Thursday, March 21, 2013

-ತೈಲವಿದ್ದಂತೆ ಹಣ-


 -ತೈಲವಿದ್ದಂತೆ ಹಣ-

                         ಚಿತ್ರ: ಮನಸು

ತೈಲ ಇರುವ ಬಾವಿಯಲ್ಲಿ
ಹಣದ ಹೊಳೆಯೇ ಹರಿವುದು
ಆರ್ಥಿಕ ನೆಲೆಯ ನೀಡುವಲ್ಲಿ
ದೇಶ ಶಾಂತಿ ನಿಲುವುದು...!!

ಹಳ್ಳ ತೋಡಿ ಬಾವಿ ಮಾಡಿ
ಹಿಂಡಿ ಹಿಪ್ಪೆ ಮಾಡಿ ಹೀರುತ
ದೇಶದ ಸಂಪತ್ತು ಹೆಚ್ಚಿಸವಲ್ಲಿ
ಭೂಮಿ ತಾಯಿ ನಲುಗುವಳು..!!

ತೈಲದಂತೆ ಮನುಜನಾರು
ಕಷ್ಟಗಳ ಹೊರುವನೋ
ಬೆಲ್ಲದುಂಡೆಯಾಗಿ ತಾನು
ಇರುವೆ ಮಧ್ಯೆ ನಿಲುವನು...!!!

ಎಣ್ಣೆ ಇರುವ ದೀಪದಂತೆ
ಸದಾ ಬೆಳಗುತಿರುವರು
ಮನೆಮಂದಿಗೆ ಬೆಳಕಾಗಿ
ಹೊರೆಗಳ ತಾ ಹೊರುವನು...!!

ಹಣದ ಹೊಳೆ ಹರಿದರಂತೂ
ಮನೆ-ಮನಗಳು ತಾ ಕುಣಿವವು
ಇದ್ದರೆ ಇರುವ ಬಂಧಗಳೆಲ್ಲಾ
ಇರದಿರೆ ತಾ ಕಿತ್ತು ಹರಿವವು..!!

ಮನುಜನ ಹಣ ತೈಲದಂತೆ
ಬೆಳಕಿಗೂ ಬೇಕು ತೈಲವಂತೆ
ಪ್ರಗತಿ, ಚಲನೆ ಸಕಲಕೂ ಬೇಕು
ಹಣವಿದ್ದವ ತೈಲ ಬಾವಿಯಂತೆ..!!

                        ಚಿತ್ರ: ಅಂತರ್ಜಾಲ

11 comments:

Srikanth Manjunath said...

ಹಣವಿದ್ದರೆ ನೀ ದಿನಕರಂತೆ ಇಲ್ಲದಿದ್ದರೆ ಶ್ವಾನದಂತೆ ಎನ್ನುವ ಭಾಗ್ಯದ ಲಕ್ಷ್ಮಿ ಬಾರಾಮ್ಮ ಚಿತ್ರದ ಹಾಡಿನಂತೆ ಈ ಪ್ರಪಂಚವಾಗಿಬಿಟ್ಟಿದೆ. ದುಡ್ಡೇ ಎಲ್ಲ ಅಲ್ಲ ಎಂದು ಹೇಳಿಕೊಂಡು ತಿರುಗುವ ಸುಳ್ಳು ಸುಳ್ಳು ಜೀವಿಗಳಿಗೂ ದುಡ್ಡಿಲ್ಲದೆ ಏನೂ ಇಲ್ಲ ಎಂದು ಮನದಾಳದಲ್ಲಿ ಗೊತ್ತಿರುತ್ತದೆ. ಸುಂದರ ಕವನದ ಸಾಲುಗಳು. ಇರುವಾಗ ನೆಂಟರು ಇಲ್ಲದಾಗ ಹೊರಡುವರು ಎನ್ನುವ ಮಾತು ಎಷ್ಟು ನಿಜ. ಸುಂದರವಾಗಿದೆ ಅಕ್ಕಯ್ಯ

sunaath said...

ಸಂಪೂರ್ಣ ಸತ್ಯವಾದ ಸಂಗತಿ. ದುಡ್ಡಿದ್ದವನೇ ದೊಡ್ಡಪ್ಪ; ದುಡ್ಡು ಮುಗಿದಿರಲು ದಡ್ಡಪ್ಪ!

Badarinath Palavalli said...

ಒಂದು ನಾಡಿನ ಆರ್ಥಿಕ ಬೆನ್ನೆಲುಬನ್ನು ಸಮರ್ಥವಾಗಿ ಚಿತ್ರಿಸಿಕೊಟ್ಟ ಕವನ.

ಹಲವು ಭಾವಗಳನ್ನು ಅರ್ಥೈಸುವ ಇಂತಹ ಸಾಲುಗಳು ನಿಮ್ಮ ಯಶಸ್ಸು:
" ಇದ್ದರೆ ಇರುವ ಬಂಧಗಳೆಲ್ಲಾ
ಇರದಿರೆ ತಾ ಕಿತ್ತು ಹರಿವವು..!!"

ಚಿನ್ಮಯ ಭಟ್ said...

ದುಡ್ಡಿನ ಮಹಿಮೆ ಚೆನ್ನಾಗಿದೆ...
ಕವನದೊಳಗಿರುವ ಮಾನವೀಯತೆಯ ಹರಿವು ಇಷ್ಟವಾಯ್ತು...

ಚಿನ್ಮಯ ಭಟ್ said...

ದುಡ್ಡಿನ ಮಹಿಮೆ ಚೆನ್ನಾಗಿದೆ...
ಕವನದೊಳಗಿರುವ ಮಾನವೀಯತೆಯ ಹರಿವು ಇಷ್ಟವಾಯ್ತು...

ಜಲನಯನ said...

ಹಣದ ಥೈಲಿ ಹಿಡಿಯಲು ತೈಲದಾಸರು ಬೇಕೇ ಬೇಕು ಆದರೆ ದಾಸರನ್ನು ಕೊಳ್ಳಲು ಹಣಬೇಕು ಅದಕ್ಕೆ ತೈಲ ಬಾವಿ ಕೊರೆಯಬೇಕು...ಎಂತಹ ವಿಷಮ ವರ್ತುಲ..???!!!

ಮಂಜಿನ ಹನಿ said...

ತೈಲವಿದ್ದಂತೆ ಹಣ, ಉಪಮೆ ವಿಶಿಷ್ಟವಾಗಿ ನಿಲ್ಲುತ್ತದೆ. ನಿತ್ಯ ಚಲಿಸುತ್ತಲೇ ಇರುತ್ತದೆ, ಮನುಷ್ಯನನ್ನು ಮೂರು ಕಾಸಿಗೂ ಸಮನಾಗದವನಂತೆ ಮಾಡುತ್ತದೆ.

- ಪ್ರಸಾದ್.ಡಿ.ವಿ.

ಕಾನನ said...

ಈ ಕವನವನ್ನು ನಾವು ನಮ್ಮ ಕಾನನ ಈ- ಮಾಸಿಕದಲ್ಲಿ ಪ್ರಕಟಿಸಲು ಇಚ್ಚಿಸುತ್ತೇವೆ .
http://issuu.com/kaanana/docs/kaanana_feb_2013

ಕಾನನ ಒಂದು ನಿಸರ್ಗ ಹಾಗು ವನ್ಯಜೀವಿಗಳ ಬಗ್ಗೆ ಕನ್ನಡದಲ್ಲಿ ತಿಳಿಸುವ ಉಚಿತ ಮುಕ್ತ ಈ -ಮಾಸಿಕ .
kaanana.mag@gmail.com

ಕಾನನ said...

ಈ ಕವನವನ್ನು ನಾವು ನಮ್ಮ ಕಾನನ ಈ- ಮಾಸಿಕದಲ್ಲಿ ಪ್ರಕಟಿಸಲು ಇಚ್ಚಿಸುತ್ತೇವೆ .
http://issuu.com/kaanana/docs/kaanana_feb_2013

ಕಾನನ ಒಂದು ನಿಸರ್ಗ ಹಾಗು ವನ್ಯಜೀವಿಗಳ ಬಗ್ಗೆ ಕನ್ನಡದಲ್ಲಿ ತಿಳಿಸುವ ಉಚಿತ ಮುಕ್ತ ಈ -ಮಾಸಿಕ .
kaanana.mag@gmail.com

ಪುಷ್ಪರಾಜ್ ಚೌಟ said...

ಕವಿತೆಯು 'ಆಳ'ವಾಗಿದೆ!

Dr.D.T.Krishna Murthy. said...

ತೈಲದಿಂದ ಹಣ!ಹಣವಿದ್ದವರು ತೈಲದಂತೆ ಎಲ್ಲರ ಬಾಳಿಗೂ ಬೆಳಕಾಗಲಿ ಎನ್ನುವ ಕವನದ ಆಶಯ ಚೆನ್ನಾಗಿದೆ.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.