ತವರೂರ ಹಾದಿಯಲ್ಲಿ ಇರುವವರೆಲ್ಲಾ ನನ್ನವರೆ
ಇದ್ದಸ್ಟು ಕಾಲ ಜೊತೆಗಿದ್ದು ಹಾರೈಸಿದರು
ನನ್ನೊಟ್ಟಿಗೆ ಪ್ರೀತಿಯ ಉಣಬಡಿಸಿದರು
ಅವರೇ ನನ್ನವರೆಂಬ ಸ್ನೇಹ-ಸಂಬಂಧಿಕರು!!!
ದಿನವೆಲ್ಲ ಸುತ್ತಾಡಿ ಧಣಿದ ದೇಹಕೆ
ಆರೈಕೆ ನನ್ನ ಮನೆಯವರೆಲ್ಲರಿಂದ
ನಾ ಒಂಟಿ ನನ್ನ ಜೊತೆ ಯಾರಿಲ್ಲವೆಂದು
ಜೊತೆಗೂಡಿ ನನ್ನ ತಣಿಸಿದರು ಸ್ನೇಹಿತರೆಲ್ಲ!!!
ರಜೆಯ ದಿನದಿ ಬದಿಗಿಟ್ಟೆ ಕೆಲಸದೊರೆಯ
ಎಂತ ಸ್ನೇಹ, ಸಂಬಂಧ ಬೆಸೆದ ಸಮಯ
ಎಲ್ಲಾ ಭಾರ ಮರೆತು ಸವಿದೆ ಆ ಸವಿಯ
ಇದ ಕಂಡು ಕೊರಗಿದನೇನೋ ನನ್ನಿನಿಯ!!!
ನನ್ನದೇ ಕೆಲಸದಲಿ ನಾ ಮಗ್ನಳಾದೆ
ಯಾರನು ಮಾತನಾಡಿಸದವಳಾದೆ
ಏನಿದ್ದರು ಎಲ್ಲರು ಬಂದರು ನನ್ನೆಡೆಗೆ
ನನ್ನ ಒಳಿತಿಗೆ ಹಾರೈಸಿ ಕೊಟ್ಟರು ಬೀಳ್ಕೊಡಿಗೆ!!!
ಮತ್ತದೇ ಮರುಳಾದ ಮರಳು ಜೀವನಕೆ
ತಿರುಗಿ ಬಂದಿರುವೆ ಮರುಭೂಮಿ ತನಕ
ತವರೂರೆ ಚೆಂದವೆನಿಸಿದೆ ನನ್ನ ಮನಕೆ
ಆದರು ಮತ್ತೊಮ್ಮೆ ನನ್ನವರೆಲ್ಲರ ನೋಡೋ ತವಕ !!!
ಏನೇ ಇರಲಿ ಹೆತ್ತಮ್ಮ ಹುಟ್ಟೂರು
ಇವೆರಡು ನಮ್ಮೆಲ್ಲರ ಒಡಲ ಬೇರು
ಎಂದೆಂದೂ ನಮ್ಮೊಲವ ಹಸಿರ ಉಸಿರು
ಅದರ ಋಣ ತೀರಿಸುವವರು ಯಾರು!!!
12 comments:
ಮನಸು,
ತುಂಬಾ ಭಾವನೆ ತುಂಬಿದ ಕವನ,
ನಿಮ್ಮಿನಿಯನು ನಿಮ್ಮನ್ನು ನೆನಪಿಸಿಕೊಳ್ಳದೆ ಇರುತ್ತಾರೆಯೇ?
ಬಹುಶ ಈಗ ಅವರಿಗೆ ಸಂತಸವಾಗಿರಬೇಕು. ಒಳ್ಳೆಯ ಭಾವನೆ ತುಂಬಿದ ತವರೂರ ಬಗೆಗಿನ ಕವನದ ಜೊತೆಗೆ ಮರಳುಗಾಡಿನ ಬದುಕಿನ ನೈಜತೆಯಿದೆ
ತವರೂರಿನ ಕನವರಿಕೆ ತು೦ಬಾ ಚೆನ್ನಾಗಿ ಮೂಡಿಬ೦ದಿದೆ ನಿಮ್ಮ ಕವನದಲ್ಲಿ... ಎಲ್ಲಿದ್ದರೂ ತವರೂರೇ ಸು೦ದರ....
ಕವನದ ಲಾಲಿತ್ಯ ತು೦ಬಾ ಹಿಡಿಸಿತು...
guru,
dhanyavadagaLu, tavarooru endare haage allave ellarigu seLeyutte.
sudhesh,
tavara kanavarike dinavella idde irute haha enu madodu mareyokke agutta hutturanna.
bahaLa dhanyavadagaLu kavana mechiddakke
ellarigu Gowri Ganesha Habbada ShubhashayagaLu...
vandanegaLu
ತವರು ತೊರೆದು, ಮರಳಿನೂರಿಗೆ ಮರಳಿರುವುವಿರಿ ಅಂತಾಯ್ತು... ಕವನದ ಭಾವ ಚೆನ್ನಾಗಿದೆ.
ಹೌದು ಮರಳುಗಾಡಲ್ಲಿ ಆಗಲೇ ಬಂದು ಸೇರಿದ್ದೇನೆ ತವರೂರ ನೆನಪು ಅತಿ ಇದ್ದೆ ಇರುತ್ತೆ ಮರೆಯೋಕ್ಕೆ ಆಗೋಲ್ಲ ಅಷ್ಟೇ.
ಚೆನ್ನಾಗಿದೆ ರೀ
ಮೇಡಂ
ನಿಮ್ಮ ಕವಿತೆ
ಮನಸು...
ತುಂಬಾ ಭಾವ ಪೂರ್ಣವಾಗಿ ಬರೆದಿರುವಿರಿ...
ಭಾವಲೊಕದಲ್ಲಿ ನಮ್ಮನೂ ತೇಲಿಸಿ ಬಿಡುತ್ತೀರಿ...
ಅಭಿನಂದನೆಗಳು....
ಪ್ರತಿಕ್ರಿಯೆ ಈಗ ಹಾಕಬಹುದು...
ಸರಿಯಾಗಿದೆ....
manasu,
sathyada maathu
tavarina ruNNa thirusuvavaru yaaru!!!!!
thayiya madilu, tavarina akare
adara sogase sogasu
chendada kavithe vandanegalu
veena,
howdu tavaru andre haage allave.. dhanyavaadagaLu nimma baruvike nanage kushi kottidde heege baruttaliri
ನಿಮ್ಮ ಭಾವಲಹರಿಯನ್ನು ಸೊಗಸಾಗಿ ಬಿಂಬಿಸಿದ್ದೀರಿ.
Post a Comment