Wednesday, April 1, 2009

ನಡೆದಾಡುವ ದೇವರಿಗೆ ನಮ್ಮ ಶುಭಾಶಯಗಳು..

ಇಂದು ಶ್ರಿ ಶಿವಕುಮಾರ ಸ್ವಾಮಿಗಳಾ ಜನ್ಮದಿನ ಅವರನ್ನು ನೆನೆಯುತ್ತ ಸಾಧನಾ ಶೀಲರಾದ, ಯಾವುದೆ ಹೆಸರು, ಬಿರುದು ಬಯಸದ ಶ್ರಿಗಳಿ ನಮ್ಮ ಹೃತ್ಪೂರ್ವಕ ನಮನಗಳು..
ಅವರ ಜನನ ಏಪ್ರಿಲ್ ೧ ೧೯೦೭, ಹುಟ್ಟೂರು ವೀರಾಪುರ.
ನಮ್ಮ ಮನೆಯಲ್ಲಿ ಪೂಜಿಸೊ ಶ್ರಿಗಳ ಪಾದುಕೆ


ಶ್ರಿಗಳ ಆಸನ ಅವರು ಮಲಗೊ ಕೊಠಡಿ

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ
ಇಲ್ಲಿ ಸಲ್ಲುವರು ಅಲ್ಲಿಯೊ ಸಲ್ಲುವರಯ್ಯ
ಇಲ್ಲಿ ಸಲ್ಲದವರು ಅಲ್ಲಿಯೊ ಸಲ್ಲರಯ್ಯ
ಕೂಡಲಸಂಗಮದೇವ.... ಬಸವಣ್ಣನವರ ವಚನದಂತೆ ಶ್ರಿಗಳು ಎಲ್ಲೆಲ್ಲಿಯು ಸಲ್ಲುವರು ಎಲ್ಲರಿಗು ಸಲ್ಲುವರು
ಅವರ ಜೀವನದ ಸಾಧನೆ ಅವರ ಧ್ಯೇಯ ಎಲ್ಲವೊ ಒಳಿತಿನೆಡೆಗೆ ಸಮಾಜದ ಉದ್ದಾರಕ್ಕಾಗೇ ಮೀಸಲು..ಇಂತಹ ಮಹಾನ್ ಚೇತನರನ್ನು ನಾನು ಮನಸಾರೆ ನೆನೆದು ಅವರ ಸಾಧನೆ ನಮಗೆ ದಾರಿದೀಪವಾಗಲೆಂದು ಬಯಸುತ್ತಾ ಅವರ ಪಾದಾರವಿಂದಕ್ಕೆ ಮನದಲ್ಲೇ ಎರಗುತ್ತಾ ನಮಿಸುತ್ತೆನೆ...
ಗುರುಗಳಿಗೆ ನಮಿಸುತ್ತಾ
ನಿಮ್ಮೆಲ್ಲರಿಗು ವಂದನೆಗಳು
ಶುಭದಿನ..

12 comments:

Ittigecement said...

ಮನಸು...

ನಮ್ಮ ಕಡೆಯಿಂದಲೂ..
ನಡೆದಾಡುವ ದೇವರಿಗೆ ನಮನಗಳು....

ಇವರು ಎಲ್ಲೆಲ್ಲಿಯೂ ಸಲ್ಲುವರು..
ಇವರು ಜಾತಿ, ಭಾಷೆ. ಮತವನ್ನು ಮೀರಿದವರು..
ಇವರು ನಮ್ಮೆಲ್ಲರ ಹೆಮ್ಮೆ...

ಕ್ಷುಲ್ಲಕ ರಾಜಕಾರಣಕ್ಕೆ...
ಇಂಥಹ ಮಹಾನ್ ಚೇತನಗಳನ್ನು ತರಬಾರದು...
ಬೇಸರವಾಗುತ್ತದೆ...

ಗುರುವಂದನೆಗೆ ಅವಕಾಶ ಮಾಡಿಕೊಟ್ಟ ನಿಮಗೂ..
ವಂದನೆಗಳು...

ಜ್ಞಾನಮೂರ್ತಿ said...

ಅನ್ನ, ಅಕ್ಷರ, ಜ್ಞಾನ ದಾಸೋಹಿಗಳಾದ ಕಾಯಕಯೋಗಿ, ಕರ್ನಾಟಕ ರತ್ನ, ನೆಡೆದಾಡುವ ಶಿವ ಡಾ:ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಿಗೆ ನಮನಗಳು....

Dr.Gurumurthy Hegde said...

Manasu,
avarige namma namanagalu, nijakkoo avaru abhinandanahraru

sunaath said...

ನಿಮ್ಮ ಜೊತೆಗೆ ನನ್ನದೂ ಭಕ್ತಿಪೂರ್ವಕ ಶುಭಾಶಯಗಳು.

PARAANJAPE K.N. said...

ಅವರೊಬ್ಬ ಅಪೂರ್ವ ಸಾಧಕ.ಪ್ರಾತಃಸ್ಮರಣೀಯರು

shivu.k said...

ಮನಸು ಮೇಡಮ್,

ಶ್ರೀಗಳು ನಿಜಕ್ಕೂ ನಡೆದಾಡುವ ದೇವರು...ಅವರ ಫೋಟೋ ತೆಗೆದಿದ್ದೇನೆ..ಆವತ್ತು ಅಷ್ಟು ಹತ್ತಿರದಿಂದ ತೆಗೆಯುವಾಗ...ಅವರ ತೇಜಸ್ಸು...ಮತ್ತು ಅಷ್ಟು ವಯಸ್ಸಾದರೂ ವೇಗದ ನಡಿಗೆ ನೋಡಿ...ಆಶ್ಚರ್ಯದಿಂದ ದಂಗಾಗಿದ್ದೆ...ಫೋಟೋ ತೆಗೆಯುವುದು ಮರೆತಂತೆ ಆಗಿತ್ತು....ಇವತ್ತು ಅವರ ಜನ್ಮದಿನವೆಂದು ನೆನಪಿಸಿದಿರಿ...ಮತ್ತು ಅವರ ಮನೆಯ ಕೆಲವು ಅಮೂಲ್ಯ ಪೋಟೋಗಳನ್ನು ಹಾಕಿದ್ದೀರಿ...ನೋಡಿ ನನಗಂತೂ ತುಂಬಾ ಖುಷಿಯಾಯಿತು...
ಧನ್ಯವಾದಗಳು...

ಶಿವಪ್ರಕಾಶ್ said...

ಶಿವಕುಮಾರ ಸ್ವಾಮಿಗಳಿಗೆ,
ಹುಟ್ಟು ಹಬ್ಬದ ಶುಭಾಶಯಗಳು...
ನನ್ನ ಸಾಸ್ಟಂಗ ನಮಸ್ಕಾರಗಳು...

ಜಲನಯನ said...

ಮನಸು ರವರೇ,
ಯೋಗಿಗಳಲ್ಲಿ ಯೋಗಿಯಾಗಿ ಈಗ ಸುಪರಿಚಿತವಾದ ಶ್ರೀಗಳನ್ನು ನಾನು ಮೊದಲು ನೋಡಿದ
ಮಾತನಾಡಿಸಿದ ಯೋಗ ನನಗೆ ಸಿಕ್ಕಿತ್ತು ಎಂದರೆ ನೀವು ನಂಬಲಿಕ್ಕಿಲ್ಲ.
ನಾನು ಏಳನೇ ತರಗತಿಯಲ್ಲಿದ್ದ (೧೯೭೨ರಲ್ಲಿ) ಸಮಯದಲ್ಲಿ ಶಾಲೆಯ ಪ್ರವಾಸದಲ್ಲಿ ಒಂದುದಿನ ಮಠದಲ್ಲಿ
ಉಳಿದುಕೊಂಡಾಗ ಇದು ಸಾಧ್ಯವಾಗಿತ್ತು. ರಾತ್ರಿ ನಮ್ಮೆಲ್ಲರನ್ನು ಶ್ರೀಗಳು ಮಾತನಾಡಿಸಿದ್ದರು, ಹಿತವಚನ ನುಡಿದಿದ್ದರು. ಶತಾಯುಶಿ ಕರ್ನಾಟಕ ರತ್ನರಿಗೆ ಮತ್ತೂ ಹತ್ತು ಹಲವು ವಸಂತಗಳನ್ನು ದೇವರು ಕರಿಣಿಸಲೆಂದು ಪ್ರಾರ್ಥನೆ. ಅವರ ಸಮಾಜ ಸೇವೆ ನಿಷ್ಕಲ್ಮಷ ವಿದ್ಯಾಸೇವೆ ಮತ್ತು ಬಡಜನಸೇವೆಯ ನೂರರ ಒಂದಂಶವನ್ನು ನಮ್ಮ ರಾಜಕಾರಣಿಗಳು ಪರಿಪಾಲಿಸಿದರೆ..ಕನ್ನಡನಾಡು ನಿಜಕ್ಕೂ ಚಿನ್ನದ ಬೀಡಾಗುವುದರಲ್ಲಿ ಸಂಶಯವಿಲ್ಲ.

ಮನಸು said...

ಪ್ರಕಾಶ್ ಸರ್ ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು.. ರಾಜಕೀಯ ಎಂಬ ಚದುರಂಗಕ್ಕೆ ಮಠಾಧೀಶರನ್ನ ಬಳಸುತ್ತಿದ್ದಾರೆ ಇದು ಒಳ್ಳೆಯ ಕೆಲಸವಲ್ಲ.. ರಾಜಕಾರಣಿಗಳು ಸ್ವಲ್ಪ ಅರಿತು ಬಾಳಬೇಕಿದೆ..
ಜ್ಞಾನಮೂರ್ತಿ, ಗುರು,
ತ್ರಿವಿದ ದಾಸೋಹಿಗೆ ನಿಮ್ಮೊಂದಿಗೆ ನನ್ನ ನಮನ
ಧನ್ಯವಾದಗಳು...

ಸುನಾಥ್ ಸರ್
ನಾವೆಲ್ಲಾ ಇಂತಹ ಗುರುವರ್ಯರಿಗೆ ಭಕ್ತಿ ಪೂರ್ವಕವಗೆ ಶುಭಾಶಯ ಸಲ್ಲಿಸಬೇಕು..
ಧನ್ಯವಾದಗಳು...

ಮನಸು said...

ಪರಾಂಜಪೆ ಸರ್,
ನಿಜ ಅವರು ಅಪೂರ್ವ ಸಾಧಕರೆ ಸರಿ..
ಶಿವೂ ಸರ್,
ಅವರು ತುಂಬಾ ಜೋರು ನಡಿಗೆಯವರು ಸ್ವಲ್ಪವೂ ಗಾಸಿ ಪಡದೆ ನಡೆಯುತ್ತಾರೆ.. ನಮ್ಮ ಮನೆಗೆ ಬಂದಾಗ ೪ನೇ ಅಂತಸ್ತಿನಲ್ಲಿದ ಮಹಡಿಯನ್ನು ಹಾಗೆ ಸರಾಗವಾಗಿ ಹತ್ತುಬಿಟ್ಟರು ಎಲ್ಲರಿಗು ಆಶ್ಚರ್ಯ...ಕೂಡ ಅವರು ಪೂಜೆಗೆ ಕುಳಿತರೆ ಗಂಟೆಗಟ್ಟಲೆ ಕೂತು ಪೂಜೆ ಸಲ್ಲಿಸುತ್ತಾರೆ.. ಈ ವಯಸ್ಸಿನಲ್ಲೂ ಹಾಗೆ ಮಾಡುವುದ ನೋಡಿದರೆ ನಿಜಕ್ಕೂ ಬೆರಗಾಗುತ್ತೇವೆ..
ಕಳೆದಬಾರಿ ರಜೆ ತೆರಳಿದಾಗ ಅವರ ಪಾದುಕೆ ದೊರೆಯಿತು.. ನಾವು ಅದನ್ನು ಕುವೈತ್ಗೆ ತಂದು ಪೂಜೆ ಸಲ್ಲಿಸುತ್ತಲಿದ್ದೇವೆ.. ಕಾಯಕ ಯೋಗಿಯ ನೆನೆಸುತ ವಂದಿಸುತ್ತೇನೆ..
ಧನ್ಯವಾದಗಳು..

ಮನಸು said...

ಶಿವಪ್ರಕಾಶ್,
ಧನ್ಯವಾದಗಳು..
ಆಜಾದ್ ಸರ್,
ನೀವು ಬೇಟಿ ಆಗಿದ್ದಿರೆಂದು ತಿಳಿದು ಕುಶಿಯಾಯಿತು.. ರಾಜಕಾರಣಿಗಳು ಇಂತಹವುದನೆಲ್ಲ ಪಾಲಿಸೋಲ್ಲ...ಕಾಯಕ ಯೋಗಿಗೆ ನಿಮ್ಮ ಮಾತಿನಂತೆ ಹತ್ತು ಹಲವು ವಸಂತಗಳು ದೇವರು ಕರುಣಿಸಲೆಂದು ನಾವು ಪ್ರಾರ್ಥಿಸುತ್ತೇವೆ..
ಧನ್ಯವಾದಗಳು..

shivanna said...

manasu,
bahala chennagi vivarane maadidhira...inthaha maha purusha namma karunaadi nali padedha naave dhanyaru...poojya gurugalige namma shubhashayagalu