Wednesday, April 10, 2013

ಆದಿ ಪರ್ವ



ಸಿಹಿಯ ಮಡಿಲು ನಗುವಿನೊಳಗೆ ಸುಖ
ಕಹಿಯ ಕಡಲು ಅಳುವಿನೊಡನೆ ದುಃಖ
ಬೇವು-ಬೆಲ್ಲದ ಬದುಕು ಕಂಡಷ್ಟು
ಕುಲುಮೆಯೊಳಗೆ ಬೆಂದ ಚಿನ್ನದಂತೆ  

ಚಿಗುರು ಮಾವು, ಮೈಯ್ಯ ಕೊಳೆ ಕಳೆವ ತೈಲ
ಕಿರಣ ರಾಶಿಯಡಿ ಮನಸು ಪಕ್ಷಿಕಾಶಿ
ಹಸಿರಿನೊಡನೆ ಒಗರು ಅಂಟಿನೊಳಗೆ ವಾಯು
ಎಲ್ಲ ಕಂಡ ಬದುಕು ಸಿಹಿ ಹೂರಣದಂತೆ  

ಹಿರಿಯರಿಗೆ ಧೂಪ, ಗೋವಿನ ಪೂಜೆ
ನೇಗಿಲ ಯೋಗಿಯದು ಭೂಮಿ ಉಳುವಿಕೆ 
ದಾನ ಧರ್ಮದೊಡನೆ ಪಂಚಾಂಗ ಶ್ರವಣ
ವಿವಿಧ ರೂಪ ಕಂಡ ಬದುಕು ಯುಗಾದಿ   

ಚಿಗುರಿನೊಡನೆ ಕನಸು ಬೆಳಗಲು
ಬಿಸಿಲ ಬೆಳಕು ಮನವ ತಣಿಸಲು
ಚೈತ್ರದ ಚಿಲುಮೆಯ ಯುಗಾದಿ
ವರುಷ ವರುಷ ತರಲಿ ಹರುಷದ ಹೋಳಿಗೆ 

 ಎಲ್ಲರಿಗೂ "ಯುಗಾದಿ" ಹಬ್ಬದ ಶುಭಾಶಯಗಳು ... 


ಚಿತ್ರ: ನೆಟ್ ಲೋಕ


8 comments:

ಸಂಧ್ಯಾ ಶ್ರೀಧರ್ ಭಟ್ said...

ಹಬ್ಬದ ಶುಭಾಶಯ ಸುಗುಣಕ್ಕ .... :)

ಕವನ ಚೆನ್ನಾಗಿದೆ ...

Srikanth Manjunath said...

ಆದಿ ಪರ್ವ ಯುಗದ ಆದಿ ಪರ್ವ
ಪ್ರತಿ ಪರ್ವದಲ್ಲಿಯೂ ಇಳಿಯಬೇಕು ಗರ್ವ
ಪ್ರಕೃತಿಯಲ್ಲಿ ನಾನು ಎನ್ನುವಂತೆ ಇದ್ದಾಗ
ಬೇವು ಕೂಡ ಸಿಹಿ ಬೆಲ್ಲವೂ ಕೂಡ ಸಿಹಿ
ಮಾವಿನ ಹಸಿರಲ್ಲಿ ಮನೆಯ ಉಸಿರಲ್ಲಿ
ಬೆರೆತಾಗ ಜೀವನ ಹಾಲು ಜೇನಿನ ಮಿಲನ!
ಸೂಪರ್ ಅಕ್ಕಯ್ಯ.. ಸೊಗಸಾಗಿದೆ ಹಬ್ಬದ ಎಲ್ಲಾ ಸವಿಯನ್ನು ನೆನೆಸಿ, ಕಲಸಿ, ಬೆರೆಸಿ ಬಡಿಸಿದ ಹೂರಣ ಬಲು ಸವಿಯಾಗಿದೆ.
ಇಡಿ ಕುಟುಂಬಕ್ಕೆ ಆದಿ ಪರ್ವದ ಶುಭಾಶಯಗಳು!

ಮೌನರಾಗ said...

ಯುಗಾದಿಗೆ ಚಂದದೊಂದು ಕವನ..
ಯುಗಾದಿಯ ಶುಭಾಶಯಗಳು ನಿಮಗೂ ಮತ್ತು ನಿಮ್ಮ ಮನೆಯವರಿಗೂ.. :)

Suresh said...

ಸೊಗಸಾದ ಕವನ! ಯುಗಾದಿಯ ಹದವಾಗಿ ಬೆರೆತ ಸಿಹಿ ಕಹಿಯ ಕಸಕುತನ ಎಲ್ಲೆರಲ್ಲೂ ಹೊಸ ಕಸುವ ನೀಡಲಿ...
ಛಾಯಾಚಿತ್ರದಲ್ಲಿರುವ ಮಾವಿನಕಾಯಿ ಹಾಗು ಹೋಳಿಗೆ ಎಲ್ಲರ ಬಾಯಲ್ಲಿ ನೀರೂರಿಸುವಂತಿವೆ! :)

ದಿನಕರ ಮೊಗೇರ said...

Happy new year madam... sundara kavanadondige habba aacharisoNa...

sunaath said...

ಸುಂದರವಾದ ಯುಗಾದಿಯ ಸುಂದರ ಚಿತ್ರವನ್ನು ಕೊಟ್ಟಿದೀರಿ.
ಯುಗಾದಿ ನಿಮಗೆ ಶುಭ ತರಲಿ. ವಿಜಯನಾಮ ಸಂವತ್ಸರವು ನಿಮಗೆ ವಿಜಯವನ್ನು ತರಲಿ.

balasubramanya said...

kavite chennaagide.

balasubramanya said...

kavite chennaagide.