Sunday, July 7, 2013

"ಪವರ್ ಸ್ಟಾರ್ ಪುನೀತ್" ಜೊತೆ ಅಭಿನಯ - ಖುಷಿ ತಂದ ಕ್ಷಣ..!!


ಹಿಂದೆಯೊಮ್ಮೆ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದೆ. ಆತ್ಮೀಯ ಮಾತುಕತೆಗಳೊಂದಿಗೆ ಆತ್ಮೀಯರಾಗಿದ್ದರು. ಅದೇ ಕಾರಣಕ್ಕೆ ಅವರ ಚಲನ ಚಿತ್ರದಲ್ಲಿ ನನಗೊಂದು ಆಫರ್ ಬಂದಿತ್ತು. ನನ್ಗೂ ಖುಷಿ "ಪವರ್ ಸ್ಟಾರ್" ಜೊತೆ ಅಭಿನಯಿಸುವುದೆಂದರೆ ಏನು ಸಾಮಾನ್ಯನಾ..? ಎಂದು ಒಪ್ಪಿಕೊಂಡೆ. ಶೂಟಿಂಗ್ ದಿನವೂ ಬುಕ್ ಆಯ್ತು.

ಅಂದು ನನ್ನ ಪಾತ್ರದ ಬಗ್ಗೆ ನಿರ್ದೇಶಕರು ಎಲ್ಲವನ್ನು ಸವಿವರವಾಗಿ ತಿಳಿಸಿದರು ನಾನು ಮೇಕಪ್ ಇಲ್ಲದೆ ಸ್ವಲ್ಪ ಬಡತನದ ಹೆಣ್ಣು ಮಗಳಂತಿರಬೇಕಿತ್ತು..

ಅದೋ ಅಲ್ಲಿ ಕಾಣುವ ಮೂಲೆಯಲ್ಲಿ ನೀವು ಹಳೆಯ ಬಟ್ಟೆ ಕಾಣುತ್ತಲ್ಲಾ ಅದನ್ನು ಹೊದ್ದುಕೊಂಡು ಮಲಗಿ ... ಸ್ವಲ್ಪ ದೂರದಿಂದ ಪುನೀತ್ ನಿಮ್ಮ ಕೊಠಡಿಗೆ ಬರುತ್ತಾರೆ. ನಿಮ್ಮನ್ನು ನೋಡಿ ಮಾತನಾಡಿಸುತ್ತಾರೆ. - ಇಷ್ಟು ಸಾಕು ನಂತರ ಮುಂದಿನದು ಹೇಳುವೆ ಎಂದರು ನಿರ್ದೇಶಕರು.

ಸರಿ ಈಗ ನನ್ನ ಸರದಿ ನಾನು ಅಲ್ಲಿ ಕಾಣುವ ಪಾಳು ಬಿದ್ದ ಮನೆಯಲ್ಲಿ ಹೋಗಿ ಅಲ್ಲೇ ಕಾಣುತ್ತಿದ್ದ ಬಟ್ಟೆಯನ್ನು ಹೊದ್ದುಕೊಂಡು ಮಲಗಿದೆ - ಆ ಕಡೆಯಿಂದ ನಿರ್ದೇಶಕರು ಕ್ಯಾಮರಾ ಸ್ಟಾರ್ಟ್ ಆಕ್ಷನ್ ಎಂದರು... ನನ್ನದು ತೀವ್ರ ಮೌನ, ಆಸೆ ಬತ್ತಿದ ಕಣ್ಣುಗಳು, ನಿರಾಶೆಯ ಬದುಕು ಎಂಬಂತೆ ನೆಲದಲ್ಲಿ ಬಿದ್ದುಕೊಂಡಿರುವಂತ ಪರಿಸ್ಥಿತಿ.... ನನ್ನತ್ತ ಕ್ಯಾಮರ ಜ಼ೂಮ್
ಮಾಡಿ...ಮಾಡಿ ಇಟ್ಟರು ನಾನು ಮಾತ್ರ ಆಸೆಗಳೇ ಬತ್ತಿಹೋದಂತೆ ಮುಖ ತೆರೆದಿಟ್ಟು ಹರುಕಲು ಬಟ್ಟೆ ಹೊದ್ದು ಮಲಗಿದ್ದೆ... 

ನನ್ನ ಅಭಿನಯ ನಿರ್ದೇಶಕರಿಗೆ ಖುಷಿ ನೀಡಿತ್ತು .. ಎಕ್ಸಲೆಂಟ್, ಗುಡ್ ಹೀಗೇ ಮಲಗಿರಿ ಎಂದು ಅತ್ತ... ಪುನೀತ್ ಸರ್ ರೆಡಿನಾ..!! ಆಕ್ಷನ್ ಎಂದರು..

ಪುನೀತ್ ಬೂಟಿನ ಸದ್ದು ಟಪ್......ಟಪ್......ಟಪ್.......ಸದ್ದು ಮಾಡುತ್ತ ಬರುತ್ತಿದ್ದಾರೆ..... ಹಾಗೇ ಬನ್ನಿ ಇನ್ನೂ ಮುಂದಕ್ಕೇ ಎಂದು ನಿರ್ದೇಶಕರು ಹೇಳುತ್ತಿದ್ದಾರೆ.....ಸುತ್ತಲೂ ಇದ್ದ ನಾಲ್ಕಾರು ಜನ್ರಲ್ಲಿ ಎಲ್ಲಿ... ಆ ಹೆಣ್ಣು ಮಗಳು ಎಂದು ನಾನಿದ್ದ ಕಡೆಗೆ ಬಂದು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ... ಇನ್ನೇನು ಮಾತನಾಡಬೇಕು ಎನ್ನುವಾಗ ಅತ್ತ ನಿರ್ದೇಶಕ ಕಟ್..ಕಟ್ ಎಂದು ಬಿಟ್ಟರು....

ಪುನೀತ್ ಸರ್, ಎಕ್ಸಲೆಂಟ್...ಆಕ್ಟಿಂಗ್ ವಾಹ್..!!  ಎಂದು ನಿರ್ದೇಶಕರು ಬೆನ್ನು ತಟ್ಟಿದರು...

ನಾನು ಎದ್ದು ಇದೇನು ಇಷ್ಟೇನಾ..? ಎಂದು ಕೇಳಿದೆ. ಪುನೀತ್ ಸಹ ನನ್ನ ಜೊತೆಯೇ ಇದ್ದವರು ಏನು ಅವರಿಗೆ ಡೈಲಾಗ್ ಎಲ್ಲಾ ಏನಿಲ್ಲ ಯಾಕೆ..? ಎಂದು ಕೇಳುತ್ತಿದ್ದಂತೆ... ಇಲ್ಲ ಸರ್, ಇದೆ ಈಗ ಸದ್ಯಕ್ಕೆ ಇಷ್ಟೇ ಇರಲಿ ಮಿಕ್ಕಿದ್ದು ಮಧ್ಯಾನ್ಹ ಎಂದರು.... ಸರಿ ಎಂದು ಪುನೀತ್ ಅತ್ತ ಸರಿಯುತ್ತಿದ್ದಂತೆ..........

ನಿರ್ದೇಶಕರು ನೋಡಿಮ್ಮಾ ನೀವು ಹೋಗಿ ಮೇಕಪ್ ಮಾಡಿಕೊಂಡು ಬನ್ನಿ ಇನ್ನೊಂದು ಸನ್ನಿವೇಶವಿದೆ ಅದನ್ನು ಚಿತ್ರೀಕರಿಸೋಣ ಎಂದರು ನನಗೆ ಏನೂ ತೋಚಲಿಲ್ಲ ಸುಮ್ಮನೇ ತಲೆಯಾಡಿಸಿದೆ.

೩೦ ನಿಮಿಷಗಳ ನಂತರ ಮೇಕಪ್ ಮಾಡಿಕೊಂಡು ಪುನೀತ್ ಜೊತೆ ಕುಳಿತಿದ್ದೆ ಅತ್ತ ಮತ್ತೊಂದು ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು...

(ಸನ್ನಿವೇಶ)
ಇಬ್ಬರು ಚಿಕ್ಕ ಮಕ್ಕಳು ಮರದ ತೊಲೆಗಳು ಮೂರು, ನಾಲ್ಕನ್ನು ಒಟ್ಟೊಟ್ಟಿಗೆ ಹೊತ್ತು ತರುತ್ತಿದ್ದಾರೆ... ಮಣ ಭಾರ...!! ಭುಜದ ಮೇಲಿಟ್ಟುಕೊಂಡು ಒಂದು ಕೊನೆಯಲ್ಲಿ ಒಬ್ಬ ಹುಡುಗ ಮತ್ತೊಂದು ಕೊನೆಯಲ್ಲಿ ಇನ್ನೊಬ್ಬ ಹುಡುಗ ..ಕಷ್ಟಪಟ್ಟು ತರುತ್ತಿದ್ದಾರೆ ಎಂಬಂತೆ ಬಾಸವಾಗುವಂತೆ ಅವರ ಮುಖದಲ್ಲಿ ಕಾಣುತ್ತಿದೆ...ಸ್ವಲ್ಪ ದೂರ ಬಂದ ನಂತರ ವಿಶಾಲ ಮೈದಾನದಲ್ಲಿ ರಪ್ಪ್ ಎಂದು ಭಾರವೇ ಇಲ್ಲದಂತೆ ಎಸೆದುಬಿಟ್ಟರು...!!!!.

ಅಯ್ಯೋ, ಇದೇನು ಅಲ್ಲಿಂದ ಹೊತ್ತುಕೊಂಡು ಬಂದಿದ್ದು ನೋಡಿದರೆ ಭಾರವಿದ್ದಂತೆ ಇತ್ತು, ಈಗ ಒಳ್ಳೆ ಹೂವಿನ ಕಡ್ಡಿ ಹಿಡಿದಂತೆ ಎಸೆಯುತ್ತಿದ್ದಾರೆ. ನಿರ್ದೇಶಕರೆ ಯಾವುದೇ ಸನ್ನಿವೇಶವನ್ನು ಚಿತ್ರಿಸುವಾಗ ಅದು ಸ್ವಲ್ಪ "ವಾಸ್ತವಕ್ಕೆ ಹತ್ತಿರ" ಇರುವಂತೆ ಚಿತ್ರಿಸಿ... ಇಲ್ಲವಾದರೆ ಜನರಿಗೆ ಸುಮ್ಮನೆ "ಬಂಡಲ್" ತೋರಿಸಬೇಡಿ ಎಂದುಬಿಟ್ಟೆ.

ನಿರ್ದೇಶಕರಿಗೆ ಅದೆಲ್ಲಿತ್ತೋ ಕೋಪ ಒಂದೇ ಸಮನೆ ಬೈಯ್ಯುತ್ತ ನಿನ್ನನ್ನು ಈ ಸಿನಿಮಾದಿಂದ ಕಿತ್ತು ಹಾಕಲಾಗಿದೆ. ನಿನ್ನಂತವರು ಬೇಡವೇ ಬೇಡ ಎಂದುಬಿಟ್ಟ... ಇತ್ತ ಪುನೀತ್ ಸಮಾಧಾನ ಮಾಡುತ್ತಲೇ ಇದ್ದಾರೆ. ಅದೆಲ್ಲಿತ್ತೋ ನನ್ನ ಮೊಬೈಲಿನ ಕರೆಗಂಟೇ ಒಂದೇ ಸಮನೇ ಬಡಿದುಕೊಳ್ಳುತ್ತಿದೆ. ಬೇಸರದಿಂದಲೇ ಮೊಬೈಲ್ ಕೈಗೆತ್ತುಕೊಂಡು ನೋಡಿದೆ ಆಗ ತಿಳಿಯಿತು ಬೆಳಗ್ಗೆ ೬ ಗಂಟೆ ...ಎದ್ದೇಳು ಎಂದು ಶುಭಸೂಚಿಸುತ್ತಿದ್ದದ್ದು.

ಇಷ್ಟೆಲ್ಲಾ ಕಥೆಗೆ ಕಾರಣ ನೆನ್ನೆಯ ಉದಯಾ ಟೀವಿಯ ಪೃಥ್ವಿ ಚಿತ್ರ.

18 comments:

Srikanth Manjunath said...

ಅಕ್ಕಯ್ಯ ಸೂಪರ್ ಅಭಿನಂದನೆಗಳು ಚಲನಚಿತ್ರಗಳಲ್ಲಿ ಕ್ಲೈಮಾಕ್ಸ್, ಆಂಟಿ-ಕ್ಲೈಮಾಕ್ಸ್ ಅಂತ ಗೊತ್ತಿತ್ತು.. ಅಕ್ಕಯ್ಯ-ಕ್ಲೈಮಾಕ್ಷ್ ಕೂಡ ಇರುತ್ತೆ ಅಂತ ಈಗ ಗೊತ್ತಾಯಿತು.. ಇಂದಿನ ಚಿತ್ರರಂಗದ ಒಬ್ಬ ಉತ್ತಮ ನಟನ ಜೊತೆ ಅಭಿನಯಿಸಿದ್ದು ನಮಗೆಲ್ಲರಿಗೂ ಖುಷಿಯಾಯಿತು.."ಪೃಥ್ವಿ" ಪುನೀತ್ ಅಭಿನಯದಲ್ಲಿ ಬಂದ ಉತ್ತಮ ಚಿತ್ರಗಳಲ್ಲಿ ಒಂದು. ಆ ಪಾರ್ವತಿಯನ್ನು ನೋಡೋಕೆ ಭಾರಿ ನೋಡಿದ್ದೇನೆ. ಪುನೀತ್ ಜೋಡಿಯಲ್ಲಿ ಪಾರ್ವತಿ ಮೊದಲಿಗರು, ನಂತರ ಮೀರಾ ಜಾಸ್ಮಿನ್, ನಂತರ ಪ್ರಿಯಮಣಿ.. ಸೂಪರ್ ಅಕ್ಕಯ್ಯ...

ದಿನಕರ ಮೊಗೇರ said...

Ahha... super kanasu.... mradu manasu...

ಅನಂತ್ ರಾಜ್ said...

Nenapinalli ulida sundara kanasu...:)

ಅನಂತ್ ರಾಜ್ said...

Nenapinalli ulida sundara kanasu...:)

ಚುಕ್ಕಿಚಿತ್ತಾರ said...

aah.. chennaagide.. manasu nim kanasu..:)

Vinod Kumar said...

ha ha ha... super

Dr.D.T.Krishna Murthy. said...

ಮನಸು ಮೇಡಂ;ಮುಂದಿನ ಸಲ ಇನ್ನೂ ಒಳ್ಳೆಯ ಕನಸು ಬೀಳಲಿ.:-)

shivachenna.blogspot.com said...

ನಿಜಕ್ಕೂ ನಿರೂಪಣೆ ತುಂಬಾ ಚೆನ್ನಾಗಿದೆ. ಯಾವ ಕತೆಗಾರರಿಗೂ, ಯಾವ ನಿರ್ದೇಶಕರಿಗೂ ಕಮ್ಮಿ ಏನೂ ಇಲ್ಲ. ಮತ್ತಷ್ಟು ನಿಮ್ಮಿಂದ ವಾಸ್ತವವ ಬಡಿದೆಬ್ಬಿಸುವ ಬರಹಗಳು ಬರಲಿ.

shivachenna.blogspot.com said...

ನಿಜಕ್ಕೂ ನಿರೂಪಣೆ ತುಂಬಾ ಚೆನ್ನಾಗಿದೆ. ಯಾವ ಕತೆಗಾರರಿಗೂ, ಯಾವ ನಿರ್ದೇಶಕರಿಗೂ ಕಮ್ಮಿ ಏನೂ ಇಲ್ಲ. ಮತ್ತಷ್ಟು ನಿಮ್ಮಿಂದ ವಾಸ್ತವವ ಬಡಿದೆಬ್ಬಿಸುವ ಬರಹಗಳು ಬರಲಿ.

Pradeep Rao said...

ಅಯ್ಯೋ! ಬರೀ ಕನಸಾ? ನಾನೆಲ್ಲೋ ನಿಜವಾಗ್ಲೂ ನೀವು ಸಿನಿಮಾದಲ್ಲಿ ಅಭಿನಯಿಸಿದ್ರೇನೋ ಅಂದುಕೊಂಡೆ... ಹೇಗಾದರೂ ನಿಮ್ಮ ಹಿಂದೆ ಬಿದ್ದು ನಾನೂ ಒಂದು ಸಿನಿಮಾದಲ್ಲಿ ಒಂದು chance ಗಿಟ್ಟಿಸಿಕೊಳ್ಳೋಣ ಅಂತ ಇದ್ದೆ! ಹ್ಹ ಹ್ಹ ಹ್ಹಾ ಚೆನ್ನಾಗಿದೆ... ಮತ್ತೆ ಆ ಪುನೀತ್ ಜೊತೆ ಫೋಟೋ ಕೂಡಾ ನಕಲಿನಾ?

ಸುಧೇಶ್ ಶೆಟ್ಟಿ said...

ondu sala nija andukondu bittu aamele kanasu yendu tilidu besara aayitu :(

bilimugilu said...

ha ha..... very well narrated Suguna :)

आवाRa भंवRa [Raghav ] said...

ನಾನು ಈ ಹಿಂದೆ ಯೋಗರಾಜ್ ಭಟ್ಟರೊಂದಿಗೆ ಕನಸಲ್ಲಿ "ಕಿವಿ ಹಾಳಾಗೋವಂಥ ಸಂಭಾಷಣೆ" ನಡೆಸಿರೋದಕ್ಕೆ ಹಳೇ ರೆಕಾರ್ಡ್ಸ್ ಇವೆ ನನ್ ಬ್ಲಾಗಲ್ಲಿ :d ಹಾಹಾಹಾಹಾ ನನ್ನದೇ ಕನಸೊಂದು ಮತ್ತೆ ನೆನಪಿಗೆ ಬಂತು :)
ಒಳ್ಳೆ ಕನಸೊಂದಕ್ಕೆ ಪೆನ್ನಾಡಿಸಿದ್ದೀರ :) ಶುಭವಾಗಲಿ :d

आवाRa भंवRa [Raghav ] said...

ನಾನು ಈ ಹಿಂದೆ ಯೋಗರಾಜ್ ಭಟ್ಟರೊಂದಿಗೆ ಕನಸಲ್ಲಿ "ಕಿವಿ ಹಾಳಾಗೋವಂಥ ಸಂಭಾಷಣೆ" ನಡೆಸಿರೋದಕ್ಕೆ ಹಳೇ ರೆಕಾರ್ಡ್ಸ್ ಇವೆ ನನ್ ಬ್ಲಾಗಲ್ಲಿ :d ಹಾಹಾಹಾಹಾ ನನ್ನದೇ ಕನಸೊಂದು ಮತ್ತೆ ನೆನಪಿಗೆ ಬಂತು :)
ಒಳ್ಳೆ ಕನಸೊಂದಕ್ಕೆ ಪೆನ್ನಾಡಿಸಿದ್ದೀರ :) ಶುಭವಾಗಲಿ :d

ಮನಸು said...

ಬಹಳ ದಿನಗಳ ನಂತರ ಬರೆದಿರುವ ನನ್ನ ಲೇಖನವನ್ನು ಓದಿ, ನನ್ನ ಹುಚ್ಚುತನವನ್ನು ನೆನಸಿ ನಕ್ಕು ಕಾಮೆಂಟಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು

Badarinath Palavalli said...

ಕನಸೇ ಇರಲಿ ಸುಗುಣಮ್ಮ. ಒಂದು ದಿನ ಯಾಕೆ ನಿಜ ಆಗಬಾರದು ಅಂತೀನಿ? ಕನ್ನಡ ಸಿನಿಮಾದಲ್ಲಿ ನಟಿಯಾಗಿ ಮೆರೆಯುವ ಕಾಲ ನಿಮಗೂ ಬರುತ್ತಿರಬಹುದು ಸನಿಹ! ಅಂದಹಾಗೆ personal cameraman ಬೇಕಿತ್ತೇ?

mkeelar said...

ಒಹ್...ಕನಸಾ..ನಿಜ ಅಂತ ಕುತೂಹಲದಿಂದ ಓದ್ತಾ ಇದ್ದೆ ನನಗು ಒಮ್ಮೆಲೆ ಒಹ್ ಕನಸು ಅಂತ ಆಯ್ತು..:)

ಜಲನಯನ said...

hahaha idanna nodirlilla,,,nimma kanasu 10 nimishakkaadroo nija aagli...power FULL.