸಿಂಹಾಸನದ
ನನ್ನ ಬದುಕು ಜೋತಾಡುತಿದೆ....."

ತುಂಬಾ ಚೆನ್ನಾಗಿದೆ ಮನಸು...

ಸೀತಾರಾಮ. ಕೆ. / SITARAM.K said...

ಸುಗುಣಾರವರೇ..
ಕಥೆ ಸಿದ್ದವಾಗಿದೆ...
ನನ್ನ ಬ್ಲಾಗ್ ನಲ್ಲಿದೆ...
ಕೊಂಡಿ:http://nannachutukuhanigavanagalu.blogspot.com/2011/10/blog-post_11.html

ಮನಸು said...

ವಿಚಲಿತ,
ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ ... ಜೀವನದಲ್ಲಿ ನಾವಾಗಿ ನಾವೇ ಜಿಗುಪ್ಸೆಗಳನ್ನ ತಂದುಕೊಳ್ಳುತ್ತೇವೆ... ಸುಖವಾಗಿ ಬಾಳಲು ಹಲವಾರು ಮಾರ್ಗಗಳಿವೆ ಮೊದಲು ಅದನ್ನ ಹುಡುಕಬೇಕಷ್ಟೆ

ಮನಸು said...

ಮೌನರಾಗ,
ಧನ್ಯವಾದಗಳು, ಇಂತಹವು ಹಲವಾರು ಘಟನೆಗಳನ್ನು ನೋಡಿ ಕೇಳಿದಾಗ ಮನಸಿನಲ್ಲಿ ತೊಳಲಾಟವಿದ್ದೇ ಇರುತ್ತೆ.. ನಮಗೆ ಇಷ್ಟು ಬೇಸರವಾದರೆ ಇಂತಹ ಪರಿಸ್ಥಿತಿಯಲ್ಲಿರುವವರು ಹೇಗಿರುತ್ತಾರೆ ಎಂಬುದಕ್ಕೆ ಈ ಕಥೆ ಬರೆದೆ...

ಮನಸು said...

ಸೀತಾರಾಮ್ ಸರ್,
ಧನ್ಯವಾದಗಳು ಈ ಕಥೆ ಬರೆದಿದ್ದಕ್ಕೆ.... ನಿಜವಾಗಿಯೂ ಹೆಣ್ಣು ಒಂಟಿಯಾಗಿದ್ದರೂ ಏನನ್ನಾದರೂ ಸಾಧಿಸಬಹುದು ಆದರೆ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು ಜೀವನ ನೆಡೆಸಬೇಕು ಎಂಬಂತೆ ಕಥೆ ನಿರೂಪಿಸಿದ್ದೀರಿ... ಧನಾತ್ಮಕವಾಗಿ ಇದ್ದರೆ ಒಳಿತು... ಕಥೆ ತುಂಬಾ ಇಷ್ಟವಾಯಿತು.. ನಾನೂ ಸಹ ಮುಂದುವರೆಸಲು ಅರ್ಧ ಬರೆದಿದ್ದೇನೆ.. ಸಮಯಸಿಕ್ಕಾಗ ಮುಂದುವರಿಸುವೆ...

ಗಿರೀಶ್.ಎಸ್ said...

ಗಂಡನನ್ನು ಕಳೆದುಕೊಂಡ ಹೆಣ್ಣಿನ ಮನಸ್ಸಿನಲ್ಲಿ ಆಗುವ ತುಮುಲಗಳು,ಸಂಕಟಗಳು,ಈಡೇರದ ಆಸೆಗಳು,ಕನಸುಗಳು ಜೊತೆಗೆ ಭಾವುಕ ಮನಸ್ಥಿತಿ, ಹೆಣ್ಣಿನ ಚಂಚಲ ಮನಸ್ಸಿನ ಸುತ್ತ ಒಳಲಾಡುವ ನೋವುಗಳು... ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ...

Dr.D.T.Krishna Murthy. said...

ಮನಸು ಮೇಡಂ;ಮನ ಕಲಕುವ ಕತೆ.ನನ್ನ ದೂರದ ಸಂಬಂಧಿ ಯೊಬ್ಬರದೂ ಇದೇ ಕತೆ.ಆದರೆ ಆ ಹೆಂಗಸು ಒಬ್ಬೊಂಟಿಯಾಗಿ ಬದುಕನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ.ನೇಮಿಚಂದ್ರರ ಕತೆಗಳಲ್ಲಿ ಇಂತಹ ಧೈರ್ಯವಂತ ಹೆಂಗಸರ ಚಿತ್ರಣ ಸೊಗಸಾಗಿ ಮೂಡಿ ಬಂದಿವೆ.

ಓ ಮನಸೇ, ನೀನೇಕೆ ಹೀಗೆ...? said...

ಕಥೆ ನೈಜವಾಗಿ ಮೂಡಿಬಂದಿದೆ ಸುಗುಣ. ಚೆನ್ನಾಗಿದೆ.

Ittigecement said...

ಮನಸು...

ನನಗೆ ಪ್ರತಿಕ್ರಿಯೆ ಹಾಕಲು ಬಹಳ ಕಷ್ಟವಾಯಿತು...

ಇಂಥಹ ಕಷ್ಟ ಅನುಭವಿಸಿದ ಒಬ್ಬರು ನನಗೆ ಗೊತ್ತು.. ಹಾಗಾಗಿ..

ಅವರ ಮಾತುಗಳನ್ನು ನಿಮ್ಮ ಅಕ್ಷರಗಳಲ್ಲಿ ಕಂಡೆ..

ಇದು ಕಥೆಯಾಗಿಯೇ ಇರಲಿ...

ಸಾಗರದಾಚೆಯ ಇಂಚರ said...

tumba tadavaagi barta idini kshamisi,

kathe manassige eno besara tanditu,

baduku ashaadeepa dante irali emba haaraike nammadu allave?

sundara kathe

shivu.k said...

ಸುಗುಣಕ್ಕ
ವಾಸ್ತವ ಬದುಕಿನ ಕತೆಯನ್ನು ತುಂಭ ಚೆನ್ನಾಗಿ ಬರೆದಿದ್ದೀರಿ...