ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು....
ಚೈತ್ರ ರಥವೇರಿ ಬರುವಾಗ
ಹೊಸಬಾಳ ಹೊಸ್ತಿಲಲಿ ನಿಂತಾಗ
ಹಳೆಯದನೆಲ್ಲ ಹಿಂದಿಕ್ಕಿ.....
ನಿಸರ್ಗದ ಹೊಸತನ್ನು ಸ್ವೀಕರಿಸು
ಎಂದೇಳುವ.. ಈ ದಿನವೇ...ಯುಗಾದಿ
ಮೈಗೆ ಎಣ್ಣೆ ಹಚ್ಚಿ, ಬೇವಿನನೀರಿಂದ
ಮೈಯ ಕಲ್ಮಶ ತೊಳೆದು
ಬೇವು-ಬೆಲ್ಲ ಸಿಹಿ-ಕಹಿಯನು
ಸಮನಾಗಿ ಎಲ್ಲರಿಗೆ ಹಂಚುತ್ತ
ಸುಖ-ದುಃಖದ ಸಂಕೇತವಾಗಿರುವುದೇ ಯುಗಾದಿ...
ಬಾಗಿಲಿಗೆ ತೋರಣವ ಕಟ್ಟಿ
ನೆಲಕೆ ರಂಗೋಲಿಯ ಮೂಡಿಸಿ
ಹೊಸಬಟ್ಟೆ, ಸಿಹಿ ಊಟ
ಎಲ್ಲರ ಮನೆ ಮನೆಯಲಿ
ಹೊಸತು ಹರುಷ ತುಂಬಿಬರಲು...ಅದುವೇ ಯುಗಾದಿ
ವಸಂತಕಾಲದ ಹಸಿರ ಚಿಗುರು ಸವಿದ
ಕೋಗಿಲೆಯು ಸೊಸುವ ಹಿಂಪಾದ ಕಂಠನಾದ...
ಮೊಗ್ಗು ಹೂವಾಗಲು ದುಂಬಿಗೆ ಝೇಂಕಾರ
ನಿಸರ್ಗ ಸೃಷ್ಟಿಯೇ ಪ್ರಾಯತುಂಬಿ
ಮಿರಿಮಿರಿ ಬೆಳಕ ಸೂಸುವ ಈ ದಿನವೇ ಯುಗಾದಿ....
ದೇಗುಲಗಳಲಿ ಮುಂಜಾವಿನ ಪೂಜೆ
ಸುಗಂಧದ್ರವ್ಯಗಳೊಂದಿಗೆ ಘಂಟಾನಾದ
ರೈತ ತನ್ನ ಹಸು-ಕರುಗಳ ಸಿಂಗರಿಸಿ
ಮಿರಿ ಮಿರಿ ಮಿಂಚಿಸಿ ಪೂಜೆಗೈವನು..
ಮನುಕುಲಕೆ ಹೊಸ ಆಯಾಮ ನೀಡುವದಿನವೇ..ಈ ಯುಗಾದಿ...
ನಿಮ್ಮವರೆ ಆದ...
ಚೈತ್ರ ರಥವೇರಿ ಬರುವಾಗ
ಹೊಸಬಾಳ ಹೊಸ್ತಿಲಲಿ ನಿಂತಾಗ
ಹಳೆಯದನೆಲ್ಲ ಹಿಂದಿಕ್ಕಿ.....
ನಿಸರ್ಗದ ಹೊಸತನ್ನು ಸ್ವೀಕರಿಸು
ಎಂದೇಳುವ.. ಈ ದಿನವೇ...ಯುಗಾದಿ
ಮೈಗೆ ಎಣ್ಣೆ ಹಚ್ಚಿ, ಬೇವಿನನೀರಿಂದ
ಮೈಯ ಕಲ್ಮಶ ತೊಳೆದು
ಬೇವು-ಬೆಲ್ಲ ಸಿಹಿ-ಕಹಿಯನು
ಸಮನಾಗಿ ಎಲ್ಲರಿಗೆ ಹಂಚುತ್ತ
ಸುಖ-ದುಃಖದ ಸಂಕೇತವಾಗಿರುವುದೇ ಯುಗಾದಿ...
ಬಾಗಿಲಿಗೆ ತೋರಣವ ಕಟ್ಟಿ
ನೆಲಕೆ ರಂಗೋಲಿಯ ಮೂಡಿಸಿ
ಹೊಸಬಟ್ಟೆ, ಸಿಹಿ ಊಟ
ಎಲ್ಲರ ಮನೆ ಮನೆಯಲಿ
ಹೊಸತು ಹರುಷ ತುಂಬಿಬರಲು...ಅದುವೇ ಯುಗಾದಿ
ವಸಂತಕಾಲದ ಹಸಿರ ಚಿಗುರು ಸವಿದ
ಕೋಗಿಲೆಯು ಸೊಸುವ ಹಿಂಪಾದ ಕಂಠನಾದ...
ಮೊಗ್ಗು ಹೂವಾಗಲು ದುಂಬಿಗೆ ಝೇಂಕಾರ
ನಿಸರ್ಗ ಸೃಷ್ಟಿಯೇ ಪ್ರಾಯತುಂಬಿ
ಮಿರಿಮಿರಿ ಬೆಳಕ ಸೂಸುವ ಈ ದಿನವೇ ಯುಗಾದಿ....
ದೇಗುಲಗಳಲಿ ಮುಂಜಾವಿನ ಪೂಜೆ
ಸುಗಂಧದ್ರವ್ಯಗಳೊಂದಿಗೆ ಘಂಟಾನಾದ
ರೈತ ತನ್ನ ಹಸು-ಕರುಗಳ ಸಿಂಗರಿಸಿ
ಮಿರಿ ಮಿರಿ ಮಿಂಚಿಸಿ ಪೂಜೆಗೈವನು..
ಮನುಕುಲಕೆ ಹೊಸ ಆಯಾಮ ನೀಡುವದಿನವೇ..ಈ ಯುಗಾದಿ...
ಹೊಸ ವರ್ಷದ ಹೊಸ್ತಿಲಿಗೆ ಕಾಲಿಡುತ್ತಲಿರುವ ತಮ್ಮೆಲ್ಲರಿಗು ನಮ್ಮ ಶುಭಾಶಯಗಳು... ನಗು ನಗುತ ಬಾಳೋಣ ದ್ವೇಷ ಅಸೊಯೆ ಎಲ್ಲವನು ಮರೆತು ಬೇವು-ಬೆಲ್ಲದಿ ಸುಖ ದುಃಖವ ಸಮನಾಗಿ ಭಾವಿಸಿ.... ಎಲ್ಲರಲಿ ಸಹೃದಯಿಗಳಾಗಿ ಬಾಳೋಣ..
ನಿಮ್ಮವರೆ ಆದ...
ಮನಸು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು...
ವಂದನೆಗಳು..ಶುಭದಿನ....
9 comments:
ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ, ಹೊಸ ಹುರುಪನ್ನು ತು೦ಬಲಿ ಹೊಸ ಸ೦ವತ್ಸರದಲ್ಲಿ ನಿಮ್ಮೆಲ್ಲ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಸುಖಶಾ೦ತಿ, ನೆಮ್ಮದಿ, ಉಲ್ಲಾಸ, ಉತ್ಸಾಹ ಸದಾ ನಿಮ್ಮ ಮನೆ-ಮನದಲ್ಲಿ ತು೦ಬಿ ತುಳುಕುತ್ತಿರಲಿ
ಎ೦ದು ಆತ್ಮೀಯವಾಗಿ ಹಾರೈಸುತ್ತೇನೆ.
K.N.ಪರಾ೦ಜಪೆ
http://www.nirpars.blogspot.com
email: paraanjape@gmail.com
ಮನಸು ಅವರೇ,
ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ,
ಯುಗಾದಿ ಹಬ್ಬದ ಶುಭಾಶಯಗಳು,
ಹೊಸ ವರುಷ ಹೊಸತನ್ನು ತರಲಿ,
ಧನ್ಯವಾದಗಳು
ಮನಸು ಮೇಡಮ್,
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು...ಹೊಸ ವರ್ಷವು ನಿಮೆಗಲ್ಲರಿಗೂ ಸಂತೋಷ ತರಲಿ..
ಧನ್ಯವಾದಗಳು....
ಆತ್ಮೀಯ ಮನಸು,
ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ,
ಯುಗಾದಿ ಹಬ್ಬದ ಶುಭಾಶಯಗಳು,
ಹೊಸ ವರುಷ ಹೊಸತನ್ನು ತರಲಿ,
ಧನ್ಯವಾದಗಳು
ಮನಸು..
ಸುಂದರ ಪದಗಳಲ್ಲಿ ಯುಗಾದಿಯ ಹಬ್ಬ
ಚಂದವಾಗಿ ಬಿಡಿಸಿದ್ದೀರಿ...
ನಿಮಗೂ ...
ನಿಮ್ಮ ಮನೆಯವರಿಗೆಲ್ಲರಿಗೂ..
ನಿಮ್ಮ ಅಭಿಮಾನಿಗಳಿಗೆಲ್ಲರಿಗೂ..
ಯುಗಾದಿಯ ಶುಭಾಶಯಗಳು...
ಮೃದು ಮನಸು,
ಯುಗಾದಿಯ ವರ್ಣನೆಯನ್ನು ಸುಂದರವಾಗಿ ಮಾಡಿರುವಿರಿ. ಅದಕ್ಕೆ ತಕ್ಕದಾದ ಚಿತ್ರವನ್ನೂ ನೀಡಿರುವಿರಿ.
ನಿಮಗೆ ಹಾಗೂ ನಿಮ್ಮ ಕುಟುಂಬವರ್ಗಕ್ಕೆ ಯುಗಾದಿಯ ಹಾರ್ದಿಕ ಶುಭಾಶಯಗಳು.
ನಮಸ್ಕಾರ ( ) - ನಿಮ್ಮ ಕವನ ಮತ್ತು ಯುಗಾದಿ ಹಾರೈಕೆ ಇಷ್ಟವಾಯಿತು. ನಿಮಗೂ, ನಿಮ್ಮ ಕುಟುಂಬದವರಿಗೂ ಈ ನೂತನ ವರುಷ ಹರ್ಷದಾಯಕವಾಗಿರಲೆಂದು ಹಾರೈಸುತ್ತೇವೆ.
ಬೆಂಗಳೂರಲ್ಲಿರಲಿಲ್ಲ, ಹೀಗಾಗಿ ಬರುವುದು ತಡವಾಯಿತು... ತಡವಾದರೂ ಸರಿ, ತಮಗೂ ಯುಗಾದಿ ಹಬ್ಬದ ಶುಭಾಶಯಗಳು.. ಯುಗಾದಿಯ ಆಚರಣೆಯ ಎಲ್ಲ ಮಜಲುಗಳನ್ನೂ ಚೆನ್ನಾಗಿ ತೆರೆದಿಟ್ಟಿದ್ದೀರಿ, ಕವನ ಚೆನ್ನಾಗಿದೆ...
ಎಲ್ಲರಿಗು ನಮ್ಮ ಮನಪೂರ್ವಕ ಧನ್ಯವಾದಗಳು.. ಹೊಸ ವರುಷ ಹೊಸತು ತರಲೆಂದು ಆಶಿಸುತ್ತೇವೆ..
Post a Comment