Tuesday, November 10, 2009

ಒಟ್ಟಾಗಿ ಬನ್ನಿ...ಹಚ್ಚೋಣ ಕನ್ನಡದ ದೀಪ....


ಕನ್ನಡಾಂಬೆಯ ನೆನೆವ ಮನಗಳು ಪ್ರಪಂಚದಾದ್ಯಂತ ಹರಡಿಹೋಗಿವೆ ಕೆಲವು ಪ್ರಾಂತ್ಯ, ಊರು ಕೇರಿಗಳಲ್ಲಿ ಕನ್ನಡಮ್ಮನಿಗೆಂದೆ ಹಬ್ಬ ಆಚರಣೆಗಳು ನೆಡೆಯುತ್ತಲೇ ಇರುತ್ತವೆ. ಅಂತೆಯೇ ನಾವು ಸಾಗರದಾಚೆ ಕನ್ನಡಮ್ಮನ ನೆನೆದು ಅವಳ ಪ್ರೀತಿಪಾತ್ರರಾಗುವ ಒಂದು ಪುಟ್ಟ ಪ್ರಯತ್ನ...

ಕುವೈಟ್ ಕನ್ನಡಿಗರೆಲ್ಲರು ಒಗ್ಗೂಡಿ ಇದೇ ನವೆಂಬರ್ ೧೩ರಂದು ಅಮೇರಿಕನ್ ಇಂಟರ್-ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಕನ್ನಡ ಉತ್ಸವ ನೆರೆವೇರಲಿದೆ ಈ ಸಮಾರಂಭಕ್ಕೆ ಅಭೂತಪೂರ್ವ ರೀತಿಯಲ್ಲಿ ಎಲ್ಲಾ ಮಕ್ಕಳು, ಹಿರಿ-ಕಿರಿಯರೆಲ್ಲರೂ ತಮ್ಮದೇ ಆದಂತಹ ಮನರಂಜನಾ ಕಾರ್ಯಕ್ರಮಕ್ಕೆ ಮೆರುಗು ನೀಡಲು ಸಜ್ಜಾಗಿದ್ದಾರೆ.

ಈ ಬಾರಿ ಅತಿ ಆಸಕ್ತಿದಾಯಕ ಎಂದರೆ ಕುವೈಟ್ ಕನ್ನಡ ಕೂಟಕ್ಕೆ ಬೆಳ್ಳಿಹಬ್ಬದ ವೈಭವ ಇದರ ಸಲುವಾಗಿ ಕನ್ನಡ ಕೂಟದ ವತಿಯಿಂದ ಮನರಂಜನಾ ಕಾರ್ಯಕ್ರಮ ಹಾಗೂ ಬೆಂಗಳೊರಿನಿಂದ ಆಗಮಿಸಿರುವ ಪ್ರಭಾತ್ ಕಲಾವಿದರಿಂದ ವಿವಿಧ ನೃತ್ಯರೂಪಕ ನಾಟಕಗಳು ನೆಡೆಯಲಿವೆ. ಇದಲ್ಲದೆ ಪ್ರಭಾತ್ ಕಲಾವಿದರೊಂದಿಗೆ ಕುವೈಟ್ ಕನ್ನಡಿಗರೂ ಸಹ ಭಾಗವಹಿಸಲಿದ್ದಾರೆ.
ಕಿರುತೆರೆ ಹಾಗು ಚಲನಚಿತ್ರ ತಾರೆಗಳಾದ ಹಾಗೂ ಪ್ರಭಾತ್ ಕಲಾವಿದರಾದ ದೀಪಶ್ರೀ ಮತ್ತು ಹರೀಶ್ ದಂಪತಿಗಳ ಸಾರಥ್ಯದಲ್ಲಿ ನಾವುಗಳು ನಾಟಕಾಭ್ಯಾಸದಲ್ಲಿ ತೊಡಗಿದ್ದೇವೆ. ಪರಿಪೂರ್ಣತೆ ಅಥವಾ ಪಕ್ವತೆ ನಮ್ಮಲ್ಲಿಲ್ಲದಿದ್ದರೂ ನಮ್ಮ ಪಾತ್ರಗಳಿಗೆ ಜೀವತುಂಬುವ ನಿಟ್ಟಿನಲ್ಲಿದ್ದೇವೆ.

ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ, ಸಂತಸ ಭರಿತವಾಗಿ ನೆರವೇರುವುದೆಂದು ನಾವು ಭಾವಿಸುತ್ತ ನಿಮ್ಮೆಲ್ಲರಿಗೂ ಹೃದಯಪೂರ್ವಕ ಆಹ್ವಾನವನ್ನು ನೀಡುತ್ತಲಿದ್ದೇವೆ.


ಆಮಂತ್ರಣ ನಮ್ಮದು .... ಬರುವಿಕೆ ನಿಮ್ಮದು...ನಿಮ್ಮ ನಿರೀಕ್ಷೆಯಲ್ಲಿ ಕಾಯುವುದು ನಮ್ಮೆಲ್ಲರದು.... ಎಲ್ಲರೊಟ್ಟುಗೂಡಿ ಕನ್ನಡದದೀಪ ಬೆಳಗಿಸಿ ಉಳಿಸುವುದು ಕನ್ನಡಿಗರೆಲ್ಲರದು...

ಕಡಲ ಕಿನಾರೆಯಾದ
ಮರಳುಗಾಡ ಸಿರಿಯಲಿ
ಭಾರತಾಂಬೆಯ ಕುವರಿ
ದಿವ್ಯನಗೆಯ ಕನ್ನಡಾಂಬೆ
ವಿಜೃಂಭಿಸಲಿರುವಳು......
ನಿಮ್ಮೆಲ್ಲರ ಜಯಕಾರವಿರಲಿ
ಈ ಭುವನೇಶ್ವರಿ ತಾಯಿಗೆ........

ಶುಭದಿನ.
ವಂದನೆಗಳೊಂದಿಗೆ
ಕುವೈಟಿನ ಬ್ಲಾಗಿಗರಾದ
ಮೃದುಮನಸು,
ಸವಿಗನಸು, ಮತ್ತು
ಜಲನಯನ....

16 comments:

ಸಾಗರದಾಚೆಯ ಇಂಚರ said...

ಮನಸು,
ನಿಮ್ಮ ಕನ್ನಡ ಪ್ರೇಮ ಮನ ತುಂಬಿದೆ.
ಕುವೈತ್ ಕನ್ನಡಿಗರ ಕನ್ನಡ ಉತ್ಸವ ಕ್ಕೆ ತುಂಬು ಹ್ರದಯದ ಹಾರೈಕೆ ನಮ್ಮದು,
ಕಾರ್ಯಕ್ರಮ ಒಳ್ಳೆಯದಾಗಲಿ
ನಾಟಕಕ್ಕೆ ಶುಭ ಹಾರೈಕೆ ಇನ್ನೊಮ್ಮೆ.
ವರದಿ ನಂತರ ಬರೆಯಲು ಮರೆಯದಿರಿ

ಜಲನಯನ said...

ಮೃದುಮನಸು, ಸವಿಗನಸು ಬ್ಲಾಗ್ ಸ್ನೇಹಿತರಿಗೆ ನೀಡುತ್ತಿರುವ ಈ ಕವನ ಭರಿತ ಆಮಂತ್ರಣ ಉತ್ತಮ ಹೆಜ್ಜೆ, ಎಲ್ಲ ಸ್ನೇಹಿತರಿಗೂ ಕಡೇ ಪಕ್ಷ ನಮ್ಮ ಕಡೆಯಿಂದ ಚಿತ್ರಮಾಲಿಕೆಹೊತ್ತ ಕಿರು ವರದಿಯಂತೂ ಖಂಡಿತ ತಲುಪುತ್ತೆ ಎನ್ನೋಣವೇ ...?

ದಿನಕರ ಮೊಗೇರ said...

ಮನಸು ಮೇಡಂ,
ನಿಮ್ಮ ಆಹ್ವಾನವನ್ನ ಎಲ್ಲರೂ ಸ್ವೀಕರಿಸಿ, ನಿಮ್ಮ ಹಬ್ಬಕ್ಕೆ ಶುಭ ಕೋರುತ್ತೇವೆ.... ಹಬ್ಬ ಚೆನ್ನಾಗಿ ಆಗಲಿ ಎಂದು ಹಾರೈಸುತ್ತೇವೆ... ಅದರ ಫೋಟೋಗಳಿಗೆ ಕಾಯುತ್ತೇವೆ....

Raghu said...

ಬೆಳಗಲಿ ಕನ್ನಡದ ದೀಪ
ಹರಡಲಿ ಎಲ್ಲಡೆ ಕನ್ನಡದ ಕಂಪು...
ನಿಮ್ಮವ,
ರಾಘು.

ಮನಸು said...

ಗುರು (ಸಾಗರದಾಚೆ ಇಂಚರ)
ನಿಮ್ಮ ಪ್ರೋತ್ಸಾಹಕ್ಕೆ ನಮ್ಮ ಧನ್ಯವಾದಗಳು, ನಾಟಕ, ನೃತ್ಯ, ಹಾಡು ಎಲ್ಲವನ್ನು ನಮ್ಮ ಕೂಟದ ಮಕ್ಕಳು ಎಷ್ಟು ಚೆಂದವಾಗಿ ಮಾಡುತ್ತಿದ್ದಾರೆ ಗೊತ್ತೆ... ಎಲ್ಲರ ಪರಿಶ್ರಮ ೨೫ರ ಬೆಳ್ಳಿಹಬ್ಬವೆಂದೆ ಭಾವಿಸುತ್ತೇವೆ.
ಖಂಡಿತ ಕಾರ್ಯಕ್ರಮದ ನಂತರ ಚಾಚುತಪ್ಪದೇ ಎಲ್ಲ ವರದಿಗಳನ್ನು ತಿಳಿಸುತ್ತೇನೆ.
ವಂದನೆಗಳು

ಮನಸು said...

ಅಝಾದಣ್ಣ (ಜಲನಯನ),
ಧನ್ಯವಾದಗಳು, ಖಂಡಿತ ಚಿತ್ರಮಾಲಿಕೆಯನ್ನು ಹೊತ್ತು ತರೋಣ ಬಿಡಿ. ಕಿರುವರದಿಯನ್ನು ನೀಡಲೇಬೇಕು ಇಲ್ಲವಾದರೆ ಎಲ್ಲರಿಗು ಕನ್ನಡ ಕಂಪು ಹರಡುವುದೇಗೆ... ಅಲ್ಲವೆ?

ಮನಸು said...

ದಿನಕರ್ ಸರ್,
ನಮ್ಮ ಆಹ್ವಾನ ಸ್ವೀಕರಿಸಿದ್ದಕ್ಕೆ ನಮ್ಮ ಧನ್ಯವಾದಗಳು, ನಿಮ್ಮ ಶುಭಹಾರೈಕೆಯಂತೆ ಆಗಲಿ, ಎಲ್ಲವೂ ಸರಾಗವಾಗಿ ನೆರೆವೇರುವುದೆಂದು ನಮ್ಮೆಲ್ಲರ ಆಶಯ... ಖಂಡಿತ ಚಿತ್ರಪಟಗಳು ನಿಮ್ಮೆಲ್ಲರ ಮುಂದೆ ತರುತ್ತೇನೆ... ನಮ್ಮ ಕೂಟದ ಕನ್ನಡಿಗರೆಲ್ಲರೊ ಹಗಲು ರಾತ್ರಿಯೆನ್ನದೆ ಊಟತಿಂಡಿ ನಿದ್ರೆಗೂ ಒತ್ತುಕೊಡದೇ ಬಹಳ ಬಹಳ ಶ್ರಮಿಸುತ್ತಿದ್ದಾರೆ ಇವೆಲ್ಲದರ ಪ್ರರಿಶ್ರಮದ ಅಭೂತಪೂರ್ವ ಕಾರ್ಯಕ್ರಮವನ್ನೆಲ್ಲಾ ನಿಮ್ಮಮುಂದಿಡಬೇಕೆಂಬ ಆಸೆ ಇದೆ.

ಮನಸು said...

ರಾಘು,
ಧನ್ಯವಾದಗಳು, ಬಾನೆತ್ತರಕ್ಕೆ ಕನ್ನಡದ ಕಂಪು ಬೆಳೆಯಲಿ ಹಾಗು ಸದಾ ಕನ್ನಡದ ದೀಪ ನಂದಾದೀಪದಂತಿರಲೆಂಬುದು ನಮ್ಮೆಲ್ಲರ ಆಶಯ
ವಂದನೆಗಳು

Anonymous said...

Manasu,

All the best...

Roopa

Bengaluru

sunaath said...

ಮನಸು,
ಮರಳುಗಾಡಿನಲ್ಲಿ ಕನ್ನಡದ ದೀಪ ಹಚ್ಚುತ್ತಿರುವಿರಿ. ನಿಮ್ಮ ಉತ್ಸವಕ್ಕೆ ಶುಭ ಹಾರೈಕೆಗಳು.

ರಾಹುದೆಸೆ !! said...

ಮನಸು ಅವರೇ..

ತುಂಬಾ ಸಂತೋಷ ..
ಕನ್ನಡದ ದೀವಿಗೆ ಪ್ರಕಾಶಮಾನವಾಗಿ ಬೆಳಗಲಿ...

---www.balipashu.blogspot.com

ಶಿವಪ್ರಕಾಶ್ said...

ಮನಸು ಅವರೇ,
ಆಮಂತ್ರಣಕ್ಕೆ ಧನ್ಯವಾದಗಳು...
ಎಲ್ಲ ಕಾರ್ಯಕ್ರಮಗಳು ತುಂಬಾ ಚನ್ನಾಗಿ ಮೂಡಿಬರಲಿ ಎಂದು ಶುಭಕೋರುತ್ತೇವೆ.

ಮನಸು said...

ಧನ್ಯವಾದಗಳು ರೂಪ,

ಸುನಾಥ್ ಸರ್,
ಮರುಭೂಮಿಯ ಕನ್ನಡ ದೀಪಕ್ಕೆ ನಿಮ್ಮ ಹಾರೈಕೆ ಮುಟ್ಟಿದೆ ಅಂತೆಯೇ ನಿಮ್ಮಂತ ಹಿರಿಯರ ಹಾರೈಕೆಯಿಂದ ನಮ್ಮೆಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರುವುದೆಂದು ಭಾವಿಸುತ್ತೇವೆ.
ವಂದನೆಗಳು

ಮನಸು said...

ರಾಹುದೆಸೆ,
ಬಹಳ ಧನ್ಯವಾದಗಳು, ನಿಮ್ಮ ಒಲವಂತೆ ದೀವಿಗೆ ಪ್ರಕಾಶಿಸುತ್ತೆಂದು ಭಾವಿಸುತ್ತೇವೆ.
ಧನ್ಯವಾದಗಳು

ಶಿವಪ್ರಕಾಶ್,
ನಿಮ್ಮ ಶುಭಹಾರೈಕೆಗೆ ನಮ್ಮೆಲ್ಲರ ಧನ್ಯವಾದಗಳು.

Snow White said...

ಮನಸು ಅವರೇ ,
ತಡವಾಗಿ ಬಂದುದಕ್ಕೆ ದಯವಿಟ್ಟು ಕ್ಷಮಿಸಿ ..ನಿಮ್ಮ ಅಭಿಮಾನ ನಿಜಕ್ಕೂ ನಮಗೆಲ್ಲ ಪ್ರೇರಣೆ :)
ಹಚ್ಹೋಣ ಕನ್ನಡದ ದೀಪ ಮನ ಮನಗಳ್ಳಲ್ಲಿ :)

Ranjita said...

ಮನಸು ಮೇಡಂ..
ಮರಳುಗಾದಲ್ಲಿ ಕನ್ನಡದ ಹಸಿರನ್ನ ತುಂಬಿಸಿದ್ದಕ್ಕೆ ಅಭಿನಂದನೆಗಳು .. ತಡವಾಯ್ತು ಕ್ಷಮೆ ಇರಲಿ