Thursday, December 22, 2011

ಅಶೃತರ್ಪಣ


ಮನೆಯೊಂದು ಭೂಪಟ
ಅಪ್ಪ-ಅಮ್ಮ ನಕ್ಷಾ ಸೂಚಕ
ಮಕ್ಕಳು ದಿಕ್ಕುಗಳ ಪಾಲಕ
ಗಂಡಿದ್ದರೆ ಅವ ಕುಲ ದೈವಿಕ

ಅಲ್ಲೊಂದು ಮನೆಯಿಹುದು
ನಕ್ಷೆ-ದಿಕ್ಕುಗಳ ಕಾರುಬಾರಿನಲ್ಲಿ
ಪ್ರಕೃತಿಯ ವೈಫಲ್ಯವೋ
ವಿಧಿಯ ಕೈಂಕರ್ಯವೋ
ಅಲೆಯೊಂದು ಅಪ್ಪಳಿಸಿತು...

ಭೂಪಟದ ನಕ್ಷೆ ಬದಲಿಸಿದೆ
ದಿಕ್ಕು ಹುಡುಕವ ಪ್ರಯತ್ನಕ್ಕೆ
ಬೆಂಕಿಯ ಕೊಳ್ಳಿಯಿಟ್ಟಾಗಿದೆ
ನಕ್ಷೆಯೇ ಇಲ್ಲದ ಜೀವನಕ್ಕೆ...

ಭೂಗೋಳ ಕೊಂಚ ವಾರೆಯಾಗಿ
ಇಂದಿಗೆ ಹನ್ನೊಂದು ದಿನವಾಗಿದೆ
ಬದುಕಿನ ದಿಕ್ಕಿಗೆ ಸಡ್ಡೆ ಹೊಡೆದವಗೆ 
ಅವರದು ತಿಥಿಯೆಂಬ ದಿಕ್ಸೂಚಿ
ನನ್ನದು ಅಶೃತರ್ಪಣದ ಕಣ್ಣ ಸೂಜಿ .... 

10 comments:

ಜಲನಯನ said...

ಮನದಾಳದ ಮಾತು, ಮನಸಿನ ಮ್ಲಾನ ಪುಟ್ಟ ಕಣ್ಣ ಹನಿ ಬಿಡದೆ ಹನಿವಂತೆ ತೊಟ್ಟಿಕ್ಕಿವೆ ನಿಮ್ಮ ಅಕ್ಷರ-ಪದ-ಸಾಲುಗಳ ಕವನದ ಮೂಲಕ. ಅಗಲಿದ ಆತ್ಮಕ್ಕೆ ಶಾಂತಿ ಮತ್ತು ಇನ್ನೂ ಅವನ ಗುಂಗಿನಲ್ಲಿ ಶೋಕದಲ್ಲಿ ಮುಳುಗಿರುವ ಜೀವಗಳಿಗೆ ದೇವರು ಸ್ಥೈರ್ಯಕೊಡಲಿ ಎಂದು ಪ್ರಾರ್ಥಿಸೋಣ...

sunaath said...

ಕಂಬನಿಯೇ ಕವನವಾಗಿ ಹೊರಚೆಲ್ಲಿದೆ. ನಿಮಗೆ ಸಮಾಧಾನ ಹೇಳಬಯಸುತ್ತೇನೆ.

Badarinath Palavalli said...

ಕಂಬನಿಯೇ ಇಲ್ಲಿ ಶಾಯಿ. ಮಡಗಟ್ಟಿದ ನೋವು ಕಾವ್ಯವಾಗಿದೆ. ತೀರಿ ಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಮನೆಯವರ ಬದುಕು ಹಸನಾಗಲಿ. ನಿಮಗೂ ತುಂಬು ಸಾಂತ್ವನ. :-(

prabhamani nagaraja said...

ಈ ದಿನದ ಪತ್ರಿಕೆಯಲ್ಲಿಯೂ ಅ೦ಥಹದೆ ಸುದ್ದಿ ಬ೦ದಿದೆ. ನಿಮ್ಮಲ್ಲಿನ ಕರುಣೆ ಕಣ್ಣೀರ ರುಉಪ ತಾಳಿ ಸು೦ದರ ಕವನವಾಗಿದೆ. ಅವರಿಗಾಗಿ ನಾವೇನು ಮಾಡಬಲ್ಲೆವು?

ಓ ಮನಸೇ, ನೀನೇಕೆ ಹೀಗೆ...? said...

ನಿಮ್ಮ ಕಣ್ಣೀರು ಕವನವಾಗಿ ಹರಿದಿದೆ ಸುಗುಣ. ಇನ್ನೂ ಬದುಕಿ ಬಾಳಬೇಕಾದ ಬಂಧು ದಿಢೀರ್ ಎಂದು ಈ ಜಗದಿಂದಲೇ ನಿರ್ಗಮಿಸಿಬಿಟ್ಟಾಗ ಆಗುವ ನೋವು ದು:ಖ ಭರಿಸುವುದು ತುಂಬಾ ಕಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹಾಗೂ ಅವರ ಮನೆಯವರು ಹಾಗೂ ಹತ್ತಿರದ ಬಂಧುಗಳಿಗೆ ದು:ಖ ಭರಿಸುವ ಶಕ್ತಿಯನ್ನು ಆ ಬಗವಂತ ದಯಪಾಲಿಸಲಿ ಎಂದು ಬೇಡುವೆ.

mshebbar said...

SIMPLY FINE

Ashok.V.Shetty, Kodlady said...

ಕಂಬನಿ ಕವನವಾಗಿ ಸುಂದರವಾಗಿ ಹರಿದಿಉ ಬಂದಿದೆ...ಮೃತರ ಆತ್ಮಕ್ಕೆ ಶಾಂತಿ ಸಿಗಲಿ....ಅವರ ಮನೆಯವರಿಗೆ ಈ ನೋವನ್ನು ತಡೆದು ಕೊಳ್ಳುವ ಶಕ್ತಿಯನ್ನು ಭಗವಂತ ಕೊಡಲಿ....

Ashok.V.Shetty, Kodlady said...

ಕಂಬನಿ ಕವನವಾಗಿ ಸುಂದರವಾಗಿ ಹರಿದಿಉ ಬಂದಿದೆ...ಮೃತರ ಆತ್ಮಕ್ಕೆ ಶಾಂತಿ ಸಿಗಲಿ....ಅವರ ಮನೆಯವರಿಗೆ ಈ ನೋವನ್ನು ತಡೆದು ಕೊಳ್ಳುವ ಶಕ್ತಿಯನ್ನು ಭಗವಂತ ಕೊಡಲಿ....

ಸೀತಾರಾಮ. ಕೆ. / SITARAM.K said...

chendada kavana

ಸೀತಾರಾಮ. ಕೆ. / SITARAM.K said...

chendada kavana