Tuesday, March 3, 2009

ಕನಸು

ಕನಸು ಕಾಣಬೇಕೆಂದರೆ
ಕಲ್ಪನೆಯಲಿ ಮುಳುಗು!!

ಕನಸು ಕಲ್ಪನಾತೀತವಾದರೆ
ಕನಸೆಂಬುದೇ ಹುಸಿ!!

ಕನಸು ಮುದನೀಡುವುದಾದರೆ
ಕನಸಿನ ಜೊತೆ ಖುಷಿ

ಕನಸು ಆಶಾಗೋಪುರವಾದೂಡೆ
ಅದು ಆಕಾಂಕ್ಷೆಯೂಂದಿಗಿನ ಆಸೆ!!

ಕನಸು ನನಸಾದರೆ
ಆಸೆಯ ನಿಜ ನಿರೀಕ್ಷೆ

ಕನಸಲ್ಲಿ ದಿಗ್ಭ್ರಮೆಯಾದರೆ
ಅದು ಭಯಾನಕ

ಕನಸು ನುಚ್ಚುನೂರಾದರೆ
ಕನಸಿಗೆ ಬೆಲೆ ಇಲ್ಲ

ಕನಸು ರಮ್ಯತಾಣವಾದೊಡೆ
ಕನಸೆಂಬ ತಾಣದಿ ವಿಹಾರ

ಕನಸಿಗು ಮುನಿಸಾದರೆ
ಜೀವನವೇ ವ್ಯರ್ಥ

ಕನಸು ಮರುಕಳಿಸಿದರೆ
ಕನಸಲ್ಲೇ ಮರುಕ

ಕನಸು ಮರೆತುಹೋದರೆ
ಅದ ಮರೆತರೆ ಒಳಿತು

ಕನಸು ಕೆಡುಕೆನಿಸಿದೊಡೆ
ಕನವರಿಸುವುದ ಬಿಡುವುದೇ ಲೇಸು!!

ಕನಸು ಹಾಸ್ಯಾಸ್ಪದವಾದರೆ
ಕನಸಲ್ಲಿ ಮಗುವಂತೆ ನಗು!!

ಕನಸಲ್ಲಿ ಧನಿಕನಾದೊಡೆ
ಆ ಕನಸು ಕ್ಷಣಿಕ!!

ಕನಸಲ್ಲಿ ಕಲವರಿಸಿದರೆ
ಅದುವೇ ಮನದ ಮಾತು!!

ಕನಸು ಬರದೆ ಹೋದರೆ
ಗಾಢವಾಗಿ ನಿದ್ರಿಸು!!

11 comments:

mahesh said...

ಒ ಮನಸು ನಿನ್ನ ಸಿಹಿ ಕನಸು ಆಗಲಿ ನನಸು

ಸಿಮೆಂಟು ಮರಳಿನ ಮಧ್ಯೆ said...

ಮನಸು...

ನಿಮ್ಮ ಸಿಹಿಯಾದ ಕನಸಿಗೆ..

ಇನಿಯನ(ಪತಿರಾಯರು) ಹಾರೈಕೆಯಿದೆ..

ನಿಮ್ಮ ಕನಸು, ಆಸೆಗಳೆಲ್ಲ..

ನನಸಾಗಲೆಂಬುದು ನಮ್ಮ
ಅಭಿಲಾಷೆ ಕೂಡ...!

ಚಂದದ, ಸರಳ ಕವನ

ಅಭಿನಂದನೆಗಳು

shivu said...

ಮನಸು ಮೇಡಮ್,

ಮನಸ್ಸು ಅಂಥ ಹೆಸರಿಟ್ಟುಕೊಂಡು ಇಷ್ಟು ಸೊಗಸಾದ ಕನಸಿನ ಪದ್ಯ ಬರೆದರೆ ಹೇಗೆ....ನನಗೆ ಹೊಟ್ಟೆ ಕಿಚ್ಚಾಗುತ್ತದೆ....ಅದರಲ್ಲೂ ಆ ಫೋಟೊ ನೋಡಿದರೆ ಲವ್ ಮಾಡಿಬಿಡೋಣ ಅನ್ನಿಸುತ್ತೆ...[ಹೇಮಾಶ್ರಿಗೆ ಹೇಳಬೇಡಿ].......
ಕವನ ಇಷ್ಟವಾಯಿತು.....

ನನ್ನ ಬ್ಲಾಗಿನ ತಲೆಯೊಳಗಿನ ಭೂಪಟ ನೋಡಲು ಬರುತ್ತಿರಲ್ಲ....

ಡಾ. ಆಜಾದ್ said...

ಕನಸು
ಮನಸು
ಈ ಪರಿ ಹಾಸು
ಹೊದಿಸು ಮಲಗಿಸು
ಕನಸು ನನಸಾದರೆ
"ಮೃದುಮನಸು"

ಕನಸಿಗೆ
ಸೊಗಸಾದ
ಸಾಲುಸಿಕ್ಕಿವೆ
ಮೃದುಮನಸಿ-ನವರಿಂದ
....................JUST SIMPLY CATCHY

ಮನಸು said...

@ mahesh...
ಮನಸಿಗೆಕೋ ಮುನಿಸು
ಬೀಳದಾಗಿದೆ ಸಿಹಿ ಕನಸು
ಇನೆಲ್ಲಿಯ ನನಸು
ನೀನೆ ಹೇಳು ಮಹೇಶು

ಮನಸು said...

ಪ್ರಕಾಶಣ್ಣ
ನಿಮ್ಮ ಹಾರೈಕೆಯಂತೆ ಆಗಲಿ... ಹೀಗೆ ನಿಮ್ಮ ಬೇಟಿ , ಜೋತೆಗಿಸ್ಟು ಮಾತು ನಮ್ಮ ನಿಮ್ಮ ನಡುವೆ ಇರಲಿ..
ಆಸೆಯ ನೀರೀಕ್ಷೆಯೇನು ಇಲ್ಲ ಹಾಗೆ ಕನಸಿನ ಕಲ್ಪನೆ ಅಸ್ಟೇ...
ನಿಮ್ಮ ಬೇಟಿ ಕುಶಿ ನೀಡುತ್ತೆ.. ಧನ್ಯವಾದಗಳು..

ಶಿವೂ ಸರ್,
ಹ ಹ ಆ ಫೋಟೊ ನೋಡಿ ಲವ್ ಮಾಡಿಬಿಡಿ ಹೇಮಾರವರು ಏನು ಹೇಳುವುದಿಲ್ಲ. ಏಕೆ ಗೊತ್ತೇ ನೀವು ಲವ್ ಮಾಡಬೇಕೆನಿಸಿದ್ದು ಆ ಫೋಟವನ್ನ ಆ ಫೋಟೊದಲ್ಲಿ ಇರುವವಳನ್ನಲ್ಲವಲ್ಲ ....ಹ ಹ ಹ
ನನ್ನ ಈ ತರಲೆ ಕನಸು ಇಸ್ಟವಾದದಕ್ಕೆ ಧನ್ಯಾವದಗಳು..

ಮನಸು said...

ನಿಮ್ಮ ಕವನ ಸಾಲುಗಳಿಗಿಂತ ನನ್ನ ಸಾಲುಗಳೇ... ನೀವು ಎಂದೆಂದಿಗೂ ಸೊಗಸಾದ ಕವನಗಾರರು ನಿಮ್ಮಿಂದ ಕಲಿಯೋ ಮನಸ್ಸು ಮಾತ್ರ ಮ್ರುದುವಾಗಿದೆ ಹೀಗೆ ಬರುತ್ತಲಿರಿ ...
ಕಲಿಯೋ ಆಸೆ ಮೂಡಿಸಿದೆ ಮನಸು
ಅದ ಕಲಿತರೆ ಜೀವನ ಸೊಗಸು
ಸೊಗಸುತನಕ್ಕೆ ನಿರೀಕ್ಷಿಸು
ನಿರೀಕ್ಷೆಯೇ ನನ್ನ ಕನಸು
ಆ ಕನಸು ಎಂದು ನನಸು
ನನಸೋಮ್ಮೆ ನನ್ನ ರಮಿಸು
ರಮಿಸಲು ಕಾದಿದೆ ಈ ಮ್ರುದುಮನಸು
ಮತ್ತೊಮ್ಮೆ ನಿಮ್ಮ ಸಾಲುಗಳ ನೋಡಿ ಮೂಡಿದೆ ಈ ಸಾಲುಗಳ ತಿನಿಸು...
ಇಷ್ಟವಾದರೆ ಸ್ವೀಕರಿಸು...ಇಲ್ಲವಾದರೆ ಕ್ಷಮಿಸು ...

ಹ ಹ ಸರ್, ಸುಮ್ಮನೆ ನಿಮ್ಮ ಸಾಲುಗಳ ನೋಡಿ ಹಾಗೆ ಗೀಚಿದೆ...ಧನ್ಯವಾದಗಳು..

ಶಿವಪ್ರಕಾಶ್ said...

ಅರಿತು ಮಾಡುವುದು ಮನಸು,
ಅರಿಯದೆ ಕಾಣುವುದು ಕನಸು.
ನಮ್ಮ ಅಧಿಕಾರವೆನಿದ್ದರು ಮನಸಿನ ಮೇಲೆ,
ಕನಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವೇ ?.
ನಿಮ್ಮ ಕನಸಿನ ಕವನ ಚನ್ನಾಗಿದೆ.
ಅಭಿನಂದನೆಗಳು.

Gurumurthy Hegde said...

ಓ ಮನಸು,
ಕಾಣುತ್ತೀರಿ ಕನಸು,
ಮಾಡ್ಬೇಡಿ ಮುನಿಸು
ಇಲ್ಲದಿರೆ ನೊಂದುಕೊಂಡಾರು ನಿಮ್ಮ ಮಹೇಶು
ಸರಳ ಸುಂದರ ಕವನ,
ಹೀಗೆ ಬರೆಯುತ್ತಿರಿ.

ಮನಸು said...

ಶಿವಪ್ರಕಾಶ್,
ನಿಮ್ಮ ಕವನಗಳ ಸಾಲು ಕೂಡ ತುಂಬಾ ಚೆನ್ನಾಗಿದೆ. ನಿಜ ಕೂಡ ಮನಸಿನ ಮೇಲೆ ಹಿಡಿತ ಸಾದಿಸಿದರೆ ಒಳ್ಳೆಯದು ಅಲ್ಲವೇ?
ಧನ್ಯವಾದಗಳು ಹೀಗೆ ನಿಮ್ಮ ಅನಿಸಿಕೆಗಳ ಸಾಲುಗಳು ಮನಸಾರೆ ಮೂಡಲಿ.

ಗುರು
ಧನ್ಯವಾದಗಳು ಮನಸಿಗೆಕೆ ಮುನಿಸು
ಕನಸು ಕಲ್ಪನೆ ಅಷ್ಟೇ ಹ ಹ ಹ
ನಿಮ್ಮ ಅನಿಸಿಕೆಗಳು ಹೀಗೆ ಬರುತ್ತಲಿರಲಿ

Santhosh Chidambar said...

wow.. chennagide...