ಪ್ರಭಾತ್ ಕಲಾವಿದರು
'ಪ್ರಭಾತ್' ಎಂಬ ಹೆಸರೇ ಹೇಳುವಂತೆ ಬೆಳಗುವ ಕಲಾವಿದರೇ ಸರಿ....ಕನ್ನಡ ಕಲೆಯನ್ನು ನಾಡಿನಾದ್ಯಂತ ಪಸರಿಸುತ್ತಿರುವ ಕಲಾವೃಂದಕ್ಕೆ ಆತ್ಮೀಯ ಅಭಿನಂದನೆಗಳು. ಇತ್ತೀಚೆಗಷ್ಟೆ ಕುವೈಟಿಗೆ ಆಗಮಿಸಿದ್ದ ಪ್ರಭಾತ್ ಕಲಾವಿದರ ಕಲಾಜೀವನದ ಹಾದಿಯ ಕಿರು ಪರಿಚಯ. ಹಾಗೂ ವಿಶೇಷ ಒಲವುಮೂಡಿಸಿದ ಆ ಕಲಾವೃಂದಕ್ಕೆ ನಮ್ಮ ಪ್ರೀತಿಯ ಕಿರುನುಡಿಯ ಹಣತೆ.
೧೯೩೦ರಲ್ಲಿ ಪ್ರಾರಂಭಗೂಂಡ ಒಂದು ಕಲಾವೃಂದ ಹಲವು ನಾಟಕ, ನೃತ್ಯರೂಪಕಗಳಿಗೆ ಹೆಸರುವಾಸಿಯಾಗಿದ್ದರು. ಈ ಕಲಾವೃಂದವನ್ನು ಗೋಪಿನಾಥ್,ಕರಿಗಿರಿ,ಜೈಸಿಂಹ,ದ್ವಾರಕನಾಥ್ ಎಂಬ ಕಲಾತಪಸ್ವಿಗಳು ತಮ್ಮ ಕಲಾವೃಂದಕ್ಕೆ ಗುರುರಾಜ ವಾದ್ಯವೃಂದ ಮತ್ತು ನಾಟಕ ಮಂಡಳಿ ಎಂಬ ಹೆಸರನ್ನಿಟ್ಟರು. ಇವರು ನಾಟಕ, ನೃತ್ಯ, ಹಾಡುಗಳು ಹಾಗೂ ಹರಿಕಥಾ ವಿಶೇಷತೆಗಳಲ್ಲೂ ಹೆಚ್ಚು ಒಲವಿತ್ತರು. ಮೊದಲು ತುಮಕೂರಿನಲ್ಲಿ ನೆಲೆಗೊಂಡಿದ್ದ ಕಲಾವಿದರು ಹೆಚ್ಚು ಪ್ರೇಕ್ಷಕರನ್ನು ಮನಸೆಳೆಯಲು ಬೆಂಗಳೂರಿಗೆ ಬಂದು ನೆಲೆಸಿದರು ಈ ತಂಡದ ಮೇಲ್ವಿಚಾರಕರಾಗಿ ಗೋಪಿನಾಥ್ ರವರು ತಮ್ಮ ತಂಡವನ್ನು ಮುನ್ನಡೆಸಿದರು. ೧೯೪೨ರಲ್ಲಿ ಪ್ರಭಾತ್ ಕಲಾವಿದರೆಂಬ ಹೆಸರಿಂದ ಮರುನಾಮಕರಣ ಮಾಡಿದರು. ಮೊಟ್ಟ ಮೊದಲು ಭಾರತೀಯ ಸಾಂಸ್ಕೃತಿಕ ನೃತ್ಯವನ್ನು ತಮ್ಮ ನಾಟಕಗಳಲ್ಲಿ ಅಳವಡಿಸಿದ ಹೆಗ್ಗಳಿಕೆಯೂ ಈ ಕಲಾವಿದರ ಪಾಲಾಗುತ್ತದೆ.
ಚಲನಚಿತ್ರ ಅಭಿನೇತ್ರಿಗಳಾದ ಸಿ.ಆರ್.ಸಿಂಹ, ಶ್ರೀನಾಥ್, ಮಂಜುಳ, ಲೋಕೇಶ್ ತಮ್ಮ ಕಲಾ ಜೀವನವನ್ನು ಪ್ರಾರಂಭಿಸಿದ್ದು ಇದೇ ಕಲಾವಿದರ ತಂಡದಿಂದ, ಇವರೆಲ್ಲ ಚಿತ್ರರಂಗದ ಹಾದಿಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಪ್ರಭಾತ್ ಕಲಾವಿದರು ತಮ್ಮ ನಾಟಕಗಳಲ್ಲಿ ಸುಮಾರು ೨೦ ನಾಟಕಗಳನ್ನು ಸಾದರಪಡಿಸಿದ್ದಾರೆ ಅವುಗಳಲ್ಲಿ ಕೆಲವು ಮೋಹಿನಿ ಬ್ರಹ್ಮಾಸುರ, ಕರ್ನಾಟಕ ವೈಭವ, ಕಿಂದರಿಜೋಗಿ,ರಾಮ ಪ್ರತಿಕ್ಷಾ,ಪುಣ್ಯಕೋಟಿ, ಧರ್ಮಭೊಮಿ, ದಶಾವತಾರ ಮುಂತಾದವುಗಳು. ಇಂತಹ ನೃತ್ಯರೂಪಕ ನಾಟಕ ಪ್ರಸ್ತುತ ಪಡಿಸುವುದು ಅತಿ ಸುಲಭದ ಮಾತಲ್ಲ ಅದಕ್ಕೆ ತಕ್ಕಂತ ವೇದಿಕೆ, ದೀಪಾಲಂಕಾರಗಳ ಪ್ರಭಾವ, ಹಿನ್ನೆಲೆ ಧ್ವನಿಗೆ ತಮ್ಮ ಮಾತು ಹೊಂದಾಣಿಕೆ, ಇವೆಲ್ಲವೂ ಬಲು ಕಷ್ಟದ ಕೆಲಸ ಅದಕ್ಕೆ ತಕ್ಕಂತ ಕಲಾವಿದರು ತಮ್ಮ ಶ್ರದ್ಧೆ ಒಲವೂ ಎಲ್ಲವನ್ನು ವಹಿಸಬೇಕಾಗುತ್ತದೆ. ಇಂತಹ ನೃತ್ಯರೂಪಕಗಳಿಗೆ ಸಾಹಿತ್ಯ,ಸಂಗೀತ ಜೋಡಣೆಗೆಂದೆ ಸಂಗೀತಸಾಹಿತ್ಯ ನಿರ್ಮಾಣಶಾಲೆಯನ್ನು ಪ್ರಭಾತ್ ಕಲಾವಿದರು ಹೊಂದಿದ್ದಾರೆ.ಇದೇ ಕಲಾವಿದರ ಅತಿ ಪ್ರಸಿದ್ಧ ನಾಟಕ ಸಿಂಡ್ರೆಲಾ ಈ ನಾಟಕವು ಸುಮಾರು ೧,೦೦೦ ಕ್ಕೂ ಹೆಚ್ಚು ಪ್ರದರ್ಶನಗೊಂಡಿರುವುದು ಅವರ ಕಲಾ ಪ್ರಬುದ್ಧತೆಯನ್ನು ಹಿಡಿದು ತೋರಿಸುತ್ತದೆ.
ಬರಿ ನಾಟಕ ನೃತ್ಯ ಇಷ್ಟಕ್ಕೆ ಮೀಸಲಿಡದೆ ತಮ್ಮ ವೃತ್ತಿಯನ್ನು ಉಡುಗೆ ತೊಡಿಗೆಗಳ ಬಾಡಿಗೆಗೆ ನೀಡುವಿಕೆ, ಸಂಗೀತ ಸಾಮಾಗ್ರಿಗಳು, ವೇದಿಕೆಗೆ ಬಳಸುವ ಸಾಮಗ್ರಿಗಳನ್ನು ಬಾಡಿಗೆಗೆ ನೀಡುತ್ತಲಿದ್ದಾರೆ, ನೃತ್ಯ ತರಬೇತಿಯನ್ನು ಸಹಾ ಹಲವು ಮಕ್ಕಳಿಗೆ ನೀಡುತ್ತಲಿದ್ದಾರೆ.
ಮತ್ತೊಂದು ವಿಶೇಷತೆ ಈ ಕಲಾಕುಟುಂಬದಲ್ಲಿದೆ ಅದೇನಂದರೆ ಅಮೇರಿಕಾ ಅಮೇರಿಕಾ ಖ್ಯಾತಿಯ ತಾರೆ ಹೇಮ ಪಂಚಮುಖಿ, ಹಾಗು ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿರುವ ಹರೀಶ್ ರವರು ಈ ಸಂಸ್ಥೆ ಸ್ಥಾಪಕರೊಬ್ಬರಾದ ಗೋಪಿನಾಥ್ ಅವರ ಮೊಮ್ಮಕ್ಕಳು ಇವರ ಸಾಧನೆಯೂ ಸಹ ಶ್ಲಾಘನೀಯ, ಹೇಮರವರು ಹಲವು ಮಕ್ಕಳಿಗೆ ನೃತ್ಯ ತರಬೇತಿದಾರರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಲಿದ್ದಾರೆ ಮತ್ತು ಹರೀಶ್ ಹಾಗೂ ಅವರ ಪತ್ನಿ ಕಿರುತೆರೆ ಅತಿ ಮುಗ್ಥ, ಸೌಮ್ಯ ಸ್ವರೂಪಿ ದೀಪಶ್ರೀ ದಂಪತಿಗಳಿಬ್ಬರು ಈ ಪ್ರಭಾತ್ ಕಲಾವಿದರ ಬಳಗಕ್ಕೆ ಹೆಮ್ಮೆಯ ಗರಿಗಳಾಗಿದ್ದಾರೆ.
ಕುಟುಂಬವನ್ನೇ ಕಲಾವಂತಿಕೆಯಲ್ಲಿ ಮುಳುಗಿಸಿಕೊಂಡ ಈ ಮನೋಘ್ನ ಅಭಿನೇತ್ರಿಗಳೂಂದಿಗೆ ನಾವುಗಳು ಕಳೆದ ಸಮಯ ನಮ್ಮ ಜೀವನದ ಅತಿ ಸಂತಸದ ಸಮಯ ಹಾಗು ಅವರ ತರಬೇತಿ ಮೇರೆಗೆ ನಾವು ಕಲಿತ ಕಿಂದರಜೋಗಿ ನಾಟಕದ ಪುಟ್ಟ ಪಾತ್ರ ನಮಗೆ ಖುಷಿಕೊಟ್ಟಿದೆ. ಇನ್ನು ಉತ್ತಮವಾಗಿ ಮಾಡಬೇಕಿತ್ತೆಂಬ ಅಭಿಲಾಷೆಯು ಇದೆ.
ಒಂದು ವಾರ ದೀಪಶ್ರೀ ಹಾಗೂ ಹರೀಶ್ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಸಂತಸ ತರಿಸಿದೆ. ಅವರಿಬ್ಬರ ಶ್ರಮದಿಂದ ನಮ್ಮೆಲ್ಲರ ಪಾತ್ರಕ್ಕೆ ಕಳೆತರಿಸಿದೆಂದೇಳಿದರೆ ತಪ್ಪಾಗಲಾರದು.
ಒಂದು ವಾರ ದೀಪಶ್ರೀ ಹಾಗೂ ಹರೀಶ್ ಅವರೊಂದಿಗೆ ಕಳೆದ ದಿನಗಳು ನಿಜಕ್ಕೂ ಸಂತಸ ತರಿಸಿದೆ. ಅವರಿಬ್ಬರ ಶ್ರಮದಿಂದ ನಮ್ಮೆಲ್ಲರ ಪಾತ್ರಕ್ಕೆ ಕಳೆತರಿಸಿದೆಂದೇಳಿದರೆ ತಪ್ಪಾಗಲಾರದು.
ಹರೀಶ್ ಅವರು ನೀಡಿದ ರಾಮ, ವಿಷ್ಣು,ಕಿಂದರಜೋಗಿ ಮುಂತಾದವು..ಎಲ್ಲ ಪಾತ್ರಗಳನ್ನು ನಾವು ಕಣ್ಣಾರೆ ಕಂಡೆವು ಈ ಪಾತ್ರಗಳಿಗೆ ಕಿಂಚಿತ್ತೂ ಕುತ್ತು ಬರದಹಾಗೆ ಆಯಾ ಪಾತ್ರಕ್ಕೆ ಕಳೆತುಂಬಿದ್ದರು.ಇನ್ನು ದೀಪಶ್ರೀರವರು ಸೀತೆಯ ಪಾತ್ರವನ್ನು ಅತಿ ಮುಗ್ಧತೆಯಿಂದ ನಿರ್ವಹಿಸಿದರು ಹಾಗೂ ಪುಣ್ಯಕೋಟಿ ಪಾತ್ರದಲ್ಲಿ ತಾವೇ ಆ ಪುಣ್ಯಕೋಟಿಯೇನೋ ಎಂಬಂತೆ ಆ ಪಾತ್ರದಲ್ಲೇ ಐಕ್ಯರಾಗಿಬಿಟ್ಟಿದ್ದರು...ಅವರು ತಬ್ಬಲಿಕರುವಿನ ತಬ್ಬಿ ಮುದ್ದಾಡಿ ಇತರ ಹಸುಗಳಿಗೆ ಕಂದಮ್ಮನನ್ನು ನೀಡುವಾಗಿನ ದೃಶ್ಯ ಇಂದಿಗೂ ಕಣ್ಣುಕಟ್ಟಿದಂತಿದೆ...ಎಷ್ಟೋ ಮಂದಿ ಪ್ರೇಕ್ಷಕರು ತಾಯಿ ಮಗು ಅಗಲಿಕೆಗಾಗಿ ನೊಂದು ಕಣ್ಣೀರ ಸುರಿಸಿದ್ದು ಉಂಟು ಅಷ್ಟು ಮನೋಘ್ನ ಅಭಿನಯ ದೀಪಶ್ರೀರವರದು.ಇವರಿಬ್ಬರಷ್ಟೆ ಅಲ್ಲ ಅವರೊಂದಿಗೆ ಪಾತ್ರ ನಿರ್ವಹಿಸಿದ್ದ ಕಿಂದರಿಜೋಗಿಯ ಗೌಡ ಹಾಗೂ ಅಲೆಗ್ಸಾಂಡರ್ ಪಾತ್ರಧಾರಿ, ಲಕ್ಷ್ಮಣ,ಜಟಾಯು,ಹುಲಿ, ಕೃಷ್ಣ, ಹಲವು ನೃತ್ಯ ಕಲಾವಿದರೂ ಎಲ್ಲರೂ ಅದೇನು ಅಭಿನಯ ಒಬ್ಬೂಬ್ಬ ಕಲಾವಿದರೂ ೩,೪ ಪಾತ್ರಧಾರಿಗಳಾಗಿ ತಮ್ಮ ತಮ್ಮ ಪಾತ್ರಕ್ಕೆ ಜೀವಕಳೆ ತುಂಬಿದರು.
ಹರೀಶ್, ದೀಪ ಹಾಗೂ ಎಲ್ಲಾ ಪಾತ್ರ ವೃಂದದವರಿಗೆ ನಮ್ಮ ನಮನಗಳು.
ಕೆಲವು ನಾಟಕದ ಚಿತ್ರಗಳು...
34 comments:
ಒಳ್ಳೆ ವಿವರಣೆ ಕೊಟ್ಟೀದೀರಾ ಪ್ರಭಾತ್ ಕಲಾವಿದರ ಬಗ್ಗೆ... ಆ ಸುಂದರ ನಾಟಕಗಳ ನೋಡಲು ಸಿಕ್ಕಿದ್ದು ನಿಮ್ಮ ಅದೃಷ್ಟ, ಇಲ್ಲಿ ಬೆಂಗಳೂರಿನಲ್ಲಿ ಎಲ್ಲಿ ಹಾಗೆ ನಾಟಕ ಇದೆ ಅಂದರೂ ಹೋಗಲು ಸಮಯವೇ ಸಿಗುವುದಿಲ್ಲ...
ಪ್ರಭಾತ್ ತಂಡದ ಬಗ್ಗೆ ಒಳ್ಳೆಯ ಮಾಹಿತಿ ಸಹಿತ ಚಿತ್ರಲೇಖನ ಕೊಟ್ಟಿದ್ದಿರಾ...ಇದರಿಂದ ಬೆಳಕಿಗೆ ಬಂದ ಕಲಾವಿದರ ಬಗ್ಗೆ ಗೊತ್ತಿರಲಿಲ್ಲ... ಒಳ್ಳೆಯ ಲೇಖನ....
ಗುರು
ಮನಸು ಮೇಡಮ್,
ಪ್ರಭಾತ್ ಕಲಾವಿದರ ಅನೇಕ ಕಾರ್ಯಕ್ರಮಗಳನ್ನು ನಾನು ನೋಡಿದ್ದೇನೆ. ಅವರ ಪ್ರಯೋಗಗಳಲ್ಲಿ ಇರುವ ತಾಂತ್ರಿಕತೆ, ಬೆಳಕಿನ ಸಂಯೋಜನೆ, ಕಲೆಯ ಅಭಿವ್ಯಕ್ತಿ ಎಲ್ಲವೂ ಅದ್ಭುತ. ಅವರನ್ನು ನಿಮ್ಮ ಕುವೈಟಿನಲ್ಲಿ ಕರೆಸಿ ಕಲಾಪ್ರದರ್ಶನ ಏರ್ಪಡಿಸಿದ್ದೀರಿ.
ಅವರಿಗೂ ಮತ್ತು ನಿಮ್ಮ ಕಾರ್ಯಕ್ರಮದ ಯಶಸ್ಸಿಗೂ ಅಭಿನಂದನೆಗಳು.
ಮನಸು
ಪ್ರಭಾತ ಕಲಾವಿದರ ಬಗ್ಗೆ ಇಷ್ಟೊಂದು ಗೊತ್ತಿರಲಿಲ್ಲ
ಒಳ್ಳೆಯ ಫೋಟೋಗಳೊಂದಿಗೆ ಸುಂದರ ವಿವರಣೆ
ನಮಗೂ ಸವಿದ ಅನುಭವ
ಧನ್ಯವಾದಗಳು ತಿಳಿಸಿದ್ದಕ್ಕೆ
nijakku oLLe kalaavidaru manasu madam
good information.
thanks
chetu..
ಪ್ರಭಾತ ಕಲಾವಿದರ ಬಗ್ಗೆ ನಮಗೆ ತಿಳಿಯದ ಎಸ್ಟೋ ವಿಚಾರಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
ಮನಸು,
ಕೆಲವು ವಿಷಯಗಳು ನಮ್ಮ ಸುತ್ತ ಮುತ್ತ ನೆಡದ್ರು ಗೊತ್ತಾಗಲಿಕ್ಕಿಲ್ಲ... ಅಂಥದ್ರ್ರಲ್ಲೂ 'ಪ್ರಭಾತ್'ನ ಬಗ್ಗೆ ಇಸ್ಟೊಂದು ಇನ್ಫಾರ್ಮಶನ್ ತಿಳ್ಕೊಂಡು ನಮಗೆ ತಿಳ್ಸಿದಕ್ಕೆ ಮೊದಲ ಧನ್ಯವಾದಗಳು.. ಮತ್ತೆ ಯಾರೆಲ್ಲ ಇದ್ರೂ ಯಾರೆಲ್ಲ ಬಂದ್ರು ಅನ್ನೋದನ್ನು ತಿಳ್ಸಿದ್ದಿರ ಅದಕ್ಕೆ ಮತ್ತೊಮ್ಮೆ ಧನ್ಯವಾದಗಳು..
ತುಂಬಾ ಚೆನ್ನಾಗಿರುವ ಲೇಖನ..
ನಿಮ್ಮವ,
ಪ್ರಭು,
ಧನ್ಯವಾದಗಳು, ಕೆಲಸದ ಒತ್ತಡ ಖಂಡಿತ ಇದ್ದೇ ಇರುತ್ತೆ ನಾ ಇದನ್ನು ಒಪ್ಪುತ್ತೇನೆ, ಆದರೆ ಭಾನುವಾರ ಎಷ್ಟೋ ಕಲಾಕ್ಷೇತ್ರಗಳಲ್ಲಿ ನಾಟಕಗಳು ನೆಡೆಯುತ್ತವೆ ನೀವು ನಿಮ್ಮಾಕೆಯನ್ನು ಕರೆದುಕೊಂಡೋದರೆ ಅವರಿಗು ಮನರಂಜನೆ ಸಿಗುತ್ತೆ ಅಹಹ ಅಲ್ಲವೆ..?
ಗುರು,
ನಾವು ನಾಟಕಕ್ಕೆ ಸೇರುವುದಕ್ಕೆ ಬೇಡ ಸಮಯ ಸಿಗೋಲ್ಲವೆಂದು ತಲೆಕೊಡವಿದ್ದೇವು ಆದರೂ ಕೊನೆಯಲ್ಲಿ ಸೇರೋಣ ಒಂದು ವಾರದ ಮಟ್ಟಿಗೆ ಕಷ್ಟವಾಗಬಹುದೆಂದು ಈ ಪ್ರಭುದ್ದ ಕಲಾವಿದರೊಂದಿಗೆ ನಾವು ಒಬ್ಬರಾಗಿದ್ದೆವು.ಧನ್ಯವಾದಗಳು..
ಶಿವು ಸರ್,
ನೀವು ಅವರ ನಾಟಕಗಳನ್ನು ನೋಡಿದ್ದಿರೆಂದ ಮೇಲೆ ನಾವೇನು ಹೇಳುವುದು ಬಿಡಿ, ನಿಜ ಅವರ ತಾಂತ್ರಿಕತೆ ಮೆಚ್ಚಲೇಬೇಕು.... ಹರೀಶ್ ಮತ್ತು ದೀಪರಂತು ನಮ್ಮಲ್ಲಿ ಒಬ್ಬರಾಗಿಬಿಟ್ಟಿದ್ದರೂ.ಧನ್ಯವಾದಗಳು..
ಸಾಗರದಾಚೆ ಇಂಚರ,
ಈ ಕಲಾವಿದರ ಬಗ್ಗೆ ನಮಗೂ ತಿಳಿದಿರಲಿಲ್ಲ, ಅವರೊಟ್ಟಿಗೆ ಕಳೆದ ದಿನದೊಂದ ಅವರಲ್ಲಿನ ಕಲೆ ನಮಗೆ ಬಿಂಬಿತವಾಯಿತು.ಧನ್ಯವಾದಗಳು..
ಚೇತುರವರೆ,
ನಿಮ್ಮ ಅನಿಸಿಕೆಗೆ ಧನ್ಯವಾದಗಳು, ನಿಮಗೂ ಅವರ ಬಗ್ಗೆ ಗೊತ್ತಿರುವುದು ಸಂತೋಷದ ಸಂಗತಿ.
ಶಿವಪ್ರಕಾಶ್,
ಹೌದು, ಎಷ್ಟೋ ತಿಳಿಯದ್ದು ಇನ್ನು ಇದೆ, ಆ ಕಲಾವಿದರೆ ಮತ್ತಷ್ಟೇನಾದರಿದ್ದರೆ ತಿಳಿಸಿದರೆ ನಮಗೂ ಒಳ್ಳೆಯದೂ ಧನ್ಯವಾದಗಳು..
ರಾಘು,
ನಮ್ಮ ಪಕ್ಕದ ರಸ್ತೆಯಲ್ಲಿ ನೆಡೆಯೋ ಎಷ್ಟೋ ಸಂಗತಿಗಳು ನಮಗೆ ತಿಳಿದೇ ಇರೋಲ್ಲ ಇಂತಹ ಕಲಾವಿದರೂ ಪ್ರಚಾರ ಬಯಸೋಲ್ಲ ಅವರ ಕೆಲಸದಲ್ಲಿ ಮಾಡಿತೋರಿಸುತ್ತಾರೆ. ಕೆಲವರಲ್ಲಿ ಪ್ರತಿಭೆ,ಆಸಕ್ತಿ ಇರುತ್ತೆ ನೋಡಿ ಅಂತವರನ್ನ ಹೋಗಳಬೇಕು ಅವರ ಪ್ರಸಿದ್ಧತೆಗೆ ಪ್ರೋತ್ಸಾಹಿಸಬೇಕಲ್ಲವೆ..? ಅವರ ಕಲಾ ಒಲವಿಗೆ ನನ್ನ ಕಿರು ಪ್ರೋತ್ಸಾಹ ಅಷ್ಟೆ.
ಈ ಕಲಾವಿದರು ನಿಜ ನಮ್ಮ ಮನವನ್ನು ತಣಿಸಿದ್ದಾರೆ. ಇಂತಹ ಕಲಾವಿದರಿಗೆ ಅತಿ ಹೆಚ್ಚು ಪ್ರೇಕ್ಷಕರು, ಹೆಸರೂ ಎಲ್ಲವೂ ಸಿಗಲೆಂದು ಆಶಿಸುತ್ತೇನೆ.
ಪ್ರಭಾತ ಕಲಾವಿದರ ಬಗೆಗೆ ಕೇಳಿದ್ದೆ. ನೀವು ಉತ್ತಮ ಮಾಹಿತಿ ನೀಡಿರುವಿರಿ. ಫೋಟೋಗಳೂ ಸಹ ಚೆನ್ನಾಗಿವೆ. ಧನ್ಯವಾದಗಳು.
ಮನಸು ಮೇಡಂ...
'ಪ್ರಭಾತ್ ಕಲಾವ್ದರ' ಬಗ್ಗೆ ತುಂಬಾ ಕೇಳಿದ್ದೆ... ಆದರೆ ನೀವು ತುಂಬಾ ವಿವರ ಕೊಟ್ಟಿದೀರಿ....next time ನನಗೆ ಇವರ programme ಗೊತ್ತಾದ್ರೆ ಖಂಡಿತ ಮಿಸ್ಮಾಡಲ್ಲ... .
ಮನಸು ಮೇಡಂ ,
ಪ್ರಭಾತ್ ಕಲಾವಿದರ ಚಿತ್ರದ ಜೊತೆ ಒಳ್ಳೆಯ ಮಾಹಿತಿ ಕೊಡುವ ಲೇಖನ ಚೆನ್ನಾಗಿದೆ .
ಸುನಾಥ ಸರ್,
ನಿಮ್ಮ ಅನಿಸಿಕೆಗೆ ಧನ್ಯವಾದಗಳು, ಕಲೆ ಎಲ್ಲಿದ್ದರೇನು ಅಲ್ಲವೆ ಅವರ ಪ್ರತಿಭೆ ಎದ್ದು ಕಾಣುತ್ತೆ. ಆದರೆ ಸೋಜಿಗದ ಸಂಗತಿ ಎಂದರೆ ನಾವು ಬೆಂಗಳೂರಿನಲ್ಲಿದ್ದರೂ ಇವರ ಬಗ್ಗೆ ತಿಳಿದಿರಲಿಲ್ಲ ಈಗ ಕುವೈಟ್ಗೆ ಬಂದಮೇಲೆ ಹೆಚ್ಚು ತಿಳಿದಿದ್ದು.
ದಿನಕರ್ ಸರ್,
ಖಂಡಿತ ಹೋಗಿ ಬನ್ನಿ ಅವರ ನಾಟಕಗಳು ತುಂಬಾ ನೆಡೆಯುತ್ತಲಿರುತ್ತವೆ, ಬಲು ಹೆಸರುವಾಸಿ ನಾಟಕವಾದ ಸಿಂಡ್ರೆಲಾ ೧,೫೦೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ ಅದು ಚೆನ್ನಾಗಿರುತ್ತಂತೆ ನೋಡಿ. ನಾವು ಬೆಂಗಳೂರಿಗೆ ಹೋದಾಗ ನೋಡಬೇಕೆಂದುಕೊಂಡಿದ್ದೇವೆ.
ದಿನಕರ್ ಸರ್,
ಖಂಡಿತ ಹೋಗಿ ಬನ್ನಿ ಅವರ ನಾಟಕಗಳು ತುಂಬಾ ನೆಡೆಯುತ್ತಲಿರುತ್ತವೆ, ಬಲು ಹೆಸರುವಾಸಿ ನಾಟಕವಾದ ಸಿಂಡ್ರೆಲಾ ೧,೫೦೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ ಅದು ಚೆನ್ನಾಗಿರುತ್ತಂತೆ ನೋಡಿ. ನಾವು ಬೆಂಗಳೂರಿಗೆ ಹೋದಾಗ ನೋಡಬೇಕೆಂದುಕೊಂಡಿದ್ದೇವೆ.
ರಂಜಿತ,
ಧನ್ಯವಾದಗಳು ನಿಮ್ಮ ಅನಿಸಿಕೆಗೆ ಇಲ್ಲಿ ಚಿತ್ರದಲ್ಲಿ ಕಂಡಷ್ಟೇ ಪ್ರತಿಭಾನ್ವಿತ ಕಲಾವಿದರು. ವಂದನೆಗಳು
ಕುವೈತಿನಲ್ಲಿ ಕನ್ನಡ ಕೂಟದ ಕಾರ್ಯಕ್ರಮಗಳ ಛಾಯಾಚಿತ್ರಸಹಿತ
ಸವಿಸ್ತಾರ ವಿವರಣೆ,ಪ್ರಭಾತ್ ತ೦ಡದವರ ಪರಿಚಯ ಹಾಗೂ ನಾಟಕಗಳ ತುಣುಕುಗಳ ಸವಿಯನ್ನು ನೀಡಿದ ನಿಮಗೆ ಆಭಾರಿಯಾಗಿದ್ದೇನೆ.
ಮನಸು ಮೇಡಮ್,
ಪ್ರಭಾತ್ ಕಲಾವಿದರ ಬಗ್ಗೆ ಪರಿಣಾಮಕಾರಿ ಪರಿಚಯ ಮಾಡಿಸಿದ್ದೀರಿ....ಅಭಿನಂದನೆಗಳು
ಮನಮುಕ್ತರವರೆ,
ನಿಮ್ಮ ಆಗಮನ ಖುಷಿಕೊಟ್ಟಿದೆ... ಒಬ್ಬ ಪ್ರತಿಭಾನ್ವಿತ ಕಲಾವಿದರುಗಳ ಪರಿಚಯವನ್ನು ನೀವುಗಳೆಲ್ಲ ಒಪ್ಪಿದ್ದಕ್ಕೆ ಧನ್ಯವಾದಗಳು. ಸದಾ ಬರುತ್ತಲಿರಿ.
ಚಂದಿನ ಸರ್,
ನಮ್ಮ ಧನ್ಯವಾದಗಳನ್ನು ಅವರಿಗೆ ಈ ಕಿರು ಪರಿಚಯದ ಮೊಲಕ ತಿಳಿಸಿದ್ದೇವೆ ಅಸ್ಟೆ..
ವಂದನೆಗಳು.
ಮೃದು ಮನಸು ಅವರೇ...
ತು೦ಬಾ ಚೆ೦ದದ ನುಡಿಕಾಣ್ಕೆ...ಪ್ರಭಾತ್ ಕಲಾವಿದರು ಎ೦ದು ಅಲ್ಲಲ್ಲಿ ಕೇಳಿದ್ದರೂ ಇಷ್ಟೊ೦ದು ಹಿನ್ನೆಲೆ ಇದೆ ಅವರಿಗೆ ಎ೦ದು ಇವತ್ತೇ ಗೊತ್ತಾಗಿದ್ದು.
- ಸುಧೇಶ್...
ಮನಸು ಅವರೇ,
ಚೆನ್ನಾಗಿ ವಿವರಣೆ ಕೊಟ್ಟಿರುವಿರಿ.. :) ತುಂಬ ವಿಷಯಗಳನ್ನು ತಿಳಿದುಕೊಂಡೆ ...ವಂದನೆಗಳು :)
ಸುಮಾ
ಸುಧೇಶ್,
ಹೌದು, ಅವರ ಕಲೆಯ ಹಿನ್ನೆಲೆ ತುಂಬಾ ಇದೆ.. ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ
Snow White
ಧನ್ಯವಾದಗಳು ಕೆಲವು ವಿಷಯಗಳು ನಮ್ಮ ಸುತ್ತಮುತ್ತಲಿದ್ದರೂ ತಿಳಿದೇ ಇರುವುದಿಲ್ಲ...ಅಲ್ಲವೆ?
Nice artciale... I am not able to post kannada comments in your blog... Kannada comments bardu post maadidre adyaako aagtaane illa.. :-(
Nanna snehitanobba ee kalaa tandada bagge heluttidda.. naanu ommenoo nodilla... avakaasha sikkare khandita hoguve..
ಮನಸು ಚನ್ನಾಗಿಯೇ ಓಡುತ್ತೆ ಘಟನೆಗಳ ಹಿಂದೆ..ಮತ್ತು ಒಳ್ಲೆಯ ಲೇಖನ...
ರವಿಕಾಂತ್,
ಧನ್ಯವಾದಗಳು, ಸಮಯಸಿಕ್ಕಾಗ ಈ ಕಲಾವಿದರ ನಾಟಕಗಳನ್ನು ನೋಡಿ ಬನ್ನಿ ನಂತರ ನಮಗೂ ತಿಳಿಸಿ.
ಜಲನಯನ,
ಮನಸಿನಲ್ಲೇ ಹಚ್ಚಳಿಯದೆ ಉಳಿದು ಬಿಡುವಂತ ಘಟನೆಗಳಾದರೆ ಅದರ ಹಿಂದೆ ಓಡದೇ ಇರುತ್ತೆ ಹೇಳಿ..ಧನ್ಯವಾದಗಳು
ಮನಸು ಅವರೇ......
ಒಳ್ಳೆಯ ಬರಹದೊ೦ದಿಗೆ ಉತ್ತಮ ಕಲಾವಿದರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಧನ್ಯವಾದಗಳು,ನಿಮ್ಮ ಅನಿಸಿಕೆಗಳಿಗೆ
neatly compiled information on PRABHAT.
ಧನ್ಯವಾದಗಳು ಸರ್, ನಿಮ್ಮ ಆಗಮನ ಖುಷಿಕೊಟ್ಟಿದೆ ಹೀಗೆ ಬರುತ್ತಲಿರಿ ಸರಿ ತಪ್ಪಿನ ಅರಿವು ಮೂಡಿಸುತ್ತಲಿರಿ
Post a Comment