Tuesday, December 29, 2009

-ಸಂಗೀತಗಾರುಡಿಗ-ಸಾಹಸಸಿಂಹ-


ಸಂಗೀತಕೂ ಸಾಹಿತ್ಯಕೂ ಏನೋ ನಂಟು
ರಾಗಸುಧೆಯಿಂದ ಸಾಹಿತ್ಯಕೆ ಕಲಾ ಮೆರುಗುಂಟು
ಸಂಗೀತ-ಸಾಹಿತ್ಯಕೆ ಸಂಬಂಧರೂಢಿಸುವಲಿ
ಈ ಗಾನಗಾರುಡಿಗನ ಪಾತ್ರ ನೂರೆಂಟು

ನೀನಿಲ್ಲದ ಸಂಗೀತ ಸುಧೆ ಕರಾಳ ಮೌನದಿ
ಕನ್ನಡಿಗರ ಮನ-ಮನೆಗಳಲಿ ಕಾರ್ಮೋಡ ಕವಿಸಿದೆ

ಹುಟ್ಟೊಂದು ದಿನ, ಸಾವೊಂದು ದಿನವೆಂದು ಬರೆದನಾ ಬ್ರಹ್ಮ
ನಿನ್ನ ಹುಟ್ಟುಸಾವು ಎರಡೂ ಒಂದೇ ದಿನ ಏನಿದರ ಮರ್ಮ!!!!

ನಿನ್ನ ಅಗಲಿಕೆಯಿಂದ ಸಂಗೀತ ಸರಸ್ವತಿ ಕಳೆಗುಂದಿಹಳು
ಈ ನಿನ್ನ ಸ್ಥಾನವ ತುಂಬಲು ಹಾತೊರೆದು ನಿಂದಿಹಳು
ಓ ದೇವನೆ ಸಂಗೀತ-ಸಾಹಿತ್ಯ ಸರಸ್ವತಿಗೆ
ಎಂದೂ ಬೀಳದಿರಲಿ ದುಃಖದ ಕರಿನೆರಳು

ಓ ಗಾನ ಕೋಗಿಲೆಯೆ ಕೇಳಲೆಲ್ಲರು ಧ್ವನಿಸುರುಳಿಯಲಿ ನಿನ್ನ ಗಾಯನ
ನಿನ್ನ ಆ ಮಾಂತ್ರಿಕ ಧನಿಗೆ ಮನಸೂರೆಗೊಂಡು ಮಾಡಲೆಲ್ಲರು ನಿನ್ನ ಮನನ
ಓ ಸಂಗೀತ ಆರಾಧಕನೆ ನಿನಗಿದೋ ನಮ್ಮೆಲ್ಲರ ಹೃತ್ಪೂರ್ವಕ ನಮನ
ನಮ್ಮನಗಲಿದ ದೇಹ ಮತ್ತೊಮ್ಮೆ ಹುಟ್ಟಿ ಕರುನಾಡಿನಲಿ ಮೂಡಿಸಲಿ ಸಂಚಲನ


ನಾನು ಕಚೇರಿಯಿಂದ ಮನೆಗೆ ಹೋಗುವ ಹೊತ್ತಿಗೆ ಸರಿಯಾಗಿ ಟಿವಿಯಲ್ಲಿ ವಾರ್ತೆಗಳು ಬರುವ ಸಮಯ, ನನ್ನ ಮಗನ ನೆಚ್ಚಿನ ಗಾಯಕ ಸಿ. ಅಶ್ವಥ್ (ತಾತ) ಇವರ ಪಾರ್ಥೀವ ಶರೀರವನ್ನು ಟಿ.ವಿಯಲ್ಲಿ ತೋರಿಸುತ್ತಲಿದ್ದರು ತಕ್ಷಣ ಅಯ್ಯೋ ಆ ತಾತ ಸತ್ತುಹೋಗಿದ್ದಾರೆ ಅಮ್ಮ ಇವರ ಮೇಲೆ ಒಂದು ಕವನ ಬರಿ ಬ್ಲಾಗಿಗೆ ಹಾಕು ಪ್ಲೀಸ್ ಎಂದು ತುಂಬಾ ನೊಂದು ಹೇಳಿದನು. ನನ್ನ ಮಗನ ದುಃಖ ನೀಗಿಸಲು ಈ ಪುಟ್ಟ ಕವನ ಹಾಗೆಯೇ ಸಂಗೀತಗಾರುಡಿಗನಿಗೆ ನಮ್ಮ ಆಶ್ರುತರ್ಪಣ.

ಈಗಷ್ಟೆ ತಿಳಿದ ಆಘಾತಕಾರಿ ಸುದ್ದಿ ಕನ್ನಡ ಚಲಚಿತ್ರ ಕಂಡ ಮೇರು ನಟ ವಿಷ್ಣುವಿನ ಅಕಾಲಿಕ ಮರಣ ಕನ್ನಡ ಸಾಹಿತ್ಯ,ಸಂಗೀತ,ಕಲಾ ಸರಸ್ವತಿಗೆ ಮತ್ತೊಂದು ನಷ್ಟವನ್ನು ತಂದುಕೊಟ್ಟಿದೆ... ೨೦೦೯ರ ಕೊನೆದಿನಗಳು ಕನ್ನಡಿಗರಿಗೆ ದುಃಖದ ಹೊಳೆಯನ್ನರಿಸಿದೆ.

ಕನ್ನಡಿಗರನ್ನಗಲಿದ ಸಾಹಸಸಿಂಹ ವಿಷ್ಣು ಹಾಗು ಸಿ. ಅಶ್ವಥ್ ಅವರಿಗೆ ನಮ್ಮ ನಮನ

14 comments:

ಜಲನಯನ said...

ನಾನು ನೋಡಿದ್ದೂ ನಿಮ್ಮ ಚಾಟ್ ನ bottom scroll line message ನಲ್ಲಿ, ತಕ್ಷಣ ನನ್ನ ಹುಚ್ಚುಮನಸು ಕೇಲಲಿಲ್ಲ ಹಾಗಾಗಿ ಬರೆದೇ ಬಿಟ್ಟೇ....ಚನ್ನಾಗಿವೆ ಸಾಲುಗಳು ಅದರಲ್ಲೂ
ಸಂಗೀತಕೂ ಸಾಹಿತ್ಯಕೂ ಏನೋ ನಂಟು
ರಾಗಸುಧೆಯಿಂದ ಸಾಹಿತ್ಯಕೆ ಕಲಾ ಮೆರುಗುಂಟು
ಸಂಗೀತ-ಸಾಹಿತ್ಯಕೆ ಸಂಬಂಧರೂಢಿಸುವಲಿ
ಈ ಗಾನಗಾರುಡಿಗನ ಪಾತ್ರ ನೂರೆಂಟು||

ಈ ಸಾಲುಗಳು ಇಷ್ಟ ಆದವು

ಮನಸು said...

ಹೌದಲ್ಲವೇ ಅಶ್ವಥ್ ರವರು ಸಂಗೀತಕ್ಕೂ ಹಾಗು ಕವಿಗಳ ಸಾಹಿತ್ಯಕ್ಕೆ ಒಂದು ಹೇಳಲಾರದ ಸಂಬಂಧವನ್ನು ಕಲ್ಪಿಸಿದ್ದಾರೆ, ಅವರ ಈ ಸಾಧನೆಯಿಂದಲೇ ಸಾಹಿತ್ಯಕ್ಕೆ ಒಂದು ಹೊಸ ಛಾಪನ್ನು ಮೂಡಿಸಿದ್ದಾರೆಂದು ಹೇಳಿದರೆ ತಪ್ಪಾಗಲಾರದು ಅಲ್ಲವೆ.

ಆನಂದ said...

ಅವರೇ ಹಾಡಿದ, ’ಸಂಜೆಯಾಗುತಿದೆ ನಡೆ ನಡೆ ಗೆಳೆಯಾ’ ನೆನಪಾಗ್ತಿದೆ

ಮನಸು said...

ಆನಂದ
ನೋಡಿ ಸಂಗೀತಗಾರುಡಿಗನ ಕಳೆದುಕೊಂಡ ದುಃಖದಲ್ಲೇ ಸಾಹಸಸಿಂಹರನ್ನು ಕಳೆದುಕೊಂಡೆವು ಎಂತಹ ದಿನಗಳಾಗಿಬಿಟ್ಟವು... ಇನ್ನು ಯವ ಹೊಸವರ್ಷ ಬಂದರೂ ಜನ ಈ ಕಹಿ ನೆನಪನ್ನು ಮರೆಯಲಾರರು.

ಮನಮುಕ್ತಾ said...

ಸಿ ಅಶ್ವಥ್ ಹಾಗೂ ಸಾಹಸ ಸಿ೦ಹ ವಿಷ್ಣುವರ್ಧನ್ ರವರನ್ನು ಕಳೆದುಕೊ೦ಡದ್ದು ಕಲಾಜಗತ್ತು ಹಾಗೂ ಕನ್ನಡಿಗರಿಗೆ ಭರಿಸಲಾರದ ನಷ್ಟ.ಅವರಿಬ್ಬರ ಆತ್ಮಗಳಿಗೂ ದೇವರು ಚಿರ ಶಾ೦ತಿ ನೀಡಲಿ ಎ೦ದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಮನಸು ಅವರೆ,
ಕವನವನ್ನು ಚೆನ್ನಾಗಿ ಬರೆದಿದ್ದೀರಿ.
ವ೦ದನೆಗಳು.

ದಿನಕರ ಮೊಗೇರ said...

ಮನಸು ಮೇಡಂ,
ಇಬ್ಬರು ಮೇರು ವ್ಯಕ್ತಿಗಳು, ಕಲಾ ಆರಾಧಕರನ್ನು ಕಳೆದುಕೊಂಡ ಕರುನಾಡು ನಿಜಕ್ಕೂ ಬಡವಾಗಿದೆ..... ಅಶ್ವಥ್ ಕಂತವನ್ನ, ವಿಷ್ಣು ಸರ್ ಕೈಬಳೆ ತಿರುಗಿಸುವ styleಮರೆಯೋಕೆ ಸಾದ್ಯಾನೆ ಇಲ್ಲ ಬಿಡಿ .....
ನಿಮ್ಮ ಕವನದ ಸಾಲುಗಳು ತುಂಬಾ ಚೆನ್ನಾಗಿವೆ......

Snow White said...

ಇಬ್ಬರನ್ನು ಕಳೆದುಕೊಂಡು ನಿಜಕ್ಕೂ ತುಂಬಾ ನೋವಾಗಿದೆ ಮೇಡಂ..ಅವರ ಅಗಿಲಿಕೆಯನ್ನು ಸಹಿಸುವ ಶಕ್ತಿ ಅವರ ಕುಟುಂಬದವರಿಗೆ ನೀಡೆಂದು ದೇವರಲ್ಲಿ ಬೇಡಿಕೊಳ್ಳುವ...

ಮನಸು said...

ದಿನಕರ್ ಸರ್,
ಮೇರು ವ್ಯಕ್ತಿಗಳ ಮರಣ ಭಾರಿ ಒಡತವನ್ನೆ ತಂದಿದೆ... ಯಾರು ಊಹಿಸದಂತಾ ಕಹಿ ಘಟನೆ ಅಲ್ಲವೆ.

ಮನಸು said...

ಮನಮುಕ್ತ...
ಎಂತಹ ಘಟನೆಗಳು ನೆಡೆದುಬಿಟ್ಟವಲ್ಲವೆ... ೨ದಿನದಲ್ಲಿ ಇಡೀ ಕನ್ನಡಲೋಕ ಶೋಕತಪ್ತರಾಗಿ ಮುಳುಗಿಹೋಗೋ ಹಾಗೆ ಆ ದೈವ ಮಾಡಿಬಿಟ್ಟನು.

ಸ್ನೋ ವೈಟ್,
ಇಬ್ಬರೂ ಅವರದೇ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು... ಇವರ ಅಗಲಿಕೆ ಕನ್ನಡ ನಾಡಿಗೆ ಮಂಕುಕವಿಸಿದೆ ಅಲ್ಲವೆ. ಇಬ್ಬರು ಮತ್ತೊಮ್ಮೆ ಹುಟ್ಟಿಬರಲೆಂದು ಆಶಿಸುತ್ತೇನೆ

ಸೀತಾರಾಮ. ಕೆ. / SITARAM.K said...

ಸ೦ಗೀತ-ಸಾಹಿತ್ಯ-ಸಿನೇಮಾಗಳ ನ೦ಟಿನ ಅಶ್ವಥರು ತಮ್ಮ ಗಾಯನದಿ೦ದ ಮತ್ತು ಸ೦ಗೀತದಿ೦ದ, ಸಿನೇಮಾರ೦ಗಕ್ಕೂ ಮತ್ತು ಸಾಹಿತ್ಯಕ್ಕೂ ಅರ್ಥ ತು೦ಬುವದಲ್ಲದೇ ಸ೦ಗೀತದಲ್ಲಿ ತಮ್ಮದೇ ಆದ ಛಾಫು ಮೂಡಿಸಿದ್ದರು. ಅವರ ಸ೦ಗೀತ ಹಾಗೂ ಗಾಯನ ವಿಶಿಷ್ಠ ಶೈಲಿಯದಾಗಿದ್ದೂ ಕೇಳುಗರನ್ನು ಮ೦ತ್ರ ಮುಗ್ಧರನ್ನಾಗಿಸಿ ರ೦ಜಿಸುತ್ತಿದ್ದವು.
ತಮ್ಮ ಭಾವ ಪೂರ್ಣ ನುಡಿ ನಮನಗಳು ತು೦ಬಾ ಸ೦ಧರ್ಭ ಸೂಕ್ತ.

ಶಿವಪ್ರಕಾಶ್ said...

ಕನ್ನಡಕ್ಕೆ, ಕನ್ನಡಿಗರಿಗೆ ತುಂಬಲಾರದ ನಸ್ಟ. :(

ಮನಸು said...

ಈ ಕಹಿನೆನಪಿನಲ್ಲೇ ಬರುತ್ತಿರುವ ಹೊಸ ವರುಷಕ್ಕೆ ಶುಭಕೋರುತ್ತೇನೆ.. ಹೊಸ ವರುಷ ಹೊಸತನ್ನು ತರಲಿ

Ittigecement said...

ಮನಸು...

ನನಗಂತೂ ಎರಡು ಮೂರುದಿನ ಮನಸ್ಸೇ ಸರಿ ಇರಲಿಲ್ಲ..
ಅಶ್ವಥ್ ರವರ ಹಾಡುಗಳನ್ನು ಕೇಳುವಾಗ ಕಣ್ಣಂಚಲ್ಲಿ ನೀರು ಬಂದಿತ್ತು...

ಆ ಇಬ್ಬರೂ ಮಹಾನ್ ವ್ಯಕ್ತಿಗಳಿಗೆ ದೇವರು ಶಾಂತಿಯನ್ನು ನೀಡಲಿ...

ನಿಮ್ಮ ಕವನ ಭಾವ ಪೂರ್ಣವಾಗಿದೆ...

ಸಾಗರದಾಚೆಯ ಇಂಚರ said...

ಮನಸು,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಅಶ್ವಥ್, ವಿಷ್ಣು ಸಾವು ತುಂಬಾ ಆಘಾತ ನೀದುವನ್ತದ್ದು
ಇಬ್ಬರೂ ತಮ್ಮದೇ ಶೈಲಿಯಲ್ಲಿ ಚಿತ್ರರಂಗವನ್ನು ಆಳಿದವರು
ಒಬ್ಬರು ಸಂಗೀತವನ್ನು ನೀಡಿದವರು, ಇನ್ನೊಬ್ಬರು ಅಭಿನಯವನ್ನು ಸಕ್ಷಾತ್ಕರಿಸಿದವರು
ಕವನದ ಮೂಲಕ ತುಂಬಾ ಮನಸ್ಸಿಗೆ ಒಪ್ಪುವಂತೆ ಹೇಳಿದ್ದಿರಿ