ಪೋಟೋ: ಗಿರೀಶ್
(ಈ ಪೋಟೋ ನೋಡಿದೊಡನೆ ನನ್ನೂಳಗೆ "ಹುಟ್ಟು" ಹುಟ್ಟಿಸಿದ ಸಾಲುಗಳು)
-ಹುಟ್ಟು ಬದುಕು-
ನಾ ಬಯಸಿದ ಜೀವನ
ನೀರ ಗರ್ಭದಲಿ
ತೆಪ್ಪದ ತೊಟ್ಟಿಲಿನಲಿ
ಹುಟ್ಟು ಹಾಕುತ
ದಡವ ಮುಟ್ಟಿಸುವ ಬದುಕು...
ನೀರ ಆಳದಲಿ
ಬಂಡೆಗಳ ಒಡೆತ
ಪ್ರಯಾಣಿಕರ ನಡುಕ
ಎದೆ ಝಲ್ ಎನಿಸಿದರೂ
ಕೈಯೊಳಗಿನ ಹುಟ್ಟು ಜಾರದಿರುವ ಜೀವನ
ಶಾಂತ ಅಲೆಗಳು
ಅಬ್ಬರಿಸುವ ಮೊದಲು
ಭಯದ ನೆರಳ ಸರಿಸಿ
ಮರಗೋಲ ಹಿಡಿದು
ಉದಕವ ಹಿಂದಿಕ್ಕಿ ಸಾಗುವ ಬದುಕು....
14 comments:
ಚಿತ್ರಕ್ಕೆ ನೆರಳು ಬೆಳಕಿನ ತುಸು ಬಂಗಾರದ ಬಣ್ಣದ ಸ್ಪರ್ಶ ಕೊಟ್ಟಾಗ ಕಣ್ಣಿಗೆ ಹಬ್ಬ
ಆ ಚಿತ್ರಕ್ಕೆ ಅಕ್ಷರಗಳ ತೇರಿನಲ್ಲಿ ಭಾವಗಳ ಹಗ್ಗದಿಂದ ಮೆರವಣಿಗೆ ಮಾಡುತ್ತಾ ಹೋದಾಗ
ಮನದ ಕಡಲಲ್ಲಿ ಸಂತಸದ ಅಲೆಗಳು ಏಳುವ ಸಮಯ ರಮಣೀಯ.
ಚಿತ್ರದ ಬದುಕನ್ನು ಅಕ್ಷರಗಳಲ್ಲಿ ಸೆರೆ ಹಿಡಿದ ಬಗೆ ಸೂಪರ್ ಅಕ್ಕಯ್ಯ
ಚೆನಾಗಿದೆ ಮೇಡಮ್....
ಅಲ್ಲಿ "ಕೈಯೊಳಗಿನ ಹುಟ್ಟು ಜಾರದಿರುವುದೇ ಜೀವನ"
ಎನ್ನುವ ಸಾಲುಗಳು ಇಷ್ಟವಾಯ್ತು....
ಉದಕ ಪದವನ್ನು ನೆನಪಿಸಿದಿರಿ...ಧನ್ಯವಾದಗಳು..
ಬರೆಯುತ್ತಿರಿ :)...
ನಮಸ್ತೆ :)
ಮನಸು...
ಬದುಕಿನ ಮಜಲುಗಳನ್ನು
ಕೆಲವೆ ಸಾಲುಗಳಲ್ಲಿ ಎಷ್ಟು ಚೆನ್ನಾಗಿ ಬಿಡಿಸಿಟ್ಟಿದ್ದೀರಿ...
ವಾಹ್. !
ಅಭಿನಂದನೆಗಳು ಚಂದದ ಕವನಕ್ಕೆ...
ಸುಂದರ ಸಾಲುಗಳು!!!!
ಬದುಕಿನ ಯಾನದ ಸವಿವರ ಕಾವ್ಯಾತ್ಮಕ ಪ್ರಸ್ತಾವನೆ. ಒಳ್ಳೆಯ ಜೀವನ ಶಾರದ ಕಾವ್ಯ.
ಮನಸ್ಸಿಗೆ ಇಳಿದ ಪ್ರಯೋಗಗಳು:
ತೆಪ್ಪದ ತೊಟ್ಟಿಲು,
ಕೈಯೊಳಗಿನ ಹುಟ್ಟು ಜಾರದಿರುವುದೇ ಜೀವನ,
ಮರಗೋಲು.
ಗಿರೀಶರ ಚಿತ್ರವೂ ಮೇಚ್ಚಿಗೆಯಾಯಿತು.
Very meaningful......tumbaa ishtavaaytu Suguna....
Roopa
ಎಲ್ಲರಿಗೂ ಧನ್ಯವಾದಗಳು ನಿಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೇ ಇರಲಿ
Super akka... Tumba ishtavaytu.. photo kooda tumba chenaagide
ಒಟ್ಟಿನಲಿ 'ಹುಟ್ಟಿದ್ದ' ಮೇಲೆ ಭಯವೇತಕೆ?
ಚಂದ ಇದೆ ಬರೀತಿರಿ
ಚಂದ ಇದೆ ಬರೀತಿರಿ
ಚೆನ್ನಾಗಿದೆ ಭಾವ ಬರಹ :)
ದೋಣಿಯ ಈ ಪಯಣ ಹುಟ್ಟು ಹಾಕುತ್ತಾ ಹಾಕುತ್ತಾ ನಾವಿಗನ ಹುಡುಕಾಟಕ್ಕೆ ಹೊರಟಂತೆ ಭಾಸವಾಯ್ತು :)
ತುಂಬಾ ಇಷ್ಟವಾಯ್ತು ಪದಗಳಲ್ಲಡಗಿ ಕೂತ ಭಾವ .
ಬದುಕನ್ನು ನೀರಿನಲ್ಲಿ ಪ್ರಯಾಣಕ್ಕೆ ಒಳ್ಳೆ ಹೋಲಿಕೆ
ಶಾಂತ ಅಲೆಗಳು
ಅಬ್ಬರಿಸುವ ಮೊದಲು
ಭಯದ ನೆರಳ ಸರಿಸಿ
ಮರಗೋಲ ಹಿಡಿದು
ಉದಕವ ಹಿಂದಿಕ್ಕಿ ಸಾಗುವ ಬದುಕು....
ಬದುಕಿನ ಆಶೋತ್ತರಗಳ ಹಿಂದೆ ಭೇತಾಳವಾಗುವ ಬದುಕು ವಿಕ್ರಮನ ಸರಿಯುತ್ತರ ಎಂದೂ ಬಯಸದು..ಇದೇ ಆಶಯ..ಕೊನೆಯ ನಾಲ್ಕು ಸಾಲಿನ ಭಾವವೂ ಅದೇ ಮಂಥನದತ್ತ...ಸುಗುಣ ಚನ್ನಾಗಿದೆ ಕವನ...
Post a Comment