ಭಕ್ತಿ ಭಾವದ ಪೈರ ನೆಟ್ಟು
ಭವಂಗಳಲಿ ಪ್ರೀತಿಯೆಂಬ
ಬೀಜಾಂಕುರತೆ ಬೆಳೆಸಿ
ಲಿಂಗಭೇದಕೆ ಕೊನೆಯನಿಟ್ಟು
ದಯವೇ ಧರ್ಮದ ಮೂಲವೆಂತೆಂಬ ಮಂತ್ರವ ಭಿತ್ತಿ
ಅಕ್ಷಯ ಬೆಳಕನ್ನು ಬದುಕಿನುದ್ದಕೂ ನೀಡಿ
ಕೂಡಲ ಸಂಗನಲಿ ಐಕ್ಯಗೊಂಡಾತನ
ಜನ್ಮ ಜನ್ಮಾಂತರ ಕಳೆದರೂ
ವಚನಗಳ ನುಡಿಬೆಳಕು
ಮನುಕುಲವ ತಿದ್ದಿತೀಡಬೇಕಿದೆ.......
ಹೇ ಬಸವ...
ಗೋಮುಖವ್ಯಾಘ್ರಾದಿಗಳು
ಲೋಕವ ಹದೆಗೆಡಿಸುತಿವೆ
ಶತಮಾನಗಳೇ ಉರುಳಿದರೂ
ಬದಲಾಗುವ ಲಕ್ಷಣಗಳು ಕಾಣದು
ಪ್ರಕೃತಿಯೇ ಮುನಿದು ಬೀಳುವ ಮುನ್ನ
ನೀ ಮತ್ತೊಮ್ಮೆ ಹುಟ್ಟಿಬರಬೇಕಿದೆ ನೋಡೋ
ಹೇ ....!!ವಿಶ್ವಗುರು, ಜಗದ ಅಣ್ಣ.... ಬಸವಣ್ಣ.....
-----------------
ಮೌಢ್ಯದ ಮಡಿಲಿಗೆ ಕುಶಲತೆಯ ನೇಗಿಲು
ಹತ್ತಿಯ ಹುಂಡೆಗೆ ತುಪ್ಪದ ದೀವಿಗೆ
ದುಂಬಿಯ ಝೇಂಕಾರಕೆ ಜೇನಿನ ಹೊಳೆ
ವಿಜಾತಿಯ ಬಂಧನಕೆ ಪ್ರೇಮ ಸಂಬಂಧ
ಸಂಸ್ಕೃತಿ ಬೆಳಕಿಗೆ ರಾಜದರ್ಬಾರು
ಆಸೆಯ ಮಂತ್ರಕೆ ದೈವದ ಮೊರೆ
ಮೇಲು-ಕೀಳಿನ ಬದುಕಿಗೆ ಸಮಾನತೆಯ ಬೀಜಮಂತ್ರ
ಎಲ್ಲಕೂ ಜಗದ ಜ್ಯೋತಿಯಾದ ಅಣ್ಣ ಬಸವಣ್ಣ....
ಮೌಢ್ಯದ ಮಡಿಲಿಗೆ ಕುಶಲತೆಯ ನೇಗಿಲು
ಹತ್ತಿಯ ಹುಂಡೆಗೆ ತುಪ್ಪದ ದೀವಿಗೆ
ದುಂಬಿಯ ಝೇಂಕಾರಕೆ ಜೇನಿನ ಹೊಳೆ
ವಿಜಾತಿಯ ಬಂಧನಕೆ ಪ್ರೇಮ ಸಂಬಂಧ
ಸಂಸ್ಕೃತಿ ಬೆಳಕಿಗೆ ರಾಜದರ್ಬಾರು
ಆಸೆಯ ಮಂತ್ರಕೆ ದೈವದ ಮೊರೆ
ಮೇಲು-ಕೀಳಿನ ಬದುಕಿಗೆ ಸಮಾನತೆಯ ಬೀಜಮಂತ್ರ
ಎಲ್ಲಕೂ ಜಗದ ಜ್ಯೋತಿಯಾದ ಅಣ್ಣ ಬಸವಣ್ಣ....
----------
ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು...
ಆಚರಣೆ ಪೂಜೆ ನೈವೇದ್ಯಗಳಿಗೆ ಮೀಸಲಿಡದೆ ವಚನ ಸಾಹಿತ್ಯದ ಧ್ಯೇಯದ ಗುಟ್ಟನ್ನು ಅರಿತು ಬಾಳುವೆಡೆ ಮನಸು ಮಾಡೋಣ
2 comments:
ಮನಸು,
ನಿಮಗೂ ಸಹ ಬಸವಜಯಂತಿಯ ಶುಭಾಶಯಗಳು.
ಬಸವ ಜಯಂತಿಗೆ ಒಳ್ಳೆಯ ಬರಹವನ್ನೇ ಹಾಕಿದ್ದೀರಿ ಮೇಡಂ.
ವಚನ ಸಾಹಿತ್ಯವು ಎಲ್ಲ ಕಾಲಕ್ಕೂ ಸಲ್ಲುವ ಮತ್ತು ಸರ್ವರಿಗೂ ಅನ್ವಯಿಸುವ ಕಾವ್ಯ ಜ್ಞಾನ ಪ್ರಕಾರ.
ಬಸವಣ್ಣ ವ್ಯಕ್ತಿಯಾಗಿ, ಕವಿಯಾಗಿ ಮತ್ತು ಶಕ್ತಿಯಾಗಿ ಜಗದ್ಜೋತಿಯೇ.
Post a Comment