ಪೋಟೋ ಕೃಪೆ - ಮಲ್ಲಿಕಾರ್ಜುನ್
ತೂಕದ ತೆಕ್ಕೆಗೆ ಬೆನ್ನು ಕೊಡುತ
ಎಲ್ಲ ಸಾಗಿಸುವ ಗೂಡ್ಸ್ ಗಾಡಿಯಂತೆ
ಕಣ್ ಅಳತೆಯಲಿ ಸಾಗಬೇಕು
ಮಾಲೀಕನ ಅನುಸರಿಸುತ
ಪಾತ್ರೆ ಪಾಲಾಸಿನ ಜಾತ್ರೆಯಲಿ
ನಾಯಿ ಕುರಿಗಳ ಮೆರವಣಿಗೆ
ಮರ ಮೂಟೆಗಳ ಹೊರೆಗೆ
ಮನಸು ಮೌನ ದಿಬ್ಬಣದೆಡೆಗೆ
ಅವರು ಕೊಡುವ ತುತ್ತಿಗೆ
ನಮ್ಮದು ಭಾರ ಹೊರುವ ಗುತ್ತಿಗೆ
ನಮ್ಮ ಕಾಯ ಅವರ ಸಂಸಾರ
ಬೀದಿ ಬೀದಿ ಅಲೆದು ಹೂಡುವ ಬಿಡಾರ
ವೈಚಿತ್ರ್ಯ ಹವಾಮಾನದ ಅಡೆತಡೆಯಲಿ
ಸ್ವಸ್ಥತೆಯ ಏರುಪೇರಿನ ಹಂದರ
ಒಡೆಯನ ಮಾತು ನಮ್ಮ ಮೌನದಲಿ
ಹಾದಿ ಸವೆಸಲು ಹೆಜ್ಜೆಯಿಡಬೇಕು ನಿರಂತರ
6 comments:
ಚೆನ್ನಾಗಿದೆ ಕವನ, ಮೂಕಪ್ರಾಣಿಗಳ ಕಷ್ಟ ಗೊತ್ತೇ ಆಗೋಲ್ಲ ಆದ್ರೆ ನಾವುಗಳು ಅವುಗಳಿಗೆ ಭಾರ ಹೊರುಸ್ತನೇ ಇರ್ತೀವಿ.
-ಚೇತನ್
ಸುಗುಣ
ಕತ್ತೆಯ ದುಡಿತ ಮತ್ತು ಒದೆತ ಎರಡೂ ಜೋರಂತೆ...
ಚನ್ನಾಗಿದೆ ಕವನ..ಅದರಲ್ಲೂ ಈ ಸಾಲುಗಳು
ನಾಯಿ ಕುರಿಗಳ ಮೆರವಣಿಗೆ
ಮರ ಮೂಟೆಗಳ ಹೊರೆಗೆ
ಮನಸು ಮೌನ ದಿಬ್ಬಣದೆಡೆಗೆ
ತುಂಬಾ ಚೆನ್ನಾಗಿದೆ. ದೊಂಬರಾಟದವರ ಸಂಸಾರದ ಹೊರೆಯ ಹೊತ್ತು... ತುತ್ತಿಗಾಗಿ ತಮ್ಮ ಕಾಯ ದಂಡಿಸುವ ಈ ಕಾಯಕದ ಮೂಕರೋದನ!
ಇದು ಪ್ರತಿಮೆಯಷ್ಟೇ ಮೇಡಂ, ಸಂಗತಿ ನಮಗೂ ಅನ್ವರ್ಥ!
ಮಾನವನ ಶೋಷಣೆಗೆ ಮಿತಿಯುಂಟೆ?
ಕವನ ಚೆನ್ನಾಗಿದೆ.
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ....
Post a Comment