Thursday, March 7, 2013

ಮುಸುಕಿನಿಂದೊರಗೆ


ಮುಸುಕಿನಿಂದೊರಗೆ



ಹಸಿರ ಹೊದಿಕೆಯಲಿ
ಬೆಚ್ಚಗಿದ್ದವಳ ಬಿಚ್ಚಿ
ಕೆಂಡದೋಕುಳಿಯಲಿ
ಸುಟ್ಟು ಬೇಯಿಸಿದರು
ಇಂಗಳದ ಕಾವು 
ತಡೆಯುವ ಮುನ್ನ
ಉಪ್ಪು-ಖಾರ ಬೆರೆಸಿ
ಸೇವಿಸಿದರೆನ್ನ...

ಬೆಂದ ಮೈಯ್ಯಿ
ಖಾರದುರಿಯ
ಬೇನೆಯಲಿದ್ದವಳನು
ಸವಿದು ಸವಿದು
ಜಗಿದು ಜಗಿದು
ತಿನ್ನುತಲಿದ್ದರು....

ಹೊಟ್ಟೆ ಹೊರೆಯಲು
ಬಾಯಿ ರುಚಿಸಲು
ನಾನು ಬೇಕು
ನನ್ನ ಸುಡಲೇಬೇಕು
ಬದುಕು ಬಯಸಿದಾಗಲ್ಲ
ಇನ್ನೊಬ್ಬರ ಜೀವನಕೆ
ಮತ್ತೊಬ್ಬರು ಸಾಯಲೇಬೇಕು...

ಚಿತ್ರ ಕೃಪೆ: ಅಮೋಲ್ ಪಾಟೀಲ್

14 comments:

ದಿನಕರ ಮೊಗೇರ said...

Vah.... naanu saha tindiddene... yaavattu ee riti yochisiralilla.... superr kavana.....

ಸಂಧ್ಯಾ ಶ್ರೀಧರ್ ಭಟ್ said...

ಚಂದ ಸುಗುಣಕ್ಕ ... ಜೋಳದ ಸ್ವಗತ ಚೆನ್ನಾಗಿದೆ ..

ಮೌನರಾಗ said...

ನನ್ನದೂ ಕೂಡ ದಿನಕರ್ ಸರ್ ಥರದ್ದೇ ಪ್ರತಿಕ್ರಿಯೆ..
ಭಿನ್ನವಾಗಿ ಯೋಚಿಸಿ ಚಂದದ ಕವಿತೆ ಕಟ್ಟಿದ್ದಿರಿ.. ಸೂಪರ್...

Srinidhi Rao said...

jolada muttinante Sundara nimma kavana :)

ಚಿನ್ಮಯ ಭಟ್ said...

ಜೋಳಗೀತೆ.....

Jayalaxmi said...

ಚೆನ್ನಾಗಿದೆ ಸುಗುಣ, ಕವನ ಇಷ್ಟವಾಯ್ತು. ಅದರಲ್ಲೂ
"ಬದುಕು ಬಯಸಿದಾಗಲ್ಲ
ಇನ್ನೊಬ್ಬರ ಜೀವನಕೆ
ಮತ್ತೊಬ್ಬರು ಸಾಯಲೇಬೇಕು..." ಎಂಥಾ ಕ್ರೂರ ಸತ್ಯವಿದು!!

Srikanth Manjunath said...

ಬೂದಿ ಮುಚ್ಚಿದ ಕೆಂಡ ಮುಸುಕಿನ ತೆರೆ ಎಳೆದ ಜೋಳಕ್ಕೆ ಹೇಳುತ್ತೆ
ನನ್ನ ಸುಟ್ಟುಕೊಂಡು ನಿನ್ನ ಬೇಯಿಸುತ್ತಿದ್ದೀನಿ
ನೀನು ಬೆಂದು ಬೇರೊಬ್ಬರ ಜಠರಾಗ್ನಿಯಲ್ಲಿ ಸೇರುವೆ.
ಅಮೋಲ್ ಪಾಟೀಲ್ ತೆಗೆದ ನಮ್ಮಿಬ್ಬರ ಚಿತ್ರ... ಸುಗುಣಕ್ಕನಿಗೆ ಸ್ಪೂರ್ತಿಯಾಯಿತು
ಜೋಳವೆ ಒಬ್ಬರಿಗೊಬ್ಬರು ಎನ್ನುವ ತತ್ವಕ್ಕೆ ಈ ಕವನ ಶರಣಾದವು!
ಸೂಪರ್ ಅಕ್ಕಯ್ಯ ಇಷ್ಟವಾಯಿತು

Ittigecement said...

" ನನ್ನ ಸುಡಲೇಬೇಕು
ಬದುಕು ಬಯಸಿದಾಗಲ್ಲ
ಇನ್ನೊಬ್ಬರ ಜೀವನಕೆ
ಮತ್ತೊಬ್ಬರು ಸಾಯಲೇಬೇಕು..."


ಸತ್ಯವಾದ ಮಾತು..
ಮನ ತಟ್ಟಿತು...

ಅಭಿನಂದನೆಗಳು ಸುಂದರ ಸಾಲುಗಳಿಗೆ..

sunaath said...

ಸತ್ಯವಾದ ಮಾತು!

Unknown said...

ಮುಸುಕಿನ ಮರೆಯಲಿದ್ದವಳ ಕಥೆ :-)

Unknown said...

ಮುಸುಕಿನ ಮರೆಯಲಿದ್ದವಳ ಕಥೆ :-)

Anonymous said...

ಮುಸುಕಿನ ಮರೆಯಲಿದ್ದವಳ ಕಥೆ :-)

-ಸುಜಾತ ಲೋಕೇಶ್

Badarinath Palavalli said...

ಬದುಕಿನ ನಿಜ ಅನಾವರಣ. ಒಬ್ಬರು ಸುಲಿದರೆ ಮತ್ತೊಬ್ಬರಿಗೆ ಬದುಕು. ಉತ್ತಮ ಕವನ.

Santoshkumar said...

ರುಚಿಗಾಗಿ ಜೀವ ತಿಂದೆವು ಯೋಚಿಸಲಿಲ್ಲ ರುಚಿಸಿದ ಜೀವ ರುಚಿಗಾಗಿಗೆ ಜೀವನ ರುಚಿಯಿಂದಲೇ ವೇದನ
ರುಚಿಸಿದ್ದು ರುಚಿಸಲಾಗಲಿಲ್ಲ ರುಚಿನೀಡಿದ ಜೀವನ!