ಫೆ. ೨೦ ರಂದು ನಡೆಯಲಿರುವ ದಾಸೋತ್ಸವ ಪ್ರಯುಕ್ತ - ಕುವೈತ್ ಕನ್ನಡ ಕೂಟದ ವತಿಯಿಂದ ಸ್ಪರ್ಧಾಕೂಟವನ್ನು ಏರ್ಪಡಿಸಲಾಗಿತ್ತು. ಈ ಪುಟ್ಟ ಮಕ್ಕಳ ಆಸಕ್ತಿ, ಅಭಿಲಾಷೆ, ಮುಗ್ಧತೆ ಜೊತೆಗೆ ಕೆಲವು ಮಕ್ಕಳ ತುಂಟತನ ಎದ್ದು ಕಾಣುತಿತ್ತು.
ಗಣಪನಿಗೆ ಆಂಗ್ಲಭಾಷೆ ತಿಳಿಯದು ಎಂದು ಈ ಮುದ್ದು ಕಂದ ಮುದ್ದುಮುದ್ದಾಗಿ ಬರೆದು ಗಣಪನಿಗೆ ಕಲಿಸುತ್ತಿದ್ದಾನೆ ನೋಡಿ...
ಈ ಮಗು ಇನ್ನು ಶಾಲಾಮೆಟ್ಟಿಲೇರದ ಕಂದ, ಬಹಳ ಮುಗ್ದತೆಯಿಂದ ನನ್ನ ಕರೆದು ಆಂಟಿ ನಾನು ಎಲ್ಲ ಬಣ್ಣ ಉಪಯೋಗಿಸಿದ್ದೀನಿ ನೋಡಿ ಎಂದು ತೋರಿಸುತ್ತಿತು.......
ಆಯ್ದ ಕೆಲವೇ ಕೆಲವು ಚಿತ್ರಗಳು ನಿಮ್ಮ ಮುಂದೆ ..........
ಕನ್ನಡಕೂಟದಲ್ಲಿ ಇನ್ನು ಹಲವು ಸ್ಪರ್ಧೆಗಳು ಮಕ್ಕಳಿಗಾಗಿ ಏರ್ಪಡಿಸಿದ್ದರು.. ಹೆಚ್ಚು ಪ್ರಚಾರ, ತಂದೆತಾಯಿಗಳ ಒಲವು, ವಿಭಿನ್ನತೆ ಕಂಡಿದ್ದು ಈ ಪುಟ್ಟ ಕಂದಮ್ಮಗಳ ಸ್ಪರ್ಧಾ ಕೂಟದಲ್ಲಿ..... ಕೆಲವು ಮಕ್ಕಳಿಗೆ ಚಿತ್ರಗಳನ್ನು ಕೊಟ್ಟ ತಕ್ಷಣ.... ಒಹ್ ಇದು ನೃತ್ಯ ಗಣೇಶ ಎಂದು ಆ ಪುಟ್ಟ ಮೊಗದಲ್ಲಿ ... ನಗುವಿನ ಛಾಯೆ ಅರಳಿತ್ತು.. ಗಣೇಶನ ವರ್ಣನೆಗಳು ನೂರೆಂಟು ಕೇಳಿಬಂದವು..ಆ ಪುಟ್ಟ ಕಂದಮ್ಮಗಳಲ್ಲಿ ದೇವರ ಒಲವು ಎದ್ದುಕಾಣುತಿತ್ತು...

ಈ ಸ್ಪರ್ಧೆಗೆ ಒಟ್ಟು ೩೭ ಮಕ್ಕಳು ಭಾಗವಹಿಸಿದ್ದರು. ಈ ಮಕ್ಕಳಿಗೆ ಬಹುಮಾನ ಮುಖ್ಯವಾಗಲಿಲ್ಲ ಗಣಪನಿಗೆ ಬಣ್ಣ ತೋರಿಸುವುದು ಮುಖ್ಯವಾಯಿತು, ಇನ್ನು ಕೆಲವು ಮಕ್ಕಳು ಚಿಪ್ಸ್ ಮತ್ತು ಜೂಸ್ ಅವರ ಗಮನ ಸೆಳೆದು ಗಣಪನಿಗೆ ಬಣ್ಣ ತೋರಿಸೋ ನಿಷ್ಠೆಯಲ್ಲಿ ಎಲ್ಲೋ ಒಂದು ಕಡೆ ಕೊರತೆಯಾಯಿತು ಹ ಹ ಹ .
ಪುಟ್ಟ ಕಂದಮ್ಮಗಳ ನಲಿವುಂಡ ನಾವೇ ಧನ್ಯರು.........
13 comments:
ಮನಸು...
ತುಂಬಾ ಚೆನ್ನಾಗಿದೆ..
ದೂರದ ಊರಿನಲ್ಲಿ ಕನ್ನಡದ ಕಂಪು ಹರಡುವ ಪ್ರಯತ್ನ ಕೇಳಿ ಖುಷಿಯಾಯಿತು..
ಚಂದದ ಫೋಟೊಗಳು..
ಅದಕ್ಕೆ ಪೂರಕವಾದ ಬರಹ..
ಎಲ್ಲವೂ ಸೊಗಸು...
ಅಭಿನಂದನೆಗಳು..
ಧನ್ಯವಾದಗಳು ಸರ್,
ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ ಸರ್... ನಮ್ಮೊರ ಸವಿ, ನಮ್ಮ ಧರ್ಮ, ಭಾಷೆ ಎಲ್ಲವನ್ನು ತಿಳಿಸ ಬೇಕಲ್ಲವೇ ... ಇವೆಲ್ಲದರ ತಿಳುವಳಿಕೆಗಾಗಿ ಕನ್ನಡ ಕೂಟ ಒಂದು ವೇದಿಕೆ..
ವಂದನೆಗಳು....
ಆ ಪುಟ್ಟ ಮಗು ತನ್ನ ಚಿತ್ರ ತೋರಿಸುತ್ತಿರುವುದು ಬಹಳ ಚೆನ್ನಾಗಿದೆ, ಮಕ್ಕಳೇ ಹಾಗೆ ಇನ್ನು ಅವರ ಕಲ್ಪನೆಗಳಿಗೆ ಬಣ್ಣ ತುಂಬಲು ಹೇಳಿದರೆ ಆಯ್ತು ಥರ ಥರ ಚಿತ್ತಾರ ವಿಚಿತ್ರಗಳೇ ಮೂಡಲು ಸಾಧ್ಯ...
ಮಕ್ಕಳ ಚಿತ್ರಕಲೆ ಅದ್ಬುತವಾಗಿದೆ ...ಪುಟಾಣಿಗಳ ಮುಗ್ಧತೆ ಕಂಡು ಸಂತೋಷ ಆಯಿತು...ಆ ಕಾರ್ಯಕ್ರಮ ನಡೆಸಲು ಅವಕಾಶ ಸಿಕ್ಕ ನಾನೇ ಧನ್ಯ ....
ಮುಗ್ದ ಮನಸ್ಸಿನ ಮಕ್ಕಳು ತಮ್ಮ ಕಲ್ಪನೆಯಲ್ಲಿ ತುಂದಿದ ಬಣ್ಣ ತುಂಬಾ ಚೆನ್ನಾಗಿದೆ.ನಿಮ್ಮ ಬರಹ ಅದರ ಮೆರಗನ್ನು ಹೆಚ್ಚಿಸಿದೆ.
Hey!!!
Great Art from Kids.......
Keep posting these kind of works all the best.......
ಪ್ರಭು... ಧನ್ಯವಾದಗಳು...
ಅವರು ಆ ಬಣ್ಣ ತುಂಬುವಾಗ ಅವರ ಮಾತುಗಳು ಕೇಳಬೇಕಿತ್ತು ಒಂದೊಂದು ಮಗು ಒಂದೊಂದು ರೀತಿ ವರ್ಣನೆ ಸಾಗುತಿತ್ತು...
ವಂದನೆಗಳು..
sugma..
ನಿಮಗೆ ಇನ್ನು ಚೆನ್ನಾಗಿ ಅನುಭವ ಆಗಿದೆ ಅಲ್ಲಿ ... ಒಂದು ಮಗು ನಿಮ್ಮ ಮೇಲೆ ಕಂಪ್ಲೇಂಟ್ ಹೇಳಿತ್ತು ನೆನಪಿದೆಯೇ...
"Uncle is Distracting me" ha ha ha ..
ಧನ್ಯವಾದಗಳು.. ಹೀಗೆ ಬರುತ್ತಲಿರಿ....
ಮೂರ್ತಿ,
ಮಕ್ಕಳ ಕಲ್ಪನೆ ಎಲ್ಲೇ ಮೀರಿದ್ದು..
ಧನ್ಯವಾದಗಳು...
ಮನಸು,
ಪುಟ್ಟ ಮಕ್ಕಳ ಚಟುವಟಿಕೆಯನ್ನು ನೋಡುವುದೇ ಒಂದು ಖುಷಿ. ದೂರದೂರಿನಲ್ಲಿ ಕನ್ನಡದ ಹೊಳಪು ಹೆಚ್ಚುತ್ತಿರುವುದು ಖುಷಿಯ ವಿಚಾರ....ಫೋಟೊಗಳು ಚೆನ್ನಾಗಿವೆ....ಅಭಿನಂದನೆಗಳು...
ಶಿವು ಸರ್,
ಪುಟ್ಟ ಮಕ್ಕಳು ಏನು ಮಾಡಿದರೂ ಚೆನ್ನ, ಇನ್ನು ಹೆಚ್ಚಿನ ಹೊಳಪನ್ನು ಸೂಸುತ್ತಿರುವ ಇಲ್ಲಿನ ಕನ್ನಡಿಗರ ಸಾಧನೆ ಎಲ್ಲವನ್ನು ನಿಮ್ಮುಂದೆ ತರುವ ಪ್ರಯತ್ನ ಮಾಡುತ್ತೇನೆ..
ಧನ್ಯವಾದಗಳು..
ನಿಮ್ಮ ಬರಹ ನೋಡಿ ತುಂಬ ಹೆಮ್ಮೆಯೆನಿಸಿತು. ದೇಶ ಬಿಟ್ಟು ಪರದೇಶದಲ್ಲಿದ್ದರೂ ಸಂಸ್ಕ್ರತಿಯ ಕಡೆಗೆ ಮಕ್ಕಳನ್ನು ಹುರಿದುಂಬಿಸುವ ಕಾರ್ಯ ಮೆಚ್ಚಬೇಕಾದ್ದೆ. ಇನ್ನೂ ಹೆಚ್ಚಿನ ಇಂಥಹ ಕಾರ್ಯಕ್ರಮಗಳು ಜರುಗಲಿ ಹಾಗೂ ಅದನ್ನು ನಮಗೆ ತಿಳಿಸುತ್ತಿರಿ.
Guru
ಮನಸು,
ಚಿಕ್ಕಮಕ್ಕಳು ತೆಗೆದ ಗಣಪತಿಯ ಚಿತ್ರಗಳು ತುಂಬ ಸೊಗಸಾಗಿವೆ.
Post a Comment