Saturday, November 14, 2009

ಮರುಭೂಮಿಯಲ್ಲಿ ಕನ್ನಡವೈಭವ

ರಜತ ಮಹೋತ್ಸವದ ಸಂಭ್ರಮತೆಯ ಸಭಾಂಗಣಕ್ಕೆ ಹೂಕ್ಕುವ ಮುನ್ನವೇ ಎದ್ದು ಕಾಣುತ್ತಿತ್ತು ಒಳಗಿನ ಅದ್ದೂರಿ ಮುಂಭಾಗಿಲ ರಂಗೋಲಿಯಲಿ, ಗಣಪನ ಮೂರ್ತಿ, ಹೆಂಗಳೆಯರ ನಗು ನಗುವಿನೊಂದಿಗೆ ಸಾಂಪ್ರದಾಯಕ ಆಹ್ವಾನ ಎಲ್ಲವೂ ಎಲ್ಲರ ಮನಸಿಗೆ ಸಂತಸ ನೀಡಿತ್ತು, ಹಾಗೆ ಮುಂದೆ ಸಾಗಿದರೆ ಅಲ್ಲೇ ಮಕ್ಕಳ ಸೈನ್ಯ ಕಾದಿತ್ತು ಏನಿದು ಈ ಮಕ್ಕಳು ಹೀಗೆ ತರತರನಾದ ವೇಷಭೂಷಣಗಳಲ್ಲಿ ಮಿಂಚುತ್ತಿರುವರೆಂದು ನೋಡ ನೋಡುತ್ತಲಿದ್ದಂತೆ ಭಾರತದ ರಾಯಭಾರಿಗಳಾದ ಅಜಯ್ ಮಲ್ಹೋತ್ರರವರನ್ನು ಹಾಗೂ ಹಲವಾರು ಗಣ್ಯರ ಆಗಮನ ಕೋರಲು ಈ ಮುದ್ದು ಮಕ್ಕಳು ಕನ್ನಡನಾಡ ಕಲೆ ಸಂಸ್ಕೃತಿಯನ್ನು ತಮ್ಮ ವೇಷಭೂಷಣದಲ್ಲೇ ಬಿಂಬಿಸುತ್ತ ಎಲ್ಲರನ್ನು ಆಹ್ವಾನಿಸಿದರು ಆ ಮೆರವಣಿಗೆ ದಸರಾ ಮೆರವಣಿಗೆಯಂತೆ ಕಂಡದ್ದು ನಿಜವೇ ಸೈ.

ಮುಖ್ಯ ಅತಿಥಿಗಳೆಲ್ಲ ಆಸೀನರಾಗುತ್ತಲಿದ್ದಂತೆ ಸಮಾರಂಭವು ಕುವೆಂಪುರವರ ನಾಡಗೀತೆ ಭಾರತ ಜನನಿಯ ತನುಜಾತೆ.... ಎಂಬ ಹಾಡಿನಿಂದ ಮೊಳಗುತ್ತಿದ್ದಂತೆ ಎಲ್ಲಿದ್ದರೋ ಬಸವಣ್ಣ, ವಿದ್ಯಾರಣ್ಯ, ರನ್ನ,ಪೊನ್ನ, ಹಿಂದೊ ಕ್ರೈಸ್ತ, ಮುಸಲ್ಮಾನ, ಗೌತಮ, ಹೌಯ್ಸಳ ಎಲ್ಲರೂ ಒಮ್ಮೆಲೆ ಬಂದು ನಮ್ಮಮುಂದೆ ನಿಂತು ಬಿಟ್ಟರು...ಹಾಗೆ ನೆರೆದಿದ್ದ ಸಭಿಕರೆಲ್ಲ ನಾಡಗೀತೆಗೆ ಕೊಟ್ಟ ಗೌರವ ಅಭಿನಂದನಾರ್ಹ... ನಂತರದಿ ಅವಾಹನೆಯನ್ನು (ದೇವರ ಪ್ರಾರ್ಥನೆ) ನೃತ್ಯಗೀತೆಯೊಂದಿಗೆ ಕೂಟದ ಮಕ್ಕಳು ನೆರೆವೇರಿಸಿದರು.ತದನಂತರ ಗಣ್ಯರು ಹಾಗೂ ಕೂಟದ ಕಾರ್ಯಕಾರಿ ಸಮಿತಿಯೂಂದಿಗೆ ಜ್ಯೋತಿಬೆಳಗಿಸಿ ಉಪಕಾರ್ಯಕಾರಿ ಸಮಿತಿ ಸದಸ್ಯ ಸದಸ್ಯೆಯರೆಲ್ಲರೂ ಒಟ್ಟಾಗಿ ಡಿ. ಎಸ್ . ಕರ್ಕಿ ರವರ ಹಚ್ಚೇವು ಕನ್ನಡದ ದೀಪ.... ಹಾಡಿಗೆ ಸೊಡರೊತ್ತುರಜತಮಹೋತ್ಸವದ ವೇದಿಕೆ ಹಾಗೂ ಕನ್ನಡಿಗರ ಮನ-ಮನಗಳಿಗೆ ಒಲವ ಬೆಳಕನು ಹರಿಸಿದರು.
ಇಷ್ಟೆಲ್ಲ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಸುಮಾರು ೧೧ ಗಂಟೆ ಇರಬಹುದು ಕರುನಾಡಿಂದ ಬರಬೇಕಾದಂತ ಕರುನಾಡಿನಿಂದ ಬಂದಂತಹ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದಂತಹ ಶ್ರೀ ಗಣೇಶ್ ಕಾರ್ಣೀಕ್ ರವರು ಸಮಾರಂಭಕ್ಕೆ ಮೆರುಗು ನೀಡಿದರು. ಇವರ ಬರುವಿಕೆಯಲ್ಲೆ ಸೂತ್ರದ ಬೊಂಬೆಯಾಟ ನೆಡೆಯುತ್ತಲಿದ್ದು. ವಶವರ್ತಿ(ಸೂತ್ರದ ಬೊಂಬೆಯಾಟ) ನೆರೆದಿದ್ದ ಎಲ್ಲ ಜನರ ಚಪ್ಪಾಳೆ ಗಿಟ್ಟಿಸಿತು.

ಕನ್ನಡ ಕೂಟ ಕುವೈಟ್ ೨೫ ವರ್ಷಗಳು ಸಾಗಿಬಂದ ಹಾದಿಯನ್ನು ದೃಶ್ಯಮಾಲಿಕೆಯಲ್ಲಿ ನಿರೂಪಿಸಿ ನೆರೆದಿದ್ದವರೆಲ್ಲರಿಗೂ ಮರಳು ಮಲ್ಲಿಗೆಯ ಕಂಪು ಸೂಸಿದರು...ತದನಂತರ ವೇದಿಕೆ ಅಲಂಕರಿಸಿದ ಹಳೆ ಬೇರೆಂಬಂತೆ ಕನ್ನಡಕೂಟ ಆರಂಭಿಸಿದ್ದ ಹಾಗು ಮಾಜಿ ಅಧ್ಯಕರುಗಳು ಮತ್ತು ಹೊಸ ಚಿಗುರು ಎಂಬಂತೆ ಹಾಲಿ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಹಾಗೂ ಕರುನಾಡ ಪ್ರತಿನಿಧಿಗಳಾಗಿ ಬಂದಿದ್ದ ಕ್ಯಾಪ್ಟನ್ ಗಣೇಶ್ ಎಲ್ಲರೊ ವೇದಿಕೆಗೊಂದು ಮೆರುಗು ನೀಡಿದರು. ಹಳೆ ಬೇರುಗಳ ಭಾಷಣ ಅವರ ಅನುಭವ ಅವರ ಅಭಿಪ್ರಾಯ ಎಲ್ಲವೂ ಮನಸೂರೆಕೊಂಡಿತು... ನಂತರದಿ ಕ್ಯಾಪ್ಟನ್ ಗಣೇಶ್ ರವರ ಸರದಿ ನೋಡು ನೋಡುತ್ತಲಿದ್ದಂತೆ ಅವರ ಭಾಷಣ ಅವರ ಧ್ಯೇಯ, ಆಸಕ್ತಿ, ಒಲವೂ ಎಲ್ಲವೂ ಮೆಚ್ಚನಾರ್ಹವೆನಿಸಿತು... ತಮ್ಮ ವೃತ್ತಿ ಜೀವನದಿಂದ ನಿವೃತ್ತರಾದ ನಂತರ ಅನಿವಾಸಿ ಭಾರತೀಯರ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಲಿಟ್ಟು ೩ ವರ್ಷಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಮಾಡುವೂದಿಲ್ಲವೆಂದು ಖಡಾಖಂಡಿತವಾಗಿ ಸಭೆಯಲ್ಲಿ ಸಾರಿ ಹೇಳಿದರೂ ಅದು ಅಲ್ಲದೆ ಅನಿವಾಸಿ ಭಾರತೀಯರಿಂದಾಗುವ ಅನುಕೂಲ, ಅವರುಗಳ ತೊಂದರೆ, ಅನಿವಾಸಿ ಭಾರತೀಯರಿಂದ ದೊರಕುವ ಅನಿಸಿಕೆ ಅಭಿಪ್ರಾಯ, ಕರುನಾಡ ಏಳ್ಗೆಗೆ ಅನಿವಾಸಿ ಭಾರತೀಯರ ಪಾತ್ರ ಎಲ್ಲಕ್ಕೊ ಸ್ಪಂದಿಸುವುದಾಗಿ ಹೇಳಿದರು. ಇವರ ಭಾಷಣ ಮುಗಿಯುತ್ತಿದ್ದಂತೆ ಸ್ಮರಣ ಸಂಚಿಕೆಯನ್ನು ಸಾಂಸ್ಕೃತಿಕ ರೀತಿಯಲ್ಲಿ ಬಿಡುಗಡೆಮಾಡಲಾಯಿತು. ಈ ಕಾರ್ಯಕ್ರಮಗಳೆಲ್ಲ ಮುಗಿಯುವ ಹೊತ್ತಿಗೆ ಮಧ್ಯಾಹ್ನದ ಊಟದ ಸಮಯವಾಗಿತ್ತು ಎಲ್ಲರು ತಮ್ಮ ಊಟ ಮುಗಿಸಿ ಮಧ್ಯಾಹ್ನದ ಕಾರ್ಯಕ್ರಮಗಳತ್ತ ಹೊರಡುವತ್ತಲಿದ್ದಂತೆ ಕ್ಯಾ.ಗಣೇಶ್ ಅವರ ಆಶಯದ ಮೇರೆಗೆ ಮತ್ತೊಮ್ಮೆ ನಾಡಗೀತೆ ಹಾಡುವವರಿಗೆ ಆಹ್ವಾನವಿತ್ತರು.

ಬೆಳಗಿನ ಸಮಾರಂಭವೇಕೋ ತುಸು ಮಂದಗತಿಯಲ್ಲಿ ಸಾಗುತ್ತಿದೆಯೆಂದೆನಿಸಿತು ಆದರೆ ಅಪರಾಹ್ನದ ಸಮಾರಂಭ ಕ್ಯಾ.ಗಣೇಶ್ ರವರ ಆಸೆಯಂತೆ ನಾಡಗೀತೆಯೊಂದಿಗೆ ಪ್ರಾರಂಭವಾಯಿತು ಅಲ್ಲದೆ ಅವರೂ ಸಹ ನಮ್ಮೆರಲ್ಲೊಬ್ಬರಾಗಿ ಹಾಡಿದರು ಇವರೊಟ್ಟಿಗೆ ಕುವೈಟ್ ಅತಿಥಿಗಳು ಮಾಜಿ ಹಾಗೂ ಹಾಲಿ ಅಧ್ಯಕ್ಷರು ಕೂಡಿ ನಾಡಗೀತೆ ಸುಸೂತ್ರ ಸುಮಧುರವಾಗಿ ನೆರೆವೇರಿದ ನಂತರ ೨೫ ವರ್ಷಗಳ ಹುಟ್ಟುಹಬ್ಬದ ಸಂಭ್ರವನ್ನು ಸಿಹಿ ಕೇಕ್ ಕತ್ತರಿಸುವ ಮೂಲಕ ಮಧ್ಯಾಹ್ನದ ಮನರಂಜನ ಕಾರ್ಯಕ್ರಮಕ್ಕೆ ಸಿಹಿಸಂತಸದ ಹೊನಲಾಯಿತು. ಇವರೆಲ್ಲರೊಟ್ಟಿಗೆ ಉದಯವಾಣಿ ಪತ್ರಿಕೆಯ ಪತ್ರಕರ್ತರಾದ ಮನೋಹರ್ ಪ್ರಸಾದ್ ಅವರ ನುಡಿಮುತ್ತುಗಳು ಸಭೆಗೆ ಕಳೆಯನ್ನು ತರಿಸಿತ್ತು
ಇನ್ನು ಕನ್ನಡಕೂಟದ ಹಿರಿ ಕಿರಿಯರ ಮನರಂಜನಾ ಕಾರ್ಯಕ್ರಮದ ಸಮಯ ಮೂದಲಿಗೆ ಅಷ್ಟಲಕ್ಷ್ಮಿ ರೂಪದ ನೃತ್ಯ
ರೂಪಕವನ್ನು ಕೂಟದ ಹೆಂಗಳೆಯರು ಅತಿ ಉತ್ಸಾಹ, ಮನಪೂರ್ವಕವಾಗಿ ದೇವಿಯನ್ನು ನೆನೆದರೆ ಲಕ್ಷಿ ದಯಪಾಲಿಸದೇ ಇರುತ್ತಾಳೆಯೇ ವೇದಿಕೆಯು ಲಕ್ಷ್ಮಿ ಕಟಾಕ್ಷವಾಗಿ ಮಾರ್ಪಟ್ಟಿತ್ತು, ಲಕ್ಷ್ಮಿ ಬಂದುಹೋಗುತ್ತಲಿದ್ದಂತೆ ಅದೆಲ್ಲಿದ್ದವೋ ಗುಬ್ಬಿಗಳು ನಮ್ಮ ಮುದ್ದು ಚಿಣ್ಣರು ಗುಬ್ಬಿ ಗುಬ್ಬಿ ಎಂದು ಗುಬ್ಬಿಗಳನ್ನೇ ಸಭಾಂಗಣಕ್ಕೆ ಕರೆತಂದುಬಿಟ್ಟಿದ್ದರು ವೇದಿಕೆ ಅಲಂಕರಿಸಿದ ಗುಬ್ಬಿಗಳು ಬಣ್ಣ ಬಣ್ಣದ ದೀಪಗಳು ಜಗಮಗಿಸುವುದ ಕಂಡು ಅಲ್ಲೇ ನಿಂತು ಬಿಟ್ಟಿದ್ದವು ಗುಬ್ಬಿಗಳನ್ನು ಕಂಡ ಹಳ್ಳಿ ಮಕ್ಕಳು ಮತ್ತೊಂದು ಜಾನಪದ ನೃತ್ಯವನ್ನು ಎಲ್ಲರ ಮುಂದಿಟ್ಟು ಹಳ್ಳಿಗೆ ಕರೆದೋಯ್ದರು, ಇನ್ನು ಹಲವು ಮಕ್ಕಳು ನಾವೇನು ಕಮ್ಮಿ ಎಂಬಂತೆ ಕೋಲಾಟದಿ ನೃತ್ಯ ಮಾಡಿ ನಲಿಸಿದರು, ಲಕ್ಷ್ಮಿ, ಗುಬ್ಬಿ, ಹಳ್ಳಿ ಜಾನಪದರು, ಕೋಲಾಟ ಎಲ್ಲವನ್ನು ಕಂಡ ಅದೆಲ್ಲೋ ಇದ್ದ ಎರಡು ನವಿಲುಗಳು ನೃತ್ಯವಾಡುತ್ತ ಬಂದೇ ಬಿಟ್ಟವು ಇನ್ನು ಸ್ವಲ್ಪಹೊತ್ತು ನೃತ್ಯನೋಡೋಣವೆಂದರೆ ತೊಗಲುಗೊಂಬೆಯ ನೃತ್ಯವಾಡಲು ಮಕ್ಕಳ ಹಿಂಡು ಬಂದೇ ಬಿಟ್ಟಿತು...ಇವರನ್ನೆಲ್ಲ ನೋಡಲು ನಾಗರಹೊಳೆಯಲ್ಲಿದ್ದ ಕಾಡುಜನರೂ ಓಡೋಡಿ ಬರುವುದೇ ಅಬ್ಬಾ ಕಾಡುಜನವೆಂದು ಯಾರು ಅವರನ್ನು ಹೇಳುವುದು ಅಷ್ಟು ಮನೋಘ್ನ ನೃತ್ಯವನ್ನು ನೀಡಿ ಕುಣಿದು ಕುಪ್ಪಳಿಸಿದರು.... ಇವರೆಲ್ಲರ ಮಧ್ಯೆ ಕೃಷ್ಣ ಕೊಳನೂದುತ ಸ್ನೇಹ ವೃಂದದೊಂದಿಗೆ ಕುಣಿದುನಲಿದನು, ನಂತರ ಕನ್ನಡದ ಹುಡುಗರೆಲ್ಲ ನಮ್ಮ ಜೀವನ ಕನ್ನಡ ಎಂದು ನೃತ್ಯ ನೀಡಿ ಸಿಳ್ಳೆ ಗಿಟ್ಟಿಸಿದರು, ನಂತರ ನಾದಸ್ವರೂಪದ ಬೆಸುಗೆಯೊಂದಿಗೆ ಹೆಂಗಳೆಯರು ನೃತ್ಯ ನೀಡಿ ಮನತಣಿಸಿದರು, ನೃತ್ಯ ಲೋಕದಿಂದ ಹೊರಬರುತ್ತಿದ್ದ ಹಾಗೇ ಒಂದು ಮುನ್ಸೊಚನೇ ಇಲ್ಲದೆಯೇ ಆಶ್ಚರ್ಯದ ವೇದಿಕೆಯಲ್ಲಿ ಸೃಷ್ಟಿಯಾಗಿತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಕೂಟದ ಹಾಲಿ ಅಧ್ಯಕ್ಷರಾದ ಶ್ರೀಮತಿ ಶ್ರೀ ಸತೀಶ್ ಚಂದ್ರ ಶೆಟ್ಟಿ ದಂಪತಿಗಳ ೨೫ ವರ್ಷದ ವಿವಾಹ ಮಹೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ದಂಪತಿಗಳಿಗೆ ಬೆರಗು ಮೂಡಿಸಿದರು. ಕೂಟದ ಕಾರ್ಯಕ್ರಮ ಹೇಗಿತ್ತೆಂದರೆ ತವರೂರಲ್ಲಿ ಮದುವೆ ಸಮಾರಂಭ ನೆಡೆದಂತಿತ್ತು ಹೆಂಗಳೆಯರು ಮದುವೆಮನೆಯಲ್ಲಿ ಶಾಸ್ತ್ರಕ್ಕೊಂದು ಉಡುಗೆ ಮುಹೂರ್ತಕ್ಕೂಂದು ಬೆರಗುಗೊಳಿಸೋ ಉಡುಗೆ ಹೀಗೆ ಸಾಂಪ್ರದಾಯಕ ಉಡುಗೆತೂಡುಗೆಯೂಂದಿಗೆ ಸಭಾಂಗಣವನ್ನು ಹೆಣ್ಣುಮಕ್ಕಳು ಅಲಂಕರಿಸಿಬಿಟ್ಟಿದ್ದರು.
ಇತ್ತ ಸಂಜೆಯ ಸವಿ ಸವಿಯಲೂ ಸಭಿಕರೆಲ್ಲರು ನೆರೆದಿದ್ದರೂ ಇತ್ತ ವೇದಿಕೆಯ ಹಿಂಬದಿ ಪ್ರಭಾತ್ ಕಲಾವಿದರು (ಬೆಂಗಳೂರು) ಇವರೊಟ್ಟಿಗೆ ಕನ್ನಡ ಕೂಟದ ಮಕ್ಕಳು ದೊಡ್ಡವರು ಅತಿ ಉತ್ಸಾಹದಿಂದ ಕಾತುರದಿ ವೇದಿಕೆ ಅಲಂಕರಿಸಲು ಕಾದಿದ್ದರು... ಸಂಜೆಯ ಕಾರ್ಯಕ್ರಮ ಕುವೆಂಪುರವರ ಕಿಂದರ ಜೋಗಿ ನೃತ್ಯರೂಪಕ ನಾಟಕ ಪ್ರಾರಂಭವಾಗಿಯಿತು ಏನು ಆ ಹಳ್ಳಿ ಮಕ್ಕಳು ಅಜ್ಜನೊಂದಿಗೆ ಕಥೆ ಹೇಳುವಂತೆ ಕೇಳುತ್ತಲಿದ್ದಂತೆ ಅಜ್ಜ ಆ ಮಕ್ಕಳಿಗೆಲ್ಲಾ ತುಂಗಾ ತೀರದ ಹಳ್ಳಿಗೆ ಕರೆದೂಯ್ದರು ಆ ಹಳ್ಳಿಯ ಜನ ಆ ಜನರಿಗೊಬ್ಬ ಗೌಡ ಸುಂದರ ಊರಿಗೆ ಇಲಿಗಳ ಕಾಟ, ಕಾಟ ತಾಳಲಾರದೆ ಕಿಂದರಜೋಗಿಗೆ ಮೂರೆ, ಕಿಂದರ ಜೋಗಿ ಇಲಿಗಳ ನಾಶಾನಂತರ ಗೌಡನ ದರ್ಪ, ಜಂಭ ಇದಕ್ಕೆ ಕೆಲವು ಹಳ್ಳಿ ಜನ ಪ್ರೋತ್ಸಾಹ, ಕೆಲವರ ಬೈಗುಳ ಮೋಸ ಮಾಡುವನೆಂದು.. ಭಾವಿಸಿ ಬೈಗುಳ ನೆಡೆದಿತ್ತು... ಗೌಡನಲ್ಲಿ ಮುನಿಸಿ ಊರ ಮಕ್ಕಳನ್ನೆಲ್ಲ ಕರೆದೂಯ್ದ ಕಿಂದರಿಜೋಗಿ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ಪ್ರಭಾತ್ ಕಲಾವಿದರು ಹಾಗು ಕೂಟದ ಸದಸ್ಯರು ವೇದಿಕೆಯನ್ನು ತುಂಗಾ ತೀರದ ಹಳ್ಳಿಯನ್ನಾಗಿ ಮೂಡಿಸಿಬಿಟ್ಟಿದ್ದರು. ಈ ನೃತ್ಯ ರೂಪಕ ನಾಟಕ ಮುಗಿಯುವ ಹೂತ್ತಿಗೆ ಕಾಫಿ, ಟೀ ಸಮಯವಾಗಿತ್ತು ಎಲ್ಲರೂ ಕಾಫಿ, ಟೀ ಜೊತೆಗೆ ತಿಂಡಿತಿನಿಸು ತಿಂದು ಮುಗಿಸುವಷ್ಟರಲ್ಲೇ ಸಂಜೆಯ ಸಮಾರಂಭವು ಅತಿ ಅದ್ದೂರಿಯಿಂದ ಸಜ್ಜಾಗಿ ಸಭಿಕರೆಲ್ಲರಿಗಾಗಿ ಕಾದಿತ್ತು.

ಹಳ್ಳಿಗೋಗಿದ್ದ ಸಭಿಕರೆಲ್ಲರೂ ಧರ್ಮಭೂಮಿ ಕಡೆಗೊರಟರು, ಅಬ್ಬಾ!!! ಅದೆಂತಹ ನಾಟಕ ಎಲ್ಲರೂ ಈ ನಾಟಕವನ್ನು ನೋಡಲೇಬೇಕು... ಎಲ್ಲರಿಗು ತಿಳಿದಂತೆ ಗ್ರೀಕ್ ದೊರೆ ಅಲೆಗ್ಸಾಂಡರ್ ಅತಿ ಬಲಿಷ್ಟ ಶೌರ್ಯ ದೊರೆ, ಈ ದೊರೆ ಭಾರತದ ಮೇಲೆ ಯುದ್ಧ ಮಾಡಲು ಹೊರಡುವ ಮುನ್ನ ತನ್ನ ಗುರುಗಳಾದ ಅರಿಸ್ಟಾಟಲ್ ಹಾಗು ಅಲೆಗ್ಸಾಂಡರ್ ನಡುವಿನ ಸಂಭಾಷಣೆ ಹಾಗು ಅರಿಸ್ಟಾಟಲ್ ನಮ್ಮ ಭವ್ಯ ಭಾರತ ಬಗೆಗಿದ್ದ ಅತಿಯಾದ ಗೌರವ, ಪ್ರೀತಿ ಎಲ್ಲವನ್ನು ತಿಳಿಸಿ ಅಲೆಗ್ಸಾಂಡರ ರಾಜನಿಗೆ ದಂಡಯಾತ್ರೆಗೆ ಹೋಗುವ ಬದಲು ಶಾಂತಿಯಾತ್ರೆಗೆ ಹೋಗುವಂತೆ ಸೂಚಿಸಿದ್ದರು ಅಂತೆಯೇ ಭರತ ಭೊಮಿಗೆ ಬಂದ ರಾಜ ಹಿಂತಿರುಗಿ ಹೋಗುವಾಗ ಆರೋಗ್ಯ ಏರುಪೇರಿನಿಂದ ಅಸುನೀಗುತ್ತಾನೆ ತಾನು ಸಾಯುವ ಮುನ್ನ ತನ್ನ ದೇಹವನ್ನು ಪೆಟ್ಟಿಗೆಯಲ್ಲಿಡಿ ಆದರೆ ತನ್ನ ಎರಡು ಕೈಗಳನ್ನು ಹೊರಗಿಡಿ ಏಕೆಂದರೆ ನಾನು ೩೩ ವರ್ಷಕ್ಕೆ ಹತ್ತು ಹಲವು ದೇಶಗಳನ್ನು ಗೆದ್ದು ದಿಗ್ವಿಜಯಿಯಾಗಿದ್ದೆ ಆದರೆ ಸತ್ತ ನಂತರ ನನ್ನ ಕೈ ಏನನ್ನೊ ತೆಗೆದುಕೊಂಡೋಗುತ್ತಿಲ್ಲ, ಬರಿಗೈನಲ್ಲಿ ಹೋಗುತ್ತಿರುವೆ ಎಂದು ಎಲ್ಲರಿಗೂ ಸಂದೇಶವನಿತ್ತು ಅವನು ಅಮರನಾದನು... ಇದೆಲ್ಲದರ ಮಧ್ಯೆ ಅರಿಸ್ಟಾಟಲ್ ಭಾರತ ಭೂಮಿಯ ಗಂಗಾ ಜಲ, ರಾಮಾಯಣ, ಮಹಾಭಾರತ, ಕೃಷ್ಣ ಹಾಗೂ ಅವನ ಕೊಳಲ ಪ್ರಾಮುಖ್ಯತೆ, ಭಗವದ್ಗೀತೆಯ ವಿಶೇಷತೆಯನ್ನು ನಮ್ಮ ಮುಂದಿಟ್ಟರು.. ಅಬ್ಬಾ ಎಂತಹ ವೈಭವೋತೀತ ಭರತಖಂಡ ಪರಿಚಯವನ್ನು ನಾಟಕರೂಪದಲ್ಲಿ ನಮ್ಮ ಮುಂದಿಟ್ಟರು ಎಂದೆನಿಸಿತು.

ತದನಂತರ ದಶಾವತಾರ ನೃತ್ಯರೂಪಕವು ಮನಸೂರೆಗೊಂಡಿತು, ವಿಷ್ಣುವಿನ ದಶ ಅವತಾರಗಳನ್ನು ಪ್ರಭಾತ್ ಕಲಾವಿದರಾದ ಹರೀಶ್ ಸಭಿಕರೆಲ್ಲರಿಗೂ ಅರ್ಥವಾಗುವಂತೆ ಮನಮುಟ್ಟುವಂತೆ ನೃತ್ಯರೂಪಿಸಿದರು. ಕೊನೆಯ ನೃತ್ಯರೂಪಕ ಪುಣ್ಯಕೋಟಿ ಆಹಾ!!! ದಟ್ಟಅಡವಿಯಲ್ಲಿ ಹುಲಿಯ ಬಾಯಿಗೆ ಸಿಕ್ಕಿಕೊಂಡ ಆ ಪುಣ್ಯಕೋಟಿ ಹಸುವಿನ ಮನಕಲಕುವ ದೃಶ್ಯ, ಆ ಕರುವಿನ ತಬ್ಬಲಿತನ ಎದ್ದು ಕಾಣುವಂತೆ ಮನೋಘ್ನ ಅಭಿನಯವನ್ನು ಪ್ರಭಾತ್ ಕಲಾವಿದರಾದ ದೀಪಶ್ರೀಹರೀಶ್ ಹಾಗೂ ಕೂಟದ ಸದಸ್ಯರ ಮಗು ನೀತಾ ತಬ್ಬಲಿಯ ಕರುವಾಗಿ ಬಹಳ ವಿಶೇಷವಾಗಿ ಅಭಿನಯಿಸಿದರು ಪುಣ್ಯಕೋಟಿಯ ನಾಟಕ ನೋಡ ನೋಡುತ್ತಲಿದ್ದ ಹಾಗೆ ಕೆಲವರ ಕಣ್ಣುಗಳು ಒದ್ದೆಯಾದವು....ಪುಣ್ಯಕೋಟಿ ಮರಳಿ ತಾಯಮಡಿಲು ಸೇರುವ ದೃಶ್ಯದೊಂದಿಗೆ ಮನಸು ಹಗುರಾಗಿ ಸಂತಸದಿ ನಾವುಗಳೆಲ್ಲ ಸಭಾಂಗಣ ತೊರೆದು ರಾತ್ರಿ ಊಟಕ್ಕೆ ತೆರೆಳಿದೆವು. ಮೃಷ್ಟಾನ್ನ ಭೋಜನದಿ ಎಲ್ಲರೂ ಊಟ ಸವಿದು ಮನೆಯ ಕಡೆ ಮುಖ ಮಾಡಿದೆವು.

ಪ್ರಭಾತ್ ಕಲಾವಿದರ ನೀಡಿದ ಸುಮಾರು ೨ ಗಂಟೆಯ ಕಾರ್ಯಕ್ರಮಗಳು ಬೆಂಗಳೂರಿನಲ್ಲಾಗಿದ್ದರೆ ಸುಮಾರು ೪೦ ಜನರೂಡಗೂಡಿ ನಿರೂಪಿಸುತ್ತಿದ್ದ ಕಲಾವಿದರು ಇಂದು ಸುಮಾರು ೧೫ ಕಲಾವಿದರೂಂದಿಗೆ ಒಬ್ಬೂಬರು ೩, ೪ ಪಾತ್ರಗಳನ್ನು ಅಭಿನಯಿಸಿ ಅದ್ಭುತ ಅಭಿನೇತ್ರಿಗಳಾಗಿ ನಮ್ಮೆಲ್ಲರಿಗೂ ಮನವನ್ನು ತಣಿಸಿದರು.
ಒಟ್ಟಲ್ಲಿ ಒಂದು ದಿನದ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ನಮನ, ಮನನ ಎಲ್ಲವೂ ಸರಾಗವಾಗಿ ಯಾವ ಅಡೆತಡೆಯಿಲ್ಲದೆ ನೆರೆವೇರಿತು ಯಾವ ರಾಜಕಾರಿಣಿಗಳಾಗಲಿ, ಚಲನಚಿತ್ರ ತಾರೆಗಳಾಗಲಿ ಯಾರ ಅನುಪಸ್ಥಿತಿಯೂ ಕನ್ನಡಾಂಬೆಯ ವೈಭವೋತೀತ ಹುಟ್ಟುಹಬ್ಬದ ಆಚರಣೆಗೆ ಸ್ವಲ್ಪವೂ ಕುತ್ತುಬರದೆ ಕರುನಾಡ ಸಿರಿ ಮರಳುಗಾಡಿನಲ್ಲಿ ರಾರಾಜಿಸಿತು.
ಈ ಕಾರ್ಯಕ್ರಮಕ್ಕೆ ರುವಾರಿಗಳಾದ ಕಾರ್ಯಕಾರಿ ಸಮಿತಿ, ಸಾಂಸ್ಕೃತಿಕ ಸಮಿತಿ, ಹಲವು ಉಪಸಮಿತಿಗಳೆಲ್ಲರಿಗೂ,ಮತ್ತು ಪ್ರಭಾತ್ ಕಲಾವೃಂದದವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

21 comments:

sunaath said...

ಮೃದುಮನಸು,
ಮರುಭೂಮಿಯಲ್ಲಿ ನಡೆದ ಕನ್ನಡ ಉತ್ಸವದ ವೈಭವವನ್ನು ಓದಿ ಮನಸ್ಸು ಕುಣಿಯಿತು. ಸುಂದರ ಸಮಾರಂಭದಲ್ಲಿ ಭಾಗವಹಿಸಿ, ಅದನ್ನು ಸುಂದರವಾಗಿ ವರ್ಣಿಸಿದ ನಿಮಗೆ ಅಭಿನಂದನೆಗಳು.

ದಿನಕರ ಮೊಗೇರ said...

ಮನಸು ಮೇಡಂ,
ಕಾರ್ಯಕ್ರಮದ ವಿವರಣೆ ಕೇಳಿ , ಫೋಟೋ ನೋಡಿ ಹೊಟ್ಟೆಕಿಚ್ಚಾಗುತ್ತಿದೆ ಮೇಡಂ..... ನಾನು ಸಹ ಒಂದೆರಡು ವರ್ಷದಿಂದ ಅಲ್ಲಿನ ಕೆಲಸಕ್ಕಾಗಿ ಟ್ರೈ ಮಾಡ್ತಾ ಇದ್ದೆ... ಕಳೆದ ಸಲ ಎಲ್ಲಾ ಸೇತ್ತ್ಲೇ ಆಯ್ತು , ಇನ್ನೇನು ಹೊರಡೋದು ಅನ್ನೋವಾಗ ಬಂತಲ್ಲ.... ಆರ್ಥಿಕ ಹಿಂಜರಿತ....... ಅದಕ್ಕೆ ಇಲ್ಲಿಂದಲೇ ಇದೆಲ್ಲಾ ಫೋಟೋ ನೋಡುವ ಹಾಗಾಗ್ತಿದೆ.... ಇಲ್ಲದಿದ್ದರೆ ನಿಮ್ಮೆಲ್ಲರ ಜೊತೆಗೂಡಿ ಸಂಭ್ರಮ ಪಡಬಹುದಿತ್ತು...... ಈ ಫೋಟೋ, ವಿವರಣೆ ನೋಡಿದ್ರೆ ನಿಮ್ಮೆಲ್ಲರ ಪರಿಶ್ರಮ, ಶ್ರದ್ದೆ ಕಾಣಿಸ್ತಾ ಇದೆ, ಮಹೇಶ್ ಸರ್, ಅಜಾದ ಸರ್, ನಿಮಗೂ, ಮತ್ತೆಲ್ಲ ನಿಮ್ಮ ಸಹಕನ್ನಡಿಗರಿಗೂ ಅಭಿನಂದನೆಗಳು......

Snow White said...

ಮನಸು ಅವರೇ ,
ನಿಮ್ಮ ಲೇಖನ ಓದಿ , ಚಿತ್ರಗಲ್ಲನು ನೋಡಿ ಕನ್ನಡಾಭಿಮಾನ ಉಕ್ಕಿ ಹರಿಯಿತು ..ನಿಮ್ಮೆಲ್ಲರ ಕಾಳಜಿ ಪ್ರತಿಯೊಂದು ಮಾತುಗಳಲ್ಲೂ ಕಾಣುತಿದ್ದೆ :) ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮೇಡಂ .. :)

ಸುಮಾ

ಮನಸು said...

ಸುನಾಥ್ ಸರ್,
ನಿಮ್ಮ ಮನ ನಲಿವಿಗೆ ನಮ್ಮ ಕೂಟದ ಎಲ್ಲಾ ಸದಸ್ಯರು ಕಾರಣ ಕರ್ತರು, ಕನ್ನಡ ವೈಭವಂತೂ ನಮಗೆ ಖುಷಿ ನೀಡಿದೆ. ನಿಮ್ಮ ಅನಿಸಿಕೆಗಳಿಗೆ ನಮ್ಮ ಧನ್ಯವಾದಗಳು

ಮನಸು said...

ದಿನಕರ್ ಸರ್,
ಬಹಳ ಧನ್ಯವಾದಗಳು, ನಿಮ್ಮ ಅನಿಸಿಕೆಗಳೆಲ್ಲವೂ ನಮಗೆ ಸಂತಸ ನೀಡಿದೆ. ನೀವು ಕುವೈಟ್ಗ್ ಬಂದಿದ್ದರೆ ನಿಮಗೂ ನಾವು ಕನ್ನಡಕೂಟದ ಕೆಲಸವನ್ನು ಹಚ್ಚುತ್ತಿದ್ದೆವು. ಕನ್ನಡ ಕೂಟದಲ್ಲಿ ಮಗ್ನರಾದರೆ ನಮಗೆ ಸಮಯ ಹೋಗುವುದೇ ಗೊತ್ತಾಗದು. ಒಳ್ಳೆಯ ಸ್ನೇಹವೃಂದ ಕಟ್ಟಬಹುದು... ಸಾಧ್ಯವಾದರೆ ಬನ್ನಿ ನಮ್ಮೊಟ್ಟಿಗೆ ಕೈಜೋಡಿಸಿ.
ವಂದನೆಗಳು

ಮನಸು said...

Snow White

ಚಿತ್ರಗಳು ಹಾಗೂ ಇಲ್ಲಿನ ಸಮಾರಂಭದ ವಿವರಣೆಯೇ ಅಷ್ಟು ಖುಷಿ ನೀಡಿದರೆ ನೀವು ಸಮಾರಂಭ ನೋಡಿದ್ದರಿನೆಷ್ಟು ಖುಷಿ ಪಡುತ್ತಿದ್ದರೋ ತಿಳಿಯದು... ಚಿಣ್ಣರು, ಹಿರಿಯರು-ಕಿರಿಯರು ಎಲ್ಲರ ವೈವಿಧ್ಯಮಯ ನೃತ್ಯ ನಾಟಕಗಳ ಸರಮಾಲೆಯೇ ಸಾಲುಸಾಲಾಗಿ ಸಾಗಿ ಬಂತು. ನಾವುಗಳೆಲ್ಲ ಶುಕ್ರವಾರದ ದಿನವನ್ನು ಅತಿಶಯದಿ ಕಳೆದೆವು.
ಧನ್ಯವಾದಗಳು

Guruprasad said...

ಮನಸು
ಮರಳು ನಾಡಿನಲ್ಲಿ ನೆಡೆದ ಕನ್ನಡ ರಾಜ್ಯೋತ್ಸವದ ವೈಭವ ನೋಡಿ ತುಂಬ ಖುಷಿ ಆಯಿತು..., ನಿಮ್ಮ ವಿವರಣೆ ಸಹಿತ ಫೋಟೋಗಳು ತುಂಬ ಚೆನ್ನಾಗಿದೆ... ಎಷ್ಟು ಅರ್ತಗರ್ಬಿಥವಾಗಿ ನೆಡೆಸಿದ್ದಿರ... ಗುಡ್.. ಹೀಗೆ ಮುಂದುವರಿಯಲಿ ಕನ್ನಡ ಕಂಪು.... ಜೈ ಕರ್ನಾಟಕ ......
ಗುರು

Anonymous said...

ನಮಸ್ಕಾರಗಳು,
ನಿಮ್ಮ ವಿವರಣೆ ತುಂಬಾ ಇಷ್ಟವಾಯಿತು, ನಾನು ಕನ್ನಡದ ಹಬ್ಬವನ್ನು ಕಣ್ಣ ತುಂಬ ನೋಡಿಬಂದೆ. ಭಾರತ ಜನನಿಯ ತನುಜಾತೆ ಹಾಡು ತುಂಬ ಇಷ್ಟವಾಯಿತು, ಪ್ರಭಾತ್ ಕಲಾವಿದರ ನಾಟಕಗಳು ತುಂಬಾ ಇಷ್ಟವಾಯಿತು. ನಿಮ್ಮ ಲೇಖನ ತುಂಬಾ ಅಚ್ಚುಕಟ್ಟಾಗಿದೆ ಹೀಗೆ ಬರೆಯುತ್ತಲಿರಿ. ಕನ್ನಡಕೂಟದ ಎಲ್ಲ ಕಾರ್ಯಕ್ರಮಗಳು ಚೆನ್ನಾಗಿ ಮೂಡಿಬರಲಿ.
ಧನ್ಯವಾದಗಳು
ನಿಮ್ಮವ
ಚೈತನ್ಯ
ಕುವೈಟ್.

Raghu said...

ನಿಮ್ಮ ವಿವರಣೆ ಓದಿದ ಹಾಗೆ ಆಗಿಲ್ಲ. ಅಬ್ಬಾ!! ಪ್ರೊಗ್ರಾಮ್ ನೋಡಿದ ಹಾಗೆ ಆಯಿತು. ತುಂಬಾ ಚೆನ್ನಾಗಿ ಅಚ್ಹುಕಟ್ಟಾಗಿ ಪ್ರೊಗ್ರಾಮ್ ನಡೆದಿದೆ. ತುಂಬಾ ಖುಷಿ ಆಯಿತು.

Picasa photos are really good. I could imagine how it would have went on.I am trying to find a photo mirror of each paragraph.

ಅಭಿನಂದನೆಗಳು...

ನಿಮ್ಮವ,
ರಾಘು.

Prabhuraj Moogi said...

ಬೆಂಗಳೂರಿನಲ್ಲೇ ಕೂತು ಅಲ್ಲಿನ ಸಮಾರಂಭ ನೋಡಿದಂತಾಯಿತು, ಹೊರನಾಡಿನಲ್ಲೇ ರಾಜ್ಯೋತ್ಸವ ಬಹಳ ಚೆನ್ನಾಗಿ ಆಚರಿಸುತ್ತಾರೆ ಅಂತಾಯಿತು, ಇಲ್ಲೇನೋ ನೇಮ ಮಾತ್ರಕ್ಕೆ ಧ್ವಜ ಏರಿಸುತ್ತಾರೆ ಅಷ್ಟೇ

ಮನಸು said...

ಗುರು,
ನಮ್ಮ ವೈಭವದ ನಿಮಗೆ ಖುಷಿಕೊಟ್ಟಿದೆಯೆಂದರೆ ನಮಗೂ ಸಂತಸವೇ ಸೈ. ಕನ್ನಡದ ಕಂಪು ಎಲ್ಲಿದ್ದರೂ ಯಾರಿಲ್ಲದಿದ್ದರೊ ಪಸರಿಸುತ್ತದೆ ಅದೇ ಕನ್ನಡಮ್ಮನ ಶಕ್ತಿ.
ಧನ್ಯವಾದಗಳು.

ಚೈತನ್ಯ ರವರೆ
ನೀವು ಈ ಸಮಾರಂಭದಲ್ಲಿ ಬಾಗಿಗಳಾಗಿದ್ದು ಬಹಳ ಸಂತಸದ ವಿಷಯವೇ ಸರಿ. ನಾವೇನು ಹೇಳುವುದು ನಿಮ್ಮ ಕಣ್ಣೆದುರೆ ಎಲ್ಲಾ ಅಚ್ಚುಕಟ್ಟಾದ ಸಂಭ್ರಮದ ಸಮಾರಂಭ ನೇರೆವೇರಿತಲ್ಲಾ.
ಧನ್ಯವಾದಗಳು

ಮನಸು said...

ರಾಘು,
ನಮ್ಮ ವಿವರಣೆ ನಿಮಗೆ ಕೈಹಿಡಿದ ಕನ್ನಡಿಯಂತೆನಿಸಿದರೆ ನಿಜಕ್ಕೊ ನಾನು ಧನ್ಯೆ. ಫೋಟೋಗಳಿಗೆ ನೀವು ನೀಡಿದ ಅನಿಸಿಕೆಗಳನ್ನೆಲ್ಲ ನೋಡಿದೆ ಬಹಳ ಖುಷಿಯಾಗಿದೆ. ನಿಮ್ಮ ಅಭಿಪ್ರಾಯ ಅನಿಸಿಕೆಗಳು ಸದಾ ನಮ್ಮೊಂದಿಗಿರಲಿ.
ಧನ್ಯವಾದಗಳು

ಪ್ರಭು,
ನೀವು ನಿಮ್ಮಾಕೆ ನಮ್ಮ ಕಾರ್ಯಕ್ರಮದ ವಿವರವೆಲ್ಲಾ ನೋಡಿದಿರಾ..? ಇಬ್ಬರಿಗೂ ಇಷ್ಟವಾಗಿರಬೇಕೆಂದುಕೊಳ್ಳುತ್ತೇನೆ. ಕುವೆಂಪುರವರು ಕನ್ನಡವನ್ನು ಬೀದಿಕೂಗಾಗಿಸಬಾರದಂತೆ ನಾವು ಮಾಡುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದ್ದಾರೆ ಅಂತೆಯೇ ನಮ್ಮ ಕಾರ್ಯಕ್ರಮದಲ್ಲೂ ಕನ್ನಡ ಬೆಳಗಿದೆ. ಧನ್ಯವಾದಗಳು

ಶಿವಪ್ರಕಾಶ್ said...

ಮನಸು ಅವರೇ,
ಕಾರ್ಯಕ್ರಮದ ಫೋಟೋಗಳು ಹಾಗು ನಿಮ್ಮ ಲೇಖನ ಓದಿ ನನಗೆ ತುಂಬಾ ಕುಶಿಯಾಯ್ತು.
ದೂರದ ಊರಲ್ಲಿ ನಮ್ಮವರ ಹಬ್ಬ ನೋಡಿ ತುಂಬಾ ಸಂತೋಷವಾಗಿದೆ...

ರಾಹುದೆಸೆ !! said...

ಮನಸು ಅವರೇ...,
ಕನ್ನಡ ವೈಭವದ ಬಗೆಗಿನ ನಿಮ್ಮ ವರ್ಣನೆ ಓದುತ್ತಿದ್ದರೆ ನಾವು ಕೂಡ ಅಲ್ಲಿದ್ದವರಂತೆ ಭಾಸವಾಗುತ್ತದೆ...

ಆದರೆ ಒಂದು ವಿಷಯ :
ನಾನು ನಿಮಗೆ ಮೊದಲೇ ಹೇಳಿದ್ದೆ:ಕೆಲವು ಕನ್ನಡ ಪದಗಳು ತಪ್ಪಾಗಿ ಬರೆಯುತ್ತೀರಾ ಎಚ್ಚರಿಕೆ ವಹಿಸಿ ಎಂದು. ಬೇರೆ ಲೇಖನಗಳಾದರೋ ಸರಿ, ಆದರೆ ನೀವು ಈ ಕನ್ನಡ ವೈಭವದ ಬಗ್ಗೆ ಬರೆಯುವಾಗ ಹೆಚ್ಚು ಜಾಗ್ರತೆ ವಹಿಸಬೇಕಿತ್ತು.. ಆದರೆ ನಿಮ್ಮ ಅಜಾಗರೂಕತೆಯಿಂದ(ಮೃದುಮನಸಿಗೆ ನನ್ನ ಮಾತಿನಿಂದ ಬೇಸರವಾದಲ್ಲಿ ಕ್ಷಮೆ ಇರಲಿ..) ಬೇರೆ ಲೇಖನಗಳಿಂದ ಇಲ್ಲಿಯೇ ಹೆಚ್ಚು ತಪ್ಪು ಪದಗಳಿವೆ ಅವುಗಳೆಂದರೆ:
ಅದ್ದೊರಿ,ಮೊರ್ತಿ,ಮೂಳಗುತ್ತಿದ್ದಂತೆ,ಮನಸೂರೆಕೊಂಡಿತು...,ಧ್ಯೇಯಾ,ಮೆಚ್ಚೆನಾರ್ಹವೆನಿಸಿತು... ,ಮಾಡುವೂದಿಲ್ಲವೆಂದು,ಎಲ್ಲಕ್ಕೊ,ಸಾಗುತೆಂದೆನಿಸಿತು ,ನಮ್ಮೆರಲ್ಲೊಬ್ಬರಾಗಿ,ಮೊಲಕ,ಮೂಡಿಸಿತ್ತು,ನೃತ್ಯರೊಪಕವನ್ನು,ಕರೆದೋಯ್ದರು,ಅದೇಲ್ಲೋ,ಕೊಳನೂದುತ,ನಾದಸ್ವರೊಪದ,ಮುನ್ಸೊಚಭೊಮಿಯನೇ,ಮೊಲಕ,ಮೊಡಿಸಿದರು,ಮುಹೋರ್ತಕ್ಕೊಂದು,ಕರೆದೋಯ್ದರು,ನೆಡೆದಿತ್ತು,ಕರೆದೋಯ್ದ,ಮೊಡಿಸಿಬಿಟ್ಟಿದ್ದರು,ಅದ್ದೊರಿಯಿಂದ,ಧರ್ಮಭೊಮಿ,ಭೊಮಿಯ,ನಾಟಕರೊಪದಲ್ಲಿ,ನೃತ್ಯರೊಪಿಸಿದರು,ಒಬ್ಬೂಬರು,ರಾಜಕಾರಿಣಿಗಳಾಗಲಿ,...

ತಪ್ಪುಗಳನ್ನು ಗುರುತಿಸಲನರ್ಹವಾದ ಪ್ರತಿಕ್ರಿಯೆಗಳಲ್ಲೂ ತಪ್ಪು ಕನ್ನಡ ಪದಗಳು ಕಾಣಸಿಗುತ್ತವೆ..

ಇಂತಹ ಹಲವಾರು ತಪ್ಪುಗಳನ್ನು ಕುರಿತು ನನಗನಿಸಿದಂತೆ ಬರೆದ ನನ್ನ 'ಓ ಕನ್ನಡವೇ..' ಲೇಖನ ಓದಿ..

--http://balipashu.blogspot.com/2009/11/blog-post.html

ಮನಸು said...

ಶಿವಪ್ರಕಾಶ್,
ಧನ್ಯವಾದಗಳು ನಿಮ್ಮ ಅನಿಸಿಕೆಗೆ. ನಾವುಗಳೆಲ್ಲಾ ಕನ್ನಡ ಹಬ್ಬವನ್ನು ಕಂಡು ಖುಷಿ ಪಟ್ಟೆವು.

ರಾಹುದೆಸೆ..
ಧನ್ಯವಾದಗಳು ನಮ್ಮ ಹಬ್ಬವನ್ನು ನೀವು ಮೆಚ್ಚಿದ್ದಕ್ಕೆ.

ನಿಮ್ಮ ವಿಷಯ ನನ್ನ ತಪ್ಪು:
ಸಂತೋಷ ನೀವು ನನ್ನ ತಪ್ಪುಗಳನ್ನು ಗುರುತಿಸಿ ತಿದ್ದಿದ್ದಕ್ಕೆ.... ಅನಾರೋಗ್ಯದ ಕಾರಣ ನಾ ಬರೆದ ಲೇಖನವನ್ನು ತಿರುವಿಸಿ ನೋಡಲಾಗಲಿಲ್ಲ, ನೀವು ತಿಳಿಸಿದ ಮೇಲೆ ಎಲ್ಲವನ್ನು ಮತ್ತೊಮ್ಮೆ ಓದಿದೆ ಸರಿ ಎನಿಸಿತು ಆದರೂ ಹೆಚ್ಚು ಹೂತ್ತು ಗಣಕ ಯಂತ್ರದ ಮುಂದೆ ಕೂರಲು ಸಾಧ್ಯವಾಗದಿದ್ದರೂ ತಪ್ಪನ್ನು ಸರಿಪಡಿಸಿದ್ದೀನಿ ಮತ್ತೆ ತಪ್ಪು ಕಂಡರೆ ದಯವಿಟ್ಟು ತಿಳಿಸಿ. ಸರಿ ತಪ್ಪಿನ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು.

Unknown said...

Nice...

ಜಲನಯನ said...

ಏನ್ರೀ ನೀವು..ನಾನು ಮೊಅದಲು ಬರೀಬೇಕು ಅಂದ್ಕೊಳ್ಳೋದ್ರೊಳಗೆ ನೀವೇ ಕನ್ನಡ ಧ್ವಜಾನ ಏರ್ಸಿಬಿಟ್ರಿ...ಬಹಳ ಚನ್ನಾಗಿ ವಿವರಣೆ..ವೀಕ್ಷಕ ವಿವರಣೆ ಅಂದ್ರೆ ತಪ್ಪಿಲ್ಲ ಕೊಟ್ಟಿದ್ದೀರಿ..ನಿಮ್ಮ ಫೋಟೋಸ್ ನೋಡ್ದೆ..ಒಂದು ಅರ್ಥ ಆಗ್ಲಿಲ್ಲ ಸುಮ್ಮರು ಪ್ರೋಗ್ರಾಂ ಗಳಲ್ಲಿ ನೀವು ಮತ್ತು ಮಹೇಶ್ ಇದ್ರಿ, ನಿಮಗೆ ಸಮಯ ಹೇಗೆ ಸಿಗ್ತು...ಮನೂ ನೋ ಅಲ್ಲಿ ಆಟ ಆಡೋದ್ರಲ್ಲೇ ತಲ್ಲೀನ...
ಪರಾಕ್ ನಿಮಗೆ...ನಮ್ಮ ಪರವಾಗಿಯೂ ಬರೆದದ್ದಕ್ಕೆ

ಮನಸು said...

ರವಿಕಾಂತ್
ಧನ್ಯವಾದಗಳು

ಅಝಾದಣ್ಣ
ನೀವು ಬಾರಿ ಕೆಲಸದಲ್ಲಿ ಇದ್ದೀರೆಂದು ನಾನೇ ಕನ್ನಡ ಧ್ವಜ ಏರಿಸಿಬಿಟ್ಟೆ ಹಹಹ... ಅದೇ ಹೇಳೋದು ನೋಡಿ ಮೃದುಮನಸು ಅಂತಾ ಹೇಗೋ ಹೊಂಚಿಬಿಟ್ಟಿದ್ದೀವಿ ಎಲ್ಲಾ ಫೋಟೋಗಳು ಮತ್ತು ವಿವರಣೆ ತಿಳಿಸಲು ನಾ ಗ್ರೀನ್ ರೂಂ ನಲ್ಲಿದ್ದರು ನನ್ನ ಕಿವಿ ಏನೇನು ನೆಡೆಯುತ್ತಲಿದೆ ಹೊರಗಡೆ ಎಂದು ಗಮನ ಹರಿಸಿತ್ತು ಹಹಹ ಅದರಿಂದ ಎಲ್ಲಾ ವಿವರಣೆ ಚಾಚೂ ತಪ್ಪದೆ ಒಪ್ಪಿಸಿಬಿಟ್ಟಿದ್ದೀನಿ.

ಸುಧೇಶ್ ಶೆಟ್ಟಿ said...

ಮನಸು ಅವರೇ...

ನೀವು ಬರೆದುದನ್ನು ಓದುತ್ತಿದ್ದರೆ ನಾನು ಆ ಕಾರ್ಯಕ್ರಮ ನೋಡುವ೦ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅ೦ತ ಅನಿಸಿತು.... ತು೦ಬಾ ಚೆನ್ನಾಗಿದೆ ಫೋಟೋಗಳು. ಇಲ್ಲಿ ಯಾವುದೇ ಕಾರ್ಯಕ್ರಮಗಳು ಇನ್ನೂ ನಡೆದಿಲ್ಲ ರಾಜ್ಯೋತ್ಸವಕ್ಕೆ :(

shivu.k said...

ಮನಸು ಮೇಡಮ್,


ಮರುಭೂಮಿಯಲ್ಲಿ ಕನ್ನಡ ಕಹಳೆ ಚೆನ್ನಾಗಿ ಮೊಳೆಗಿದೆ ಅಂದ ಹಾಗೆ ಆಯ್ತು.

ಅಲ್ಲಿ ಕಾರ್ಯಕ್ರಮಗಳು ಮತ್ತು ಇನ್ನಿತರ ವಿವರಗಳನ್ನು ಫೋಟೋಗಳ ಸಹಿತ ಚೆನ್ನಾಗಿ ನಮಗೆಲ್ಲಾ ತಲುಪಿಸಿದ್ದೀರಿ.
ನನಗೆ ಆರೋಗ್ಯ ಸ್ವಲ್ಪ ಹದಗೆಟ್ಟಿದ್ದರಿಂದ ತಡವಾಗಿ ಬ್ಲಾಗಿಗೆ ಬರುತ್ತಿದ್ದೇನೆ.
ಮುಂದಿನ ನಮ್ಮ ಕನ್ನಡ ಕಹಳೆ ಮತ್ತಷ್ಟು ಚೆನ್ನಾಗಿ ಮೊಳಗಿಸುವ ಶಕ್ತಿಯನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಧನ್ಯವಾದಗಳು.

ಮನಸು said...

ಸುಧೇಶ್,
ಮುಂದಿನ ಕಾರ್ಯಕ್ರಮಗಳಿಗೆ ಬನ್ನಿ ನೀವು ನೋಡಿ ಖುಷಿಪಡಿ..ವಂದನೆಗಳು
ಶಿವು ಸರ್,
ತಡವಾಗಿಯಾದರೂ ಬಂದಿರಲ್ಲಾ ಅದೇ ಖುಷಿ, ಹೌದು ಕನ್ನಡ ಕಹಳೆ ಮೊಳಗಿದೆ ಮುಂದೇಯೂ ಹೀಗೆ ನೆಡೆಯುತ್ತಲಿರುತ್ತದೆ ನಿಮ್ಮೆಲ್ಲರ ಹಾರೈಕೆಯಂತೆ. ವಂದನೆಗಳು.