Tuesday, March 17, 2009

ಎಲ್ಲರು ಒಮ್ಮೆ ಸ್ಮರಿಸೋಣ ಬನ್ನಿ..

ಕನ್ನಡದ ಹಿರಿಮೆಗೆ ಮಹಾನ್ ಚೇತನರಾದವರನೊಮ್ಮೆ ನೆನೆದು ಪಾವನರಾಗುವ ಬನ್ನಿ..
ಸಾಹಿತ್ಯದ ಮೂಲಕ ನಮ್ಮ ಸಂಸ್ಕೃತಿ ಬೆಳೆಸಿದ ಇಂದಿಗೂ ಬೇಳೆಸುತ್ತಿರುವ ನಮ್ಮ ಮಹಾನ್ ಕವಿಗಳಿಗೆ ನಮ್ಮ ಹೃದಯಪೂರ್ವಕ ನಮನಗಳು. ಮಹಾನ್ ಚೇತನಗಳಲ್ಲಿ ಪು.ತಿ.ನ ಹಾಗು ಡಿ.ವಿ.ಜಿ ಎಂದೇ ಹೆಸರುವಾಸಿಯಾಗಿರುವ ಕನ್ನಡದ ಶ್ರೇಷ್ಠಕವಿಗಳಲ್ಲಿ ಇವರೂ ಸಹ ಅತ್ಯುತ್ತಮರು. ಇವರುಗಳ ಜನುಮದಿನದ ನೆನಪು ಇಂದು, ಅವರ ಸಾಹಿತ್ಯಗಳಿಂದ ಅವರು ಎಂದೆಂದಿಗೊ ಜೀವಂತರಾಗೇ ಇರುತ್ತಾರೆ......ಮತ್ತೊಮ್ಮೆ ಹುಟ್ಟಿಬರಲಿ ಈ ದಿಗ್ಗಜರು....ಕರುನಾಡ ಸಿರಿ ಬೆಳಗಲು..
ಪು.ತಿ.ನ- ಪುರೋಹಿತ ತಿರುನಾರಾಯಣ ನರಸಿಂಹಾಚಾರ್
ಊರು-ಮೇಲುಕೋಟೆ
ಜನನ-ಮಾರ್ಚ್ ೧೭ ೧೯೦೫
ಅವರ ನೆನಪಿನಲಿ ಇಲ್ಲೊಂದು ಅವರೇ ಬರೆದ ಪುಟ್ಟ ಕವನ
ಲಘುವಾಗೆಲೆ ಮನ
ಗೆಲವಾಗೆಲೆ ಮನ
ಹಾರು ನನ್ನ ಬಿಟ್ಟು
ಹಾರಿ ಹರಿಯ ಮುಟ್ಟು

ನನಗಂಟಲು ನೀನಾಗುವೆ ಕಶ್ಮಲ
ನನ್ನ ತೊರೆಯೆ ನೀ ನಿರ್ಮಲ ನಿಶ್ಕಳ
ಹರಿಯು ನನ್ನ ಬಿಟ್ಟು
ಮುಂಬರಿದು ಹರಿಯ ಮುಟ್ಟು
ಲಘುವಾಗೆಲೆ ಮನ

ನೀಲದಾಗಸದ ಅರಹೊಳು ಹಾರುತ
ಅಂಚೆಯಂತೆ ಮುಗಿಲಂಚನು ಸೇರುತ
ಕ್ಷೀರಾಬ್ಧಿಷಾಯಿ ಶಾಮಸುಂದರನ
ಉಸಿರೊಳಾಡು ನೀ ಅವನುಸಿರಾಗುತ
ಹಾರಿ ಹರಿಯ ಮುಟ್ಟು
ಹಾರಿ ಹರಿಯ ಮುಟ್ಟು
ಲಘುವಾಗೆಲೆ ಮನ

ಬೆಳಕಿಗೊಲಿದು ಬಿರಿದಲರಿ ನೆಲರುಬರೆ
ಪೋಗುಸಂಗಡೆಲೆ ನೀ ಮನವೆ
ಮುಗ್ಧರುಲಿವ ನಗೆ ಮಾತುಗಳಾಲಿಸಿ
ನಂದಗೋಕುಲವ ನೆನೆ ಮನವೆ
ಲಘುವಾಗೆಲೆ ಮನ
***********************
ಮತ್ತೊಬ್ಬ ಮಹಾನ್ ಚೇತನ ಡಾ. ಡಿ.ವಿ.ಜಿ
ಡಿ.ವಿ.ಜಿ-ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಊರು-ದೇವನಹಳ್ಳಿ ಹತ್ತಿರದ ಸೋಮತ್ತನಹಳ್ಳಿ
ಜನನ-ಮಾರ್ಚ್ ೧೭,೧೮೮೭
ಕವನದೊಂದಿಗೆ ಅವರ ಮನನ
ಏನೀ ಭಯಭ್ರಾಂತಿಯೇ ನೀಲಾಂಬರೇ
ಏನಂಗವಿಭ್ರಾಂತಿಯೇ ಅಶಾಂತಿಯೇ
ನೀಲಾಂಬರದ ನಿರಿಯಾಲಯತನಗೆಂದು
ಚಳಿಗಾರರುಹಿದರೆ ಮನೋಹರೆ

ಹೇಮಾಂಬರಾಗಕೆ ಶಾಮಾಂಬರಚ್ಚನಿ
ರಮಣೀಯಕವೆಂದು ಭಾಮಿನಿಯಿಂಬಗೆದು
ಕ್ಷೌಮವ ಕೊಳ್ಳಲಿ ಭೀಮೋತ್ಪಾತವಿದೇನೆ
ಸೌಮ್ಯನಾಯಕಿ ವರಸ್ವಾಮಿಯೆ ಗತಿಯಲ್ತೆ

ಬೆಚ್ಚಿಸಿ ನಿನ್ನನು ನಿಶ್ಚೇಲಗೈದು
ತನ್ನಕ್ಷಿಗೆ ನಿನ್ನ ಸಿಂಗಾರದೂಟವನುಣಿಸೆ
ವ್ರುಶ್ಚಿಕಮಂತ್ರವನುಚ್ಚರಿಸಿದನೇನೆ
ಅಚ್ಚುಮೆಚ್ಚಿನ ನಿನ್ನ ಮಾಯಾವಿ ಕೇಶವ

10 comments:

ಡಾ. ಆಜಾದ್ said...

ಮನಸೇ,
ಪುತಿನ, ತೀನಂಶ್ರೀ, ಡಿ.ವಿ.ಜಿ, ಕವನಗಳಿಗೆ ಹೊಸ ಆಯಾಮಗಳನ್ನು ಕೊಟ್ಟವರು ಅನಕೃ, ತ್ರಿವೇಣಿ, ಎಸ್ ಎಲ್ ಭೈರಪ್ಪ ಕಾದಂಬರಿಗಳ ಮತ್ತೊಂದು ಹೆಸರಾದವರು, ಕಂಬಾರ, ಕಾರ್ನಾಡ,ಕೈಲಾಸಂ ನಾಟಕಗಳ ನಡಿಗೆಯಾದವರು, ಗೋರೂರು, ಮಾಸ್ತಿ ಕಥೆಗಳ ಆಸ್ತಿ, ಕವನ ಚುಟುಕ ಮಕ್ಕಳ ಸಾಹಿತ್ಯದ ಪರ್ಯಾಯ-ಜಿ.ಎಸ್.ಎಸ್, ಜಿ.ಪಿ.ರಾಜರತ್ನಂ, ವ್ಯಾಸರಾವ್, ದೊಡ್ಡರಂಗೇಗೌಡ, ನಿಸಾರ್, ಅಕ್ಬರ ಆಲಿ, ರತ್ನಗಳು, ಹಾಸ್ಯ ಸಾಹಿತ್ಯ ವೆಂದರೆ ನೆನಪಾಗುವ ಬೀಚಿ, ..ಹೀಗೆ..ನಮ್ಮ ನೆನಪು ಅಥವಾ ಸಾಮಾನ್ಯ ಅರಿವಳಿಕೆ ಕೊರತೆಯಿಂದಾಗಿ ನೆನಪಿಸಿಕೊಳ್ಳಲಾಗುತ್ತಿಲ್ಲದ ಎಷ್ಟೋ ಕವಿವರ್ಯರು....
ನಿಜಕ್ಕೆ ಸಿರಿಗನ್ನಡ...ಬಹು ಸಿರಿಗನ್ನಡ...ಏಳೇಳು ಸಾಹಿತ್ಯದ ಅತ್ಯುನ್ನದ ರಾಷ್ಟ್ರೀಯ ಪುರಸ್ಕಾರ ಪಡೆದುದರಲ್ಲಿ ಅತಿಶಯೋಕ್ತಿ ಇಲ್ಲ.
ನಿಮ್ಮ ಈ ಕವನಗಳು...ನನ್ನ ಸ್ಕೂಲಿನ ದಿನಗಳ ಕನ್ನಡ ಪೀರಿಯಡ್ ಗೆ ಕೊಂಡೊಯ್ದವು...
ವಿವಿಧ ವಿಚಾರಗಳನ್ನು..ಸಮರ್ಥವಾಗಿ ಬ್ಲಾಗಿಸುತ್ತಿದ್ದೀರ....ಬಹುಪರಾಕ್....

Parisarapremi said...

laghuvaagele mana - ee haadu Raj Kumar haadirOdu keLideeni... bahaLa uttamavaada saahitya... :-)

Gurumurthy Hegde said...

ನೆನಪಿಸಿದ್ದಕ್ಕೆ ಧನ್ಯವಾದಗಳು ಮನಸು, ಕನ್ನಡದ ಮೇರು ಪರ್ವತದಂತಿರುವ ಅವರಿಗೆ ನನ್ನ ನಮನಗಳು ಈ ಮೂಲಕ

shivu said...

ಮನಸು ಮೇಡಮ್,

ಡಿ.ವಿ.ಜಿ ಮತ್ತು ಪು.ತಿ.ನ ರವರ ಹುಟ್ಟಿದ ದಿನ ಮಾರ್ಚ್ ೧೭ ಅಂತ ತಿಳಿದು ತುಂಬಾ ಖುಷಿಯಾಯಿತು....ಅವರ ಮೆಚ್ಚಿನ ಕವನಗಳನ್ನು ಹಾಕಿದ್ದೀರಿ...ಅಂತ ಮಹಾನ್ ಕವಿಗಳನ್ನು ಈ ರೀತಿ ನೆನಪಿಸಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಸು...

ನಿಮ್ಮ ಲೇಖನಕ್ಕೆ ನಾನು ಪ್ರತಿಕ್ರಿಯೆ ಕೊಡಲಿಲ್ಲ ಏಕೆ..?
ಗೊತ್ತಾಗುತ್ತಿಲ್ಲ..
ತಡವಾಗಿ ಬಂದೆ.. ಕ್ಷಮೆ ಇರಲಿ..

ಧೀಮಂತ ಕವಿ, ದಾರ್ಶನಿಕನನ್ನು ನೆನಪಿಸಿದ್ದೀರಿ..

ಮಂಕುತಿಮ್ಮನ ಕಗ್ಗದಲ್ಲಿ..
ಆಧ್ಯಾತ್ಮದ ಎಲ್ಲ ಸಾರಗಳಿವೆ..
ನನಗೆ ಬಹಳ ಇಷ್ಟ ಅದು..

ಧನ್ಯವಾದಗಳು...

sunaath said...

ಮನಸೇ, ಓ ಮನಸೇ,
ಪುತಿನ ಹಾಗೂ ಡಿವಿಜಿಯವರ ಜನ್ಮದಿನಗಳನ್ನು ಸ್ಮರಿಸಿದ್ದಕ್ಕಾಗಿ, ನಮ್ಮೆಲ್ಲರ ಗಮನಕ್ಕೆ ತಂದದ್ದಕ್ಕಾಗಿ ನಿಮಗೆ ಧನ್ಯವಾದಗಳು. ಇವರ ಎರಡು ಉತ್ತಮ ಕವನಗಳ ಕೊಡುಗೆಯನ್ನೂ ಕೊಟ್ಟಿದ್ದೀರಿ.
ನಿಮಗೆ ಅನೇಕ ಧನ್ಯವಾದಗಳು.

ಮನಸು said...

ಆಜಾದ್ ಸರ್,
ಹೊನ್ನ ಪುಷ್ಪಗಳು ರಸದೌತಣ ತುಂಬಿಹೋಗಿದ್ದಾರೆ ಅದ ಸವಿಯೋ ಜೇನುಗಳು ನಾವಾದರೆ ಒಳ್ಳೆಯದು.. ಮಹಾನ್ ಚೇತನರ ಕೊಡುಗೆ ಅಪಾರ ನಾವಂತೂ ಅಂತಹದನೆಲ್ಲ ಮಾಡಲು ಸಾಧ್ಯವಾಗದಿದ್ದರು ಅವರನ್ನ ನೆನಪು ಮಾಡುವುದು ಒಳ್ಳೆಯದು..
ಅರುಣ್,
ಹೌದು ಆ ಹಾಡು ರಾಜ್ ಕುಮಾರ್ ಆಡಿರುವುದೇ.. ಹೀಗೆ ಬರುತ್ತಲಿರಿ..

ಮನಸು said...

ಗುರು,ಶಿವೂ ಸರ್,ಸುನಾಥ್ ಸರ್,
ನೆನಪಿನ ದೋಣಿಯಲಿ ಸಾಗಿದಕ್ಕೆ ಧನ್ಯವಾದಗಳು..
ಪ್ರಕಾಶ್ ಸರ್,
ಹ ಹ ತೊಂದರೆ ಇಲ್ಲ ತಡವಾಗಿಯಾದರೂ ಬೇಟೀಇತ್ತಿರಲ್ಲ ಕವಿವರ್ಯರು ಧನ್ಯರಾದರು..
ಇದೆ ೧೭ರಂದು ಎಸ್,ಎಸ್, ಎಸ್ ಸಮಿತಿಯವರು ತಬ್ಬಿಕೊಳ್ಳೊ ವಿಶ್ವವನು ಎಂದು ಬೆಂಗಳೂರಿನಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದರು ಬಹಳ ಚೆನ್ನಾಗಿತ್ತು ನಾ ಫೋಟೋ ಹಾಗು ವಿಡಿಯೋ ನೋಡಿದ್ದೇ .. ನೀವುಗಳು ಅಂತಹ ಕಾರ್ಯಕ್ರಮಕ್ಕೆ ಹೋದರೆ ಚೆನ್ನಾಗಿರುತೆ..ನಿಮಗೂ ಇಷ್ಟವಾಗಬಹುದು ಅಂಥ ಕಾರ್ಯಕ್ರಮಗಳು..
ಎಲ್ಲರೋಳಗೊಂದಾಗು ಮಂಕ್ಕು ತಿಮ್ಮ ಎಂಬ ಮಾತಿನಿಂದ ಎಲ್ಲರಿಗು ವಂದಿಸುತ್ತಾ ನಮಸ್ಕರಿಸುತ್ತೇನೆ.. ಹೀಗೆ ಬರುತ್ತಲಿರಿ..
ಧನ್ಯವಾದಗಳು..

Anonymous said...

ಮನಸು,

ನಿಮ್ಮ ಕನ್ನಡ ಅಭಿಮಾನ ಮೆಚ್ಚಿದೆ.

ಅದಕ್ಕೆ ಅಭಿನಂದನೆಗಳು.

ಮನಸು said...

ನೀಲಿ ಹೂ
ಕ್ಷಮೆ ಇರಲಿ ತುಂಬಾ ತಡವಾಗಿ ನಿಮಗೆ ಪ್ರತಿಕ್ರಿಯಿಸುತ್ತಲಿದ್ದೇನೆ.. ನಿಮ್ಮ ಮೆಚ್ಚುಗೆಗೆ ನಾನು ಪಾತ್ರಳೋ ಇಲ್ಲವೊ ತಿಳಿದಿಲ್ಲ... ಆದರು ಧನ್ಯವಾದಗಳು... ಹೀಗೆ ನಮಲ್ಲಿ ಬಂದು ಸರಿತಪ್ಪಿನ ಅರಿವು ಮೂಡಿಸಿ ಎಂದೆಳುತ ನನ್ನ ನಮಸ್ಕಾರಗಳನ್ನು ತಿಳಿಸುತ್ತೇನೆ..
ವಂದನೆಗಳು..ಭೇಟಿ ಸದಾ ಇರಲಿ..