Thursday, February 20, 2014

ನಲ್ಲೆ..ಓರೆನೋಟ..!!

ಇತ್ತೀಚೆಗೆ ಕನ್ನಡ ಸಂಪದದಲ್ಲಿ ಬಂದಿದ್ದ ದ.ರಾ ಬೇಂದ್ರೆಯವರ "ನಾನು ಬಡವಿ ಆತ ಬಡವ" ಸಾಹಿತ್ಯಕ್ಕೆ ಸೂಕ್ತವಾಗಿ ಈ ಚಿತ್ರ ಬಳಸಿದ್ದರು.. ಆ ಮಾಹಿತಿಯನ್ನು ಸ್ನೇಹಿತೆಯೊಬ್ಬರು ಮುಖಪುಟದ ಗೋಡೆಯ ಮೇಲೆ  ಹಂಚಿಕೊಂಡಿದ್ದರು, ಆಗ ನನ್ನನ್ನು ಈ ಜೋಡಿಗಳ ಚಿತ್ರ ಹೆಚ್ಚು ಆಕರ್ಷಿಸಿ ಚಿತ್ರ ಬಿಡಿಸುವಂತಾಯಿತು. ಕೊನೆಗೆ ಚಿತ್ರವೊಂದೇ ಇದ್ದರೆ ಸಾಕೇ ಸಾಲುಗಳನು ಗೀಚಿಬಿಟ್ಟೆ.. ಸೂಕ್ತವಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರು ನನ್ನ ಭಾವಗಳ ಸಾಲು ನಿಮ್ಮೊಂದಿಗೆ


 ಬಿಡಿಸಿದ್ದು-ಗೀಚಿದ್ದು.. ನಾನೇ..!!

ನಲ್ಲೆ, ಮೌನದ ಮುಂಗುರುಳು
ನಿನ್ನ ನಯನಗಳ ತಬ್ಬಿರಲು
ನನ್ನಾಸರೆಯ ಹೆಗಲು ಹುಡುಕುತಿದೆ
ಆ ಮಿಂಚು ಕಣ್ ಗಳ ಹೊಂಬೆಳಕು

ನಲ್ಲೆ, ನಿನ್ನ ಸ್ಪರ್ಶದ ಒನಪು 
ಮಿರ ಮಿರ ಮಿರುಗಿ
ಎನ್ನ ಹೃದಯದೊಳು 
ಮೂಡಿದೆ ಒಲವ ಹೊಳಪು

ಬಾಹು ಬಂಧನದ ಸೆರೆ
ನೀ ಬಯಸಿ ಬಂದರೆ 
ಒಂದು ನವಿರು ಚುಂಬನ
ನನ್ನ ಸೆಳೆವ ಈ  ಕಿರುನೋಟಕೆ

5 comments:

sunaath said...

ಚಿತ್ರ ಹಾಗು ಕವನ ಒಂದಕ್ಕೊಂದು ಪೂರಕವಾಗಿವೆ, ಸುಂದರವಾಗಿವೆ.

Badarinath Palavalli said...

ಓದುತ್ತಲೇ ಒಮ್ಮೆಲೆ ಪುಳಕವು ಆವರಿಸಿಕೊಂಡಿತು. ಸರಸಮಯ ಚಿತ್ರವೂ ಅಮೂಲ್ಯವಾಗಿದೆ.

Anonymous said...

ಭಾವಗಳೇ ತುಂಬಿ ಕವಿತಾ ಚೆಲುವೆಯನ್ನು ರಚಿಸಿದೆ ಎಂದು ಭಾಸವಾಗುತ್ತದೆ ನಿಮ್ಮ ಸಾಲುಗಳ ಓದಿ. "ಮೌನದ ಮುಂಗುರುಳು" ನನ್ನ ಅತಿ ಹೆಚ್ಚು ಕಾಡಿದ್ದು. ತುಂಬಾ ಚೆನ್ನಾಗಿದೆ ಆ ಪ್ರಯೋಗ. ಮೆಚ್ಚುಗೆಗಳು ...

Pradeep Rao said...

Very nice drawing & very suitable poem.

prabhamani nagaraja said...

ಸು೦ದರ ಕಲ್ಪನೆ! ಭಾವಪೂರ್ಣ ಸಾಲುಗಳು! ಚಿತ್ರ ಹಾಗೂ ಕವನ ಎರಡೂ ಸೊಗಸಾಗಿವೆ ಸುಗುಣಾರವರೇ, ನನ್ನ ಬ್ಲಾಗ್ ಗೆ ಸ್ವಾಗತ.