Tuesday, June 19, 2012

ಯಾಕೆ...ಹೀಗೆ..!??


ಯಾಕೆ ಮನುಷ್ಯ ಹೀಗೆ
ಮನಸು ಪೂರ ಕೆಡಕೇ
ಹಾಲಿನಂತ ಮನಸಿಗೆ 
ಹುಳಿ ಹಿಂಡುವುದು ಏತಕೆ...


ಇಂದು ಇರುವುದು
ನಾಳೆ ಕಳೆವುದು
ನಾವೇ ದುಡಿದ ಆ ಹಣ
ವ್ಯಯಿಸುವುದಕೆ ಬೆಲೆಯ ಕಟ್ಟುವುದು ಏತಕೆ...ಈ ಜನ. 


ಊರು ಊರು ಸುತ್ತಿ
ಕಷ್ಟ ನಷ್ಟ ಎಲ್ಲ ಜಯಿಸಿ
ಇರುವ ಎರಡು ದಿನದ ಬದುಕಲಿ
ಮನಸಿಗೆ ಕಸಿವಿಸಿ ಕೊಡುವುದು ಏತಕೆ...ಈ ಜನ 


ಹೋದ ನೆನ್ನೆಗೂ 
ಬರುವ ನಾಳೆಗೂ
ಇಂದು ಹೋಲಿಕೆ ಏತಕೆ
ಇದ್ದಲ್ಲೇ ಇರುವ ಮನಸಿಗೆ 
ಒತ್ತಡದ ಬಿಸಿಯೇಕೆ ನೀಡುವರು...ಈ ಜನ.


ಅರ್ಥವಿರುವ ಜೀವನಕೆ
ವ್ಯರ್ಥ ಕಾಲಹರಣ 
ಕೊಳಕ ತುಂಬಿಸಿ
ಗಂಗೆಯ ಕದಡಿದಂತೆ
ಶುದ್ಧ ಮನಸ ಹೊಲಸು ಮಾಡುವುದು ಏತಕೆ...ಈ ಜನ.

11 comments:

Unknown said...

ಮಸ್ತ್ ಆಗಿದೆ ಅಕ್ಕ :) ಹೀಗೆ ಮುಂದುವರೆಯಲಿ
ಯಾತನೆಯಲು ನಗುವ ಮನದ
ಮುದ್ದಾದ ಮಾತುಗಳು

ಸಂಧ್ಯಾ ಶ್ರೀಧರ್ ಭಟ್ said...

ಯಾಕೆ ಹೀಗೆ ?? ಗೊತ್ತಿಲ್ಲ ..
ಉತ್ತರ ಹುಡುಕುತ್ತ ಹೊರಟರೂ ಮತ್ತೆ ಮನಸ್ಸಿಗೆ ಕಸಿವಿಸಿಯೇ...
ಚಂದದ ಕವನ ಅಕ್ಕಯ್ಯ...

ಮನದಾಳದಿಂದ............ said...

ಅಕ್ಕಾ,
ಬಹುಶಃ ಇದು ಮನುಜನ ಸಹಜ ಗುಣ ಅನ್ನಿಸುತ್ತದೆ(ಎಲ್ಲರೂ ಅಲ್ಲ!), ತಾನೂ ಏಳಿಗೆ ಹೊಂದದೆ ಬೇರೆಯವರು ಅಭಿವೃದ್ಧಿಯಾದರೆ ಹೊಟ್ಟೆಕಿಚ್ಚು ಪಡುವುದು ಕೆಲವರ ಹುಟ್ಟುಗುಣ. ಇನ್ನೊಬ್ಬರ ನೆಮ್ಮದಿ ಕಂಡು ತಮ್ಮ ಮನಕ್ಕೆ ಬೆಂಕಿ ಇಟ್ಟುಕೊಳ್ಳುವವರು ಈ ಜನ.
ಯಾಕೆ ಹೀಗೆ???? ಇದಕ್ಕೆ ಉತ್ತರ ಬರೀ ???????

Srikanth Manjunath said...

ಚಂದ ಕವಿತೆ ಅದರ ಗೂಡಾರ್ಥ, ಭಾವಾರ್ಥ ತಿಳಿದಂತೆ ವಿಸ್ತಾರ ಆಗುತ್ತಾ ಹೋಗುತ್ತದೆ...ಶರಣು ನಿಮ್ಮ ಪದಗಳ ಜೋಡಣ ಕೌಶಲ್ಯಕ್ಕೆ!!!!
ಮನುಜ...ಮಾನವನಾಗಲು ಹೊರಟರೆ ಮಾತ್ರ ಮನಸು ನಮ್ಮಲ್ಲಿ ಇರುತ್ತದೆ..
ಇಲ್ಲದೆ ಹೋದರೆ ಅದು ಪರರ ಸ್ವತ್ತಾದಾಗ ಗಲಿಬಿಲಿ ಶುರು..
ಮನಸು ನೀರ ಕೊಳದಂತೆ..ಬೊಗಸೆಯಲ್ಲಿ ತುಂಬಿ ಕುಡಿದರೆ ಶುದ್ಧ ನೀರು..
ಕಾಲು ತೊಳೆಯಲು ಬಳಸಿದರೆ ಬಗ್ಗಡ ಹೊರಗೆ ಬರುತ್ತೆ

Ittigecement said...

ಮನಸು...

ಕವನ ತುಂಬಾ ಇಷ್ಟವಾಯಿತು...
ಇದು ನನ್ನ ಮನಸ್ಸಿನ ಭಾವನೆ ಕೂಡ...

ಎಲ್ಲರೂ ಬಯಸುವದು ಹಿಡಿ ಮುಷ್ಟಿ ಪ್ರೀತಿ...
ನಾನು... ನಮ್ಮದು ಕೊಟೆಯೊಳಗೆ..
ಪ್ರೀತಿಯಿಂದ... ಸಂತೋಷದಿಂದಿರಲು ಯಾಕೆ ಕಷ್ಟ ಪಡ್ತೀವಿ... ಅಲ್ವಾ?

ಚಂದದ ಸಾಲುಗಳಿಗೆ ಅಭಿನಂದನೆಗಳು...

Ittigecement said...

ಮನಸು...

ಕವನ ತುಂಬಾ ಇಷ್ಟವಾಯಿತು...
ಇದು ನನ್ನ ಮನಸ್ಸಿನ ಭಾವನೆ ಕೂಡ...

ಎಲ್ಲರೂ ಬಯಸುವದು ಹಿಡಿ ಮುಷ್ಟಿ ಪ್ರೀತಿ...
ನಾನು... ನಮ್ಮದು ಕೊಟೆಯೊಳಗೆ..
ಪ್ರೀತಿಯಿಂದ... ಸಂತೋಷದಿಂದಿರಲು ಯಾಕೆ ಕಷ್ಟ ಪಡ್ತೀವಿ... ಅಲ್ವಾ?

ಚಂದದ ಸಾಲುಗಳಿಗೆ ಅಭಿನಂದನೆಗಳು...

balasubramanya said...

ಕವಿತೆಯಲ್ಲಿ ಜನಗಳ ಮನೋಸ್ಥಿತಿಯನ್ನು ಚೆನ್ನಾಗಿ ಬಿಂಬಿಸಿದ್ದೀರಿ.ನನ್ನ ಕವಿತೆಯ ಸಾಲುಗಳು ನೆನಪಿಗೆ ಬಂದವು ಜೀವನ ನಮ್ಮೆಲ್ಲರ ಜೀವನ ಆಗಲಿ ಪಾವನ
ಕತ್ತಲೆಯ ವಿಶ್ವಕ್ಕೆ ಬೆಳಕು ನೀಡಲಿ ಎಲ್ಲರಮನ ,
ವಿಶ್ವ ಜನರ ಮನದಿ ಅರಳಲಿ ಪ್ರೀತಿಯ ಕವನ

ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

balasubramanya said...

ಕವಿತೆಯಲ್ಲಿ ಜನಗಳ ಮನೋಸ್ಥಿತಿಯನ್ನು ಚೆನ್ನಾಗಿ ಬಿಂಬಿಸಿದ್ದೀರಿ.ನನ್ನ ಕವಿತೆಯ ಸಾಲುಗಳು ನೆನಪಿಗೆ ಬಂದವು ಜೀವನ ನಮ್ಮೆಲ್ಲರ ಜೀವನ ಆಗಲಿ ಪಾವನ
ಕತ್ತಲೆಯ ವಿಶ್ವಕ್ಕೆ ಬೆಳಕು ನೀಡಲಿ ಎಲ್ಲರಮನ ,
ವಿಶ್ವ ಜನರ ಮನದಿ ಅರಳಲಿ ಪ್ರೀತಿಯ ಕವನ

ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

ಚುಕ್ಕಿಚಿತ್ತಾರ said...

ಸುಗುಣಾ..
ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳಿ ಯಾಕೆ ಹೀಗೆ ಅ೦ದರೆ...? ಇವು ಉತ್ತರ ಸಿಗದ ಸಾರ್ವಕಾಲಿಕ ಪ್ರಶ್ನೆಗಳು..
::)

Badarinath Palavalli said...

ಸ್ವತಃ ಸಾತ್ವಿಕತೆ ಆಚರಿಸುವ ಮೃದು ಮನಸ್ಸಿಗೆ ಮಾತ್ರ ಜಗವೂ ಸಾತ್ವಿಕವಾಗಿರಬೇಕೆನ್ನುವ ಆಶಯ ಮೂಡುವುದು. ನಿಮ್ಮ ಮನೋಭಿಲಾಷೆ ನನ್ನಂತಹ ಕಿರು ಹಣತೆಗಳ ಆಚರಣೆಯಿಂದಲೇ ಮೊದಲಾಗಲಿ.

ಉತ್ತಮ ಜೀವ ಸೂತ್ರ ವಿವರಿಸಿದ ಕವನಕ್ಕೆ ಧನ್ಯವಾದಳು.

Subrahmanya said...

ಇದೆಲ್ಲಾ ವ್ಯಾವಹಾರಿಕ ಸತ್ಯಗಳು. ಇವುಗಳನ್ನು ಮೆಟ್ಟಿ ನಿಂತು ಗೆಲ್ಲವುದೇ ಬದುಕು ! ಅಲ್ಲವೆ ?