ಅವರು ವೃತ್ತಿಯಲ್ಲಿ ಶಿಕ್ಷಕರು ಅತಿ ಶಿಸ್ತಿನ ವ್ಯಕ್ತಿ... ದೇವನಹಳ್ಳಿ ಒಂದೇ ಊರಿನಲ್ಲಿ ಸುಮಾರು ೩೦ ವರ್ಷ ಕೆಲಸ ಮಾಡಿದ್ದರು. ಸಂಸಾರ ಬೆಂಗಳೂರಿಗೆ ಬಂದು ನೆಲೆಸಿದ್ದರಿಂದ ಅವರು ಆ ಶಾಲೆಯನ್ನು ಬಿಟ್ಟು ಬೇರೆಡೆಗೆ ಬರಬೇಕಾಯಿತು... ಆಗ ಬಂದದ್ದೇ ತಿಪ್ಪಗೊಂಡನ ಹಳ್ಳಿಯ ಹತ್ತಿರವಿರುವ ಮಸ್ಕಲ್ಲು ಎಂಬ ಗ್ರಾಮಕ್ಕೆ ಆ ಊರಿಗೆ ಹೆಚ್ಚು ಜನ ಸಂದಣಿ ಕಾಣದ ಊರು ಅಲ್ಲಿ ಹೆಚ್ಚು ಸಂಸಾರಗಳು ಲಂಬಾಣಿ ಕುಟುಂಬಗಳು ಆ ಮಾಸ್ತರು ಹೋಗುವವರೆಗೂ ಈ ಮೂದಲು ಬೇರಾವ ಶಿಕ್ಷಕರು ಅಲ್ಲಿ ಹೆಚ್ಚು ದಿನ ಕೆಲಸಮಾಡಿದವರು ಇರಲಿಲ್ಲ (ಅಲ್ಲಿಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದ ಶಿಕ್ಷಕರೆ ತೀರಾ ವಿರಳ)... ಇವರು ಅಲ್ಲಿಗೆ ತೆರಳಿದಾಗ ಊರ ಜನರೂ ಕೂಡ ಇಷ್ಟುದಿನ ಬಂದು ಹೋದ ಶಿಕ್ಷಕರುಗಳ ಹಾಗೆ ಇವರು ಎಂದು ಓಡಿ ಹೋಗುತ್ತಾರೊ ಎಂದು ಭಾವಿಸಿದ್ದರು... ಮೂದಲು ಶಾಲೆಗೆ ಹೋದಾಗ ಇವರಿಗು ಕೂಡ ಕಷ್ಟವೆನಿಸಿತ್ತು ಹೇಗೆ ಈ ಹಳ್ಳಿಗೆ ಬಂದು ಹೋಗುವುದೆಂದು ಕಾರಣ ಆ ಹಳ್ಳಿಗೆ ಯಾವುದೆ ಬಸ್ ಸೌಕರ್ಯವಿರಲಿಲ್ಲ ತಿಪ್ಪಗೂಂಡನ ಹಳ್ಳಿಯವರೆಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಸುಮಾರು ೫ ಕಿ.ಮಿ ದೂರದಷ್ಟು ಕಾಲು ನೆಡಿಗೆಯಲ್ಲೇ ಸಾಗಬೇಕಿತ್ತು... ಬಿಸಿಲು ಮಳೆ ಎನ್ನದೆ ಆ ರಸ್ತೆಗೇನು ಅಚ್ಚುಕಟ್ಟಾದ ದಾರಿ ಇರಲಿಲ್ಲ ದಾರಿಯಲೆಲ್ಲಾ ಕಲ್ಲು ಮುಳ್ಳುಗಳದೇ ರಾಶಿ..ಅಂತಹ ದಾರಿಯಲ್ಲಿ ಓಡಾಡುವುದು ಬಲು ಕಷ್ಟದ ಕೆಲಸ ಕೂಡ... ಆದರು ಸ್ವಲ್ಪವೂ ಬೇಸರಪಡದೆ ಒಂದು ದಿನವೊ ತಪ್ಪದೇ ಶಾಲೆಗೆ ಹೋಗುತ್ತಿದ್ದರು ಇದನ್ನು ಕಂಡ ಆ ಊರ ಜನ "ಮಾಸ್ತರೆ ನೀವು ದಿನವೂ ಅಷ್ಟು ದೂರ ಎರಡು ಸಮಯಕ್ಕೂ ಸುಮಾರು ೧೦ ಕಿ. ಮಿ. ದೂರ ಓಡಾಡಲು ಕಷ್ಟವಾಗುತ್ತೆ ಇನ್ನು ಮುಂದೆ ಶನಿವಾರದಂದು ಶಾಲೆಗೆ ಬರಬೇಡಿ" ನೀವು ಇಷ್ಟು ಶ್ರದ್ಧೆಯಿಂದ ನಮ್ಮ ಮಕ್ಕಳಿಗೆ ವಾರವೆಲ್ಲ ಹೇಳಿಕೂಡುತ್ತೀರಿ ಒಂದು ದಿನ ಬರದಿದ್ದರೆ ಏನು ಆಗದು ಎಂದು ಹೇಳಿದ್ದರಂತೆ.... ಆ ಮಾತು ಕೇಳಿ ನನಗೂ ಖುಷಿಯಾಗಿತ್ತು ಇವರ ಕಷ್ಟ ನೋಡಲಾಗದೆ ಕನಿಕರವಿಟ್ಟ ಆ ಜನಕ್ಕೆ ನಾನು ಅಭಾರಿ... ಈ ಶಾಲೆಯ ಶಿಕ್ಷಕರು ನನ್ನ ತಂದೆ, ಅವರಿಗೆ ಜೀವನ ಪೂರ್ತಿ ಕಷ್ಟ ಪಟ್ಟೇ ಅಭ್ಯಾಸ, ಮಿತ ಭಾಷಿ, ಮೌನ ಬಂಗಾರ ಎಂಬಂತೆ ಅವರು ಮೌನಕ್ಕೆ ಹೆಚ್ಚು ಶರಣು.. ಆ ಊರನ್ನು ನಾನು ಒಮ್ಮೆ ನೋಡಿದಾಗಲೇ ಅವರ ಕಷ್ಟ ನನ್ಗೆ ಅರ್ಥವಾಗಿದ್ದು ಆ ರಸ್ತೆ ತುಂಬೆಲ್ಲ ಕಲ್ಲುಗಳು ಜೋರು ನೆಡೆದರೆ ಎಲ್ಲಿ ಬಿದ್ದು ಬಿಡುತ್ತೇವೋ ಎಂಬ ಭಯ ತುಂಬಾ ಇಕ್ಕಟ್ಟಾದ ಸ್ಥಳ... ಆ ಕಾಲು ದಾರಿಯಲ್ಲೇ ಹಾದು ಹೋಗಬೇಕಿತ್ತು ತಿಪ್ಪಗೊಂಡನ ಹಳ್ಳಿ ಡ್ಯಾಮ್ ಎಂದರೇ ಹೆಚ್ಚು ಹೆಸರುವಾಸಿ ಆ ಹಳ್ಳಿಗೆ ಹತ್ತಿರವಿದ್ದ ಊರಿಗೆ ಯಾವ ವ್ಯವಸ್ಥೆಯೂ ಇರಲಿಲ್ಲ.... ಸುಮಾರು ೭ ವರ್ಷ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿದರು... ಅಲ್ಲಿನ ಮಕ್ಕಳಿಗೆ ಅಕ್ಷರದ ಅರಿವು ಸಹ ಸರಿಯಾಗಿ ಇರಲಿಲ್ಲ....... ಆ ಜನರ ಮುಗ್ಧತೆ, ಅವರಿಗೆ ನಾಗರೀಕತೆ ಅರಿವು ಯಾವುದರ ಗಂಧವೂ ಇರಲಿಲ್ಲ ಕೂಡ... ಅಂತಹದರಲ್ಲಿ ನನ್ನ ತಂದೆ ಶಿಕ್ಷಕರಾಗಿ ತೆರಳಿದ ನಂತರ ಹಲವಾರು ಬದಲಾವಣೆಗಳು ಕಂಡರು... ಆ ಮಕ್ಕಳು ಒಳ್ಳೆ ವಿಧ್ಯಾಬ್ಯಾಸ ಮುಗಿಸಿ ಈಗ ಒಳ್ಳೂಳ್ಳೆ ಕೆಲಸದಲ್ಲಿದ್ದಾರೆ ಆಗಾಗ ನಮ್ಮ ತಂದೆಯವರನ್ನು ಬೇಟಿ ಮಾಡಲು ಬರುತ್ತಿರುತ್ತಾರೆ...
ಆ ಶಾಲೆಯಲ್ಲಿ ೧ ನೇ ತರಗತಿಯಿಂದ ೭ನೇ ತರಗತಿವರೆಗಿನ ಮಕ್ಕಳು ಆ ಮಕ್ಕಳಿಗೆ ಇವರು ಒಬ್ಬರೇ ಮಾಸ್ತರು... ಎಂತಹ ವಿಪರ್ಯಾಸ ನೋಡಿ ಮುಖ್ಯೋಪಾದ್ಯಯರು ಇವರೆ ಶಿಕ್ಷಕರು ಇವರೆ ಕಚೇರಿ ಕೆಲಸ ಮಕ್ಕಳ ವಿದ್ಯಾಬ್ಯಾಸ ಎಲ್ಲವು ಇವರ ಮೇಲೆ.... ಇವೆಲ್ಲ ಅವರಿಗೇನು ಕಷ್ಟದ ಕೆಲಸವಲ್ಲ ಬಿಡಿ ತನ್ನ ಒಂದು ಕಣ್ಣನ್ನು ಕಳೆದುಕೂಂಡು ತನ್ನ ವೃತ್ತಿ ಜೀವನಕ್ಕೆ ಸ್ವಲ್ಪವೂ ಕುತ್ತು ಬರದ ಹಾಗೆ ಸೇವೆ ಸಲ್ಲಿಸಿದ್ದಾರೆ... ದಿನವೂ ಬೆಳ್ಳಿಗ್ಗೆ ೭ ಗಂಟೆಗೆ ಮನೆ ಬಿಟ್ಟರೆ ರಾತ್ರಿ ೮ ಅಥವಾ ೯ ಕ್ಕೆ ಮನೆಗೆ ಬರುತ್ತಾ ಇದ್ದಿದ್ದು ಬೆಳ್ಳಿಗ್ಗೆ ಮುದ್ದೆ ಸಾರಿನ ಊಟ ವಾದರೆ ಮುಗಿಯಿತು ಮತ್ತೆ ರಾತ್ರಿಯೇ ಊಟ ಯಾರ ಮನೆಯಾಗಲಿ, ಯಾವುದೆ ಹೋಟೆಲ್ ಗಳಲ್ಲಾಗಲಿ ತಿಂದವರಲ್ಲ ೧ ಲೋಟ ನೀರು ಸಹ ಕುಡಿಯುತ್ತಲಿರಲಿಲ್ಲ ಅದು ಏಕೋ ತಿಳಿಯದು ನಾವು ಯಾವಾಗಲು ನಮ್ಮ ಅಪ್ಪಾಜಿಗೆ ರೇಗಿಸುತ್ತಿದ್ದೆವು... ಏಕೆ ಹಾಗೆ ಮಾಡ್ತೀರಿ ಆರೋಗ್ಯ ಹಾಳಾಗುತ್ತೆ ಎಂದರೆ ಕೇಳುತ್ತಲೇ ಇರಲಿಲ್ಲ..ಏನೋ ಅವರದೂಂದು ಕಟ್ಟು ನಿಟ್ಟಿನ ವಾದ..ಹ ಹ ಹ..
ಈ ಶಾಲೆಗೆ ಹೋದ ನಂತರ ಆ ಊರ ಜನವೆಲ್ಲ ನಮ್ಮ ಮನೆಗೆ ಬರುವಂತಾದರು ಅವರುಗಳಿಗೆ ಬೆಂಗಳೂರಲ್ಲಿ ಏನೇ ಕೆಲಸವಿರಲಿ, ಯಾವುದಾದರು ಕಚೇರಿಯಲ್ಲಿ ಕೆಲಸವಾಗಬೇಕೆಂದರೆ ಸಾಕು ನನ್ನ ತಂದೆಯ ಮುಖಾಂತರವೇ ನೆಡೆಯಬೇಕಿತ್ತು. ಊರಿನ ಜನರಿಗೆಲ್ಲ ಎಲ್.ಐ.ಸಿ. ಮಾಡಿಸೋ ವ್ಯವಸ್ಥೆ, ಮಕ್ಕಳ ಹೆಚ್ಚಿನ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಹೀಗಿ ಹಲವಾರು ಕೆಲಸಗಳು ಮಾಡುತ್ತಲಿದ್ದರು ನಾವು ಮೂಕರಂತೆ ಅವರ ನಡುವಿನ ಮಾತು ಕತೆ ನೋಡುತ್ತಲಿದ್ದೆವು.... ಬಂದವರಿಗೆಲ್ಲ ಅಮ್ಮ ಊಟ ತಿಂಡಿ ವ್ಯವಸ್ಥೆ ಜೊತೆ ಕೆಲವು ಸಮಯ ನಮ್ಮ ಮನೆಗಳಲ್ಲೆ ಉಳಿಯಲು ವ್ಯವಸ್ಥೆಯನ್ನು ನನ್ನ ಅಣ್ಣ ಮಹಡಿಯ ಮೇಲೆ ಒಂದು ಮನೆ ಹೀಗೆ ಬರುವವರಿಗೆಂದು ಇದ್ದ ಮನೆಯಲ್ಲಿ ವ್ಯವಸ್ಥೆ ಮಾಡುತ್ತಿದ್ದ... ಅಪ್ಪನ ಕಾರ್ಯದಲ್ಲಿ ಅಮ್ಮ ಅಣ್ಣ(ಅಣ್ಣ ಆ ಊರಿಂದ ಬಂದವರನ್ನು ಯಾವ ಕಚೇರಿಗೆ ಬೇಕೂ ಕರೆದುಕೊಂಡು ಹೋಗೋ ಕೆಲಸ ಹೆಚ್ಚು ಇರುತ್ತಿತು) ಇಬ್ಬರು ಹೆಚ್ಚು ಭಾಗಿಯಾಗುತ್ತಿದ್ದರು. ಅಪ್ಪನ ಪುಣ್ಯದಲ್ಲಿ ಅವರಿಗೂ ಪಾಲು. ಒಟ್ಟಲ್ಲಿ ಆ ಊರಿನ ಜನಕ್ಕೊ ನಮಗೊ ಏನೋ ಅವಿನಾಭಾವ ಸಂಬಂಧ ಬೆಳೆದು ಬಿಟ್ಟಿತ್ತು... ಅವರ ಪ್ರೀತಿಗೆ ಅಷ್ಟು ನೆಡೆದಾಡಿದ್ದೆಲ್ಲಾ ಕಡಿಮೆ ಅನ್ನಿಸೊ ಆಗಿತ್ತು... ಆ ಊರಿಂದ ಬೇರೆ ಊರಿಗೆ ವರ್ಗಾವಣೆ ಆಗಿ ಸ್ವಲ್ಪ ದಿನಗಳ ನಂತರ ಊರಿಗೆ ರಸ್ತೆ, ಊರಿಗೆ ಬಸ್ಸು ಎಲ್ಲದರ ವ್ಯವಸ್ಥೆಯೂ ಆಗಿತ್ತು ಹ ಹ ಹ ಹೇಗಿದೆ ನೋಡಿ ಇವರು ಇದ್ದಾಗ ಆ ವ್ಯವಸ್ಥೆಇದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು...ಇದು ಅವರ ಜೀವನದ ಸಣ್ಣ ತುಣುಕು ಹೆಚ್ಚು ಬರೆದರೆ ಓದುವವರಿಗು ಬೇಸರ....ಯಾರೋ ಗೊತ್ತಿಲ್ಲದ ವ್ಯಕ್ತಿಯ ಬಗ್ಗೆ ಅಷ್ಟು ತಿಳಿದುಕೊಳ್ಳುವ ಮನಸು ಇರೊಲ್ಲ ಕೆಲವರಿಗೆ, ಅಲ್ಲದೆ ನನ್ನಪ್ಪನೇನು ದೊಡ್ಡ ಕವಿಯಲ್ಲ, ಹೆಸರುವಾಸಿಯಾದ ವ್ಯಕ್ತಿಯಲ್ಲ.... ಆದರೆ ನನ್ನ ಆದರ್ಶವ್ಯಕ್ತಿ ಅಷ್ಟೆ....ಅವರ ತಾಳ್ಮೆ ನನಗೆ ದಾರಿದೀಪ...ಇಂದು ಅವರ "ಹುಟ್ಟುಹಬ್ಬ"........ಈ ದಿನದ ನೆನಪಿಗಾಗಿ ನನ್ನಿಂದ ಒಂದು ಪುಟ್ಟ ಲೇಖನ... ನನ್ನಪ್ಪನಿಗೆ ಒಳಿತು, ಉಲ್ಲಾಸ, ಆರೋಗ್ಯಭಾಗ್ಯ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವೆ...
ಒಲ್ಲದೆಯೋ ಸಲ್ಲದೆಯೋ ಕಣ್ಣಾಡಿಸಿದ ನಿಮಗೆಲ್ಲ ನನ್ನ ಹೃತ್ಪೂರ್ವಕ ವಂದನೆಗಳು....ಶುಭದಿನ.

13 comments:
ಮನಸು ಅಕ್ಕ ,
ಸಾಧಾರಣ ಜ್ಞಾನದ ಹಸಿವು, ಸಾಧಾರಣ ಪ್ರತಿಭೆ, ಶಿಷ್ಯರಿಗೆ ಮಾರ್ಗದರ್ಶನ ಮಾಡುವುದರಲ್ಲಿ ಸಾಧಾರಣ ಶ್ರದ್ಧೆ, ಆಸಕ್ತಿಗಳ ವ್ಯಾಪ್ತಿಯೂ ಸಾಧಾರಣ .
ಅಕ್ಕ ನಿಮ್ಮ ತ೦ದೆ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು..
ಮನಸು ಮೇಡಮ್,
ನಿಮಗೆ " women's day" ಶುಭಾಶಯಗಳು.....
ಈ ದಿನ ನಿಮ್ಮದಾಗಲಿ ಅಂತ ನನಗೆ ಆರೈಸಲು ಇಷ್ಟವಾಗುವುದಿಲ್ಲ....ಏಕೆಂದರೆ ಇದೊಂದೇ ದಿನ ನಿಮ್ಮದಲ್ಲ.....ಪ್ರತಿಕ್ಷಣ, ನಿಮಿಷ, ಗಂಟೆ, ದಿನ, ತಿಂಗಳು, ವರ್ಷಗಳು...ಎಲ್ಲಾ ನಿಮ್ಮವೇ....ನಿಮಗಿಷ್ಟ ಪಟ್ಟಂತೆ ಇರಲು ಇವೆ.. ಪ್ರತಿಕ್ಷಣ ಪ್ರೀತಿಯಿಂದ ಇರಿ.... ಅದರ ನೆಪದಲ್ಲಿ ಪ್ರೀತಿಸಿ.....ಪ್ರೀತಿ ಹಂಚಿ...ನಿಮ್ಮನ್ನು ಪ್ರೀತಿಸಿಕೊಳ್ಳಿ......[ಇದರಲ್ಲಿ ನಮ್ಮ ಸ್ವಾರ್ಥವಿದೆ. ನೀವು ಚೆನ್ನಾಗಿದ್ದರೆ ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೀರಿ.....ತಾಯಿ, ಅಕ್ಕ-ತಂಗಿ, ಪುಟ್ಟ ಮಗುವಿನ ಹಾಗೆ ನಮನ್ನೂ ಪ್ರೀತಿಸುತ್ತೀರಿ...] ನಿಮ್ಮ ಪತಿ-ಮಕ್ಕಳನ್ನು... ಭಂದು ಭಾಂದವರವನ್ನು ಪ್ರೀತಿಸಿ...ಗೆಳೆಯರನ್ನು ಪ್ರೀತಿಸಿ...ಸಮಯವಿದ್ದರೆ ನಮ್ಮೆಡೆಗೂ ಒಂದಿಡಿ ಪ್ರೀತಿ...ತೋರಿಸಿ.....
ಮತ್ತೊಮ್ಮೆ ಅಭಿನಂದನೆಗಳು.....
ಪ್ರತಿಕ್ಷಣದಲ್ಲೂ ಪ್ರೀತಿಯಿಂದ....
ಶಿವು.....
ಮನಸು...
ಇಂಥಹ ಹರದಯವಂತರಾದ..
ತಂದೆಯವರನ್ನು ಪಡೆದ ನೀವೇ ಧನ್ಯರು...
ಅವರು ನೋರುಕಾಲ ಬಾಳಲಿ..
ಅವರ ಬದುಕು ನಿಮಗಷ್ಟೇ ಅಲ್ಲ..
ಎಲ್ಲರಿಗೂ ಆದರ್ಶ...
ಅವರಿಗೆ
ನನ್ನ ನಮನಗಳನ್ನು ತಿಳಿಸಿ...
ಹುಟ್ಟುಹಬ್ಬದ ಶುಭ ಹಾರೈಕೆಗಳನ್ನೂ ತಿಳಿಸಿ...
ನನ್ನ ಶಾಲೆಯ ಗುರುಗಳನ್ನು ನೆನಪಿಸಿಬಿಟ್ಟಿರಿ, ಈ ಪ್ರಾಥಮಿಕ ಶಾಲೆಗಳ ಗುರುಗಳೇ ಹಾಗೆ, ಅವರದೊಂದು ಆದರ್ಶ, ನೀತಿ, ನಿಷ್ಠೆ, ಯಾರನ್ನ ಕೇಳಿದರೂ ಅವರಿಗೊಬ್ಬರೂ ಅವರ ಪ್ರೀತಿಯ ಗುರುಗಳಿರುತ್ತಾರೆ, ಬಹಳ ಸಾರಿ ಈ ಪ್ರಾಥಮಿಕ ಶಾಲೆಯ ಗುರುಗಳೇ... ನಾವೀಗ ಏನೇ ಹಂತ ತಲುಪಿದ್ದರೂ ಅದಕ್ಕೆ ಅಡಿಪಾಯ ಹಾಕಿದವರು ಅವರು, ನಿಮ್ಮ ತಂದೆಗೆ ಹುಟ್ಟುಹಬ್ಬದ ಶುಭಹಾರೈಕೆಗಳ ತಿಳಿಸಿ...
ಜ್ಞಾನಮೂರ್ತಿ ,
ನಿಮಗೆ ಸ್ವಾಗತ ನೀವು ಹೇಳಿದಹಾಗೆ ಸಾಧಾರಣ ಜನರು ನಾವು ... ನಮ್ಮ ಜೀವನ ಕೂಡ ಸಾದಾರಣ. ಧನ್ಯವಾದಗಳು ಹೀಗೆ ಬರುತ್ತಲಿರಿ..
ಶಿವೂ ಸರ್
ಧನ್ಯವಾದಗಳು.. ಇರುವ ಎರಡು ದಿನಕೆ ಯಾಕೆ ದ್ವೇಷ ಕೋಪ ತಾಪ ಇರುವರೆಗೂ ತೋರಿಸೋಣ ಎಲ್ಲರಲ್ಲಿ ಪ್ರೀತಿ ಪ್ರೇಮ ಸ್ನೇಹ ಸಹಬಾಳ್ವೆ..
ಪ್ರಕಾಶ್ ಸರ್,
ಧನ್ಯವಾದಗಳು.. ನಾನು ಧನ್ಯಳೇ .. ನನ್ನ ಜೀವನದಲ್ಲಿ ದೊರಕಿರೋ ಎಲ್ಲರಲ್ಲೂ ಒಂದೊಂದು ವಿಶೇಷತೆ ಇದೆ ನನಗೆ ಎಲ್ಲವೋ ಕುಶಿ ಕೊಟ್ಟಿದೆ.. ನಿಮ್ಮ ಹರಕೆಯಂತೆ ಆಗಲಿ....
ಪ್ರಭು,
ನೀವು ಹೇಳುವುದು ಸರಿ ಶಿಕ್ಷಕರು, ಹಾಗೆ ಇತ್ತೀಚಿಗೆ ಗುರುಗಳಿಗೆ ಬೆಲೆ ಇಲ್ಲದೆ ಆಗಿದೆ.. ನೀವು ಗುರುಗಳ ಮೇಲೆ ಇಷ್ಟು ಗೌರವ ಇಟ್ಟಿದೀರಲ್ಲ ದೇವರು ನಿಮಗೆ ಒಳ್ಳೆ ದಾರಿ ತೋರುತ್ತಾನೆ ಬಿಡಿ..
ಧನ್ಯವಾದಗಳು...
ಸುಗುಣಕ್ಕಾ,
ನಿಮ್ಮ ತಂದೆಯವರಿಗೆ ನನ್ನ ಪರಯಾಗಿ ಜನ್ಮದಿನದ ಶುಭಾಷಯಗಳನ್ನು ತಿಳಿಸಿಬಿಡಿ.
ಅನುಸರಣೀಯವೂ,ಅನುಕರಣೀಯವೂ ಆದ ಅವರ ಅಚ್ಚುಕಟ್ಟಾದ ಜೀವನ ದ ಪರಿಚಯ ಮಾಡಿಕೊಟ್ಟ ನಿಮಗೆ ಧನ್ಯವಾದಗಳು.
ಮನಸು ಅವರೇ,
ನಿಮ್ಮ ತಂದೆಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ನನಗೆ ನನ್ನ ತಾತ(ಅಜ್ಜ)ನ ನೆನಪಾಯಿತು. ಅವರು ಕೂಡ ಶಾಲೆಯ ಮಾಸ್ತರರಗಿದ್ದರು.
ನಾವು ಎಸ್ಟೆ ಓದಿದರು ನಮ್ಮ ನೆನಪಿನಲ್ಲಿ ಉಳಿಯುವ ಶಿಕ್ಷಕರೆಂದರೆ ಪ್ರಾರ್ಥಮಿಕ ಶಾಲೆಯ ಶಿಕ್ಷಕರು...
ನನಗೆ ಶಿಕ್ಷಕರು ಎಂದರೆ ಮೊದಲು ನೆನಪಾಗುವುದು ಪ್ರಾರ್ಥಮಿಕ ಶಾಲೆಯ ಶಿಕ್ಷಕರೇ..
ನನ್ನ ಪ್ರಕಾರ, ದಾನಗಳಲ್ಲಿ ಅತಿ ದೊಡ್ಡ ದಾನ ವಿದ್ಯಾದಾನ...
"ಗುರು ಬ್ರಹ್ಮ,
ಗುರು ವಿಷ್ಣು,
ಗುರುರ್ದೇವೋ ಮಹೇಶ್ವರ,
ಗುರು ಸಾಕ್ಷಾತ್ ಪರಂಬ್ರಹ್ಮ,
ತಸ್ಮೈಶ್ರೀ ಗುರವೇ ನಮ".
ಧನ್ಯವಾದಗಳು
ನಾಣು,
ಧನ್ಯವಾದಗಳು.. ಅಚ್ಚುಕಟ್ಟಾದ ಜೀವನವೇ ಸರಿ... ನೀವೆಲ್ಲ ಈ ಲೇಖನ ಓದಿದ್ದೆ ನನಗೆ ಕುಶಿ...
ವಂದನೆಗಳು..
ಶಿವಪ್ರಕಾಶ್,
ನನ್ನ ಲೇಖನ ನಿಮಗೆ ಅಜ್ಜನ ನೆನಪು ಮಾಡಿತಲ್ಲ ಸಂತೋಷ... ನಮ್ಮೆಲ್ಲ ಸಾಧನೆಗಳಿಗೆ ಪ್ರಾಥಮಿಕ ಶಿಕ್ಷಕರೆ ಅಡಿಪಾಯ.. ನನ್ನ ತಂದೆಯ ವಿದ್ಯಾದಾನಕ್ಕೆ ನಾವು ಇಂದು ಈ ಮಟ್ಟಕ್ಕೆ ಬೆಳೆದಿದ್ದೇವೆ..ನನ್ನ ಅಕ್ಕನೋ ಸಹ ತಂದೆಯ ದಾರಿಯಲ್ಲೇ ನೆಡೆಯುತ್ತಲಿದ್ದಾಳೆ.
ವಂದನೆಗಳು..
ಮನಸು ಮೇಡಮ್,
ನಾನು ಅಂದು ಕೆಲಸದ ಒತ್ತಡದಿಂದಾಗಿ ನಿಮ್ಮ ಬ್ಲಾಗಿನ ಲೇಖನ ಓದಲಾಗಲಿಲ್ಲ...
ಈಗ ಓದಿದೆ...ಇಂಥ ವ್ಯಕ್ತಿಯನ್ನು ತಂದೆಯಾಗಿ ಪಡೆದ ನೀವೆ ಧನ್ಯರು...ಅವರ ಅದರ್ಶ, ತಾಳ್ಮೆ, ಇಂದಿನ ಪೀಳಿಗೆಯವರಿಗೆ ಸ್ಫೂರ್ತಿಯಾಗಲಿ...ಅವರ ಹುಟ್ಟುಹಬ್ಬಕ್ಕೆ ನನ್ನ ಶುಭಾಶಯಗಳು...
ನಮ್ಮ ತಂದೆಯೂ ನಿವೃತ್ತ ಶಿಕ್ಷಕರು. ನಿಮ್ಮ ತಂದೆಯ ಬಗ್ಗೆ ಓದುತ್ತಿದ್ದಾಗ ನಮ್ಮ ತಂದೆಯೂ ಶಿಕ್ಷಕರಾಗಿ ಪಟ್ಟ ಆ ಕಷ್ಟದ ದುಡಿಮೆ ಜ್ನಾಪಕ ಬಂತು. ಇಂತಹ ಮಹನೀಯರೆಲ್ಲ ಪ್ರಾತಃ ಸ್ಮರಣೀಯರು. ಶಿಕ್ಷಕರಿಗೆ ಹಿಂದೆ ಇದ್ದ ಘನತೆ, ಗೌರವ ಈಗ ಸಿಗುತ್ತಿಲ್ಲವೇನೋ ಎನಿಸುತ್ತದೆ. ಒಳ್ಳೆಯ ಲೇಖನ!
ಶಿವು ಸರ್,
ತೊಂದರೆಯಿಲ್ಲ, ಆದರು ಮತ್ತೊಮ್ಮೆ ಬಂದು ಓದಿ ಅದಕ್ಕೆ ನಿಮ್ಮ ಪ್ರತಿಕ್ರಿಯೆ ಕೊಟ್ಟಿರಲ್ಲ ನನಗೆ ಬಹಳ ಕುಶಿಯಾಯಿತು..ನೀವು ಹೇಳಿದ ಹಾಗೆ ನಾನು ಧನ್ಯಳೆ ಸರಿ.
ಗಿರಿಶ್ ಸರ್,
ಓಹ್, ನಿಮ್ಮ ತಂದೆಯವರೊ ಶಿಕ್ಷಕರು ಎಂದು ತಿಳಿದು ಸಂತೋಷವಾಯಿತು. ನಿಜಕ್ಕೊ ಅಂದಿನ ಗೌರವ, ಭಯ,ಭಕ್ತಿ ಇಂದು ಇಲ್ಲ... ಹೀಗೆ ಬರುತ್ತಲಿರಿ.
ಧನ್ಯವಾದಗಳು..
Post a Comment