ಯಾರು..?
ರಾಜ್ಯ ಆಳುವ ದೊರೆಯೇ ಭ್ರಷ್ಟಾಚಾರದಲಿ ಮುಳುಗಿರುವಾಗ
ಸಾಮಾನ್ಯರ ತಪ್ಪುನೆಪ್ಪುಗಳ ಕೇಳುವವರು ಯಾರು.....?
ಸಿರಿವಂತಿಕೆಯಲಿ ಮೃಷ್ಟಾನ ಭೋಜನದಿ ದಿನವ ಕಳೆಯುವಾಗ
ದಿಕ್ಕುಗೆಟ್ಟು ಅನ್ನಕಾಗಿ ಅಲೆವ ಅಲೆಮಾರಿಯ ಕೇಳುವವರ್ಯಾರು..?
ಬೂದಿಮುಚ್ಚಿದ ಕೆಂಡದಲಿ ಜಾತಿ-ಮತಗಳು ಹೊರಳಾಡುವಾಗ
ಪ್ರಕೃತಿಯ ಜಾತಿ ತಿಳಿಯುವವರು ಯಾರು..?
ಕಡಲೇ ಎದ್ದು ಊರ ನುಂಗಿ ನೀರು ಕುಡಿಯುವಾಗ
ಪ್ರವಾಹದ ದಾಹ ನೀಗಿಸುವವರು ಯಾರು..?
ದಿನಕೆ ಸಾವಿರಾರು ಕೂಸುಗಳು ಹುಟ್ಟುತಿರುವಾಗ
ಎಲ್ಲೆ ಮೀರಿ ಬೆಳೆವ ಜನಸಂಖ್ಯೆಯ ತಡೆಯುವವರು ಯಾರು..?
ಎಲ್ಲಕೂ ಯಾರು ಯಾರು ಎಂದು ಕೇಳುವಾಗ
ಉತ್ತರ ಹುಡುಕಿ ಕೊಡುವವರು ಯಾರು...?
14 comments:
ಮೃದುಮನಸು,
ಈ ಯಕ್ಷಪ್ರಶ್ನೆಗಳಿಗೆ ಉತ್ತರ ಕೊಡಬಲ್ಲವರು ಯಾರು? ರಾಮರಾಜ್ಯದಲ್ಲಿ ಮಾತ್ರ ಈ ಸಮಸ್ಯೆಗಳು ಇರಲಾರವೇನೊ!
ಯಾರು ಯಾರು ನೀ ಯಾರು ಎಲ್ಲಿಂದ ಬಂದೆ ಯಾವೂರು?? ಅನ್ನೋ ಸಮಯ ಬರುತ್ತೆ ಜನತೆ ಎಚ್ಚೆತ್ಕೊಳ್ಳದೇ ಹೋದ್ರೆ...ಭ್ರಷ್ಟರು ಅಂತ ಒಂದು ಸರ್ಕಾರಾನ ಕಿತ್ತೆಸೆದು ಬೇರೆದನ್ನ ತಂದರೆ ಇದು ಭ್ರಷ್ಟ ಮಾತ್ರ ಅಲ್ಲ ಕೀಚಕ ಸಂತತಿ...
ಚನ್ನಾಗಿದೆ ಸುಗುಣ ಸಾಂದರ್ಭಿಕ.
ಮೇಡಂ;ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯದೆ ಪರಿಹಾರಗಳು ಸಿಗುವಂತಾಗಲಿ ಎನ್ನುವ ಹಾರೈಕೆ.ಬ್ಲಾಗಿಗೆ ಬನ್ನಿ.ನಮಸ್ಕಾರ.
ಹದಗೆಟ್ಟ ಕಲಿಗಾಲಕ್ಕೆ ಕೈಗನ್ನಡಿಯಂತಹ ಕವನವಿದು. ಭ್ರಷ್ಟ ವ್ಯವಸ್ಥೆ ತಿದ್ದಲಾದರೂ ಮತ್ತೊಮ್ಮೆ ಮಹಾತ್ಮನೊಬ್ಬ ಉದಿಸಬೇಕು.
ಯಾರು ಅನ್ನೋ ಪ್ರಶ್ನೆ, ಪ್ರಶ್ನೆ ಆಗಿಯೇ ಉಳಿದುಬಿಡುತ್ತೆ ಅನ್ಸುತ್ತೆ!
ಯಾರು..????????
ಯಾರು ಯಾರು ಅಂತ ಯೋಚಿಸುವ ಬದಲು ನಾವೇ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ದೇಶದ ಗತಿ ಗೋವಿಂದಾ ಗೋವಿಂದ!
ಅಲ್ವಾ ಅಕ್ಕಯ್ಯಾ?
ಸಕಾಲಿಕ ಮತ್ತು ಚಿಂತನೆಗೆ ಹಚ್ಚುವ ಕವನ...
ಚೆನ್ನಾಗಿದೆ...
ಚೆಂದದ ಪ್ರಶ್ನೆಗಳು... ಆದರೆ ಉತ್ತರ ಕೊಡುವವರು ಯಾರು?
Questins will continues.... but no answers..
ಉತ್ತರ ಕೊಡುವುದಕ್ಕೆ ಅರ್ಹವಾದ ಉತ್ತರವಿಲ್ಲದ ಪ್ರಶ್ನೆಗಳು..
ಯಾರು ???? ಉತ್ತರ ಹುಡುಕುವುದು ಕಷ್ಟ....ಆದರೂ ನಮ್ಮ ಪ್ರಯತ್ನ ನಾವು ಮಾಡುತ್ತಾ ಇರಬೇಕು....ಅಥವಾ 'ನಾನೇ ' ಅನ್ನೋ ಉತ್ತರದೊಂದಿಗೆ ಮುಂದುವರಿಯಬೇಕು....
ಧನ್ಯವಾದಗಳು ಎಲ್ಲರಿಗೂ, ಪ್ರಶ್ನೆಗೆ ಉತ್ತರ ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಕೊಂಡರೆ ಅದು ಸಾಧ್ಯವಾಗದ ಕೆಲಸ ನಾವು ಹೇಳಬಹುದು ಆದರೆ ಕಾರ್ಯಗತವಾಗುವುದು ಕಷ್ಟ... ಇಲ್ಲಿ ಎಲ್ಲರ ಕೈ ಒಂದಾಗ ಬೇಕು ಆಗ ಎಲ್ಲವೂ ನಿವಾರಣೆಯಾಗುತ್ತದೆ ಅಲ್ಲವೇ..?
ಸುಗುಣಕ್ಕ,
ನೀವು ಹೀಗೆ ಪದ್ಯದಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರೆ...ಉತ್ತರಕೊಡುವವರು ಓಡಿಹೋಗಿರುತ್ತಾರೆ[ರಾಜಕಾರಣಿಗಳು] ಅಲ್ವಾ...
Post a Comment